Showing posts with label kannada bhava geete. Show all posts
Showing posts with label kannada bhava geete. Show all posts

Tuesday, April 21, 2026

Bagilolu Kaimugidu (ಬಾಗಿಲೊಳು ಕೈಮುಗಿದು)

Bhavageete

Sahitya: Kuvempu

Song link: Click Here


Bagilolu kaimugidu, olage ba yatrikane,

Shileyallavee gudiyu, kaleya baleyu,

Kambaniya maaleyanu, edeya battalolittu,

Dhanyateya kusumagala arpisilli ||


Gantegala daniyilla, jagategalillilla,

Karpuradaaratiya jyothi yilla,

Bhagavantanaananda, rupugondihudilli,

Rasikateya kadalukki, harivudilli ||


Sarasadinduliyutide shileyu ramayanavanilli,

Baadarayananante bharavata haadutihudilli,

Kushalatege beragaagi, mookavagide kalavilli,

Morcheyali maimaretu, teluvudu bhubharavilli ||


ಭಾವಗೀತೆ 


ಬಾಗಿಲೊಳು ಕೈಮುಗಿದು, ಒಳಗೆ ಬಾ ಯಾತ್ರಿಕನೆ,

ಶಿಲೆಯಲ್ಲವೀ ಗುಡಿಯು, ಕಲೆಯ ಬಲೆಯು,

ಕಂಬನಿಯ ಮಾಲೆಯನು, ಎದೆಯ ಬಟ್ಟಲೊಳಿಟ್ಟು,

ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ ।।ಪ।।


ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ,

ಕರ್ಪೂರದಾರತಿಯ ಜ್ಯೋತಿ ಇಲ್ಲ,

ಭಗವಂತನಾನಂದ, ರೂಪುಗೊಂಡಿಹುದಿಲ್ಲಿ,

ರಸಿಕತೆಯ ಕಡಲುಕ್ಕಿ, ಹರಿವುದಿಲ್ಲಿ ।।೧।।


ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ,

ಬಾದರಾಯಣನಂತೆ ಭಾರವತ ಹಾಡುತಿಹುದಿಲ್ಲಿ,

ಕುಶಲತೆಗೆ ಬೆರಗಾಗಿ, ಮೂಕವಾಗಿದೆ ಕಾಲವಿಲ್ಲಿ,

ಮೂರ್ಛೆಯಲಿ ಮೈಮರೆತು, ತೇಲುವುದು ಭೂಭಾರವಿಲ್ಲಿ ।।೨।।

Sunday, April 12, 2026

Tilimugila Tottilali (ತಿಳಿಮುಗಿಲ ತೊಟ್ಟಿಲಲಿ)

Bhavageete

Sahitya: S V Parameshwara Bhatta

Song link: Click Here


Tilimugila tottilali malagidda chandirana,

Gaali jogula haadi tugutittu,

Gari muduri malagidda hakki gudugalalli,

Irulu honganasudi saagutittu ||


Muguliruva hodarinali narugempinudaradali,

Jenu ganasina haadu kelutittu,

Tumbu neerina holeyol ambigana kirudoni,

Prastana geeteyanu heluttittu ||


Baruva mundina dinada navanavodayakagi,

Prakruti tapaviruvante toruttitu,

Shanta reetiyolirulu mellamellane uruli,

Naalina shubhodayava sarutittu ||


ಭಾವಗೀತೆ 


ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ,

ಗಾಳಿ ಜೋಗುಳ ಹಾಡಿ ತೂಗುತ್ತಿತ್ತು,

ಗರಿ ಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ,

ಇರುಳು ಹೊಂಗನಸೂಡಿ ಸಾಗುತ್ತಿತ್ತು ।।ಪ।।


ಮುಗುಳಿರುವ ಹೊದರಿನಲಿ ನರುಗೆಂಪಿನುದರದಲಿ,

ಜೇನು ಗನಸಿನ ಹಾಡು ಕೇಳುತ್ತಿತ್ತು,

ತುಂಬು ನೀರಿನ ಹೊಳೆಯೊಳ್ ಅಂಬಿಗನ ಕಿರುದೋಣಿ,

ಪ್ರಸ್ಥಾನ ಗೀತೆಯನು ಹೇಳುತ್ತಿತ್ತು ।।೧।।


ಬರುವ ಮುಂದಿನ ದಿನದ ನವನವೋದಯಕಾಗಿ,

ಪ್ರಕೃತಿ ತಪವಿರುವಂತೆ ತೋರುತ್ತಿತ್ತು,

ಶಾಂತ ರೀತಿಯೊಳಿರುಳು ಮೆಲ್ಲಮೆಲ್ಲನೆ ಉರುಳಿ,

ನಾಳಿನ ಶುಭೋದಯವ ಸಾರುತ್ತಿತ್ತು ।।೨।।

Thursday, March 12, 2026

Nannalle Tampa Divyanukampa (ನನ್ನಲ್ಲೆ ತಂಪ ದಿವ್ಯಾನುಕಂಪ)

Bhavageete

Sahitya: K S Nisar Ahmed

Song link: Click Here


Nannalle tampa, divyanukampa,

Irisiralu satata neenu,

Shokiyendu, ekaakiyendu

Goladaleke naanu?


Kaanadavara kangombe neenu,

Aarambha bimba neenu,

Nambadavara nambugeya bhavana-

Daalamba kamba neenu.


Suratadalli, mai maretadalli,

Mumbaruva arivu neenu,

Vismarana hrudayadaavaranadalli,

Tumbiruva nenavu neenu.


Tiliyaagi kannu naa kaanabeku

Nannalle ninna irava,

Hulu jambavulidu naa nambabeku,

Bilalante tanna marava.


ಭಾವಗೀತೆ 


ನನ್ನಲ್ಲೆ ತಂಪ, ದಿವ್ಯಾನುಕಂಪ 

ಇರಿಸಿರಲು ಸತತ ನೀನು,

ಶೋಕಿಯೆಂದು, ಏಕಾಕಿಯೆಂದು,

ಗೋಳಾಡಲೇಕೆ ನಾನು?


ಕಾಣದವರ ಕಣ್ಗೊ೦ಬೆ ನೀನು,

ಆರಂಭ ಬಿಂಬ ನೀನು,

ನಂಬದವರ ನಂಬುಗೆಯ ಭವನ-

ದಾಲಂಬ ಕಂಬ ನೀನು.


ಸುರತದಲ್ಲಿ , ಮೈ ಮರೆತದಲ್ಲಿ,

ಮುಂಬರುವ ಅರಿವು ನೀನು,

ವಿಸ್ಮರಣ ಹೃದಯದಾವರಣದಲ್ಲಿ,

ತುಂಬಿರುವ ನೆನವು ನೀನು.


ತಿಳಿಯಾಗಿ ಕಣ್ಣು ನಾ ಕಾಣಬೇಕು,

ನನ್ನಲ್ಲೆ ನಿನ್ನ ಇರವ,

ಹುಲು ಜಂಬವುಳಿದು ನಾ ನಂಬಬೇಕು,

ಬಿಳಲಂತೆ ತನ್ನ ಮರವ.

