Tuesday, October 15, 2024

Ee Bhavageete Ninagagi Haadide (ಈ ಭಾವಗೀತೆ ನಿನಗಾಗಿ ಹಾಡಿದೆ)

Movie: Onde Guri (1983)

Singer: SPB

Song link: Click Here


Ee bhavageete ninagagi haadide

Anuraaga nannanu kaviyagi maadide

Ee bhavageete ninagagi haadide (2) ||


Balliyali hoovu tumbi, maragalali jeeva tumbi

Ellelli nodidaralli, hosa hasiru tumbide

Aadutire dumbigalella, haarutire hakkigalella

Tolinda nannanu balasi, nee saniha nintire

Ninna anda kandu santoshagondu, hosa bhava mudalu..

Ee bhavageete ninagagi haadide (2) ||


Kanninali roopa tumbi, manasinali prema tumbi

Nannedeya veeneya meeti, hosa naada tumbide

Aasegala tandu tumbi, mohavanu tumbi tumbi

Nuraru kanasugalannu, baalalli tumbide

Heegeke heege nee mounavade, karana helade

Ee bhavageete ninagagi haadide (2) ||


ಚಿತ್ರಗೀತೆ 


ಈ ಭಾವಗೀತೆ ನಿನಗಾಗಿ ಹಾಡಿದೆ 

ಅನುರಾಗ ನನ್ನನು ಕವಿಯಾಗಿ ಮಾಡಿದೆ 

ಈ ಭಾವಗೀತೆ ನಿನಗಾಗಿ ಹಾಡಿದೆ ।।ಪ।।


ಬಳ್ಳಿಯಲಿ ಹೂವು ತುಂಬಿ, ಮರಗಳಲಿ ಜೀವ ತುಂಬಿ 

ಎಲ್ಲೆಲ್ಲಿ ನೋಡಿದರಲ್ಲಿ, ಹೊಸ ಹಸಿರು ತುಂಬಿದೆ 

ಆಡುತಿರೆ ದುಂಬಿಗಳೆಲ್ಲ, ಹಾರುತಿರೆ ಹಕ್ಕಿಗಳೆಲ್ಲ 

ತೋಳಿಂದ ನನ್ನನು ಬಳಸಿ, ನೀ ಸನಿಹ ನಿಂತಿರೆ 

ನಿನ್ನ ಅಂದ ಕಂಡು ಸಂತೋಷಗೊಂಡು, ಹೊಸ ಭಾವ ಮೂಡಲೂ.. 

ಈ ಭಾವಗೀತೆ ನಿನಗಾಗಿ ಹಾಡಿದೆ  (೨) ।।೨।।


ಕಣ್ಣಿನಲಿ ರೂಪ ತುಂಬಿ, ಮನಸಿನಲಿ ಪ್ರೇಮ ತುಂಬಿ 

ನನ್ನೆದೆಯ ವೀಣೆಯ ಮೀಟಿ, ಹೊಸ ನಾದ ತುಂಬಿದೆ 

ಆಸೆಗಳ ತಂದು ತುಂಬಿ, ಮೋಹವನು ತುಂಬಿ ತುಂಬಿ 

ನೂರಾರು ಕನಸುಗಳನ್ನು, ಬಾಳಲ್ಲಿ ತುಂಬಿದೆ 

ಹೀಗೇಕೆ ಹೀಗೆ ನೀ ಮೌನವಾದೆ, ಕಾರಣ ಹೇಳದೇ .. 

ಈ ಭಾವಗೀತೆ ನಿನಗಾಗಿ ಹಾಡಿದೆ (೨) ।।೨।।

                     

No comments:

Post a Comment