Showing posts with label Kannada Janapada geete. Show all posts
Showing posts with label Kannada Janapada geete. Show all posts

Sunday, May 10, 2026

Tingalu Mulugidavo Madeshwara (ತಿಂಗಳು ಮುಳುಗಿದವೋ ಮಾದೇಶ್ವರ)

Janapada Geete

Song link: Click Here


Tingalu mulugidavo, rangole belagidavo,

Namma swami madappana poojegendu baale baagidavo ||


Appa madayyanige, tuppada deepa hacchi,

Hombaale seve maaduvaga, baale baagidavo ||


Anna maadayyanu, sanna terina myale,

Summane kutu sharanaru noduvaaga, baale baagidavo ||


Mallige hoonange, chellitu ninna paruse,

Namma chellatagaara maykarna poojege, baale baagidavo ||


Haalambadinda, haalaravi baruvaaga,

Namma swami valadi beegutta baruvaga, baale baagidavo ||


ಜಾನಪದ ಗೀತೆ 


ತಿಂಗಳು ಮುಳುಗಿದವೋ, ರಂಗೋಲೆ ಬೆಳಗಿದವೋ,

ನಮ್ಮ ಸ್ವಾಮಿ ಮಾದಪ್ಪನ ಪೂಜೆಗೆಂದು ಬಾಳೆ ಬಾಗಿದವೋ

 ।।ಪ।।


ಅಪ್ಪ ಮಾದಯ್ಯನಿಗೆ, ತುಪ್ಪದ ದೀಪ ಹಚ್ಚಿ,

ಹೊಂಬಾಳೆ ಸೇವೆ ಮಾಡುವಾಗ, ಬಾಳೆ ಬಾಗಿದವೋ ।।೧।।


ಅಣ್ಣ ಮಾದಯ್ಯನು, ಸಣ್ಣ ತೇರಿನ ಮ್ಯಾಲೆ,

ಸುಮ್ಮನೆ ಕೂತು ಶರಣರು ನೋಡುವಾಗ, ಬಾಳೆ ಬಾಗಿದವೋ

 ।।೨।।


ಮಲ್ಲಿಗೆ ಹೂನಂಗೆ, ಚೆಲ್ಲಿತು ನಿನ್ನ ಪರುಸೆ,

ನಮ್ಮ ಚೆಲ್ಲಾಟಗಾರ ಮಾಯ್ಕಾರ್ನ ಪೂಜೆಗೆ, ಬಾಳೆ ಬಾಗಿದವೋ 

।।೩।।


ಹಾಲಂಬಾಡಿ೦ದ, ಹಾಲರವಿ ಬರುವಾಗ,

ನಮ್ಮ ಸ್ವಾಮಿ ವಾಲಾಡಿ ಬೀಗುತ್ತ ಬರುವಾಗ, ಬಾಳೆ ಬಾಗಿದವೋ 

।।೪।।

Monday, September 2, 2024

Chikka Tilakada Battu (ಚಿಕ್ಕ ತಿಲಕದ ಬಟ್ಟು)

Janapada Geete

Song link: Click Here


O nanna chinnave, o nanna rannave

O nanna pranada padakaave | paccheteneya

Hege karakondyo yamaraya ||


Chikka tilakada battu ikkadiru tangamma

Chikka prayadali nina ganda | hodamele

Chikki battittu phalavenu ||


Ganda satta mele gandha kunkumavyako

Bangaaravyako, baleyako | tangamma

Singaaravyako turuvige ||


Hottaare bidadalla muttina kanneeru

Dukha maadidare phalavenu | baa magale

Mutaide stana stiravalla ||


Duru taruva hennu, januma horuvudakinta

Beedi nayiye kadelesu | baa magale

Hennagi baala horabeda ||


Kannadi kai tappi hanneradu churagi

Hennina manavu eradaagi | tangamma

Anyarige neenu oliyabeda ||


ಜಾನಪದ ಗೀತೆ 


ಓ ನನ್ನ ಚಿನ್ನಾವೆ, ಓ ನನ್ನ ರನ್ನಾವೆ 

ಓ ನನ್ನ ಪ್ರಾಣದ ಪದಕಾವೇ ।ಪಚ್ಚೆತೆನಯ 

ಹೇಗೆ ಕರಕೊಂಡ್ಯೋ ಯಮರಾಯ ।।


ಚಿಕ್ಕ ತಿಲಕದ ಬಟ್ಟು ಇಕ್ಕದಿರು ತಂಗಮ್ಮ 

ಚಿಕ್ಕ ಪ್ರಾಯದಲಿ ನಿನ ಗಂಡ । ಹೋದಮೇಲೆ 

ಚಿಕ್ಕಿ ಬಟ್ಟಿಟ್ಟು ಫಲವೇನು ।।


ಗಂಡ ಸತ್ತ ಮೇಲೆ ಗಂಧ ಕುಂಕುಮವ್ಯಾಕೋ 

ಬಂಗರವ್ಯಾಕೋ, ಬಳೆಯಾಕೋ । ತಂಗಮ್ಮ 

ಸಿಂಗಾರವ್ಯಾಕೋ ತುರುವಿಗೆ ।।


ಹೊತ್ತಾರೆ ಬಿಡದಲ್ಲ ಮುತ್ತಿನ ಕಣ್ಣೀರು 

ದುಃಖ ಮಾಡಿದರೆ ಫಲವೇನು । ಬಾ ಮಗಳೇ 

ಮುತೈದೆ ಸ್ಥಾನ ಸ್ಥಿರವಲ್ಲ ।।


ದೂರು ತರುವ ಹೆಣ್ಣು, ಜನುಮ ಹೊರುವುದಕಿಂತ 

ಬೀದಿ ನಾಯಿಯೇ ಕಡೆಲೇಸು । ಬಾ ಮಗಳೇ 

ಹೆಣ್ಣಾಗಿ ಬಾಳ ಹೊರಬೇಡ ।।


ಕನ್ನಾಡಿ ಕೈತಪ್ಪಿ ಹನ್ನೆರಡು ಚೂರಾಗಿ 

ಹೆಣ್ಣಿನ ಮನವು ಎರಡಾಗಿ । ತಂಗಮ್ಮ 

ಅನ್ಯರಿಗೆ  ನೀನು ಒಲಿಯಬೇಡ । ।

              



Monday, August 21, 2023

Panchami Habba (ಪಂಚಮಿ ಹಬ್ಬ)