Neenurisida Hombelakina (ನೀನುರಿಸಿದ ಹೊಂಬೆಳಕಿನ)

Bhavageete

Sahitya:K S Nisar Ahmed

Song link: Click Here


Neenurisida hombelakina kidi aralide illi,

Kudi chachide illi ||

Nee surisida rasa tailada gudi haaride illi,

Gadi meeride illi ||


Nee bittida daye habbide manu santatiyalli,

Jana sammatiyalli,

Neenettida tanu saagide bhavonnatiyalli,

Nava sadgatiyalli ||


Ninnade nela, ninnade mane, ninnadeyo udaara,

Naanuligakiruvalpanu- nee varasudaara,

Belebeleyali ninnade ghana mahimankura olage,

Belabelagali birudaavali, namankita halage ||


ಭಾವಗೀತೆ 


ನೀನುರಿಸಿದ ಹೊಂಬೆಳಕಿನ ಕಿಡಿ ಅರಳಿದೆ ಇಲ್ಲಿ,

ಕುಡಿ ಚಾಚಿದೆ ಇಲ್ಲಿ,

ನೀ ಸುರಿಸಿದ ರಸ ತೈಲದ ಗುಡಿ ಹಾರಿದೆ ಇಲ್ಲಿ,

ಗಡಿ ಮೀರಿದೆ ಇಲ್ಲಿ ।।ಪ।।


ನೀ ಬಿತ್ತಿದ ದಯೆ ಹಬ್ಬಿದೆ ಮನು ಸಂತತಿಯಲ್ಲಿ,

ಜನ ಸಮ್ಮತಿಯಲ್ಲಿ,

ನೀನೆತ್ತಿದ ತನು ಸಾಗಿದೆ ಭಾವೋನ್ನತಿಯಲ್ಲಿ,

ನವ ಸದ್ಗತಿಯಲ್ಲಿ ।।೧।।


ನಿನ್ನದೆ ನೆಲ, ನಿನ್ನದೇ ಮನೆ, ನಿನ್ನೆದೆಯೊ ಉದಾರ,

ನಾನೊಳಿಗಕಿರುವಲ್ಪನು - ನೀ ವಾರಸುದಾರ,

ಬೆಳೆಬೆಳೆಯಲಿ ನಿನ್ನದೆ ಘನ ಮಹಿಮಾಂಕುರ ಒಳಗೆ,

ಬೆಳಬೆಳಗಲಿ ಬಿರುದಾವಳಿ, ನಾಮಾಂಕಿತ ಹಲಗೆ ।।೨।।

       

Tuesday, January 27, 2026

Kallinali Kettidanu (ಕಲ್ಲಿನಲಿ ಕೆತ್ತಿದನು)

Bhavageete

Sahitya: Kuvempu

Song link: Click Here


Kallinali kettidanu shilpiyava shivana,

Deguladi kudidanu vaidikanu avana,

Karunaalu shivanavanu kalladaneke,

Manadalle iruvavage mane bere beke ||


Iruvondu daivakke nooru hesarittu,

Avanhecchu ivanhecchu ennuta bobbittu,

Keluvudu ondu, maaduvudu mattondu,

Shiva bedari nodidanu idanella nintu ||


Brahmananu bandaaga janivaaravitte,

Shivabhakta bandaaga shivadaara vitte,

Pratiyobba maanavanu bettaleye bandu,

Aamele kittata melu keelendu ||


Holeya ninnaya manadi shivanu taaniralu,

Addi maadidaru nee degulakke baralu,

Keelendu alabeda, shivana maga neenu,

Hrudayadali tumbirali bhaktiya jenu ||


ಭಾವಗೀತೆ 


ಕಲ್ಲಿನಲಿ ಕೆತ್ತಿದನು ಶಿಲ್ಪಿಯವ ಶಿವನಾ,

ದೇಗುಲದಿ ಕೂಡಿದನು ವೈದಿಕನು ಅವನ, 

ಕರುಣಾಳು ಶಿವನವನು ಕಲ್ಲಾದನೇಕೆ,

ಮನದಲ್ಲೇ ಇರುವವಗೆ ಮನೆ ಬೇರೆ ಬೇಕೆ ।।ಪ।।


ಇರುವೊಂದು ದೈವಕ್ಕೆ ನೂರು ಹೆಸರಿಟ್ಟು,

ಅವನ್ಹೆಚ್ಚು ಇವನ್ಹೆಚ್ಚುಎನುತಾ ಬೊಬ್ಬಿಟ್ಟು,

ಕೇಳುವುದು ಒಂದು ಮಾಡುವುದು ಮತ್ತೊಂದು,

ಶಿವ ಬೆದರಿ ನೋಡಿದನು ಇದನೆಲ್ಲಾ ನಿಂತು ।।೧।।


ಬ್ರಾಹ್ಮಣನು ಬಂದಾಗ ಜನಿವಾರವಿತ್ತೆ,

ಶಿವಭಕ್ತ ಬಂದಾಗ ಶಿವದಾರವಿತ್ತೆ ,

ಪ್ರತಿಯೊಬ್ಬ ಮಾನವನು ಬೆತ್ತಲೆಯೇ ಬಂದು,

ಆಮೇಲೆ ಕಿತ್ತಾಟ ಮೇಲು ಕೀಳೆಂದು ।।೨।।


ಹೊಲೆಯ ನಿನ್ನಯ ಮನದಿ ಶಿವನು ತಾನಿರಲು,

ಅಡ್ಡಿ ಮಾಡಿದರು ನೀ ದೇಗುಲಕ್ಕೆ ಬರಲು,

ಕೀಳೆಂದು ಅಳಬೇಡ ಶಿವನ ಮಗ ನೀನು,

ಹೃದಯದಲಿ ತುಂಬಿರಲಿ ಭಕ್ತಿಯಾ ಜೇನು ।।೩।।  

                      

Brahma Ninge Jodisteeni (ಬ್ರಹ್ಮ ನಿಂಗೆ ಜೋಡಿಸ್ತೀನಿ)

Bhavageete

Sahitya: G P Rajaratnam

Song link: Click Here


Brahma ninge jodisteeni

Yenda muttid kaina!

Bhumi udku boggisteeni

Yenda tumkond maina!


Bur bur nore basiyovanta

Olle vuli yenda!

Kodteen nandu prartne kelu

Sarsotamman ganda!


Sarsotamma munskondoule

Neenar osi yolu,!

Kududbut addre todaltadanna

Nalge baala golu!


Muniyangara kashogtaiti

Yecchige yenda butre!

Sarsotammang yenhogtaite

Maat saleesag kotre!


Nange neenu laari aagi

Nan kesu gedgid kotre!

Madteenanna nin hottena

Vuli yendad potre!


Kamalad oovin kurchi mege

Jokaag kuntko neenu!

Naaku baigu naku bunde

Yenda tatten naanu!


Sarasotammang yolakilla

Neenen edarkobeda;

Kelid varaan vondeeskotre

Takko! yendad pheda!


ಭಾವಗೀತೆ 


ಬ್ರಹ್ಮ ನಿಂಗೆ ಜೋಡಿಸ್ತೀನಿ 

ಯೆಂಡ ಮುಟ್ಟಿದ್ ಕೈನ !

