Showing posts with label kannada padya. Show all posts
Showing posts with label kannada padya. Show all posts

Thursday, April 23, 2026

Saarutide Srushti (ಸಾರುತಿದೆ ಸೃಷ್ಟಿ)

ಪದ್ಯ 

ಸಾಹಿತ್ಯ : ಸಿದ್ದಯ್ಯ ಪುರಾಣಿಕ 


ಹೆಣ್ಣಿನಲಿ ಬೆಣ್ಣೆಯಲಿ ಕೆನೆಮೊಸರು ಹಾಲಿನಲಿ 

ಕಂದದಲಿ ಜೇನಿನಲಿ ರಸಗಬ್ಬು ಬಾಳೆಯಲಿ 

ಎಳನೀರು ಹೊಳೆನೀರು ಹಾಲ್ದೆನೆಯ ಕಾಳಿನಲಿ 

ಸಾರುತಿದೆ ಸೃಷ್ಟಿಯಿದು ಸವಿಯಾಗಿ ನಿಂದು 

ಸವಿಯಾಗು ಸವಿಯಾಗು ಸವಿಯಾಗು ! ಎಂದು.


ತಾರೆಯಲಿ ಚಂದ್ರನಲಿ ಸೂರ್ಯನಲಿ ರನ್ನದಲಿ 

ಕಂಚಿನಲಿ ಮಿಂಚಿನಲಿ ಮುತ್ತಿನಲಿ ಚಿನ್ನದಲಿ 

ಜ್ಯೋತಿಯಲಿ ನಯನದಲಿ ಉಷೆಯ ಹೊಂಬಣ್ಣದಲಿ 

ಸಾರುತಿದೆ ಸೃಷ್ಟಿಯಿದು ಛವಿಯಾಗಿ ನಿಂದು 

ಛವಿಯಾಗು ಛವಿಯಾಗು ಛವಿಯಾಗು ! ಎಂದು.


ಶಬ್ದದಲಿ  ಸವಿಯಾಗಿ ಅರ್ಥದಲಿ ಬೆಳಕಾಗಿ 

ಬಾಳ ಭವ್ಯತೆಗಿಲ್ಲಿ ಬೆಳಕು ಸವಿ ಸಾಕಾಗಿ 

ಬಾಳುವೆಯ ಸವಿಬೆಳಕ ಬರೆಯುವವ ಬೇಕಾಗಿ 

ಸಾರುತಿದೆ ಸೃಷ್ಟಿಯಿದು ಛವಿಯಾಗಿ ನಿಂದು 

ಕವಿಯಾಗು ಕವಿಯಾಗು ಕವಿಯಾಗು ! ಎಂದು.


Padya


 Henninali benneyali kenemosaru haalinali

Kandadali jeninali rasagabbu baaleyali

Elaneeru holeneeru haldeneya kaalinali

Saarutide srushtiyidu saviyagi nindu

Saviyagu saviyagu saviyagu ! endu.


Taareyali chandranali suryanali rannadali

Kanchinali minchinali muttinali chinnadali

Jyothiyali nayanadali usheya hombannadali

Saarutide srushtiyidu chaviyagi nindu

Chaviyagu chaviyagu chaviyagu ! endu.


Shabdadali saviyagi arthadali belakagi

Baala bhavyategilli belaku savi sakagi

Baaluveya savibelaka bareyuvava bekagi

Saarutide srushtiyidu chaviyagi nindu

Kaviyagu kaviyagu kaviyagu ! endu.

Tuesday, March 31, 2026

Ambaal (ಅಂಬಾಲ್)

 ಪದ್ಯ 

ಸಾಹಿತ್ಯ : ಜಿ ಪಿ ರಾಜರತ್ನಂ 


ನೀನು ನಾಯಿ ! ನಾನು ಮೊಲ !

ಚೂಟ್ ! ಚೂಟ್ ! ಚೂಟ್ !

ಮೊದಲೆ ಬಂದು ಮುಟ್ಟಬೇಡ !

ಏ ! ಅಂಬಾಲ್ !


ಕರಿಯ ಕಂಬ ಅಜ್ಜಿಯಪ್ಪ !

ಚೂಟ್ ! ಚೂಟ್ ! ಚೂಟ್ !

ಅಜ್ಜಿ ಮುಟ್ಟಿ ನಿಂತಿದೇನೆ !

ಏ ! ಅಂಬಾಲ್ !


ಇಷ್ಟು ಇಷ್ಟು ಬೆಣ್ಣೆ ತೆಕೊ !

ಚೂಟ್ ! ಚೂಟ್ ! ಚೂಟ್ !

ಎಡವಿ ಬಿದ್ದೆ - ಕೊಂಚ ತಾಳು !

ಏ ! ಅಂಬಾಲ್ !


ಕುರೋ ಕುರೋ ಮುಟ್ಟು ಬಂದು !

ಚೂಟ್ ! ಚೂಟ್ ! ಚೂಟ್ !

ಹಿಡಿಯಲಿಲ್ಲ - ಎಲ್ಲ ಸುಳ್ಳು !

ಏ ! ಅಂಬಾಲ್ !


Padya


Neenu naayi! naanu mola!

Choot! choot! choot!

Modale bandu muttabeda!

Ey! ambaal!


Kariya kamba ajjiyappa!

Choot! choot! choot!

Ajji mutti nintidene!

Ey! ambaal!


Ishtu ishtu benne teko!

Choot! choot! choot!

Edavi bidde - koncha taalu!

Ey! ambaal!


Kuro kuro muttu bandu!

Choot! choot! choot!

Hidiyalilla - ella sullu !

Ey! ambaal!

Tagarina Dhikki (ಟಗರಿನ ಢಿಕ್ಕಿ)

 ಪದ್ಯ 

ಸಾಹಿತ್ಯ : ಜಿ ಪಿ ರಾಜರತ್ನಂ  


ಮೈಯಿಗೆ ಮೈಯ ಮೆಟ್ಟಿ 

ಅಲ್ಲಿ ಇಲ್ಲಿ ಸುತ್ತಿ 

ಎರಡು ಟಗರು ಹತ್ತಿ 

ಸೇರಿತು ಬೆಟ್ಟದ ನೆತ್ತಿ.


ಬೆಟ್ಟದಲೊಂದು ಉಪ್ಪು 

ರುಚಿಯ ದಂಟು ಸೊಪ್ಪು 

ಸಿಕ್ಕಲು ಮುಖವನು ಕಪ್ಪು 

ಮಾಡಿದುವೆರಡೂ ಬೆಪ್ಪು !


ಸಿಕ್ಕಿದ ಸೊಪ್ಪು ಮುಕ್ಕಿ 

ಕೊಂಬಿಗೆ ಕೊಂಬು ತಿಕ್ಕಿ 

ಢೀ ಢೀ ಢೀ ಢೀ ಢಿಕ್ಕಿ !

ಬಿತ್ತು ರಕ್ತ ಕಕ್ಕಿ !


Padya


Maiyige maiya metti

Alli illi sutti

Eradu tagaru hatti

Seritu bettada netti.


Bettadalondu uppu

Ruchiya dantu soppu

Sikkalu mukhavanu kappu

Madiduveradu beppu!