Janapada Geete

Singer: B R Chaya

Song link: Click Here


Panchami habba....(2) ulidava dina naka

Anna baralilla yaka karilaka ||


Nanna tavaruru gokula nagara

Nanna annayya dodda sahukara

Maniyanthaaddu rajamandira

Hyanga aadita ittu iralaka

Anna baralilla yaka karilaka ||


Muttinanthaki, aaki nanna attigi

Preeti bhala nanna myala avaleegi

Bittalenamma bittu iralaka

Anna baralilla yaka karilaka ||


Nanna tavaralli panchami bhari

Mona tukada bella kobbari

Ellu avalakki tambittu suri

Nanu tinuvaki alle manasaari

Anna baralilla yaka karilaka ||


ಜನಪದ ಗೀತೆ 


ಪಂಚಮಿ ಹಬ್ಬ .... (೨) ಉಳಿದಾವ ದಿನ ನಾಕ 

ಅಣ್ಣ ಬರಲಿಲ್ಲ ಯಾಕ ಕರಿಲಾಕ ।।ಪ।।


ನನ್ನ ತವರೂರು ಗೋಕುಲ ನಗರಾ 

ನನ್ನ ಅಣ್ಣಯ್ಯ ದೊಡ್ಡ ಸಾಹುಕಾರ 

ಮನಿಯಂಥಾದ್ದು ರಾಜಮಂದಿರ

ಹ್ಯಾಂಗ ಆದೀತ ಬಿಟ್ಟು ಇರಲಾಕ 

ಅಣ್ಣ ಬರಲಿಲ್ಲ ಯಾಕ ಕರಿಲಾಕ ।।೧।।


ಮುತ್ತಿನಂಥಾಕಿ ಆಕಿ ನನ್ನ ಅತ್ತಿಗಿ 

ಪ್ರೀತಿ ಭಾಳ ನನ್ನ ಮ್ಯಾಲ ಅವಳೀಗಿ 

ಬಿಟ್ಟಾಳೇನಮ್ಮ ಬಿಟ್ಟು ಇರಲಾಕ 

ಅಣ್ಣ ಬರಲಿಲ್ಲ ಯಾಕ ಕರಿಲಾಕ ।।೨।।


ನನ್ನ ತವರಲ್ಲಿ ಪಂಚಮಿ ಭಾರಿ 

ಮೊಣ ತೂಕದ ಬೆಲ್ಲ ಕೊಬ್ಬರಿ 

ಎಳ್ಳು ಅವಲಕ್ಕಿ ತಂಬಿಟ್ಟು ಸೂರಿ 

ನಾನು ತಿನುವಾಕಿ ಅಲ್ಲೇ ಮನಸಾರಿ 

ಅಣ್ಣ ಬರಲಿಲ್ಲ ಯಾಕ ಕರಿಲಾಕ ।।೩।।



Monday, August 14, 2023

Innu Yaka Baralillavva Hubballiyanva (ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ)

Janapada Geete

Sahitya: Da Ra Bendre

Song link: Click Here


Innu yaka baralillavva hubbaliyanva

Varadaga moorasarati bandu hodanva ||


Bhari jarada rummala suttikondanva

Tumba-misi teedikota hubba harasanva

Maatu maatige nakka nagisi aadisyadanva

Eno andara eno katti haada haadanva ||


Iru andara baratenanta eddu horadanva

Maree telaga haakitendare iddu bidanva

Hidi hideele rokka tagadu hidi hidi annava

Khare anta kaimadidara hidad; bidanva ||


Chahada jodi chudadhanga nee nanagandanva

Choudiyalla nee chudamaniyanta rameesa bandanva

Beraligungura mooginaga mugabattittanva

Kanninaagina gombihanga edyaga nattanva ||


Elli ! malli ! paari ! taari !nodirenavva ?

Ningee ! sangee ! savantaree ! elhana nannava ?

Settara huduga setagondhodaa anta nanna jeenva

Haadi beedhi hudukutaitre bitta ella hyanva ||


ಜನಪದ ಗೀತೆ 


ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ 

ವಾರದಾಗ ಮೂರಸರತಿ ಬಂದು ಹೋದಾಂವಾ ।।ಪ।।


ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ 

ತುಂಬ - ಮೀಸಿ ತೀಡಿಕೋತ ಹುಬ್ಬ ಹಾರಸಾಂವಾ 

ಮಾತುಮಾತಿಗೆ ನಕ್ಕನಗಿಸಿ ಆಡಿಸ್ಯಾಡಾಂವಾ 

ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ ।।೧।।


ಇರು ಅಂದರ ಬರತೇನಂತ ಎದ್ದು ಹೊರಡಾ೦ವಾ 

ಮಾರೀ ತೆಳಗ ಹಾಕಿತೆಂದರೆ ಇದ್ದು ಬಿಡಾಂವಾ 

ಹಿಡಿ ಹೀಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾ೦ವಾ 

ಖರೇ ಅಂತ ಕೈಮಾಡಿದರ ಹಿಡದ; ಬಿಡಾಂವಾ ।।೨।।


ಚಾಹಾದ ಜೋಡಿ ಚೂಡಾಧಾಂಗ ನೀ ನನಗಂದಾ೦ವಾ 

ಚೌಡಿಯಲ್ಲ ನೀ ಚೂಡಾಮಣಿಯಂತ ರಮೀಸ ಬಂದಾಂವಾ 

ಬೆರಳಿಗುಂಗುರಾ ಮೂಗಿನಾಗ ಮೂಗಬಟ್ಟಿಟ್ಟಾ೦ವಾ 

ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾ೦ವಾ  ।।೩।।


ಎಲ್ಲೀ  ! ಮಲ್ಲೀ  ! ಪಾರೀ  ! ತಾರೀ ! ನೋಡೀರೇನವ್ವಾ ?

ನಿಂಗೀ ! ಸಂಗೀ ! ಸಾವಂತರೀ ! ಎಲ್ಲ್ಹಾನ  ನನ್ನಾಂವಾ ?

ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾ 

ಹಾದೀ ಬೀದೀ ಹುಡುಕತೈತ್ರೇ ಬಿಟ್ಟ ಎಲ್ಲಾ ಹ್ಯಾಂವಾ  ।।೩।। 



Saturday, July 22, 2023

Tanuvinolage Anudinaviddu (ತನುವಿನೊಳಗೆ ಅನುದಿನವಿದ್ದು)

Janapada Geete

Song link: Click Here


Tanuvinolage anudinaviddu

Enna manakondu mata helade hode hamsa ||


Hallakollada madhya tampina balli hutti

Balleeya hannu nelakuduri hoguvaga 

Tanna balligondu mata helade hode hamsa ||


Gali panjaradante malige mane madi

Gali beesi maneyu nelakuduri hoguvaga

Tanna bayaligondu mata helade hode hamsa ||


Kaaremba kattalali boremba malesuridu

Kere kattegalu odedu neer haridu hoguvga

Tanna erigondu mata helade hode hamsa ||


Kayada kombe mele mayada gili kulitu

Kayava bittu gili haari hoguvaga

Tanna kayakondu mata helade hode hamsa ||


Obattu bagila maneyol tumbida sandani iralu

Kamba biddu dimba uruli ambarakke haaruvaga

Tanna bimbakondu mata helade hode hamsa ||


ಜನಪದ ಗೀತೆ 


ತನುವಿನೊಳಗೆ ಅನುದಿನವಿದ್ದು 

ಎನ್ನ ಮನಕೊಂದು ಮಾತ ಹೇಳದೆ ಹೋದೆ ಹಂಸ ।।ಪ।।


ಹಳ್ಳಕೊಳ್ಳದ ಮಧ್ಯ ತಂಪಿನ ಬಳ್ಳಿ ಹುಟ್ಟಿ 

ಬಳ್ಳೀಯ ಹಣ್ಣು ನೆಲಕುದುರಿ ಹೋಗುವಾಗ 

ತನ್ನ ಬಳ್ಳಿಗೊಂದು  ಮಾತ ಹೇಳದೆ ಹೋದೆ ಹಂಸ ।।೧।।


ಗಾಳಿ ಪಂಜರದಂತೆ ಮಾಳಿಗೆ ಮನೆಮಾಡಿ 

ಗಾಳಿ ಬೀಸಿ ಮನೆಯು ನೆಲಕುದುರಿ ಹೋಗುವಾಗ 

ತನ್ನ ಬಯಲಿಗೊಂದು ಮಾತ ಹೇಳದೆ ಹೋದೆ ಹಂಸ ।।೨।।


ಕಾರೆಂಬ ಕತ್ತಲಲಿ ಬೋರೆಂಬ ಮಳೆಸುರಿದು 

ಕೆರೆ ಕಟ್ಟೆ ಒಡೆದು ನೀರ್ ಹರಿದು ಹೋಗುವಾಗ 

ತನ್ನ ಏರಿಗೊಂದು ಮಾತ ಹೇಳದೆ ಹೋದೆ ಹಂಸ ।।೩।।


ಕಾಯದ ಕೊಂಬೆ ಮೇಲೆ ಮಾಯದ ಗಿಳಿ ಕುಳಿತು 

ಕಾಯವ ಬಿಟ್ಟು ಗಿಳಿ ಹಾರಿ ಹೋಗುವಾಗ 

ತನ್ನ ಕಾಯಕೊಂದು ಮಾತ ಹೇಳದೆ ಹೋದೆ ಹಂಸ ।।೪।।


ಒಂಭತ್ತು ಬಾಗಿಲ ಮನೆಯೊಳ್ ತುಂಬಿದ ಸಂದಣಿ ಇರಲು 

ಕಂಬ ಬಿದ್ದು ಡಿ೦ಬ ಉರುಳಿ ಅಂಬರಕ್ಕೆ ಹಾರುವಾಗ 

ತನ್ನ ಬಿಂಬಕೊಂದು  ಮಾತ ಹೇಳದೆ ಹೋದೆ ಹಂಸ ।।೫।।



Saturday, July 15, 2023

Tavaroora Mane Noda Bande (ತವರೂರ ಮನೆ ನೋಡ ಬಂದೆ)

