Monday, February 28, 2022

Kelisade Kallu Kallinali Kannada Nudi (ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ)

  • Movie : Belli Kalungura (1992)
  • Singer : Chitra (Female version)
  • Song link: Click Here


Kelisade kallu kallinali

Kannada nudi, kannada nudi

Kanisade honna chariteyali 

Hampeya gudi, hampeya gudi

Vaibhavada tavaru koogide

Preetisuva hrudaya bedide

Kelu nenu || 


Bhurameye aadhara ee kaleya singara

Bangara tereri, moodanave sindhura

Dina dina dina hosadagide

Indiguu jeevantha shileyolage sangeeta

Swara swarada erilitha tungeyali srimantha

Kana kana kana kare needide

Ninomme bandilli hitavagi haadu ||


Gaaliye aadesha meghave sandesha

Premake sanketha hombannadakasha

Ruthu ruthugalu ninna kadive

Ninire rangoli sangathi suvaali

Navarasave maitali jeevanada jokali

Yuga yugadalu nina kayuve

Ninomme bandilli belakannu needu ||



ಚಿತ್ರಗೀತೆ 


ಕೇಳಿಸದೆ ಕಲ್ಲು ಕಲ್ಲಿನಲಿ  

ಕನ್ನಡ ನುಡಿ , ಕನ್ನಡ ನುಡಿ                                          

ಕಾಣಿಸದೆ ಹೊನ್ನ ಚರಿತೆಯಲಿ 

ಹಂಪೆಯ ಗುಡಿ , ಹಂಪೆಯ ಗುಡಿ 


ವೈಭವದ ತವರು ಕೂಗಿದೆ 

ಪ್ರೀತಿಸುವ ಹೃದಯ ಬೇಡಿದೆ 

ಕೇಳು ನೀನು ।।ಪ।।


ಭೂರಮೆಯೇ ಆಧಾರ, ಈ ಕಲೆಯ ಸಿಂಗಾರ 

ಬಂಗಾರ ತೇರೇರಿ ಮೂಡಣವೇ ಸಿಂಧೂರ 

ದಿನ ದಿನ ದಿನ ಹೊಸದಾಗಿದೆ 

ಇಂದಿಗೂ ಜೀವಂತ ಶಿಲೆಯೊಳಗೆ ಸಂಗೀತ 

ಸ್ವರ ಸ್ವರದ ಏರಿಳಿತ ತುಂಗೆಯಲಿ ಶ್ರೀಮಂತ 

ಕಣ ಕಣ ಕಣ ಕರೆ ನೀಡಿದೆ 

ನೀನೊಮ್ಮೆ ಬಂದಿಲ್ಲಿ ಹಿತವಾಗಿ ಹಾಡು 

।।೧।।


ಗಾಳಿಯೇ ಆದೇಶ ಮೇಘವೇ ಸಂದೇಶ 

ಪ್ರೇಮಕೆ ಸಂಕೇತ ಹೊಂಬಣ್ಣದಾಕಾಶ 

ಋತು ಋತುಗಳು ನಿನ್ನ ಕಾದಿವೆ 

ನೀನಿರೆ ರಂಗೋಲಿ ಸಂಗಾತಿ ಸುವ್ವಾಲಿ 

ನವರಸವು ಮೈತಾಳಿ ಜೀವನದ  ಜೋಕಾಲಿ 

ಯುಗಯುಗದಲಲು  ನಿನ್ನ ಕಾಯುವೆ 

ನೀನೊಮ್ಮೆ ಬಂದಿಲ್ಲಿ ಬೆಳಕನ್ನು ನೀಡು

।।೨।।





Sunday, February 27, 2022

Cheluvayya Cheluvo Tani Tandana (ಚೆಲುವಯ್ಯ ಚೆಲುವೊ ತಾನಿ ತಂದಾನ )

Janapada geete

                                          Song link: Click Here


Cheluvayya cheluvo 

tani tandana

Chinmayaroope

 kollanna kole (2)


Namma kerige bandareega

Kariya kambali gaddige hodi

Tandukoduven gandada veelyava

Sutta mutta suripana

Natta naduve sringara tota

kodi baglu dati nam mane || cheluvayya||


Kariya mukhada geleya neenu

Kasturi rumaaludoone

Kogilnange koogutiyalloo

Nillu nillayya raja

Nijaguna ninu balle

Mallige haragalellavoo || 


Nanu neenu seralagi

Nagarapetege hogalagi

Tande tayi golu gollalloo

Atta node, etta node

Chittradurgada kallu node

Atti node namma tavaroora || 


ಜನಪದ ಗೀತೆ 


ಚೆಲುವಯ್ಯ ಚೆಲುವೊ 

ತಾನಿ ತಂದಾನ 

ಚಿನ್ಮಾಯಾ ರೂಪೆ 

ಕೋಲನ್ನ ಕೋಲೆ (೨)