Sikkida soppu mukki

Kombige kombu tikki

Dhee dhee dhee dhee dikki!

Bittu rakta kakki!

Thursday, March 12, 2026

Nanna Tota (ನನ್ನ ತೋಟ)

 ಪದ್ಯ 

ಸಾಹಿತ್ಯ: ಕಂಚ್ಯಾಣಿ ಶರಣಪ್ಪ 


ನನ್ನ ಮನೆಯ ಹಿತ್ತಲಲ್ಲಿ 

ನನ್ನ ಪುಟ್ಟ ತೋಟವು 

ನನ್ನ ತೋಟ ಎಂಥ ಮಾಟ 

ಇಲ್ಲ ಇದಕೆ ಸಾಟಿಯು ।।


ಬೇಲಿ ತುಂಬ ಹರಡಿಕೊಂಡ 

ಹಸಿರು ಹಾಲುಗುಂಬಳ 

ಎಲೆಯ ಹಾಸಿ ಕುಡಿಯ ಚಾಚಿ 

ಸೆಳೆಯುತಿಹುದು ಕಂಗಳ ।।


ಚಳ್ಳವರೆಯ ಚೆಲ್ಲುವರಿದು 

ಅಂದವಾಗಿ ಹರಡಿದೆ 

ತಂಗಿ ಗೊಂಬೆ ಮದುವೆಯಾಗಿ 

ಹಸಿರು ಹಂದರಾಗಿದೆ ।।


ತಾಯಿ ತೊಡೆಯ ಮೇಲೆ ಕುಳಿತು 

ನಗುವ ತೆರದಿ ಮಕ್ಕಳು 

ಚಿಕ್ಕ ಚಿಕ್ಕ ಮಡಿಗಳಲ್ಲಿ 

ಪುಟ್ಟ ಪುಟ್ಟ ಸಸಿಗಳು ।।


ಮಲ್ಲೆ ಜಾಜಿ ಚೆಂಗುಲಾಬಿ 

ಎಷ್ಟು ಬಗೆಯ ಹೂಗಳು 

ಚೆಂದವಾಗಿ ಅರಳಿ ಗಂಧ 

ಬೀರಿ ನಗುತಲಿರುವವು ।।


ಅವರೆ ಹೀರೆ ಚವಳೆ ಬೆಂಡೆ 

ಎಳೆಯ ಸವತೆ ಕಾಯ್ಗಳು 

ಅಮ್ಮ ಬಂದು ಕೊಯ್ದುಕೊಂಡು 

ಬುಟ್ಟಿ ತುಂಬ ಒಯ್ದಳು ।।


ಅಪ್ಪ ಊಟ ಮಾಡಿ ಬಂದು 

ಅತ್ತ ಇತ್ತ ನಡೆವನು 

ಕೆಲಸ ಮಾಡಿ ದುಡಿವ ದಣಿವ 

ಇಲ್ಲಿ ಕಳೆದುಕೊಳುವನು ।।


ನನ್ನ ತೋಟ ಚನ್ನ ತೋಟ 

ನೋಡಲೆಂದು ಚಂದ್ರನು 

ಚಿಕ್ಕ ಬಳಗದೊಡನೆ ಕೂಡಿ 

ಬಾನಿನಲ್ಲಿ ಬರುವನು ।।


Padya


Nanna maneya hittalalli

Nanna putta totavu

Nanna tota entha maata

Illa idake Saatiyu ||


Beli tumba haradikonda

Hasiru Haalugumbala

Eleya haasi kudiya chachi

Seleyutihudu kangala ||


Challavareya chelluvaridu

Andavaagi haradide

Tangi gombe maduveyaagi

Hasiru handaraagide ||


Taayi todeya mele kulitu

Naguva teradi makkalu

Chikka chikka madigalalli

Putta putta sasigalu ||


Malle jaaji chengulabi

Estu bageya hoogalu

Chendavaagi arali gandha

Beeri nagutaliruvavu ||


Avare heere chavale bende

Eleya savate kaigalu

Amma bandu koidukondu

Butti tumba oidalu ||


Appa oota maadi bandu

Atta itta nadevanu

Kelasa maadi dudida daniva

Illi kaledukoluvanu ||


Nanna tota chenna tota

Nodalendu chandranu

Chikka balagadodane koodi

Baninalli baruvanu ||

Saturday, February 28, 2026

Prarthane (ಪ್ರಾರ್ಥನೆ)

 ಪದ್ಯ 

ಸಾಹಿತ್ಯ :ಜಿ ಪಿ ರಾಜರತ್ನಂ 


ಮಲೆಗಳಲಿ ಕಲ್ಲುಂಟು 

ಹೊಲಗಳಲಿ ಹುಲ್ಲುಂಟು 

ಹೊಳೆಗಳಲಿ ಮೀನುಂಟು 

ಗೂಡಿನಲಿ ಜೇನುಂಟು 

ನೀನುಂಟು ಎಲ್ಲೆಲ್ಲೂ -ಓ ಶಿವ 

ನೀನುಂಟು ಎಲ್ಲೆಲ್ಲೂ


ಬಾಳೆಯಲಿ ಫಲವುಂಟು 

ಚಂದ್ರನಲಿ ಮೊಲವುಂಟು 

ಹುತ್ತದಲಿ ಹಾವುಂಟು 

ಬೆಂಕಿಯಲಿ ಕಾವುಂಟು 

ನೀನುಂಟು ಎಲ್ಲೆಲ್ಲೂ -ಓ ಶಿವ 

ನೀನುಂಟು ಎಲ್ಲೆಲ್ಲೂ


ದೀಪದಲಿ ಬೆಳಕುಂಟು 

ಕೋಪದಲಿ ಹುಳುಕುಂಟು 

ಸರುವ ಕಡೆ ನೀನುಂಟು 

ಇರುವ ಕಡೆ ನಾನುಂಟು 

ನೀನುಂಟು ಎಲ್ಲೆಲ್ಲೂ -ಓ ಶಿವ 

ನೀನುಂಟು ಎಲ್ಲೆಲ್ಲೂ.


Padya


Malegalali kalluntu

Holagalali hulluntu

Holegalali meenuntu

Gudinali jenuntu

Neenuntu ellellu- o shiva

Neenuntu ellellu


Baleyali phalavuntu

Chandranali molavuntu

Huttadali haavuntu

Benkiyali kaavuntu

Neenuntu ellellu- o shiva

Neenuntu ellellu


Deepadali belakuntu

Kopadali hulukuntu

Saruva kade neeruntu

Iruva kade naanuntu

Neenuntu ellellu- o shiva

Neenuntu ellellu.