Janapada Geete

Song link: Click Here


Tavaroora mane noda bande

Tayi nenapagi kannira tande (2) ||


Hattu hadinalku varushagalinde

Hetta tayi tande preetiyinde (2)

Muttinante jopaanavagi baalide

Adu etta hodaru kanasagide ||


Baagila munde rangoli

Bagi idutidde nana taradalli (2)

Adu hege mareyali manasali

Adu mareyadu ee balinalli ||


Attige kaigombe anna

Etti muddadida tangi mareta (2)

Anna kannetti saha nodabaarade

Tangi baramma itta ennabaarade ||


Annana hendati nodi

Kanna sanne maadidalenna nodi (2)

Anna maatanadisadola serida..aa.. (2)

Tanna siriyalli tanodagudida ||


Shivane.. (3) shivane na kaimugidu beduve

Siri sampattu kodu nammannage

Tayi jagadambe kaimugidu beduve

Kayi karpooradaarati belaguve ||


ಜಾನಪದಗೀತೆ 


ತವರೂರ ಮನೆ ನೋಡ ಬಂದೆ 

ತಾಯಿ ನೆನಪಾಗಿ ಕಣ್ಣೀರ ತಂದೆ  (೨) ।।ಪ।।


ಹತ್ತು ಹದಿನಾಲ್ಕು ವರುಷಗಳಿಂದೆ 

ಹೆತ್ತ ತಾಯಿ ತಂದೆ ಪ್ರೀತಿಯಿಂದೆ (೨)

ಮುತ್ತಿನಂತೆ ಜೋಪಾನವಾಗಿ ಬಾಳಿದೆ 

ಅದು ಎತ್ತ ಹೋದರು ಕನಸಾಗಿದೆ ।।೧।।


ಬಾಗಿಲ ಮುಂದೆ ರಂಗೋಲಿ 

ಬಾಗಿ ಇಡುತಿದ್ದೆ ನಾನಾ ತರದಲ್ಲಿ (೨)

ಅದು ಹೇಗೆ ಮರೆಯಲಿ ಮನಸಲಿ 

ಅದು ಮರೆಯದು ಈ ಬಾಳಿನಲ್ಲಿ ।।೨।।


ಅತ್ತಿಗೆ ಕೈಗೊಂಬೆ ಅಣ್ಣ 

ಎತ್ತಿ ಮುದ್ದಾಡಿದ ತಂಗಿ ಮರೆತ (೨)

ಅಣ್ಣ ಕಣ್ಣೆತ್ತಿ ಸಹ ನೋಡಬಾರದೇ 

ತಂಗಿ ಬಾರಮ್ಮ ಇತ್ತ ಎನ್ನಬಾರದೇ ।।೩।।


ಅಣ್ಣನ ಹೆಂಡತಿ ನೋಡಿ 

ಕಣ್ಣ ಸನ್ನೆ ಮಾಡಿದಳೆನ್ನ ನೋಡಿ (೨)

ಅಣ್ಣ ಮಾತನಾಡಿಸದೊಳ ಸೇರಿದಾ ..ಆ .. (೨)

ತನ್ನ ಸಿರಿಯಲ್ಲಿ ತಾನೊಡಗೂಡಿದ ।।೪।।


ಶಿವನೇ .. (೩) ಶಿವನೆ ನಾ ಕೈಮುಗಿದು ಬೇಡುವೆ 

ಸಿರಿ ಸಂಪತ್ತು ಕೊಡು ನಮ್ಮಣ್ಣಗೆ 

ತಾಯಿ ಜಗದಾಂಬೆ ಕೈಮುಗಿದು ಬೇಡುವೆ 

ಕಾಯಿ ಕರ್ಪೂರದಾರತಿ ಬೆಳಗುವೆ (೨) ।।೫।।







Sunday, June 4, 2023

Maatad Maatadu Mallige (ಮಾತಾಡ್ ಮಾತಾಡು ಮಲ್ಲಿಗೆ)

