Movie: Devaru Kotta Tangi (1974)
Singer: S Janaki
Song link: Click Here
Tannire haala tani ereyona
Taya haala runa, teeripa inde punya dina ||
Tannagirali bennu udara, anna tammadira (2)
Kaaya needida tayi karulu noyadiralendu
Tavarina keerti galike belagalendendu ||
Onde basiru onde usiru hanchikondantha (2)
Nanna annana baala balli baadadiralendu
Navilina tumbu jeevana aagalendendu ||
Tande yar,o tayi yaro, yavudu ariye (2)
Devaranta annaniralu santasake poreye
Aatana preeti aadara endigu mareye ||
ಚಿತ್ರಗೀತೆ
ತನ್ನಿರೆ ಹಾಲ ತನಿ ಎರೆಯೋಣ
ತಾಯ ಹಾಲ ಋಣ, ತೀರಿಪ ಇಂದೆ ಪುಣ್ಯ ದಿನ ।।ಪ।।
ತಣ್ಣಗಿರಲಿ ಬೆನ್ನು ಉದರ, ಅಣ್ಣ ತಮ್ಮದಿರ (೨)
ಕಾಯ ನೀಡಿದ ತಾಯಿ ಕರುಳು ನೋಯದಿರಲೆಂದು
ತವರಿನ ಕೀರ್ತಿ ಗಳಿಕೆ ಬೆಳಗಲೆಂದು ।।೧।।
ಒಂದೆ ಬಸಿರು ಒಂದೆ ಉಸಿರು ಹಂಚಿಕೊಂಡಂಥ (೨)
ನನ್ನ ಅಣ್ಣನ ಬಾಳ ಬಳ್ಳಿ ಬಾಡದಿರಲೆಂದು
ನವಿಲಿನ ತುಂಬು ಜೀವನ ಆಗಲೆಂದೆಂದು ।।೨।।
ತಂದೆ ಯಾರೋ, ತಾಯಿ ಯಾರೋ, ಯಾವುದೂ ಅರಿಯೇ (೨)
ದೇವರಂತ ಅಣ್ಣನಿರಲು ಸಂತಸಕೆ ಪೊರೆಯೇ
ಆತನ ಪ್ರೀತಿ ಆದರೆ ಎಂದಿಗೂ ಮರೆಯೆ ।।೩।।

No comments:
Post a Comment