Kamana Billu (ಕಾಮನ ಬಿಲ್ಲು)

 ಪದ್ಯ 

ಸಾಹಿತ್ಯ : ನಿಂಗಣ್ಣ ಕುಂಟಿ  


ರವಿಯದೊ ಹೊರಟನು ಪಡುವಣಕೆ 

ತಾಯಿಯ ಮನೆಯನು ಸೇರಲಿಕೆ 


ಸಂಜೆಯ ಹೊತ್ತಿನ ಹೂಬಿಸಿಲು 

ಕಣ್ಣಿಗೆ ಹಿಗ್ಗಿನ ಅಂದದ ಹೊನಲು 


ಬಿಳಿತೆರೆ  ಮೋಡದ ಅಂಚಿನಲಿ 

ಹನಿಮಳೆ ಬೀಳುವ ಹೊತ್ತಿನಲಿ 


ತುಂತುರು ಹನಿಗಳು ಬೀಳುತ್ತಿವೆ 

ಕಾಮನ ಬಿಲ್ಲನು ಮೂಡಿಸಿವೆ 


ಕಾಮನ ಬಿಲ್ಲನು ನೋಡಲ್ಲಿ 

ಮಣಿದಿಹ ಬಿಲ್ಲದು ಮುಗಿಲಲ್ಲಿ 


ಕಿತ್ತಳೆ ಕೇಸರಿ ಹಳದಿ ಕೆಂಪು 

ನೀಲಿ ಕಂದು ನೇರಳೆ ತಂಪು 


ನೆಲಕೂ ಮುಗಿಲಿಗೂ ಮುಟ್ಟಿಹುದು 

ಕಣ್ಣಿಗೆ ಹಬ್ಬವ ತಂದಿಹುದು 


ಸೂರ್ಯನು ಮುಗಿಲಿಗೂ ಮುಟ್ಟಿಹುದು 

ಕಣ್ಣಿಗೆ ಹಬ್ಬವ ತಂದಿಹುದು 


ಸೂರ್ಯನು ಮುಳುಗಿದ ಕತ್ತಲು ಬಂದಿತು 

ಮೋಡವು ಚದುರಿತು ಮಳೆಯೂ ನಿಂತಿತು 


ಮರೆಯಲಿ ಓಡಿತು'ಕಾಮನ ಬಿಲ್ಲು 

ಕಾಣದಾಯಿತು ಮಾಯದ ಬಿಲ್ಲು. 


Padya


Raviyado horatanu paduvanake

Taayiya maneyanu seralike


Sanjeya hottina hoobisilu

kannige higgina andada honalu


Bilitere modada anchinali

Hanimale beeluva hottinali


Tunturu hanigalu beeluttive

Kamana billanu moodisive


Kamana billanu nodalli

Manidiha billadu mugilalli


Kittale kesari haladi kempu

Neeli kandu nerale tampu


Nelaku mugiligu muttihudu

Kannige habbava tandihudu


Suryanu mulugida kattalu banditu

Modavu chaduritu maleyu nintitu


Mareyali oditu kamana billu

Kaanadayitu maayada billu.

         

Thursday, January 15, 2026

Sanjemale (ಸಂಜೆಮಳೆ)

ಪದ್ಯ 

ಸಾಹಿತ್ಯ : ಜಿ.  ವರದರಾಜರಾವ್ 


ಒಂದು ಚಣದ ಸಂಜೆ ಮಳೆ 

ಬೀಳಲಿಂದು ತೋಯಲಿಳೆ 

ಹೂವ ಬಿಸಿಲು ಬೆಳಕು ಗೊಳೆ 

ಏನು ಆನಂದವೋ, ಏನು ಆನಂದವೋ


ಕಿರಿಯ ಹಿರಿಯ ಮುಗಿಲ ಪಡೆ 

ನೀರನೆರೆಯೆ ಎಲ್ಲ ಕಡೆ 

ಬಲು ಪವಿತ್ರ ವಾಗಲೆಡೆ 

ಏನು ಆನಂದವೋ, ಏನು ಆನಂದವೋ


ಮಿನುಗೆ, ಜಿನುಗೆ, ಬೆಳಗೆ ಗಿರಿ 

ಉರುಳಿ ಹೊರಳಿ ನೊರೆಯ ಝರಿ 

ನಲಿಯೆ ಮೆರೆಯೆ ಹಸುರ ಸಿರಿ 

ಏನು ಆನಂದವೋ, ಏನು ಆನಂದವೋ


ಬೆಳೆಯಲೆಳೆಯ ಮನದ ತೆನೆ 

ಪೂತು ಚಿಗಿಯಲದರ ಕೊನೆ 

ಅರಳುತಿಹುದು ಬಯಕೆ ನನೆ 

ಏನು ಆನಂದವೋ, ಏನು ಆನಂದವೋ


ಗಾಳೆ ಮೆಲ್ಲನೆ ಸುಳಿಯುತಿರೆ 

ಮಳೆಯ ಬಿಲ್ಲು ರಂಜಿಸಿರೆ 

ಮರಳಿ ವಿಹಗ ನುತಿಸುತಿರೆ 

ಏನು ಆನಂದವೋ, ಏನು ಆನಂದವೋ


ಬುವಿಯು ಬಾನು ಮುದದ ನೆಲೆ 

ಮೂಡಿ ಬರುವ ವಿವಿಧ ಕಲೆ 

ನನ್ನ ಮನವ ಪಿಡಿವ ಬಲೆ 

ಏನು ಆನಂದವೋ, ಏನು ಆನಂದವೋ


Padya


Ondu chanada sanjemale

Beelalindu toyalile

Hoova bisilu belaku gole

Enu aanandavo, enu aanandavo.


Kiriya hiriya mugila pade

Neera nereya ella kade

Balu pavitravaagalede

Enu aanandavo, enu aanandavo.


Minuge, jinuge, belage giri

Uruli horali noreye jhari

Naliye mereye hasura siri

Enu aanandavo, enu aanandavo.


Beleyaleleya manada tene

Putu chigiyaladara kone

Aralutihudu bayake nane

Enu aanandavo, enu aanandavo.


Gaale mellane suliyutire

Maleya billu ranjisire

Marali vihaga nutisutire

Enu aanandavo, enu aanandavo.


Buviyu baanu mudada nele

Moodi baruva vividha kale

Nanna manava pidiva bale

Enu aanandavo, enu aanandavo.

         

Thursday, January 1, 2026

Talme (ತಾಳ್ಮೆ)

 ಪದ್ಯ 

ಸಾಹಿತ್ಯ: ಶ್ರೀ ವಾದಿರಾಜ 


ತಾಳುವಿಕೆಗಿಂತ ತಪವು ಇಲ್ಲ 

ಕೇಳಬಲ್ಲವರಿಗೆ ಹೇಳುವೆನು ಸೊಲ್ಲ ।।ಪ।। 


ದುಷ್ಟಮನುಜರು ಪೇಳ್ವ ನಿಷ್ಠುರದ ನುಡಿತಾಳು 

ಕಷ್ಟ ಬಂದರೆ ತಾಳು ಕಂಗೆಡದೆ ತಾಳು 

ನೆಟ್ಟಸಸಿ ಫಲ ಬರುವ ತನಕ ಶಾಂತಿಯ ತಾಳು 

ಕಟ್ಟುಬುತ್ತಿಯ ಮುಂದೆ ಉಣಲುಂಟು ತಾಳು ।।೧।।


ನಕ್ಕು ನುಡಿವರ ಮುಂದೆ ಮುಕ್ಕರಿಸದೆ ತಾಳು 

ಅಕ್ಕಸವ ಮಾಡುವರ ಅಕ್ಕರದಿ ತಾಳು 

ಉಕ್ಕೊ ಹಾಲಿಗೆ ನೀರು ಇಕ್ಕಿದಂದದಿ ತಾಳು 

ಪಕ್ಷೀಶ ಹಯವದನ ಶರಣೆಂದು ಬಾಳು ।।೨।।


Padya


Taaluvikeginta tapavu illa

Kelaballavarige heluvenu solla ||


Dushta manujaru pelva nishturada nuditaalu

Kashta bandare taalu kangedade taalu

Netta sasi phala baruva tanaka shantiyataalu

Kattu buttiya munde unaluntu taalu ||


Nakku nudivara munde mukkarisade taalu

Akkasava maaduvara akkaradi taalu

Ukko haalige neeru ikkidandadi taalu

Paksheesha hayavadana saranendu baalu ||

                     

