Friday, September 30, 2022

Binkada Singari (ಬಿಂಕದ ಸಿಂಗಾರಿ )


  • Movie: Kanyaratna (1963)
  • Singer: P B Srinivas
  • Song link:Click Here


Binkada singari

Mai donkina vayyari

Ee savi ghalige rasadeevalige

Ninnantaranga madhuranga ||binkada||


Bali neeniralu bisile neralu

Madhupana patre ninnodalu

Madhuvillade madaveripa

Ninnanda chanda makaranda ||binkada||


Ninneevadana aravinda vana

Hoobana ninna binnana

Olavemba dhana bide humbatana

Ba chinna ranna varisenna ||binkada||


ಚಿತ್ರಗೀತೆ 


ಬಿಂಕದ ಸಿಂಗಾರಿ 

ಮೈ ಡೊಂಕಿನ ವೈಯ್ಯಾರಿ 

ಈ ಸವಿ ಘಳಿಗೆ ರಸದೀವಳಿಗೆ 

ನಿನ್ನಂತರಂಗ ಮಧುರಂಗ ।।ಪ ।।


ಬಳಿ ನೀನಿರಲು ಬಿಸಿಲೇ ನೆರಳು 

ಮಧುಪಾನ ಪಾತ್ರೆ ನಿನ್ನೊಡಲು 

ಮಧುವಿಲ್ಲದೇ ಮದವೇರಿಪ 

ನಿನ್ನಂದ ಚಂದ ಮಕರಂದ ।।ಬಿಂಕದ ।।


ನಿನ್ನೀ ವದನ ಅರವಿಂದವನ 

ಹೂಬಾಣ ನಿನ್ನ ಬಿನ್ನಾಣ 

ಒಲವೆಂಬ ಧನ ಬಿಡೆ ಹುಂಬತನ 

ಬಾ ಚಿನ್ನ ರನ್ನ ವರಿಸೆನ್ನ ।।ಬಿಂಕದ ।।




Tuesday, September 27, 2022

Enitu Inidu Ee Kannada Nudiyu (ಎನಿತು ಇನಿದು ಈ ಕನ್ನಡ ನುಡಿಯು)


Nadageete

Sahitya: Dr Betageri Krishnasharma (Anandakanda)

Song link: Click Here


Enitu inidu ee kannada nudiyu

Manavanu tanisuva mohana sudheyu ||


Ganava bereyisi

Veeneya daniyolu

Vaniyu nevura nudisutali..

Vaniyu nevura

Nudisute kuniyalu

Manade mereyuva manjula ravavo ? ||enitu||


Rangana muraliya

Hingada swaradali

Hengaleyaru beladingalali

Hengaleyaru beladingala

Irulali

Sangeetava noredangavideno ? ||enitu||


Giligalu uliyuva

Melumatugalo

Kala kantagala

Cheluvina kukilo

Aligala belagina uliyo uliyo ? 

Manavanu tanisuva mohana sudheyo ||enitu||


ನಾಡಗೀತೆ 


ಎನಿತು ಇನಿದು ಈ ಕನ್ನಡ ನುಡಿಯು 

ಮನವನು ತಣಿಸುವ ಮೋಹನ ಸುಧೆಯು ।।ಪ ।।


ಗಾನವ ಬೆರೆಯಿಸಿ 

ವೀಣೆಯ ದನಿಯೊಳು 

ವಾಣಿಯು ನೇವುರ ನುಡಿಸುತಲಿ 

ವಾಣಿಯು ನೇವುರ 

ನುಡಿಸುತೆ ಕುಣಿಯಲು 

ಮಾಣದೆ ಮೆರೆಯುವ ಮಂಜುಲ ರವವೋ ? ।।೧।।


ರಂಗನ ಮುರಳಿಯ 

ಹಿಂಗದ ಸ್ವರದಲಿ 

ಹೆಂಗಳೆಯರು ಬೆಳದಿಂಗಳಲಿ 

ಹೆಂಗಳೆಯರು ಬೆಳ 

ದಿಂಗಳಿನಿರುಳಲಿ 

ಸಂಗೀತವ ನೊರೆದಂಗವಿದೇನೋ ? ।।೨।।


ಗಿಳಿಗಳು ಉಲಿಯುವ 

ಮೆಲುಮಾತುಗಳೋ 

ಕಳ ಕಂಠಗಳ 

ಚೆಲುವಿನ ಕುಕಿಲೋ 

ಅಳಿಗಳ ಬೆಳಗಿನ ಉಲಿಯೋ ಉಲಿಯೋ ?

 ಮನವನು ತಣಿಸುವ ಮೋಹನ ಸುಧೆಯೋ    ।।೩।।






Monday, September 26, 2022

Bannada Tagadina Tutturi (ಬಣ್ಣದ ತಗಡಿನ ತುತ್ತೂರಿ )

Padya

Sahitya: J P Rajaratnam

Song link: Click Here


Bannada tagadina tutturi

Kasige kondanu kasturi

Sa ri ga ma, Pa da ni sa udidanu

Sa ni da pa, ma ga ri sa Udidanu 


tanage tutturi ideyenda

Berarigu adu illenda

kasturi nadedanu beediyali

Jambhada koliya ritiyali


Tutturi uduta kolada bali

Nadedanu kasturi sanjeyali

Jaritu neerige tutturi

Gantalu kattitu neeruri


Sa ri ga ma udalu nodidanu

Ga ga ga ga saddanu madidanu

Bannavu neerina palaitu

Bannada tutturi bolaitu


Bannada tutturi halaitu

Jambhada kolige golaitu.


ಪದ್ಯ 


ಬಣ್ಣದ ತಗಡಿನ ತುತ್ತೂರಿ 

ಕಾಸಿಗೆ ಕೊಂಡನು ಕಸ್ತೂರಿ 

ಸ ರಿ ಗ ಮ , ಪ ದ ನಿ ಸ ಊದಿದನು 

ಸ ನಿ ದ ಪ, ಮ ಗ ರಿ ಸ ಊದಿದನು 


ತನಗೇ ತುತ್ತೂರಿ ಇದೆಯೆಂದ 

ಬೇರಾರಿಗೂ ಅದು ಇಲ್ಲೆಂದ 

ಕಸ್ತೂರಿ ನಡೆದನು ಬೀದಿಯಲಿ 

ಜಂಭದ ಕೋಳಿಯ ರೀತಿಯಲಿ 


ತುತ್ತೂರಿ ಊದುತ ಕೊಳದ ಬಳಿ 

ನಡೆದನು ಕಸ್ತೂರಿ ಸಂಜೆಯಲಿ 

ಜಾರಿತು ನೀರಿಗೆ ತುತ್ತೂರಿ 

ಗಂಟಲು ಕಟ್ಟಿತು ನೀರೂರಿ 


ಸ ರಿ ಗ ಮ ಊದಲು ನೋಡಿದನು 

ಗ ಗ ಗ ಗ ಸದ್ದನು ಮಾಡಿದನು 

ಬಣ್ಣವು ನೀರಿನ ಪಾಲಾಯ್ತು 

ಬಣ್ಣದ ತುತ್ತೂರಿ ಬೋಳಾಯ್ತು 


ಬಣ್ಣದ ತುತ್ತೂರಿ ಹಾಳಾಯ್ತು 

ಜಂಭದ ಕೋಳಿಗೆ ಗೋಳಾಯ್ತು. 

