Thursday, August 28, 2025

Naale Neenu Maduva Kelasa Inde Maadu (ನಾಳೆ ನೀನು ಮಾಡುವ ಕೆಲಸ ಇಂದೇ ಮಾಡು)

Bhaktigeete

Singer: Dr. Rajkumar

Song link: Click Here


Naale, neenu maduva kelasa inde maadu, aa naale emba maata munde doodu,

Naale enaguvudo ballavaru yaaru, nee inde gururayana smarane maadu ||


Iruvaaga, kaala doretaaga, samaya bandaaga, smarane  matradi baruva, karuna sagaranannu,

Arekshanavaadaru neneyo jeeva, neenu arekshanavaadaru neneyo jeeva,

Enondu, beku enabeda, aase padabeda, iruvalle manadalli sri raghavendrana,

Arekshanavaadaru dhyanisu sarthaka ||


Karedaaga, pasha esedaaga, yamanu seledaaga, naale baa endare hinde hoguvanenu,

Arekshanavaadaru bittu nilluvanenu, arekshanavaadaru bittu nilluvanenu,

Kadalannu daati baralaare giriya horalaare,  hanumantanante nee sevisalaare,

Arekshanavaadaru dhyanisu iddalle ||


Hagalirulu, emba maatilla, yaara hangilla, manavu nirmalavaagi, guruvalli beretaaga, 

Ninagaago aananda nudiye maatilla, ninagaago aananda nudiye maatilla,

Nenedavara, chinte kaleyuvanu, shanti needuvanu, 

Anugaala jotheyaagi konegaala bandaaga, nemmadiya tumbi kaluhisi koduvanamma ||


ಭಕ್ತಿಗೀತೆ 


ನಾಳೆ ನೀನು ಮಾಡುವ ಕೆಲಸ ಇಂದೇ ಮಾಡು ಆ ನಾಳೆ ಎಂಬ ಮಾತು ಮುಂದೆ ದೂಡು,

ನಾಳೆ ಎನಾಗುವುದೋ ಬಲ್ಲವರು ಯಾರು, ನೀ ಇಂದೇ ಗುರುರಾಯನ ಸ್ಮರಣೆ ಮಾಡು ।।ಪ।।


ಇರುವಾಗ ಕಾಲ ದೊರೆತಾಗ ಸಮಯ ಬಂದಾಗ ಸ್ಮರಣೆ ಮಾತ್ರದಿ ಬರುವಾ ಕರುಣಾಸಾಗರನನ್ನು,

 ಅರೆಕ್ಷಣವಾದರು ನೆನೆಯೋ ಜೀವ, ನೀನು ಅರೆಕ್ಷಣವಾದರು ನೆನೆಯೋ ಜೀವ,

ಏನೊಂದು, ಬೇಕು ಎನಬೇಡ, ಆಸೆ ಪಡಬೇಡ, ಇರುವಲ್ಲೇ ಮನದಲ್ಲಿ ಶ್ರೀ ರಾಘವೇಂದ್ರನ,

ಅರೆಕ್ಷಣವಾದರು ಧ್ಯಾನಿಸು ಸಾರ್ಥಕ ।।೧।।


ಕರೆದಾಗ, ಪಾಶ ಎಸೆದಾಗ, ಯಮನು ಸೆಳೆದಾಗ, ನಾಳೆ ಬಾ ಎಂದರೆ ಹಿಂದೆ ಹೋಗುವನೇನು, 

ಅರೆಕ್ಷಣವಾದರು ಬಿಟ್ಟು ನಿಲ್ಲುವನೇನು, ಅರೆಕ್ಷಣವಾದರು ಬಿಟ್ಟು ನಿಲ್ಲುವನೇನು,

ಕಡಲನ್ನು, ದಾಟಿ ಬರಲಾರೆ, ಗಿರಿಯ ಹೊರಲಾರೆ, ಹನುಮಂತನಂತೆ 

ನೀ ಸೇವಿಸಲಾರೆ,

ಅರೆಕ್ಷಣವಾದರೂ ಧ್ಯಾನಿಸು ಇದ್ದಲ್ಲೇ ।।೨।।


ಹಗಲಿರುಳು, ಎಂಬ ಮಾತಿಲ್ಲ ಯಾರ ಹಂಗಿಲ್ಲ, ಮನವು ನಿರ್ಮಲವಾಗಿ ಗುರುವಲ್ಲಿ ಬೆರೆತಾಗ,

ನಿನಗಾಗೋ ಆನಂದ ನುಡಿಯೇ ಮಾತಿಲ್ಲ, ನಿನಗಾಗೋ ಆನಂದ ನುಡಿಯೇ ಮಾತಿಲ್ಲ,

ನೆನೆದವರ, ಚಿಂತೆ ಕಳೆಯುವನು, ಶಾಂತಿ ನೀಡುವನು, 

ಅನುಗಾಲ ಜೊತೆಯಾಗಿ, ಕೊನೆಗಾಲ ಬಂದಾಗ, ನೆಮ್ಮದಿಯ ತುಂಬಿ ಕಳುಹಿಸಿ ಕೊಡುವನಮ್ಮ ।।೩।।

                                                           

Shubodaya (ಶುಭೋದಯ)

Naadageete

Sahitya: G S Shivarudrappa

Song link: Click Here


Navodayada kiranaleele

Kannadadee nelada mele

Shubhodayava teredide.


Nada nadigala neerinalli

Giri vanagala mudigalalli

Shilpa kalaa gaanakavya

Gudigopura shikharadalli.


Mugda jaanapadagalalli

Dagda nagara gondaladali

Yantra tantradattahaasa

Chakra gatiya pragatiyalli.


Halabaralli hosabaralli

Hiriyaralli kiriyaralli

Hosa chetanadusthahada

Chilume chimmuvedegalalli.


ನಾಡಗೀತೆ 


ನವೋದಯದ ಕಿರಣಲೀಲೆ 

ಕನ್ನಡದೀ ನೆಲದ ಮೇಲೆ 

ಶುಭೋದಯವ ತೆರೆದಿದೆ. 


ನದ ನದಿಗಳ ನೀರಿನಲ್ಲಿ 

ಗಿರಿವನಗಳ ಮುಡಿಗಳಲ್ಲಿ 

ಶಿಲ್ಪಕಲಾ ಗಾನಕಾವ್ಯ 

ಗುಡಿಗೋಪುರ ಶಿಖರದಲ್ಲಿ. 


ಮುಗ್ಧ ಜಾನಪದಗಳಲ್ಲಿ 

ದಗ್ಧನಗರ ಗೊಂದಲದಲಿ 

ಯಂತ್ರ ತಂತ್ರದಟ್ಟಹಾಸ 

ಚಕ್ರ ಗತಿಯ ಪ್ರಗತಿಯಲ್ಲಿ. 


ಹಳಬರಲ್ಲಿ ಹೊಸಬರಲ್ಲಿ 

ಹಿರಿಯರಲ್ಲಿ ಕಿರಿಯರಲ್ಲಿ 

ಹೊಸ ಚೇತನದುತ್ಸಾಹದ 

ಚಿಲುಮೆ ಚಿಮ್ಮುವೆಡೆಗಳಲ್ಲಿ. 