Janapada Geete

Song link: Click Here


 Maatad maatadu mallige

Sampige shavantige gumpinalli kedige ||


Obbanna kattidde obbanna bittidde

Obbanna karakondu olaghode mallige

Yaavonna kattidde yaavonna bittidde

Yaavonna karakondu olaghode mallige

Hasuvannu kattidde karuvannu bittidde

Halannu karakondu olaghode mallige ||


Obbanna kursidde obbanna nilsidde

Obbanna hidakondu jaggutidde mallige

Yaavonna kursidde yaavonna nilsidde

Yaavonna hidakondu jaggutidde mallige

Gadageeya kursidde kadagolu nilsidde

Haggava hidakondu jaguttide mallige ||


Obbanna haasidde obbanna hoddide

Obbanna elakondu malagidde mallige

Yaavonna haasidde yaavonna hoddidde

Yaavonna elakondu malagidde mallige

Haasigi haasidde kambliya hoddidde

Taledimbu elakondu malagidde mallige ||


Obbange kal kotte obbange kai kotte

Obbange seereya bicchikotte mallige

Yaavonge kal kotte yaavonge kai kotte

Yaavonge seereya bicchikotte mallige

Kanchgarge kal kotte balegarge kai kotte

Madivalge seereya bicchikotte mallige ||


ಜಾನಪದ ಗೀತೆ 


ಮಾತಾಡ್ ಮಾತಾಡು ಮಲ್ಲಿಗೆ 

ಸಂಪಿಗೆ ಶಾವಂತಿಗೆ ಗುಂಪಿನಲ್ಲಿ ಕೇದಿಗೆ ।।ಪ।।


ಒಬ್ಬನ್ನ ಕಟ್ಟಿದ್ದೆ ಒಬ್ಬನ್ನ ಬಿಟ್ಟಿದ್ದೆ 

ಒಬ್ಬನ್ನ ಕರಕೊಂಡು ಒಳಗ್ಹೋದೆ ಮಲ್ಲಿಗೆ 

ಯಾವೋನ್ನ ಕಟ್ಟಿದ್ದೆ ಯಾವೋನ್ನ ಬಿಟ್ಟಿದ್ದೆ 

ಯಾವೋನ್ನ ಕರಕೊಂಡು ಒಳಗ್ಹೋದೆ ಮಲ್ಲಿಗೆ 

ಹಸುವನ್ನು ಕಟ್ಟಿದ್ದೆ ಕರುವನ್ನು ಬಿಟ್ಟಿದ್ದೆ 

ಹಾಲನ್ನು ಕರಕೊಂಡು ಒಳಗ್ಹೋದೆ ಮಲ್ಲಿಗೆ ।।೧।।


ಒಬ್ಬನ್ನ ಕುರ್ಸಿದ್ದೆ ಒಬ್ಬನ್ನ ನಿಲ್ಸಿದ್ದೆ 

ಒಬ್ಬನ್ನ ಹಿಡಕೊಂಡು ಜಗ್ಗುತ್ತಿದ್ದೆ ಮಲ್ಲಿಗೆ 

ಯಾವೋನ್ನ ಕುರ್ಸಿದ್ದೆ ಯಾವೋನ್ನ ನಿಲ್ಸಿದ್ದೆ 

ಯಾವೋನ್ನ ಹಿಡಕೊಂಡು ಜಗ್ಗುತ್ತಿದ್ದೆ ಮಲ್ಲಿಗೆ 

ಗಡಗೀಯ ಕುರ್ಸಿದ್ದೆ ಕಡಗೋಲು ನಿಲ್ಸಿದ್ದೆ 

ಹಗ್ಗವ ಹಿಡಕೊಂಡು ಜಗ್ಗುತ್ತಿದ್ದೆ ಮಲ್ಲಿಗೆ ।।೨।।


ಒಬ್ಬನ್ನ ಹಾಸಿದ್ದೆ ಒಬ್ಬನ್ನ ಹೊದ್ದಿದ್ದೆ 

ಒಬ್ಬನ್ನ ಎಳಕೊಂಡು ಮಲಗಿದ್ದೆ ಮಲ್ಲಿಗೆ 

ಯಾವೋನ್ನ ಹಾಸಿದ್ದೆ ಯಾವೋನ್ನ ಹೊದ್ದಿದ್ದೆ 

ಯಾವೋನ್ನ ಎಳಕೊಂಡು ಮಲಗಿದ್ದೆ ಮಲ್ಲಿಗೆ 

ಹಾಸೀಗಿ ಹಾಸಿದ್ದೆ ಕಂಬ್ಳಿಯ ಹೊದ್ದಿದ್ದೆ 

ತಲೆದಿಂಬು ಎಳಕೊಂಡು ಮಲಗಿದ್ದೆ ಮಲ್ಲಿಗೆ ।।೩।।


ಒಬ್ಬಂಗೆ ಕಾಲ್ ಕೊಟ್ಟೆ ಒಬ್ಬಂಗೆ ಕೈ ಕೊಟ್ಟೆ 

ಒಬ್ಬಂಗೆ ಸೀರೆಯ ಬಿಚ್ಚಿಕೊಟ್ಟೆ ಮಲ್ಲಿಗೆ 

ಯಾವೊನ್ಗೆ ಕಾಲ್ ಕೊಟ್ಟೆ ಯಾವೊನ್ಗೆ ಕೈ ಕೊಟ್ಟೆ 

ಯಾವೊನ್ಗೆಸೀರೆಯ ಬಿಚ್ಚಿಕೊಟ್ಟೆ ಮಲ್ಲಿಗೆ 

ಕಾಂಚ್ಗರ್ಗೆ  ಕಾಲ್ ಕೊಟ್ಟೆ ಬಳೆಗಾರ್ಗೆ ಕೈ ಕೊಟ್ಟೆ 

ಮಡಿವಾಳ್ಗೆ ಸೀರೆಯ ಬಿಚ್ಚಿಕೊಟ್ಟೆ ಮಲ್ಲಿಗೆ ।।೪।।
                               

                                                         




Sunday, April 16, 2023

Kolu Matadutave Belliya Gejje Matadutave (ಕೋಲು ಮಾತಾಡುತಾವೆ ಬೆಳ್ಳಿಯ ಗೆಜ್ಜೆ ಮಾತಾಡುತಾವೆ)

Janapada Geete

Song link: Click Here


Kolu matadutave belliya gejje matadutave 

Kolu matadutave belliya gejje matadutave ||


Mungoli kugyavo moodu kemperyavo

Swami nannayya rathaveri (2) baruvaga

Naveddu kaiyya mugidevu ||


Adikeli hannu bandu gadigeli tuppa bandu

Hittige bandavu idigaya (2) poojege

Elu timmappa belagaitu ||


Tirupati timmappa belura chenniga

Nagamangalada narasimha (2) moovaru

Mooru lokada odeyaru ||


ಜನಪದ ಗೀತೆ 


ಕೋಲು ಮಾತಾಡುತಾವೆ ಬೆಳ್ಳಿಯ ಗೆಜ್ಜೆ ಮಾತಾಡುತಾವೆ 

ಕೋಲು ಮಾತಾಡುತಾವೆ ಬೆಳ್ಳಿಯ ಗೆಜ್ಜೆ ಮಾತಾಡುತಾವೆ ।।ಪ।।


ಮುಂಗೋಳಿ ಕೂಗ್ಯಾವೋ ಮೂಡು ಕೆಂಪೇರ್ಯಾವೋ 

ಸ್ವಾಮಿ ನನ್ನಯ್ಯ ರಥವೇರಿ (೨) ಬರುವಾಗ 

ನಾವೆದ್ದು ಕೈಯ ಮುಗಿದೇವು ।।೧।।


ಅಡಿಕೇಲಿ   ಹಣ್ಣು ಬಂದು ಗಡಿಗೇಲಿ ತುಪ್ಪ ಬಂದು 

ಹಿಟ್ಟಿಗೆ ಬಂದಾವು ಇಡಿಗಾಯ (೨) ಪೂಜೆಗೆ 

ಏಳು ತಿಮ್ಮಪ್ಪ ಬೆಳಗಾಯ್ತು ।।೨।।

   

ತಿರುಪತಿ ತಿಮ್ಮಪ್ಪ ಬೇಲೂರ ಚೆನ್ನಿಗ 

ನಾಗಮಂಗಲದ ನರಸಿಂಹ (೨) ಮೂವರೂ 

ಮೂರು ಲೋಕದ ಒಡೆಯರು ।।೩।।





Thursday, April 13, 2023

Navvale Bantappa Navvale (ನವ್ವಾಲೆ ಬಂತಪ್ಪ ನವ್ವಾಲೆ)

Janapada Geete

Song link: Click Here


Navvale bantappa navvale

Sogeya bannada navvale ||


Battava meyyoodu navvale

Batta hottanna meyyoodu navvale

battava kayoru odisa bandare

Attitta oditu navvale ||


Ragiya meyyoodu navvale

Ragi hottonda meyyoodu navvale

Ragiya kayoru odisa bandare

Ragava padeetu navvale ||


Sarasati erodu navvale

Adu sasira kannina navvale

Sarasati erkondu nalidadi baruvaga

Dasara haaditu navvale ||


ಜನಪದ ಗೀತೆ 


ನವ್ವಾಲೆ ಬಂತಪ್ಪ ನವ್ವಾಲೆ 

ಸೋಗೆಯ ಬಣ್ಣದ ನವ್ವಾಲೆ ।।ಪ।।


ಬತ್ತವ ಮೆಯ್ಯೋದು ನವ್ವಾಲೆ 

ಬತ್ತ ಹೊಟ್ಟನ್ನ ಮೆಯ್ಯೋದು ನವ್ವಾಲೆ 

ಬತ್ತವ ಕಾಯೋರು ಓಡಿಸ ಬಂದರೆ 

ಅತ್ತಿತ್ತ ಓಡಿತು ನವ್ವಾಲೆ ।।೧।।


ರಾಗಿಯ ಮೆಯ್ಯೋದು ನವ್ವಾಲೆ 

ರಾಗಿ ಹೊಟ್ಟೊ೦ದ  ಮೆಯ್ಯೋದು ನವ್ವಾಲೆ 

ರಾಗಿಯ ಕಾಯೋರು ಓಡಿಸ ಬಂದರೆ 

ರಾಗವ ಪಾಡೀತು ನವ್ವಾಲೆ ।।೨।।


ಸರಸತಿ ಏರೋದು ನವ್ವಾಲೆ 

ಅದು ಸಾಸಿರ ಕಣ್ಣಿನ ನವ್ವಾಲೆ 

ಸರಸತಿ ಎರ್ಕೊಂಡು ನಲಿದಾಡಿ ಬರುವಾಗ 

ದಾಸರ ಹಾಡಿತು ನವ್ವಾಲೆ ।।೩।।



Monday, February 20, 2023

Nanna Mane Hangina Aramane Alla (ನನ್ನ ಮನೆ ಹಂಗಿನ ಅರಮನೆ ಅಲ್ಲ)