ಭೂಮಿ ಉದ್ಕು ಬೊಗ್ಗಿಸ್ತೀನಿ 

ಯೆಂಡ ತುಂಬ್ಕೊಂಡ್ ಮೈನ !


ಬುರ್ ಬುರ್ ನೊರೆ ಬಸಿಯೋವಂತ 

ಒಳ್ಳೆ ವುಳಿ ಯೆಂಡ! 

ಕೊಡ್ತೀನಿ ನನ್ದು ಪ್ರಾತ್ನೇ  ಕೇಳು 

ಸರಸೋತ್ತಮ್ಮನ್ ಗಂಡ !


ಸರಸೋತ್ತಮ್ಮ ಮುನಸ್ಕೊಂಡೌಳೆ 

ನೀನಾರ್ ಒಸಿ ಯೋಳು !

ಕುಡದ್ಭುಟ್  ಅಡ್ದ್ರೆ ತೋದಲ್ತಾದಣ್ಣ

ನಾಲ್ಗೆ ಬಾಳ ಗೋಳು !


ಮುನಿಯನ್ಗಾರ  ಕಾಸೋಗ್ ತೈತಿ 

ಯೆಚ್ಚಿಗೆ ಯೆಂಡ ಬುಟ್ರೆ !

ಸರಸೋತ್ತಮ್ಮನ್ಗೆ ಯೋನೋಗ್ ತೈತೆ  

ಮಾತ್ ಸಲೀಸಾಗ್ ಕೊಟ್ರೆ !


ನನ್ಗೆ ನೀನು ಲಾರಿ  ಆಗಿ 

ನನ್ ಕೇಸ್ ಗೆದ್ ಗಿದ್ ಕೊಟ್ರೆ !

ಮಾಡ್ತೀನಣ್ಣ ನಿನ್ ಹೊಟ್ಟೇನಾ 

ವುಳಿ ಯೆಂಡದ್ ಪೊಟ್ರೆ !


ಕಮಲದ್ ಊವಿನ್ ಕುರ್ಚಿ ಮೇಗೆ 

ಜೋಕಾಗ್ ಕುಂತ್ಕೊ ನೀನು !

ನಾಕೂ ಬಾಯ್ಗೂ ನಾಕು ಬುಂಡೆ 

ಯೆಂಡ ತತ್ತೀನ್ ನಾನು !


ಸರಸೋತ್ತಮ್ಮ೦ಗ್ ಯೋಳಾಕಿಲ್ಲ 

ನೀನೇನ್ ಎದರ್ಕೋಬೇಡ !

ಕೇಳಿದ್ ವರಾನ್ ವೊಂದೀಸ್ಕೊಟ್ರೆ 

ತಕ್ಕೊ ! ಯೆಂಡದ್ ಫೆಡ !

             

Monday, January 12, 2026

Hakkiyondu Haari Bandu (ಹಕ್ಕಿಯೊಂದು ಹಾರಿ ಬಂದು)

Bhavageete

Sahitya: Sharat Kalkod

Song link: Click Here 


Hakkiyondu haari bandu, nanna edeyolavitu kondu,

Banna banna rekke bicchi, manasigella adanu hacchi, 

Kuniya todagitu, haaki kuniya todagitu ||


Jinkeyante meredu nodi, alli illi odi aadi,

Novu maresi modi maadi, matte matte kaadi bedi,

Eno maaditu, hakki eno maaditu ||


Nakku nalidu aadutiralu, dinavu heege urulitiralu,

Kanda kannu kaarutiralu, lokaveno aadutiralu,

Anji haaritu, hakki anji haaritu ||


Intu hakki haari hogi, lokavella khaliyaagi,

Baduku tumba bharavaagi, nenapu novu maagiyaagi,

Naanu ulidenu, illi naanu ulidenu ||


ಭಾವಗೀತೆ 


ಹಕ್ಕಿಯೊಂದು ಹಾರಿ ಬಂದು, ನನ್ನ ಎದೆಯೊಳವಿತುಕೊಂಡು,

ಬಣ್ಣ ಬಣ್ಣ ರೆಕ್ಕೆ ಬಿಚ್ಚಿ, ಮನಸಿಗೆಲ್ಲ ಅದನು ಹಚ್ಚಿ,

ಕುಣಿಯತೊಡಗಿತು ಹಕ್ಕಿ ಕುಣಿಯತೊಡಗಿತು ।।ಪ।।


ಜಿಂಕೆಯಂತೆ ಮೆರೆದು ನೋಡಿ, ಅಲ್ಲಿ ಇಲ್ಲಿ ಓಡಿ ಆಡಿ,

ನೋವು ಮರೆಸಿ ಮೋಡಿ ಮಾಡಿ, ಮತ್ತೆ ಮತ್ತೆ ಕಾಡಿ ಬೇಡಿ,

ಏನೋ ಮಾಡಿತು, ಹಕ್ಕಿ ಏನೋ ಮಾಡಿತು ।।೧।।


ನಕ್ಕು ನಲಿದು ಆಡುತಿರಲು, ದಿನವು ಹೀಗೆ ಉರುಳುತಿರಲು,

ಕಂಡ ಕಣ್ಣು ಕಾರುತಿರಲು, ಲೋಕವೇನೊ ಆಡುತಿರಲು,

ಅಂಜಿ ಹಾರಿತು, ಹಕ್ಕಿ ಅಂಜಿ ಹಾರಿತು ।।೨।।


ಇಂತು ಹಕ್ಕಿ ಹಾರಿ ಹೋಗಿ, ಲೋಕವೆಲ್ಲ ಖಾಲಿಯಾಗಿ,

ಬದುಕು ತುಂಬ ಭಾರವಾಗಿ, ನೆನಪು ನೋವು ಮಾಗಿಯಾಗಿ,

ನಾನು ಉಳಿದೆನು, ಇಲ್ಲಿ ನಾನು ಉಳಿದೆನು ।।೩।।

                             

Wednesday, January 7, 2026

Nanna Premada Hudugi (ನನ್ನ ಪ್ರೇಮದ ಹುಡುಗಿ)