        

Kannada (ಕನ್ನಡ)

ಪದ್ಯ 

ಸಾಹಿತ್ಯ: ಕುವೆಂಪು 


'ಕನ್ನಡ' ಎನೆ ಕುಣಿದಾಡುವುದೆನ್ನೆದೆ,

ಕನ್ನಡ ಎನೆ ಕಿವಿ ನಿಮಿರುವುದು !

ಕಾಮನ ಬಿಲ್ಲನು ಕಾಣುವ ಕಿವಿಯೊಲು 

ತೆಕ್ಕನೆ ಮನ ಮೈ ಮರೆಯುವುದು 


ಕನ್ನಡ! ಕನ್ನಡ! ಹಾ, ಸವಿಗನ್ನಡ!

ಕನ್ನಡದಲಿ ಹರಿ ಬರೆಯುವನು 

ಕನ್ನಡದಲಿ ಹರ ತಿರಿಯುವನು!

ಕನ್ನಡದಲ್ಲಿಯೆ ಬಿನ್ನಹಗೈದೊಡೆ   

ಹರಿ ವರಗಳ ಮಳೆ ಕರೆಯುವನು!

ಹರ ಮುರಿಯದೆ ತಾ ಪೊರೆಯುವನು!


ಬಾಳುವುದೇತಕೆ? ನುಡಿ ಎಲೆ ಜೀವ!

ಸಿರಿಗನ್ನಡದಲಿ ಕವಿತೆಯ ಹಾಡೆ!

ಸಿರಿಗನ್ನಡದೇಳಿಗೆಯನು ನೋಡಿ!

ಕನ್ನಡ ತಾಯಿಯ ಸೇವೆಯ ಮಾಡೆ!


Padya


'Kannada' ene kunidaaduvudennede,

Kannada ene kivi nimiruvudu!

Kaamana billanu kaanuva kiviyolu

Tekkane mana mai mareyuvudu.


Kannada! kannada! haa, savigannada!

Kannadadali hari bareyuvanu

Kannadadali hara tiriyuvanu!

Kannadadalliye binnahagaidode

Hari varagala male kareyuvanu!

Hara muriyade taa poreyuvanu!


Baaluvudetake? nudi, ele jeeva!

Sirigannadadali kaviteya haade!

Sirigannadadeligeyanu node!

Kannada taayiya seveya maade!  

             

Saturday, December 13, 2025

Hinnudi (ಹಿನ್ನುಡಿ)

 ಪದ್ಯ 

ಸಾಹಿತ್ಯ : ದಿನಕರ ದೇಸಾಯಿ 


ನನ್ನ ಭಾವದ ಕವನ,

ನನ್ನ ಗಾನದ ತನನ,

ನನ್ನದೆಂಬುವ ಜಂಬ ಸಾಕು ದೇವಾ,

ನಿನ್ನ ಕೃಪೆಯಿಂದಲೇ 

ಬನ್ನಿ ಗಿಡ ಹೂ ಬಿಡಲು,

ನಿನ್ನ ಸೇವೆಗೆ ನೀನೆ ತಂದೆ ಹೂವ !


ಹಕ್ಕಿಗಳ ಇಂಚರವು,

ಚುಕ್ಕಿ ಮಿಂಚುವ ತೆರವು,

ಉಕ್ಕಿ ಮೊರೆಯುವ ತೆರೆಯು ನಿನ್ನ ಕವನ. 

ನನ್ನದೆಂಬುವ ಗೀತ 

ನಿನ್ನದೇ ಸಂಗೀತ,

ಎಲ್ಲೆಲ್ಲಿಯೂ ನಿನ್ನ ಭಾವ-ಪವನ. 


ನನ್ನ ಕನ್ನಡ ನುಡಿಗೆ 

ನಿನ್ನ ಹಿನ್ನುಡಿಯಿರಲು,

ನನ್ನದೆಂಬುದು ತಾನೆ ಕನ್ನಡಿಯ ಬಿಂಬ;

ಪೊಡವಿಯಲಿ ನಾಲ್ದೆಸೆಗೆ 

ನೀನೆ ಹಾಡುತಲಿರಲು,

ನಿನ್ನ ಭಾವನೆ ನನ್ನ ನುಡಿ-ಗುಡಿಯ ಕಂಬ! 


Padya


Nanna bhavada kavana,

Nanna gaanada tanana,

Nannadembuva jamba saaku deva.

Ninna krupeyindale

Banni gida hoo bidalu,

Ninna sevege neene tande hoova!


Hakkigala incharavu,

Chukki minchuva teravu,

Ukki moreyuva tereyu ninna kavana.

Nannadembuva geeta

Ninnade sangeeta,

Ellelliyu ninna bhava-pavana.


Nanna kannada nudige

Ninna hinnudiyiralu,

Nannadembudu taane kannadiya bimba;

Podaviyali naldesege

Neene haadutaliralu,

Ninna bhavane nanna nudi-gudiya kamba!

                        

Maguvina More (ಮಗುವಿನ ಮೊರೆ)

 ಪದ್ಯ 

ಸಾಹಿತ್ಯ : ಸಿದ್ದಯ್ಯ ಪುರಾಣಿಕ 


ಉರಿಯಲಿಲ್ಲ ಆರಲಿಲ್ಲ 

ಬಾಳ ಹಣತೆ ಹೇ ಪ್ರಭೋ !

ಬತ್ತಲಿಲ್ಲ ತುಂಬಲಿಲ್ಲ 

ಬಾಳ ಒರತೆ ಹೇ ವಿಭೋ !


ಅರಳಲಿಲ್ಲ ಉರುಳಲಿಲ್ಲ 

ಬಾಳ ಹೂವು ಹೇ ಪ್ರಭೋ !

ಮುಳುಗಲಿಲ್ಲ ತೇಲಲಿಲ್ಲ 

ಬಾಳ ನಾವೆ ಹೇ ವಿಭೋ !


ಏಳಲೇಕೆ ಬೀಳಲೇಕೆ 

ಬಾಳಲೇಕೆ ಈ ತೆರ ?

ಗೊಳಮೊಟ್ಟೆಯಿಟ್ಟು ಬಂತು 

ಬಾಳ ಮರಿಗೆ ಬೇಸರ !


ಇರವಿಗೊಂದು ಗುರಿಯ ತೋರು 

ಇದನೆ ಬೇಡಿಕೊಳ್ಳುವೆ !

ಬದುಕಿಗೊಂದು ಅರ್ಥ ತೋರು 

ಅದನೆ ಹಾಡಿಕೊಳ್ಳುವೆ ! 


