Saturday, July 30, 2022

Karnataka Bari Nadalla (ಕರ್ನಾಟಕ ಬರಿ ನಾಡಲ್ಲ )


Nadageete

Sahitya: B R Lakshmana Rao

Song link:  Click Here



Karnataka bari nadalla

Namma samskrutiya dhatu

Kannada kevala nudiyalla

Namm antarangada mathu


Kangolisuva bari giriyalla

Sahyadriya salu

Hommide salahuva ammanede

Udalemage halu


Bari nere nugguva neeralla

Krishne kaveri tunge

Dhamani dhamaniyali hariva chetana

Kanna belaku namage  ||karnataka||


Pampa kumaravyasarendare

Alla kavigalu matra

Indu kannada kavya malege

Avare antasutra


Shilpa kaleya ba re baleyalla

Halebeedu beluru

Namma berannu torutide

Alli namma talemaru ||karnataka||


ನಾಡಗೀತೆ 


ಕರ್ನಾಟಕ ಬರಿ ನಾಡಲ್ಲ 

ನಮ್ಮ ಸಂಸ್ಕೃತಿಯ ಧಾತು 

ಕನ್ನಡ ಕೇವಲ ನುಡಿಯಲ್ಲ 

ನಮ್ಮಂತರಂಗದ  ಮಾತು 


ಕಂಗೊಳಿಸುವ ಬರಿ ಗಿರಿಯಲ್ಲ 

ಸಹ್ಯಾದ್ರಿಯ ಸಾಲು 

ಹೊಮ್ಮಿದೆ ಸಲಹುವ ಅಮ್ಮನೆದೆ 

ಉಡಲೆಮಗೆ ಹಾಲು 


ಬರಿ ನೆರೆ ನುಗ್ಗುವ ನೀರಲ್ಲ 

ಕೃಷ್ಣೆ ಕಾವೇರಿ ತುಂಗೆ 

ಧಮನಿ ಧಮನಿಯಲಿ ಹರಿವ ಚೇತನ 

ಕಣ್ಣ ಬೆಳಕು ನಮಗೆ  ।।ಕರ್ನಾಟಕ ।।


ಪಂಪ ಕುಮಾರವ್ಯಾಸರೆಂದರೆ 

ಅಲ್ಲ ಕವಿಗಳು ಮಾತ್ರ 

ಇಂದೂ ಕನ್ನಡ ಕಾವ್ಯಮಾಲೆಗೆ 

ಅವರೇ ಅಂತಃಸೂತ್ರ 


ಶಿಲ್ಪಕಲೆಯ ಬರೆ ಬಲೆಯಲ್ಲ 

ಹಳೆಬೀಡು ಬೇಲೂರು 

ನಮ್ಮ ಬೇರನ್ನು ತೋರುತ್ತಿದೆ 

ಅಲಿ ನಮ್ಮ ತಲೆಮಾರು  ।।ಕರ್ನಾಟಕ ।।






Friday, July 29, 2022

Ee Nela Ee Jala Ee Kadu (ಈ ನೆಲ ಈ ಜಲ ಈ ಕಾಡು )

 Padya

sahitya: H Dundiraj


Ee nela ee jala ee kadu

Geejaga kattida ee gudu

Irali irali hege

Prakruti kotta koduge


Julu julu hariva holege

Koleya bereso khalare

Ba ge ba ge hogeyanu uguli

Malinagolisadiri gali

Saku innu saku

Ee tappa tiddabeku ||


Maragala kadidu kadidu

Ellede bhana bhana bisilu

Chilipili uliva hakki

Alutide bikki bikki

Saku innu saku 

Hasiragabeku baduku  ||


Rakshisabeku bidade

Namma nela jalagala navu

Nalina peeligegagi

Ulisiri nadina cheluvu

Sirinada cheluvu

Ee karunada cheluvu  ||


ಪದ್ಯ 


ಈ ನೆಲ ಈ ಜಲ ಈ ಕಾಡು 

ಗೀಜಗ ಕಟ್ಟಿದ ಈ ಗೂಡು 

ಇರಲಿ ಇರಲಿ ಹೀಗೆ 

ಪ್ರಕೃತಿ ಕೊಟ್ಟ ಕೊಡುಗೆ 


ಜುಳು ಜುಳು ಹರಿವ ಹೊಳೆಗೆ 

ಕೊಳೆಯ ಬೇರೆಸೊ ಖಳರೇ 

ಬಗೆಬಗೆ ಹೊಗೆಯನು ಉಗುಳಿ 

ಮಲಿನಗೊಳಿಸದಿರಿ ಗಾಳಿ 

ಸಾಕು ಇನ್ನು ಸಾಕು 

ಈ ತಪ್ಪ ತಿದ್ದಬೇಕು  ।।


ಮರಗಳ ಕಡಿದು ಕಡಿದು 

ಎಲ್ಲೆಡೆ ಭಣ ಭಣ ಬಿಸಿಲು 

ಚಿಲಿಪಿಲಿ ಉಲಿವ ಹಕ್ಕಿ 

ಅಳುತಿದೆ ಬಿಕ್ಕಿ ಬಿಕ್ಕಿ 

ಸಾಕು ಇನ್ನು ಸಾಕು 

ಹಸಿರಾಗಬೇಕು ಬದುಕು  ।। 


ರಕ್ಷಿಸಬೇಕು ಬಿಡದೇ 

ನಮ್ಮ ನೆಲ ಜಲಗಳ ನಾವು 

ನಾಳಿನ ಪೀಳಿಗೆಗಾಗಿ 

ಉಳಿಸಿರಿ ನಾಡಿನ ಚೆಲುವು 

ಸಿರಿನಡ ಚೆಲುವು 

ಈ ಕರುನಾಡ ಚೆಲುವು  ।।

           



Wednesday, July 27, 2022

Nambadiru Ee Deha Nityavalla (ನಂಬದಿರು ಈ ದೇಹ ನಿತ್ಯವಲ್ಲ)

