Thursday, September 26, 2024

Ningi Ningi Ningi Ningi (ನಿಂಗಿ ನಿಂಗಿ ನಿಂಗಿ ನಿಂಗಿ)

Movie: Hoovu Hannu (1993)

Singer: C Ashwath

Song link: Click Here


Hoyyaare hoyyaa, hoyyaare hoyyaa 

Hoyyaare hoyyaa re hoi!

Ningi ningi ningi ningi, niddi kaddiyalle ningi

Ningi ningi ningi ningi, aasi edditalle ningi

Chandana chandra        CHO: hoyyare hoyya

Bhumeega landra           CHO: hoyyare hoyya

Aagyana nodalli ||


Varinota beeruvaki, nachikondu nintiyaka

Balidinda holuvaaki, baagilaga irabeka

Yaka hinga kaaduti, noyu hanga maaduti

Illi nanga taaguti, henna baana huduti lala..||


Niddi embudu ondu devati, premigaligaaki savati

Ena garati, ninna savati, bandareega ena maaduti

Yaka tada maadati, vyali mukha noduti

Chandramukhi holuti, yava sukha beduti lala..||


ಚಿತ್ರಗೀತೆ 


ಹೊಯ್ಯಾರೆ ಹೊಯ್ಯಾ, ಹೊಯ್ಯಾರೆ ಹೊಯ್ಯಾ 

ಹೊಯ್ಯಾರೆ ಹೊಯ್ಯಾ ರೇ ಹೊಯ್ !

ನಿಂಗಿ ನಿಂಗಿ ನಿಂಗಿ ನಿಂಗಿ, ನಿದ್ದೀ ಕದ್ದೀಯಲ್ಲೆ ನಿಂಗಿ 

ನಿಂಗಿ ನಿಂಗಿ ನಿಂಗಿ ನಿಂಗಿ, ಆಸಿ ಎದ್ದೀತಲ್ಲೆ ನಿಂಗಿ 

ಚಂದಾನ ಚಂದ್ರ        ಚೊ: ಹೊಯ್ಯಾರೆ ಹೊಯ್ಯಾ

ಭೂಮೀಗ ಲಾಂದ್ರ     ಚೊ: ಹೊಯ್ಯಾರೆ ಹೊಯ್ಯಾ

ಆಗ್ಯಾನ ನೋಡಲ್ಲಿ ।।ಪ।।


ವಾರಿನೋಟ ಬೀರುವಾಕಿ, ನಾಚಿಕೊಂಡು ನಿಂತಿಯಾಕ 

ಬಾಳಿದಿಂಡ ಹೋಲುವಾಕಿ, ಬಾಗಿಲಾಗ ಇರಬೇಕ 

ಯಾಕ ಹಿಂಗ ಕಾಡುತಿ, ನೋಯು ಹಂಗ ಮಾಡುತಿ 

ಇಲ್ಲಿ ನಂಗ ತಾಗುತಿ, ಹೆಣ್ಣ ಬಾಣ ಹೂಡುತಿ ।।೧।।


ನಿದ್ದಿ ಎಂಬುದು ಒಂದು ದೇವತಿ, ಪ್ರೇಮಿಗಳಿಗಾಕಿ ಸವತಿ 

ಏನ ಗರತಿ, ನಿನ್ನ ಸವತಿ, ಬಂದರೀಗ ಏನ ಮಾಡುತಿ 

ಯಾಕ ತಡ ಮಾಡತಿ, ವ್ಯಾಳಿ ಮುಖ ನೋಡುತಿ 

ಚಂದ್ರಮುಖಿ ಹೋಲುತಿ, ಯಾವ ಸುಖ ಬೇಡುತಿ ।।೨।।

                       

Ninna Kanna Notadalle (ನಿನ್ನ ಕಣ್ಣ ನೋಟದಲ್ಲೆ)

Movie: Babruvahana (1977)

Singer: P B Srinivas

Song link: Click Here


Ninna kanna notadalle, nooru aase kandenu (2)

Ninna tutiya naguvinalli, nanne maretu hodenu

Ninna kanna notadalle, nooru aase kandenu ||


Ninna naduva kandu taane balli balukitu (2)

Ninna nadeya kanda hamse nachi oditu (2)

Ninna natya kandu navilu kuniyadayitu

Cheluvinarasi, nanna manavu, indu ninnadayitu

Ninna kanna notadalle, nooru aase kandenu ||


Solanendu kaanadantha, veera parthanu (2)

Ninna kanna baanadinda, sotu hodanu (2)

Cheluve ninna, snehadalli, karagi hodenu

Tolinalli balasidaga, naane neenadenu 

Ninna kanna notadalle, nooru aase kandenu ||


ಚಿತ್ರಗೀತೆ 


ನಿನ್ನ ಕಣ್ಣ ನೋಟದಲ್ಲೆ, ನೂರು ಆಸೆ ಕಂಡೆನು (೨)

ನಿನ್ನ ತುಟಿಯ ನಗುವಿನಲ್ಲಿ, ನನ್ನೆ ಮರೆತು ಹೋದೆನೂ 

ನಿನ್ನ ಕಣ್ಣ ನೋಟದಲ್ಲೆ, ನೂರು ಆಸೆ ಕಂಡೆನು ।।ಪ।।


ನಿನ್ನ ನಡುವ ಕಂಡು ತಾನೆ ಬಳ್ಳಿ ಬಳುಕಿತು (೨)

ನಿನ್ನ ನಡೆಯ ಕಂಡ ಹಂಸೆ ನಾಚಿ ಓಡಿತು (೨)

ನಿನ್ನ ನಾಟ್ಯ ಕಂಡು ನವಿಲು ಕುಣಿಯದಾಯಿತು 

ಚೆಲುವಿನರಸಿ, ನನ್ನ ಮನವು, ಇಂದು ನಿನ್ನದಾಯಿತು 

ನಿನ್ನ ಕಣ್ಣ ನೋಟದಲ್ಲೆ, ನೂರು ಆಸೆ ಕಂಡೆನು ।।೧।।


ಸೋಲನೆಂದು ಕಾಣದಂಥ, ವೀರ ಪಾರ್ಥನು (೨)

ನಿನ್ನ ಕಣ್ಣ ಬಾಣದಿಂದ, ಸೋತು ಹೋದನು (೨)

ಚೆಲುವೆ ನಿನ್ನ, ಸ್ನೇಹದಲ್ಲಿ, ಕರಗಿ ಹೋದೆನು 

ತೋಳಿನಲ್ಲಿ ಬಳಸಿದಾಗ, ನಾನೇ ನೀನಾದೆನು

ನಿನ್ನ ಕಣ್ಣ ನೋಟದಲ್ಲೆ, ನೂರು ಆಸೆ ಕಂಡೆನು ।।೨।।

                   


Panchamaveda Premada Naada (ಪಂಚಮವೇದ ಪ್ರೇಮದ ನಾದ)

Movie: Gejje Pooje (1970)