Bhavageete

Sahitya: B M Sri


Nanna premada hudugi, tavareya hosakempu

Tavareya hosa arala holeva kempu

Nanna premada hudugi, kolala melu nudiyimpu

Kolalu mohisi nudiva gaanadimpu ||


Belebeleyuteshteshtu bhinnana ele cheluve

Mulugidenu ashatashtu premadolage

Battuvuvu kadalugalu mundaagi ele cheluve

Battalaaradu tottu premadolage ||


Battuvuvu mundaagi kadalugalu ele cheluve

Karaguvuvu bandegalu bisilinolage

Karagalaaradu churu premadolagele cheluve

Berediralu jeevakale dehadolage ||


Hogi baruvenu henne, premadonde henne

Hogi baruvenu sahisu, eradu galige

Koti yojanavirali, daati baruvenu henne

Bega baruvenu haari, ninna balige ||


ಭಾವಗೀತೆ 


ನನ್ನ ಪ್ರೇಮದ ಹುಡುಗಿ, ತಾವರೆಯ ಹೊಸಕೆಂಪು 

ತಾವರೆಯ ಹೊಸ ಅರಳ ಹೊಳೆವ ಕೆಂಪು 

ನನ್ನ ಪ್ರೇಮದ ಹುಡುಗಿ, ಕೊಳಲ ಮೆಲುನುಡಿಯಿಂಪು 

ಕೊಳಲು ಮೋಹಿಸಿ ನುಡಿವ ಗಾನದಿಂಪು ।।ಪ।।


ಬೆಳೆಬೆಳೆಯುತೆಷ್ಟೆಷ್ಟು  ಭಿನ್ನಾಣ ಎಲೆ ಚೆಲುವೆ 

ಮುಳುಗಿದೆನು ಅಷ್ಟಷ್ಟು ಪ್ರೇಮದೊಳಗೆ 

ಬತ್ತುವುವು ಕಡಲುಗಳು ಮುಂದಾಗಿ, ಎಲೆ ಚೆಲುವೆ 

ಬತ್ತಲಾರದು ತೊಟ್ಟು ಪ್ರೇಮದೊಳಗೆ  ।।೧।।


ಬತ್ತುವುವು ಮುಂದಾಗಿ ಕಡಲುಗಳು ಎಲೆ ಚೆಲುವೆ 

ಕರಗುವುವು ಬಂಡೆಗಳು ಬಿಸಿಲಿನೊಳಗೆ 

ಕಾರಗಲಾರದು ಚೂರು ಪ್ರೇಮದೊಳಗೆಲೆ ಚೆಲುವೆ 

ಬೆರೆದಿರಲು ಜೀವಕಳೆ ದೇಹದೊಳಗೆ ।।೨।।


ಹೋಗಿ ಬರುವೆನು ಹೆಣ್ಣೆ, ಪ್ರೇಮದೊಂದೇ ಹೆಣ್ಣೆ 

ಹೋಗಿ ಬರುವೆನು ಸಹಿಸು, ಎರಡು ಗಳಿಗೆ 

ಕೋಟಿ ಯೋಜನವಿರಲಿ, ದಾಟಿ ಬರುವೆನು ಹೆಣ್ಣೆ 

ಬೇಗ ಬರುವೆನು ಹಾರಿ, ನಿನ್ನ ಬಳಿಗೆ ।।೩।।

                          

Monday, January 5, 2026

Udaya Gaganadali Arunana Chaye (ಉದಯ ಗಗನದಲಿ ಅರುಣನ ಛಾಯೆ)

Bhavageete

Sahitya: Kuvempu

Song link: Click Here


Udaya gaganadali arunana chaye

Jagada jeevanake chetana veeye

Ninnaya gaanada sumadhura maaye

Vanadindambarakeruvudu

Korikegala bayaaruvudu ||


Prabhata mounava necchara maadi

Kaadu naadugalu tumbi tulukaadi

Jagannidrege jogula haadi

Brahmavane tugaaduvudu

Krantige shantiya needuvudu ||


O vanagaayaka.. varavageesha

Ninnaya kaanana kujana paasha

Kabbigarige muktina aavesha

Swara chapake nee swarabaana ||


Kelidarallave tiliyadu ninna

Kanthada vaikhari tudiyali nanna

Saavina bayakeyu ninna gaana

Ninage namo o kajaana ||


ಭಾವಗೀತೆ 


ಉದಯ ಗಗನದಲಿ ಅರುಣನ ಛಾಯೆ 

ಜಗದ ಜೀವನಕೆ ಚೇತನ ವೀಯೆ 

ನಿನ್ನಯ ಗಾನದ ಸುಮಧುರ ಮಾಯೆ 

ವನದಿಂದಂಬರಕೇರುವುದು 

ಕೋರಿಕೆಗಳ ಬಾಯಾರುವುದು ।।ಪ।।


ಪ್ರಭಾತ ಮೌನವನೆಚ್ಚರ ಮಾಡಿ 

ಕಾಡು ನಾಡುಗಳು ತುಂಬಿ ತುಳುಕಾಡಿ 

ಜಗನ್ನಿದ್ರೆಗೆ ಜೋಗುಳ ಹಾಡಿ 

ಬ್ರಹ್ಮವನೆ ತೂಗಾಡುವುದು  

ಕ್ರಾಂತಿಗೆ ಶಾಂತಿಯ ನೀಡುವುದು ।।೧।।


ಓ ವನಗಾಯಕಾ ವರವಾಗೀಶಾ 

ನಿನ್ನ ಕಾನನ ಕೂಜನ ಪಾ ಶಾ 

ಕಬ್ಬಿಗರಿಗೆ ಮುಕ್ತಿಯ ಆವೇಶಾ  

ಸ್ವರ ಛಾಪಕೆ ನೀ ಸ್ವರ ಬಾಣ ।।೨।।


ಕೇಳಿದರಲ್ಲವೇ ತಿಳಿಯದು ನಿನ್ನಾ 

ಕಂಠದ ವೈಖರಿ ತುದಿಯಲಿ ನನ್ನಾ 

ಸಾವಿನ ಬಯಕೆಯು ನಿನ್ನಾ ಗಾನ 

ನಿನಗೆ ನಮೋ ಓ ಕಾಜಾಣ ।।೩।।

         



Kalpana Chayeyali (ಕಲ್ಪನಾ ಛಾಯೆಯಲಿ)

Bhavageete

Sahitya: R C Bhusanur Matt

Song link: Click Here


Kalpana chayeyali

Nalmeya noukeyali

Neelamani holedante

Hole holedu hodeya, shakti tanujaate ||


Jagavella malagihudu

Chandiranu nagutihanu

Tangaali beesutide

Neenelli manadanne, kuntala shobe ||


Aa prathama darushanadi

Mogada cheluva tori

Nupurada rava beeri

Malligeya nage nakke, tanirasada tavare ||


Aa nota nudiyaagi

Aa nageyu nageyaagi

Aa neha madhuvaagi

Manadalli suliyutide, lasya praveene ||


ಭಾವಗೀತೆ 


ಕಲ್ಪನಾ ಛಾಯೆಯಲಿ 

ನಲ್ಮೆಯಾ ನೌಕೆಯಲಿ 

ನೀಲಮಣಿ ಹೊಳೆದಂತೆ 

ಹೊಳೆಹೊಳೆದು ಹೋದೆಯಾ, ಶಕ್ತಿ ತನುಜಾತೆ ।।ಪ।।


ಜಗವೆಲ್ಲಾ ಮಲಗಿಹುದು 

ಚಂದಿರನು ನಗುತಿಹನು 

ತಂಗಾಳಿ ಬೀಸುತಿದೆ 

ನೀನೆಲ್ಲಿ ಮನದನ್ನೆ, ಕುಂತಳಾ ಶೋಭೆ ।।೧।।


ಆ ಪ್ರಥಮ ದರುಶನದಿ 

ಮೊಗದ ಚೆಲುವಾ ತೋರಿ 

ನೂಪುರದ ರವ ಬೀರಿ 

ಮಲ್ಲಿಗೆಯ ನಗೆ ನಕ್ಕೆ, ತನಿರಸದಾ ತವರೇ ।।೨।।


ಆ ನೋಟ ನುಡಿಯಾಗಿ 

ಆ ನಗೆಯು ನಗೆಯಾಗಿ 

ಆ ನೇಹ ಮಧುವಾಗಿ 

ಮನದಲ್ಲಿ ಸುಳಿಯುತಿದೆ, ಲಾಸ್ಯ ಪ್ರವೀಣೆ ।।೩।।

                     