Bhaktigeete

Purandara Dasara Keerthanegalu

Song link:  Click Here


Raga: Madhyamavati

Tala: Jampetala


Nambadiru ee deha nityavalla

Ambujakshana bhajisi sukhiyagu manave


Elubu rakta mamsagala mele charmada hodike

Olage mala mutradi krimigalihavu

Halavu vyadhiya beedu panchabhutada nadu

Baluhu dehava necchi kedabeda manuja  ||nambadiru||


Satisutaru hitarendu mati maretu mamateyali

Atikanksheyinda durvishaya balidu

Satata lakshmipatiya sharanenade ihaparada

Gatishunyavagi neekedabeda manuja   ||nambadiru||


Parara nindisade paravadhugalanu bayasade

Guru vipra seveyanu madu bidade

Hari stutiya nee kelu, hari keerthaneya madu

Siri purandara vittalanolidu palisuva   ||nambadiru||


ಭಕ್ತಿಗೀತೆ 


ನಂಬದಿರು ಈ ದೇಹ ನಿತ್ಯವಲ್ಲ 

ಅಂಬುಜಾಕ್ಷನ ಭಜಿಸಿ ಸುಖಿಯಾಗು ಮನವೆ ।।ಪ ।।


ಎಲುಬು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆ 

ಒಳಗೆ ಮಲ ಮೂತ್ರಾದಿ ಕ್ರಿಮಿಗಳಿಹವು 

ಹಲವು ವ್ಯಾಧಿಯ ಬೀಡು ಪಂಚಭೂತದ ನಾಡು 

ಬಲುಹು ದೇಹವ ನೆಚ್ಚಿ ಕೆಡಬೇಡ ಮನುಜ ।।೧।।


ಸತಿಸುತರು ಹಿತರೆಂದು ಮತಿ ಮರೆತು ಮಮತೆಯಲಿ 

ಅತಿಕಾಂಕ್ಷೆಯಿಂದ ದುರ್ವಿಷಯ ಬಲಿದು 

ಸತತ ಲಕ್ಷ್ಮೀಪತಿಯ ಶರಣೆನದೆ ಇಹಪರದ 

ಗತಿ ಶೂನ್ಯವಾಗಿ ನೀ ಕೆಡಬೇಡ ಮನುಜ ।।೨।।


ಪರರ ನಿಂದಿಸದೆ ಪರವಧುಗಳನು ಬಯಸದೆ 

ಗುರುವಿಪ್ರ ಸೇವೆಯನು ಮಾಡು ಬಿಡದೆ 

ಹರಿಸ್ತುತಿಯ ನೀ ಕೇಳು, ಹರಿ ಕೀರ್ತನೆಯ ಮಾಡು 

ಸಿರಿ ಪುರಂದರ ವಿಠ್ಠಲನೊಲಿದು ಪಾಲಿಸುವ ।।೩।।




Tuesday, July 26, 2022

Ede Badita Joragide (ಎದೆ ಬಡಿತ ಜೋರಾಗಿದೆ )

 

  • Movie: Ek Love Ya
  • Singers: prem, Anuradha Bhat
  • Song link: Click Here


Matilla kateilla, innenide ?

A.. kai kalu nillalla, enagide ?


Ninnindale hosa kayile shuruvagide

Ede badita joragide

Ede badita joragide

Ede badita joragide

Ede badita joragide


Eradu hrudayagalu matanadutive

Kanna sanneyale eneno

Kaddu nodutive, honchu hakutive

Saneha seralu inneno

Yare irali, bhayave illa

Oore barali, care e illa

Ninnindale hosa kayile shuruvagide ||ede badita||


Asta dikkugalu astu ennutive

Preeti serisalu inneno

Gattimelagalu saddu madutide

Gantu hakalu eneno

Ella devru jotege bandu

Harasi nintu shubha koridaru

Ninnindale hosa kayile shuruvagide ||ede badita||


 Matilla kateilla, innenide ?

Ho.. kai kalu nillalla, enagide ?


Ninnindale hosa kayile shuruvagide

Ede badita joragide

Ede badita joragide

Ede badita joragide

Ede badita joragide


ಚಿತ್ರಗೀತೆ 


ಮಾತಿಲ್ಲ ಕಥೆಯಿಲ್ಲ , ಇನ್ನೇನಿದೆ ?

ಎ .. ಕೈ ಕಾಲು ನಿಲ್ಲಲ್ಲ , ಏನಾಗಿದೆ ?


ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ 

ಎದೆ ಬಡಿತ ಜೋರಾಗಿದೆ 

ಎದೆ ಬಡಿತ ಜೋರಾಗಿದೆ 

ಎದೆ ಬಡಿತ ಜೋರಾಗಿದೆ 

ಎದೆ ಬಡಿತ ಜೋರಾಗಿದೆ 


ಎರಡು ಹೃದಯಗಳು ಮಾತನಾಡುತಿವೆ 

ಕಣ್ಣ ಸನ್ನೆಯಲೇ ಏನೇನೋ 

ಕದ್ದು ನೋಡುತಿವೆ , ಹೊಂಚು ಹಾಕುತಿವೆ 

ಸನಿಹ ಸೇರಲು ಇನ್ನೇನೋ 

ಯಾರೇ ಇರಲಿ , ಭಯವೇ ಇಲ್ಲ 

ಊರೇ ಬರಲಿ , ಕೇರೇ ಇಲ್ಲ 

ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ ।।ಎದೆ ಬಡಿತ ।।


ಅಷ್ಟ ದಿಕ್ಕುಗಳು ಅಸ್ತು ಎನ್ನುತಿವೆ 

ಪ್ರೀತಿ ಸೇರಿಸಲು ಇನ್ನೇನೋ 

ಗಟ್ಟಿಮೇಳಗಳು ಸದ್ದು ಮಾಡುತಿದೆ 

ಗಂಟು ಹಾಕಲು ಏನೇನೋ 

ಎಲ್ಲ ದೇವ್ರು ಜೊತೆಗೆ ಬಂದು 

ಹರಸಿ ನಿಂತು ಶುಭ ಕೋರಿದರು 

ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ ।।ಎದೆ ಬಡಿತ ।।


ಮಾತಿಲ್ಲ ಕಥೆಯಿಲ್ಲ , ಇನ್ನೇನಿದೆ ?

ಹೊ  .. ಕೈ ಕಾಲು ನಿಲ್ಲಲ್ಲ , ಏನಾಗಿದೆ ?


ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ 

ಎದೆ ಬಡಿತ ಜೋರಾಗಿದೆ 

ಎದೆ ಬಡಿತ ಜೋರಾಗಿದೆ 

ಎದೆ ಬಡಿತ ಜೋರಾಗಿದೆ 

ಎದೆ ಬಡಿತ ಜೋರಾಗಿದೆ





Sunday, July 24, 2022

Deva Ninna Mayeganji (ದೇವ, ನಿನ್ನ ಮಾಯೆಗಂಜಿ )


Bhavageete

Sahitya: K S Narasimhaswamy

Song link: Click Here



Deva, ninna mayeganji

Nadugi balenu

Ninna iccheyante nadeve

Naddi madenu


Mukti ! mukti ! - nanna nanu

Tilidukolvudo

Saviganji ninnadiyali

Adagikolvudo?

Shakti itte muktiyannu

Galisikollalu

Neeranerede balliyannu

Belesikollalu  ||deva||


Jnanaraviyanitte edeya

Nodikollalu

Geeteyannu kotte

Kolanudikollalu

Ellavannu kottiruve

Ena bedali !  ||deva||

Jagavanenage bittiruve

Eke kadali !


