Tuesday, March 1, 2022

Bhale Bhale Chandada Chendulli Hennu Neenu (ಭಲೆ ಭಲೆ ಚಂದದ ಚಂದುಳ್ಳಿ ಹೆಣ್ಣು ನೀನು)

Movie: Amruthavarshini (1997)
Singer: SPB
Song link: Click Here

Ella shilpagaligu, ondondu hindina kathe ide

Nanna shilpa cheluve, ivala mundenna badukide!


Bhale bhale chandada chendulli hennu neenu

Minchu kooda nachuva minchina balli neenu

Ninna chanda hogalalu, padapunja saaladu

Ninna kangala kantigalindane taneene orella hombelaku

Ninu hejjeya ettallellanu kaladi hoovagi barabeku

Bhale bhale chandada chendulli hennu neenu

Minchu kooda nachuva minchina balli neenu !


Tampu tangaaliyu tandana hadittu, keloke na hodare, 

Ninna ee Sarighama kelitu, sama sama hanchitu

Julu julu neerilli tillana hadittu, Noodoke na bandare

Ninnade takatai kanditu, takadhimi heccitu 

Allondu sundara tootavide,  alli nooraru hoogala rashi ide

Ellondu preetiya haadu ide, Elli hattaru mecchina saalu ide

Ella salallu inuko akshara nindena, uttara illada sihi ogatu ninanda ninanda ninandave !


Atha kalidasa etha ravivarma, ninna hinde bandaru

Andava hogalalu saadhyave, ninna munde mounave

Atha urvashiyu etta menakeyu, ninna nade kandare

Naduve ulukutte allave, ninna bittarillave

Allondu rajara beedhi ide, ninu allinda teeralli eri bande

Illondu hrudaya kote ide, illi ententa kanaso kaavalide

Ella kaavalu daatida choriyu neenena?

Hattira iddaru, balu ettara ettara ninanda ninandave!


ಚಿತ್ರಗೀತೆ 


ಎಲ್ಲಾ ಶಿಲ್ಪಗಳಿಗೂ ಒಂದೊಂದು ಹಿಂದಿನ ಕಥೆ ಇದೆ 

ನನ್ನ ಶಿಲ್ಪ ಚೆಲುವೆ ಇವಳ ಮುಂದೆನ್ನ ಬದುಕಿದೆ! 


ಭಲೆ ಭಲೆ ಚಂದದ ಚಂದುಳ್ಳಿ ಹೆಣ್ಣು ನೀನು 

ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು 

ನಿನ್ನ ಚೆಂದ ಹೊಗಳಲು ಪದಪುಂಜ ಸಾಲದು 

ನಿನ್ನ ಕಂಗಳ ಕಾಂತಿಗಳಿಂದನೆ  ತಾನೇನೆ ಊರೆಲ್ಲ ಹೊಂಬೆಳಕು    

ನೀನು ಹೆಜ್ಜೆಯನ್ನಿಟ್ಟಲ್ಲಲ್ಲೆಲ್ಲಾನು  ಕಾಲಡಿ 

ಹೂವಾಗಿ ಬರಬೇಕು 

ಭಲೆ ಭಲೆ ಚಂದದ ಚಂದುಳ್ಳಿ ಹೆಣ್ಣು ನೀನು 

ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು!


ತಂಪು ತಂಗಾಳಿಯು ತಂದಾನ ಹಾಡಿತ್ತು ಕೇಳೋಕೆ ನಾ ಹೋದರೆ 

ನಿನ್ನ ಈ ಸರಿಗಮ ಕೇಳಿತು, ಸಮಸಮ ಹಂಚಿತು 

ಝುಳು ಝುಳು ನೀರಲ್ಲಿ ತಿಲ್ಲಾನ ಹಾಡಿತ್ತು ನೋಡೋಕೆ ನಾ ಬಂದರೆ

ನಿನ್ನದೇ ತಕಥೈ ಕಂಡಿತು ತಕಧಿಮಿ ಹೆಚ್ಚಿತು

 ಅಲ್ಲೊಂದು ಸುಂದರ ತೋಟವಿದೆ,ಅಲ್ಲಿ ನೂರಾರು ಹೂಗಳ ರಾಶಿ ಇದೆ 

ಇಲ್ಲೊಂದು ಪ್ರೀತಿಯ ಹಾಡು ಇದೆ,ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ 

ಎಲ್ಲ ಸಾಲಲ್ಲು ಇಣುಕೊ ಅಕ್ಷರ ನಿಂದೇನಾ ?!

ಉತ್ತರಾ ಇಲ್ಲದ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೇ ! 


ಅತ್ತ ಕಾಳಿದಾಸ ಇತ್ತ ರವಿವರ್ಮ, ನಿನ್ನ ಹಿಂದೆ ಬಂದರೂ 

ಅಂದವ ಹೊಗಳಲು ಸಾಧ್ಯವೇ, ನಿನ್ನ ಮುಂದೆ ಮೌನವೇ 

ಅತ್ತ ಊರ್ವಶಿಯು ಇತ್ತ ಮೇನಕೆಯು, ನಿನ್ನ ನಡೆ ಕಂಡರೆ, 

ನಡುವೇ ಉಳುಕುತ್ತೆ ಅಲ್ಲವೇ, ನಿನ್ನ ಬಿಟ್ಟರಿಲ್ಲವೇ 

ಅಲ್ಲೊಂದು ರಾಜರ ಬೀದಿ ಇದೆ,ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ 

ಇಲ್ಲೊಂದು ಹೃದಯ ಕೋಟೆ ಇದೆ, ಇಲ್ಲಿ ಎಂತೆಂಥ ಕನಸೊ  ಕಾವಲಿದೆ 

ಎಲ್ಲ ಕಾವಲು ದಾಟಿದ ಚೋರಿಯು ನೀನೇನಾ ?!

ಹತ್ತಿರ ಇದ್ದರೂ  ಬಲು ಎತ್ತರ ಎತ್ತರ ನಿನಂದ ನಿನ್ನಂದವೆ !

                                                                                                                                                                                

No comments:

Post a Comment