Tuesday, December 9, 2025

Naa Melinavanu Balu Doddavanu (ನಾ ಮೇಲಿನವನು ಬಲು ದೊಡ್ಡವನು)

Bhavageete

Sahitya: Lalita Naika

Song link: Click Here


Naa melinavanu, balu doddavanu endu,

Meredaadabeda geleya,

Ninaginta migilavaru, iddaru buviyalli,

Sullu bhrameyalli nee mulugabeda ||


Baludodda chandiranu, irulella belaguvanu,

Mareyaaguvanu hagala kiranadalli,

Uriyuvanu surya avaginta hiriya,

Kaledu hoguvanu irula seraginalli ||


Grahataaregala hotta, gaganakke mareyunte,

Saari helitte, taa migilu endu,

Anuvalli anuvaada, kanniddu kurudaada,

Nee kugabahudu haagendu ||


Mannu molakeya huttu, beeja vrukshada guttu,

Beragugolisuvudillavenu, giri jariya varate,

Jeevarashiya charite, romanchanagolisadenu ||


Janana maranada ogata, bicchi heluveyenu,

Lokadolitige ninna kanke enu?

Helu geleyane eega, ede tatti nee helu,

Prakrutiya hiritanake nee saati enu?


ಭಾವಗೀತೆ 


ನಾ ಮೇಲಿನವನು, ಬಲು ದೊಡ್ಡವನು ಎಂದು,

ಮೆರೆದಾಡಬೇಡ ಗೆಳೆಯ,

ನಿನಗಿಂತಾ ಮಿಗಿಲವರು, ಇದ್ದಾರು ಬುವಿಯಲ್ಲಿ,

ಸುಳ್ಳು ಭ್ರಮೆಯಲ್ಲಿ ನೀ ಮುಳುಗಬೇಡಾ ।।ಪ।।


ಬಲುದೊಡ್ಡ ಚಂದಿರನು ಇರುಳೆಲ್ಲಾ ಬೆಳಗುವನು,

ಮರೆಯಾಗುವನು ಹಗಲ ಕಿರಣದಲ್ಲಿ,

ಉರಿಯುವನು ಸೂರ್ಯ ಅವಗಿಂತ ಹಿರಿಯ,

ಕಳೆದು ಹೋಗುವನು ಇರುಳ ಸೆರಗಿನಲ್ಲಿ ।।೧।।


ಗ್ರಹತಾರೆಗಳ ಹೊತ್ತ, ಗಗನಕ್ಕೆ ಮರೆಯುಂಟೆ,

ಸಾರಿ ಹೇಳಿತ್ತೆ, ತಾ ಮಿಗಿಲು ಎಂದು,

ಅಣುವಲ್ಲಿ ಅಣುವಾದ, ಕಣ್ಣಿದ್ದೂ ಕುರುಡಾದ,

ನೀ ಕೂಗಬಹುದು ಹಾಗೆಂದು ।।೨।।


ಮಣ್ಣು ಮೊಳಕೆಯ ಹುಟ್ಟು, ಬೀಜ ವೃಕ್ಷದಾ ಗುಟ್ಟು,

ಬೆರಗುಗೊಳಿಸುವುದಿಲ್ಲವೇನು, ಗಿರಿ ಜರಿಯಾ ವರತೆ,

ಜೀವರಾಶಿಯ ಚರಿತೆ, ರೋಮಾಂಚನಗೊಳಿಸದೇನು ।।೩।।


ಜನನ ಮರಣದಾ ಒಗಟ, ಬಿಚ್ಚಿ ಹೇಳುವೆಯೇನು,

ಲೋಕದೊಳಿತಿಗೆ ನಿನ್ನ ಕಾಣ್ಕೆ ಏನು ?

ಹೇಳು ಗೆಳೆಯನೇ ಈಗ, ಎದೆ ತಟ್ಟಿ ನೀ ಹೇಳು,

ಪ್ರಕೃತಿಯ ಹಿರಿತನಕೆ ನೀ ಸಾಟಿ ಏನು ?

                     

Dumbigala Daniyilla (ದುಂಬಿಗಳ ದನಿಯಿಲ್ಲ)

Bhavageete

Sahitya: Doddarange Gowda

Song link: Click Here


Dumbigala daniyilla hakkigala haadilla,

Kusuma gandhava taruva maarutanilla,

Hemanta ruthu raja dharege bandilidandu,

Hoovilla chigurilla hasirelegalilla ||


Hannelegaludurutiha baradu maragalaneri,

Kanneru surisutide kaananada hakki,

Tannaneya gaaliyali himadondu soneyali,

Bhinnavide maanavana jeeva sere sikki ||


Hemantanaalikeya kathina shasana vittu,

Adake talebaaguvude shrushtiyolu marma,

Ondondu ruthuvinali ondondu reetiyali,

Samsaara padeyuvude jeevigala dharma ||


ಭಾವಗೀತೆ 


ದುಂಬಿಗಳ ದನಿಯಿಲ್ಲ ಹಕ್ಕಿಗಳ ಹಾಡಿಲ್ಲ,

ಕುಸುಮ ಗಂಧವ ತರುವ ಮಾರುತನಿಲ್ಲ,

ಹೇಮಂತ ಋತುರಾಜ ಧರೆಗೆ ಬಂದಿಳಿದಂದು,

ಹೂವಿಲ್ಲ ಚಿಗುರಿಲ್ಲ ಹಸಿರೆಲೆಗಳಿಲ್ಲ ।।ಪ।।


ಹಣ್ಣೆಲೆಗಳುದುರುತಿಹ ಬರಡು ಮರಗಳನೇರಿ,

ಕಣ್ಣೀರು ಸುರಿಸುತಿದೆ ಕಾನನದ ಹಕ್ಕಿ,

ತಣ್ಣನೆಯ ಗಾಳಿಯಲಿ ಹಿಮದೊಂದು ಸೋನೆಯಲಿ,

ಭಿನ್ನವಿದೆ ಮಾನವನ ಜೀವ ಸೆರೆ ಸಿಕ್ಕಿ ।।೧।।


ಹೇಮಂತನಾಳಿಕೆಯ ಕಠಿಣ ಶಾಸನವಿತ್ತು,

ಅದಕೆ ತಲೆಬಾಗುವುದೆ ಸೃಷ್ಟಿಯೊಳು ಮರ್ಮ,

ಒಂದೊಂದು ಋತುವಿನಲಿ ಒಂದೊಂದು ರೀತಿಯಲಿ,

ಸಂಸಾರ ಪಡೆಯುವುದೆ ಜೀವಿಗಳ ಧರ್ಮ ।।೨।।

                            


Thursday, December 4, 2025

Honge Sompaagi (ಹೊಂಗೆ ಸೊಂಪಾಗಿ)