ಭಾವಗೀತೆ 


ದೇವ, ನಿನ್ನ ಮಾಯೆಗಂಜಿ 

ನಡುಗಿ ಬಾಳೆನು 

ನಿನ್ನ ಇಚ್ಛೆಯಂತೆ ನಡೆವೆ 

ನಡ್ಡಿ ಮಾಡೆನು 


ಮುಕ್ತಿ ! ಮುಕ್ತಿ ! - ನನ್ನ  ನಾನು 

ತಿಳಿದುಕೊಳ್ವುದೋ 

ಸಾವಿಗಂಜಿ ನಿನ್ನಡಿಯಲಿ 

ಅಡಗಿಕೊಳ್ವುದೋ ?

ಶಕ್ತಿಯಿತ್ತೆ ಮುಕ್ತಿಯನ್ನು 

ಗಳಿಸಿಕೊಳ್ಳಲು 

ನೀರನೆರೆದೆ ಬಳ್ಳಿಯನ್ನು 

ಬೆಳೆಸಿಕೊಳ್ಳಲು ।।೧।।


ಜ್ಞಾನರವಿಯನಿತ್ತೆ ಎದೆಯ 

ನೋಡಿಕೊಳ್ಳಲು 

ಗೀತೆಯನ್ನು ಕೊಟ್ಟೆ

ಕೊಳನೂದಿಕೋಳ್ಳಲು 

ಎಲ್ಲವನ್ನು ಕೊಟ್ಟಿರುವೆ 

ಏನ ಬೇಡಲಿ !

ಜಗವನೆನಗೆ ಬಿಟ್ಟಿರುವೆ 

ಏಕೆ ಕಾಡಲಿ ! ।।೨।।

                              




Saturday, July 23, 2022

Nanna Iniyana Neleya (ನನ್ನ ಇನಿಯನ ನೆಲೆಯ )

 

Bhavageete

Sahitya: N S Laxminarayana bhatt

Song link:  Click Here


Nanna iniyana neleya

Balleyene

Hege tiliyali adanu

Hele neene


Iruve sariyuva saddu

Moggu tereyuva saddu

Manju suriyuva saddu

Kelaballa


Iruve sariyuva saddu

Moggu tereyuva saddu

Manju suriyuva saddu

Keluvavanu

Nanna moreyanu eke 

Kelanavanu ||nanna||


Giriya ettalu balla

Sharadi bhattisaballa

Gali usirane katti

Nilisaballa

Nanna sereyindeke bidisalolla ||nanna||


Neeru mugiladavanu

Mugilu maleyadavanu

Male biddu tene eddu

Tuguvavanu

Nanne alalanu eke ariyanavanu ||nanna||


ಭಾವಗೀತೆ 


ನನ್ನ ಇನಿಯನ ನೆಲೆಯ 

ಬಲ್ಲೆಯೇನೆ 

ಹೇಗೆ ತಿಳಿಯಲಿ ಅದನು 

ಹೇಳೇ ನೀನೆ 


ಇರುವೆ ಸರಿಯುವ ಸದ್ದು 

ಮೊಗ್ಗು ತೆರೆಯುವ ಸದ್ದು 

ಮಂಜು ಸುರಿಯುವ ಸದ್ದು 

ಕೇಳಬಲ್ಲ 


ಇರುವೆ ಸರಿಯುವ ಸದ್ದು 

ಮೊಗ್ಗು ತೆರೆಯುವ ಸದ್ದು 

ಮಂಜು ಸುರಿಯುವ ಸದ್ದು

ಕೇಳುವವನು 

ನನ್ನ ಮೊರೆಯನು ಏಕೆ ಕೇಳನವನು ।।ನನ್ನ।।


ಗಿರಿಯ ಎತ್ತಲು ಬಲ್ಲ 

ಶರಧಿ ಭತ್ತಿಸ ಬಲ್ಲ 

ಗಾಳಿ ಉಸಿರನೆ ಕಟ್ಟಿ 

ನಿಲಿಸಬಲ್ಲ 

ನನ್ನ ಸೆರೆಯಿಂದೇಕೆ ಬಿಡಿಸಲೊಲ್ಲ ।।ನನ್ನ।।


ನೀರು ಮುಗಿಲಾದವನು 

ಮುಗಿಲು ಮಳೆಯಾದವನು 

ಮಳೆ ಬಿದ್ದು ತೆನೆ ಎದ್ದು 

ತೂಗುವವನು 

ನನ್ನೀ ಅಳಲನು ಏಕೆ ಅರಿಯನವನು  ।।ನನ್ನ।।

                                       



Friday, July 22, 2022

Jaya Jaya Jaya Kannada Rajeshwari (ಜಯ ಜಯ ಜಯ ಕನ್ನಡ ರಾಜೇಶ್ವರಿ)

 

Nadageete

Sahitya: N S Lakshminarayana Bhat

Song link: Click Here



Jaya jaya jaya kannada rajeshwari

Sharanu bande padake bhuvaneshwari


Pampana nudi minchina manimalege

Naranappa kadeda bhava jwalege

Shileye arali naguva kaleya leelege

Yaru samave tayi ninna cheluvige? ||jaya||


Shankara ramanujarali suliyuta

Madwara navachintanadali beleyuta

Basavannana neetige, allamaprabhu preetige

Namo enuve darshanagala jyothige ||jaya||


Kaveriya siripayirina hadige

Minchunage sharavatiya beedige

Virupaksha chamundiya jodige

Manide nooru vaibhavagala nadige ||jaya||


ನಾಡಗೀತೆ 


ಜಯ ಜಯ ಜಯ ಕನ್ನಡ ರಾಜೇಶ್ವರಿ 

ಶರಣು ಬಂದೆ ಪಾದಕೆ ಭುವನೇಶ್ವರಿ ।।ಪ ।।


ಪಂಪನ ನುಡಿ ಮಿಂಚಿನ ಮಣಿಮಾಲೆಗೆ 

ನಾರಣಪ್ಪ ಕಡೆದ ಭಾವಜ್ವಾಲೆಗೆ 

ಶಿಲೆಯೆ  ಅರಳಿ ನಗುವ ಕಲೆಯ ಲೀಲೆಗೆ 

ಯಾರು ಸಮವೆ ತಾಯಿ ನಿನ್ನ ಚೆಲುವಿಗೆ ? ।।೧।।


ಶಂಕರ ರಾಮಾನುಜರಲಿ ಸುಳಿಯುತ 

ಮಧ್ವರ ನವಚಿಂತನದಲಿ ಬೆಳೆಯುತ 

ಬಸವಣ್ಣನ ನೀತಿಗೆ , ಅಲ್ಲಮಪ್ರಭು ಪ್ರೀತಿಗೆ 

ನಮೋ ಎನುವೆ ದರ್ಶನಗಳ ಜ್ಯೋತಿಗೆ  ।।೨।।


ಕಾವೇರಿಯ ಸಿರಿಪಯಿರಿನ ಹಾಡಿಗೆ 

ಮಿಂಚುನಗೆ ಶರಾವತಿಯ ಬೀಡಿಗೆ 

ವಿರೂಪಾಕ್ಷ ಚಾಮುಂಡಿಯ ಜೋಡಿಗೆ 

ಮಣಿದೆ ನೂರು ವೈಭವಗಳ ನಾಡಿಗೆ  ।।೩।।

                                            



Thursday, July 21, 2022

Balegara Chennayya (ಬಳೆಗಾರ ಚೆನ್ನಯ್ಯ )

 

Bhavageete

Sahitya: K S Narasimhaswamy

Song link: Click Here



Balegara chennayya bagilige bandihenu

Olage baralappaneye doreye?

