Tuesday, October 1, 2024

Bidabeda Nee Bidabeda (ಬಿಡಬೇಡ ನೀ ಬಿಡಬೇಡ)

Bhaktigeete

Singer: Dr. Rajkumar

Song link: Click Here


Bidabeda nee bidabeda, swami paadagala bidabeda

Endendu nee bidabeda, ayyappana paadava bidabeda ||


Tuppada abhisheka maadida puttane paadagala

Srigandhava hacchiruva nanna swamiya paadagala

Parimala chellutiha devana hoovina paadagala

Maretu hogi nee kedabeda ||


Ellide kailasa balleya ellide vaikunta 

Ellide nemmadiyu balleya ellide aananda

Ella nodille swamiya divya paadadale

Ariyade neenu kedabeda ||


Paapava suduvantha harihara sutana paadagala

Shantiya koduvantha parvati kandana paadagala

Bittare sigadantha bala yogiya paadagala

Mareyuta vedane padabeda ||


ಭಕ್ತಿಗೀತೆ 


ಬಿಡಬೇಡ ನೀ ಬಿಡಬೇಡ ಸ್ವಾಮಿ ಪಾದಗಳ ಬಿಡಬೇಡ 

ಎಂದೆಂದೂ ನೀ ಬಿಡಬೇಡ, ಅಯ್ಯಪ್ಪನ ಪಾದವ ಬಿಡಬೇಡ ।।ಪ।।


ತುಪ್ಪದ ಅಭಿಷೇಕ ಮಾಡಿದ ಪುಟ್ಟನೆ ಪಾದಗಳ 

ಶ್ರೀಗಂಧವ ಹಚ್ಚಿರುವ ನನ್ನ ಸ್ವಾಮಿಯ ಪಾದಗಳ 

ಪರಿಮಳ ಚೆಲ್ಲುತಿಹ ದೇವನ ಹೂವಿನ ಪಾದಗಳ 

ಮರೆತು ಹೋಗಿ ನೀ ಕೆಡಬೇಡ ।।೧।।


ಎಲ್ಲಿದೆ ಕೈಲಾಸ ಬಲ್ಲೆಯ ಎಲ್ಲಿದೆ ವೈಕುಂಠ 

ಎಲ್ಲಿದೆ ನೆಮ್ಮದಿಯು ಬಲ್ಲೆಯಾ, ಎಲ್ಲಿದೆ ಆನಂದ 

ಎಲ್ಲಾ ನೋಡಿಲ್ಲೇ ಸ್ವಾಮಿಯ ದಿವ್ಯ ಪಾದದಲೇ 

ಅರಿಯದೆ ನೀನು ಕೆಡಬೇಡ ।।೨।।


ಪಾಪವ ಸುಡುವಂಥ ಹರಿಹರ ಸುತನ ಪಾದಗಳ 

ಶಾಂತಿಯ ಕೊಡುವಂಥ ಪಾರ್ವತಿ ಕಂದನ ಪಾದಗಳ 

ಬಿಟ್ಟರೆ ಸಿಗದಂಥ ಬಾಲಯೋಗಿಯ ಪಾದಗಳ 

ಮರೆಯುತ ವೇದನೆ ಪಡಬೇಡ ।।೩।।

                   

No comments:

Post a Comment