              

Monday, August 25, 2025

Swatantrayada Hanate (ಸ್ವಾತಂತ್ರ್ಯದ ಹಣತೆ)

ಪದ್ಯ 

ಸಾಹಿತ್ಯ : ಕೆ ಎಸ್ ನಿಸಾರ್ ಅಹಮದ್ 


 ಸದಾ ಉರಿಯುತಿರುವ ಹಾಗೆ ಸ್ವಾತಂತ್ರ್ಯದ ಹಣತೆ 

ದುಡಿಮೆ ತೈಲವೆರೆಯುತಿರಲು ಬಿಡುವಿಲ್ಲದೆ ಜನತೆ, 

ಎಂತು ಕುಂದಬಹುದು ಎಮ್ಮ ತಾಯ್ನಾಡಿನ ಘನತೆ ।।


ಮುಳ್ಳಿನಿಂದ ಅರಿವೆ ಬಿಡಿಸಿದಂತೆ ಬಂತೆ ಮುಕ್ತಿ ?

ಹುಲಿಯ ಬಾಯ ಮೇವ ಕಸಿಯುವಂತೆ ಧೀರಶಕ್ತಿ, 

ಪಡೆಯಿತದನು ಜನತೆ ಬಾಳ ಬೆಸೆಯೆ ನಾಡ ಭಕ್ತಿ ।।


ಸ್ವಾತಂತ್ರ್ಯದ ಜೊತೆಗೆ ಬಂದು ಕೂಡಲಿಲ್ಲ ಗಳಿಕೆ 

ವ್ಯಕ್ತಿ ವ್ಯಕ್ತಿ ಬೆವರ ಹೀರಿ ಮರವಾಗಿದೆ ಮೊಳಕೆ,

ಮೇಲೇರಿದ ಹಾಗೆ ಭದ್ರ ಪಾಯವುಂಟು ಗೃಹಕೆ ।।


ಸಾಗಿದಂತೆ ಸಲ್ಲುತ್ತಿರಲಿ ಸಾಧನೆಯೆಡೆ ಗಮನ 

ಪ್ರಾಣವನ್ನೆ ಪಗಡೆಯಾಡಿದವರಿಗೆಮ್ಮ ನಮನ,

ತಾಯ ಮುಡಿಗೆ ದಿನವು ಏರುತಿರಲಿ ಹೂವು ದವನ ।।


Padya


Sada uriyutiruva haage swatantrayada hanate

Dudime taila vereyutiralu biduvillade janate,

Entu kundabahudu emma tainaadina ghanate ||


Mullininda arive bidisidante bante mukti?

Huliya baaya meva kasiyuvante dheera shakti,

Padeyitadanu janate, baala beseye naada bhakti ||


Swatantrayada jothe bandu kudalilla galike

Vyakti vyakti bevara heeri maravaagide molake,

Melerida haage bhadra paayavuntu gruhake ||


Saagidante salutitali sadhaneyede gamana

Pranavanne pagadeyaadidavarigemma namana,

Taaya mudige dinavu erutirali hoovu davana ||

                                    

Wednesday, August 20, 2025

Malladada Giniye (ಮಲ್ಲಾಡದ ಗಿಣಿಯೇ)

Bhavageete

Sahitya: Da Ra Bendre

Song link: Click Here


Malladada giniye, neenillalladada kuliti yaka, ae giniye, ae giniye,

Pacche payarina naada acchu, accha ottida maiya siriye, ae giniye !


Hanna melitu balita, ninna, sanna chunchina kencha sobaga, ae giniye, ae giniye!

Maramaradakondu maata kalisi, maravattena maatina jaani, ae giniye, ae giniye!


Totadalle oota, ninna chellata, gaaligopuradaaga,.., 

Hindanagali bande illi kanda kadige baayi biduve, ae giniye, ae giniye!


Husiya ragali yaaka, innu hosa hosa baalina haadanu taara haara, ae giniye, ae giniye,

Moodana kempu moodidalli, hooda ninna hosa samsara, ae giniye, ae giniye!


ಭಾವಗೀತೆ 


ಮಲ್ಲಾಡದ ಗಿಣಿಯೇ, ನೀನಿಲ್ಲಲ್ಲಾಡದ ಕುಳಿತಿ ಯಾಕ, ಏ ಗಿಣಿಯೇ, ಏ ಗಿಣಿಯೇ,

ಪಚ್ಚೆಪಯರಿನ ನಾಡ ಅಚ್ಚು, ಅಚ್ಚ ಒತ್ತಿದ ಮೈಯ ಸಿರಿಯೇ, ಏ ಗಿಣಿಯೇ!


ಹಣ್ಣ ಮೆಲಿತು ಬಲಿತ, ನಿನ್ನ ಸಣ್ಣ ಚುಂಚಿನ ಕೆಂಚ ಸೊಬಗ, ಏ ಗಿಣಿಯೇ, ಏ ಗಿಣಿಯೇ,

ಮರಮರದಕೊಂದು ಮಾತ, ಕಲಿಸಿ ಮರವಟ್ಟೇನ ಮಾತಿನ ಜಾಣಿ, ಏ ಗಿಣಿಯೇ, ಏ ಗಿಣಿಯೇ!


ತೋಟದಲ್ಲೆ ಊಟ, ನಿನ್ನ ಚೆಲ್ಲಾಟ ಗಾಳಿಗೋಪುರದಾಗ.... ,

ಹಿಂಡನಗಲಿ ಬಂದೆ, ಇಲ್ಲಿ ಕಂಡ ಕಡಿಗೆ ಬಾಯಿ ಬಿಡುವೆ, ಏ ಗಿಣಿಯೇ, ಏ ಗಿಣಿಯೇ!


ಹುಸಿಯಾ ರಗಳಿ ಯಾಕ, ಇನ್ನು ಹೊಸ ಹೊಸ ಬಾಳಿನ ಹಾಡನು ತಾರಾ, ಹಾರ, ಏ ಗಿಣಿಯೇ, ಏ ಗಿಣಿಯೇ,

ಮೂಡಣ ಕೆಂಪು ಮೂಡಿದಲ್ಲಿ ಹೂಡ ನಿನ್ನ ಹೊಸ ಸಂಸಾರ, ಏ ಗಿಣಿಯೇ, ಏ ಗಿಣಿಯೇ!

              

Mohananga Ninna Sanga (ಮೋಹನಾಂಗ ನಿನ್ನ ಸಂಗ)

Movie: Mane Belagida Sose (1973)

Singer: Vani Jairam

Song link: Click Here


Krishna.. Muralilola..!

Mohananga ninna sanga, kori naa bandeno,

Ninna sere naa bandeno, baaro baa bayake salisi tanisi nalisu baa ||


Raasa leele olleyeno, ranginaata mareteyeno,

Yamuneyalli mindu kuniva, mojadindu bedaveno ||


Murali lola, gopa baala govinda madhava!


