ಪದ್ಯ
ಸಾಹಿತ್ಯ: ಅಮ್ಮೆ೦ಬಳ ಅನಂತಯ್ಯ ನಾವಡ
ಬೀಜವನ್ನು ಬಿತ್ತುವ
ಗಿಡಗಳನ್ನು ಬೆಳೆಸುವ ।
ಸುಜಲಭರಿತ ದೇಶವನ್ನು
ಸುಫಲವಾಗಿ ಮಾಡುವ ।।
ತೆಂಗು ಕಂಗು ಸಸಿಗಳ
ತಾಳೆ ಬಾಳೆ ಮರಗಳ ।
ಭಂಗವಿಲ್ಲದಂತೆ ಬೆಳಸಿ
ಅಧಿಕ ಫಲವ ಪಡೆಯುವ ।।
ಮಾವು ಹಲಸು ನೇರಳೆ
ಲಿಂಬೆ ದ್ರಾಕ್ಷಿ ಪೇರಳೆ ।
ಸೇಬು ಚಿಕ್ಕು ಕಿತ್ತಳೆಗಳ
ನಾವು ನಾವೆ ಬೆಳೆಸುವ ।।
ಬದನೆ ಸೌತೆ ಕುಂಬಳ
ಹೀರೆಕಾಯಿ ಪಡುವಲ ।
ಮುದದಿ ನಾವು ಗೆಣಸು ಮೆಣಸು
ಹರಿವೆಗಳನು ಬೆಳೆಸುವ ।।
ವಿವಿಧ ಧಾನ್ಯ ಬೆಳೆಗಳ
ಕಾಯಿ ಪಲ್ಲೆ ಸಸಿಗಳ ।
ವಿವಿಧ ರೀತಿಯಲ್ಲಿ ಬೆಳೆಸಿ
ಅಧಿಕ ಫಲವ ಪಡೆಯುವ ।।
ಅಧಿಕವಾಗಿ ಬಿತ್ತುವ
ಅಧಿಕವಾಗಿ ಬೆಳೆಸುವ ।
ಅಧಿಕ ಫಲವ ಪಡೆಯುತೆಲ್ಲ
ತೃಪ್ತಿಯಿಂದ ಬಾಳುವ ।।
Padya
Beejavannu bithuva
Gidagalannu belesuva |
Sujalabharita deshavannu
Suphalavagi maaduva ||
Tengu kangu sasigala
Taale baale maragala |
Bhangavilladante belesi
Adhika phalava padeyuva ||
Maavu halasu nerale
Limbe drakshi perale |
Sebu chikku kittalegala
Naavu naave belesuva ||
Badane soute kumbala
Heerekayi paduvala |
Mudadi naavu genasu menasu
Harivegalanu belesuva ||
Vividha dhanya belegala
Kaayi palle sasigala |
Vividha reetiyalli belesi
Adhika phalava padeyuva ||
Adikavagi bithuva
Adikavagi belesuva |
Adhika phalava padeyutella
Truptiyinda Baaluva ||
No comments:
Post a Comment