ನಮ್ಮ ಕೇರೀಗ್ ಬಂದರೀಗ 

ಕರಿಯ ಕಂಬಳಿ ಗದ್ದಿಗೆ ಹೂಡಿ 

ತಂದು ಕೊಡುವೆನ್ ಗಂಧದ ವೀಳ್ಯಾವ 


ಸುತ್ತ ಮುತ್ತ ಸೂರಿಪಾನ 

ನಟ್ಟ ನಡುವೆ ಶೃಂಗಾರ್ ತೋಟ 

ಕೋಡಿ ಬಾಗ್ಲು ದಾಟಿ ನಮ್ಮನೆ ।।ಚೆಲುವಯ್ಯ।।


ಕರಿಯ ಮುಖದ ಗೆಳೆಯ ನೀನು 

ಕಸ್ತೂರಿ ರುಮಾಲುದೋನೆ 

ಕೋಗಿಲ್ ನಂಗೆ ಕೂಗುತೀಯಲ್ಲೋ 


ನಿಲ್ಲು ನಿಲ್ಲಯ್ಯ ರಾಜ 

ನಿಜಗುಣ ನೀನು ಬಲ್ಲೆ 

ಮಲ್ಲಿಗೆ ಹಾರಗಳೆಲ್ಲವೋ ।।ಚೆಲುವಯ್ಯ।।


ನಾನು ನೀನು ಸೇರಲಾಗಿ 

ನಾಗರಪೇಟೆಗೆ 

ಹೋಗಲಾಗಿ 

ತಂದೆ ತಾಯಿ ಗೋಳು ಗೋಳಲ್ಲೋ 


ಅತ್ತ ನೋಡೆ, ಇತ್ತ ನೋಡೆ 

ಚಿತ್ರದುರ್ಗದ್ ಕಲ್ಲು ನೋಡೆ 

ಅತ್ತಿ ನೋಡೆ ನಮ್ಮ ತವರೂರ ।।ಚೆಲುವಯ್ಯ।।









Saturday, February 26, 2022

Mungaru Maleye (ಮುಂಗಾರು ಮಳೆಯೇ)

Movie: Mungaru Male (2008)
Singer: Sonu Nigam
Song link: Click Here


Mungaru maleye

Enu ninna hanigala leele


Ninna mugila saale

Dhareya korala premada male

Suriva valumeya jadimale ge preeti moodide

Yava chippinalli, yava haniyu muttaguvudo

Olavu elli kudiyodeyuvudo tiliyadagide..


Mungaru maleye

Enu ninna hanigala leele


Bhuvi kenne tumba

Mugilu surida muttina gurutu

Nanna edeya tumba avalu banda hejjeya gurutu

Hejje gejjeya savi saddu

Prema nadavoo

Ede mugilinalli, rangu chelli nintalu avalu

Baredu hesara kamanabillu

Eanu modiyoo..


Mungaru maleye

Enu ninna hanigala leele


Yaava hanigalinda, yaava nelavu 

Hasiraguvudo

Yaara sparshadinda, yaara manavu 

Hasiyaguvudo

Yaara usiral yaara hesaro, yaaru baredaro

Yaava preeti hoovu, yaara hrudayadall araluvudo

Yaara prema poojege mudipo, yaaru ballaro..


Mungaru maleye

Enu ninna hanigala leele


Olava chandamama, naguta banda 

Manadangalake

Preeti belakinalli, hurdaya horatide 

Meravanige

Avala premadoorina kadege

 Preeti payanavoo

Pranayadoorinalli, kaledu hogo sukava indu

Dhanyanade padedukondu, hosa janmavoo..


Mungaru maleye

Enu ninna hanigala leele


ಚಿತ್ರಗೀತೆ 


ಮುಂಗಾರು ಮಳೆಯೇ 

ಏನು ನಿನ್ನ ಹನಿಗಳ ಲೀಲೆ 

ನಿನ್ನ ಮುಗಿಲ ಸಾಲೆ 

ಧರೆಯ ಕೊರಳ ಪ್ರೇಮದ ಮಾಲೆ 

ಸುರಿವ ಒಲುಮೆಯ ಜಡಿ ಮಳೆಗೆ 

ಪ್ರೀತಿ ಮೂಡಿದೆ 

ಯಾವ ಚಿಪ್ಪಿನಲ್ಲಿ , ಯಾವ ಹನಿಯು 

ಮುತ್ತಾಗುವುದೊ 

ಒಲವು ಎಲ್ಲಿ ಕುಡಿಯೊಡೆಯುವುದೊ 

ತಿಳಿಯದಾಗಿದೆ  ।।ಮುಂಗಾರು ।।


ಭುವಿ ಕೆನ್ನೆ ತುಂಬ, ಮುಗಿಲು ಸುರಿದ 

ಮುತ್ತಿನ ಗುರುತು 

ನನ್ನ ಎದೆಯ ತುಂಬ , ಅವಳು ಬಂದ 

ಹೆಜ್ಜೆಯ ಗುರುತು 

ಹೆಜ್ಜೆ ಗೆಜ್ಜೆಯ ಸವಿ ಸದ್ದು , ಪ್ರೇಮನಾದವೋ 

ಎದೆ ಮುಗಿಲಿನಲ್ಲಿ , ರಂಗು ಚೆಲ್ಲಿ ನಿಂತಳು ಅವಳು 

ಬರೆದು ಹೆಸರ ಕಾಮನ ಬಿಲ್ಲು 

ಏನು ಮೋಡಿಯೋ ।।ಮುಂಗಾರು ।।


ಯಾವ ಹನಿಗಳಿಂದ , ಯಾವ ನೆಲವು 

ಹಸಿರಾಗುವುದೊ 

ಯಾರ ಸ್ಪರ್ಷ ದಿಂದ  ಯಾರ ಮನವು 

ಹಸಿಯಾಗುವುದೊ 

ಯಾರ ಉಸಿರಾಲ್ಯರ ಹೆಸರೊ 

ಯಾರು ಬರೆದರೊ 

ಯಾವ ಪ್ರೀತಿ ಹೂವು 

ಯಾರ ಹೃದಯದಲ್ಲರಳುವುದೊ 

ಯಾರ ಪ್ರೇಮ ಪೂಜೆಗೆ ಮೂಡಿಪೊ 

ಯಾರು ಬಲ್ಲರು ।।ಮುಂಗಾರು ।।


ಒಲವ ಚಂದಮಾಮ , ನಗುತ ಬಂದ 

ಮನದಂಗಳಕೆ 

ಪ್ರೀತಿ ಬೆಳಕಿನಲ್ಲಿ , ಹೃದಯ ಹೊರಟಿದೆ 

ಮೆರವಣಿಗೆ 

ಅವಳ ಪ್ರೇಮದೂರಿನ ಕಡೆಗೆ

ಪ್ರೀತಿ ಪಯಣವೋ 

ಪ್ರಣಯದೂರಿನಲ್ಲಿ, ಕಳೆದು ಹೋಗೋ ಸುಖವ ಇಂದು 

 ಧನ್ಯನಾದೆ ಪಡೆದುಕೊಂಡು 

ಹೊಸ ಜನ್ಮವೋ ।।ಮುಂಗಾರು ।।





Saturday, February 19, 2022

Mugila Marige Ragaratiya (ಮುಗಿಲ ಮಾರಿಗೆ ರಾಗರತಿಯ)

Bhavageete

sahitya : Da Ra Bendre

Song link: Click Here




Mugila maarige ragaratiyaa..

