Movie: Gange Gowri (1967)
Singers: S Janaki, Bengaluru Lata
Song link: Click Here
Cheluvaralli cheluva (2) olidarenne oliva
Enna nallanamma (2)
Geluvaranne geluva, ene illadenna cheluva
Enna nallanamma (2) geluvaranne geluva ||
Ranna havalada neera kudiyuta, beledantha cheluvanavanu (2)
Mincha gonchala maige suthida, cheluvanu ennavanu (2)
Belli manchadali chinnadokuliya, chelluvanennavanu (2)
Ettetta kande acchariya nota, ittena kaddukondavanu
Cheluvaralli cheluva, geluvaranne geluva ||
Chandrna mogava nachi solipa, chendada mogadavanu (2)
Enna andada chendada gudige, devaramma avanu (2)
Mettagennanu hattira karedu, kuttige kattidanu (2)
Muttantha henne, mecchidenu endu, kivi kacchi heluvarivanu
Cheluvaralli cheluva, geluvaranne geluva
Enna nallanamma (2), cheluvaralli cheluva ||
ಚಿತ್ರಗೀತೆ
ಚೆಲುವರಲ್ಲಿ ಚೆಲುವಾ (೨) ಒಲಿದರೆನ್ನೆ ಒಲಿವಾ
ಎನ್ನ ನಲ್ಲನಮ್ಮಾ (೨)
ಗೆಲುವರನ್ನೆ ಗೆಲುವಾ, ಎಣೆ ಇಲ್ಲದೆನ್ನ ಚೆಲುವಾ
ಎನ್ನ ನಲ್ಲನಮ್ಮಾ (೨), ಗೆಲುವರನ್ನೆ ಗೆಲುವಾ ।।ಪ।।
ರನ್ನ ಹವಳದ ನೀರ ಕುಡಿಯುತಾ, ಬೆಳೆದಂಥ ಚೆಲುವನವನು (೨)
ಮಿಂಚ ಗೊಂಚಲ ಮೈಗೆ ಸುತ್ತಿದ, ಚೆಲುವನು ಎನ್ನವನೂ (೨)
ಬೆಳ್ಳಿ ಮಂಚದಲಿ ಚಿನ್ನದೋಕುಳಿಯ, ಚೆಲ್ಲುವನೆನ್ನವನೂ (೨)
ಎತ್ತೆತ್ತ ಕಂಡೆ ಅಚ್ಚರಿಯ ನೋಟ, ಇತ್ತೆನ ಕದ್ದುಕೊಂಡವನು
ಚೆಲುವರಲ್ಲಿ ಚೆಲುವಾ, ಗೆಲುವರನ್ನೆ ಗೆಲುವಾ ।।೧।।
ಚಂದ್ರನ ಮೊಗವ ನಾಚಿ ಸೋಲಿಪ, ಚಂದದ ಮೊಗದವನೂ (೨)
ಎನ್ನ ಅಂದದ ಚೆಂದದ ಗುಡಿಗೆ, ದೇವರಮ್ಮ ಅವನೂ (೨)
ಮೆತ್ತಗೆನ್ನನು ಹತ್ತಿರ ಕರೆದು, ಕುತ್ತಿಗೆ ಕಟ್ಟಿದನೂ (೨)
ಮುತ್ತಂಥ ಹೆಣ್ಣೆ, ಮೆಚ್ಚಿದೆನು ಎಂದು, ಕಿವಿ ಕಚ್ಚಿ ಹೇಳುವಾರಿವನು
ಚೆಲುವರಲ್ಲಿ ಚೆಲುವಾ, ಗೆಲುವರನ್ನೆ ಗೆಲುವಾ
ಎನ್ನ ನಲ್ಲನಮ್ಮಾ (೨), ಚೆಲುವರಲ್ಲಿ ಚೆಲುವಾ ।।೨।।

No comments:
Post a Comment