Jeevanaadi neene endu, jodi kudi aadalendu,

Odi banda veshadhaari, neene nanna sutradhari ||


ಚಿತ್ರಗೀತೆ 


ಕೃಷ್ಣಾ.. ಮುರಳಿಲೋಲ..! 

ಮೋಹನಾಂಗ ನಿನ್ನ ಸಂಗ, ಕೋರಿ ನಾ ಬಂದೆನೋ,

ನಿನ್ನ ಸೇರೆ ನಾ ಬಂದೆನೋ, ಬಾರೋ ಬಾ ಬಯಕೆ ಸಲಿಸಿ ತಣಿಸಿ ನಲಿಸು ಬಾ ।।ಪ।।


ರಾಸ ಲೀಲೆ ಒಲ್ಲೆಯೆನೋ, ರಂಗಿನಾಟ ಮರೆತೆಯೇನೋ,

ಯಮುನೆಯಲ್ಲಿ ಮಿಂದು ಕುಣಿವ, ಮೋಜದಿಂದು ಬೇಡವೇನೋ 

।।೧।।


ಮುರಳಿ ಲೋಲ ಗೋಪ ಬಾಲ ಗೋವಿಂದ ಮಾಧವ..! 


ಜೀವನಾಡಿ ನೀನೇ ಎಂದು, ಜೋಡಿ ಕೂಡಿ ಆಡಲೆಂದು,

ಓಡಿ ಬಂದ ವೇಷಧಾರಿ, ನೀನೇ ನನ್ನ ಸೂತ್ರಧಾರಿ ।।೨।।

                                       

Namaskara O Geleya (ನಮಸ್ಕಾರ ಓ ಗೆಳೆಯಾ)

Movie: Mane Belagida Sose (1973)

Singers: SPB, S Janaki

Song link: Click Here


Namaskara o geleya, mana seleda maharaaya,

Helu neenu kushalave, tanu mana soukyave ||


Namaskara o geleti, akkareya jothegaati,

Chinna ninna nenapali, hosa bala maiyali ||


Hattu naku mattu naku tumbidaaga, hadinentu savi hadinentu,

Matte matte kannu naku seridaaga, hosa nantu adu hosa nantu,

Hosa nantina jothe nurentu, honganasugala sihigantu,

Nee tande nanagende ||


Kaiyali nodi lekka maadi helu nalla enante mundenante,

Kannu mucchi helaballe nanella ondante, na vondante,

Idu endo balla purana, hosadenide helele jaana,

Kalyana namma kalyana ||


Hosadaari neenu tori nanagindu, guruvaade nee guruvaade,

Guruvige tirumantra haakaballa shishyanaade nee shishyanaade,

Guru dakshine needale ninage, adu endo sanditu nanage,

Sihi koduge entha sihi koduge ||


ಚಿತ್ರಗೀತೆ 


ನಮಸ್ಕಾರ ಓ ಗೆಳೆಯಾ, ಮನ ಸೆಳೆದ ಮಹರಾಯ,

ಹೇಳು ನೀನು ಕುಶಲವೇ, ತಾನು ಮನ ಸೌಖ್ಯವೇ ।।


ನಮಸ್ಕಾರ ಓ ಗೆಳೆತಿ, ಅಕ್ಕರೆಯ ಜೊತೆಗಾತಿ,

ಚಿನ್ನ ನಿನ್ನ ನೆನಪಲೀ, ಹೊಸ ಬಲ ಮೈಯಲಿ ।।


ಹತ್ತು ನಾಕು ಮತ್ತು ನಾಕು ತುಂಬಿದಾಗ, ಹದಿನೆಂಟು ಸವಿ ಹದಿನೆಂಟು,

ಮತ್ತೆ ಮತ್ತೆ ಕಣ್ಣು ನಾಕು ಸೇರಿದಾಗ, ಹೊಸ ನಂಟು ಅದು ಹೊಸ ನಂಟು,

ಹೊಸ ನಂಟಿನ ಜೊತೆ ನೂರೆಂಟು, ಹೊಂಗನಸುಗಳ ಸಿಹಿಗಂಟು,

ನೀ ತಂದೆ ನನಗೆಂದೇ ।।


ಕೈಯಲ್ಲಿ ನೋಡಿ ಲೆಖ್ಖ ಮಾಡಿ ಹೇಳುನಲ್ಲ, ಏನಂತೆ ಮುಂದೇನಂತೆ,

ಕಣ್ಣು ಮುಚ್ಚಿ ಹೇಳಬಲ್ಲೆ ನಾನೆಲ್ಲಾ, ಒಂದಂತೆ  ನಾವೊಂದಂತೆ,

ಇದು ಎಂದೋ ಬಲ್ಲ ಪುರಾಣ, ಹೊಸದೇನಿದೆ ಹೇಳೆಲೆ ಜಾಣ,

ಕಲ್ಯಾಣ ನಮ್ಮ ಕಲ್ಯಾಣ ।।


ಹೊಸದಾರಿ ನೀನು ತೋರಿ ನನಗಿಂದು, ಗುರುವಾದೆ ನೀ ಗುರುವಾದೆ,

ಗುರುವಿಗೆ ತಿರುಮಂತ್ರ ಹಾಕಬಲ್ಲ, ಶಿಷ್ಯನಾದೆ ನೀ ಶಿಷ್ಯನಾದೆ,

ಗುರು ದಕ್ಷಿಣೆ ನೀಡಲೇ ನಿನಗೆ, ಅದು ಎಂದೋ ಸಂದಿತು ನನಗೆ,

ಸಿಹಿ ಕೊಡುಗೆ ಎಂಥಾ ಸಿಹಿ ಕೊಡುಗೆ ।।

                      

Sunday, August 17, 2025

Anda Chenda Tumbi Banda (ಅಂದ ಚಂದ ತುಂಬಿ ಬಂದ)

Movie: Manebelagida Sose (1973)