Navilura maneyinda nudiyonda tandihenu-

Baleya todisuvudilla nimage.


Mudida malligeyaralu badilla, rayare

Tourinali tayi naguthiharu

Kudida niralugilla, koragadiri, rayare

Ammanige baleya todisidaru


Andu mangalavara navilura keriyali

Olagada saddu tumbittu

Baleya todisidarandu ammanige tourinali

Angalada tumba janavittu  ||balegara|


Sirigouriyante bandaru tayi hasemanege

Seraginali kanniranorasi

Sukhadolage nimma nenedaru tayi gunavante

Deepadali biduganna nilisi


Bekada hannihudu, hoovihudu tourinali

Hosa seere, ratnadhabharana

Tayi koraguvaralli neevilladurinali

Nimagilla ondu hani karuna. ||balegara||


Dinavada basuri ussendu nittusireledu

Kudiyabaradu nanna doreye

Hindabaradu dundu malligeya dandeyanu

Onagabaradu odala chilume


Mulisu mavana mele, magaleena madidalu?

Nimagetaki kallumanasu?

Hogi banniri omme; kai mugidu beduvenu

Ammanige nimmade kanasu


ಭಾವಗೀತೆ 


ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು 

ಒಳಗೆ ಬರಲಪ್ಪಣೆಯೆ ದೊರೆಯೇ ?

ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು 

ಬಳೆಯ ತೊಡಿಸುವುದಿಲ್ಲ ನಿಮಗೆ . 


ಮುಡಿದ ಮಲ್ಲಿಗೆಯರಳು ಬಾಡಿಲ್ಲ , ರಾಯರೇ 

ತೌರಿನಲಿ ತಾಯಿ ನಗುತಿಹರು,

ಕುಡಿದ ನೀರಲುಗಿಲ್ಲ, ಕೊರಗದಿರಿ , ರಾಯರೇ 

ಅಮ್ಮನಿಗೆ ಬಳೆಯ  ತೊಡಿಸಿದರು 


ಅಂದು ಮಂಗಳವಾರ ನವಿಲೂರ ಕೇರಿಯಲಿ 

ಓಲಗದ ಸದ್ದು ತುಂಬಿತ್ತು ;

ಬಳೆಯ ತೊಡಿಸಿದರಂದು ಅಮ್ಮನಿಗೆ ತೌರಿನಲಿ 

ಅಂಗಳದ ತುಂಬ ಜನವಿತ್ತು . ।।ಬಳೆಗಾರ ।।


ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ 

ಸೆರಗಿನಲಿ ಕಣ್ಣೀರನೊರೆಸಿ ;

ಸುಖದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ 

ದೀಪದಲಿ ಬಿಡುಗಣ್ಣ ನಿಲಿಸಿ  


ಬೇಕಾದ ಹಣ್ಣಿಹುದು ,ಹೂವಿಹುದು  ತೌರಿನಲಿ 

ಹೊಸ ಸೀರೆ ,ರತ್ನದಾಭರಣ ;

ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ 

ನಿಮಗಿಲ್ಲ ಒಂದು ಹನಿ ಕರುಣ . ।।ಬಳೆಗಾರ ।।


ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರೆಳೆದು 

ಕುದಿಯಬಾರದು ನನ್ನ ದೊರೆಯೇ ;

ಹಿಂಡಬಾರದು ದುಂಡುಮಲ್ಲಿಗೆಯ ದಂಡೆಯನು 

ಒಣಗಬಾರದು ಒಡಲ ಚಿಲುಮೆ 


ಮುಳಿಸು ಮಾವನ ಮೇಲೆ ; ಮಗಳೇನ ಮಾಡಿದಳು ?

ನಿಮಗೇತಕೀ ಕಲ್ಲುಮನಸು ?

ಹೋಗಿ ಬನ್ನಿರಿ ಒಮ್ಮೆ ; ಕೈ ಮುಗಿದು ಬೇಡುವೆನು 

ಅಮ್ಮನಿಗೆ ನಿಮ್ಮದೇ ಕನಸು . 



Tuesday, July 19, 2022

Preeti Kotta Radhege (ಪ್ರೀತಿ ಕೊಟ್ಟ ರಾಧೆಗೆ )

 

Bhavageete

Sahitya: H S Venkatesha Murthy

Song link: Click Here


Preeti kotta radhege

Matu kotta madhava

Tannanitta kolalige

Raga tetta madhava


Gandha kotta hennige

Anda kotta madhava

Anna kotta bhaktage

Honna kotta madhava ||preeti kotta||


Halu kotta vidurage

Balu kotta madhava

Deha kotta mannige

Jeeva kotta madhava  ||preeti kotta||


ಭಾವಗೀತೆ 


ಪ್ರೀತಿ ಕೊಟ್ಟ ರಾಧೆಗೆ 

ಮಾತು ಕೊಟ್ಟ ಮಾಧವ 

ತನ್ನನಿತ್ತ ಕೊಳಲಿಗೆ 

ರಾಗ ತೆತ್ತ ಮಾಧವ ।।ಪ ।।


ಗಂಧ ಕೊಟ್ಟ ಹೆಣ್ಣಿಗೆ 

ಅಂದ ಕೊಟ್ಟ ಮಾಧವ 

ಅನ್ನ ಕೊಟ್ಟ ಭಕ್ತಗೆ 

ಹೊನ್ನ ಕೊಟ್ಟ ಮಾಧವ ।।೧।।


ಹಾಲು ಕೊಟ್ಟ ವಿದುರಗೆ 

ಬಾಳು ಕೊಟ್ಟ ಮಾಧವ 

ದೇಹ ಕೊಟ್ಟ ಮಣ್ಣಿಗೆ 

ಜೀವ ಕೊಟ್ಟ ಮಾಧವ ।।೨।। 

                        



Monday, July 18, 2022

Hesarayitu Karnataka Usiragali Kannada (ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ)

 