Nanja eritta

Aaga sanje aagitta


Nelada anchige mangina musuku

Hango bidditta

Galige melakkedditta


Bidigee chandrana chogachii nagi hoo

Mellaga mooditta 

Myalaka bellina kooditta

Erula heralinaa arala malligee

Jalige hangitta 

Susyava chikki attitta  ||



Bogaseganninaa bayakeya hennu 

Neerige hogitta

Tirugi maneege sagitta

Kami becchidanga bhavihadi

Kalaga suliditta 

Eragi hindakkuliditta  ||


Mallagali suli kalla kaile

Seraganu hiditta 

Matamata beragile bidaditta

Ondu manada gini 

Hinda nallige bennile baratitta

Tanna maimana maretitta   ||



ಭಾವಗೀತೆ 


ಮುಗಿಲ ಮಾರಿಗೆ ರಾಗರತಿಯ .. 

ನಂಜ ಏರಿತ್ತ 

ಆಗ ಸಂಜೆ ಆಗಿತ್ತ.. 


ನೆಲದ ಅಂಚಿಗೆ ಮಂಜಿನ ಮುಸುಕು 

ಹ್ಯಾಂಗೋ ಬಿದ್ದಿತ್ತ 

ಗಾಳಿಗೆ ಮೇಲಕ್ಕೆದ್ದಿತ್ತ 


ಬಿದಿಗಿ ಚಂದ್ರನ ಚೊಗಚಿ ನಗಿ ಹೂ 

ಮೆಲ್ಲಗ ಮೂಡಿತ್ತ 

ಮ್ಯಾಲಕ ಬೆಳ್ಳಿನ ಕೊಡಿತ್ತ 


ಇರುಳ ಹೆರಳಿನ ಅರಳ ಮಲ್ಲಿಗೀ 

ಜಾಳಿಗೆ ಹಂಗಿತ್ತ 

ಸೂಸ್ಯಾವ ಚಿಕ್ಕಿ ಅತ್ತತ್ತ ।।ಮುಗಿಲ ಮಾರಿಗೆ।।


ಬೊಗಸೆಗಣ್ಣಿನಾ ಬಯಕೆಯ ಹೆಣ್ಣು 

ನೀರಿಗೆ ಹೋಗಿತ್ತ

ತಿರುಗಿ ಮನೀಗೆ ಸಾಗಿತ್ತ 


ಕಾಮಿ ಬೆಚ್ಚಿದಾಂಗ ಭಾವಿಹಾದಿ 

ಕಾಲಾಗ ಸುಳಿದಿತ್ತ 

ಎರಗಿ ಹಿಂದಕ್ಕುಳಿದಿತ್ತ  ।।ಮುಗಿಲ ಮಾರಿಗೆ।।


ಮಳ್ಳಗಾಳಿ ಸುಳಿ ಕಳ್ಳ ಕೈಲೆ 

ಸೆರಗನು ಹಿಡಿದಿತ್ತ 

ಮತಮತ ಬೆರಗಿಲೆ ಬಿಡದಿತ್ತ 


ಒಂದ ಮನದ ಗಿಣಿ ಹಿಂದ ನಳ್ಳಿಗೆ 

ಬನ್ನಿಲೆ ಬರಲಿತ್ತ 

ತನ್ನ ಮೈಮನ ಮರೆತಿತ್ತ  ।।ಮುಗಿಲ ಮಾರಿಗೆ।।

                                       







Thursday, February 17, 2022

Ninnindale Ninnindale (ನಿನ್ನಿಂದಲೇ ನಿನ್ನಿಂದಲೇ )


