Movie: Baala Bandhana (1971)
Singers: P B Srinivas, P Susheela
Song Link: Click Here
Chinnadantha naadige, rannadantha raaja (2)
Rannadantha rajanig,e muttinantha raani
Muttinantha rani hetta makkalu elu
Aa elaralli yavudu eligeyilla, hmm eligeyilla
Chinnadantha naadige rannadantha raaja ||
Tande taaya allagaleda odida jaana
Taane hiriyanante nadeda odada kona
Kuduregeradu kombu enda maatina malla
Hendira gulamara humbaru ella, aa humbaru ella ||
Raja ondu naayi tandu neralu needida
Adanu maguvinante muddininda saaki belesida
Hottiguta suttugelasa adara paalige
Adara edeya gudiya poojeyella avana kaalige
Pooje avana kaalige, chinnadantha naadige rannadantha raaja ||
Tannadagi kanda swattu tannade enu
Anyaralli itta karune kannuri enu
Muppinalli aadavare makkalu kelu
Neetigetta maganiginta nayiye melu
Ondu nayiye melu, Chinnadantha naadige rannadantha raaja ||
ಚಿತ್ರಗೀತೆ
ಚಿನ್ನದಂಥ ನಾಡಿಗೆ, ರನ್ನದಂಥ ರಾಜ (೨)
ರನ್ನದಂಥ ರಾಜನಿಗೆ, ಮುತ್ತಿನಂಥ ರಾಣಿ
ಮುತ್ತಿನಂಥ ರಾಣಿ ಹೆತ್ತ ಮಕ್ಕಳು ಏಳು
ಆ ಏಳರಲ್ಲಿ ಯಾವುದೂ ಏಳಿಗೆಯಿಲ್ಲ, ಹೂ೦ ಏಳಿಗೆಯಿಲ್ಲ
ಚಿನ್ನದಂಥ ನಾಡಿಗೆ ರನ್ನದಂಥ ರಾಜ ।।ಪ।।
ತಂದೆ ತಾಯ ಅಲ್ಲಗಳೆದ ಓದಿದ ಜಾಣ
ತಾನೆ ಹಿರಿಯನಂತೆ ನಡೆದ ಓದದ ಕೋಣ
ಕುದುರೆಗೆರಡು ಕೊಂಬು ಎಂದ ಮಾತಿನ ಮಲ್ಲ
ಹೆಂಡಿರ ಗುಲಾಮರ ಹುಂಬರು ಎಲ್ಲ, ಆ ಹುಂಬರು ಎಲ್ಲ ।।೧।।
ರಾಜ ಒಂದು ನಾಯಿ ತಂದು ನೆರಳು ನೀಡಿದ
ಅದನು ಮಗುವಿನಂತೆ ಮುದ್ದಿನಿಂದ ಸಾಕಿ ಬೆಳೆಸಿದ
ಹೊತ್ತಿಗೂಟ ಸುತ್ತುಗೆಲಸ ಅದರ ಪಾಲಿಗೆ
ಅದರ ಎದೆಯ ಗುಡಿಯ ಪೂಜೆಯೆಲ್ಲ ಅವನ ಕಾಲಿಗೆ
ಪೂಜೆ ಅವನ ಕಾಲಿಗೆ, ಚಿನ್ನದಂಥ ನಾಡಿಗೆ ರನ್ನದಂಥ ರಾಜ ।।೨।।
ತನ್ನದಾಗಿ ಕಂಡ ಸ್ವತ್ತು ತನ್ನದೆ ಏನು
ಅನ್ಯರಲ್ಲಿ ಇಟ್ಟ ಕರುಣೆ ಕಣ್ಣುರಿ ಏನು
ಮುಪ್ಪಿನಲ್ಲಿ ಆದವರೆ ಮಕ್ಕಳು ಕೇಳು
ನೀತಿಗೆಟ್ಟ ಮಗನಿಗಿಂತ ನಾಯಿಯೇ ಮೇಲು
ಒಂದು ನಾಯಿಯೇ ಮೇಲು, ಚಿನ್ನದಂಥ ನಾಡಿಗೆ ರನ್ನದಂಥ ರಾಜ
।।೩।।

No comments:
Post a Comment