Bhaktigeete
Singer: P B Srinivas, B K Sumitra
Song link: Click Here
Idu gokarnada purana kathana, aalise jeevana pavana
Mahabaleshwara nelesida naadina apoorva chariteyu amruta samaana ||
Ravaneshwaranu maateya poojege atmalingavanu taralendu
Kailasadadiyalli kulitu prarthisida parama dayalu pareshana
Om namah shivaya
Om namah shivaya
Om namah shivaya
Om namah shivaya
Chandrashekhara chandrashekhara chandrashekhara
pahimam
Chandrashekhara chandrashekhara chandrashekhara rakshamam
Sakala vedavida bhaktagresara ravana stutisida shivanannu
Bhaktara bhaktanu sarvashaktana parashivanolidanu kshanadalli
Lokaikanatha udatta charitanu needida varavanu ravanage
Atmalingavane bedida bhaktana korike phalisida mudadinda
Pralayave ghatisuvudennuta bhayadali surakula tattaragollutire
Narada needida salaheya keli ganapati odida bhutalake
Sanje sameepisi aarghya needalu ravana kataragondiralu
Lingava dhareyali irisadantaha dharma sankatavu kaadiralu
Samayake odagida brahmachari aa ganapati ravananeduralli
Ayya, vatuve, ee lingava hididiru ennuta bedida ravananu
Mooru saari ta kareyuvudendu baradire lingavu dharepaalendu
Ganapati aruhida kattaleya, ravana tugida taleya
Aarghyava kodutiha samayava nodi ganapati karedanu ravanana
Baralarade ravana midukidanu.. lingavu dhareyanu seritu
Odi bandu vatu maadida karyake
Rosha veshadi kuttidanu
Ravaneshwaranu ganapati shiravanu mustiyinda ta
guddidanu
Ganapati maadida ghanakaryavanu lokavella kondaditu
Devalokave hoomalegareyitu
Harushada honale hariyitu
Bhagnamanorathanagi ravananu bhugata lingavanettutire
Sotu bisutanu desedeseyalli vastra samputava daaravanu
Udbhavisitu odanodaneye alli adbhuta lingagalaidu
Sajjeshwara, gunavantheshwara, murudeshwara dharaeshwara, mahabaleshwara ||
ಭಕ್ತಿಗೀತೆ
ಇದು ಗೋಕರ್ಣದ ಪುರಾಣ ಕಥನ, ಆಲಿಸೆ ಜೀವನ ಪಾವನ
ಮಹಾಬಲೇಶ್ವರ ನೆಲೆಸಿದ ನಾಡಿನ ಅಪೂರ್ವ ಚರಿತೆಯು ಅಮೃತ ಸಮಾನ ।।
ರಾವಣೇಶ್ವರನು ಮಾತೆಯ ಪೂಜೆಗೆ ಆತ್ಮಲಿಂಗವನು ತರಲೆಂದು
ಕೈಲಾಸದಡಿಯಲ್ಲಿ ಕುಳಿತು ಪ್ರಾರ್ಥಿಸಿದ ಪರಮ ದಯಾಳು ಪರೇಶನ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿಮಾಂ
ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ರಕ್ಷಮಾಂ
ಸಕಲ ವೇದವಿದ ಭಕ್ತಾಗ್ರೇಸರ ರಾವಣ ಸ್ತುತಿಸಿದ ಶಿವನನ್ನು
ಭಕ್ತರ ಭಕ್ತನು ಸರ್ವಶಕ್ತನಾ ಪರಶಿವನೊಲಿದನು ಕ್ಷಣದಲ್ಲಿ
ಲೋಕೈಕನಾಥ ಉದಾತ್ತ ಚರಿತನು ನೀಡಿದ ವರವನು ರಾವಣಗೆ
ಆತ್ಮಲಿಂಗವನೆ ಬೇಡಿದ ಭಕ್ತನ ಕೋರಿಕೆ ಫಲಿಸಿದ ಮುದದಿಂದ
ಪ್ರಳಯವೆ ಘಟಿಸುವುದೆನ್ನುತ ಭಯದಲಿ ಸುರಕುಲ ತತ್ತರಗೊಳ್ಳುತಿರೆ
ನಾರದ ನೀಡಿದ ಸಲಹೆಯ ಕೇಳಿ ಗಣಪತಿ ಓಡಿದ ಭೂತಳಕೆ
ಸಂಜೆ ಸಮೀಪಿಸಿ ಆರ್ಘ್ಯ ನೀಡಲು ರಾವಣ ಕಾತರಗೊಂಡಿರಲು
ಲಿಂಗವ ಧರೆಯಲಿ ಇರಿಸದಂತಹ ಧರ್ಮಸಂಕಟವು ಕಾಡಿರಲು
ಸಮಯಕೆ ಒದಗಿದ ಬ್ರಹ್ಮಚಾರಿ ಆ ಗಣಪತಿ ರಾವಣನೆದುರಲ್ಲಿ
ಅಯ್ಯ, ವಟುವೆ, ಈ ಲಿಂಗವ ಹಿಡಿದಿರು ಎನ್ನುತ ಬೇಡಿದ ರಾವಣನು
ಮೂರು ಸಾರಿ ತಾ ಕರೆಯುವುದೆಂದು ಬರದಿರೆ ಲಿಂಗವು ಧರೆಪಾಲೆಂದು
ಗಣಪತಿ ಅರುಹಿದ ಕಟ್ಟಳೆಯ, ರಾವಣ ತೂಗಿದ ತಲೆಯ
ಆರ್ಘ್ಯವ ಕೊಡುತಿಹ ಸಮಯವ ನೋಡಿ ಗಣಪತಿ ಕರೆದನು ರಾವಣನ
ಬರಲಾರದೆ ರಾವಣ ಮಿಡುಕಿದನು.. ಲಿಂಗವು ಧರೆಯನು ಸೇರಿತು
ಓಡಿ ಬಂದು ವಟು ಮಾಡಿದ ಕಾರ್ಯಕೆ
ರೋಷಾ ವೇಷದಿ ಕುಟ್ಟಿದನು
ರಾವಣೇಶ್ವರನು ಗಣಪತಿ ಶಿರವನು ಮುಷ್ಠಿಯಿಂದಾ ತಾ ಗುದ್ದಿದನು
ಗಣಪತಿ ಮಾಡಿದ ಘನಕಾರ್ಯವನು ಲೋಕವೆಲ್ಲ ಕೊಂಡಾಡಿತು
ದೇವಲೋಕವೇ ಹೂಮಳೆಗರೆಯಿತು
ಹರುಷದ ಹೊನಲೇ ಹರಿಯಿತು
ಭಗ್ನಮನೋರಥನಾಗಿ ರಾವಣನು ಭೂಗತ ಲಿಂಗವನೆತ್ತುತ್ತಿರೆ
ಸೋತು ಬಿಸುಟನು ದೆಸೆದೆಸೆಯಲ್ಲಿ ವಸ್ತ್ರ ಸಂಪುಟವ ದಾರವನು
ಉದ್ಭವಿಸಿತು ಒಡನೊಡನೆಯೇ ಅಲ್ಲಿ ಅದ್ಭುತ ಲಿಂಗಗಳೈದು
ಸಜ್ಜೇಶ್ವರ, ಗುಣವಂತೇಶ್ವರ, ಮುರುಡೇಶ್ವರ,ಧಾರೇಶ್ವರ, ಮಹಾಬಲೇಶ್ವರ ।।