Singer: S Janaki

Song link: Click Here


Panchamaveda premada naada

Pranayada sarigama bhavananda

Hrudaya sangama anuraaga bandha

Raga ragini yoganu bandha ||


Jeeva jeevada swara sanchara

Amruta chetana rasadhara

Radha madhava venu vihara

Geeteya preetiya jeevana saara ||


Premagaanade paravasha ee dhare

Manasa lokada gangeya dhare

Divya digantada bhagya taare

Bhavya rasikate baaligasare ||


ಚಿತ್ರಗೀತೆ 


ಪಂಚಮವೇದ ಪ್ರೇಮದ ನಾದ 

ಪ್ರಣಯದ ಸರಿಗಮ ಭಾವಾನಂದ 

ಹೃದಯ ಸಂಗಮ ಅನುರಾಗ ಬಂಧಾ 

ರಾಗರಾಗಿಣಿ ಯೋಗಾನು ಬಂಧಾ ।।ಪ।।


ಜೀವ ಜೇವದ ಸ್ವರ ಸಂಚಾರ 

ಅಮೃತ ಚೇತನ ರಸಧಾರ 

ರಾಧಾ ಮಾಧವ ವೇಣು ವಿಹಾರ 

ಗೀತೆಯ ಪ್ರೀತಿಯ ಜೀವನ ಸಾರ ।।೧।।


ಪ್ರೇಮ ಗಾನದೆ ಪರವಶ ಈ ಧರೆ 

ಮಾನಸ ಲೋಕದ ಗಂಗೆಯ ಧಾರೆ 

ದಿವ್ಯ ದಿಗಂತದ ಭಾಗ್ಯ ತಾರೆ 

ಭವ್ಯ ರಸಿಕತೆ ಬಾಳಿಗಾಸರೆ ।।೨।।

       


Ninna Lagna Patrike (ನಿನ್ನ ಲಗ್ನ ಪತ್ರಿಕೆ)

Movie: Amma (1986)

Singer: S Janaki

Song link: Click Here


Ninna lagna patrike, enna kugi karedide

Ninna srimantike baa endide (2)

Naanenu baralilla, enagaase enu illa, enagaase enu illa ||


Nilukada hannige needide kaiya, balukuva balli bagideyayya (2)

Hannu kaige sikkare bedende enayya, ninnaya manava nambenayya

Naanenu baralilla, enagaase enu illa, enagaase enu illa ||


Seraganu hididu eleyuve eke, karedare barene kanna sannege (2)

Baliyali naanire jen madhuveke, naleya kanasu indetake

Naanenu baralilla, enagaase enu illa, enagaase enu illa 

Ninna lagna patrike, enna kugi karedide

Ninna srimantike baa endide (3) ||


ಚಿತ್ರಗೀತೆ 


ನಿನ್ನ ಲಗ್ನ ಪತ್ರಿಕೆ, ಎನ್ನ ಕೂಗಿ ಕರೆದಿದೆ 

ನಿನ್ನ ಶ್ರೀಮಂತಿಕೆ ಬಾ ಎಂದಿದೆ (೨)

ನಾನೇನು ಬರಲಿಲ್ಲ, ಎನಗಾಸೆ ಏನೂ ಇಲ್ಲ, ಎನಗಾಸೆ ಏನೂ ಇಲ್ಲ 

।।ಪ।।


ನಿಲುಕದ ಹಣ್ಣಿಗೆ ನೀಡಿದೆ ಕೈಯ, ಬಳುಕುವ ಬಳ್ಳಿ ಬಾಗಿದೆಯಯ್ಯ (೨)

ಹಣ್ಣು ಕೈಗೆ ಸಿಕ್ಕರೆ ಬೇಡೆಂದೆ ಏನಯ್ಯ, ನಿನ್ನಯ ಮನವ ನಂಬೇನಯ್ಯ                     

ನಾನೇನು ಬರಲಿಲ್ಲ, ಎನಗಾಸೆ ಏನೂ ಇಲ್ಲ, ಎನಗಾಸೆ ಏನೂ ಇಲ್ಲ 

।।೧।।


ಸೆರಗನು ಹಿಡಿದು ಎಳೆಯುವೆ ಏಕೆ, ಕರೆದರೆ ಬರೆನೆ ಕಣ್ಣ ಸನ್ನೆಗೆ (೨)

ಬಳಿಯಲಿ ನಾನಿರೆ ಜೇನ್ ಮಧುವೇಕೆ, ನಾಳೆಯ ಕನಸು ಇಂದೇತಕೆ 

ನಾನೇನು ಬರಲಿಲ್ಲ, ಎನಗಾಸೆ ಏನೂ ಇಲ್ಲ, ಎನಗಾಸೆ ಏನೂ ಇಲ್ಲ 

ನಿನ್ನ ಲಗ್ನ ಪತ್ರಿಕೆ, ಎನ್ನ ಕೂಗಿ ಕರೆದಿದೆ 

ನಿನ್ನ ಶ್ರೀಮಂತಿಕೆ ಬಾ ಎಂದಿದೆ (೩) ।।೨।।

               


Tuesday, September 24, 2024

Omme Ninnannu Kantumba (ಒಮ್ಮೆ ನಿನ್ನನ್ನು ಕಣ್ತುಂಬ)

Movie: Gaalimaatu (1981)

Singer: S Janaki

Song link: Click Here


Omme ninnannu kantumba, kaanuvase elliruve (2)

Bhuviyallo banallo, innello na kane

Omme ninnannu kantumba, kaanuvase elliruve ||


Araliruva hoovinalli, ninna notava, hariyutiha neerinalli ninna otava

Impada gaanadalli, ninna manada bhavava, malebilla bannadalli ninna andava

Navilado natyadalli ninna chandava, tampada gaaliyalli neenado aatava

Dinavella na kande, na kandu, beragade

Omme ninnannu kantumba, kaanuvase elliruve ||


Minugutiha taareyella ninna kangalo, nagutiralu bhumigella beladingalo

Aa belli modavella nee bareda bombegalo, mudanada anchininda ninna payanavo

Munjane kaano kempu, kendutiya bannavo, aagasada neeliyella nee nadeva haadiyo

Ninnante yarilla, ninnalle manasella 

Omme ninnannu kantumba, kaanuvase elliruve ||


ಚಿತ್ರಗೀತೆ 


ಒಮ್ಮೆ ನಿನ್ನನ್ನು ಕಣ್ತುಂಬ, ಕಾಣುವಾಸೆ ಎಲ್ಲಿರುವೆ (೨)