Padya


Uriyalilla aaralilla

Baala hanate he prabho!

Battalilla tumbalilla

Baala naave he vibho!


Aralalilla urulalilla

Baala hoovu he prabho!

Mulugalilla telalilla

Baala naave he vibho!


Elaleke beelalele

Baalaleke ee tera?

Golamotteyittu bantu

Baala marige besara!


Iravigondu guriya toru

Idane bedikolluve!

Badukigondu artha toru

Adane haadikolluve!

             

Thursday, December 4, 2025

Dudukina Phala (ದುಡುಕಿನ ಫಲ)

ಪದ್ಯ 

ಸಾಹಿತ್ಯ: ಲಕ್ಷ್ಮಣ ಅಳವಂಡಿ 


ಹಿಂದೊಂದೂರಲಿ ಇದ್ದಳು ನಾರಿ 

ಮುಂಗುಸಿಯೊಂದ ಸಾಕಿದಳು. 

ಕೊಡವನು ಹಿಡಿದು ನೀರನು ತರಲು 

ನದಿಯ ತೀರಕೆ ಸಾಗಿದಳು. 


ತೊಟ್ಟಿಲೊಳಗಿನ ಪುಟ್ಟ ಮಗುವದು 

ಕೇಕೆಯ ಹಾಕಿತು ಮುದದಿಂದ. 

ಮುಂಗುಸಿ ನೋಡಿತು ಹಗ್ಗದಗುಂಟ 

ಸರಿಯುತಲಿದ್ದ ಹಾವೊಂದ. 


ಹಾವನು ಕಂಡು ಮುಂಗುಸಿ ತಾನು 

ಸರಸರ ಏರಿತು ಹಗ್ಗವನು. 

ವೈರಿಯ ಹಿಡಿದು ಹಲ್ಲಲಿ ಕಡಿದು 

ಉಳಿಸಿತು ಮಗುವಿನ ಪ್ರಾಣವನು. 


ನೀರಿಗೆ ಹೋದ ನಾರಿಯು ತಾನು 

ಮರಳಿ ಬಂದಳು ನದಿಯಿಂದ. 

ರಕ್ತವು ಮೆತ್ತಿದ ಮುಂಗುಸಿ ಕಂಡು 

ಕಿರುಚಿದಳಾಗಲೇ ಭಯದಿಂದ. 


'ಮಗುವನು ಕೊಂದಿದೆ ಮುಂಗುಸಿ' ಎಂದು 

ಭಾವಿಸಿಕೊಂಡಳು ಮನದಲ್ಲಿ. 

ತುಂಬಿದ ಕೊಡವನು ಕೋಪದಿ ಎತ್ತಿ 

ಹೊಡೆದಳು ಮುಂಗುಸಿ ತಲೆಯಲ್ಲಿ. 


ಕಿಲ ಕಿಲ ನಗುವ ಮಗುವನು ತಾನು 

ಒಳಗಡೆ ಕಂಡಳು ತೊಟ್ಟಿಲಲಿ. 

ಪಕ್ಕದಿ ಸತ್ತ ಹಾವನು ನೋಡಿ 

ಕುಸಿದಳು ನೆಲಕೆ ದುಃಖದಲಿ. 


"ಮಗುವನು ಉಳಿಸಿದ ಮುಂಗುಸಿ ಕೊಂದೆ 

ಅಯ್ಯೋ! ಪಾಪವ ಮಾಡಿದೆನು. 

ನಿಜವನು ತಿಳಿಯದೆ ಕೋಪದಿ ನಾನು 

ಅವಸರ ಮಾಡಿ ದುಡುಕಿದೆನು". 


'ತಾಳಿದ ಮಾನವ ಬಾಳುವ' ನೆಂಬ 

ಗಾದೆಯ ಮಾತದು ಬಲುಚೆಂದ. 

'ದುಡುಕೇ ಕೆಡುಕಿನ ಮೂಲ'ವು ಎಂಬ 

ನಿಜವನು ಅರಿಯೋ ನೀ ಕಂದ !


Padya


Hindondurali iddalu naari

Mungusiyonda saakidalu.

Kodavanu hididu neeranu taralu

Nadiya teerake saagidalu.


Tottilolagina putta maguvadu

Kekeya haakitu mudadinda.

Mungusi noditu haggadagunta

Sariyutalidda haavonda.


Haavanu kandu mungusi taanu

Sarasara eritu haggavanu.

Vairiya hididu hallali kadidu

Ulisitu maguvina pranavanu.


Neerige hoda naariyu taanu

Marali bandalu nadiyinda.

Raktavu mettida mungusi kandu

Kiruchidalaagale bhayadinda.


'Maguvanu kondide mungusi' endu

Bhavisikondalu manadalli.

Tumbida kodavanu kopadi etti

Hodedalu mungusi taleyalli.


Kilakila naguva maguvanu taanu

Olagade kandalu tottilali.

Pakkadi satta haavanu nodi

Kusidalu nelake dukhadali.


"Maguvanu ulisida mungusi konde

Ayyo! paapava maadidenu.

Nijavanu tiliyade kopadi naanu

Avasara maadi dudukidenu".


'Taalida maanava baaluva' nemba

Gaadeya maatadu baluchanda.

'Duduke kedukina moola'vu emba

Nijavanu ariyo nee kanda!

             

Tuesday, October 28, 2025

Ravi (ರವಿ)

ಪದ್ಯ 

ಸಾಹಿತ್ಯ : ಸುಮನ ಬಾಗಲುಕೋಟೆ 


ಮೂಡಿದ ರವಿ ತಾನೋಡಿದ ನಭಕೆ,

ಹೊನ್ನಿನ ಕಾಂತಿಯ ಓಕುಳಿ ಜಗಕೆ,

ಸೃಷ್ಟಿಯ ಸೊಬಗಿನ ಶೋಭೆಯ ಬೀರಿ,

ಬಂದನದೋ ರವಿ ತಾಮೇಲೇರಿ. 


ಬೆಳಗು ಜಾವದೊಳೆರಗಿದ ಹಿಮಮಣಿ,

ಆರಿಸಿಕೊಂಡಿಹನದನಾ ದಿನಮಣಿ,

ಸೃಷ್ಟಿಯ ನೆಲೆಯೊಳ್ ಅಡಗಿದ ಚಿತ್ರ,

ಕಂಡಿತು ಕವಿಗದು ಬಹಳ ವಿಚಿತ್ರ. 


ಭುವಿಯೊಳು ಹರಡಿದ ಜಡವನು ಹೀರಿ,

ಕಂಗೊಳಿಸಿದ ರವಿ ಚೇತನ ಬೀರಿ,

ಜಗದೊಳು ಹರಡಿಸಿ ಚೆಲುವಿನ ಐಸಿರಿ,

ಬೆಳಗಿಹನೋ ರವಿ ಮಂಗಳ ಕೋರಿ. 


ಹೊರಟಿಹ ರವಿ ತಾ ಬಾನ್ದೆರೆ ಸೀಳಿ,

ಜಗಕಾಯಿತೊ ಕೆನ್ನೀರಿನ ಹೋಳಿ,

ಬರುತಿಹ ಸಂಧ್ಯೆಗೆ ಶುಭವನು ಕೋರಿ,

ಅಡಗಿದ ರವಿ ತಾಯ್ಮಡಿಲನು ಸೇರಿ. 