Janapada Geete

Song link: Click Here


Nanna mane hangina aramane alla 

Hongeya maradadiya hullu gudisale nanna gelati

Nanna mane, idu nanna mane ||


Halu belaka haadi nannoorige baralilla

Kallu mullu dhulu ee sutta muttalella

Aarisi sarisi baruvudadare ba, ba ||


Nannedeya holada mele karigarike chiguralilla

Ee janara managalarali hoodotavagalilla

Kuggade taggade baruvudadare ba, ba ||


Ninnolava tyava teedi nannedege jeeva needu

Bari hale badukinalli hosa premageet haadu

Preetiya jyothiya taruvudadare ta, ta ||


ಜನಪದ ಗೀತೆ 


ನನ್ನ ಮನೆ ಹಂಗಿನ ಅರಮನೆ ಅಲ್ಲ 

ಹೊಂಗೆಯ ಮರದಡಿಯ ಹುಲ್ಲು ಗುಡಿಸಲೆ ನನ್ನ ಗೆಳತಿ 

ನನ್ನ ಮನೆ, ಇದು ನನ್ನ ಮನೆ ।।ಪ ।।


ಹಾಲ ಬೆಳಕ ಹಾದಿ ನನ್ನೂರಿಗೆ ಬರಲಿಲ್ಲ 

ಕಲ್ಲು ಮುಳ್ಳು ಧೂಳು ಈ ಸುತ್ತಾ ಮುತ್ತಲೆಲ್ಲಾ 

ಆರಿಸಿ ಸಾರಿಸಿ ಬರುವುದಾದರೆ ಬಾ, ಬಾ ।।೧।।


ನನ್ನೆದೆಯ ಹೊಲದ ಮೇಲೆ  ಕರಿಗರಿಕೆ ಚಿಗುರಲಿಲ್ಲ 

ಈ ಜನರ ಮನಗಳರಲಿ ಹೂದೊಟವಾಗಲಿಲ್ಲ 

ಕುಗ್ಗದೇ ತಗ್ಗದೇ ಬರುವುದಾದರೆ ಬಾ, ಬಾ ।।೨।।


ನಿನ್ನೊಲವ ತ್ಯಾವ ತೀಡಿ ನನ್ನೆದೆಗೆ ಜೀವ ನೀಡು 

ಬರಿ ಹಾಳೆ ಬದುಕಿನಲ್ಲಿ ಹೊಸ ಪ್ರೇಮಗೀತೆ ಹಾಡು 

ಪ್ರೀತಿಯ ಜ್ಯೋತಿಯ ತರುವುದಾದರೆ ತಾ, ತಾ ।।೩।।



Thursday, February 9, 2023

Aadona Banni Kanna Mucchale (ಆಡೋಣ ಬನ್ನಿ ಕಣ್ಣ ಮುಚ್ಚಾಲೆ)

Janapada Geete

Song link: Click Here


Aadona banni kanna mucchale

Tugona banni uyyale

Jeevanavondu nataka shale

Navella kuniyuva nartana shale 

Uyyale champale ||


Suttalu chellida rangu rangole

Balukuta baruvalu vanamaale

Bharadinda bandu paccheya saale

Tugadi karedavu tengina saale

Uyyale champale ||


Hakkigalinchara kareyole

Kuniyuta baruvalu navvale

Impu impina gumpu kogile

Kampanu susuva hoogala maale

Uyyale champale ||


ಜನಪದ ಗೀತೆ 


ಆಡೋಣ ಬನ್ನಿ ಕಣ್ಣ ಮುಚ್ಚಾಲೆ 

ತುಗೋಣ ಬನ್ನಿ ಉಯ್ಯಾಲೆ 

ಜೀವನವೊಂದು ನಾಟಕ ಶಾಲೆ 

ನಾವೆಲ್ಲ ಕುಣಿಯುವ ನರ್ತನ ಶಾಲೆ 

ಉಯ್ಯಾಲೆ  ಚಂಪಾಲೆ ।।ಪ ।।


ಸುತ್ತಾಲು ಚಲ್ಲಿದ ರಂಗು ರಂಗೋಲೆ 

ಬಳುಕುತ ಬರುವಳು ವನಮಾಲೆ 

ಭರದಿಂದ ಬಂದು ಪಚ್ಚೆಯ ಸಾಲೆ 

ತೂಗಾಡಿ ಕರೆದಾವು ತೆಂಗಿನ ಸಾಲೆ 

ಉಯ್ಯಾಲೆ ಚಂಪಾಲೆ ।।೧।।


ಹಕ್ಕಿಗಳಿಂಚರ ಕರೆಯೋಲೆ 

ಕುಣಿಯುತ ಬರುವಳು ನವ್ವಾಲೆ 

ಇಂಪು ಇಂಪಿನ ಗುಂಪು ಕೋಗಿಲೆ 

ಕಂಪನು ಸೂಸುವ ಹೂಗಳ ಮಾಲೆ 

ಉಯ್ಯಾಲೆ ಚಂಪಾಲೆ ।।೨।।




Friday, January 6, 2023

Aha Ammaga Aha Jammaga (ಆಹಾ ಅಮ್ಮಗ ಆಹಾ ಜಮ್ಮಗ)

 Janapada Geete

Song link: Click Here


Aha ammaga aha jammaga

Aha ammaga, jammaga, jummagadinda

Bandaale.. ratuna

Bandaale ratuna tirugistale sontana ||


Sontakke pattiya

Haktale ratuna

Hakyale ratuna

Tirugistale sontana ||


Kaiyige kaibale

Haktale ratuna

Hakyale ratuna

Tirugistale kaiyyana ||


Kalige kalgejje

Haktale ratuna

Hakyale ratuna

Tirugistale kalanna ||


Kattige addige

Haktale ratuna

Hakyale ratuna

Tirugistale kattana ||


ಜನಪದ ಗೀತೆ 


ಆಹಾ ಅಮ್ಮಗ ಆಹಾ ಜಮ್ಮಗ 

ಆಹಾ ಅಮ್ಮಗ ,ಜಮ್ಮಗ ,ಜುಮ್ಮಗದಿಂದ 

ಬಂದಾಳೇ.. ರತುನ

ಬಂದಾಳೇ ರತುನ ತಿರುಗಿಸ್ತಾಳೆ ಸೊಂಟನ ।।ಪ ।।


ಸೊಂಟಕ್ಕೆ ಪಟ್ಟಿಯ 

ಹಾಕ್ತಾಳೆ ರತುನ 

ಹಾಕ್ಯಾಳೇ ರತುನ 

ತಿರುಗಿಸ್ತಾಳೆ ಸೊಂಟನ ।।೧।।


ಕೈಯಿಗೆ  ಕೈಬಳೆ 

ಹಾಕ್ತಾಳೆ ರತುನ 

ಹಾಕ್ಯಾಳೇ ರತುನ 

ತಿರುಗಿಸ್ತಾಳೆ ಕೈಯನ್ನ ।।೨।।


ಕಾಲಿಗೆ ಕಾಲ್ಗೆಜ್ಜೆ 

ಹಾಕ್ತಾಳೆ ರತುನ 

ಹಾಕ್ಯಾಳೇ ರತುನ 

ತಿರುಗಿಸ್ತಾಳೆ ಕಾಲನ್ನ ।।೩।।


ಕತ್ತಿಗೆ ಅಡ್ಡಿಗೆ 

ಹಾಕ್ತಾಳೆ ರತುನ 

ಹಾಕ್ಯಾಳೇ ರತುನ 

ತಿರುಗಿಸ್ತಾಳೆ ಕತ್ತನ್ನ ।।೪।।



Thursday, January 5, 2023

Yake Badadadti Tamma (ಯಾಕೆ ಬಡದಾಡ್ತಿ ತಮ್ಮ )

Janapada Geete

Song link: Click Here


Yake badadadti tamma

Maya mecchi samsara necchi

Nenogodariye tamma

Kanna mucchi manna mucchi ||


Hendru makliruvaru tamma elli tanaka

Idre timotanaka (2)