Nadageete

Sahitya: Chennaveera Kanavi

Song link: Click Here


Hesarayitu karnataka

Usiragali kannada

Hasigodeya haralinante

Husihogada kannada


Hoseda hage hurigolluva

Guri taguva kannada

Kuritodada parinata mati

Aritavarige hongoda


Padugadalina teregalante

Hede bicchuta moreyuva

Sahyadriya shikaradante

Banettara kareyuva ||1||


Gudigopura hongalasake

Chembelakina kannada

Nammellara maimanasina

Honganasina kannada ||2||


Tripadi inda sasira padi

Swachandada ullasa

Bhavageeta, mahakavya

Veeravinaya samarasa ||3||


Halli-ooru, nagara-jille

Mogada hogaru kannadi

Ella disegu chelluvarinda

Chaitanyada dangudi ||4||


ನಾಡಗೀತೆ 


ಹೆಸರಾಯಿತು ಕರ್ನಾಟಕ 

ಉಸಿರಾಗಲಿ ಕನ್ನಡ 

ಹಸಿಗೋಡೆಯ ಹರಳಿನಂತೆ 

ಹುಸಿಹೋಗದ ಕನ್ನಡ ।।ಪ ।।


ಹೊಸೆದ ಹಾಗೆ ಹುರಿಗೊಳ್ಳುವ 

ಗುರಿ ತಾಗುವ ಕನ್ನಡ 

ಕುರಿತೋದದ ಪರಿಣತ ಮತಿ 

ಅರಿತವರಿಗೆ ಹೊಂಗೂಡ ।।ಅನು ।।


ಪಡುಗಡಲಿನ ತೆರೆಗಳಂತೆ 

ಹೆಡೆ ಬಿಚ್ಚುತ ಮೊರೆಯುವ 

ಸಹ್ಯಾದ್ರಿಯ ಶಿಖರದಂತೆ 

ಬಾನೆತ್ತರ ಕರೆಯುವ ।।೧।। 


ಗುಡಿಗೋಪುರ ಹೊಂಗಳಸಕೆ 

ಚೆಂಬೆಳಕಿನ ಕನ್ನಡ 

ನಮ್ಮೆಲ್ಲರ ಮೈಮನಸಿನ 

ಹೊಂಗನಸಿನ ಕನ್ನಡ ।।೨।।


ತ್ರಿಪದಿಯಿಂದ ಸಾಸಿರ ಪದಿ 

ಸ್ವಚಂದದ ಉಲ್ಲಸ 

ಭಾವಗೀತ, ಮಹಾಕಾವ್ಯ 

ವೀರವಿನಯ ಸಮರಸ ।।೩।।


ಹಳ್ಳಿ - ಊರು, ನಗರ - ಜಿಲ್ಲೆ 

ಮೊಗದ ಹೊಗರು ಕನ್ನಡಿ 

ಎಲ್ಲ ದಿಸೆಗೂ ಚೆಲ್ಲುವರಿಂದ 

ಚೈತನ್ಯದ ದಾಂಗುಡಿ ।।೪।।



Saturday, July 16, 2022

Hottito hottitu kannadada deepa (ಹೊತ್ತಿತೋ ಹೊತ್ತಿತು ಕನ್ನಡದ ದೀಪ )

Nadageete

Sahitya: Dr Siddayya Puranik

Song link: Click Here


Hottito hottitu kannadada deepa

Mugiyito mugiyitu shatamanagala shapa

Hottito hottitu kannadada deepa


Kannu kukkisuvante dedeepyamana

Harsha vukkisuvante shobayamana

Kannadada maneyage jyotirnidhana

Kannadada prana, kannadada mana

Hottito hottitu kannadada deepa


Urivavaru bekinnu idarenneyagi

Suduvavaru bekkinu nidubattiyagi

Dharisuvaru bekidanu sirihanateyagi

Nanniusiragi, dharmakke bagi

Hottito hottitu kannadada deepa


Chirakala belagali kannadada deepa

Janakella belakagi punyapradeepa

Bharatake balavagi bhavya pradeepa

Kaleyutta tapa belesutta saipa

Hottito hottitu kannadada deepa


ನಾಡಗೀತೆ 


ಹೊತ್ತಿತೋ ಹೊತ್ತಿತು ಕನ್ನಡದ ದೀಪ 

ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ 

ಹೊತ್ತಿತೋ ಹೊತ್ತಿತು ಕನ್ನಡದ ದೀಪ ।।ಪ ।।


ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ 

ಹರ್ಷವುಕ್ಕಿಸುವಂತೆ ಶೋಭಾಯಮಾನ 

ಕನ್ನಡದ ಮನೆಯಾಗೆ ಜ್ಯೋತಿರ್ನಿಧಾನ 

ಕನ್ನಡದ ಪ್ರಾಣ ಕನ್ನಡದ ಮಾನ 

ಹೊತ್ತಿತೋ ಹೊತ್ತಿತು ಕನ್ನಡದ ದೀಪ ।।೧।।


ಉರಿವವರು ಬೇಕಿನ್ನು ಇದರೆಣ್ಣೆಯಾಗಿ 

ಸುಡುವವರು ಬೇಕಿನ್ನು ನಿಡುಬತ್ತಿಯಾಗಿ 

ಧರಿಸುವರು ಬೇಕಿದನು ಸಿರಿಹಣತೆಯಾಗಿ 

ನನ್ನೀಯುಸಿರಾಗಿ ಧರ್ಮಕ್ಕೆ ಬಾಗಿ 

ಹೊತ್ತಿತೋ ಹೊತ್ತಿತು ಕನ್ನಡದ ದೀಪ ।।೨।।


ಚಿರಕಾಲ ಬೆಳಗಲಿ  ಕನ್ನಡದ ದೀಪ 

ಜನಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ 

ಭಾರತಕೆ ಬಲವಾಗಿ ಭವ್ಯ ಪ್ರದೀಪ 

ಕಳೆಯುತ್ತ ತಾಪ ಬೆಳೆಸುತ್ತ ಸೈಪ 

ಹೊತ್ತಿತೋ ಹೊತ್ತಿತು ಕನ್ನಡದ ದೀಪ ।।೩।।



Wednesday, July 13, 2022

Jai bharata jananiya tanujate (ಜಯ್ ಭಾರತ ಜನನಿಯ ತನುಜಾತೆ )