  • Movie: Milana (2007)
  • Singer: Sonu Nigam
  • Song link:Click Here



Ninnindale ninnindale kanasondu shuruvagide

Ninnindale ninnindale manasindu kunidadide


Ee edeyalli sihiyada kolahala

Nanneduralle ne hege bandagalae

Ninna tutiyalli naguvaguva hambala

Na nintalle haalade ninnindale


Ninnindale ninnindale kanasondu shuruvagide

Ninnindale ninnindale manasindu kunidadide


Erulalli jwaradante kaadi eega

Hayagi nintiruve sari yenu

Bekantale madi enoo modi

Enello noduva pari enu

Ee maayege ee marulige ninninda kale bandide

Ninnindale ninnindale kanasondu shuruvagide


Hodalli bandalli ella ninna

Sompada cheluvina gunagaana

Kedege gariyantha ninna nota

Nanageno andante anumana

Kannindale saddillade muddada kare bandide

Ninnindale ninnindale kanasondu shuruvagide


Ee edeyalli sihiyada kolahala

Nanneduralle ne hege bandagalae

Ninna tutiyalli naguvaguva hambala

Na nintalle haalade ninnindale


Ninnindale ninnindale kanasondu shuruvagide

Ninnindale ninnindale manasindu kunidadide


ಚಿತ್ರಗೀತೆ 


ನಿನ್ನಿಂದಲೇ ನಿನ್ನಿಂದಲೇ 

ಕನಸೊಂದು ಶುರುವಾಗಿದೆ 

ನಿನ್ನಿಂದಲೇ ನಿನ್ನಿಂದಲೇ

ಮನಸಿಂದು ಕುಣಿದಾಡಿದೆ 


ಈ ಎದೆಯಲ್ಲಿ ಸಿಹಿಯಾದ ಕೋಲಾಹಲ 

ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ 

ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ 

ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ 

।।ನಿನ್ನಿಂದಲೇ ।।


ಇರುಳಲ್ಲಿ ಜ್ವರದಂತೆ ಕಾಡಿ ಈಗ 

ಹಾಯಾಗಿ ನಿಂತಿರುವೆ ಸರಿ ಏನು 

ಬೇಕಂತಲೇ ಮಾಡಿ ಏನೋ ಮೋಡಿ 

ಇನ್ನೆಲ್ಲೊ ನೋಡುವ ಪರಿ ಏನು 

ಈ ಮಾಯೆಗೆ ಈ ಮರುಳಿಗೆ 

ನಿನ್ನಿಂದ ಕಳೆ ಬಂದಿದೆ  ।।ನಿನ್ನಿಂದಲೇ ।।


ಹೋದಲ್ಲಿ ಬಂದಲ್ಲಿ ಎಲ್ಲಾ ನಿನ್ನ 

ಸೊಂಪಾದ ಚೆಲುವಿನ ಗುಣಗಾನ 

ಖೇದಿಗೆ ಗರಿಯಂಥ ನಿನ್ನ ನೋಟ 

ನನಗೇನೋ ಆದಂತೆ ಅನುಮಾನ 

ಕಣ್ಣಿಂದಲೇ ಸದ್ದಿಲ್ಲದೆ ಮುದ್ದಾದ ಕರೆ ಬಂದಿದೆ 

।।ನಿನ್ನಿಂದಲೇ ।।


ಈ ಎದೆಯಲ್ಲಿ ಸಿಹಿಯಾದ ಕೋಲಾಹಲ 

ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ 

ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ 

ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ 

।।ನಿನ್ನಿಂದಲೇ ।।







Tuesday, February 15, 2022

Ninna Nodi Summnhengirli (ನಿನ್ನಾ ನೋಡಿ ಸುಮ್ನ್ ಹೆಂಗಿರ್ಲಿ)

Movie: Robert (2021)

Singer: Shreya Ghoshal

Song link: Click Here


Kannu hodiyaka, monne kalatani

Neena helale magana

Ninna nodi summanhengirli?

Ninna nodi summanhengirli?


Bella kadiyaka, ninne kalatani

Galla chachale magana

Ninna nodi summanhengirli?

Ninna nodi summanhengirli?


Baala love maadeni hengara tadakalli

Helade na hengirli?

Nooru makkalu beku fifty ningirrli

En fifty nangirrli

Jara argent iti, rotti jari tuppaka beeli ||ninna||


Siri siri mandara, nanna mudiyali edu baara

Nintu doora nagabyada nanna nodi

Sarasada saradara tuti sakkari kadibara

Yaka koluti savi muttige tadamaadi

Egadi jaldi cheligala barali

Ninnusirina bisigali sigali

Hididu tabbkontini publicnyaga agid agli ||


Summaka eruvollae, sari hottige unavollae

Hucchu hididu aageti shatamana

Vili vili oddata, tali dimbige muddata

Nanna myala bedsheetigun anumana

Ontitanaka shatibyani barali

Ee virahaka parihara sigali

Jaldi helale magana byg etikondu ellige barli ||


ಚಿತ್ರಗೀತೆ 


ಕಣ್ಣು ಹೊಡಿಯಾಕ, ಮೊನ್ನೆ ಕಲತಾನಿ 

ನೀನಾ ಹೇಳಲೇ ಮಗನಾ 

ನಿನ್ನಾ ನೋಡಿ ಸುಮ್ನ್ ಹೆಂಗಿರ್ಲಿ ?

ನಿನ್ನಾ ನೋಡಿ ಸುಮ್ನ್ ಹೆಂಗಿರ್ಲಿ ?


ಬೆಲ್ಲಾ ಕಡಿಯಾಕ, ನಿನ್ನೆ ಕಲತಾನಿ 

ಗಲ್ಲಾ ಚಾಚಲೇ ಮಗನಾ 

ನಿನ್ನಾ ನೋಡಿ ಸುಮ್ನ್ ಹೆಂಗಿರ್ಲಿ ?

ನಿನ್ನಾ ನೋಡಿ ಸುಮ್ನ್ ಹೆಂಗಿರ್ಲಿ ?


ಬಾಳ ಲವ್ ಮಾಡೇನಿ ಹೆಂಗರ ತಡಕಳ್ಳಿ 

ಹೇಳದೆ ನಾ ಹೆಂಗಿರ್ಲಿ ?

