Bhaktigeete
Singer: P B Srinivas
Mooshikavahana mohaka hasta
Chamarakarna vilambita sutra
Vamanaroopa maheshwara putra
Vignavinashaka pada, namaste
namaste namaste namaha..
Sharanu sharannaya sharanu benaka
Nidayya balella belaguva belaka
Ninna nambida janake ehudayya ella sukha
Tande kayo namma karimukha
Ellaru ondagi ninna
Namisi naliyodu nodoke chenna
Garike tandare ninu......aaaa.....
Koduve varavanna
Gati nine ganapane kai hidiyo munna ||sharanu||
Suryanedurali manju karaguva reeti
Ninna neneyalu odane
oduvudu beeti
Nidayya kastagala gelluva shakuti
Torayya nammali ninnaya preeti ||sharanu||
Benaka benaka ekadanta
Pachegallu panimetlu oppuva
Vigneshwara ninange eppatmooru
Namaskaragalu..
ಭಕ್ತಿಗೀತೆ
ಮೂಶಿಕವಾಹನ ಮೋಹಕ ಹಸ್ತ
ಚಾಮರಕರ್ಣ ವಿಳಂಬಿತ ಸೂತ್ರ
ವಾಮನರೂಪ ಮಹೇಶ್ವರ ಪುತ್ರ
ವಿಘ್ನವಿನಾಶಕ ಪಾದ , ನಮಸ್ತೆ ನಮಸ್ತೆ
ನಮಸ್ತೆ ನಮಃ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವಾ ಬೆಳಕ
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ
ತಂದೆ ಕಾಯೊ ನಮ್ಮ ಕರಿಮುಖ
ಎಲ್ಲರು ಒಂದಾಗಿ ನಿನ್ನ
ನಮಿಸಿ ನಲಿಯೋದು ನೋಡೊಕೆ ಚೆನ್ನ
ಗರಿಕೆ ತಂದರೆ ನೀನು ಆಆ
ಕೊಡುವೆ ವರವನ್ನ
ಗತಿ ನೀನೆ ಗಣಪನೆ ಕೈ ಹಿಡಿಯೊ ಮುನ್ನ ।।೧।।
ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓಡುವುದು ಭೀತಿ
ನೀಡಯ್ಯ ಕಷ್ಟಗಳ ಗೆಲ್ಲುವ ಶಕುತಿ
ತೋರಯ್ಯ ನಮ್ಮಲ್ಲಿ ನಿನ್ನಯ ಪ್ರೀತಿ ।।೨।।
ಬೆನಕ ಬೆನಕ ಏಕದಂತ
ಪಚ್ಚೆಗಲ್ಲು ಪಾಣಿಮೆಟ್ಲು ಒಪ್ಪುವ ವಿಘ್ನೇಶ್ವರ
ನಿನಗೆ ಇಪ್ಪತ್ಮೂರು ನಮಸ್ಕಾರಗಳು ।।೩।।