             

Saturday, September 24, 2022

Sanni Maduve (ಸಣ್ಣಿ ಮದುವೆ)

Padya

Janapada 

Song link: Click Here


Kappe kara kara

Tuppa Jali jali

Mavina vate

Maradali kote

Haddina kaiyali

Suddi kaluhisi

Kageya kaiyali

Kankana kattisi

Nalliya kaiyali

Nagari hodesi

Solleya kaiyali

Sobane helisi

Sanni maduve shanivara

Utake banni Budhavara.


ಜನಪದ ಹಾಡು 


ಕಪ್ಪೆ ಕರ ಕರ 

ತುಪ್ಪ ಜಲಿ ಜಲಿ 

ಮಾವಿನ ವಾಟೆ 

ಮರದಲಿ ಕೋಟೆ 

ಹದ್ದಿನ ಕೈಯಲಿ 

ಸುದ್ದಿ ಕಳುಹಿಸಿ 

ಕಾಗೆಯ ಕೈಯಲಿ 

ಕಂಕಣ ಕಟ್ಟಿಸಿ 

ನಳ್ಳಿಯ ಕೈಯಲಿ 

ನಗಾರಿ ಹೊಡೆಸಿ 

ಸೊಳ್ಳೆಯ ಕೈಯಲಿ 

ಸೋಬಾನೆ ಹೇಳಿಸಿ 

ಸಣ್ಣಿ ಮದುವೆ ಶನಿವಾರ 

ಊಟಕೆ ಬನ್ನಿ ಬುಧವಾರ . 

         

Anugalavu Chinte Jeevakke (ಅನುಗಾಲವು ಚಿಂತೆ ಜೀವಕ್ಕೆ)

Bhaktigeete

Sri Purandara Dasara Keerthanegalu

Song link: Click Here


Raga: Kapi

Tala: Atatala


Anugalavu chinte jeevakke

Tanna manavu sri ranganol 

Mecchuva tanaka ||


Satiyiddaru chinte, satiyillada chinte

Matiheena satiyadaru chinteyu

Pruthviyolage sati kadu chelveyadare

Meti mereyillada mohada chinte ||


Makkalillada chinte, makkaladaru chinte

Okkalu honnu kuduva chinteyu

Akkareyindale turugala kaidaru

Kukkulateyu bittu hogada chinte ||


Badavanadaru chinte, ballidavanadaru chinte

Hidi honnu kaiyoladaru chinteyu

Podaviyolage namma purandara vittalana 

Bidade dhyanisidare chinte nischinte ||


ಭಕ್ತಿಗೀತೆ 


ಅನುಗಾಲವು ಚಿಂತೆ ಜೀವಕ್ಕೆ 

ತನ್ನ ಮನವು ಶ್ರೀ ರಂಗನೋಳ್ 

ಮೆಚ್ಚುವ ತನಕ ।।ಪ ।।


ಸತಿಯಿದ್ದರು ಚಿಂತೆ, ಸತಿಯಿಲ್ಲದ ಚಿಂತೆ 

ಮತಿ ಹೀನ ಸತಿಯಾದರು ಚಿಂತೆಯು 

ಪೃಥ್ವಿಯೊಳಗೆ  ಸತಿ ಕಡು ಚೆಲ್ವೆಯಾದರೆ 

ಮಿತಿ ಮೇರೆಯಿಲ್ಲದ ಮೋಹದ ಚಿಂತೆ ।।೧।।


ಮಕ್ಕಳಿಲ್ಲದ ಚಿಂತೆ, ಮಕ್ಕಳಾದರು ಚಿಂತೆ 

ಒಕ್ಕಾಳು ಹೊನ್ನು ಕೂಡುವ ಚಿಂತೆಯು 

ಅಕ್ಕರೆಯಿಂದಲೆ ತುರುಗಳ ಕಾಯ್ದರು 

ಕುಕ್ಕುಲತೆಯು ಬಿಟ್ಟು ಹೋಗದ ಚಿಂತೆ ।।೨।।


ಬಡವನಾದರು ಚಿಂತೆ, ಬಲ್ಲಿದವನಾದರು ಚಿಂತೆ 

ಹಿಡಿ ಹೊನ್ನು ಕೈಯೊಳಾದರು ಚಿಂತೆಯು 

ಪೊಡವಿಯೊಳಗೆ ನಮ್ಮ ಪುರಂದರ ವಿಠ್ಠಲನ 

ಬಿಡದೆ ಧ್ಯಾನಿಸಿದರೆ ಚಿಂತೆ ನಿಶ್ಚಿಂತೆ ।।೩।।                  ಶ್ರೀ 




Friday, September 23, 2022

Kannadada Makkalella Ondagi Banni (ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ)

 

  • Movie: Kantheredu Nodu (1961)
  • Singer: G K Venktesh
  • Song link: Click Here


Kannadada makkalella ondagi banni

Taynada jayabheri navadevenni ||


Geletanada varada hasta needi banni

Moletiruva bhedagala bittu banni ||


Ondu tayiya madila makkalenni

Ondu tayiya nudiya nudivevenni ||


Keelu navembuvara kann tereyirenni

Beelu navembuvara bai muccha banni ||


Ganga kadambadi chalukya rastrakuta

Yadava ballala vijaya nagara veerara

Gata vaibhava kanuva navashaktiya tumbuva

Bhuvaneshwari needuva sandeshava saruva ||


ಚಿತ್ರಗೀತೆ 


ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ 

ತಾಯ್ನಾಡ ಜಯಭೇರಿ ನಾವಾದೆವೆನ್ನಿ ।।ಪ ।।


ಗೆಳೆತನದ ವರದ ಹಸ್ತ ನೀಡಿ ಬನ್ನಿ 

ಮೊಳೆತಿರುವ ಭೇದಗಳ ಬಿಟ್ಟು ಬನ್ನಿ ।।೧।।


ಒಂದು ತಾಯಿಯ ಮಡಿಲ ಮಕ್ಕಳೆನ್ನಿ 

ಒಂದು ತಾಯಿಯ ನುಡಿಯ ನುಡಿವೆವೆನ್ನಿ ।।೨।।


ಕೀಳು ನಾವೆಂಬುವರ ಕಣ್ಣ್ ತೆರೆಯಿರೆನ್ನಿ 

ಬೀಳು ನಾವೆಂಬುವರ ಬಾಯ್ ಮುಚ್ಚ ಬನ್ನಿ ।।೩।।


ಗಂಗ ಕಾದಂಬಾದಿ ಚಾಲುಕ್ಯ ರಾಷ್ಟ್ರಕೂಟ 

ಯಾದವ ಬಲ್ಲಾಳ ವಿಜಯನಗರ ವೀರರ 

ಗತ ವೈಭವ ಕಾಣುವ ನವಶಕ್ತಿಯ ತುಂಬುವ 

ಭುವನೇಶ್ವರಿ ನೀಡುವ ಸಂದೇಶವ ಸಾರುವ ।।೪।।



Thursday, September 22, 2022

Ghama Ghama Ghammadistava malligi (ಘಮ ಘಮ ಘಮ್ಮಾಡಿಸ್ತಾವ ಮಲ್ಲಿಗಿ )


Bhavageete

Sahitya: Da Ra Bendre

Song link: Click Here


Ghama ghama ghammadistava malligi

Nee horatiddega elligi? 