ನೂರು ಮಕ್ಕಳು ಬೇಕು ಫಿಫ್ಟಿ ನಿಂಗಿರ್ಲಿ 

ಇನ್ ಫಿಫ್ಟಿ ನಂಗಿರ್ಲಿ 

ಜರ ಅರ್ಜೆಂಟ್ ಐತಿ, ರೊಟ್ಟಿ ಜಾರಿ ತುಪ್ಪಕ ಬೀಳ್ ಲಿ 

।।ನಿನ್ನಾ ।।


ಸಿರಿ ಸಿರಿ ಮಂದಾರ, ನನ್ನ ಮುಡಿಯಲಿ ಇಡು ಬಾರ 

ನಿಂತೂ ದೂರ ನಗಬ್ಯಾಡ ನನ ನೋಡಿ 

ಸರಸದ ಸರದಾರ ತುಟಿ ಸಕ್ಕರಿ ಕದಿ ಬಾರ 

ಯಾಕ ಕೊಲುತಿ ಸವಿ ಮುತ್ತಿಗೆ ತಡ ಮಾಡಿ 

ಅಗದಿ ಜಲ್ದಿ ಚಳಿಗಾಲ ಬರಲಿ, ನಿನ್ನುಸಿರಿನ ಬಿಸಿಗಾಳಿ ಸಿಗಲಿ 

ಹಿಡಿದು ತಬ್ಕೊಂತಿನಿ ಪಬ್ಲಿಕ್ಕಿನ್ಯಾಗ 

ಆಗಿದ್ದ್ ಆಗ್ಲಿ ।।ನಿನ್ನಾ ।।


ಸುಮ್ಮಕ ಇರುವೊಲ್ಲೆ, ಸರಿ ಹೊತ್ತಿಗೆ ಉಣವೊಲ್ಲೇ 

ಹುಚ್ಚು ಹಿಡಿದು ಆಗೇತಿ ಶತಮಾನ 

ವಿಲಿವಿಲಿ ಒದ್ದಾಟ, ತಲಿ ದಿಂಬಿಗೆ ಮುದ್ದಾಟ 

ನನ್ನ ಮ್ಯಾಲ ಬೆಡ್ ಶೀಟಿಗೂ ಅನುಮಾನ 

ಒಂಟಿ ತನಕ ಶತಿ ಬ್ಯಾನಿ ಬರಲಿ 

ಈ ವಿರಹಕ ಪರಿಹಾರ ಸಿಗಲಿ 

ಜಲ್ದಿ ಹೇಳಲೇ ಮಗನಾ ಬ್ಯಾಗ್ ಎತ್ತಿಕೊಂಡು 

ಎಲ್ಲಿಗೆ ಬರ್ಲಿ ? ।।ನಿನ್ನಾ ।।

                 


Monday, February 14, 2022

Male Nintu Hoda Mele (ಮಳೆ ನಿಂತು ಹೋದ ಮೇಲೆ )


  • Movie: Milana (2007)
  • Singers: Shreya Ghoshal, Sonu Nigam
  • Song link: Click Here


Male nintu hodamele hani ondu moodide

Maatella mugida mele dani ondu kaadide

Heluvudu eno ulidu hoogide

Helali hege teliyadagide ||


Noovinalli jeeva jeeva arita nantara

Nalivu bere enide eki antara

Ninna haadinalli indu bereva kaatara

Onde sari nee kaeleya ee swara

Manasalli chooru jaga bekide

Kelali hege teliyadagide ||


Kannu teredu kaanuva kanase jeevana

Sanna hatava maadide hrudaya ee dina

Edeya dooravaaniya kareya rinngana

Kelu jeevave etaki kampana

Hrudayavu elle kaledu hoogide

Hudukale beke tiliyadagide ||


ಚಿತ್ರಗೀತೆ 


ಮಳೆ ನಿಂತು ಹೋದ ಮೇಲೆ 

ಹನಿಯೊಂದು ಮೂಡಿದೆ 

ಮಾತೆಲ್ಲ ಮುಗಿದ ಮೇಲೆ 

ದನಿಯೊಂದು ಕಾಡಿದೆ 

ಹೇಳುವುದು ಏನೋ ಉಳಿದು ಹೋಗಿದೆ 

ಹೇಳಲಿ ಹೇಗೆ ತಿಳಿಯದಾಗಿದೆ ।।ಮಳೆ ।।


ನೋವಿನಲ್ಲಿ ಜೀವ ಜೀವ ಅರಿತ ನಂತರ 

ನಲಿವು ಬೇರೆ ಏನಿದೆ ಏಕೀ ಅಂತರ 

ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ 

ಒಂದೇ ಸಾರಿ ನೀ ಕೇಳೆಯಾ ಈ ಸ್ವರ 

ಮನಸಲ್ಲಿ ಚೂರು ಜಾಗ ಬೇಕಿದೆ 

ಕೇಳಲಿ ಹೇಗೆ ತಿಳಿಯದಾಗಿದೆ ।।ಮಳೆ ।।


ಕಣ್ಣು ತೆರೆದು ಕಾಣುವ ಕನಸೇ ಜೀವನ 

ಸಣ್ಣ ಹಠವ ಮಾಡಿದೆ ಹೃದಯ ಈ ದಿನ

ಎದೆಯ ದೂರವಾಣಿಯ ಕರೆಯ ರಿಂಗಣ 

ಕೇಳು ಜೀವವೇ ಏತಕೀ ಕಂಪನ 

ಹೃದಯವು ಇಲ್ಲೇ ಕಳೆದು ಹೋಗಿದೆ 

ಹುಡುಕಲೇ ಬೇಕೇ ತಿಳಿಯದಾಗಿದೆ ।।ಮಳೆ ।।




Sunday, February 13, 2022

Ondu Malebillu (ಒಂದು ಮಳೆಬಿಲ್ಲು)

  • Movie : Chakravarthy (2017)
  • Singers: Armaan Malik, Shreya Goshal
  • Song link: Click Here


Ondu malebillu

Ondu malemooda

Hego jotheyagi

Tumba sogasagi

Enano matadive

Bhavane baki eve


Teeli nooraru mailiyu

Seralu sani saniha

Mooda sagi bandide preetige

Muddagi serive eradu saha

Enano matadive

Bhavane baki eve ||


Sannegalige soota kannugalive

Kaddu koduvudake kaada muttugalive

Beralugalu sparsha bayasutive

Manada olagolage easto aasegalive

Enta aavega ee tavaka

Sero saluvagi ella atiyagi

Ellu nodilla ee tanaka

Preetige ond hegge mundagive

Enano matadive yatake heegagive ||


Nachutalive yako kaiya bale

Mancha noodutide beelo bevara male

Becchage ide netta usira bele

Deepa malagutide noodi ee ragale

Tumba hosadada ee kathana

Omme nishabdha omme sihiyuddha

Eallu kelilla ee mithuna

Preetili ee jeeva ondagive

Enano Umm....hmmm..