ಭುವಿಯಲ್ಲೋ ಬಾನಲ್ಲೋ , ಇನ್ನೆಲ್ಲೋ ನಾ ಕಾಣೆ 

ಒಮ್ಮೆ ನಿನ್ನನ್ನು ಕಣ್ತುಂಬ, ಕಾಣುವಾಸೆ ಎಲ್ಲಿರುವೆ ।।ಪ।।


ಅರಳಿರುವ ಹೂವಿನಲ್ಲಿ ನಿನ್ನ ನೋಟವಾ, ಹರಿಯುತಿಹ ನೀರಿನಲ್ಲಿ ನಿನ್ನ ಓಟವಾ 

ಇಂಪಾದ ಗಾನದಲ್ಲಿ ನಿನ್ನ ಮನದ ಭಾವವಾ, ಮಳೆಬಿಲ್ಲ ಬಣ್ಣದಲ್ಲಿ ನಿನ್ನ ಅಂದವಾ 

ನಾವಿಲಾಡೋ ನಾಟ್ಯದಲ್ಲಿ ನಿನ್ನ ಚೆಂದವಾ, ತಂಪಾದ ಗಾಳಿಯಲ್ಲಿ ನೀನಾಡೊ ಆಟವಾ 

ದಿನವೆಲ್ಲ ನಾ ಕಂಡೆ, ನಾ ಕಂಡು ಬೆರಗಾದೆ 

ಒಮ್ಮೆ ನಿನ್ನನ್ನು ಕಣ್ತುಂಬ, ಕಾಣುವಾಸೆ ಎಲ್ಲಿರುವೆ ।।೧।।


ಮಿನುಗುತಿಹ ತಾರೆಯೆಲ್ಲಾ ನಿನ್ನ ಕಂಗಳೋ, ನಗುತಿರಲು ಭೂಮಿಗೆಲ್ಲಾ ಬೆಳದಿಂಗಳೋ 

ಆ ಬೆಳ್ಳಿ ಮೊಡವೆಲ್ಲಾ ನೀ ಬರೆದ ಬೊಂಬೆಗಳೋ, ಮೂಡಣದ ಅಂಚಿನಿಂದ ನಿನ್ನ ಪಯಣವೋ 

ಮುಂಜಾನೆ ಕಾಣೋ ಕೆಂಪು, ಕೆಂದುಟಿಯ ಬಣ್ಣವೋ, ಆಗಸದ ನೀಲಿಯೆಲ್ಲಾ ನೀ ನಡೆವ ಹಾದಿಯೋ 

ನಿನ್ನಂತೆ ಯಾರಿಲ್ಲಾ ನಿನ್ನಲ್ಲೇ ಮನಸೆಲ್ಲಾ 

ಒಮ್ಮೆ ನಿನ್ನನ್ನು ಕಣ್ತುಂಬ, ಕಾಣುವಾಸೆ ಎಲ್ಲಿರುವೆ ।।೨।।

                           

Pavadisu Paramatma (ಪವಡಿಸು ಪರಮಾತ್ಮ)

Movie: Srinivasa Kalyana (1974)

Singer: SPB

Song link: Click Here


Pavadisu paramatma sri venkatesha

Manavemba malligeya hoova hasige mele

 Pavadisu paramatma sri venkatesha, saptagirivasa ||


Ramanige kousalya laali haadida reeti

Anasuye jogulava haadi nalida reeti

Ninna mahimeya paadi paada seveya maadi

Aa..aa ninna mahimeya paadi paada seveya maadi

Dhanyanaguvenindu karuniso daya maadi ||


Irulu mugiyade irali, hagalu moodade irali

Anugaala ee seve saagutale irali

Bhakti aritavanalla, muktiyu bekilla (2)

Ninna kaanade jeeva kshana kaala nilladayya ||


ಚಿತ್ರಗೀತೆ 


ಪವಡಿಸು ಪರಮಾತ್ಮ ಶ್ರೀ ವೆಂಕಟೇಶ 

ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ 

ಪವಡಿಸು ಪರಮಾತ್ಮ ಶ್ರೀ ವೆಂಕಟೇಶ, ಸಪ್ತಗಿರಿವಾಸ ।।ಪ।।


ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ 

ಅನಸೂಯೆ ಜೋಗುಳವ ಹಾಡಿ ನಲಿದಾ ರೀತಿ 

ನಿನ್ನ ಮಹಿಮೆಯ ಪಾಡಿ ಪಾದ ಸೇವೆಯ ಮಾಡಿ 

ಆ ..ಆ, ನಿನ್ನ ಮಹಿಮೆಯ ಪಾಡಿ ಪಾದ ಸೇವೆಯ ಮಾಡಿ 

ಧನ್ಯನಾಗುವೆನಿಂದು ಕರುಣಿಸೋ ದಯ ಮಾಡಿ ।।೧।।


ಇರುಳು ಮುಗಿಯದೆ ಇರಲಿ, ಹಗಲು ಮೂಡದೆ ಇರಲಿ 

ಅನುಗಾಲ ಈ ಸೇವೆ ಸಾಗುತಲೇ ಇರಲಿ 

ಭಕ್ತಿ ಅರಿತವನಲ್ಲ, ಮುಕ್ತಿಯೂ ಬೇಕಿಲ್ಲ (೨)

ನಿನ್ನ ಕಾಣದೆ ಜೀವ ಕ್ಷಣ ಕಾಲ ನಿಲ್ಲದಯ್ಯಾ ।।೨।।

                     


Saturday, September 21, 2024

Baana Dariyalli Surya (ಬಾನ ದಾರಿಯಲ್ಲಿ ಸೂರ್ಯ)

Movie: Bhagyavantha (1981)

Singer: Puneeth Rajkumar

Song link: Click Here


Baana dariyalli surya jaari hoda

Chandra mele banda

Minugu taare anda, nodu entha chenda

Ratriyaytu malagu nanna putta kanda, nanna putta kanda ||


Neenado matella jeninante

Naguvaga mogavondu hoovinante

Neenondu sakkareya bombeyante

Maguve nee nanna pranadante, nanna pranadante ||


Aa deva namagagi tanda siriye

Ee maneya soubhagya ninna nageye

Alalenu chenda nanna putta doreye

Hayagi malago jaana mariye, nanna jana mariye ||


ಚಿತ್ರಗೀತೆ 


ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ 

ಚಂದ್ರ ಮೇಲೆ ಬಂದ 

ಮಿನುಗು ತಾರೆ ಅಂದ, ನೋಡು ಎಂಥ ಚೆಂದ 

ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದ, ನನ್ನ ಪುಟ್ಟ ಕಂದ 

।।ಪ।।


ನೀನಾಡೋ ಮಾತೆಲ್ಲ ಜೇನಿನಂತೆ 

ನಗುವಾಗ ಮೊಗವೊಂದು ಹೂವಿನಂತೆ 

ನೀನೊಂದು ಸಕ್ಕರೆಯ ಬೊಂಬೆಯಂತೆ 

ಮಗುವೇ ನೀ ನನ್ನ ಪ್ರಾಣದಂತೆ, ನನ್ನ ಪ್ರಾಣದಂತೆ ।।೧।।


ಆ ದೇವ ನಮಗಾಗಿ ತಂದ ಸಿರಿಯೇ 

ಈ ಮನೆಯ ಸೌಭಾಗ್ಯ ನಿನ್ನ ನಗೆಯೇ 

ಅಳಲೇನು ಚೆಂದ ನನ್ನ ಪುಟ್ಟ ದೊರೆಯೇ 

ಹಾಯಾಗಿ ಮಲಗೋ ಜಾಣ ಮರಿಯೇ, ನನ್ನ ಜಾಣ ಮರಿಯೇ ।।೨।

                                 

Shreedhara Keshava Narayana (ಶ್ರೀಧರ ಕೇಶವ ನಾರಾಯಣ)

Movie: Mahasati Anasuya (1965)

Singer: P B Srinivas

Song link: Click Here


Shreedhara keshava narayana, shreekara shubhakara narayana

Shreedhara keshava narayana ||


Ee jagavondu nataka mandira, janarella sutra gombegalayya

Neenaadisidante aaduvarayya..aa..aa (2)

Leelamayanu neene deva ||


Kamala ramana pannagashayana, durita nivaarana bhava bhaya harana

Deena jana mandaara danava samhara (2)