Tulukyadutava tukadiki

Evi appatava kann duduki

Kanasu teli baratava huduki

Nee horatiddega elligi? 


Chikki toristava chachi berala

Chandrama kannadi harala

Manasotu aayitu marula

Nee horatiddega elligi? 


Neralladatava marada budaka

Keri teri noogatava dadaka

Heenga bittu elli nanna nadaka

Nee horatiddega elligi? 


Nanna ninna ondatanadaga

Hadu hutti ondu manadaga

Beladingalatu banadaga

Nee horatiddega elligi? 


Bantyaka ninaga inda munisu

Belalilla nanaga idara kanasu

Raya tiliyalilla ninna manasu

Nee horatiddega elligi? 


ಭಾವಗೀತೆ 


ಘಮ ಘಮ ಘಮ್ಮಾಡಿಸ್ತಾವ ಮಲ್ಲಿಗಿ 

ನೀ ಹೊರಟಿದ್ದೀಗ ಎಲ್ಲಿಗೀ ? ।।ಪ ।।


ತುಳುಕ್ಯಾಡತಾವ  ತೂಕಡಿಕಿ 

ಎವಿ ಅಪ್ಪತಾವ ಕಣ್ಣ್  ದುಡುಕಿ 

ಕನಸು ತೇಲಿ ಬರತಾವ ಹುಡುಕಿ 

ನೀ ಹೊರಟಿದ್ದೀಗ ಎಲ್ಲಿಗೀ ?


ಚಿಕ್ಕಿ ತೋರಿಸ್ತಾವ ಚಾಚಿ ಬೆರಳ 

ಚಂದ್ರಮ ಕನ್ನಡಿ ಹರಳ 

ಮನಸೋತು ಆಯಿತು ಮರುಳ 

ನೀ ಹೊರಟಿದ್ದೀಗ ಎಲ್ಲಿಗೀ ?


ನೆರಳಲ್ಲಾಡತಾವ  ಮರದ ಬುಡಕ 

ಕೆರಿ ತೆರಿ ನೂಗತವ ದಡಕ 

ಹೀ೦ಗ ಬಿಟ್ಟು ಎಲ್ಲಿ ನನ್ನ ನಡಕ 

ನೀ ಹೊರಟಿದ್ದೀಗ ಎಲ್ಲಿಗೀ ?


ನನ್ನ ನಿನ್ನ ಒಂದತನದಾಗ 

ಹಾಡು ಹುಟ್ಟಿ ಒಂದು ಮನದಾಗ 

ಬೆಳದಿಂಗಳಾತು ಬನದಾಗ 

ನೀ ಹೊರಟಿದ್ದೀಗ ಎಲ್ಲಿಗೀ ?


ಬಂತ್ಯಾಕ ನಿನಗ ಇಂದ  ಮುನಿಸು 

ಬೀಳಲಿಲ್ಲ ನನಗ ಇದರ ಕನಸು 

ರಾಯ ತಿಳಿಯಲಿಲ್ಲ ನಿನ್ನ ಮನಸ್ಸು  

ನೀ ಹೊರಟಿದ್ದೀಗ ಎಲ್ಲಿಗೀ ?




Wednesday, September 21, 2022

Antarangada Mrudanga (ಅಂತರಂಗದ ಮೃದಂಗ )


Bhavageete

Sahitya: Da Ra Bendre

Song link: Click Here


Antarangada mrudanga

Antu tom tanana

Chitta talabarisutalittu 

Jam janana nana

Nenapu tanti meetutittu tom tanana tana

Tom tanana tana, tom tanana tana ||


Halavu janmadinda banda yavudono dhyana

Ekanada dandadondu tanada vitana

Tanage tane solutihudu nulutihudu gana ||


Kalpadadiyalle nanna ninnavirahavagi

Ello eno ninna huduki kamba kanne hogi

Maravegondu bidde nanu nelada mannu tagi ||


Kattalalle belaku minchi padeeditelu banna

Mookamouna tuka meeri daniyuhutti sanna

Kanna manna kudalalli hadu kattitanna||


ಭಾವಗೀತೆ 


ಅಂತರಂಗದ  ಮೃದಂಗ 

ಅಂತು ತೊಂ ತನಾನ

ಚಿತ್ತ ತಾಳ ಬಾರಿಸುತಲಿತ್ತು 

ಝ೦ ಝಣಣ ನಾನಾ  

ನೆನಪು ತಂತಿ ಮೀಟುತಿತ್ತು ತೊಂತನನ ತಾನ 

ತೊಂತನನ ತಾನ,  ತೊಂತನನ ತಾನ ।।ಪ ।।


ಹಲವು ಜನ್ಮದಿಂದ ಬಂದ ಯಾವುದೋನೋ ಧ್ಯಾನ 

ಏಕನಾದ ದಂದದೊಂದು  ತಾನದ ವಿತಾನ 

ತನಗೆ ತಾನೇ ಸೋಲುತಿಹುದು ನೂಲುತಿಹುದು ಗಾನ ।।೧।।


ಕಲ್ಪ ದಾದಿಯಲ್ಲೆ ನನ್ನ ನಿನ್ನ ವಿರಹವಾಗಿ 

ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ 

ಮರವೆಗೊಂಡು ಬಿದ್ದೆ ನಾನು ನೆಲದ ಮಣ್ಣು ತಾಗಿ ।।೨।।


ಕತ್ತಲಲ್ಲೆ ಬೆಳಕು ಮಿಂಚಿ ಪಡೆದೀತೇಳು ಬಣ್ಣ 

ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿ ಸಣ್ಣ 

ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ ।।೩।।



Tuesday, September 20, 2022

Namma Maneyalondu Sanna Papaniruvdu (ನಮ್ಮ ಮನೆಯಲೊಂದು ಸಣ್ಣ ಪಾಪನಿರುವುದು )

Padya

Song link: Click Here


Namma maneyalondu sanna

Papaniruvudu

Ettikolade hodaradake

Kopa baruvudu

Kopa baralu gattiyagi

Kiruchikoluvudu

Kiruchikondu tanna mai

Parachikoluvudu

Maiyya parachikondu papa

Attu karevudu

Alalu kannininda sanna 

Muttu surivudu

Papa attaramma tanu 

Attubiduvalu

Ayyo papa endukondu 

Muttu koduvalu

Papa pattu hidida hatavu

Sarthavayitu

Kiruchi parachi aluvudella

Arthavayitu!