Sattaga baruvaru tamma kunitanaka

Mannu muccho tanaka ||


Anna tamma akka tangi elli tanaka

Baduki beleya tanaka (2)

Sattaga baruvaru tamma kunitanaka

Mannu muccho tanaka ||


Hennu honnu mannu ninnadu elli tanaka

Ninna koralige kunike beelo tanaka

Ninnaase prana pakshi haro tanaka

Kalachayya mayada poreya, mukti hondaka ||


ಜನಪದ ಗೀತೆ 


ಯಾಕೆ ಬಡದಾಡ್ತಿ ತಮ್ಮ 

ಮಾಯಾ ಮೆಚ್ಚಿ ಸಂಸಾರ ನೆಚ್ಚಿ 

ನೀನೋಗದರಿಯೆ ತಮ್ಮ 

ಕಣ್ಣ ಮುಚ್ಚಿ ಮಣ್ಣ ಮುಚ್ಚಿ ।।ಪ ।।


ಹೆಂಡ್ರು ಮಕ್ಳ್ಇರುವರು  ತಮ್ಮ ಎಲ್ಲೀತನಕ 

ಇದ್ರೆ ತಿನ್ನೋತನಕ (೨)

ಸತ್ತಾಗ ಬರುವರು ತಮ್ಮ ಕುಣಿತನಕ 

ಮಣ್ಣು ಮುಚ್ಚೋ ತನಕ ।।೧।।


ಅಣ್ಣ ತಮ್ಮ ಅಕ್ಕ ತಂಗಿ ಎಲ್ಲೀತನಕ 

ಬದುಕಿ ಬೆಳೆಯೋ ತನಕ (೨)

ಸತ್ತಾಗ ಬರುವರು ತಮ್ಮ ಕುಣಿತನಕ 

ಮಣ್ಣು ಮುಚ್ಚೋ ತನಕ ।।೨।।


ಹೆಣ್ಣು ಹೊನ್ನು ಮಣ್ಣು ನಿನ್ನದು ಎಲ್ಲೀತನಕ 

ನಿನ್ನ ಕೋರಳಿಗೆ ಕುಣಿಕೆ ಬೀಳೋ ತನಕ 

ನಿನ್ನಾಸೆ ಪ್ರಾಣಪಕ್ಷಿ ಹಾರೋ ತನಕ 

ಕಳಚಯ್ಯ ಮಾಯದ ಪೊರೆಯ, ಮುಕ್ತಿ ಹೊಂದಾಕ ।।೩।।





Monday, December 19, 2022

Bagi Bagi Bangara Tugi (ಬಾಗಿ ಬಾಗಿ ಬಂಗಾರ ತೂಗಿ )

Janapada Geete

Song Link: Click Here


Bagi bagi bangara tugi

Belli moodi belagadavamma

Gokuladolage sambramavennire

Nandana kanda govinda ||


Nandana kanda govinda krishnana

Chandadi tottilolagittu

Chandadi tottilolagittu gopyamma

Aanandadi tugi padidale ||


Putaniya kondane shakatana muridane

Kalinga maduva kalakidane

Kalingana maduva kalakida srikrishna

Rakkasarellara kedavidane ||


Govgala kaidane benneya meddane

Bettalli bettavanettidane

Bettalli bettavanettida srikrishna

Gopyara seereya kaddoidane || 


ಜನಪದ ಗೀತೆ 


ಬಾಗಿ ಬಾಗಿ ಬಂಗಾರ ತೂಗಿ 

ಬೆಳ್ಳಿ ಮೂಡಿ ಬೆಳಗಾದವಮ್ಮ 

ಗೋಕುಲದೊಳಗೆ ಸಂಭ್ರಮವೆನ್ನಿರೆ 

ನಂದನ ಕಂದ ಗೋವಿಂದ ।।ಪ ।।


ನಂದನ ಕಂದಾ ಗೋವಿಂದ ಕೃಷ್ಣನ 

ಚಂದದಿ ತೊಟ್ಟಿಲೊಳಗಿಟ್ಟು 

ಚಂದದಿ ತೊಟ್ಟಿಲೊಳಗಿಟ್ಟು ಗೋಪ್ಯಮ್ಮ 

ಆನಂದದಿ ತೂಗಿ ಪಾಡಿದಳೆ  ।।೧।।


ಪೂತನಿಯ ಕೊಂದನೆ ಶಕಟನ ಮುರಿದನೆ 

ಕಾಳಿಂಗ ಮಡುವ ಕಲಕಿದನೆ  

ಕಾಳಿಂಗನ ಮಡುವ ಕಲಕಿದ ಶ್ರೀಕೃಷ್ಣ 

ರಕ್ಕಸರೆಲ್ಲರ ಕೆಡವಿದನೆ ।।೨।।


ಗೋವ್ಗಳ ಕಾಯ್ದನೆ ಬೆಣ್ಣೆಯ ಮೆದ್ದನೆ 

ಬೆಟ್ಟಲ್ಲಿ ಬೆಟ್ಟಾವನೆತ್ತಿದನೆ 

ಬೆಟ್ಟಲ್ಲಿ ಬೆಟ್ಟಾವನೆತ್ತಿದ ಶ್ರೀಕೃಷ್ಣ 

ಗೋಪ್ಯರ ಸೀರೆಯ  ಕದ್ದೊಯ್ದನೆ ।।೩।।



Tuesday, December 6, 2022

Chelvi Chelvi Endu (ಚೆಲ್ವಿ ಚೆಲ್ವಿ ಎಂದು)

Janapada Geete

Song link: https:Click Here


Chelvi chelvi endu atiyase padabyada

Cheluviddarenu gunavilla | koleneeru

Tiliyiddarenu ruchiyilla ||


Kappu hendati endu kalavala padabyada

Nerale hannu balu kappu | aadaru

Tindu nodidare ruchi bahala ||


Kempu hendati endu santosha padabyada

Attiya hannu balu kempu | iddaru

Odedu nodidare hulu bahala ||


Bangarada bale tottu badavara baibyada

Bangara ninage stiravalla | madhyana

Sanjeyaguvudu tadavalla ||


ಜನಪದ ಗೀತೆ 


ಚೆಲ್ವಿ ಚೆಲ್ವಿ ಎಂದು ಅತಿಯಾಸೆ ಪಡಬ್ಯಾಡ 

ಚೆಲುವಿದ್ದರೇನೂ ಗುಣವಿಲ್ಲ । ಕೊಳೆನೀರು 

ತಿಳಿಯಿದ್ದರೇನೂ ರುಚಿಯಿಲ್ಲ ।।ಪ ।।


ಕಪ್ಪು ಹೆಂಡತಿ ಎಂದು ಕಳವಾಳ ಪಡಬ್ಯಾಡ 

ನೇರಳೆ ಹಣ್ಣು ಬಲುಕಪ್ಪು । ಆದರೂ 

ತಿಂದು ನೋಡಿದರೆ ರುಚಿ ಬಹಳ ।।


ಕೆಂಪು ಹೆಂಡತಿ ಎಂದು ಸಂತೋಷ ಪಡಬ್ಯಾಡ 

ಅತ್ತಿಯ ಹಣ್ಣು ಬಲು ಕೆಂಪು । ಇದ್ದರೂ 

ಒಡೆದು ನೋಡಿದರೆ ಹುಳು ಬಹಳ ।।


ಬಂಗಾರದ ಬಳೆತೊಟ್ಟು ಬಡವಾರ ಬೈಬ್ಯಾಡ 

ಬಂಗಾರ ನಿನಗೇ ಸ್ಥಿರವಲ್ಲ । ಮಧ್ಯಾಹ್ನ 

ಸಂಜೆಯಾಗುವುದೂ ತಡವಲ್ಲ ।।



Saturday, November 19, 2022

Belagaga Naneddu Yaryara Neneyali (ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಲಿ )

Janapada Geete

Song link: https:Click Here


Belagaga naneddu yaryara neneyali

Ellu Jeerige beleyola..