Maatale muddadive ||


ಚಿತ್ರಗೀತೆ 


ಒಂದು ಮಳೆಬಿಲ್ಲು 

ಒಂದು ಮಳೆಮೋಡ 

ಹೇಗೋ ಜೊತೆಯಾಗಿ 

ತುಂಬಾ ಸೊಗಸಾಗಿ 

ಏನನೋ ಮಾತಾಡಿವೆ 

ಭಾವನೆ ಬಾಕಿ ಇವೆ 


ತೇಲಿ ನೂರಾರು ಮೈಲಿಯು 

ಸೇರಲು ಸನಿ ಸನಿಹ 

ಮೋಡ ಸಾಗಿ ಬಂದಿದೆ ಪ್ರೀತಿಗೆ 

ಮುದ್ದಾಗಿ ಸೇರಿವೆ ಎರಡು ಸಹ 

ಏನನೋ ಮಾತಾಡಿವೆ 

ಭಾವನೆ ಬಾಕಿ ಇವೆ ।।ಒಂದು ।।


ಸನ್ನೆಗಳಿಗೆ ಸೋತ ಕಣ್ಣುಗಳಿವೆ 

ಕದ್ದು ಕೊಡುವುದಕೆ ಕಾದ ಮುತ್ತುಗಳಿವೆ 

ಬೆರಳುಗಳು ಸ್ಪರ್ಶ ಬಯಸುತಿವೆ 

ಮನದ ಒಳಗೊಳಗೆ ಎಷ್ಟೋ ಆಸೆಗಳಿವೆ 

ಎಂತ ಆವೇಗ ಈ ತವಕ 

ಸೇರೋ ಸಲುವಾಗಿ ಎಲ್ಲ ಅತಿಯಾಗಿ 

ಎಲ್ಲೂ ನೋಡಿಲ್ಲ ಈ ತನಕ 

ಪ್ರೀತಿಗೆ ಒಂದ್ ಹೆಜ್ಜೆ ಮುಂದಾಗಿವೆ 

ಏನನೋ ಮಾತಾಡಿವೆ 

ಯಾತಕೆ ಹೀಗಾಗಿವೆ ।।ಒಂದು ।।


ನಾಚುತಲಿವೆ ಯಾಕೊ ಕೈಯ ಬಳೆ 

ಮಂಚ ನೋಡುತಿದೆ ಬೀಳೋ ಬೆವರ ಮಳೆ 

ಬೆಚ್ಚಗೆ ಇದೆ ನೆಟ್ಟ ಉಸಿರ ಬೆಳೆ 

ದೀಪ ಮಲಗುತಿದೆ ನೋಡಿ ಈ ರಗಳೆ 

ತುಂಬಾ ಹೊಸದಾದ ಈ ಕಥನ 

ಒಮ್ಮೆ ನಿಶಬ್ಧ ಒಮ್ಮೆ ಸಿಹಿಯುದ್ದ 

ಎಲ್ಲೂ ಕೇಳಿಲ್ಲ ಈ ಮಿಥುನ 

ಪ್ರೀತಿಲಿ ಈ ಜೀವ ಒಂದಾಗಿವೆ 

ಏನನೋ .... ಉಮ್ಮ್ ಹ್ಮ್ಮ್ .. 

ಮಾತಲೇ ಮುದ್ದಾಡಿವೆ ।।ಒಂದು ।।






Friday, February 11, 2022

Madarangiyalli Manasina Rangu Moodide (ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ)

  • Movie: Milana (2007)
  • Singers: Rajesh Krishnan, Shreya Goshal
  • Song link: Click Here


Madarangiyalli manasina rangu moodide

Basingadalli kanasina muttu tuugide

Banni kuniyona ella seri 

Naliyona shuba kori

Ullasadalli ee dina

Bala daarili hosa jodi horatide jotegoodi

Ellellu taliru torana (2)


Madarangiyalli manasina rangu moodide

Basingadalli kanasina muttu tuugide


Aatada bayalina aatava toredu

Nootana putavanu tereyuva samaya

Kalashada kannadi holeyutaliralu

Mamateya dhareya ereyuva samaya

Hiriyara hrudayavu haniyuva samaya

Ho hareyada kanngalu araluva samaya

Kaiyaliralu hoomale kanninalli prana

Tereyondu saridaga sanjeevana


Akshateyu eega nachuta kempagagide

Madarangiyalli manasina rangu moodide


Malebisilirali sihi kahi erali

Aasareyaguva vachanada samaya

Mangalasutradi balina patavu

Banige eruva payanada samaya

Nalumeya dibbana naliyuva samaya

Nenapina baagina needuva samaya


Agnisakshiyalliga antaranga milana

Cheluvina ouutanada sammilana


Pallakkiyindu haaruva hakkiyagide

Madarangiyalli manasina rangu moodide

Banni kuniyona ella seri naliyona

Ullasadalli ee dina

Bala daarili hosa jodi horatide jotegoodi

Ellelu taliru torana


Balagalanittu balindu olage bandide

Manadangaladalli preetiya deepa belagide..


ಚಿತ್ರಗೀತೆ 


ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ (೨)

ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ 

ಬನ್ನಿ ಕುಣಿಯೋಣ ಎಲ್ಲ ಸೇರಿ 

ನಲಿಯೋಣ ಶುಭ ಕೋರಿ 

ಉಲ್ಲಾಸದಲ್ಲಿ ಈ ದಿನ 

ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜೊತೆಗೂಡಿ 

ಎಲ್ಲೆಲ್ಲೂ ತಳಿರು ತೋರಣ ।।ಪ ।।


ಆಟದ ಬಯಲಿನ ಆಟವ ತೊರೆದು 

ನೂತನ ಪುಟವನು ತೆರೆಯುವ ಸಮಯ 

ಕಳಶದ ಕನ್ನಡಿ ಹೊಳೆಯುತಲಿರಲು 

ಮಮತೆಯ ಧಾರೆಯ ಎರೆಯುವ ಸಮಯ 

ಹಿರಿಯರ ಹೃದಯವು ಹನಿಯುವ ಸಮಯ 

ಹೋ .. ಹರೆಯದ ಕಣ್ಗಳು ಅರಳುವ ಸಮಯ 

ಕೈಯಲಿರಲು ಹೂ ಮಾಲೆ ಕಣ್ಣಿನಲ್ಲಿ ಪ್ರಾಣ 

ತೆರೆಯೊಂದು ಸರಿದಾಗ ಸಂಜೀವನ 

ಅಕ್ಷತೆಯು ಈಗ ನಾಚುತ ಕೆಂಪಗಾಗಿದೆ 

ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ.. 