ಪದ್ಯ 


ನಮ್ಮ ಮನೆಯಲೊಂದು 

ಸಣ್ಣ ಪಾಪನಿರುವುದು 

ಎತ್ತಿಕೊಳದೆ ಹೋದರದಕೆ 

ಕೋಪ ಬರುವುದು 

ಕೋಪ ಬರಲು ಗಟ್ಟಿಯಾಗಿ 

ಕಿರುಚಿಕೊಳುವುದು 

ಕಿರುಚಿಕೊಂಡು ತನ್ನ ಮೈ 

ಪರಚಿಕೊಳುವುದು 

ಮೈಯ ಪರಚಿಕೊಂಡು 

ಪಾಪ ಅತ್ತು ಕರೆವುದು 

ಅಳಲು ಕಣ್ಣಿನಿಂದ ಸಣ್ಣ 

ಮುತ್ತು ಸುರಿವುದು 

ಪಾಪು ಅತ್ತರಮ್ಮ 

ತಾನು ಅತ್ತುಬಿಡುವಳು 

ಅಯ್ಯೋ ಪಾಪ ಎಂದುಕೊಂಡು 

ಮುತ್ತು ಕೊಡುವಳು 

ಪಾಪ ಪಟ್ಟು ಹಿಡಿದ ಹಠವು 

ಸಾರ್ಥವಾಯಿತು 

ಕಿರುಚಿ ಪರಚಿ ಅಳುವುದೆಲ್ಲ 

ಅರ್ಥವಾಯಿತು! 

     

Monday, September 19, 2022

Mucchumare illadeye (ಮುಚ್ಚುಮರೆ ಇಲ್ಲದೆಯೇ )


Bhavageete

Sahitya: kuvempu

Song link: Click Here



Mucchumare illadeye

Ninna mundellavanu

Bicchiduve o guruve antaratma

Papavide, punyavide

Narakavide, nakavide

Swikarisisu o guruve antaratma ||


Ravige kantiyaneeva ninna kannikshisalu

Papa tanuliyuvude papavagi

Gange tanubhavipa ninnadiya sonkinge

Naraka tanuliyuvude narakavagi ||mucchumare||


Saanta ritiyanemmi kadadiruvudennatma

Nanta ritiyu adento o ananta

Nanna neetiya kurudinindenna rakshisai

Ninna preetiya belakina anandake  ||mucchumare||


ಭಾವಗೀತೆ 


ಮುಚ್ಚುಮರೆ ಇಲ್ಲದೆಯೇ 

ನಿನ್ನ ಮುಂದೆಲ್ಲವನು 

ಬಿಚ್ಚಿಡುವೆ  ಓ ಗುರುವೇ ಅಂತರಾತ್ಮ 

ಪಾಪವಿದೆ , ಪುಣ್ಯವಿದೆ 

ನರಕವಿದೆ , ನಾಕವಿದೆ 

ಸ್ವೀಕರಿಸು ಓ ಗುರುವೇ ಅಂತರಾತ್ಮ ।।ಪ ।।


ರವಿಗೆ ಕಾಂತಿಯನೀವ ನಿನ್ನ ಕಣ್ಣೇಕ್ಷಿಸಲು 

ಪಾಪ ತಾನುಳಿಯುವುದೇ ಪಾಪವಾಗಿ 

ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಂಗೆ 

ನರಕ ತಾನುಳಿಯುವುದೇ ನರಕವಾಗಿ ।।೧।।


ಸಾಂತ ರೀತಿಯನೆಮ್ಮಿ ಕದಡಿರುವುದೆನ್ನಾತ್ಮ 

ನಾಂತ ರೀತಿಯು ಅದೆಂತೋ ಓ ಅನಂತ 

ನನ್ನ ನೀತಿಯ ಕುರುಡಿನಿಂದೆನ್ನ ರಕ್ಷಿಸೈ 

ನಿನ್ನ ಪ್ರೀತಿಯ ಬೆಳಕಿನ ಆನಂದಕೆ ।।೨।।





Sunday, September 18, 2022

Hari Sarvottama Vayu Jeevottama (ಹರಿ ಸರ್ವೋತ್ತಮ ವಾಯು ಜೀವೋತ್ತಮ )

 

Bhaktigeete

Sahitya: Sri Kamalesharu

Song link: Click Here



Hari sarvottama vayu jeevottama

Guru raghavendra endari manave ||


Nirata nee guru pada bhajaneya mado

Duritagalellavu odi poguvuvu ||hari||


Jalaja mani kamandala dandadind oppuva

Kamaleshara priya raghavendraru

Kaliyugadali kamadenu sura taruvante 

Ellarishtava neeva guru raghavendraru ||hari||


ಭಕ್ತಿಗೀತೆ 


ಹರಿ ಸರ್ವೋತ್ತಮ ವಾಯು ಜೀವೋತ್ತಮ 

ಗುರು ರಾಘವೇಂದ್ರ ಎಂದರಿ ಮನವೇ ।।ಪ ।।


ನಿರತ ನೀ ಗುರು ಪದ ಭಜನೆಯ ಮಾಡೋ 

ದುರಿತಗಳೆಲ್ಲವೂ ಓಡಿ ಪೋಗುವುವು ।।೧।।


ಜಲಜ ಮಣಿ ಕಮಂಡಲ ದಂಡ ದಿಂದೊಪ್ಪುವ 

ಕಮಲೇಶರ ಪ್ರಿಯ ರಾಘವೇಂದ್ರರು 

ಕಲಿಯುಗದಲಿ ಕಾಮಧೇನು ಸುರ ತರುವಂತೆ 

ಎಲ್ಲರಿಷ್ಟವ ನೀವ ಗುರು ರಾಘವೇಂದ್ರರು ।।೨।।



Saturday, September 17, 2022

Bombeyatavayya (ಬೊಂಬೆಯಾಟವಯ್ಯ)

Movie: Sri Krishna Garudi (1958)