Bhavageete

Sahitya: K C Shivappa

Sog link: Click Here


Honge sompaagi chiguruvudu chenda..,

O lalane kilakilane naguvudati chanda.. ||


Kirana tampaagi ilege iliva pari,

Mugilu haayagi nadeva reeti gati,

Navilu garigedari naliva neelasiri,

Chigiru chimmisuva sumana raagarati ||


Kenne kempaagi aada singaara,

Nayana olidolidu tanda muda lahari,

Turubu tugaadi banda mandaara,

Cheluvinaramanege aduve sari daari ||


Olume dani chiguri sanga aananda,

Sahaja mungurule daaha parihaara,

Madhura bhavanadi haridu makaranda,

Nikata munjaane neha mani haara ||


ಭಾವಗೀತೆ 


ಹೊಂಗೆ ಸೊಂಪಾಗಿ ಚಿಗುರುವುದು ಚಂದ..,

ಓ ಲಲನೆ ಕಿಲಕಿಲನೆ ನಗುವುದತಿ ಚಂದ.. ।।ಪ।।


ಕಿರಣ ತಂಪಾಗಿ ಇಳೆಗೆ ಇಳಿವ ಪರಿ,

ಮುಗಿಲು ಹಾಯಾಗಿ ನಡೆವ ರೀತಿ ಗತಿ,

ನವಿಲು ಗರಿಗೆದರಿ ನಲಿವ ನೀಳಸಿರಿ,

ಚಿಗಿರು ಚಿಮ್ಮಿಸುವ ಸುಮನ ರಾಗರತಿ ।।೧।।


ಕೆನ್ನೆ ಕೆಂಪಾಗಿ ಆದ ಸಿಂಗಾರ,

ನಯನ ಒಲಿದೊಲಿದು ತಂದ ಮುದಲಹರಿ,

ತುರುಬು ತೂಗಾಡಿ ಬಂದ ಮಂದಾರ,

ಚೆಲುವಿನರಮನೆಗೆ ಅದುವೆ ಸರಿದಾರಿ ।।೨।।


ಒಲುಮೆ ದನಿಚಿಗುರಿ ಸಂಗ ಆನಂದ,

ಸಹಜ ಮುಂಗುರುಳೆ ದಾಹ ಪರಿಹಾರ,

ಮಧುರ ಭಾವನದಿ ಹರಿದು ಮಕರಂದ,

ನಿಕಟ ಮುಂಜಾನೆ ನೇಹ ಮಣಿ ಹಾರ ।।೩।।

                  

Odeyada Odape (ಒಡೆಯದ ಒಡಪೆ)

Bhavageete

Sahitya: B R Lakshmanarao

Song link: Click Here


Odeyada odape, olavina mudipe,

Sanihake seledavale, kaaduva kanase,

Kannadi tinise, durave ulidavale,

Baare ba balige, inde ee ghalige, baa.. baa.. ||


Maaya jinkeya, nadeyavale,

Bedagina nighuda, nudiyavale,

Notada tumba, ninnade bimba, nannee kangalige,

Baare ba balige, inde ee ghalige, baa.. baa.. ||


Kinnara lokada, kannikeye,

Nijavanu maresuva, javanikeye,

Kavidaru irulu, nee bali iralu, ujwala deevalige,

Baare ba balige, inde ee ghalige, baa.. baa.. ||


Kalpaneyalle, eshtu dina,

Kaaduve heege, priyakarana,

Baa kanikarisi, nannanu varisi, baalina paakalige,

Baare ba balige, inde ee ghalige, baa.. baa.. ||


ಭಾವಗೀತೆ 


ಒಡೆಯದ ಒಡಪೆ, ಒಲವಿನ ಮುಡಿಪೆ,

ಸನಿಹಕೆ ಸೆಳೆದವಳೆ, ಕಾಡುವ ಕನಸೆ,

ಕನ್ನಡಿ ತಿನಿಸೆ, ದೂರವೇ ಉಳಿದವಳೆ,

ಬಾರೆ ಬಾ ಬಳಿಗೆ, ಇಂದೇ ಈ ಘಳಿಗೆ, ಬಾ.. ಬಾ.. ।।ಪ।।


ಮಾಯಾ ಜಿಂಕೆಯ, ನಡೆಯವಳೆ, 

ಬೆಡಗಿನ ನಿಗೂಢ, ನುಡಿಯವಳೆ,

ನೋಟದ ತುಂಬಾ, ನಿನ್ನದೆ ಬಿಂಬ, ನನ್ನೀ ಕಂಗಳಿಗೆ,

ಬಾರೆ ಬಾ ಬಳಿಗೆ, ಇಂದೇ ಈ ಘಳಿಗೆ, ಬಾ.. ಬಾ.. ।।೧।।


ಕಿನ್ನರ ಲೋಕದ, ಕನ್ನಿಕೆಯೆ,

ನಿಜವನು ಮರೆಸುವ, ಜವನಿಕೆಯೆ,

ಕವಿದರು ಇರುಳು, ನೀ ಬಳಿ ಇರಲು, ಉಜ್ವಲ ದೀವಳಿಗೆ,

ಬಾರೆ ಬಾ ಬಳಿಗೆ, ಇಂದೇ ಈ ಘಳಿಗೆ, ಬಾ.. ಬಾ.. ।।೨।।


ಕಲ್ಪನೆಯಲ್ಲೇ, ಎಷ್ಟು ದಿನ,

ಕಾಡುವೆ ಹೀಗೆ ,ಪ್ರಿಯಕರನ,

ಬಾ ಕನಿಕರಿಸಿ,  ನನ್ನನು ವರಿಸಿ, ಬಾಳಿನ ಪಾಕಳಿಗೆ,

ಬಾರೆ ಬಾ ಬಳಿಗೆ, ಇಂದೇ ಈ ಘಳಿಗೆ, ಬಾ.. ಬಾ.. ।।೩।।

                             

Wednesday, August 20, 2025

Malladada Giniye (ಮಲ್ಲಾಡದ ಗಿಣಿಯೇ)

Bhavageete

Sahitya: Da Ra Bendre

Song link: Click Here


Malladada giniye, neenillalladada kuliti yaka, ae giniye, ae giniye,

Pacche payarina naada acchu, accha ottida maiya siriye, ae giniye !


Hanna melitu balita, ninna, sanna chunchina kencha sobaga, ae giniye, ae giniye!

Maramaradakondu maata kalisi, maravattena maatina jaani, ae giniye, ae giniye!


Totadalle oota, ninna chellata, gaaligopuradaaga,.., 

Hindanagali bande illi kanda kadige baayi biduve, ae giniye, ae giniye!


Husiya ragali yaaka, innu hosa hosa baalina haadanu taara haara, ae giniye, ae giniye,

Moodana kempu moodidalli, hooda ninna hosa samsara, ae giniye, ae giniye!