Padya


Moodida ravi taanodida nabhake,

Honnina kantiya okuli jagake,

Srushtiya sobagina shobheya beeri,

Bandanado ravi taameleri.


Belagu jaavadoleragida himamani,

Aarisikondihanadanaa dinamani,

Srushtiya neleyol adagida chitra,

Kanditu kavigadu bahala vichitra.


Bhuviyol haradida jadavanu heeri,

Kangolisida ravi chetana beeri,

Jagadolu haradisi cheluvina isiri,

Belagihano ravi mangala kori.


Horatiha ravi taa bandere seeli,

Jagakaayito keneerina holi,

Barutiha sandhyege shubhavanu kori,

Adagida ravi taimadilanu seri.

                       

Sunday, October 26, 2025

Yaaramma (ಯಾರಮ್ಮಾ)

ಪದ್ಯ 

ಸಾಹಿತ್ಯ : ರಾ. ಮೊ. ವಿಶ್ವಾಮಿತ್ರ 


ಮರಗಿಡ ಬಳ್ಳಿಗೆ ಅಂದದ ಹಸುರಿನ 

ಬಣ್ಣವ ಕೊಟ್ಟವರಾರಮ್ಮಾ !

ಹಾಡುವ ಹಕ್ಕಿಗೆ ಮಧುರದ ಕಂಠವ 

ಇತ್ತವನಾವನು ಹೇಳಮ್ಮಾ !


ನೀಲಾಕಾಶದಿ ಸೂರ್ಯನ ಚಂದ್ರನ 

ಓಡಿಸಿ ಆಡಿಪನಾರಮ್ಮಾ !

ಗಗನದಿ ತಾರೆಯು ಹೊಳೆಯುವ ತೆರದಲಿ 

ನಿಲ್ಲಿಸಿದಾತನು ಯಾರಮ್ಮಾ !


ಗುಡುಗುಡು ಗುಮ್ಮನ ಗುಡುಗಿಸಿ ಬಾನಲಿ 

ಮಳೆ ಹನಿಗರೆಯುವರಾರಮ್ಮ !

ಆಗಸವೆನ್ನುವ ದೊಡ್ಡೀಕೊಡೆಯನು 

ಲೋಕಕೆ ಹಿಡಿದವರಾರಮ್ಮಾ !


ಕುಣಿಯುವ ನವಿಲಿಗೆ ಬಣ್ಣದ ಗರಿಗಳ -

ಒದಗಿಸಿಕೊಟ್ಟವರಾರಮ್ಮಾ !

ಆಡುವ ಗಿಳಿಗಾ ಮುದ್ದಿನ ಕೊಕ್ಕನು 

ಕಲ್ಪಿಸಿಕೊಟ್ಟವರಾರಮ್ಮಾ !


ಅರಳುವ ಮೊಗ್ಗಲಿ ಪರಿಮಳ ತುಂಬಿಸಿ 

ಲೋಕಕೆ ಹರಡುವರಾರಮ್ಮಾ !

ಹಾರುವ ತುಂಬಿಗೆ ಹೂವಿನ ಗೆಳೆತನ 

ಮಾಡಿಸಿ  ಕೊಟ್ಟವರಾರಮ್ಮಾ !


Padya


Maragida ballige andada hasurina,

Bannava kottavaraarammaa!

Haaduva hakkige madhurada kanthava

Ittavanaavanu helammaa!


Neelaakashadi suryana chandrana

Odisi aadipanaarammaa!

Gaganadi taareyu holeyuva teradali

Nillisidaatanu yaaramma!


Gudugudu gummana gudugisi baanali

Male hanigareyuvaraarammaa!

Aagasavennuva doddikodeyanu

Lokake  hididavaraarammaa!


Kuniyuva navilige bannada garigala-

Odagisi kottavaraarammaa!

Aaduva giligaa muddina kokkanu

Kalpisi kottavaraarammaa!


Araluva moggali parimala tumbisi

Lokake haraduvaraarammaa!

Haaruva tumbige hoovina geletana

Maadisi kottavaraarammaa!

                

Saturday, October 18, 2025

Stira Prayatna (ಸ್ಥಿರ ಪ್ರಯತ್ನ)

 ಪದ್ಯ 

ಸಾಹಿತ್ಯ: ಕವಿಶಿಷ್ಯ 


ಮರಳಿ ಯತ್ನವ ಮಾಡು !

ಮರಳಿ ಯತ್ನವ ಮಾಡು !

ತೊರೆಯದಿರು ಮೊದಲು ಕೈ 

ಗೂಡದಿರಲು 

ಹಿರಿದು ಧೈರ್ಯವ ತಾಳು 

ತೊರೆಯದಿರು ತೊರೆಯದಿರು!

ಮರಳಿ ಯತ್ನವ ಮಾಡು

ಸಿದ್ಧಿಸುವುದು 

ಒಂದು ಸಲ ಕೆಟ್ಟು 

ಹೋಯ್ತೆಂದು ನೀ ಅಂಜದಿರು 

ಕುಂದಿಲ್ಲ ಕೈಗೂಡ 

ದನಿತರಿಂದ 

ನೊಂದುಕೊಳ್ಳದೆ ಮರಳಿ 

ಮುಂದೆ ಯತ್ನವ ಮಾಡು 

ಸಂದೇಹವಿಲ್ಲದದು 

ಸಿದ್ಧಿಸುವುದು 

ಕೆಲಸವಿದು ಕಷ್ಟವೆಂ 

ದಳುಕಿ ಬಿಡದಿರು ಮಾಡು,

ಫಲಗಳನು ಕೊಡುವುದದು 

ಕೊನೆಗೆ ನಿನಗೆ 

ಸುಲಭವಹದಾ ಕೆಲಸ 

ಫಲಿಸುವುದು ಹುಲಿಸುವುದು 

ನೆಲೆಗೆಡದೆ ಯತ್ನವನು 

ಮಾಡು, ಮಗುವೇ !


Padya


Marali yatnava maadu!

Marali yatnava maadu!

Toreyadiru modalu kai

Gudadiralu

Hiridu dhairyava taalu

Toreyadiru toreyadiru!

Marali yatnava maadu

Siddisuvudu

Ondu sala kettu

Hoytendu nee anjadiru

Kundilla kaiguda

Danitarinda

Nondukollade marali

Munde yatnava maadu

Sandehavilladadu

Siddisuvudu

Kelasavidu kashtavem

Daluki bidadiru maadu,

Phalagalanu koduvudadu

Konege ninage

Sulabhavahadaa kelasa

Phalisuvudu hulisuvudu

Nelegedade yatnavanu

Maadu, maguve!

            

Thursday, October 9, 2025

Gutuku (ಗುಟುಕು)

ಪದ್ಯ 

ಸಾಹಿತ್ಯ: ಟಿ. ಎಸ್. ನಾಗರಾಜ ಶೆಟ್ಟಿ 


ಬಾನಲಿ ಹಾರುವ 

ಹೊಳಪಿನ ಚುಕ್ಕಿ 

ಲಾಗಾ ಹೊಡೆಯಿತು 

ಗಾಳಿಯಲಿ. 