Singers: P B Srinivas, S Janaki

Song link: Click Here


Anda chenda tumbi banda, aanandada hosa prayavidu,

Indu untu naale iradu, kaaledu hodare marali baaradu ||


Olle vayasu olapu sogasu, olle annade oliyo manasu,

Sarasa bayasi sai ennuvaaga, saviya beeku adara sobaga ||


Mai balavu manada amalu, maagi muditana musuki baralu,

Nenesi bayasi bekenalaaga, siguvudilla sukhada bhoga ||


Kaiya hidida iniyanodane, koodi baaluta nalidu lalane,

Nadeso baduke bangaaravamma, satige iduve neeti nema ||


ಚಿತ್ರಗೀತೆ 


ಅಂದ ಚಂದ ತುಂಬಿ ಬಂದ, ಆನಂದದ ಹೊಸ ಪ್ರಾಯವಿದು,

ಇಂದು ಉಂಟು ನಾಳೆ ಇರದು, ಕಳೆದು ಹೋದರೆ ಮರಳಿ ಬಾರದು 

।।ಪ।।


ಒಳ್ಳೆ ವಯಸು ಒಲಪು ಸೊಗಸು, ಒಲ್ಲೆ ಅನ್ನದೆ ಒಲಿಯೋ ಮನಸು,

ಸರಸ ಬಯಸಿ ಸೈ ಎನ್ನುವಾಗ, ಸವಿಯ ಬೇಕು ಅದರ ಸೊಬಗ 

।।೧।।


ಮೈ ಬಲವು ಮನದ ಅಮಲು, ಮಾಗಿ ಮುದಿತನ ಮುಸುಕಿ ಬರಲು,

ನೆನೆಸಿ ಬಯಸಿ ಬೇಕೆನಲಾಗ , ಸಿಗುವುದಿಲ್ಲ ಸುಖದ ಭೋಗ ।।೨।।


ಕೈಯ ಹಿಡಿದ ಇನಿಯನೊಡನೆ, ಕೂಡಿ ಬಾಳುತ ನಲಿದು ಲಲನೆ,

ನಡೆಸೋ ಬದುಕೇ ಬಂಗಾರವಮ್ಮಾ, ಸತಿಗೆ ಇದುವೆ ನೀತಿ ನೇಮ 

।।೩।।

                                  

Baa Baara Nageya Taara (ಬಾ ಬಾರಾ ನಗೆಯ ತಾರಾ)

Movie: Manebelagida Sose (1973)

Singer: Vani Jairam

Song link: Click Here


Baa baara nageya taara, chouti cheluvu tanda sundara,

Baala bhagyada chandira ||


Naguva nandana nee taruve, ninna muddisi naa nalive, 

Neenu nammaya kalpa taruve, neenu bandire naanu geluve ||


Ambegaalina nanda kishorane, gokula venisuva namma ee mane,

Ella manava gelluva cheluvane, nalme tolina baala gopala ||


Mane mandiya mana ondaagiside, sundara kanasina nija roopade,

Chendada baalina munnudi barede, bhagya chandrane ilidu bande ||


ಚಿತ್ರಗೀತೆ 


ಬಾ ಬಾರಾ ನಗೆಯ ತಾರಾ, ಚೌತಿ ಚೆಲುವು ತಂದ ಸುಂದರ,

ಬಾಳ ಭಾಗ್ಯದ ಚಂದಿರ ।।ಪ।।


ನಗುವ ನಂದನ ನೀ ತರುವೆ, ನಿನ್ನ ಮುದ್ದಿಸಿ ನಾ ನಲಿವೆ,

ನೀನು ನಮ್ಮಯ ಕಲ್ಪ ತರುವೆ, ನೀನು ಬಂದಿರೆ ನಾನು ಗೆಲುವೆ

 ।।೧।।


ಅಂಬೆಗಾಲಿನ ನಂದ ಕಿಶೋರನೆ, ಗೋಕುಲ ವೆನಿಸುವ ನಮ್ಮ ಈ ಮನೆ,

ಎಲ್ಲ ಮನವ ಗೆಲ್ಲುವ ಚೆಲುವನೆ, ನಲ್ಮೆ ತೋಳಿನ ಬಾಲ ಗೋಪಾಲ 

।।೨।।


ಮನೆ ಮಂದಿಯ ಮನ ಒಂದಾಗಿಸಿದೆ, ಸುಂದರ ಕನಸಿನ ನಿಜ ರೂಪಾದೆ,

ಚೆಂದದ ಬಾಳಿನ ಮುನ್ನುಡಿ ಬರೆದೆ, ಭಾಗ್ಯ ಚಂದ್ರನೆ ಇಳಿದು ಬಂದೆ 

।।೩।।

                                                                   

Olava Raviye Nee Moodi Baa (ಒಲವಾ ರವಿಯೇ ನೀ ಮೂಡಿ ಬಾ)

Movie: Manebelagida Sose (1973)

Song link: Click Here


Olava raviye nee moodi ba,

Manju tereya nee doodi baa,

Baala maneya belakaagi baa ||


Sogada kanasu kai gudidare,

Manasu manasu ondaagire,

Madhura milana ekantade,

Pranaya madhuvu bekaagade ||


Bayake balli kai needire,

Needu ninna tolaasare,

Hrudaya maneya hoobanake,

Elle illa aanandake ||


Olava gelavu nijavayitu,

Chalavu sotu sharanayitu,

Prema pooje phala needitu,

Madhura maitri chiravayitu ||


ಚಿತ್ರಗೀತೆ 


ಒಲವಾ ರವಿಯೇ ನೀ ಮೂಡಿ ಬಾ,

ಮಂಜು ತೆರೆಯ ನೀ ದೂಡಿ ಬಾ,

ಬಾಳ ಮನೆಯ ಬೆಳಕಾಗಿ ಬಾ ।।ಪ।।


ಸೊಗದ ಕನಸು ಕೈ ಗೂಡಿದರೆ,

ಮನಸು ಮನಸು ಒಂದಾಗಿರೆ,

ಮಧುರ ಮಿಲನ ಏಕಾಂತದೆ,

ಪ್ರಣಯ ಮಧುವು ಬೇಕಾಗದೇ ।।೧।।


ಬಯಕೆ ಬಳ್ಳಿ ಕೈ ನೀಡಿರೆ,

ನೀಡು ನಿನ್ನ ತೋಳಾಸರೆ,

ಹೃದಯ ಮಣೆಯ ಹೂಬಾಣಕೆ,

ಎಲ್ಲೆ ಇಲ್ಲ ಆನಂದಕೆ ।।೨।।


ಒಲವ ಗೆಲವು ನಿಜವಾಯಿತು,

ಛಲವು ಸೋತು ಶರಣಾಯಿತು,

ಪ್ರೇಮ ಪೂಜೆ ಫಲ ನೀಡಿತು,

ಮಧುರ ಮೈತ್ರಿ ಚಿರವಾಯಿತು ।।೩।।

           

Thursday, August 14, 2025

Maariye Gatiyendu (ಮಾರಿಯೇ ಗತಿಯೆಂದು)

Movie: Bhootayyana Maga Ayyu (1974)

Singers: P B Srinivas, G K Venktesh

Song link: Click Here


Maariye gatiyendu, maneesu tappendu,

Makkaalu naavu bandevu,

Ella kaanike tandevu, ninna nambi baalevu!


Taayiya dayegaagi bandevu talebaagi,

Byane baradante, shyane naguvante,

Hettavva dikkagi kaapadu endevu ||


Bettada taayi sittagadante, kattu nittagi nadedevu,

Ishtada varava kottalu endu, gattyagi paada hididevu ||


Baragaala peede baradene iralu, sonku rogavu dooragalu,

Huyllada koylu sankranti taralu, maramma neene bengavalu ||


ಚಿತ್ರಗೀತೆ 


ಮಾರಿಯೇ ಗತಿಯೆಂದು, ಮನ್ನೀಸು ತಪ್ಪೆಂದು,

ಮಕ್ಕಾಳು ನಾವು ಬಂದೇವು, 

ಎಲ್ಲಾ ಕಾಣಿಕೆ ತಂದೇವು, ನಿನ್ನ ನಂಬಿ ಬಾಳೇವು!


