Tuesday, October 1, 2024

Tanuvaade Neene Manavaade Neene (ತನುವಾದೆ ನೀನೆ ಮನವಾದೆ ನೀನೆ)

Bhaktigeete

Singer: Dr. Rajkumar

Song link: Click Here


Tanuvaade neene manavaade neene, neene guruvaade

Kallallu neene, mannallu neene, ellellu neenade 

Shivaguru neene, shanmukhane sharanu sharanu

He shiva sutane ||


Brahmandavella kondaduvanta, devasenani nee tande

Ee jeevakoti usiratadalli neene usiraade

Guruvaada neenu, haavagi bande, bhaktige jaya tande,

Sharanenda bhaktage nanjanu needo sanjeevini aade

Parashiva parvati sunu shiva priya shanmukha sharanu ||


Charanaravinda shranenda mele, nityanandavide

Bhulokadalli meredaduvanta divya chaitanya tumbide

Chirakaala ninna ee bhakti namma siriyaagi varavaagide 

Parashiva parvati sunu shiva priya shanmukha sharanu ||


ಭಕ್ತಿಗೀತೆ 


ತನುವಾದೆ ನೀನೆ ಮನವಾದೆ ನೀನೆ, ನೀನೇ ಗುರುವಾದೆ 

ಕಲ್ಲಲ್ಲೂ ನೀನೆ, ಮಣ್ಣಲ್ಲೂ ನೀನೆ, ಎಲ್ಲೆಲ್ಲೂ ನೀನಾದೆ 

ಶಿವಗುರು ನೀನೆ, ಷಣ್ಮುಖನೆ, ಶರಣು ಶರಣು 

ಹೇ ಶಿವ ಸುತನೆ ।।ಪ।।


ಬ್ರಹ್ಮಾಂಡವೆಲ್ಲ ಕೊಂಡಾಡುವಂತ, ದೇವಸೇನಾನಿ ನೀ ತಂದೆ 

ಈ ಜೀವಕೋಟಿ ಉಸಿರಾಟದಲ್ಲಿ ನೀನೆ ಉಸಿರಾದೆ 

ಗುರುವಾದ ನೀನು, ಹಾವಾಗಿ ಬಂದೆ, ಭಕ್ತಿಗೆ ಜಯ ತಂದೆ 

ಶರಣೆಂದ ಭಕ್ತಗೆ ನಂಜನು ನೀಡೋ ಸಂಜೀವಿನಿ ಆದೆ 

ಪರಶಿವ ಪಾರ್ವತಿ ಸೂನು ಶಿವ ಪ್ರಿಯ ಷಣ್ಮುಖ ಶರಣು ।।೧।।


ಚರಣಾರವಿಂದ ಶರಣೆಂದ ಮೇಲೆ ನಿತ್ಯಾ ನಂದವಿದೆ 

ಭೂಲೋಕದಲ್ಲಿ ಮೆರೆದಾಡುವಂತ ದಿವ್ಯ ಚೈತನ್ಯ ತುಂಬಿದೆ 

ಚಿರಕಾಲ ನಿನ್ನ ಈ ಭಕ್ತಿ ನಮ್ಮ ಸಿರಿಯಾಗಿ ವರವಾಗಿದೆ

ಪರಶಿವ ಪಾರ್ವತಿ ಸೂನು ಶಿವ ಪ್ರಿಯ ಷಣ್ಮುಖ ಶರಣು ।।೨।।

                               

No comments:

Post a Comment