Akhilanda koti brahmanda nayaka

Loka lokadi pujitanayya, bhaktra bhaktanu neenayya ||


Suranara sevita lokaikanatha, munijana vandita mangaladaata

Srikanta, raajita, karunakarane kaarunya sheelane

Kaamitadayaka garudagamana

Ellarigu neene aadharavayya, apadbhandava neenayya ||


ಚಿತ್ರಗೀತೆ 


ಶ್ರೀಧರ ಕೇಶವ ನಾರಾಯಣ, ಶ್ರೀಕರ ಶುಭಕರ ನಾರಾಯಣ 

ಶ್ರೀಧರ ಕೇಶವ ನಾರಾಯಣ ।।ಪ।।


ಈ ಜಗವೊಂದು ನಾಟಕ ಮಂದಿರ, ಜನರೆಲ್ಲ ಸೂತ್ರ ಗೊಂಬೆಗಳಯ್ಯಾ 

ನೀನಾಡಿಸಿದಂತೆ ಆಡುವರಯ್ಯಾ .. ಆ ಆ ..  (೨)

ಲೀಲಾಮಯನು ನೀನೇ ದೇವ ।।೧।।


ಕಮಲಾರಮಣ ಪನ್ನಗಶಯನ, ದುರಿತ ನಿವಾರಣ ಭವ ಭಯ ಹರಣ 

ದೀನ ಜನ ಮಂದಾರ ದಾನವ ಸಂಹಾರ (೨)

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ 

ಲೋಕ ಲೋಕದಿ ಪೂಜಿತನಯ್ಯಾ, ಭಕ್ತರ ಭಕ್ತನು ನೀನಯ್ಯಾ ।।೨।।


ಸುರನರ ಸೇವಿತ ಲೋಕೈಕನಾಥ, ಮುನಿಜನ ವಂದಿತ ಮಂಗಳದಾತ

ಶ್ರೀಕಾಂತ, ರಾಜಿತ, ಕರುಣಾಕರನೆ  ಕಾರುಣ್ಯ ಶೀಲನೇ

ಕಾಮಿತದಾಯಕ ಗರುಡಗಮನ 

ಎಲ್ಲರಿಗೂ ನೀನೇ ಆಧಾರವಯ್ಯಾ, ಆಪದ್ಭಾ೦ದವ ನೀನಯ್ಯಾ ।।೨।।

                              

Baanina Anchinda Bande (ಬಾನಿನ ಅಂಚಿಂದ ಬಂದೆ)

Movie: Shravana Bantu (1984)

Singers: Dr, Rajkumar, Vani Jairam

Song link: Click Here


Moodanada aramaneya kadavu tereyutire, balaravi nasunaguta inuki nodutire

Aakasha kempagi bhuviyella rangagi, naliyuta, kuniyuta, barutiralu ushe, mareyaadalu nishe..


Baanina anchinda bande, bali ninde, belakannu chellutta

Udayaraaga haadutiruve, baanina anchinda bande (2) ||


Hejje idalu ninna gejje nagalu, naada keli moggu hoovagide

Hoovu nagalu adara jeena odalu, kandu dumbi alli haaradide

Belaku moodutide  CHO: aa..aa

Sogasu kaanutide    CHO: aa..aa

Aa haa .., hosatu jeeva tumbuvante ||


NaaDir Dir DheemTa TaaNa DhiNa DhiRaNa

TaKiTaTaKa, DhiKiTaTaDa, TaKiTaTaKa DhiKiTaTaKa

TaddonTaKiTa TaddonTaKiTa, TaKiTaTaKa DhiKiTaTaKa

TaKiTaTaKa TaRiKiTaTaKa Ta

CHO: DaSa SaSa NiNi DaDaMaGa Sa, NiNi DaDa MaMa GaGaSaGaMa

Aa..aa.. eleya mele himada maniya saalu, belaka kandu holeva muttagide

Marada mele kulita giliya saalu, mugila kadege chimmi haaradide

Kadala ale aleyu       CHO: aa..aa..

Chimmi kuniyutire   CHO: aa..aa..

Aa..aa.. bhuviya anda kaanalendu, baanina anchinda bande ||


ಚಿತ್ರಗೀತೆ 


ಮೂಡಣದ ಅರಮನೆಯ ಕದವು ತೆರೆಯುತಿರೆ, ಬಾಲ ರವಿ ನಸುನಗುತ ಇಣುಕಿ ನೋಡುತಿರೆ 

ಆಕಾಶ ಕೆಂಪಾಗಿ ಭುವಿಯೆಲ್ಲ ರಂಗಾಗಿ, ನಲಿಯುತಾ, ಕುಣಿಯುತಾ, ಬರುತಿರಲು ಉಷೆ, ಮರೆಯಾದಳು ನಿಶೆ.. 


ಬಾನಿನ ಅಂಚಿಂದ ಬಂದೆ ಬಳಿ ನಿಂದೆ ಬೆಳಕನ್ನು ಚೆಲ್ಲುತ್ತ 

ಉದಯರಾಗ ಹಾಡುತಿರುವೆ ಬಾನಿನ ಅಂಚಿಂದ ಬಂದೆ (೨) ।।ಪ।।


ಹೆಜ್ಜೆ ಇಡಲು ನಿನ್ನ ಗೆಜ್ಜೆ ನಗಲು, ನಾದ ಕೇಳಿ ಮೊಗ್ಗು ಹೂವಾಗಿದೆ 

ಹೂವು ನಗಲು ಅದರ ಜೇನಾ ಒಡಲು, ಕಂಡು ದುಂಬಿ ಅಲ್ಲಿ ಹಾರಾಡಿದೆ 

ಬೆಳಕು ಮೂಡುತಿದೆ     ಚೊ: ಆ ಆ .. 

ಸೊಗಸು ಕಾಣುತಿದೆ     ಚೊ: ಆ ಆ .. 

ಆ ..ಆಹಾ .. ಹೊಸತು ಜೀವ ತುಂಬುವಂತೆ ।।೧।।


ನಾದಿರ್ ದಿರ್ ಧೀಂತ  ತಾನಧಿನ  ಧಿರನಾ 

ತಾಕಿಟತಕ, ಧೀಕಿಟತಕ, ತಾಕಿಟತಕ, ಧೀಕಿಟತಕ

ತದ್ಧೋ೦ತಕಿಟ, ತದ್ಧೋ೦ತಕಿಟ,  ತಾಕಿಟತಕ, ಧೀಕಿಟತಕ

ತಾಕಿಟತಕ, ತರಿಕಿಟತಕ ತಾ ।

ದದ ಸಸ ನಿನಿ ದದಮಗ ಸ, ನಿನಿ ದದ ಮಮ ಗಗಸಗಮ

ಆ ..ಆ..ಆ..ಆ.., ಎಲೆಯ ಮೇಲೆ ಹಿಮದ ಮಣಿಯ ಸಾಲು, ಬೆಳಕ ಕಂಡು ಹೊಳೆವ ಮುತ್ತಾಗಿದೆ 

ಮರದ ಮೇಲೆ ಕುಳಿತ ಗಿಳಿಯ ಸಾಲು, ಮುಗಿಲ ಕಡೆಗೆ ಚಿಮ್ಮಿ ಹಾರಾಡಿದೆ 

ಕಡಲ ಅಲೆಯು                 ಚೊ: ಆ ಆ .. 