ಮಳೆಬಿಸಿಲಿರಲಿ ಸಿಹಿ ಕಹಿ ಇರಲಿ 

ಆಸರೆಯಾಗುವ ವಚನದ ಸಮಯ 

ಮಂಗಳ ಸೂತ್ರದಿ ಬಾಳಿನ ಪಟವು 

ಬಾನಿಗೆ ಏರುವ ಪಯಣದ ಸಮಯ 

ನಲುಮೆಯ ದಿಬ್ಬಣ ನಲಿಯುವ ಸಮಯ 

ನೆನೆಪಿನ ಬಾಗೀನ ನೀಡುವ ಸಮಯ 

ಅಗ್ನಿ ಸಾಕ್ಷಿಯಲ್ಲೀಗ ಅಂತರಂಗ ಮಿಲನ 

ಚೆಲುವಿನ ಔತಣದ ಸಮ್ಮಿಲನ 

ಪಲ್ಲಕ್ಕಿಯಿಂದು ಹಾರುವ ಹಕ್ಕಿಯಾಗಿದೆ 

ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ.. 


ಬನ್ನಿ ಕುಣಿಯೋಣ ಎಲ್ಲ ಸೇರಿ 

ನಲಿಯೋಣ ಶುಭ ಕೋರಿ 

ಉಲ್ಲಾಸದಲ್ಲಿ ಈ ದಿನ 

ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜೊತೆಗೂಡಿ 

ಎಲ್ಲೆಲ್ಲೂ ತಳಿರು ತೋರಣ

ಬಲಗಾಲನಿಟ್ಟು ಬಾಳಿಂದು ಒಳಗೆ ಬಂದಿದೆ 

ಮನದಂಗಳದಲ್ಲಿ ಪ್ರೀತಿಯ ದೀಪ ಬೆಳಗಿದೆ .. 



Sunday, February 6, 2022

Neeralli Sanna Aleyondu Moodi (ನೀರಲ್ಲಿ ಸಣ್ಣ ಅಲೆಯೊಂದು ಮೂಡಿ )

Movie : Hudugaru (2011)

                         Singers: Sonu Nigam, Sunita Gopuraj

                         Song link: Click Here


Neeralli sanna aleyondu moodi

Choorada chandraneega

Illondu chooru allondu chooru

Ondagabeku bega

Tusu doora summane, joteyalli bandeya

Naduvello mellane, mayavadeyaa..


Eddalle aalisaballe ninnella pisumathu

Nannalle neeneruvaga enneke rujuvaathu

Nenapinalli neenega endiginta saniha

Alisalare naanenduu manada gode baraha

Sahiyaadamele sahageeteyondu

Mareyaayiteeke nodu

Illondu sallu allondu sallu

Beretagalene haadu  ||


Darili hoogidavindu kattilla hoomale

Kannalli kannidu neenu mattella aamele

Kanaballe kanasallu ninna hegge gurutu

Keelabeda ennenu neenu nanna kuritu

Edeyaladinda madhumounaondu 

Karevaga jentiaagi

Ellondu jeeva allondu jeeva

Erabeke ontiyagi   ||



ಚಿತ್ರಗೀತೆ 


ನೀರಲ್ಲಿ ಸಣ್ಣ ಅಲೆಯೊಂದು ಮೂಡಿ 

ಚೂರಾದ ಚಂದ್ರನೀಗ 

ಇಲ್ಲೊಂದು ಚೂರು ಅಲ್ಲೊಂದು ಚೂರು 

ಒಂದಾಗಬೇಕು ಬೇಗ ।।ಪ।।


ತುಸು ದೂರ ಸುಮ್ಮನೆ ಜೊತೆಯಲ್ಲಿ ಬಂದೆಯ 

ನಡುವೆಲ್ಲೋ ಮೆಲ್ಲನೆ ಮಾಯವಾದೆಯ ।।ಅನು।।


ಇದ್ದಲ್ಲೇ ಆಲಿಸಬಲ್ಲೆ ನಿನ್ನೆಲ್ಲ ಪಿಸುಮಾತು 

ನನ್ನಲ್ಲೇ ನೀನಿರುವಾಗ ಇನ್ನೇಕೆ ರುಜುವಾತು 

ನೆನಪಿನಲ್ಲಿ ನೀನೀಗ ಎಂದಿಗಿಂತ ಸನಿಹ 

ಅಳಿಸಲಾರೆ ನಾನೆಂದೂ ಮನದ ಗೋಡೆ ಬರಹ 

ಸಹಿಯಾದ ಮೇಲೆ ಸಹಗೀತೆಯೊಂದು 

ಮರೆಯಾಯಿತೇಕೆ ನೋಡು 

ಇಲ್ಲೊಂದು ಸಾಲು ಅಲ್ಲೊಂದು ಸಾಲು 

ಬೆರೆತಾಗಲೇನೆ ಹಾಡು ।।೧।। 


ದಾರೀಲಿ ಹೂಗಿಡವಿಂದು ಕಟ್ಟಿಲ್ಲ ಹೂಮಾಲೆ 

ಕಣ್ಣಲ್ಲಿ ಕಣ್ಣಿಡು ನೀನು ಮತ್ತೆಲ್ಲ ಆಮೇಲೆ 

ಕಾಣಬಲ್ಲೆ ಕನಸಲ್ಲೂ ನಿನ್ನ ಹೆಜ್ಜೆ ಗುರುತು 

ಕೇಳಬೇಡ ಇನ್ನೇನು ನೀನು ನನ್ನ ಕುರಿತು 

ಎದೆಯಾಳದಿಂದ ಮದುಮೌನವೊಂದು 

ಕರೆವಾಗ ಜಂಟಿಯಾಗಿ 

ಇಲ್ಲೊಂದು ಜೀವ ಅಲ್ಲೊಂದು ಜೀವ 

ಇರಬೇಕೆ ಒಂಟಿಯಾಗಿ ।।೨।।



Friday, February 4, 2022

O Maina O Maina (ಓ ಮೈನಾ ಓ ಮೈನಾ )