ಭಾವಗೀತೆ 


ಮಲ್ಲಾಡದ ಗಿಣಿಯೇ, ನೀನಿಲ್ಲಲ್ಲಾಡದ ಕುಳಿತಿ ಯಾಕ, ಏ ಗಿಣಿಯೇ, ಏ ಗಿಣಿಯೇ,

ಪಚ್ಚೆಪಯರಿನ ನಾಡ ಅಚ್ಚು, ಅಚ್ಚ ಒತ್ತಿದ ಮೈಯ ಸಿರಿಯೇ, ಏ ಗಿಣಿಯೇ!


ಹಣ್ಣ ಮೆಲಿತು ಬಲಿತ, ನಿನ್ನ ಸಣ್ಣ ಚುಂಚಿನ ಕೆಂಚ ಸೊಬಗ, ಏ ಗಿಣಿಯೇ, ಏ ಗಿಣಿಯೇ,

ಮರಮರದಕೊಂದು ಮಾತ, ಕಲಿಸಿ ಮರವಟ್ಟೇನ ಮಾತಿನ ಜಾಣಿ, ಏ ಗಿಣಿಯೇ, ಏ ಗಿಣಿಯೇ!


ತೋಟದಲ್ಲೆ ಊಟ, ನಿನ್ನ ಚೆಲ್ಲಾಟ ಗಾಳಿಗೋಪುರದಾಗ.... ,

ಹಿಂಡನಗಲಿ ಬಂದೆ, ಇಲ್ಲಿ ಕಂಡ ಕಡಿಗೆ ಬಾಯಿ ಬಿಡುವೆ, ಏ ಗಿಣಿಯೇ, ಏ ಗಿಣಿಯೇ!


ಹುಸಿಯಾ ರಗಳಿ ಯಾಕ, ಇನ್ನು ಹೊಸ ಹೊಸ ಬಾಳಿನ ಹಾಡನು ತಾರಾ, ಹಾರ, ಏ ಗಿಣಿಯೇ, ಏ ಗಿಣಿಯೇ,

ಮೂಡಣ ಕೆಂಪು ಮೂಡಿದಲ್ಲಿ ಹೂಡ ನಿನ್ನ ಹೊಸ ಸಂಸಾರ, ಏ ಗಿಣಿಯೇ, ಏ ಗಿಣಿಯೇ!

              

Tuesday, August 5, 2025

Doora Bahudoora Hoguva Baara (ದೂರ ಬಹುದೂರ ಹೋಗುವ ಬಾರಾ)

Bhavageete

Sahitya: Kuvempu

Song link: Click Here


Doora! bahudoora! hoguva baara !

Alli ihudemma oora teera (2) ||


Jalajaladalegala melkunidaadi,

Balalike tolalikegalanella doodi,

Geluvina uligala haadi,

Olumeya maatadi,

Hakkigalinchara keli, aanandava taali ||


Himamani kanagala sinchita anchina,

Hasurina teerada melaadi,

Kisalaya kampanadimpanu nodi,

Koodi aadi nodi haadi,

Teli teli hoguva baara, allihudemma oora teera ||


ಭಾವಗೀತೆ 


ದೂರ ! ಬಹುದೂರ ! ಹೋಗುವ ಬಾರಾ !

ಅಲ್ಲೀ ಇಹುದೆಮ್ಮಾ ಊರಾ ತೀರಾ (೨) ।।ಪ।।


ಜಲಜಲದಲೆಗಳ ಮೇಲ್ಕುಣಿದಾಡಿ, 

ಬಳಲಿಕೆ ತೊಳಲಿಕೆಗಳನೆಲ್ಲ ದೂಡಿ,

ಗೆಲುವಿನ ಉಲಿಗಳ ಹಾಡಿ, 

ಒಲುಮೆಯ ಮಾತಾಡಿ, 

ಹಕ್ಕಿಗಳಿಂಚರ ಕೇಳಿ, ಆನಂದವ ತಾಳಿ !


ಹಿಮಮಣಿ ಕಣಗಳ ಸಿಂಚಿತ ಅಂಚಿನ, 

ಹಸುರಿನ ತೀರದ ಮೇಲಾಡಿ, 

ಕಿಸಲಯ ಕಂಪನದಿಂಪನು ನೋಡಿ, 

ಕೂಡಿ ಆಡಿ ನೋಡಿ ಹಾಡಿ, 

ತೇಲಿ ತೇಲಿ ಹೋಗುವಾ ಬಾರಾ, ಅಲ್ಲಿಹುದೆಮ್ಮಾ ಊರ ತೀರ !

                                        

Wednesday, September 18, 2024

Kolalanudi Mohipudanu (ಕೊಳಲನೂದಿ ಮೋಹಿಪುದನು)

Bhavageete

Sahitya: Kuvempu

Song link: Click Here


Kolalanudi mohipudanu, kalisu enage chenna

Talamalipudu enna edeyu, kolala gaana ninna ||


Naliyutihudu udaya gagana, arunaraagadinda

Koladalegalu kuniyutihavu, gaanadolumeyinda ||


Paravihagala nalisutihudu, ninna kolala naada

Paravihagala nolisutihudu, ninna gaanamoda ||


Talita chutadadiye modala, nudiye kalisu chenna

Kolala kalisu bega enage, mohipudanu ninna ||


ಭಾವಗೀತೆ 


ಕೊಳಲನೂದಿ ಮೋಹಿಪುದನು, ಕಲಿಸು ಎನಗೆ ಚೆನ್ನ 

ತಳಮಳಿಪುದು ಎನ್ನ ಎದೆಯು, ಕೊಳಲ ಗಾನ ನಿನ್ನ ।।ಪ।।


ನಲಿಯುತಿಹುದು ಉದಯ  ಗಗನ, ಅರುಣರಾಗದಿಂದ 

ಕೊಳದಲೆಗಳು ಕುಣಿಯುತಿಹವು, ಗಾನದೊಲುಮೆಯಿಂದ ।।೧।।


ಪರವಿಹಗಳ ನಲಿಸುತಿಹುದು, ನಿನ್ನ ಕೊಳಲ ನಾದ 

ಪರವಿಹಗಳ ನೊಲಿಸುತಿಹುದು, ನಿನ್ನ ಗಾನಮೋದ ।।೨।।


ತಳಿತ ಚುತದಡಿಯೆ ಮೊದಲ, ನುಡಿಯೆ ಕಲಿಸು ಚೆನ್ನ 

 ಕೊಳಲ ಕಲಿಸು ಬೇಗ ಎನಗೆ, ಮೋಹಿಸುವೆನು ನಿನ್ನ ।।೩।।

                          

Monday, September 2, 2024

Preetige Elle Ellide Nalle (ಪ್ರೀತಿಗೆ ಎಲ್ಲೆ ಎಲ್ಲಿದೆ ನಲ್ಲೆ)