ಚಿಮ್ಮಿ ಕುಣಿಯುತಿರೆ          ಚೊ: ಆ ಆ .. 

ಆ .. ಆ .. ಆ .. ಆ , ಭುವಿಯ ಅಂದ ಕಾಣಲೆಂದು 

ಬಾನಿನ ಅಂಚಿಂದ ಬಂದೆ ।।೨।।

                  

Antintha Hennu Neenalla (ಅಂತಿಂಥ ಹೆಣ್ಣು ನೀನಲ್ಲ)

Movie: Tumbida Koda (1964)

Singer: P Kalainga Rao

Song link: Click Here


Antintha hennu neenalla, ninnantha hennu innilla

Hedehedeya saalu turubella, mudi ninda hoovu melella

Teretereya horalu kurulella, suliminchu kanna horalalla

Antintha heenu neenalla, ninantha heenu innilla ||


Edematta ninta hoo balli, yestondu hoovu adaralli

Usirusiru moggu hoovella, nee balli belaku badukella

Antintha heenu neenalla, ninantha heenu innilla ||


Nadudaariyalli nannuru, kudi minchinuru honnuru

Munnuru minchu holedante, nee bamndarenage sirivante

Antintha heenu neenalla, ninantha heenu innilla ||


Baludoora doora neenagi, honganasu naduve dani tugi

Kaadiralu naanu ninagagi, nee baruve cheluve holeyagi

Antintha heenu neenalla, ninantha heenu innilla || 


 ಚಿತ್ರಗೀತೆ 


ಅಂತಿಂಥ ಹೆಣ್ಣು ನೀನಲ್ಲ, ನಿನ್ನಂಥ ಹೆಣ್ಣು ಇನ್ನಿಲ್ಲ 

ಹೆಡೆಹೆಡೆಯ ಸಾಲು ತುರುಬೆಲ್ಲ, ಮುಡಿ ನಿಂದ ಹೂವು ಮೇಲೆಲ್ಲ 

ತೆರೆತೆರೆಯ ಹೊರಳು ಕುರುಳೆಲ್ಲ, ಸುಳಿಮಿಂಚು ಕಣ್ಣ ಹೊರಳಲ್ಲ 

ಅಂತಿಂಥ ಹೆಣ್ಣು ನೀನಲ್ಲ, ನಿನ್ನಂಥ ಹೆಣ್ಣು ಇನ್ನಿಲ್ಲ ।।ಪ।।


ಎದೆಮಟ್ಟ ನಿಂತ ಹೂ ಬಳ್ಳಿ, ಎಷ್ಟೊಂದು ಹೂವು ಅದರಲ್ಲಿ 

ಉಸಿರುಸಿರು ಮೊಗ್ಗು ಹೂವೆಲ್ಲ, ನೀ ಬಳ್ಳಿ ಬೆಳಕು ಬದುಕೆಲ್ಲ 

ಅಂತಿಂಥ ಹೆಣ್ಣು ನೀನಲ್ಲ, ನಿನ್ನಂಥ ಹೆಣ್ಣು ಇನ್ನಿಲ್ಲ।।೧।।


ನಡು ದಾರಿಯಲ್ಲಿ ನನ್ನೂರು, ಕುಡಿ ಮಿಂಚಿನೂರು ಹೊನ್ನೂರು 

ಮುನ್ನೂರು ಮಿಂಚು ಹೊಳೆದಂತೆ, ನೀ ಬಂದರೆನಗೆ ಸಿರಿವಂತೆ 

ಅಂತಿಂಥ ಹೆಣ್ಣು ನೀನಲ್ಲ, ನಿನ್ನಂಥ ಹೆಣ್ಣು ಇನ್ನಿಲ್ಲ ।।೨।।


ಬಲುದೂರ ದೂರ ನೀನಾಗಿ, ಹೊಂಗನಸು ನಡುವೆ ದನಿ ತೂಗಿ 

ಕಾದಿರಲು ನಾನು ನಿನಗಾಗಿ, ನೀ ಬರುವೆ ಚೆಲುವೆ ಹೊಳೆಯಾಗಿ 

ಅಂತಿಂಥ ಹೆಣ್ಣು ನೀನಲ್ಲ, ನಿನ್ನಂಥ ಹೆಣ್ಣು ಇನ್ನಿಲ್ಲ।।೩।।

                              


Neenarigadeyo Ele Manava (ನೀನಾರಿಗಾದೆಯೋ ಎಲೆ ಮಾನವ)

Movie: Emme Tamanna (1966)

Singers: P B Srinivas, Benagaluru Lata

Song link: Click Here


Neenarigadeyo ele manava

Hari hari govu naanu (2)

Neenarigadeyo ele manava

Hari hari govu naanu, neenarigadeyo.. ||


Ittare saganiyade tattidare kurulaade

Suttare nosalige vibhutiyade

Tattade haakidare..hoi (2) melu gobbaravade

Neenarigadeyo ele manava

Hmm hmm.. hari hari govu naanu 

Hmm hmm.. hari hari govu naanu, neenarigadeyo.. ||


Haaye harigolade, raya bherigeyade (2)

Rayara kalige mullottu aade (2)

Aaya aritu hodeye, madhura gaanakkade, madhura gaanakkade

Neenarigadeyo ele manava

Hari hari govu naanu (2) neenarigadeyo.. ||


ಚಿತ್ರಗೀತೆ 


ನೀನಾರಿಗಾದೆಯೋ ಎಲೆ ಮಾನವ 

ಹರಿ ಹರಿ ಗೋವು ನಾನು (೨)

ನೀನಾರಿಗಾದೆಯೋ ಎಲೆ ಮಾನವ 

ಹರಿ ಹರಿ ಗೋವು ನಾನ, ನೀನಾರಿಗಾದೆಯೋ ।।ಪ।।


ಇಟ್ಟರೆ ಸಾಗಣಿಯಾದೆ ತಟ್ಟಿದರೆ ಕುರುಳಾದೆ 

ಸುಟ್ಟರೆ ನೊಸಲಿಗೆ ವಿಭೂತಿಯಾದೆ 

ತಟ್ಟದೆ ಹಾಕಿದರೇ .. ಹೋಯ್ (೨) ಮೇಲು ಗೊಬ್ಬರವಾದೆ (೨)

ನೀನಾರಿಗಾದೆಯೋ ಎಲೆ ಮಾನವ 

ಹೂಂ ಹೂ .. ಹರಿ ಹರಿ ಗೋವು ನಾನು

ಹೂಂ ಹೂ .. ಹರಿ ಹರಿ ಗೋವು ನಾನು, ನೀನಾರಿಗಾದೆಯೋ 

।।೧।।


ಹಾಯೆ ಹರಿಗೋಲಾದೆ, ರಾಯ ಭೇರಿಗೆಯಾಗದೆ (೨)

ರಾಯರ ಕಾಲಿಗೆ ಮುಳ್ಳೊತ್ತು ಆದೆ (೨)

ಆಯ ಅರಿತು ಹೊಡೆಯೆ, ಮಧುರ ಗಾನಕ್ಕಾದೆ, ಮಧುರ ಗಾನಕ್ಕಾದೆ 

ನೀನಾರಿಗಾದೆಯೋ ಎಲೆ ಮಾನವ 

ಹರಿ ಹರಿ ಗೋವು ನಾನು (೨), ನೀನಾರಿಗಾದೆಯೋ ।।೨।।

                            