Nadageete

Sahitya: Kuvempu

Song link: Click Here



Jai bharata jananiya tanujate

Jaya he karnataka maate

Jai sundara nadi vanagala nade

Jaya he rasa rushigala beede


Bhudeviya makutada navamaniye

Gandhada chandada honnina ganiye

Raghava madhusudhanaravatarisida

Bharata jananiya tanujate

Jaya he karnataka maate


Jananiya jogula vedada ghosha

Jananige jeevavu ninnavesha

Hasurina girigala saale

Ninnaya koralina maale

Kapila patanjala goutama jinanuta

Bharata jananiya tanujate

Jaya he karnataka maate


Shankara ramanuja vidyaranya

Basaveshwara madwara divyaranya

Ranna shadakshari ponna

Pampa lakumipati janna

Kumaravyasara mangala dhama

Kavi kogilegala punya rama

Nanaka ramananda kabeerara

Bharata jananiya tanujate

Jaya he karnataka maate


Tailapa hoisalaralida nade

Dankana jakanara necchina beede

Krishna sharavati tunga

Kaveriya vara ranga

Chaitanya paramahamsa vivekara

Bharata jananiya tanujate

Jaya he karnataka maate


Sarva janangada shantiya tota

Rasikara kangala seleyuva nota

Hindu kraista musalmana

Parasika jainarudhyana

Janakana holuva doregala dhama

Gayaka vainikararama


Kannada nudi kunidaduva geha

Kannada tayiya makkala deha

Jai bharata jananiya tanujate

Jaya he karnataka maate

Jai sundara nadi vanagala nade

Jaya he rasa rushigala beede 


ನಾಡಗೀತೆ 


ಜಯ್ ಭಾರತ ಜನನಿಯ ತನುಜಾತೆ 

ಜಯ ಹೇ ಕರ್ನಾಟಕ ಮಾತೆ ।

ಜಯ್ ಸುಂದರ ನದಿ ವನಗಳ ನಾಡೆ, 

ಜಯ ಹೇ ರಸ ಋಷಿಗಳ ಬೀಡೆ ।


ಭೂದೇವಿಯ ಮಕುಟದ ನವಮಣಿಯೆ,

ಗಂಧದ ಚಂದದ ಹೊನ್ನಿನ ಗಣಿಯೆ; 

ರಾಘವ ಮಧುಸೂಧನರವತರಿಸಿದ 

ಭಾರತ ಜನನಿಯ ತನುಜಾತೆ, 

ಜಯ ಹೇ ಕರ್ನಾಟಕ ಮಾತೆ ।


ಜನನಿಯ ಜೋಗುಳ ವೇದದ ಘೋಷ,

ಜನನಿಗೆ ಜೀವವು ನಿನ್ನಾವೇಶ. 

ಹಸುರಿನ ಗಿರಿಗಳ ಸಾಲೆ 

ನಿನ್ನಯ ಕೊರಳಿನ ಮಾಲೆ.  

ಕಪಿಲ ಪತಂಜಲ ಗೌತಮ ಜಿನನುತ 

ಭಾರತ ಜನನಿಯ ತನುಜಾತೆ,

ಜಯ ಹೇ ಕರ್ನಾಟಕ ಮಾತೆ ।


ಶಂಕರ ರಾಮಾನುಜ ವಿದ್ಯಾರಣ್ಯ 

ಬಸವೇಶ್ವರ ಮಧ್ವರ ದಿವ್ಯಾರಣ್ಯ 

ರನ್ನ ಷಡಕ್ಷರಿ ಪೊನ್ನ 

ಪಂಪ ಲಕುಮಿಪತಿ ಜನ್ನ 

ಕುಮಾರವ್ಯಾಸರ ಮಂಗಳಧಾಮ।

ಕವಿ ಕೋಗಿಲೆಗಳ ಪುಣ್ಯಾರಾಮ 

ನಾನಕ ರಾಮಾನಂದ ಕಬೀರರ 

ಭಾರತ ಜನನಿಯ ತನುಜಾತೆ 

ಜಯ ಹೇ ಕರ್ನಾಟಕ ಮಾತೆ ।


ತೈಲಪ ಹೊಯ್ಸಳರಾಳಿದ ನಾಡೆ,

ಡಂಕಣ ಜಕಣರ ನೆಚ್ಚಿನ ಬೀಡೆ;

ಕೃಷ್ಣ ಶರಾವತಿ ತುಂಗಾ 

ಕಾವೇರಿಯ ವರ ರಂಗ.  

ಚೈತನ್ಯ ಪರಮಹಂಸ ವಿವೇಕರ 

ಭಾರತ ಜನನಿಯ ತನುಜಾತೆ, 

ಜಯ ಹೇ ಕರ್ನಾಟಕ ಮಾತೆ ।


ಸರ್ವ ಜನಾಂಗದ ಶಾಂತಿಯ ತೋಟ,

ರಸಿಕರ ಕಂಗಳ ಸೆಳೆಯುವ ನೋಟ.  

ಹಿಂದೂ ಕ್ರೈಸ್ತ ಮುಸಲ್ಮಾನ 

ಪಾರಸಿಕ ಜೈನರುದ್ಯಾನ.  

ಜನಕನ ಹೋಲುವ ದೊರೆಗಳ ಧಾಮ, 

ಗಾಯಕ ವೈಣಿಕರಾರಾಮ ।


ಕನ್ನಡ ನುಡಿ ಕುಣಿದಾಡುವ ಗೇಹ ।

ಕನ್ನಡ ತಾಯಿಯ ಮಕ್ಕಳ ದೇಹ ।

ಜಯ್ ಭಾರತ  ಜನನಿಯ ತನುಜಾತೆ, 

ಜಯ ಹೇ ಕರ್ನಾಟಕ ಮಾತೆ ।

ಜಯ್ ಸುಂದರ ನದಿ ವನಗಳ ನಾಡೆ, 

ಜಯ ಹೇ ರಸ ಋಷಿಗಳ ಬೀಡೆ ।



Utada Aata (ಊಟದ ಆಟ)

 Padya

Sahitya: J P Rajaratnam

Song link: Click Here


Ondu Eradu

Balele haradu


Mooru nalku

Anna haku


Iydu aaru

Bele saru


Elu entu

Palyake dantu


Ombattu hattu

Ele mudirettu


Ondarinda hattu heegittu

Utada aatavu mugidittu


ಪದ್ಯ 


ಒಂದು ಎರಡು 

ಬಾಳೆಲೆ ಹರಡು 


ಮೂರು ನಾಲ್ಕು 

ಅನ್ನ ಹಾಕು 


ಐದು ಆರು 

ಬೇಳೆ ಸಾರು 


ಏಳು ಎಂಟು 

ಪಲ್ಯಕೆ ದಂಟು 


ಒಂಬತ್ತು ಹತ್ತು 

ಎಲೆ ಮುದಿರೆತ್ತು 


ಒಂದರಿಂದ ಹತ್ತು ಹೀಗಿತ್ತು 

ಊಟದ ಆಟವು ಮುಗಿದಿತ್ತು 

                

Monday, July 11, 2022

Tappi Hoyitalle Chukki Belakina Jadu (ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು )


Bhavageete

Sahitya: D C Kulkarni

Song link: Click Here


Tappi hoyitalle chukki belakina jadu

Innillavayite aa hakki haadu

Hasirele hoovina naduve, hullu hasige

Muridu hoyite eega aa chikki gudu 


Hani haniyagi tonedu tugida preeeti

Haridu churayite edeya olavina beedu

Rekke badidotti ettikolluva hakki

Kadina jadu hidiyutta nanna padu  ||tappi hoyitalle||


Elli hoyite valase gudu toreda hakki

Seri hoyite neeli mugila mareya hadu

Kada nenapige hindi tevalutide jeeva

Munde bayalu hinde bidditu kadu maedu  ||tappi hoyitalle||


ಭಾವಗೀತೆ 


ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು 

ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು 

ಹಸಿರೆಲೆ ಹೂವಿನ ನಡುವೆ ಹುಲ್ಲು ಹಾಸಿಗೆ 

ಮುರಿದು ಹೋಯಿತೆ ಈಗ ಆ ಚಿಕ್ಕಿ ಗೂಡು ।।ಪ ।।


ಹನಿ ಹನಿಯಾಗಿ ತೊನೆದು ತೂಗಿದ ಪ್ರೀತಿ 

ಹರಿದು ಚೂರಾಯಿತೆ ಎದೆಯ ಒಲವಿನ ಬೀಡು 

ರೆಕ್ಕೆ ಬಡಿದೊತ್ತಿ ಎತ್ತಿಕೊಳ್ಳುವ ಹಕ್ಕಿ 

ಕಾಡಿನ ಜಾಡು ಹಿಡಿಯುತ್ತ ನನ್ನ ಪಾಡು ।।೧।।


ಎಲ್ಲಿ ಹೋಯಿತೆ ವಲಸೆ ಗೂಡು ತೊರೆದ ಹಕ್ಕಿ 

ಸೇರಿ ಹೋಯಿತೆ ನೀಲಿ ಮುಗಿಲ ಮರೆಯ ಹಾಡು 

ಕಾಡ ನೆನಪಿಗೆ ಹಿಂಡಿ ತೆವಳುತಿದೆ ಜೀವ 

ಮುಂದೆ ಬಯಲು ಹಿಂದೆ ಬಿದ್ದಿತು ಕಾಡು ಮೇಡು ।।೨।।

                                      


Friday, July 8, 2022

Sirigereya Neeralli (ಸಿರಿಗೆರೆಯ ನೀರಲ್ಲಿ)

 Bhavageete

Sahitya: K S Narasimha Swamy

Song link: Click Here


Sirigereya Neeralli birida tavareyalli

Kempagi ninna hesaru

Gudiya gopuradalli mereva deepagalalli

Belakagi ninna hesaru


Joyisara holadolage kuniva kengaruvina

Kannalli ninna hesaru

Taya moleyalli karu tuti ittu chellisida

Halalli ninna hesaru


Hoo banada bisilalli nartisuva navilina

Daniyalli ninna hesaru

Hombale hoovinali horata parimaladalli

Uyyale ninna hesaru


Maretaga tutige barade moda mareyolage

Beladingalo ninna hesaru

Nenedaga kanna mundella hunnimeyolage

Hoo bana ninna hesaru


ಭಾವಗೀತೆ 


ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ 

ಕೆಂಪಾಗಿ ನಿನ್ನ ಹೆಸರು 

ಗುಡಿಯ ಗೋಪುರದಲ್ಲಿ ಮೆರೆವ ದೀಪಗಳಲ್ಲಿ 

ಬೆಳಕಾಗಿ ನಿನ್ನ ಹೆಸರು 


ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ 

ಕಣ್ಣಲ್ಲಿ ನಿನ್ನ ಹೆಸರು 

ತಾಯ ಮೊಲೆಯಲ್ಲಿ ಕರು ತುಟಿ ಇಟ್ಟು ಚೆಲ್ಲಿಸಿದ 

ಹಾಲಲ್ಲಿ ನಿನ್ನ ಹೆಸರು 


ಹೂ ಬನದ ಬಿಸಿಲಲ್ಲಿ ನರ್ತಿಸುವ ನವಿಲಿನ 

ದನಿಯಲ್ಲಿ ನಿನ್ನ ಹೆಸರು 

ಹೊಂಬಾಳೆ ಹೂವಿನಲಿ ಹೊರಟ ಪರಿಮಳದಲ್ಲಿ 

ಉಯ್ಯಾಲೆ ನಿನ್ನ ಹೆಸರು 


ಮರೆತಾಗ ತುಟಿಗೆ ಬಾರದೆ ಮೋಡ ಮರೆಯೊಳಗೆ 

ಬೆಳದಿಂಗಳೋ ನಿನ್ನ ಹೆಸರು 

ನೆನೆದಾಗ ಕಣ್ಣ ಮುಂದೆಲ್ಲ ಹುಣ್ಣಿಮೆಯೊಳಗೆ 

ಹೂ ಬಾಣ ನಿನ್ನ ಹೆಸರು 

                                  

                    


Thursday, July 7, 2022

Vishwa vinutana Vidya Chetana (ವಿಶ್ವವಿನೂತನ ವಿದ್ಯಾಚೇತನ )



Deshabhakti Geete

Sahitya: Chennaveera Kanavi

Song link: Click Here


Vishwa vinutana vidya chetana

Sarva hrudaya samskari

Jaya bharati

Karunada saraswati

Gudigopura sura shilpa kalakruti

Krishne, tunge, kaveri

Pavitrita kshetra manohari


Ganga, kadamba, rastrakuta bala

Chalukya, hoisala, ballala

Hakka bukka, pulakeshi vikramara

Chennamagiya veerashti ||vishva vinutana||


Tyaga bhoga samayogada dristi

Belagola male kere sundara srusti

Jnanada, vijnanada, kaleyaisiri

Sarodaya dharanagari ||vishva vinutana||


Arive guru, nudi jyothrlinga

Dayave dharmada moola taranga

Vishwa bharatige kannadadarati

Molagali mangala jayabheri ||vishva vinutana||


ದೇಶಭಕ್ತಿ ಗೀತೆ 


ವಿಶ್ವವಿನೂತನ ವಿದ್ಯಾಚೇತನ 

ಸರ್ವ ಹೃದಯ ಸಂಸ್ಕಾರಿ 

ಜಯ ಭಾರತಿ 

ಕರುನಾಡ ಸರಸ್ವತಿ 

ಗುಡಿಗೋಪುರ ಸುರಶಿಲ್ಪ ಕಲಾಕೃತಿ 

ಕೃಷ್ಣೆ ತುಂಗೆ ಕಾವೇರಿ 

ಪವಿತ್ರಿತ ಕ್ಷೇತ್ರ ಮನೋಹಾರಿ ।।ಪ ।।


ಗಂಗ ಕದಂಬ ರಾಷ್ಟ್ರಕೂಟ ಬಲ 

ಚಾಲುಕ್ಯ ಹೊಯ್ಸಳ ಬಲ್ಲಾಳ 

ಹಕ್ಕ ಬುಕ್ಕ ಪುಲಕೇಶಿ ವಿಕ್ರಮರ 

ಚೆನ್ನಮ್ಮಾಜಿಯ ವೀರಶ್ರೀ ।।೧।।


ತ್ಯಾಗ ಭೋಗ ಸಮಯೋಗದ ದೃಷ್ಟಿ 

ಬೆಳಗೊಳ  ಮಲೆ ಕೆರೆ ಸುಂದರ ಸೃಷ್ಟಿ 

ಜ್ಞಾನದ ವಿಜ್ಞಾನದ ಕಲೆಯೈಸಿರಿ 

ಸಾರೋದಯ  ಧಾರಾನಗರಿ ।।೨।।


ಅರಿವೇ ಗುರು ನುಡಿ ಜ್ಯೋತಿರ್ಲಿಂಗ 

ದಯವೇ ಧರ್ಮದ ಮೂಲ ತರಂಗ 

ವಿಶ್ವಭಾರತಿಗೆ ಕನ್ನಡದಾರತಿ 

ಮೊಳಗಲಿ ಮಂಗಳ ಜಯಭೇರಿ ।।೩।।

                               