Singer: PB Sreenivas

Song link: Click Here


Bombe aatavayya brahmandave 

Aa devanaduva bombeyatavayya

Ambujanabhana antyavilladatana

Tumbu mayavayya ee leeleya ||


Jagava srujisi gati sutravanadisi

Nagu naguta kunisi maaye beesi

Ragada bhogada uriyolu nillisi

Hagomme heegomme aadisi ta naliva ||


Nee saaki salahi swarthaveno

Nee kadi kanale antaryaveno

Tiliheleya ola marma toreya

Nalinaksha ninnaya, Sankalpavenayya ||


Ninnavara stiti gati neleyilladage

Ninage sammatave ee reeti mouna 

Kivigottu dayavittu poreyo maharaya

Avatara murthy, innekayya ee shanti ||


Abimana neegisi, arivanu torisi

Anndhate kalevantha akilanda nayaka

Virasavo, sarasavo, sako sakayya

Karuniso jeeya, suranuta chinmaya ||


ಚಿತ್ರಗೀತೆ 


ಬೊಂಬೆಯಾಟವಯ್ಯ ಬ್ರಹ್ಮಾಂಡವೇ

 ಆ ದೇವನಾಡುವ ಬೊಂಬೆಯಾಟವಯ್ಯ 

ಅಂಬುಜನಾಭನ ಅಂತ್ಯವಿಲ್ಲದಾತನ 

ತುಂಬು ಮಾಯವಯ್ಯ ಈ ಲೀಲೆಯ ।।ಪ।।


ಜಗವ ಸೃಜಿಸಿ ಗತಿ ಸೂತ್ರವನಾಡಿಸಿ 

ನಗುನಗುತಾ ಕುಣಿಸಿ ಮಾಯೆ ಬೀಸಿ 

ರಾಗದಾ  ಭೋಗದ ಉರಿಯೊಳು ನಿಲ್ಲಿಸಿ 

ಹಾಗೊಮ್ಮೆ ಹೀಗೊಮ್ಮೆ ಆಡಿಸಿ ತಾ ನಲಿವ ।।೧।।


ನೀಸಾಕಿ ಸಲಹಿ ಸ್ವಾರ್ಥವೇನು  

ನೀ ಕಾಡಿ ಕನಲೆ ಆಂತರ್ಯವೇನು 

ತಿಳಿಹೇಳೆಯಾ ಒಳ ಮರ್ಮ ತೋರೆಯಾ 

ನಳಿನಾಕ್ಷ ನಿನ್ನಯ ಸಂಕಲ್ಪವೇನಯ್ಯಾ ।।೨।।


ನಿನ್ನವರ ಸ್ಥಿತಿ ಗತಿ ನೆಲೆಯಿಲ್ಲದಾಗೇ 

ನಿನಗೆ ಸಮ್ಮತವೇ ಈ ರೀತಿ ಮೌನ 

ಕಿವಿಗೊಟ್ಟು ದಯವಿಟ್ಟು ಪೊರೆಯೋ ಮಹಾರಾಯ 

ಅವತಾರ ಮೂರ್ತಿ, ಇನ್ನೇಕಯ್ಯಾ ಈ ಶಾಂತಿ ।।೩।।


ಅಭಿಮಾನ ನೀಗಿಸಿ, ಅರಿವನು  ತೋರಿಸಿ 

ಅಂಧತೆ ಕಳೆವಂಥ ಅಖಿಲಾಂಡ ನಾಯಕ 

ವಿರಸವೋ ಸರಸವೋ , ಸಾಕೋ ಸಾಕಯ್ಯ 

ಕರುಣಿಸೋ ಜೀಯಾ, ಸುರನುತ ಚಿನ್ಮಯ ।।೪।।

                                  

Friday, September 16, 2022

Benne Kadda Namma Krishna (ಬೆಣ್ಣೆ ಕದ್ದ ನಮ್ಮ ಕೃಷ್ಣ)


Bhavageete

Sahitya: K S Nissar Ahmed

Song link: Click Here


Benne kadda namma krishna

Benne kaddanamma

Benneya kaddu jaruta biddu

Monakal udisikondanamma

Bindige biddu sidiyalu saddu

Becchida gopiyu tuntanamma ||


Tayi bandalodi, kallana kanninalli kodi

Kannali aake sittanu talidu sontake kaiyittu

Aadalu a re chana bhikara kali 

Duru duru kann bittu ||benne||


Hane tuti kennege benne mettida

Oratana notakke

Iliyitu kopa, aralitu kenduti

Tuntana aatakke

Tappide dandake, nittusireleda 

Benne galla neela ||benne||


Tattane aluvuda nillisi nakka, bayagalisi bala

Haradida beladingala jala

Haradida beladingala jala

Avana akutila benneyantha nagu

Kayali jagadavara

Santasa nagisali nagadavara || benne||


ಭಾವಗೀತೆ 


ಬೆಣ್ಣೆ ಕದ್ದ ನಮ್ಮ ಕೃಷ್ಣ ,ಬೆಣ್ಣೆ ಕದ್ದನಮ್ಮ 

ಬೆಣ್ಣೆಯ ಕದ್ದು ಜಾರುತ ಬಿದ್ದು 

ಮೊಣಕಾಲೂದಿಸಿಕೊಂಡನಮ್ಮ 

ಬಿಂದಿಗೆ ಬಿದ್ದು ಸಿಡಿಯಲು ಸದ್ದು 

ಬೆಚ್ಚಿದ ಗೋಪಿಯು ತುಂಟನಮ್ಮ ।।ಪ ।।


ತಾಯಿ  ಬಂದಳೋಡಿ, ಕಳ್ಳನ ಕಣ್ಣಿನಲ್ಲಿ ಕೋಡಿ 

ಕಣ್ಣಲಿ ಆಕೆ ಸಿಟ್ಟನು ತಳಿದು, ಸೊಂಟಕೆ ಕೈಯಿಟ್ಟು 

ಆದಳು ಅರೆಚಣ ಭೀಕರ ಕಾಳಿ

ದುರು ದುರು ಕಣ್ ಬಿಟ್ಟು ।।೧।।


ಹಣೆ ತುಟಿ ಕೆನ್ನೆಗೆ ಬೆಣ್ಣೆ ಮೆತ್ತಿದ ಒರಟನ ನೋಟಕ್ಕೆ 

ಇಳಿಯಿತು ಕೋಪ, ಅರಳಿತು ಕೆಂದುಟಿ 

ತುಂಟನ ಆಟಕ್ಕೆ 

ತಪ್ಪಿದೆ ದಂಡಕೆ ನಿಟ್ಟುಸಿರೆಳೆದ 

ಬೆಣ್ಣೆ ಗಳ್ಳ ನೀಲ ।।೨।।


ತಟ್ಟನೆ ಅಳುವುದ ನಿಲ್ಲಿಸಿ ನಕ್ಕ

ಬಾಯಗಲಿಸಿ ಬಾಲ 

ಹರಡಿದ ಬೆಳದಿಂಗಳ ಜಾಲ 

ಹರಡಿದ ಬೆಳದಿಂಗಳ ಜಾಲ 

ಅವನ ಅಕುಟಿಲ ಬೆಣ್ಣೆಯಂಥ ನಗು 

ಕಾಯಲಿ ಜಗದವರ 

ಸಂತಸ ನಗಿಸಲಿ ನಗದವರ ।।೩।।




Thursday, September 15, 2022

Hadu Haleyadadarenu (ಹಾಡು ಹಳೆಯದಾದರೇನು )