ತಾಯಿಯ ದಯೆಗಾಗಿ ಬಂದೇವೂ ತಲೆಬಾಗಿ,

ಬ್ಯಾನೆ ಬರದಂತೆ, ಶ್ಯಾನೆ ನಗುವಂತೆ,

ಹೆತ್ತವ್ವ ದಿಕ್ಕಾಗಿ ಕಾಪಾಡು ಎಂದೇವು ।।


ಬೆಟ್ಟಾದ ತಾಯಿ ಸಿಟ್ಟಾಗದಂತೆ, ಕಟ್ಟೂ ನಿಟ್ಟಾಗಿ ನಡೆದೆವು,

ಇಷ್ಟಾದ ವರವಾ ಕೊಟ್ಟಾಳು ಎಂದು, ಗಟ್ಯಾಗಿ ಪಾದಾ ಹಿಡಿದೇವು ।।


ಬರಗಾಲ ಪೀಡೆ ಬರದೇನೆ ಇರಲು, ಸೋಂಕು ರೋಗವು ದೂರಾಗಲು,

ಹುಯ್ಲಾದ ಕೊಯ್ಲು ಸಂಕ್ರಾಂತಿ ತರಲು, ಮಾರಮ್ಮ ನೀನೇ ಬೆಂಗಾವಲು ।।

                                   

Malenaada Henna Maibanna (ಮಲೆನಾಡ ಹೆಣ್ಣ ಮೈ ಬಣ್ಣ)

Movie: Bhootayyana Maga Ayyu (1974)

Singers: P B Srinivas, S Janaki

Song link: Click Here


Malenaada henna maibanna, balu chenna,

Aa nadu sanna, aha manasotene chinna,

Na manasotene chinna!


Bayalu seemeya gandu balu gundu, 

Jaga mondu, dundu hoo chendu,

Nana saradaage rasagundu!


Maatu nindu huridaaharalu sididange,

Kannugalu minchange,

Nina nageyalle seledyalle, manadaage nintyalle,

Nana, manadaage nintyalle!


Kaadabedi nodiyaaru nannoru, nanna hiriyoru,

Bidi nanna kaiya, dammaya, tuntaata sakayya,

Ee tuntaata sakaya!


Dooradinda bande ninna hambalisi,

geletana naa bayasi,

Ada naa balle naa balle, nachi moggade nanille

Nachi Moggade nanille!


ಚಿತ್ರಗೀತೆ 


ಮಲೆನಾಡ ಹೆಣ್ಣ ಮೈ ಬಣ್ಣ, ಬಲು ಚೆನ್ನಾ,

ಆ ನಡು ಸಣ್ಣ, ಅಹಾ ಮನಸೋತೆನೇ ಚಿನ್ನಾ,

ನಾ ಮನಸೋತೆನೇ ಚಿನ್ನಾ!


ಬಯಲು ಸೀಮೆಯ ಗಂಡು ಬಲುಗುಂಡು,

ಜಗಮೊಂಡು ದುಂಡು ಹೂ ಚೆಂಡು,

ನನ ಸರದಾಗೆ ರಸಗುಂಡು!


ಮಾತು ನಿಂದು ಹುರಿದಾಹರಳು ಸಿಡಿದಂಗೆ,

ಕಣ್ಣುಗಳು ಮಿಂಚಂಗೆ, 

ನಿನ ನಗೆಯಲ್ಲೆ ಸೆಲೆದ್ಯೆಲ್ಲೇ, ಮನದಾಗೆ ನಿಂತ್ಯಲ್ಲೇ,

ನನ, ಮನದಾಗೆ ನಿಂತ್ಯಲ್ಲೇ!


ಕಾಡಬೇಡಿ ನೋಡಿಯಾರು ನನ್ನೋರು, ನನ ಹಿರಿಯೋರು,

ಬಿಡಿ ನನ್ನ ಕೈಯ್ಯಾ ದಮ್ಮಯ್ಯಾ, ತುಂಟಾಟ ಸಾಕಯ್ಯ,

ಈ  ತುಂಟಾಟ ಸಾಕಯ್ಯ!


ದೂರದಿಂದ ಬಂದೆ ನಿನ್ನ ಹಂಬಲಿಸಿ, ಗೆಳೆತನ ನಾ ಬಯಸಿ,

ಅದ ನಾ ಬಲ್ಲೆ ನಾ ಬಲ್ಲೆ, ನಾಚಿ ಮೊಗ್ಗಾದೆ ನಾನಿಲ್ಲೆ,

ನಾಚಿ ಮೊಗ್ಗಾದೆ ನಾನಿಲ್ಲೆ!

           

Virasavemba Vishake (ವಿರಸವೆಂಬ ವಿಷಕೆ)

Movie: Bhootayyana Maga Ayyu (1974)

Singer: G K Venktesh

Song link: Click Here


Virasavemba vishake, baliyaade etake,

Sukha shanti nashake, marula ||


Geluva chalava hondi manadali,

Sedinindali kidiyaagi hatadali,

Saalavennuva aa shulaveruva,

Gatiyayte manava ||


Bandhu balaga nentarellaru,

Gantu hogalu innelli niluvaru,

Labha yaarigo, santaapa yaarigo,

Vidhi leele enido ||


ಚಿತ್ರಗೀತೆ 


ವಿರಸವೆಂಬ ವಿಷಕೆ, ಬಲಿಯಾದೆ ಏತಕೆ,

ಸುಖ ಶಾಂತಿ ನಾಶಕೆ, ಮರುಳಾ ।।ಪ।।


ಗೆಲುವ ಛಲವ ಹೊಂದಿ ಮನದಲೀ,

ಸೇಡಿನಿಂದಲೀ ಕಿಡಿಯಾಗಿ ಹಟದಲಿ,

ಸಾಲವೆನ್ನುವ ಆ ಶೂಲವೇರುವ,

ಗತಿಯಾಯ್ತೆ ಮಾನವ ।।೧।।


ಬಂಧು ಬಳಗ ನೆಂಟರೆಲ್ಲರೂ,

ಗಂಟು ಹೋಗಲೂ ಇನ್ನೆಲ್ಲಿ ನಿಲುವರು,

ಲಾಭ ಯಾರಿಗೋ, ಸಂತಾಪ ಯಾರಿಗೋ,

ವಿಧಿ ಲೀಲೇ ಏನಿದೋ ।।೨।।

       

Sobaana Sobaana (ಸೋಬಾನ ಸೋಬಾನ)

Movie: Bhootayyana Maga Ayyu (1974)

Singer: Vani Jairam

Song link: Click Here


Sobaana sobaana sobaanave, 

Sobaana sobaana sobaanave,

Sobaana embodu shivanige, 

Sobaana embodu srigourige!


Chendadaa hasemele sundara kulitaane,

Indu kankanava todiseere,

Indu kankanava todiseere cheluvege,

Chendanada gombe maadevige!


Akkatangeru bandu muttinaarati etti,

Kareyiri varanannu mantapake,

Sodara mavayya karetannirayya,

Dharege vadhuvannu.., nimma tourina belakannu..!