Yallu jeerige beleyola bhumitaya

Eddondu ghalige nenedena ||


Sharanembe shivanige sharanembe guruvige

Sharanembe shivana madadeege..

Sharanembe shivana madadi gourammage

Sharanendu kalla hididenu ||


Kallu kottavvage ella bhagyavu barali

Pallakki mele maga barali..

Pallakki mele maga barali aa manege

Mallige mudiyo sose barali ||


Kallavva matayi surisavva jolava

Jalla jallane uduravva..

Jalla jallane uduravva naninage

Belladaratiya belagenu ||


ಜನಪದ ಗೀತೆ 


ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಲಿ 

ಎಳ್ಳು ಜೀರಿಗೆ ಬೆಳೆಯೋಳಾ .. 

ಎಳ್ಳು ಜೀರಿಗೆ ಬೆಳೆಯೋಳಾ ಭೂಮಿತಾಯ 

ಎದ್ದೊಂದು ಘಳಿಗೆ ನೆನೆದೇನಾ ।।ಪ ।।


ಶರಣೆಂಬೆ ಶಿವನಿಗೆ ಶರಣೆಂಬೆ ಗುರುವಿಗೆ 

ಶರಣೆಂಬೆ ಶಿವನಾ  ಮಡದೀಗೆ.. 

ಶರಣೆಂಬೆ ಶಿವನಾ ಮಡದಿ ಗೌರಮ್ಮಗೆ 

ಶರಣೆಂದು ಕಲ್ಲ ಹಿಡಿದೇನು ।।೧।।


ಕಲ್ಲು ಕೊಟ್ಟವ್ವಗೆ ಎಲ್ಲಾ ಭಾಗ್ಯವು ಬರಲಿ 

ಪಲ್ಲಕ್ಕಿ ಮೇಲೆ ಮಗ ಬರಲಿ.. 

ಪಲ್ಲಕ್ಕಿ ಮೇಲೆ ಮಗ ಬರಲಿ ಆ ಮನೆಗೆ 

ಮಲ್ಲಿಗೆ ಮುಡಿಯೋ ಸೊಸೆ ಬರಲಿ ।।೨।।


ಕಲ್ಲವ್ವ ಮಾತಾಯಿ ಸುರಿಸವ್ವ ಜೋಳವ 

ಜಲ್ಲ ಜಲ್ಲನೆ ಉದುರವ್ವ.. 

ಜಲ್ಲ ಜಲ್ಲನೆ ಉದುರವ್ವ ನಾನಿನಗೆ 

ಬೆಲ್ಲದಾರತಿಯ ಬೆಳಗೇನು ।।೩।।

                                             

 

Sunday, October 23, 2022

Sharanu Sharanuvayya Gananaika (ಶರಣು ಶರಣುವಯ್ಯ ಗಣನಾಯ್ಕ )


Janapada Geete

Song link: Click Here


Sharanu sharanuvayya gananayka

Namma karunadindali kayo gananayka ||


Ellunde jenutuppa gananayka

Namage vidyava kalisayya gananayka

Usali kayikadubu gananayka

Nimge tappade oppisuve gananayka ||


Gonemegla balehannu gananayka

Nimage chigurele kalli adke gananayka

Kombemegla nimbehannu gananayka

Nimge idugayi jodugayi gananayka ||


Karpura samrani gananayka

Nimge maruga mallige jaji gananayka

Hasurangi kalgadaga gananayka

Nimge kushalada melkattu gananayka ||


Bilpatre vanadalli gananayka

Ninna dhyana madi nenedevayya gananayka

Kantaka hara neenu gananayka

Namge varavanupalisayya gananayka ||


ಜನಪದ ಗೀತೆ 


ಶರಣು ಶರಣುವಯ್ಯ ಗಣನಾಯ್ಕ 

ನಮ್ಮ ಕರುಣದಿಂದಲಿ ಕಾಯೋ ಗಣನಾಯ್ಕ ।।ಪ ।।


ಎಳ್ಳು೦ಡೆ ಜೇನುತುಪ್ಪ ಗಣನಾಯ್ಕ 

ನಮಗೆ ವಿದ್ಯಾವ ಕಲಿಸಯ್ಯ ಗಣನಾಯ್ಕ 

ಉಸಲಿ ಕಾಯಿಕಡುಬು ಗಣನಾಯ್ಕ 

ನಿಮ್ಗೆ ತಪ್ಪಾದೆ ಒಪ್ಪಿಸುವೆ ಗಣನಾಯ್ಕ ।।೧।।


ಗೂನೆಮೇಗ್ಲ ಬಾಳೆಹಣ್ಣು ಗಣನಾಯ್ಕ

ನಿಮಗೆ ಚಿಗುರೆಲೆ ಕಳ್ಳಿ ಅಡಿಕೆ ಗಣನಾಯ್ಕ

ಕೊಂಬೆಮೇಗ್ಲನಿಂಬೆಹಣ್ಣು ಗಣನಾಯ್ಕ

 ನಿಮ್ಗೆಇಡುಗಾಯಿ ಜೋಡುಗಾಯಿ ಗಣನಾಯ್ಕ।।೨।।


ಕರ್ಪುರ ಸಾ೦ಮ್ರಾಣಿ ಗಣನಾಯ್ಕ

ನಿಮಗೆ ಮರುಗ ಮಲ್ಲಿಗೆ ಜಾಜಿ ಗಣನಾಯ್ಕ

ಹಸುರಂಗಿ ಕಾಲ್ಗಡಗ  ಗಣನಾಯ್ಕ

ನಿಮ್ಗೆ ಕುಶಲದ ಮೇಲ್ಕಟ್ಟು ಗಣನಾಯ್ಕ।।೩।।


ಬಿಲ್ಪತ್ರೆ ವನದಲ್ಲಿ ಗಣನಾಯ್ಕ

ನಿನ್ನ ಧ್ಯಾನ ಮಾಡಿ ನೆನೆದೆವಯ್ಯಾ ಗಣನಾಯ್ಕ

ಕಂಟಕ ಹರ ನೀನು ಗಣನಾಯ್ಕ

ನಮ್ಗೆ ವರವನು ಪಾಲಿಸಯ್ಯ ಗಣನಾಯ್ಕ।।೪।।




Monday, October 3, 2022

Kuntre Nintre Avana Dhyana (ಕುಂತ್ರೆ ನಿಂತ್ರೆ ಅವನ ಧ್ಯಾನ )


