Movie: Ranaranga (1988)
Singer: Dr. Rajkumar
Song link: Click Here
Jagave ondu ranaranga, dhairya irali nina sanga
Baaro, baaro nana raja, ninage, neene maharaja
Hidiyo, atma baladastra, aduve, jayada mahamantra
Ninna daariyalli, ellu sole illa
Baala yuddadalli, ninna gellorilla
Chalave, balavo, munde nuggi nuggi baa ||
Tirugo bhumiyalli, nadeva baalinalli, enu nilladamma raja
Janana embudilli, marana embudanna, endu gelladamma raja
Jana iruva golavo idu, dina kaleva jaalavo idu
Jaya bhayada chinte maadade, senesaado rangavo idu
Illi daanavara, ketta maayavide
Illi maanavara, sutta gayavide
Iddare, geddare, nyayavannu ulisu baa ||
Dehi ennuvaga, nidde maaduvaga, kathi ettabeda raja
Shatru beeluvaga, yuddha maaduvaga, karune katti idu raja
Bhumeeli hutti bandare, aa rhunava kattabedave
Anyaya gellutiddare, sidideddu nillabedave
Illi kruratana, attadalli ide, ninna jaanatana, mettuvalli ide
Mettu baa, attu baa, ditta hejje ittu baa ||
ಚಿತ್ರಗೀತೆ
ಜಗವೇ, ಒಂದು ರಣರಂಗ, ಧೈರ್ಯ, ಇರಲಿ ನಿನ ಸಂಗ
ಬಾರೋ, ಬಾರೋ ನನ ರಾಜಾ, ನಿನಗೆ, ನೀನೇ ಮಹಾರಾಜಾ
ಹಿಡಿಯೋ, ಆತ್ಮ ಬಲದಸ್ತ್ರ, ಅದುವೇ, ಜಯದ ಮಹಾಮಂತ್ರ
ನಿನ್ನ ದಾರಿಯಲ್ಲಿ, ಎಲ್ಲೂ ಸೋಲೇ ಇಲ್ಲ
ಬಾಳ ಯುದ್ಧದಲ್ಲಿ, ನಿನ್ನ ಗೆಲ್ಲೋರಿಲ್ಲ
ಛಲವೇ, ಬಲವೊ, ಮುಂದೆ ನುಗ್ಗಿ ನುಗ್ಗಿ ಬಾ ।।ಪ।।
ತಿರುಗೋ ಭೂಮಿಯಲ್ಲಿ, ನಡೆವ ಬಾಳಿನಲ್ಲಿ, ಏನೂ ನಿಲ್ಲದಮ್ಮ ರಾಜಾ
ಜನನ ಎಂಬುದಿಲ್ಲಿ, ಮರಣ ಎಂಬುದನ್ನ, ಎಂದೂ ಗೆಲ್ಲದಮ್ಮ ರಾಜಾ
ಜನ ಇರುವ ಗೋಲವೋ ಇದು, ದಿನ ಕಳೆವ ಜಾಲವೋ ಇದು
ಜಯ ಭಯದ ಚಿಂತೆ ಮಾಡದೆ, ಸೆಣೆಸಾಡೋ ರಂಗವೋ ಇದು
ಇಲ್ಲಿ ದಾನವರ, ಕೆಟ್ಟ ಮಾಯವಿದೆ
ಇಲ್ಲಿ ಮಾನವರ, ಸುಟ್ಟ ಗಾಯವಿದೆ
ಇದ್ದರೆ, ಗೆದ್ದರೆ, ನ್ಯಾಯವನ್ನು ಉಳಿಸು ಬಾ ।।೧।।
ದೇಹಿ ಎನ್ನುವಾಗ, ನಿದ್ದೆ ಮಾಡುವಾಗ, ಕತ್ತಿ ಎತ್ತಬೇಡ ರಾಜಾ
ಶತ್ರು ಬೀಳುವಾಗ, ಯುದ್ಧ ಮಾಡುವಾಗ, ಕರುಣೆ ಕಟ್ಟಿ ಇಡು ರಾಜಾ
ಭೂಮೀಲಿ ಹುಟ್ಟಿ ಬಂದರೆ, ಆ ಋಣವಾ ಕಟ್ಟಬೇಡವೆ
ಅನ್ಯಾಯ ಗೆಲ್ಲುತ್ತಿದ್ದರೆ, ಸಿಡಿದೆದ್ದು ನಿಲ್ಲಬೇಡವೆ
ಇಲ್ಲಿ ಕ್ರೂರತನ, ಅಟ್ಟದಲ್ಲಿ ಇದೆ, ನಿನ್ನ ಜಾಣತನ, ಮೆಟ್ಟುವಲ್ಲಿ ಇದೆ
ಮೆಟ್ಟು ಬಾ, ಅಟ್ಟು ಬಾ, ದಿಟ್ಟ ಹೆಜ್ಜೆ ಇಟ್ಟು ಬಾ ।।೨।।
No comments:
Post a Comment