Hejje ittare saveyole, lajjege nelava kereyole,

Ninnaya gandana hesarhele (bulla)

Kaddu hendira nodone, muddu mukhake sotone,

Ninnaya hendatiya hesarhelu (madevi)!


ಚಿತ್ರಗೀತೆ 


ಸೋಬಾನ ಸೋಬಾನ ಸೋಬಾನವೇ,

ಸೋಬಾನ ಸೋಬಾನ ಸೋಬಾನವೇ,

ಸೋಬಾನ ಎಂಬೋದು ಶಿವನಿಗೆ,

ಸೋಬಾನ ಎಂಬೋದು ಶ್ರೀಗೌರಿಗೇ ।।ಪ।।


ಚಂದಾದಾ ಹಸೆಮೇಲೆ ಸುಂದರ ಕುಳಿತಾನೆ,

ಇಂದು  ಕಂಕಣವಾ ತೊಡಿಸೀರೇ,

ಇಂದು  ಕಂಕಣವಾ ತೊಡಿಸೀರೇ ಚೆಲುವೆಗೆ,

ಚಂದನದಾ ಗೊಂಬೆ ಮಾದೇವಿಗೇ ।।೧।।


ಅಕ್ಕ ತಂಗೇರು ಬಂದು ಮುತ್ತಿನಾರತಿ ಎತ್ತಿ,

ಕರೆಯಿರಿ ವರನನ್ನು ಮಂಟಪಕೆ,

ಸೋದರ ಮಾವಯ್ಯ ಕರೆತನ್ನಿರಯ್ಯಾ,

ಧಾರೆಗೆ ವಧುವನ್ನು.., ನಿಮ್ಮ ತೌರಿನ ಬೆಳಕನ್ನು..!


ಹೆಜ್ಜೆ ಇಟ್ಟರೆ ಸವೆಯೋಳೆ, ಲಜ್ಜೆಗೆ ನೆಲವಾ ಕೆರೆಯೋಳೆ,

ನಿನ್ನಯ ಗಂಡನ ಹೆಸರ್ಹೇಳೆ, (ಬುಳ್ಳ)

ಕದ್ದು ಹೆಂಡಿರ ನೋಡೋನೇ, ಮುದ್ದು ಮುಖಕೆ ಸೋತೋನೇ,

ನಿನ್ನಯ ಹೆಂಡತಿಯ ಹೆಸರ್ಹೇಳು, (ಮಾದೇವಿ) ! 

                

Monday, August 11, 2025

Ettalo Maayavaada Muttina Muguti Neenu (ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು)

Bhaktigeete

Singer: Dr. Rajkumar

Song link: Click Here


Ettalo maayavaada muttina muguti neenu,

Etti tande elinda raaya muttetta raaya,

Atta seetammana muddu mogadalli matte,

Nageya tandeya mahaneeya.. maarutiraaya.. ||


Seetamma snana maadi mugutiya hudukaadi,

Ninna kugidaleno hanumantaraaya,

Neeralli baala bittu nadiyanne shodhiside,

Entha shreddeyo mahaneeya.. hanumantaraaya.. ||


Amma seetammanu ninna bhaktige mecchi,

Muttetta raayanendu harasidalenu,

Ninnantha daasananu padeda aa ramanu,

Entha bhagyavanthanayya.. marutiraaya.. ||


Ninnante bhakti illa, ninnante shakti illa,

Enu illada jeeva nannadu swami,

Ninnane naa nambi bande, neene nanna tayi-tande,

Kaapaduva honeyu ninnadu.. tande ninnadu.. ||


ಭಕ್ತಿಗೀತೆ 


ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು,

ಎತ್ತಿ ತಂದೆ ಎಲ್ಲಿಂದ ರಾಯಾ ಮುತ್ತೆತ್ತ ರಾಯಾ,

ಅತ್ತ ಸೀತಮ್ಮನ ಮುದ್ದು ಮೊಗದಲ್ಲಿ ಮತ್ತೆ,

ನಗೆಯ ತಂದೆಯಾ ಮಹನೀಯಾ.. ಮಾರುತಿರಾಯಾ.. ।।ಪ।।


ಸೀತಮ್ಮ ಸ್ನಾನ ಮಾಡಿ ಮೂಗುತಿಯ ಹುಡುಕಾಡಿ,

ನಿನ್ನ ಕೂಗಿದಳೇನೋ ಹನುಮಂತರಾಯಾ,

ನೀರಲ್ಲಿ ಬಾಲ ಬಿಟ್ಟು ನದಿಯನ್ನೇ ಶೋಧಿಸಿದೆ,

ಎಂಥ ಶ್ರದ್ಧೆಯೋ ಮಹನೀಯ.. ಹನುಮಂತರಾಯಾ.. ।।೧।।


ಅಮ್ಮಾ ಸೀತಮ್ಮನು ನಿನ್ನಾ ಭಕ್ತಿಗೆ ಮೆಚ್ಚಿ,

ಮುತ್ತೆತ್ತರಾಯನೆಂದು ಹರಸಿದಳೇನು,

ನಿನ್ನಂಥಾ ದಾಸನನು ಪಡೆದಾ ಆ ರಾಮನು,

ಎಂಥ ಭಾಗ್ಯವಂತನಯ್ಯ.. ಮಾರುತಿರಾಯ.. ।।೨।।


ನಿನ್ನಂತೆ ಭಕ್ತಿ ಇಲ್ಲ, ನಿನ್ನಂತೆ ಶಕ್ತಿ ಇಲ್ಲ,

ಏನೂ ಇಲ್ಲದ ಜೀವ ನನ್ನದು ಸ್ವಾಮಿ,

ನಿನ್ನನೆ ನಾ ನಂಬಿ ಬಂದೆ, ನೀನೇ ನನ್ನ ತಾಯಿ-ತಂದೆ,

ಕಾಪಾಡುವ ಹೊಣೆಯು ನಿನ್ನದು.. ತಂದೆ ನಿನ್ನದು.. ।।೩।।

                           

Balige Baa Nee Balige Baa (ಬಳಿಗೆ ಬಾ ನೀ ಬಳಿಗೆ ಬಾ)

Movie: Gaadalli Cid999 (1968)

Singer: L R Eshwari

Song link: Click Here


Balige baa, nee balige baa,

Aarihudu deepa, neralinali naa,

Beduvuda nee taa ||


Ekantavo karedihudu,

Vinodake samayavidu,

Yaava chinteyali nee mulugiruve,

Mare mare bere ||


Santoshavo edurinali,

Saavembudu musukinali,

Ninna tolinali naa sereyiralu,

Ade sukha sukha ||


ಚಿತ್ರಗೀತೆ 


ಬಳಿಗೆ ಬಾ - ನೀ ಬಳಿಗೆ ಬಾ,

ಆರಿಹುದು ದೀಪಾ, ನೆರಳಿನಲಿ ನಾ,

ಬೇಡುವುದ ನೀ ತಾ ।।ಪ।।


ಏಕಾಂತವೋ ಕರೆದಿಹುದು,

ವಿನೋದಕೇ ಸಮಯವಿದು,

ಯಾವ ಚಿಂತೆಯಲಿ ನೀ ಮುಳುಗಿರುವೆ,

ಮರೇ ಮರೇ ಬೆರೇ ।।೧।।


ಸಂತೋಷವೋ ಎದುರಿನಲಿ,

ಸಾವೆಂಬುದು ಮುಸುಕಿನಲಿ,

ನಿನ್ನ ತೋಳಿನಲಿ ನಾ ಸೆರೆಯಿರಲು,

ಅದೇ ಸುಖ ಸುಖ ।।೨।।

                  

