Bhaktigeete
Purandara dasara keerthanegalu
Song link: Click Here
Raga: Aanandabairavi
Tala: Aaditala
Srinivasa neene paliso
Sritajanapala
Ganalola sri mukundane
Dhyna malpa sajjanara manadim paripalipa
Venugopala mukunda vedavedya nityananda ||
Endige ninna padabjava ponduva sukha
Endige labyavo madhava
Andhakaranyadhalli nindu tathatrisutiheno
Andhadim bhavaabdhiyolu
Mindu nondeno mukunda ||
Eastu dina kasta paduvudo yashode kanda
Dristiyinda noodalagade
Mutti ninna bhajisalare ketta narajanmadava
Dusta karya madidagyu eastanagi kaiyya pididu
||
Anudina aneka rogangala anubhavisuvenu
Ghanamahimane kelayya
Tanuvinalli balavilla neneda matra salahuva
Hanumadeesha purandara vittalane kaiyyapididu ||
ಭಕ್ತಿಗೀತೆ
ಶ್ರೀನಿವಾಸ ನೀನೇ ಪಾಲಿಸೋ
ಶ್ರೀತಜನಪಾಲ
ಗಾನಲೋಲ ಶ್ರೀ ಮುಕುಂದನೇ
ಧ್ಯಾನ ಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪ
ವೇಣುಗೋಪಾಲ ಮುಕುಂದ ವೇದವೇದ್ಯ ನಿತ್ಯಾನಂದ
ಎಂದಿಗೆ ನಿನ್ನ ಪಾದಾಬ್ಜವ ಪೊಂದುವ ಸುಖ
ಎಂದಿಗೆ ಲಭ್ಯವೋ ಮಾಧವ
ಅಂಧಕಾರಣ್ಯದಲಿ ನಿಂದು ತತರಿಸುತಿಹೆನೋ
ಅಂದದಿಂ ಭಾವಾಬ್ದಿಯೊಳು
ಮಿಂದು ನೊಂದೆನೊ ಮುಕುಂದ ।।೧।।
ಎಷ್ಟು ದಿನ ಕಷ್ಟಪಡುವುದೊ ಯಶೋದೆ ಕಂದ
ದ್ರಿಷ್ಟಿಯಿಂದ ನೋಡಲಾಗದೆ
ಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ನರಜನ್ಮದವ
ದುಷ್ಟಕಾರ್ಯ ಮಾಡಿದಾಗ್ಯು ಇಷ್ಟನಾಗಿ ಕೈಯ ಪಿಡಿದು ।।೨।।
ಅನುದಿನ ಅನೇಕ ರೋಗಂಗಳ ಅನುಭವಿಸುವೆನು
ಘನಮಹಿಮನೆ ಕೇಳಯ್ಯ
ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವ
ಹನುಮದೀಶ ಪುರಂದರ ವಿಠ್ಠಲನೇ ಕೈಯ್ಯಪಿಡಿದು ।।೩।। ಶ್ರೀ