Bhavageete

Sahitya: G S Shivarudrappa

Song link: Click Here


Hadu haleyadadarenu

Bhava navanaveena

Edeya bhava hommuvudake

Bashe ondu sadhana ||


Haleya hada hadu matte

Adane keli taniyuve

Haleya hadininda hosatu

Jeevanavane kattuve ||hadu||


Hadanolidu keluvanitu

Tereda hrudaya nanagide

Astu saku; hadu neenu

Adane keli sukhisuve ||hadu||


Hammu bimmu ondu illa

Hadu, hrudaya teredide

Hadinalli karagi bidalu

Nanna manavu kadide |hadu||


ಭಾವಗೀತೆ 


ಹಾಡು ಹಳೆಯದಾದರೇನು 

ಭಾವ ನವ ನವೀನ 

ಎದೆಯ ಭಾವ ಹೊಮ್ಮುವುದಕೆ 

ಭಾಷೆ ಒಂದು ಸಾಧನ ।।ಪ ।।


ಹಳೆಯ ಹಾಡ ಹಾಡು ಮತ್ತೆ 

ಅದನೆ ಕೇಳಿ ತಣಿಯುವೆ 

ಹಳೆಯ ಹಾಡಿನಿಂದ ಹೊಸತು 

ಜೀವನವನೆ ಕಟ್ಟುವೆ ।।೧।।


ಹಾಡನೊಲಿದು ಕೇಳುವನಿತು 

ತೆರೆದ ಹೃದಯ ನನಗಿದೆ 

ಅಷ್ಟೆ ಸಾಕು ; ಹಾಡು ನೀನು 

ಅದನೆ ಕೇಳಿ ಸುಖಿಸುವೆ ।।೨।।


ಹಮ್ಮು ಬಿಮ್ಮು ಒಂದೂ ಇಲ್ಲ 

ಹಾಡು , ಹೃದಯ ತೆರೆದಿದೆ 

ಹಾಡಿನಲ್ಲಿ ಕರಗಿ ಬಿಡಲು 

ನನ್ನ ಮನವು ಕಾದಿದೆ ।।೩।।



Wednesday, September 14, 2022

Kadam Kadam Badaye Ja (कदम कदम बढ़ाये जा )

 

Deshbhakti Geet

Written by: Vanshidhar Shukla

Song link: Click Here



Kadam kadam badaye ja

Kushi ke geet gaaye ja

yeh zindagi hae kaum ki

Tu kaum pe lutaye ja ||


Tu sher e hind aage badd

Marne se phir bhi tu na dar

Uda ke dushmanon ka sar

Josh e vatan badaye ja ||kadam||


Teri himmat sada badti rahe

Kudha teri sunta rahe

Jo samane tere adde

Tu khak mein milaye ja ||kadam||


Chalo dilli pukar ke

Kaumi nishan sambhal ke

Lal kile pe gaad ke

Laheraye ja laheraye ja ||kadam||


भारतीय राष्ट्रीय गीत 


कदम कदम बढ़ाये जा 

खुशी के गीत गये जा 

ये ज़िन्दगी है कौम की 

तू कौम पे लुटाये जा || 


तू शेर ए हिन्द आगे बढ़ 

मरने फिर भी तू न डर 

उड़ा के दुशमनों का सर 

जोश ए वतन बढ़ाये जा || कदम || 


तेरी हिम्मत सदा बढ़ती रहे 

खुदा तेरी सुनाता रहे 

जो सामने तेरे अड़े 

तू खाक में मिलाये जा || कदम || 


चलो दिल्ली पुकार के 

कौमी निशां  संभाल के 

लाल किले पे गाड़ के 

लहराए जा लहराए जा || कदम || 



Tuesday, September 13, 2022

Deva Banda Namma Swami Bandano (ದೇವ ಬಂದ ನಮ್ಮ ಸ್ವಾಮಿ ಬಂದನೋ)

Bhaktigeete

Sri Purandara Dasara Keerthanegalu

Song link: Click Here


Raga: Shankarabharana

Tala :  Aditala


Deva banda namma swami bandano

Devara deva shikhamani bandano ||


Uragashayana banda

Garudagamana banda

Naragolidava banda

Narayana bandano ||deva||


Mandaroddara banda

Mamano hara banda

Vrundavana pati

Govinda bandano ||deva||


Putani samharana banda

Puruhoota vandya banda

Matulana maduhida

Govinda bandano ||deva||


Nakra haranu banda

Chakra dharanu banda

Akruragolida trivikrama bandano ||deva||


Pakshivahana banda

Lakshmanagraja banda

Akshaya phalada 

Sri lakshmi ramana  bandano ||deva||


Nigamagochara banda

Nitya truptanu banda

Nagemukha purandara vittala bandano ||deva||


ಭಕ್ತಿಗೀತೆ 


ದೇವ ಬಂದ ನಮ್ಮ ಸ್ವಾಮಿ ಬಂದನೋ 

ದೇವರ ದೇವ ಶಿಖಾಮಣಿ ಬಂದನೋ ।।ಪ ।।


ಉರಗಶಯನ ಬಂದ 

ಗರುಡಗಮನ ಬಂದ 

ನರಗೊಲಿದವ ಬಂದ 

ನಾರಾಯಣ ಬಂದನೋ  ।।೧।।


ಮಂದರೋದ್ಧಾರ  ಬಂದ 

ಮಾಮನೊ  ಹರ ಬಂದ 

ವೃಂದಾವನ ಪತಿ

ಗೋವಿಂದ ಬಂದನೋ  ।।೨।।


ಪೂತನಿಸಂಹರಣ ಬಂದ 

ಪುರುಹೂತ ವಂದ್ಯ ಬಂದ 

ಮಾತುಳನ ಮಡುಹಿದ 

ಗೋವಿಂದ ಬಂದನೋ  ।।೩।।


ನಕ್ರ ಹರನು ಬಂದ 

ಚಕ್ರ ಧರನು ಬಂದ 

ಅಕ್ರೂರ ಗೊಲಿದ 

ತ್ರಿವಿಕ್ರಮ ಬಂದನೋ  ।।೪।।


ಪಕ್ಷಿ ವಾಹನ ಬಂದ 

ಲಕ್ಷ್ಮಣಾ ಗ್ರಜ ಬಂದ 

ಅಕ್ಷಯ ಫಲದಾ 

ಶ್ರೀ ಲಕ್ಷ್ಮೀ ರಮಣ  ಬಂದನೋ  ।।೫।।


ನಿಗಮಗೋಚರ ಬಂದ 

ನಿತ್ಯ ತೃಪ್ತನು ಬಂದ 

ನಗೆಮುಖ ಪುರಂದರ 

ವಿಠ್ಠಲ ಬಂದನೋ ।।೬।।                             ಶ್ರೀ 

                                     



Monday, September 12, 2022

Barele Hakki Bannada Hakki (ಬಾರೆಲೆ ಹಕ್ಕಿ ಬಣ್ಣದ ಹಕ್ಕಿ )