Saturday, August 9, 2025

Ee Cheluvanu Kadeda Devanige (ಈ ಚೆಲುವನು ಕಡೆದಾ ದೇವನಿಗೆ)

Movie: Seeta (1970)

Singer: P B Srinivas

Song link: Click Here


Ee cheluvanu kadeda devanige,

Vandane abhinandane,

Ee sobaganu kanda kangalige,

Vandane abhinandane ||


Muttina maleyu karedaaga,

Aarisikollalu naa bande,

Aa garivaayitu nanage,

Aa garivaayitu aa muttu,

Ninnaya kilakila nageyende ||


Hunnime andave hennayto,

Tavare avala kannayto,

Sundari nee baha daari,

Sundari nee baha daariyadu,

Hoogalu naguva vanavayto ||


Ninaginta ninna nenape chenda,

Ninnante adu nachadu,

Mincholu baruve neenu,

Mincholu baruve, mincholu hoguve,

Adu ninnanu toreyadu ||


ಚಿತ್ರಗೀತೆ 


ಈ ಚೆಲುವನು ಕಡೆದಾ ದೇವನಿಗೆ,

ವಂದನೆ ಅಭಿನಂದನೆ,

ಆ ಸೊಬಗನು ಕಂಡ ಕಂಗಳಿಗೆ,

ವಂದನೆ ಅಭಿನಂದನೆ ।।ಪ।।


ಮುತ್ತಿನ ಮಳೆಯು ಕರೆದಾಗ,

ಆರಿಸಿಕೊಳ್ಳಲು ನಾ ಬಂದೆ,

ಆಗರಿವಾಯಿತು ನನಗೆ,

ಆಗರಿವಾಯಿತುಆ ಮುತ್ತು,

ನಿನ್ನಯ ಕಿಲಕಿಲ ನಗೆಯೆಂದೇ ।।೧।।


ಹುಣ್ಣಿಮೆ ಅಂದವೇ ಹೆಣ್ಣಾಯ್ತೋ,

ತಾವರೆ ಅವಳ ಕಣ್ಣಾಯ್ತೋ,

ಸುಂದರಿ ನೀ ಬಹ ದಾರಿ,

ಸುಂದರಿ ನೀ ಬಹ ದಾರಿಯದು,

ಹೂಗಳು ನಗುವ ವಾನವಾಯ್ತೋ ।।೨।।


ನಿನಗಿಂತ ನಿನ್ನ ನೆನಪೇ ಚೆಂದ,

ನಿನ್ನಂತೆ ಅದು ನಾಚದು,

ಮಿಂಚೊಲು ಬರುವೆ ನೀನು,

ಮಿಂಚೊಲು ಬರುವೆ, ಮಿಂಚೊಲು ಹೋಗುವೆ,

ಅದು ನಿನ್ನನು ತೊರೆಯದು ।।೩।।

          

Maduveya Ee Banda (ಮುದುವೆಯ ಈ ಬಂಧಾ)

Movie: Seeta (1970)

Singer: SPB

Song link: Click Here


Shubhashaya, Shubhashaya..!

Madu maganigu - madumagaligu,

Shubhashaya !

Hosa hareyada - hosa jodige,

Shubhashaya !


Maduveya ee bandha, anuraagada anubandha,

Elelu janumadalu teerada sambandha ||


Saviyaada maatu, sihiyaada oota,

Sogasaada notavirali,

Mane tumbuvantha nage chelluvantha,

Muddada maguvu barali ||


Manasannu aritu ondagi beretu,

Nadedaaga baalu kavite,

Nurondu varusha chellirali harusha,

Belagirali olava hanate ||


Siritanada sihiyo, badatanada kahiyo,

Nimagendu onde irali,

Samanaada preeti toruvude reeti,

Birugaali ene barali ||


ಚಿತ್ರಗೀತೆ 


ಶುಭಾಶಯ - ಶುಭಾಶಯ! 

ಮದು ಮಗನಿಗೂ  - ಮದು  ಮಗಳಿಗೂ,

ಶುಭಾಶಯ !

ಹೊಸ ಹರೆಯದಾ - ಹೊಸ ಜೋಡಿಗೆ,

ಶುಭಾಶಯ!


ಮುದುವೆಯ ಈ ಬಂಧಾ, ಅನುರಾಗದ ಅನುಬಂಧಾ,

ಏಳೇಳು ಜನುಮದಳು ತೀರದ ಸಂಬಂಧ ।।ಪ।।


ಸವಿಯಾದ ಮಾತು ಸಿಹಿಯಾದ ಊಟ,

ಸೊಗಸಾದ ನೋಟವಿರಲಿ,

ಮನೆ ತುಂಬುವಂಥ ನಗೆ ಚೆಲ್ಲುವಂಥ,

ಮುದ್ದಾದ ಮಗುವು ಬರಲಿ ।।೧।।


ಮನಸನ್ನು ಅರಿತು ಒಂದಾಗಿ ಬೆರೆತು,

ನಡೆದಾಗ ಬಾಳು ಕವಿತೆ,

ನೂರೊಂದು ವರುಷ ಚೆಲ್ಲಿರಲಿ ಹರುಷ,

ಬೆಳಗಿರಲಿ ಒಲವ ಹಣತೆ ।।೨।।


ಸಿರಿತನದ ಸಿಹಿಯೋ ಬಡತನದ ಕಹಿಯೋ,

ನಿಮಗೆಂದು ಒಂದೇ ಇರಲಿ,

ಸಮನಾದ ಪ್ರೀತಿ ತೋರುವುದೇ ರೀತಿ ,

ಬಿರುಗಾಳಿ ಏನೇ ಬರಲಿ ।।೩।।

               

Tuesday, August 5, 2025

Ninna Mana Mecchisalu (ನಿನ್ನಾ ಮನ ಮೆಚ್ಚಿಸಲು)