ಪುರ್ರನೆ ಏರಿತು 

ಜರ್ರನೆ ಇಳಿಯಿತು 

ನಾರನು ತಂದಿತು 

ಕೊಕ್ಕಿನಲಿ. 


ಹಾರಿತು ಹುಡುಕಿತು 

ಆರಿಸಿ ಬಿಟ್ಟಿತು 

ಮುಳ್ಳಿನ ಮರವನು 

ಕೊಳದ ಬಳಿ. 


ಕೊಂಬೆಯ ತುದಿಯಲಿ 

ಎಟುಕದ ಅಂಚಲಿ 

ಗೂಡನು ಹೆಣೆಯಿತು 

ಚೆಲುವಿನಲಿ 


ತಳದಲಿ ತೆರೆದಿಹ 

ಬಾಯಿಯ ಬಾಗಿಲು 

ತುದಿಯಲಿ ಹೆಣೆದಿಹ 

ಗಂಟೇ ಕಾವಲು. 


ಕೆಲವೇ ದಿನದಲಿ 

ಮೊಟ್ಟೆಯನಿಟ್ಟಿತು 

ಬೆಳಕನು ಕಾಣದೆ 

ನಿಟ್ಟುಸಿರಿಟ್ಟಿತು. 


ಮಿನುಗುತ ಕುಣಿಯುತ 

ಮಿಂಚುಹುಳ 

ಹಾರುತ ಬಂದಿತು 

ಬೆಳಕು ಹುಳ. 


ಹಕ್ಕಿಯು ತಾನು 

ಕಂಡಿತು ಥಟ್ಟನೆ 

ಬಾಗುತ ಕೊಕ್ಕಲಿ 

ಹಿಡಿಯಿತು ಪಕ್ಕನೆ !


ಸಿಕ್ಕಿಕೊಂಡಿತು 

ಗೂಡಿನ ಒಳಗೆ 

ಕಾವನು ಕೊಟ್ಟಿತು 

ಬೆಳಕಲಿ ಮೊಟ್ಟೆಗೆ. 


ಮರಿಗಳು ಬರಲು 

ತೆವಳುತಲಿ 

ಗುಟುಕನು ನೀಡಿತು 

ಹರುಷದಲಿ. 


Padya


Baanali haaruva

Holapina chukki

Laagaa hodeyitu

Gaaliyali.


Purrane eritu

Jarrane iliyitu

Naaranu tanditu

Kokkinali.


Haaritu hudukitu

Aarisi bittitu

Mullina maravanu

Kolada bali.


Kombeya tudiyali

Etukada anchali

Gudanu heneyitu

Cheluvinali.


Taladali terediha

Baayiya baagilu

Tudiyali henediha

Gante kaavalu.


Kelave dinadali

Motteyanittitu

Belakanu kaanade

Nittusirittitu.


Minuguta kuniyuta

Minchuhula

Haaruta banditu

Belaku hula.


Hakkiyu taanu

Kanditu thattane

Baaguta kokkali

Hidiyitu pakkane!


Sikkikonditu

Gudina olage

Kaavanu kottitu

Belakali mottege.


Marigalu baralu

Tevalutali

Gutukanu needitu

Harushadali.

   

Baana Kusuma (ಬಾನ ಕುಸುಮ)

 ಪದ್ಯ 

ಸಾಹಿತ್ಯ: ಫ. ಗು. ಸಿದ್ದಾಪೂರ 


ಇರುಳಿನ ಕೆಸರಲಿ ಅರಳಿದ ತಾವರೆ 

ಚಂದಿರ ನಗುತಿಹನು. 

ಮಜ್ಜಿಗೆಯೊಳಗಿನ ಬೆಣ್ಣೆಯ ಹಾಗೆ 

ತೇಲುತ ಬರುತಿಹನು. 


ತಾರಾ ಬಳಗದಿ ತಾನೊಂದಾಗಿ 

ಬಾನಲಿ ನಲಿಯುವನು. 

ಓಡುವ ಮೋಡದ ಹಿಂಡೊಳಗಾಡುತ 

ಮಿರಿ ಮಿರಿ ಮಿನುಗುವನು. 


ಹಾಲಿನ ಬೆಳಕನು ಚಲ್ಲುತ ಧರೆಗೆ 

ತಂಪನು ಹರಡುವನು. 

ಆಡುವ ಮಕ್ಕಳ ದೇಹಕೆ ಚೇತನ 

ಚಂದಿರ ನೀಡುವನು. 


ರಂಪವ ಮಾಡುವ ಕಂದನ ರಮಿಸಲು 

ಅಮ್ಮನು ತೋರುವಳು. 

ಚಂದಿರ ಕರೆಯುತ ಹಾಡನು ಹಾಡಿ 

ಅನ್ನವನುಣಿಸುವಳು. 


ತಿಂಗಳ ಬೆಳಕಲಿ ಅಂಗಳ ತುಂಬಾ 

ಎಳೆಯರು ಸೇರುವರು. 

ವಿಧವಿಧ ಆಟವ ಹಸುಳೆಗಳಾಡುತ 

ಮೈಮನ ಮರೆಯುವರು. 


Padya


Irulina kesarali aralida taavare

Chandira nagutihanu.

Majjigeyolagina benneya haage

Teluta barutihanu.


Taara balagadi taanondaagi

Baanali naliyuvanu.

Oduva modada hindolagaaduta

Miri miri minuguvanu.


Haalina belakanu challuta dharege

Tampanu haraduvanu.

Aaduva makkala dehake chetana

Chandira needuvanu.


Rampava maaduva kandana ramisalu

Ammanu toruvalu.

Chandira kareyuta haadanu haadi

Annavanunisuvalu.


Tingala belakali angala tumba

Eletaru seruvaru.

Vidhavidha aatava hasulegalaaduta

Maimana mareyuvaru.

              

Thursday, October 2, 2025

Nammuru Namage Savibella (ನಮ್ಮೂರು ನಮಗೆ ಸವಿಬೆಲ್ಲ )

ಪದ್ಯ 

ಸಾಹಿತ್ಯ : ಸಿದ್ದಯ್ಯ ಪುರಾಣಿಕ 


ನಮ್ಮೂರ ಹಳ್ಳ 

ಬತ್ತುವದಿಲ್ಲ 

ನಮ್ಮೂರ ಹುಲ್ಲು 

ಒಣಗುವುದಿಲ್ಲ 

ನಮ್ಮೂರ ಗದ್ದೆ 

ಕೋಡುವದಿಲ್ಲ 

ನಮ್ಮೂರ ತೋಟ 

ಬಾಡುವುದಿಲ್ಲ 

ನಮ್ಮೂರ ರಾಸು 

ಸೊರಗುವುದಿಲ್ಲ 

ನಮ್ಮೂರ ಜನರು 

ಕೊರಗುವುದಿಲ್ಲ 

ನಮ್ಮೂರ ಮಕ್ಕಳು 

ಮರುಗುವುದಿಲ್ಲ 

ನಮ್ಮೂರ ಸಿರಿಯು 

ಕರಗುವುದಿಲ್ಲ 

ನಮ್ಮೂರ ಶಾಲೆ 

ಸೋಲುವುದಿಲ್ಲ 

ನಮ್ಮೂರ ಜಾತ್ರೆ 

ನಿಲ್ಲುವದಿಲ್ಲ 

ನಮ್ಮೂರ ಕೀರ್ತಿ 

ಮಸಳುವುದಿಲ್ಲ 

ನಮ್ಮೂರು ನಮಗೆ 

ಸವಿಬೆಲ್ಲ. 