Movie: Yajamana (2000)

Singers: Rajesh Krishnan, K S Chitra

Song link: Click Here


O maina o maina enidu maaye?

Male illade mai neneyo mayada maaye


Nenne kanda notave antaralavagide

Indu kanda notave gattimelavagide

Raga ennale , anuraga ennale?

Preeti ennale , hosa maaye ennale?


O maina o maina enidu maaye?

Male illade mai neneyo mayada maaye


kaaveri teeradali baredenu ninhesara

Maralella honnaitu yaava maaye?


Bidirina kadinali koogide ninhesara

Bidirella kolalaitu yaava maaye?


Sutravu iradae galiyu irade

Banali gali patavagiruve

Inta mayavi santhosha innene maina?


O maina o maina enidu maaye?

Male illade mai neneyo mayada maaye


Bedana kannige banava natisuva

Ee jinke bete illi yava maaye?


Hattige benkiyanu hattisuva maaye

Meenugale gala beeso yava maaye?


Aakashakke baleya beesi

Moda naguva marma eano?

Inta mayavi santhosha innene maina?


O maina o maina enidu maaye?

Male illade mai neneyo mayada maaye


Nenne kanda notave antaralavagide

Indu kanda notave gattimelavagide

Raga ennale , anuraga ennale?

Preeti ennale , hosa maaye ennale?


ಚಿತ್ರಗೀತೆ 


ಓ ಮೈನಾ ಓ ಮೈನಾ 

ಏನಿದು ಮಾಯೆ 

ಮಳೆಯಿಲ್ಲದೆ ಮೈ ನೆನೆಯೋ 

ಮಾಯದ ಮಾಯೆ 


ನೆನ್ನೆ ಕಂಡ ನೋಟವೇ  ಅಂತರಾಳವಾಗಿದೆ 

ಇಂದು ಕಂಡ ನೋಟವೇಗಟ್ಟಿಮೇಳವಾಗಿದೆ 

ರಾಗ ಎನ್ನಲೇ ?ಅನುರಾಗ ಎನ್ನಲೇ ?

ಪ್ರೀತಿ ಎನ್ನಲೇ ?ಹೊಸ ಮಾಯೆ ಎನ್ನಲೇ ?


ಓ ಮೈನಾ ಓ ಮೈನಾ 

ಏನಿದು ಮಾಯೆ ..

ಮಳೆಯಿಲ್ಲದೆ ಮೈ ನೆನೆಯೋ 

ಮಾಯದ ಮಾಯೆ 


ಕಾವೇರಿ ತೀರದಲಿ ಬರೆದೆನು ನಿನ್ಹೆಸರ 

ಮರಳೆಲ್ಲ ಹೊನ್ನಾಯ್ತು ಯಾವ ಮಾಯೆ ?


ಬಿದಿರಿನ ಕಾಡಿನಲಿ ಕೂಗಿದೆ ನಿನ್ಹೆಸರ 

ಬಿದಿರೆಲ್ಲ ಕೊಳಲಾಯ್ತು ಯಾವ ಮಾಯೆ ?


ಸೂತ್ರವು ಇರದೇ ಗಾಳಿಯು ಇರದೇ 

ಬಾನಲಿ ಗಾಳಿ ಪಟವಾಗಿರುವೆ 

ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ ?


ಓ ಮೈನಾ ಓ ಮೈನಾ 

ಏನಿದು ಮಾಯೆ ..

ಮಳೆಯಿಲ್ಲದೆ ಮೈ ನೆನೆಯೋ 

ಮಾಯದ ಮಾಯೆ 


ಬೇಡನ ಕಣ್ಣಿಗೆ ಬಾಣವ ನಾಟಿಸುವ 

ಈ ಜಿಂಕೆ ಬೇಟೆ ಇಲ್ಲಿ ಯಾವ ಮಾಯೆ ?


ಹತ್ತಿಗೆ ಬೆಂಕಿಯನು ಹತ್ತಿಸುವ ಮಾಯೆ 

ಮೀನುಗಳೆ ಗಾಳ ಬೀಸೋ ಯಾವ ಮಾಯೆ 


ಆಕಾಶಕ್ಕೆ ಬಲೆಯ ಬೀಸಿ 

ಮೋಡ ನಗುವ ಮರ್ಮ ಏನೋ ?

ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ ?


ಓ ಮೈನಾ ಓ ಮೈನಾ 

ಏನಿದು ಮಾಯೆ 

ಮಳೆಯಿಲ್ಲದೆ ಮೈ ನೆನೆಯೋ 

ಮಾಯದ ಮಾಯೆ 


ನೆನ್ನೆ ಕಂಡ ನೋಟವೇ  ಅಂತರಾಳವಾಗಿದೆ 

ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ 

ರಾಗ ಎನ್ನಲೇ ?ಅನುರಾಗ ಎನ್ನಲೇ ?

ಪ್ರೀತಿ ಎನ್ನಲೇ ?ಹೊಸ ಮಾಯೆ ಎನ್ನಲೇ ?!