Wednesday, September 18, 2024

Kolalanudi Mohipudanu (ಕೊಳಲನೂದಿ ಮೋಹಿಪುದನು)

Bhavageete

Sahitya: Kuvempu

Song link: Click Here


Kolalanudi mohipudanu, kalisu enage chenna

Talamalipudu enna edeyu, kolala gaana ninna ||


Naliyutihudu udaya gagana, arunaraagadinda

Koladalegalu kuniyutihavu, gaanadolumeyinda ||


Paravihagala nalisutihudu, ninna kolala naada

Paravihagala nolisutihudu, ninna gaanamoda ||


Talita chutadadiye modala, nudiye kalisu chenna

Kolala kalisu bega enage, mohipudanu ninna ||


ಭಾವಗೀತೆ 


ಕೊಳಲನೂದಿ ಮೋಹಿಪುದನು, ಕಲಿಸು ಎನಗೆ ಚೆನ್ನ 

ತಳಮಳಿಪುದು ಎನ್ನ ಎದೆಯು, ಕೊಳಲ ಗಾನ ನಿನ್ನ ।।ಪ।।


ನಲಿಯುತಿಹುದು ಉದಯ  ಗಗನ, ಅರುಣರಾಗದಿಂದ 

ಕೊಳದಲೆಗಳು ಕುಣಿಯುತಿಹವು, ಗಾನದೊಲುಮೆಯಿಂದ ।।೧।।


ಪರವಿಹಗಳ ನಲಿಸುತಿಹುದು, ನಿನ್ನ ಕೊಳಲ ನಾದ 

ಪರವಿಹಗಳ ನೊಲಿಸುತಿಹುದು, ನಿನ್ನ ಗಾನಮೋದ ।।೨।।


ತಳಿತ ಚುತದಡಿಯೆ ಮೊದಲ, ನುಡಿಯೆ ಕಲಿಸು ಚೆನ್ನ 

 ಕೊಳಲ ಕಲಿಸು ಬೇಗ ಎನಗೆ, ಮೋಹಿಸುವೆನು ನಿನ್ನ ।।೩।।

                          

Beesokallina Pada (ಬೀಸೋಕಲ್ಲಿನ ಪದ)

 ಪದ್ಯ 


ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗಿಯ 

ಜಲ್ಲಜಲ್ಲಾನೆ ಉದುರಮ್ಮ। ನಾ ನಿನಗೆ 

ಬೆಲ್ಲಾದಾರತಿಯಾ ಬೆಳಗೇನು ।।


ಅಂದುಳ್ಳ ಅಡಿಗಲ್ಲು ಚಂದುಳ್ಳ ಮೇಗಲ್ಲು 

ಚಂದ್ರಮತಿಯೆ೦ಬ ಹಿಡಿಗೂಟ ।ಹಿಡುಕೊಂಡು 

ತಂದೆ ತಾಯಿಗಳ ನೆನೆದೇನ ।।


ರಾಗಿಯು ಮುಗಿದಾವು ರಾಜಾನ್ನ ಹೆಚ್ಚ್ಯಾವು 

ನಾನ್ಹಿಡಿದ ಕೆಲಸ ವದಗ್ಯಾವು । ರಾಗೀಕಲ್ಲೆ 

ನಾ ತೂಗಿ ಬಿಡುತೀನಿ ಬಲದೋಳು ।।


ಕಲ್ಲು ಬಿಟ್ಟೇನೆಂದು ಸಿಟ್ಯಾಕೆ ಸರಸತಿಯೇ 

ಕುಕ್ಕೇಲಿ ರಾಗಿ ಬೆಲೆಯಾಲಿ ।ತಕ್ಕೊಂಡು 

ಮತ್ತೆ ರಾತ್ರೀಗೆ ಬರುತೀನಿ ।।


ಕಲ್ಲು ಕೊಟ್ಟಮ್ಮಗೆ ಎಲ್ಲಾ ಭಾಗ್ಯವು ಬರಲಿ 

ಪಲ್ಲಕ್ಕಿ ಮೇಲೆ ಮಗ ಬರಲಿ । ಆ ಮನೆಗೆ 

ಮಲ್ಲಿಗೆ ಮುಡಿಯೋ ಸೊಸಿ  ಬರಲಿ ।।


Padya


Kallamma tayi mellamma ragiya

Jallajallane uduramma, na ninage

Belladaratiya belagenu ||


Andulla adigallu chandulla megallu

Chandramatiyemba hidaguta, hidukondu

Tande tayigala nenedena ||


Ragiyu mugidavu rajanna hecchyavu

Nanhidida kelasa vadagyavu, ragikalle

Na tugi biduteeni baladolu ||


Kallu bettenendu sittyake sarasatiye

Kukkeli ragi beleyali, takkondu

Matte ratrige baruteeni ||


Kallu kottammage ella bhagyavu barali

Pallakki mele maga barali, aa manege

Mallige mudiyo sosi barali ||

           

Aakashadinda Jaari (ಆಕಾಶದಿಂದ ಜಾರಿ)

Movie: Janma Janmada Anubandha (1980)

Singers: SPB, S Janaki

Song link: Click Here


Aakashadinda jaari (2)

Bhumige banda nodi, ee bhumige banda nodi

Namagagi aa devane, namagagi mahadevane

Aakashadinda jaari ||


Shiva ninna nodi nodi kannu tumbi banditu

Ninna karune kandu kandu hrudaya tumbi hoyitu

Kanaso nanaso bhrameyo ariye, ninna paada soki dhareye..

Kailaasavayito, aayito,

Entha bhagya nammadu, he ||


Ninna seri heege endu, baaluvaseyagide

Ninna baala deepavagi, iruva aase mudide

Manasu manasu aritu beretu, ninna snehadalli jeeva..

Aananda kandide kandide,

Premageete haadide, hoi ||


ಚಿತ್ರಗೀತೆ 


ಆಕಾಶದಿಂದ ಜಾರಿ  (೨)

ಭೂಮಿಗೆ ಬಂದ ನೋಡಿ, ಈ ಭೂಮಿಗೆ ಬಂದ ನೋಡಿ 

ನಮಗಾಗಿ ಆ ದೇವನೇ, ನಮಗಾಗಿ ಮಹಾದೇವನೇ 

ಆಕಾಶದಿಂದ ಜಾರಿ ।।ಪ।।


ಶಿವ ನಿನ್ನ ನೋಡಿ ನೋಡಿ ಕಣ್ಣು ತುಂಬಿ ಬಂದಿತು 

ನಿನ್ನ ಕರುಣೆ ಕಂಡು ಕಂಡು ಹೃದಯ ತುಂಬಿ ಹೋಯಿತು 

ಕನಸೂ ನನಸೊ ಭ್ರಮೆಯೊ ಅರಿಯೆ 

ನಿನ್ನ ಪಾದ ಸೋಕಿ ಧರೆಯೇ 

ಕೈಲಾಸವಾಯಿತೋ, ಆಯಿತೋ, 

ಎಂಥಾ ಭಾಗ್ಯ ನಮ್ಮದು, ಹೇ ।।೧।।


ನಿನ್ನ ಸೇರಿ ಹೀಗೆ ಎಂದೂ, ಬಾಳುವಾಸೆಯಾಗಿದೆ 

ನಿನ್ನ ಬಾಳ ದೀಪವಾಗಿ, ಇರುವ ಆಸೆ ಮೂಡಿದೆ 

ಮನಸು ಮನಸು ಅರಿತು ಬೆರೆತು, ನಿನ್ನ ಸ್ನೇಹದಲ್ಲಿ ಜೀವಾ 

ಆನಂದ ಕಂಡಿದೆ ಕಂಡಿದೆ, 

ಪ್ರೇಮಗೀತೆ ಹಾಡಿದೆ, ಹೋಯ್ ।।೨।।

                   