Padya

Sahitya: C Pha Kattimani

Song link : Click Here


Barele hakki bannada hakki

Barele hakki haruva hakki


Geleyaru aadalu yaru illa

Kaleyuvudentu veleyanella

Ba ba nanagu hadalu kalisu

Ba ba nanagu haralu kalisu


Avvanuneerige hogihalu

Appanu petege hogihanu

Avvanu barali appanu barali

Tinnalu hannanu kodisuvenu


Nanagu eradu rekkeya hacchu

Hingade bannada puchhava chuchhu

Nettiya mele juttanu hacchu

Mellane mele haralu hacchu


Nanu neenu ibbaru kudi

Mugilina kadege haruva ba

Allinditta illindatta

Haruta haduta naliyuva ba


ಪದ್ಯ 


ಬಾರೆಲೆ ಹಕ್ಕಿ ಬಣ್ಣದ ಹಕ್ಕಿ 

ಬಾರೆಲೆ ಹಕ್ಕಿ ಹಾರುವ ಹಕ್ಕಿ 


ಗೆಳೆಯರು ಆಡಲು ಯಾರೂ ಇಲ್ಲ 

ಕಳೆಯುವುದೆಂತು ವೇಳೆಯನೆಲ್ಲ 

ಬಾ ಬಾ ನನಗೂ ಹಾಡಲು ಕಲಿಸು 

ಬಾ ಬಾ ನನಗೂ ಹಾರಲು ಕಲಿಸು 


ಅವ್ವನು ನೀರಿಗೆ ಹೋಗಿಹಳು 

ಅಪ್ಪನು ಪೇಟೆಗೆ ಹೋಗಿಹನು 

ಅವ್ವನು ಬರಲಿ ಅಪ್ಪನು ಬರಲಿ 

ತಿನ್ನಲು ಹಣ್ಣನು ಕೊಡಿಸುವೆನು 


ನನಗೂ ಎರಡು ರೆಕ್ಕೆಯ ಹಚ್ಚು 

ಹಿಂಗಡೆ ಬಣ್ಣದ ಪುಚ್ಛವ ಚುಚ್ಚು 

ನೆತ್ತಿಯ ಮೇಲೆ ಜುಟ್ಟನು ಹಚ್ಚು 

ಮೆಲ್ಲನೆ ಮೇಲೆ ಹಾರಲು ಹಚ್ಚು 


ನಾನು ನೀನೂ ಇಬ್ಬರು ಕೂಡಿ 

ಮುಗಿಲಿನ ಕಡೆಗೆ ಹಾರುವ ಬಾ 

ಅಲ್ಲಿಂದಿತ್ತ ಇಲ್ಲಿಂದತ್ತ 

ಹಾರುತ ಹಾಡುತ ನಲಿಯುವ ಬಾ 

             

Sunday, September 11, 2022

Kurudu Kanchana Kuniyutalittu (ಕುರುಡು ಕಾಂಚಾಣ ಕುಣಿಯುತಲಿತ್ತು)


Bhavageete

Sahitya: Da Ra Bendre

Song link: Click Here


Kurudu kanchana  kuniyutalittu?

Kalige biddavara tuliyutalitto ||


Banantiyeluba sa

Banada bilupina

Kanada kirugejje kaalaga itto..


Sanna kandammagala

Kannina kavadeeya

Tannanna jomali koralolagitto ||kurudu||


Badavara odalina

Badabanaladalli

Sudu sudu panju kaiyolagitto..


Kambani kudiyuva

Humba bayile mai

Dumbidantudho udho ennutalitto ||kurudu||


Kooli kambaliyavara

Palina maidogala

Dhuliya bhandara haneyolagitto..


Gudiyolage ganana, ma

Hadiyolaga tanana, am

Gadidiyolaga jhananana nudigodutitto ||kurudu||


Hyangare kunikunidu

Mangata nadedaga

Angata bitto hegalali etto;


Kurudu kanchana  kuniyutalittu

Kalige biddavara tuliyutalitto ||


ಭಾವಗೀತೆ 


ಕುರುಡು ಕಾಂಚಾಣ ಕುಣಿಯುತಲಿತ್ತು ?

ಕಾಲಿಗೆ ಬಿದ್ದವರ ತುಳಿಯುತಲಿತ್ತೋ ।।ಪ ।।


ಬಾಣಂತಿಯೆಲುಬ  ಸಾ 

ಬಾಣದ ಬಿಳುಪಿನಾ 

ಕಾಣದ ಕಿರುಗೆಜ್ಜೆ ಕಲಾಗ ಇತ್ತೋ .. 


ಸಣ್ಣ ಕಂದಮ್ಮಗಳ 

ಕಣ್ಣೀನ ಕವಡೀಯ 

ತಣ್ಣನ್ನ ಜೋಮಾಲಿ ಕೊರಳೊಳಗಿತ್ತೋ 

।।ಕುರುಡು ।।


ಬಡವರ ಒಡಲಿನ 

ಬಡಬನಾಳದಲ್ಲಿ 

ಸುಡು ಸುಡು ಪಂಜು ಕೈಯೊಳಗಿತ್ತೋ .. 


ಕಂಬನಿ ಕುಡಿಯುವ 

ಹುಂಬ ಬಾಯಿಲೆ ಮೈ 

ದುಂಬಿದಂತುಧೊ ಉಧೊ ಎನ್ನುತ್ತಲಿತ್ತೋ 

।।ಕುರುಡು ।।


ಕೂಲಿ ಕಂಬಳಿಯವರ 

ಪಾಲಿನ ಮೈದೊಗಲ 

ಧೂಳಿಯ ಭಂಡಾರ ಹಣೆಯೊಳಗಿತ್ತೋ  .. 


ಗುಡಿಯೊಳಗೆ ಗಣಣ , ಮಾ 

ಹಡಿಯೊಳಗ ತನನ , ಅಂ 

ಗಡಿಯೊಳಗ ಝಣಣಣ  ನುಡಿಗೊಡುತ್ತಿತ್ತೋ 

।।ಕುರುಡು ।।


ಹ್ಯಾಂಗರೆ ಕುಣಿಕುಣಿದು 

ಮಂಗಾಟ ನಡೆದಾಗ 

ಅಂಗಾತ ಬಿತ್ತೊ ಹೆಗಲಲಿ ಎತ್ತೋ ;


ಕುರುಡು ಕಾಂಚಾಣ ಕುಣಿಯುತಲಿತ್ತು ?

ಕಾಲಿಗೆ ಬಿದ್ದವರ ತುಳಿಯುತಲಿತ್ತೋ.. 










