Showing posts with label Gopaladasara Padagalu. Show all posts
Showing posts with label Gopaladasara Padagalu. Show all posts

Saturday, March 2, 2024

Dayavirali Dayavirali Damodara (ದಯವಿರಲಿ ದಯವಿರಲಿ ದಾಮೋದರ)

Bhaktigeete

Sahitya: Gopaladasaru

Song link: Click Here


Dayavirali dayavirali damodara

Sayavagi bidadenna sakuva srikrishna ||


Hogi baruvenayya hoda hagella

Saguvavanalla naa ninna bittu

Tugi tottilu konege staladalli nilluvadu

Hyage nee nadedante haage naa nadakombe ||


Iddalle ennannuddaripa shakti

Asadhya ninagendu bandavanalla

Natyaadi kshetra murthigalalli nijajnana

Vrudha janara huduki ninna tiliyalu bande ||


Enage aavadu balle ellelli podaru

Kshana bidade ninna nolpa jnanava kodo

Chinumaya muruti gopala vittala

Ghana karuni madwamuni mandira nivaasa ||


ಭಕ್ತಿಗೀತೆ 


ದಯವಿರಲಿ ದಯವಿರಲಿ ದಾಮೋದರ 

ಸಯವಾಗಿ ಬಿಡದೆನ್ನ ಸಾಕುವ  ಶ್ರೀಕೃಷ್ಣ ।।ಪ।।


ಹೋಗಿ ಬರುವೇನಯ್ಯ ಹೋದ ಹಾಗೆಲ್ಲ 

ಸಾಗುವವನಲ್ಲ ನಾ ನಿನ್ನ ಬಿಟ್ಟು 

ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲಿ ನಿಲ್ಲುವದು 

ಹ್ಯಾಗೆ ನೀ ನಡೆದಂತೆ ಹಾಗೆ ನಾ ನಡಕೊಂಬೆ ।।೧।।


ಇದ್ದಲ್ಲೇ ಎನ್ನನ್ನುದ್ಧರಿಪ ಶಕ್ತಿ 

ಅಸಾಧ್ಯ ನಿನಗೆ೦ದು ಬಂದವನಲ್ಲ 

ನತ್ಯಾದಿ ಕ್ಷೇತ್ರ ಮೂರ್ತಿಗಳಲ್ಲಿ ನಿಜಜ್ಞಾನ 

ವೃದ್ಧ ಜನರ ಹುಡುಕಿ ನಿನ್ನ ತಿಳಿಯಲು ಬಂದೆ ।।೨।।


ಎನಗೆ ಆವುದು ಬಲ್ಲೆ ಎಲ್ಲೆಲ್ಲಿ ಪೋದರು 

ಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನವ ಕೊಡೋ 

ಚಿನುಮಯ ಮೂರುತಿ ಗೋಪಾಲ ವಿಠ್ಠಲ 

ಘನ ಕರುಣಿ ಮಧ್ವಮುನಿ ಮಂದಿರ ನಿವಾಸ ।।೩।।