Bajane
Song link: Click Here
Swami sridhara swami he krupaakara,
Swami sadguru namo namo yateevara,
Sridhara swaroopa guru datta munivara,
He dayanidhe namo namo digambara ||
Dhareyannudharisalu bharadi bandu nindiha,
Varadapuradi aashramadali bandu nelesiha,
Niruta bhakta janara madhya kangolisuva,
He dayanidhe namo namo digambara ||
Bhavada chinte harisuvantha ee aashrama,
Bhayavu illa bedidavarigillavu shrama,
Tavakadinda bajakaruddhara maadua,
He dayanidhe namo namo digambara ||
Satya dharmada jyotiyanu belaguta,
Matte matte bhaktareccharavanu golisuva,
Bhakta janake swanandambrutavanu needuva,
He dayanidhe namo namo digambara ||
Nitya bhajane gaana seveyannu padeyuta,
Aatmajnana marga bhakta janake needuva,
Uttamottama guruve sarvottama,
He dayanidhe namo namo digambara ||
Narana roopava dharisi bhuvige bandihe,
Parama purusha neene satya jnana sagara,
Sharanu banda bhaktara ajnana harisuva,
He dayanidhe namo namo digambara ||
Kasta harisi daridryavannu tolagisi,
Shishtra abhistavannu pooraisuva,
Shresta murthy neene rakshisayya guruvara,
He dayanidhe namo namo digambara ||
Veda vandhyane mangalesha guruvara,
Dayadi rakshisayya guru datta munivara,
He dayanidhe namo namo digambara ||
ಭಜನೆ
ಸ್ವಾಮಿ ಶ್ರೀಧರ ಸ್ವಾಮಿ ಹೇ ಕೃಪಾಕರ
ಸ್ವಾಮಿ ಸದ್ಗುರು ನಮೋ ನಮೋ ಯತೀವರ
ಶ್ರೀಧರ ಸ್ವರೂಪ ಗುರು ದತ್ತ ಮುನಿವರ
ಹೇ ದಯಾನಿಧೇ ನಮೋ ನಮೋ ದಿಗಂಬರ ।।ಪ।।
ಧರೆಯನುದ್ಧರಿಸಲು ಭರದಿ ಬಂದು ನಿಂದಿಹ
ವರದಪುರದಿ ಆಶ್ರಮದಲ್ಲಿ ಬಂದು ನೆಲೆಸಿಹ
ನಿರುತ ಭಕ್ತ ಜನರ ಮಧ್ಯೆ ಕಂಗೊಳಿಸುವಾ
ಹೇ ದಯಾನಿಧೇ ನಮೋ ನಮೋ ದಿಗಂಬರ ।।
ಭವದ ಚಿಂತೆ ಹರಿಸುವಂತ ಈ ಆಶ್ರಮ
ಭಯವು ಇಲ್ಲ ಬೇಡಿವರಿಗಿಲ್ಲವು ಶ್ರಮ
ತವಕದಿಂದ ಭಜಕರುದ್ದಾರ ಮಾಡುವ
ಹೇ ದಯಾನಿಧೇ ನಮೋ ನಮೋ ದಿಗಂಬರ ।।
ಸತ್ಯ ಧರ್ಮದಾ ಜ್ಯೋತಿಯನು ಬೆಳಗುತಾ,
ಮತ್ತೆ ಮತ್ತೆ ಭಕ್ತರೆಚ್ಚರವನು ಗೊಳಿಸುವ,
ಭಕ್ತಜನಕೆ ಸ್ವಾನಂದಾ೦ಮೃತ ನೀಡುವ,
ಹೇ ದಯಾನಿಧೇ ನಮೋ ನಮೋ ದಿಗಂಬರ ।।
ನಿತ್ಯ ಭಜನೆ ಗಾನ ಸೇವೆಯನ್ನು ಪಡೆಯುತಾ
ಆತ್ಮಜ್ಞಾನ ಮಾರ್ಗ ಭಕ್ತ ಜನಕೆ ನೀಡುವ
ಉತ್ತಮೋತ್ತಮ ಗುರುವೆ ಸರ್ವೋತ್ತಮ
ಹೇ ದಯಾನಿಧೇ ನಮೋ ನಮೋ ದಿಗಂಬರ ।।
ನರನ ರೂಪವಾ ಧರಿಸಿ ಭುವಿಗೆ ಬಂದಿಹೆ,
ಪರಮ ಪುರುಷ ನೀನೆ ಸತ್ಯ ಜ್ಞಾನ ಸಾಗರ,
ಶರಣು ಬಂದ ಭಕ್ತರ ಅಜ್ಞಾನ ಹರಿಸುವ,
ಹೇ ದಯಾನಿಧೇ ನಮೋ ನಮೋ ದಿಗಂಬರ ।।
ಕಷ್ಟ ಹರಿಸಿ ದಾರಿದ್ರ್ಯವನ್ನು ತೊಲಗಿಸಿ,
ಶಿಷ್ಟರ ಅಭಿಷ್ಟವನ್ನು ಪೂರೈಸುವಾ,
ಶ್ರೇಷ್ಠ ಮೂರ್ತಿ ನೀನೆ ರಕ್ಷಿಸಯ್ಯಾ ಗುರುವರ,
ಹೇ ದಯಾನಿಧೇ ನಮೋ ನಮೋ ದಿಗಂಬರ ।।
ವೇದ ವಂದ್ಯನೇ ಮಂಗಳೇಶ ಗುರುವರ
ದಯದಿ ರಕ್ಷಿಸಯ್ಯ ಗುರು ದತ್ತ ಮುನಿವರಾ
ಹೇ ದಯಾನಿಧೇ ನಮೋ ನಮೋ ದಿಗಂಬರ ।।
ಶ್ರೀ