Saturday, September 10, 2022

Narasimha Mantra Ondiralu Saku (ನರಸಿಂಹ ಮಂತ್ರ ಒಂದಿರಲು ಸಾಕು)

 Bhaktigeete

Sri Purandara Dasara Keerthanegalu

Song link: Click Here


Raga: Kamboja

Tala: Jampetala


Narasimha mantra ondiralu saku

Durita kotiya taridu bhagyavanu koduva ||


Shishuvada prahladana badhe bidisida mantra

Asura kuladavarige shatru mantra

Vasudheyolu patakigalaghava heeruva mantra

Pashu patige priyavada divya mantra ||1||


Ditta dhruvarayanige patta gattida mantra

Shista vibhishanana poreda mantra

Katta kadeyali ajamilana salahida mantra

Mutti bjisidavarige mokshamantra ||2||


Hindu bhutava kadidu tundu maduva mantra

Kondado lokake prachanda mantra

Gandugali kadana uddanda vikrama mantra

Pundareekaksha purandara vittala mantra ||3||


ಭಕ್ತಿಗೀತೆ 


ನರಸಿಂಹ ಮಂತ್ರ ಒಂದಿರಲು ಸಾಕು 

ದುರಿತ ಕೋಟಿಯ ತರಿದು ಭಾಗ್ಯವನು ಕೊಡುವ ।।ಪ ।।


ಶಿಶುವಾದ ಪ್ರಹ್ಲಾದನ ಭಾದೆ ಬಿಡಿಸಿದ ಮಂತ್ರ 

ಅಸುರಕುಲದವರಿಗೆ ಶತ್ರು ಮಂತ್ರ 

ವಸುಧೆಯೊಳು ಪಾತಕಿಗಳಘವ ಹೀರುವ ಮಂತ್ರ 

ಪಶುಪತಿಗೆ ಪ್ರಿಯವಾದ ದಿವ್ಯ ಮಂತ್ರ ।।೧।।


ದಿಟ್ಟ ಧ್ರುವರಾಯನಿಗೆ ಪಟ್ಟ ಗಟ್ಟಿದ ಮಂತ್ರ 

ಶಿಷ್ಟ ವಿಭೀಷಣನ ಪೊರೆದ ಮಂತ್ರ 

ಕಟ್ಟ ಕಡೆಯಲಿ ಅಜಾಮಿಳನ ಸಲಹಿದ ಮಂತ್ರ 

ಮುಟ್ಟಿ ಭಜಿಸಿದವರಿಗೆ ಮೋಕ್ಷ ಮಂತ್ರ ।।೨।।


ಹಿಂಡು ಭೂತವ ಕಡಿದು ತುಂಡು ಮಾಡುವ ಮಂತ್ರ 

ಕೊಂಡಾಡೊ ಲೋಕಕೆ ಪ್ರಚಂಡ ಮಂತ್ರ 

ಗಂಡುಗಲಿ ಕದನ ಉದ್ದಂಡ ವಿಕ್ರಮ ಮಂತ್ರ 

ಪುಂಡರೀಕಾಕ್ಷ ಪುರಂದರ ವಿಠ್ಠಲ ಮಂತ್ರ ।।೩।।           ಶ್ರೀ 



Friday, September 9, 2022

Yava Janmada Maitri (ಯಾವ ಜನ್ಮದ ಮೈತ್ರಿ )


Bhavageete

Sahitya: Kuvempu

Song link: Click Here


Yava janmada maitri

Ee janmadali bandu

Nammibbaranu matte

Bandisihudo...... kane!


Elliddarenante

Ninna noliyade maane

Gurudevanane, o nanna necchina bandhu! ||yava||


Vishwa jeevanavondu paravillada sindhu

Mele tere noreyeddu

Bhorgareyutire regi

Adarantaraladali guptagaminiyagi;

Hrudayagalu naliyutive 

Prema thirtadi mindu! ||yava||


Adararthagirthagalu srusti karthanigirali

Vyartha jijnaseyali kala haranavadeke?

Barayya, mamabandhu, jeevanapathadolavu

Ondagi munduvariyuva ||yava||


ಭಾವಗೀತೆ 


ಯಾವ ಜನ್ಮದ ಮೈತ್ರಿ 

ಈ ಜನ್ಮದಲಿ ಬಂದು 

ನಮ್ಮಿಬ್ಬರನು ಮತ್ತೆ 

ಬಂಧಿಸಿಹುದೋ .... ಕಾಣೆ !


ಎಲ್ಲಿದ್ದರೇನಂತೆ 

ನಿನ್ನ ನೊಲಿಯದೆ ಮಾಣೆ 

ಗುರುದೇವನಾಣೆ 

ಓ ನನ್ನ ನೆಚ್ಚಿನ ಬಂಧು ! ।।ಯಾವ ।।


ವಿಶ್ವ ಜೀವನವೊಂದು 

ಪಾರವಿಲ್ಲದ ಸಿಂಧು !

ಮೇಲೆ ತೆರೆ ನೊರೆಯೆದ್ದು 

ಭೋರ್ಗರೆಯುತಿರೆ ರೇಗಿ 

ಅದರಂತರಾಳದಲಿ ಗುಪ್ತಗಾಮಿನಿಯಾಗಿ 

ಹೃದಯಗಳು ನಲಿಯುತಿವೆ 

ಪ್ರೇಮ ತೀರ್ಥದಿ ಮಿಂದು ! ।।ಯಾವ|| 


ಅದರರ್ಥಗಿರ್ಥಗಳು ಸೃಷ್ಟಿ ಕರ್ತನಿಗಿರಲಿ 

ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ ?

ಬಾರಯ್ಯ , ಮಮಬಂಧು , ಜೀವನಪಥದೊಳಾವು 

ಒಂದಾಗಿ ಮುಂದುವರಿಯುವ  ।।ಯಾವ ।।



Tanuvu Ninnadu Manavu Ninnadu (ತನುವು ನಿನ್ನದು ಮನವು ನಿನ್ನದು )


Bhavageete

Sahitya: Kuvempu

Song link: Click Here


Tanuvu ninnadu manavu ninnadu

Enna jeevana dhanavu ninnadu

Nanu ninnavanemba hemmeya

Runavu matrave nannadu


Nennu holedare nanu holevenu

Nennu beledare nanu belevenu

Nanna haranada harana neenu

Enna maranada maranavu ||tanuvu||


Nanna manadali neene yukti

Enna hrudayadi neene bhakti

Neene maya moha shaktiyu

Enna jeevana muktiyu ||tanuvu||


ಭಾವಗೀತೆ 


ತನುವು ನಿನ್ನದು ಮನವು ನಿನ್ನದು 

ಎನ್ನ ಜೀವನ ಧನವು ನಿನ್ನದು 

ನಾನು ನಿನ್ನವನೆಂಬ ಹೆಮ್ಮೆಯ 

ಋಣವು ಮಾತ್ರವೆ ನನ್ನದು ।।ಪ ।।


ನೀನು ಹೊಳೆದರೆ ನಾನು ಹೊಳೆವೆನು 

ನೀನು ಬೆಳೆದರೆ ನಾನು ಬೆಳೆವೆನು 

ನನ್ನ ಹರಣದ ಹರಣ ನೀನು 

ಎನ್ನ ಮರಣದ ಮರಣವು ।।೧।।


ನನ್ನ ಮನದಲಿ ನೀನೆ ಯುಕ್ತಿ 

ಎನ್ನ ಹೃದಯದಿ ನೀನೆ  ಭಕ್ತಿ 

ನೀನೆ ಮಾಯಾ ಮೋಹ ಶಕ್ತಿಯು 

ಎನ್ನ ಜೀವನ ಮುಕ್ತಿಯು ।।೨।।