Gaadegalu (ಗಾದೆಗಳು)

1) ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.
 
   (Sathyakke savilla, sullige sukhavilla)

2) ಹಿತ್ತಲ ಗಿಡ ಮದ್ದಲ್ಲ. 

    (Hittala gida maddalla)

3) ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ.
 
    (Uppiginta ruchiyilla, taayiginta bandhuvilla)

4) ಹನಿಹನಿಗೂಡಿದರೆ ಹಳ್ಳ. 

    (Hani hani gudidare halla)

5) ಸ್ವಸಹಾಯವೇ ಲೇಸು.
 
   (Swasahaayave lesu)

6) ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ. 

   (Kumbaaranige varusha, donnege nimisha)

7) ದುಡಿಮೆಯೇ ದುಡ್ಡಿನ ತಾಯಿ. 

    (Dudimeye duddina taayi)

8) ಮಾತು ಬೆಳ್ಳಿ, ಮೌನ ಬಂಗಾರ. 

   (Maatu belli, mouna bangara)

9) ಮನಸ್ಸಿದ್ದರೆ ಮಾರ್ಗ. 

   (Manassiddare marga)

10) ಆಕಳು ಕಪ್ಪಾದರೆ ಹಾಲು ಕಪ್ಪೇ. 

     (Aakalu kappadare haalu kappe)

11) ಕೈ ಕೆಸರಾದರೆ, ಬಾಯಿ ಮೊಸರು. 

     (Kai kesaradare, bayi mosaru)

12) ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. 

     (Mullannu mullinindale tegeyabeku)

13) ದೇವರು ವರ ಕೊಟ್ರು, ಪೂಜಾರಿ ಕೊಡ. 

     (Devaru vara kotru, pujaari koda)

14) ದೇಶ ನೋಡು, ಕೋಶ ಓದು. 

      (Desha nodu, kosha odu)

15) ಉಪಾಯ ಬಲ್ಲವನಿಗೆ, ಅಪಾಯವಿಲ್ಲ. 

      (Upaaya ballavanige, apaayavilla)

16) ನೋಡಿ ಕಲಿ, ಮಾಡಿ ತಿಳಿ.

    (Nodi kali, maadi tili) 

17) ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ.

    (Kottiddu tanage, bacchittiddu pararige)

18) ನಾಳೆ ಎಂದವನ ಮನೆ ಹಾಳು. 

    (Naale endavana mane haalu)

19) ಕಷ್ಟಪಟ್ಟರೆ, ಫಲವುಂಟು. 

    (Kastapattare, phalavuntu)

20) ತುಂಬಿದ ಕೊಡ ತುಳುಕುವುದಿಲ್ಲ. 

      (Tumbida koda tulikuvudilla)

21) ದೇಶ ಸೇವೆಯೇ, ಈಶ ಸೇವೆ. 

     (Desha seveye, eesha seve)

22) ಅಧರಕ್ಕೆ ಸಿಹಿ, ಉದರಕ್ಕೆ ಕಹಿ.

      (Adharakke sihi, udarakke kahi) 

23) ಧೈರ್ಯವಿದ್ದವನಿಗೆ ದೈವ ಸಹಾಯ. 

     (Dhairyaviddavanige daiya sahaya)

24) ಮಾತು ಮನೆ ಕೆಡಿಸಿತು, ತೂತು ಓಲೆ ಕೆಡಿಸಿತು. 

       (Maatu mane kedisitu, tootu ole kedisitu)

25) ನಿಸ್ವಾರ್ಥ ಸೇವೆಯೇ, ಪರಮ ಸೇವೆ.

      (Niswartha seveye, parama seve) 

 26) ಉಪದೇಶಕ್ಕಿಂತ ಉದಾಹರಣೆ ಲೇಸು. 

       (Upadeshakkinta udaharane lesu)

27) ಅಲ್ಪ ವಿದ್ಯಾ ಮಹಾಗರ್ವಿ. 

       (Alpa vidya mahagari)

28) ಅತಿ ಆಸೆ ಗತಿ ಗೇಡು. 

      (Ati aase gati gedu)

29) ಆಳಾಗಬಲ್ಲವ ಅರಸಾಗಬಲ್ಲ. 

      (Aalagaballava arasaagaballa)

30) ಆಪತ್ತಿಗಾದವನೇ ನೆಂಟ. 

      (Aapattigadavane nenta)

31) ಆರೋಗ್ಯವೇ ಭಾಗ್ಯ. 

      (Aarogyave bhagya)

32) ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು. 

      (Adikege hoda maana aane kottaru baaradu)

33) ಮಂತ್ರಕ್ಕಿಂತ  ಉಗುಳು ಜಾಸ್ತಿ. 

      (Mantrakkinta ugulu jasti)

34) ಸಾಗಣಿಯವನೊಡನೆ ಸರಸಕ್ಕಿಂತ, ಗಂಧದವನೊಡನೆ ಗುದ್ದಾಟ ಲೇಸು. 

  (Saganiyavanodane sarasakkinta, gandhadavanodane guddata lesu)

35) ಅಟ್ಟಕ್ಕೆ ಹಾರದವನು ಬೆಟ್ಟ ಹತ್ತಿಯಾನೆ ?.

    (Attakke haaradavanu betta hattiyane?)

36) ಕೋತಿಯ ಕೈಗೆ ಮಾಣಿಕ್ಯ ಕೊಟ್ಟ ಹಾಗೆ.

    (Kotiya kaige manikya kotta haage)

37) ಬಳ್ಳಿಗೆ ಕಾಯಿ ಭಾರವೇ?.

    (Ballige kaayi bharave?)

38) ಆಳ ನೋಡಿ ನದಿ ದಾಟು. 

    (Aala nodi nadi daatu)

39) ಭೂತದ ಬಾಯಲ್ಲಿ ಭಗವದ್ಗೀತೆ. 

    (Bhutada bayalli bhagadgeete)

40) ಕಾಸಿದ್ರೆ ಕೈಲಾಸ. 

    (Kaasidre kailasa)

41) ಹೇಳಿದ್ದೇ ಹೇಳೋ ಕಿಸಬಾಯಿದಾಸ. 

    (Helidde helo kisabayidaasa)

42) ದುಷ್ಟರನ್ನು ಕಂಡರೆ ದೂರವಿರು. 

    (Dushtarannu kandare dooraviru)

43) ಕುಲ ನೋಡಿ ಹೆಣ್ಣು ತಾ, ತಳಿ ನೋಡಿ ಹಸು ತಾ. 

    (Kula nodi hennu ta, tali nodi hasu ta)

44) ಯಾವ ಹುತ್ತದಲ್ಲಿ ಯಾವ ಹಾವು ಇದೆಯೋ?.

    (Yaava huttadalli yaava haavu ideyo?)

45) ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ. 

    (Uriyuva benkige tuppa suridante)

46) ಕೈಗೆ ಎಟುಕದ ದ್ರಾಕ್ಷಿ ಹುಳಿ. 

   (Kaige etukada drakshi Huli)

47) ಕೋಳಿಯನ್ನು ಕೇಳಿ ಮಸಾಲೆ ಅರೆಯುತ್ತಾರೆಯೇ?.

    (Koliyannu keli masale areyuttareye?)

48) ಗುಂಪಿನಲ್ಲಿ ಗೋವಿಂದ. 

    (Gumpinalli govinda)

49) ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ. 

    (Bekkige chellata, ilige prana sankata)

50) ತಡೆದು ಮಾತಾಡಿದರೆ ಜಗಳವಿಲ್ಲ. 

    (Tadedu maatadidare jagalavilla)




No comments:

Post a Comment