Aaseyu Kaiguditu (ಆಸೆಯು ಕೈಗೂಡಿತು)

Movie: Nanobba Kalla (1979)

Singers: Dr, Rajkumar, S Janaki

Song link: Click Here


Aaseyu kaiguditu aasare doretayitu

Chinte dooravayitu, manasu haguravayitu

Ninnodane snehadaase ondagi baaluvase

Innenu kele ninna nannane nambu nanna

Aaseyu kaiguditu aasare doretayitu ||


Kanda nondu attaga yaaru kaanadadaga

Santaisalendu ododi baruva tayante neenu bande

Gaali beesi bandaga jyothi hedari hodaga

Aa deepadalli nee jeevavagi horadalendu bande telaaduvase tande  ||


Neene nanna santosha neene nanna soubhagya

Ninninda naanu ninagagi naanu ninnalle seri hode

Baalo aase nee tande nanna seri ondaade

Suliyalli naanu horaduvaga

Jotheyagi neenu bande, innenu kaane munde ||


ಚಿತ್ರಗೀತೆ 


ಆಸೆಯು ಕೈಗೂಡಿತು ಆಸರೆ ದೊರೆತಾಯಿತು 

ಚಿಂತೆ ದೂರವಾಯಿತು ಮನಸು ಹಗುರವಾಯಿತು 

ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ (೨)

ಇನ್ನೇನು ಕೇಳೆ ನಿನ್ನ ನನ್ನಾಣೆ ನಂಬು ನನ್ನ 

ಆಸೆಯು ಕೈಗೂಡಿತು ಆಸರೆ ದೊರೆತಾಯಿತು  ।।ಪ।।


ಕಂದ ನೊಂದು ಅತ್ತಾಗ ಯಾರೂ ಕಾಣದಾದಾಗ 

ಸಂತೈಸಲೆಂದು ಓಡೋಡಿ ಬರುವ ತಾಯಂತೆ ನೀನು ಬಂದೆ 

ಗಾಳಿ ಬೀಸಿ ಬಂದಾಗ ಜ್ಯೋತಿ ಹೆದರಿ ಹೋದಾಗ 

ಆ ದೀಪದಲ್ಲಿ ನೀ ಜೀವವಾಗಿ ಹೋರಾಡಲೆಂದು ಬಂದೆ, ತೇಲಾಡುವಾಸೆ ತಂದೆ   ।।೧।।


ನೀನೆ ನನ್ನ ಸಂತೋಷ ನೀನೆ ನನ್ನ ಸೌಭಾಗ್ಯ 

ನಿನ್ನಿಂದ ನಾನು ನಿನಗಾಗಿ ನಾನು ನಿನ್ನಲ್ಲೆ ಸೇರಿ ಹೋದೆ 

ಬಾಳೋ ಆಸೆ ನೀ ತಂದೆ ನನ್ನ ಸೇರಿ ಒಂದಾದೆ 

ಸುಳಿಯಲ್ಲಿ ನಾನು ಹೋರಾಡುವಾಗ 

ಜೊತೆಯಾಗಿ ನೀನು ಬಂದೆ, ಇನ್ನೇನು ಕಾಣೆ ಮುಂದೆ ।।೨।।

                     

Anna Ninna Sodariyanna (ಅಣ್ಣಾ ನಿನ್ನ ಸೋದರಿಯನ್ನ)

Movie: Onde Balliya Hoogalu (1967)

Singer: S Janaki

Song link: Click Here


Anna ninna sodariyanna, mareyadiru endendu, o anna

Anna ninna.. !


Aa.. onde balliya hoogalu naavu, preetiye namagadhara, 

Onde raaga harisire eega, paavana gangadhara.. (2)

Anna ninna sodariyanna, mareyadiru endendu.. o anna, anna ninna.. !


Aa.. siritana maaye, badatana chaye, shaswata onde preeti

Sodara pasha, aliyada asha, tangiya baalina jyothi (2)

Anna ninna sodariyanna, mareyadiru endendu.. o anna, anna ninna.. !


Aa.. touranu toredu nadedaru doora, baaradu preetige lopa

Tangiya nenedu urisutiranna, nenapina nandaadeepa (2)

Anna ninna sodariyanna, mareyadiru endendu.. o anna, anna ninna.. !


ಚಿತ್ರಗೀತೆ 


ಅಣ್ಣಾ ನಿನ್ನ ಸೋದರಿಯನ್ನ, ಮರೆಯದಿರೂ ಎಂದೆಂದೂ, ಓ ಅಣ್ಣಾ, ಅಣ್ಣಾ ನಿನ್ನಾ .. ।।ಪ।।


ಆ .. ಒಂದೇ ಬಳ್ಳಿಯ ಹೂಗಳು ನಾವು, ಪ್ರೀತಿಯೇ ನಮಗಾಧಾರಾ 

ಒಂದೇ ರಾಗ ಹರಿಸಿರೆ ಈಗ, ಪಾವನ ಗಂಗಾಧಾರಾ ..(೨)

ಅಣ್ಣಾ ನಿನ್ನ ಸೋದರಿಯನ್ನ, ಮರೆಯದಿರೂ ಎಂದೆಂದೂ, ಓ ಅಣ್ಣಾ, ಅಣ್ಣಾ ನಿನ್ನಾ ।।೧।।


ಆ .. ಸಿರಿತನ ಮಾಯೆ ಬಡತನ ಛಾಯೆ, ಶಾಶ್ವತ ಒಂದೇ ಪ್ರೀತಿ 

ಸೋದರ ಪಾಶ ಅಳಿಯದ ಆಶಾ, ತಂಗಿಯ ಬಾಳಿನ ಜ್ಯೋತಿ.. (೨)

ಅಣ್ಣಾ ನಿನ್ನ ಸೋದರಿಯನ್ನ, ಮರೆಯದಿರೂ ಎಂದೆಂದೂ, ಓ ಅಣ್ಣಾ, ಅಣ್ಣಾ ನಿನ್ನಾ।।೨।।


ಆ .. ತೌರನು ತೊರೆದು ನಡೆದರು ದೂರ, ಬಾರದು ಪ್ರೀತಿಗೆ ಲೋಪಾ 

ತಂಗಿಯ ನೆನೆದು ಉರಿಸುತಿರಣ್ಣಾ, ನೆನಪಿನ  ನಂದಾದೀಪ .. (೨)

ಅಣ್ಣಾ ನಿನ್ನ ಸೋದರಿಯನ್ನ, ಮರೆಯದಿರೂ ಎಂದೆಂದೂ, ಓ ಅಣ್ಣಾ, ಅಣ್ಣಾ ನಿನ್ನಾ ।।೩।।

             