Padya


Nammura halla

Battuvadilla

Nammura hullu

Onaguvadilla

Nammura gadde

Kooduvadilla

Nammura tota

Baaduvudilla

Nammura raasu

Soraguvudilla

Nammura janaru

Koraguvudilla

Nammura makkalu

Maruguvudilla

Nammura siriyu

Karaguvudilla

Nammura shale

Soluvudilla

Nammura jatre

Nilluvadilla

Nammura keerti

Masaluvudilla

Nammuru namage

Savibella.

Wednesday, October 1, 2025

Moodala Mane (ಮೂಡಲ ಮನೆ)

ಪದ್ಯ 

ಸಾಹಿತ್ಯ: ಚಂದ್ರಶೇಖರ ಕಂಬಾರ 

ಲಿಂಕ್:  Click Here


ನಮ್ಮೂರ ಅಗಸ್ಯಾಗ ಆಲದ ಮರ ಬೆಳೆದು 

ಹಾದಿ ಬೀದೆಲ್ಲಾ ತಂಪು ನೆರಳ ।

ನೆತ್ತಿಗೂದಲ ಹರವಿ ತಪವ ಮಾಡೋನ್ಯಾರ ।

ಜಡಿಮುನಿಯ ಜಡಿಯ ಹಾಂಗ ಬಿಳಲ ।।

ರೆಂಬಿ ಕೊಂಬಿಯ ಮ್ಯಾಲ ಗೂಡ ಕಟ್ಟಿದಾವ 

ರೆಕ್ಕೆ ಬಲಿತ ಹಕ್ಕಿ 

ಗೂಡಿನಾಗ। ಮಲಗ್ಯಾವ ಮರಿಹಕ್ಕಿ ।।

ದೂರ ದೇಶದ ವಲಸಿಗ ಹಕ್ಕಿಗು 

ಐತಿ ಜಾಗ ಒಳಗ 

ಬನ್ನಿರಿ । ನೀವು ನಮ್ಮ ಬಳಗ ।।

ಹಳೆಯ ಬಾವಿಯ ತಳದ ನೀರಿನಾಗ 

ಹಸರು ಚಿಗರತಾವ ।

ಬೇರಿಗೆ ಮೊಳಕಿ ಒಡಿಯತಾವ ।।

ಭೂತ ಬೇತಾಳ ಜೋತ ಬಾವಲಿ 

ಮ್ಯಾಲ ಕೂಗತಾವ ।

ಮರದಾಗ ।।ಕರಗ ಕುಣಿಯತಾವ ।।

ಮರದ ಎಲೆ ನೆರಳು ಮನೆಯ ಗೋಡೆ ಮ್ಯಾಲ 

ಆಡತಾವ ಆಟ 

ಮೂಡ್ಯಾವ ।ತೊಗಲ ಗೊಂಬಿಯಾಟ 

ಕರುಳ ಬಳ್ಳಿಯ ಕತೆಯ ಹೇಳತಾವ 

ನೋಡ್ರಿ ಶಾಂತ ಚಿತ್ತ ।

ನಾವೂನು ಅದರ ಭಾಗ ಮಾತ್ರ ।।


Padya


Nammura agasyaga aalada mara beledu

Haadi beedella tampu nerala|

Nettigudala haravi tapava maadonyara|

Jadimuniya hanga bilala||

Rembi kombiya myala gooda kattidaava

Rekke balita hakki

Gudinaaga| malagyava marihakki||

Doora deshada valasiga hakkigu

Iti jaaga olaga|

Banniri| neevu namma balaga ||

Haleya baaviya talada neerinaaga

Hasaru chigarataava|

Berige molaki odiyataava||

Bhuta betaala jota bavali

Myala kugataava|

Maradaaga|| karaga kuniyataava ||

Marada ele neralu maneya gode myala

Aadataava aata

Moodyava | togala gombiyaata

Karula balliya kateya helataava

Nodri shanta chitta|

Naavunu adara bhaga matra || 

              

Saturday, September 27, 2025

Taayiya Haraike (ತಾಯಿಯ ಹರಕೆ)

ಪದ್ಯ 

ಜನಪದ ಗೀತೆ 


ಒಳ್ಳೆಯವರ ಗೆಳೆತನ ಕಲ್ಲುಸಕ್ಕರಿ ಹಾಂಗ 

ಕುಲ್ಲರ 

ಗೆಳೆತನ ಮಾಡಿದರ । ನನಕಂದ 

ಸಲ್ಲದ ಮಾತು ಬರತಾವ ।।


ಮಂದಿ ಮಕ್ಕಳೊಳಗ ಚಂದಾಗಿ ಇರಬೇಕು

 ನಂದೀಯ ಶಿವನ ದಯದಿಂದ । ಹೋಗಾಗ 

ಮಂದಿ ಬಾಯಾಗ ಇರಬೇಕು ।।


ಕೊಟ್ಟು ಕುದಿಯಲು ಬೇಡ ಇಟ್ಟು ಹಂಗಿಸ ಬೇಡ 

ಎಷ್ಟು೦ಡರೆಂದು ಅನಬೇಡ । ಈ ಮೂರು 

ಮುಟ್ಯಾವ ಶಿವನ ಸದರೀಗಿ ।।


ಹಿರಿಯರಿಗೆ ಹಿರಿಯನ್ನು ಕಿರಿಯರಿಗೆ ಕಿರಿಯನ್ನು 

ನೆರೆಗಡ್ಡದ ಮುದುಕರ । ಕಂಡರ 

ತಲೆಬಾಗಿ ನಡೆಯೋ ನನಕಂದ ।।


ಆಚಾರಕ್ಕರಸಾಗು ನೀತಿಗೆ ಪ್ರಭುವಾಗು 

ಮಾತಿನಲಿ ಚೂಡಾಮಣಿಯಾಗು । ಕಂದಯ್ಯ 

ಜ್ಯೋತಿಯೆ ಆಗು ಜಗಕೆಲ್ಲ ।।


Padya


Olleyavara geletana kallusakkari hanga

Kullara geletana maadidara | nanakanda

Sallada maatu barataava ||


Mandi makkalolaga chandagi irabeku

Nandeeya shivana dayadinda | hogaaga

Mandi bayaaga irabeku ||


Kottu kudiyalu beda ittu hangisa beda

Eastundarendu anabeda | ee mooru

Muttyava shivana sadareegi ||


Hiriyarige hiriyannu kiriyarige kiriyannu

Neregaddada mudukara | kandara

Talebaagi nadeyo nanakanda ||


Acharakkarasaagu neetige prabhuvaagu

Maatinali chudamaniyaagu | kandayya

Jyothiye aagu jagakella ||