Bhaktigeete

Singer: Dr. Rajkumar

Song link: Click Here


Ninna mana mecchisalu, ninna naa archisalu,

Enu maadali helu pavanasuta ||


Abhisheka maadidare hanihaniya huduki,

Sri ramaniruvane endu nee noduve,

Poojeyanu maadidare hoovugala kedaki,

Aa ramaniruvane endu nee keluve ||


Mutt ratnada haara koralali haakidare,

Muttu ratnava odedu nee noduve,

Mani maniya churinalu sri ramachandiranu,

Kaanuvane endu nee hudukaaduve ||


Ninnedeya gudiyalli ramanu stiravaagiralu,

Heegeke nee swami hambalisuve,

Nanna mana mandiradi kshana kaala nee nelesu,

Ninnodane sri ramana naa kaanuve ||


ಭಕ್ತಿಗೀತೆ 


ನಿನ್ನಾ ಮನ ಮೆಚ್ಚಿಸಲು, ನಿನ್ನಾ ನಾ ಅರ್ಚಿಸಲು,

ಏನು ಮಾಡಲಿ ಹೇಳು ಪವನಸುತ ।।ಪ।।


ಅಭಿಷೇಕ ಮಾಡಿದರೆ ಹನಿ ಹನಿಯ ಹುಡುಕಿ,

ಶ್ರೀ ರಾಮನಿರುವನೇ ಎಂದು ನೀ ನೋಡುವೆ,

ಪೂಜೆಯನು ಮಾಡಿದರೆ ಹೂವುಗಳ ಕೆದಕಿ,

ಆ ರಾಮನಿರುವನೇಎಂದು ನೀ ಕೇಳುವೆ ।।೧।।


ಮುತ್ತು ರತ್ನದ ಹಾರ ಕೊರಳಲಿ ಹಾಕಿದರೆ,

ಮುತ್ತು ರತ್ನವ ಒಡೆದು ನೀ ನೋಡುವೆ,

ಮಣಿ ಮಣಿಯ ಚೂರಿನಲೂ ಶ್ರೀ ರಾಮಚಂದಿರನು,

ಕಾಣುವನೆ ಎಂದು ನೀ ಹುಡುಕಾಡುವೆ ।।೨।।


ನಿನ್ನೆದೆಯ ಗುಡಿಯಲ್ಲಿ ರಾಮನು ಸ್ಥಿರವಾಗಿರಲು,

ಹೀಗೇಕೆ'ನೀ ಸ್ವಾಮಿ ಹಂಬಲಿಸುವೆ,

ನನ್ನಾ ಮನ ಮಂದಿರದಿ ಕ್ಷಣ ಕಾಲ ನೆಲೆಸು,

ನಿನ್ನೊಡನೆ ಶ್ರೀ ರಾಮನ ನಾ ಕಾಣುವೆ ।।೩।।

                           

Doora Bahudoora Hoguva Baara (ದೂರ ಬಹುದೂರ ಹೋಗುವ ಬಾರಾ)

Bhavageete

Sahitya: Kuvempu

Song link: Click Here


Doora! bahudoora! hoguva baara !

Alli ihudemma oora teera (2) ||


Jalajaladalegala melkunidaadi,

Balalike tolalikegalanella doodi,

Geluvina uligala haadi,

Olumeya maatadi,

Hakkigalinchara keli, aanandava taali ||


Himamani kanagala sinchita anchina,

Hasurina teerada melaadi,

Kisalaya kampanadimpanu nodi,

Koodi aadi nodi haadi,

Teli teli hoguva baara, allihudemma oora teera ||


ಭಾವಗೀತೆ 


ದೂರ ! ಬಹುದೂರ ! ಹೋಗುವ ಬಾರಾ !

ಅಲ್ಲೀ ಇಹುದೆಮ್ಮಾ ಊರಾ ತೀರಾ (೨) ।।ಪ।।


ಜಲಜಲದಲೆಗಳ ಮೇಲ್ಕುಣಿದಾಡಿ, 

ಬಳಲಿಕೆ ತೊಳಲಿಕೆಗಳನೆಲ್ಲ ದೂಡಿ,

ಗೆಲುವಿನ ಉಲಿಗಳ ಹಾಡಿ, 

ಒಲುಮೆಯ ಮಾತಾಡಿ, 

ಹಕ್ಕಿಗಳಿಂಚರ ಕೇಳಿ, ಆನಂದವ ತಾಳಿ !


ಹಿಮಮಣಿ ಕಣಗಳ ಸಿಂಚಿತ ಅಂಚಿನ, 

ಹಸುರಿನ ತೀರದ ಮೇಲಾಡಿ, 

ಕಿಸಲಯ ಕಂಪನದಿಂಪನು ನೋಡಿ, 

ಕೂಡಿ ಆಡಿ ನೋಡಿ ಹಾಡಿ, 

ತೇಲಿ ತೇಲಿ ಹೋಗುವಾ ಬಾರಾ, ಅಲ್ಲಿಹುದೆಮ್ಮಾ ಊರ ತೀರ !

                                        

Kanngale Heliri Manasina Korike (ಕಣ್ಗಳೇ ಹೇಳಿರಿ ಮನಸಿನಾ ಕೋರಿಕೆ)

Movie: Goadalli Cid999 (1968)

Singer: L R Eshwari

Song link: Click Here


Kanngale heliri manasina korike,

Tutigale tilisiri bayasida kaanike ||

(What is it tell me)


Eko ee kampana, eko ee nachike,

Katura tumbide iniyana sangake,

Aase moodide nooru maatanadide,

Prema tumbi bandide, o priya ||

(Oh baby baby)

(Don't stop dear carry on)


Kenneye kannadi, kanneya bhavake,

Kaanade kelade nanna ee bedike,

Needu ee dina ninna prema bandhana,

Sneha sukhada outana - o priya ||

(Oh my muhh)


ಚಿತ್ರಗೀತೆ 


ಕಣ್ಗಳೇ ಹೇಳಿರಿ ಮನಸಿನಾ ಕೋರಿಕೆ,

ತುಟಿಗಳೇ ತಿಳಿಸಿರಿ ಬಯಸಿದಾ ಕಾಣಿಕೆ ।।ಪ।।

(ವಾಟ್ ಐಸ್ ಇಟ್ ಟೆಲ್ ಮೀ)


ಏಕೋ ಈ ಕಂಪನ, ಏಕೋ ಈ ನಾಚಿಕೆ,

ಕಾತುರಾ ತುಂಬಿದೆ ಇನಿಯನಾ ಸಂಗಕೇ,

ಆಸೆ ಮೂಡಿದೆ ನೂರು ಮಾತನಾಡಿದೇ,

ಪ್ರೇಮ ತುಂಬಿ ಬಂದಿದೇ, ಓ ಪ್ರಿಯಾ ।।೧।।

(ಒಹ್ ಬೇಬಿ ಬೇಬಿ) 

(ಡೋಂಟ್ ಸ್ಟಾಪ್ ಡಿಯರ್ ಕ್ಯಾರಿ ಆನ್)


ಕೆನ್ನೆಯೇ ಕನ್ನಡಿ, ಕನ್ನೆಯೂ ಭಾವಕೇ,

ಕಾಣದೇ ಕೇಳದೇ ನನ್ನ ಈ ಬೇಡಿಕೆ,

ನೀಡು ಈ ದಿನ ನಿನ್ನ ಪ್ರೇಮ ಬಂಧನಾ,

ಸ್ನೇಹ ಸುಖದ ಔತಣ, ಓ ಪ್ರಿಯಾ ।।೨।।

(ಒಹ್ ಮೈ ಮುಹ್)