Bhavageete

Sahitya: M N Vyasa Rao

Song link: Click Here


Preetige elle ellide nalle

Hoguve elle ninnede kalle

Olavinda naa ninna karede

Baalali kanda bhavada belake ||


Mohava tori minchuta bande

Mayada gaaya moodiside

Kavyada selege kannikeyaade

Manjina haage nee suride 

Kadaduva kanasina roopave

Novu nee needuve ||


Dahava tumbi doorave ninte

Daariga nanna nee danisi

Premada kaave kaamada hoove

Kaaduvudeke aavarisi

Koraguva manaside baadide

Baalu bendagide ||


ಭಾವಗೀತೆ 


ಪ್ರೀತಿಗೆ ಎಲ್ಲೆ ಎಲ್ಲಿದೆ ನಲ್ಲೆ 

ಹೋಗುವೆ ಎಲ್ಲೆ ನಿನ್ನೆದೆ ಕಲ್ಲೆ 

ಒಲವಿಂದ ನಾ ನಿನ್ನ ಕರೆದೆ 

ಬಾಳಲಿ ಕಂಡ ಭಾವದ ಬೆಳಕೆ ।।ಪ।।


ಮೋಹವ ತೋರಿ ಮಿಂಚುತ ಬಂದೆ 

ಮಾಯದ ಗಾಯ ಮೂಡಿಸಿದೆ 

ಕಾವ್ಯದ ಸೆಲೆಗೆ ಕನ್ನಿಕೆಯಾದೆ 

ಮಂಜಿನ ಹಾಗೆ ನೀ ಸುರಿದೆ 

ಕದಡುವ ಕನಸಿನ ರೂಪವೇ 

ನೋವು ನೀ ನೀಡುವೆ ।।೧।।


ದಾಹವ ತುಂಬಿ ದೂರವೆ ನಿಂತೆ 

ದಾರಿಗ ನನ್ನ ನೀ ದಣಿಸಿ 

ಪ್ರೇಮದ ಕಾವೆ ಕಾಮದ ಹೂವೆ 

ಕಾಡುವುದೇಕೆ ಆವರಿಸಿ 

ಕೊರಗುವ ಮನಸಿದು ಬಾಡಿದೆ 

ಬಾಳು ಬೆಂಡಾಗಿದೆ ।।೨।।

            

Thursday, August 29, 2024

Preetiya Kare Keli (ಪ್ರೀತಿಯ ಕರೆ ಕೇಳಿ)

Bhavageete

Sahitya: S V Parameshwara bhatta

Song link: Click Here


Preetiya kare keli, aatmana more keli

Nee bandu nindilli deepa haccha

Nalla nee bandandu, kannare kandandu

Maneyella holedante deepa haccha ||


Karigejje kunisutta, kannira midiyutta

Irulaake bandalo deepa haccha

Baaninangaladalli chukki holedesevante

Nanna manadangaladi deepa haccha ||


Halebaalu sattittu kole baalu suttittu

Hosabaalu huttittu deepa haccha

Preetiya ratige nee belakina aarati

Belagi kallarati deepa haccha ||


Vishwa mohita charana vividha vishvabharana

Aanandada kirana deepa haccha

Neenemba jyothiyali naanemba patanga

Sota uli helali deepa haccha ||


Nannantarangadi nandade nindipa

Nandadeepavaagirali deepa haccha ||


ಭಾವಗೀತೆ 


ಪ್ರೀತಿಯ ಕರೆ ಕೇಳಿ, ಆತ್ಮನ ಮೊರೆ ಕೇಳಿ 

ನೀ ಬಂದು ನಿಂದಿಲ್ಲಿ ದೀಪ ಹಚ್ಚ 

ನಲ್ಲ ನೀ ಬಂದಂದು, ಕಣ್ಣಾರೆ ಕಂಡಂದು 

ಮನೆಯೆಲ್ಲ ಹೊಳೆದಂತೆ ದೀಪ ಹಚ್ಚ ।।


ಕರಿಗೆಜ್ಜೆ ಕುಣಿಸುತ್ತ, ಕಣ್ಣೀರ ಮಿಡಿಯುತ್ತ 

ಇರುಳಾಕೆ ಬಂದಳೊ ದೀಪ ಹಚ್ಚ 

ಬಾನಿನಂಗಳದಲ್ಲಿ ಚುಕ್ಕಿ ಹೊಳೆದೆಸೆವಂತೆ 

ನನ್ನ ಮನದಂಗಳದಿ ದೀಪ ಹಚ್ಚ ।।


ಹಳೆಬಾಳು ಸತ್ತಿತ್ತು ಕೊಳೆ ಬಾಳು ಸುಟ್ಟಿತ್ತು 

ಹೊಸಬಾಳು ಹುಟ್ಟಿತ್ತು ದೀಪ ಹಚ್ಚ 

ಪ್ರೀತಿಯ ರತಿಗೆ ನೀ ಬೆಳಕಿನ ಆರತಿ 

ಬೆಳಗಿ ಕಲ್ಲಾರತಿ ದೀಪ ಹಚ್ಚ ।।


ವಿಶ್ವ ಮೋಹಿತ ಚರಣ ವಿವಿಧ ವಿಶ್ವಾಭರಣ 

ಆನಂದದ ಕಿರಣ ದೀಪ ಹಚ್ಚ 

ನೀನೆಂಬ ಜ್ಯೋತಿಯಲಿ ನಾನೆಂಬ ಪತಂಗ 

ಸೋತ ಉಲಿ ಹೇಳಲಿ ದೀಪ ಹಚ್ಚ ।।


ನನ್ನಂತರಂಗದಿ ನಂದದೆ ನಿಂದಿಪ 

ನಂದಾದೀಪವಾಗಲೀ ದೀಪ ಹಚ್ಚ ।।

         



Kandenondu Kanasa Naanu (ಕಂಡೆನೊಂದು ಕನಸ ನಾನು)

Bhavageete

Sahitya: Vedavyasa joshi


Kandenondu kanasa naanu

Chinna kelu heluve ||


Neeli mugilinolage nintu

Bimbavondu belaka chelli

Enna manada sumavu arali

Tampu gandha beeridante ||


Suttamutta honna maleyu

Chittavenna navilu kunidu

Nelada sollu keladiralu

Naa..ne naanu haadidante ||


Kolalagaana kiviya tumbi

Ileya maatu keladiralu

Belaku bhava naada bereta

Hosatu lokadirava kande ||


ಭಾವಗೀತೆ 


ಕಂಡೆನೊಂದು ಕನಸ ನಾನು 

ಚಿನ್ನ ಕೇಳು ಹೇಳುವೆ !


ನೀಲಿ ಮುಗಿಲಿನೊಳಗೆ ನಿಂತು 

ಬಿಂಬವೊಂದು ಬೆಳಕ ಚೆಲ್ಲಿ 

ಎನ್ನ ಮನದ ಸುಮವು ಅರಳಿ 

ತಂಪು ಗಂಧ ಬೀರಿದಂತೆ !


ಸುತ್ತಮುತ್ತ ಹೊನ್ನ ಮಳೆಯು 

ಚಿತ್ತವೆನ್ನ ನವಿಲು ಕುಣಿದು 

ನೆಲದ ಸೊಲ್ಲು ಕೇಳದಿರಲು 

ನಾ ..ನೆ ನಾನು ಹಾಡಿದಂತೆ !


ಕೊಳಲಗಾನ ಕಿವಿಯ ತುಂಬಿ 

ಇಳೆಯ ಮಾತು ಕೇಳದಿರಲು 

ಬೆಳಕು ಭಾವ ನಾದ ಬೆರೆತ 

ಹೊಸತು ಲೋಕದಿರವ ಕಂಡೆ !