Wednesday, July 6, 2022

Erutihudu Harutihudu Nodu Namma Bavuta (ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ)

 Deshabhakti Geet

Sahitya: Kayyara Kinhanna Rai


Erutihudu Harutihudu

Nodu namma bavuta

Torutihudu hodedu hodedu

Baninagala patapata


Kesari bili hasiru mooru

Banna naduve chakravu

Satya shanti tyaga murthy

Gandhi hidida charakavu


Inta dwajavu namma dwajavu

Noodu harutiruvudu

Dwajada bhakti namma shakti

Nada gudiya merevudu


Kempu kirana tumbi gagana

Honna bannavagide

Namma nada gudiya noda

Nodiranna hegide


ದೇಶಭಕ್ತಿ ಗೀತೆ 


ಏರುತಿಹುದು ಹಾರುತಿಹುದು 

ನೋಡು ನಮ್ಮ ಬಾವುಟ 

ತೋರುತಿಹುದು ಹೊಡೆದು ಹೊಡೆದು 

ಬಾನಿನಗಲ ಪಟಪಟ ।।೧।।


ಕೇಸರಿ ಬಿಳಿ ಹಸಿರು ಮೂರು 

ಬಣ್ಣ ನಡುವೆ ಚಕ್ರವು 

ಸತ್ಯ ಶಾಂತಿ ತ್ಯಾಗ ಮೂರ್ತಿ 

ಗಾಂಧಿ ಹಿಡಿದ ಚರಕವು ।।೨।।


ಇಂತ ಧ್ವಜವು ನಮ್ಮ ಧ್ವಜವು 

ನೋಡು ಹಾರುತ್ತಿರುವುದು 

ಧ್ವಜದ ಭಕ್ತಿ ನಮ್ಮ ಶಕ್ತಿ 

ನಾಡ ಗುಡಿಯ ಮೆರೆವುದು ।।೩।।


ಕೆಂಪು ಕಿರಣ ತುಂಬಿ ಗಗನ 

ಹೊನ್ನ ಬಣ್ಣವಾಗಿದೆ 

ನಮ್ಮ ನಾಡ ಗುಡಿಯ ನೋಡ 

ನೋಡಿರಣ್ಣ ಹೇಗಿದೆ ।।೪।।

                           

Tuesday, July 5, 2022

Udayavagali Namma Cheluva Kannada Nadu (ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು)



Nadageete

Sahitya: Huyilagola Narayana Rayaru

Song link: Click Here



Udayavagali namma cheluva 

Kannada nadu

Baduku baluhina nidhiyu

Sadabhimanada gudu


Rajanyaripu parashurama nammana nadu

Aa jaladhiyane jigida hanumanudisida nadu

Ojeyim meredarasugala sahasada suudu

Tejavanu namageeva veera vrundada beedu ||udayavagali||


Lekkiga mitakshararu beledu merediha nadu

Jakkanana shilpa kale acchariya karugodu

Chokka matagala saridavarigidu neleveedu

Bokkasada kanajavai vidwattegala kadu ||udayavagali||


Pavaneyara krishne bhimeyara tainadu

Kaveri godeyaru maidoleva nalunadu

Aavagam spurtisuva kabbigara nade madu

Kava gadugina veeranarayanana beedu ||udayavagali||


ನಾಡಗೀತೆ 


ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು 

ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು ।।ಪ ।।


ರಾಜನ್ಯರಿಪು ಪರಶುರಾಮನಮ್ಮನ ನಾಡು 

ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು 

ಓಜೆಯಿಂ ಮೆರೆದರಸುಗಳ ಸಾಹಸದ ಸೂಡು 

ತೇಜವನು ನಮಗೀವ ವೀರವೃಂದದ ಬೀಡು ।।೧।।


ಲೆಕ್ಕಿಗ ಮಿತಾಕ್ಷರರು ಬೆಳೆದು ಮೆರೆದಿಹ ನಾಡು 

ಜಕ್ಕಣನ ಶಿಲ್ಪ ಕಲೆ ಅಚ್ಚರಿಯ ಕರುಗೋಡು 

ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು 

ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು ।।೨।।


ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು 

ಕಾವೇರಿ ಗೋದೆಯರು ಮೈದೊಳೆವ ನಲುನಾಡು 

ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆ ಮಾಡು 

ಕಾವ ಗದುಗಿನ ವೀರನಾರಾಯಣನ ಬೀಡು ।।೩।।

                                   





Monday, July 4, 2022

Do Pal Ruka




Movie: Veer-Zaara (2004)
Singers: Lata Mangeshkar, Sonu Nigam
Song link: Click Here


Do pal ruka

Khwabon ka karvaan

Aur phir chal diye

Tum kahan hum kahan


Do pal ki thi

Yeh dilon ki dastaan

Aur phir chal diye

Tum kahan hum kahan


Aur phir chal diye

Tum kahan hum kahan


Tum te ke thi koi ujli kiran

Tum te ya koi kali muskayi thi

Tum te ya sapnon ka tha sawan

Tum te ke kushiyon ki ghata chayi thi

Tum te ki tha koi phool khila

Tum te ya mila tha mujhe naya jahaan


Do pal ruka

Khwabon ka karvaan

Aur phir chal diye

Tum kahan hum kahan


Do pal ki thi

Yeh dilon ki dastaan

Aur phir chal diye

Tum kahan hum kahan


Tum te ya kushboo hawaoon mein thi

Tum te ya rang saari dishaaon mein te

Tum te ya roshini raahon mein thi

Tum te ya geet goonje fizaon mein te

Tum te mile ya mili thi manzilein

Tum te ke tha jadoo bhara koi sama


Do pal ruka

Khwabon ka karvaan

Aur phir chal diye

Tum kahan hum kahan


Do pal ki thi

Yeh dilon ki dastaan

Aur phir chal diye

Tum kahan hum kahan


Aur phir chal diye

Tum kahan hum kahan


Aur phir chal diye

Tum kahan hum kahan..