Friday, October 25, 2024

Doniyolage Neenu (ದೋಣಿಯೊಳಗೆ ನೀನು)

Movie: Uyyale (1969)

Singer: P Susheela

Song link: Click Here


Doniyolage neenu kareya mele naanu

Ee manada kareyu ninage keladenu

Doniyolage neenu kareya mele naanu ||


Beesuva tangaliyu tampereyuva badalu

Doniya bahu doorake karedoyyutiruvdu

Irulinolu torutide ee nadu hagalu

Doniyolage neenu kareya mele naanu ||


Kamana billihudu noda doora gaganade

Kannali ada nodabahudu hidiyalagadu

Nannedeya bhavaneyu mugiyada haadu

Doniyolage neenu kareya mele naanu ||


Tutigu tuttigu naduve enitu antara

Nanagu ninagu naduvinalli kadala antara

Nemmadiyu ee manake saavinantara

Doniyolage neenu kareya mele naanu ||


ಚಿತ್ರಗೀತೆ 


ದೋಣಿಯೊಳಗೆ ನೀನು ಕರೆಯ ಮೇಲೆ ನಾನು 

ಈ ಮನದ ಕರೆಯು ನಿನಗೆ ಕೇಳದೇನು 

ದೋಣಿಯೊಳಗೆ ನೀನು ಕರೆಯ ಮೇಲೆ ನಾನು ।।ಪ।।


ಬೀಸುವ ತಂಗಾಳಿಯು ತಂಪೆರೆಯುವ ಬದಲು 

ದೋಣಿಯ ಬಹು ದೂರಕೆ ಕರೆದೊಯ್ಯುತಿರುವುದು 

ಇರುಳಿನೊಳು ತೋರುತಿದೆ ಈ ನಡು ಹಗಲು 

ದೋಣಿಯೊಳಗೆ ನೀನು ಕರೆಯ ಮೇಲೆ ನಾನು ।।೧।।


ಕಾಮನ ಬಿಲ್ಲಿಹುದು ನೋಡ ದೂರ ಗಗನದೇ 

ಕಣ್ಣಲಿ ಅದ ನೋಡಬಹುದು ಹಿಡಿಯಲಾಗದೂ 

ನನ್ನೆದೆಯ ಭಾವನೆಯು ಮುಗಿಯದ ಹಾಡು 

ದೋಣಿಯೊಳಗೆ ನೀನು ಕರೆಯ ಮೇಲೆ ನಾನು ।।೨।।


ತುಟಿಗೂ ತುತ್ತಿಗೂ ನಡುವೆ ಎನಿತು ಅಂತರ 

ನನಗು ನಿನಗು ನಡುವಿನಲ್ಲಿ ಕಡಲ ಅಂತರ 

ನೆಮ್ಮದಿಯು ಈ ಮನಕೆ ಸಾವಿನಂತರಾ 

ದೋಣಿಯೊಳಗೆ ನೀನು ಕರೆಯ ಮೇಲೆ ನಾನು ।।೩।।

                             


No comments:

Post a Comment