Janapada Geete

Song link:Click Here



 Kuntre nintre avana dhyana

Jeevakilri samadhana

Avanige enta bigumana

Avane nanna genekara ||


Indra lokdallila kanri

Chandra lokdallila kanri

Mooru lokdallilla kanri

Avane nanna genekara ||


Ropdallavanu chandra kanri

Ropdallavanu indra kanri

Kerigella obne kanri

Avane nanna genekara ||


Jatrel avna kande kanri

Chatri mucchi ninta kanri

Pakkak bandu ninta kanri

Avane nanna genekara ||


Molle hoova tanda kanri

Turubinalli itta kanri

Maiyella jum antu

Avane nanna genekara ||


Chavdig bandu ninta kanri

Tali chinna tanda kanri

Nangu avangu maduve kanri

Avane nanna yajamana ||


ಜನಪದ ಗೀತೆ 


ಕುಂತ್ರೆ ನಿಂತ್ರೆ ಅವನ ಧ್ಯಾನ 

ಜೀವಕ್ಕಿಲ್ರಿ ಸಮಾಧಾನ 

ಅವನಿಗೆ ಎಂತ ಬಿಗುಮಾನ 

ಅವನೇ ನನ್ನ ಗೆಣೆಕಾರ ।।ಪ ।।


ಇಂದ್ರ ಲೋಕ್ದಲಿಲ್ಲ ಕಣ್ರಿ 

ಚಂದ್ರ ಲೋಕ್ದಲಿಲ್ಲಕಣ್ರಿ 

ಕೇರಿಗೆಲ್ಲ ಒಬ್ನೇ ಕಣ್ರಿ 

 ಅವನೇ ನನ್ನ ಗೆಣೆಕಾರ।।೧।।


ರೂಪ್ದಲವನು ಚಂದ್ರ ಕಣ್ರಿ 

ರೂಪ್ದಲವನು ಇಂದ್ರ ಕಣ್ರಿ 

ಕೇರಿಗೆಲ್ಲ ಒಬ್ನೆ ಕಣ್ರಿ 

ಅವನೇ ನನ್ನ ಗೆಣೆಕಾರ ।।೨।।


ಜಾತ್ರೆಲ್ ಅವನ ಕಂಡೆ ಕಣ್ರಿ 

ಛತ್ರಿ ಮುಚ್ಚಿ ನಿಂತ ಕಣ್ರಿ 

ಪಕ್ಕಕ್ ಬಂದು ನಿಂತ ಕಣ್ರಿ 

ಅವನೇ ನನ್ನ ಗೆಣೆಕಾರ ।।೩।।


ಮೊಲ್ಲೆ ಹೂವ ತಂದ ಕಣ್ರಿ 

ತುರುಬಿನಲ್ಲಿ ಇಟ್ಟ ಕಣ್ರಿ 

ಮೈಯೆಲ್ಲ ಜುಂ ಅಂತು 

ಅವನೇ ನನ್ನ ಗೆಣೆಕಾರ ।।೪।।


ಚಾವಡಿಗ್ ಬಂದು ನಿಂತ ಕಣ್ರಿ 

ತಾಳಿ ಚಿನ್ನ ತಂದ ಕಣ್ರಿ 

ನಂಗು ಅವನ್ಗು ಮದುವೆ ಕಣ್ರಿ 

ಅವನೇ ನನ್ನ ಯಜಮಾನ ।।೫।।





Tuesday, April 5, 2022

Ello Jogappa Ninna Aramane (ಎಲ್ಲೋ ಜೋಗಪ್ಪ ನಿನ್ನ ಅರಮನೆ)

Janapada geete

                                         Song link: Click Here


Kinnori nudisona..aa  dani chandavo..

Kinnori nudisona..aaaa  beralinanda chandavo..


Chukkinugrakke nari manasotalo

Bellinugrakke nari manasotalo

Bellinugrakke nari manasotalo


Ello jogappa ninna aramane

Ello jogappa ninna talamane

Ello jogappa ninna aramane

Ello jogappa ninna talamane


Ello jogappa ninna aramane.....


Betta hatt hogabeku, betta ilid hogabeku (2)

Allade kane nan aramane, nari

Allade kane nan aramane (2)

Allade kane nan talamane  ||ello jogappa||


Karvarad keriya gare padasale mele (2)

Loluki nudiya nudisone (2)

Moggagi baro turubeege  ||ello jogappa||


Ellina holava bitte, olleya gandana bitte (2)

Taladta jogi koode hogabhude? nari

Taladta jogi koode hogabhude (3)  ||ello jogappa||


Ninna kandagalenna kannuri kano jogi (2)

Ninnali nanage manasade jogi

Ninnali nanage manasade (3)   ||ello jogappa||


Ellanu bitta mele, nannan yake bida olle (2)

Ninnalli nanage manasade nari

Ninnali nanage manasade (3)  ||ello jogappa||

Nanna tolalli ninna kinnori madikondu (2)

Chandada padava nudisenu nari

Chandada padava nudisenu (3)  ||ello jogappa||

 

ಜನಪದ ಗೀತೆ 


ಕಿನ್ನೋರಿ ನುಡಿಸೋನ, ದನಿ ಚಂದವೋ 

ಕಿನ್ನೋರಿ ನುಡಿಸೋನ, ಬೆರಳಿನಂದ ಚಂದವೋ


ಚುಕ್ಕಿನುಂಗ್ರಕ್ಕೆ ನಾರಿ ಮನಸೋತಳೋ 

ಬೆಳ್ಳಿನುಂಗ್ರಕ್ಕೆ ನಾರಿ ಮನಸೋತಳೋ

ಬೆಳ್ಳಿನುಂಗ್ರಕ್ಕೆ ನಾರಿ ಮನಸೋತಳೋ


ಎಲ್ಲೋ ಜೋಗಪ್ಪ ನಿನ್ನ ಅರಮನೆ 

ಎಲ್ಲೋ ಜೋಗಪ್ಪನಿನ್ನ ತಳಮನೆ 

ಎಲ್ಲೋ ಜೋಗಪ್ಪ ನಿನ್ನ ಅರಮನೆ 

ಎಲ್ಲೋ ಜೋಗಪ್ಪನಿನ್ನ ತಳಮನೆ 


ಎಲ್ಲೋ ಜೋಗಪ್ಪ ನಿನ್ನ ಅರಮನೆ....  


ಬೆಟ್ಟ ಹತ್ತೂಗಬೇಕು, ಬೆಟ್ಟ ಇಳಿದೋಗಬೇಕು (೨)

ಅಲ್ಲಾದೆ ಕಣೆ ನನ್ನಾರಮನೇ, ನಾರಿ 

ಅಲ್ಲಾದೆ ಕಣೆ ನನ್ ಅರಮನೆ (೨)

ಅಲ್ಲಾದೆ ಕಣೆ ನನ್ ತಳಮನೆ ||ಎಲ್ಲೋ ಜೋಗಪ್ಪ||


ಕಾರ್ವಾರದ್ ಕೇರಿಯ, ಗಾರೆ ಪಡಸಾಲೆ ಮೇಲೆ (೨)

ಲೋಲುಕಿ ನುಡಿಯ ನುಡಿಸೋನೆ (೨)

ಮೊಗ್ಗಾಗಿ ಬಾರೋ ತುರುಬೀಗೆ ||ಎಲ್ಲೋ ಜೋಗಪ್ಪ||


ಎಳ್ಳಿನ ಹೊಲವಾ ಬಿಟ್ಟೆ 

ಒಳ್ಳೆಯ ಗಂಡನ ಬಿಟ್ಟೆ (೨)

ತಳ್ಳಾಡ್ತ ಜೋಗಿ ಕೊಡೆ ಹೋಗಬಹುದೇ ? ನಾರಿ 

ತಳ್ಳಾಡ್ತ ಜೋಗಿ ಕೊಡೆ ಹೋಗಬಹುದೇ (೩)
 
||ಎಲ್ಲೋ ಜೋಗಪ್ಪ||


ನಿನ್ನಾ ಕಾಂಡಗಲ್ಲೆನ್ನ ಕಣ್ಣೂರಿ ಕಣೋ ಜೋಗಿ (೨)

ನಿನ್ನಲಿ ನನಗೆ ಮನಸಾದೇ, ಜೋಗಿ

 ನಿನ್ನಲಿ ನನಗೆ ಮನಸಾದೇ(೩) ||ಎಲ್ಲೋ ಜೋಗಪ್ಪ||


ಎಲ್ಲಾನು ಬಿಟ್ಟಮ್ಯಾಲೆ ನನ್ನನ್ಯಾಕೆ ಬಿಡವೊಲ್ಲೆ (೨)

ನಿನ್ನಲಿ ನನಗೆ ಮನಸಾದೇ, ನಾರಿ 

ನಿನ್ನಲಿ ನನಗೆ ಮನಸಾದೇ(೩) ||ಎಲ್ಲೋ ಜೋಗಪ್ಪ||


ನನ್ನಾ ತೋಳಲ್ಲಿ ನಿನ್ನ ಕಿನ್ನೋರಿ ಮಾಡಿಕೊಂಡು (೨)

ಚಂದದ ಪದವ ನುಡಿಸೇನು, ನಾರಿ 

ಚಂದದ ಪದವ ನುಡಿಸೇನು(೩) ||ಎಲ್ಲೋ ಜೋಗಪ್ಪ||