Saturday, September 14, 2024

Balliyange Balakutali (ಬಳ್ಳಿಯಂಗೆ ಬಳಕುತಲಿ)

Movie: Chandavalliya Tota (1964)

Singers: P B Srinivas, S Janaki

Song link: Click Here


Balliyange balakutali, malliyange nodutali, baare nee baare

Ee halligella cheluve neene o neere, nee baa baare

Chiguru meese teedutali, hurupu matanaadutali, baara nee baara

Ee oorigella huliyu neene o dheera, nee baa baara ||


Kendutiya anchinali kirunege beeri, ninna (2)

Baare enna singari

Naa bandihini nee tandihini nee, rekke katti, baa bali saari

Balliyange balakutali, malliyange nodutali, baare nee baare

Ee oorigella huliyu neene o dheera, ba baara ||


Cheluvina channigane, kannadada kula magane

Ninna, nanna, preetiya sama kaane

Aralida malligeye, sobagina sampigeye

Neene nanna pranavu jaane

Mana sote naa ennane, ninna mecchi bande naane (2)

Endendu aananda namagende kaadide ||


ಚಿತ್ರಗೀತೆ 


ಬಳ್ಳಿಯಂಗೆ ಬಳಕುತಲಿ ಮಳ್ಳಿಯಂಗೆ ನೋಡುತಲಿ, ಬಾರೆ ನೀ ಬಾರೆ 

ಈ ಹಳ್ಳಿಗೆಲ್ಲ ಚೆಲುವೆ ನೀನೇ ಓ ನೀರೆ, ನೀ ಬಾ ಬಾರೆ 

ಚಿಗುರು ಮೀಸೆ ತೀಡುತಲಿ, ಹುರುಪು ಮಾತನಾಡುತಲಿ, ಬಾರಾ ನೀ ಬಾರಾ 

ಈ ಊರಿಗೆಲ್ಲ ಹುಲಿಯು ನೀನೇ ಓ ಧೀರ, ನೀ ಬಾ  ಬಾರಾ ।।ಪ।।


ಕೆಂದುಟಿಯ ಅಂಚಿನಲಿ  ಕಿರುನಗೆ ಬೀರಿ, ನಿನ್ನ (೨) ಬಾರೆ ಎನ್ನ ಸಿಂಗಾರಿ 

ನಾ ಬಂದಿಹಿನಿ  ನೀ ತಂದಿಹಿನಿ, ನೀ ರೆಕ್ಕೆ ಕಟ್ಟಿ, ಬಾ ಬಳಿ ಸಾರಿ 

ಬಳ್ಳಿಯಂಗೆ ಬಳಕುತಲಿ ಮಳ್ಳಿಯಂಗೆ ನೋಡುತಲಿ, ಬಾರೆ ನೀ ಬಾರೆ

ಈ ಊರಿಗೆಲ್ಲ ಹುಲಿಯು ನೀನೇ ಓ ಧೀರ, ಬಾ ಬಾರಾ ।।೧।।


ಚೆಲುವಿನ ಚನ್ನಿಗನೆ, ಕನ್ನಡದ ಕುಲ ಮಗನೆ 

ನಿನ್ನ, ನನ್ನ, ಪ್ರೀತಿಯ ಸಮ ಕಾಣೆ 

ಅರಳಿದ ಮಲ್ಲಿಗೆಯೆ, ಸೊಬಗಿನ ಸಂಪಿಗೆಯೆ  

ನೀನೇ ನನ್ನ ಪ್ರಾಣವು ಜಾಣೆ 

ಮನ ಸೋತೆ ನಾ ಎನ್ನಾಣೆ, ನಿನ್ನ ಮೆಚ್ಚಿ ಬಂದೆ ನಾನೇ (೨)

ಎಂದೆಂದು ಆನಂದ ನಮಗೆಂದೆ ಕಾದಿದೆ ।।೨।।

                   


Bahu janmada poojaphala (ಬಹು ಜನ್ಮದಾ ಪೂಜಾಫಲ)

Movie: Sri Krishnadevaraya (1970)

Singers: P B Srinivas, S Janaki

Song link: Click Here


Bahu janmadaa poojaphala, ee prema sammilanaa..

Bahu janmadaa poojaphala, ee prema sammilanaa..

Ee prema sammilana ||


Olavina saviya saviyuva shubhadina (2)

Atma sakshiya prema kalyana (2)

Hrudayada veena madhuravee taana (2)

Ee nanna dampatya rasa jeevana

Bahu janmadaa poojaphala, ee prema sammilanaa

Ee prema sammilana ||


Satipati olida ratipati gaana (2)

Ati madhuraadara amruta paana (2)

Navarasa kavita kavya samaana (2)

Ee namma dampatya sukha sadhana

Bahu janmadaa poojaphala, ee prema sammilanaa

Ee prema sammilana ||


ಚಿತ್ರಗೀತೆ 


ಬಹು ಜನ್ಮದಾ ಪೂಜಾಫಲ, ಈ ಪ್ರೇಮ ಸಮ್ಮಿಲನಾ.. 

ಬಹು ಜನ್ಮದಾ ಪೂಜಾಫಲ, ಈ ಪ್ರೇಮ ಸಮ್ಮಿಲನಾ.. 

ಈ ಪ್ರೇಮ ಸಮ್ಮಿಲನಾ ।।ಪ।।


ಒಲವಿನ ಸವಿಯ ಸವಿಯುವ ಶುಭದಿನ (೨)

ಆತ್ಮ ಸಾಕ್ಷಿಯ ಪ್ರೇಮ ಕಲ್ಯಾಣ (೨)

ಹೃದಯದ ವೀಣಾ ಮಧುರವೀ ತಾನ (೨)

ಈ ನಮ್ಮ ದಾಂಪತ್ಯ ರಸ ಜೀವನ 

ಬಹು ಜನ್ಮದಾ ಪೂಜಾಫಲ, ಈ ಪ್ರೇಮ ಸಮ್ಮಿಲನಾ 

ಈ ಪ್ರೇಮ ಸಮ್ಮಿಲನಾ ।।೧।।


ಸತಿಪತಿ ಒಲಿದಾ ರತಿಪತಿ ಗಾನಾ  (೨)

ಅತಿ ಮಧುರಾದರ ಅಮೃತ ಪಾನ (೨)

ನವರಸ ಕವಿತಾ ಕಾವ್ಯ ಸಮಾನ (೨)

ಈ ನಮ್ಮ ದಾಂಪತ್ಯ ಸುಖ ಸಾಧನ 

ಬಹು ಜನ್ಮದಾ ಪೂಜಾಫಲ, ಈ ಪ್ರೇಮ ಸಮ್ಮಿಲನಾ 

ಈ ಪ್ರೇಮ ಸಮ್ಮಿಲನಾ ।।೨।।

                

Bareyuve Ninagaagi (ಬರೆಯುವೆ ನಿನಗಾಗಿ)

Movie: Mareyalagada Kathe (1982)

Singers: SPB, S Janaki

Song link: Click Here


Bareyuve ninagagi (2), hrudayadi hitavagi

Pranayada sanketavagi, olavinda premageete ||


Hunnimeya deepadalli tannaneya ratriyalli

Sampigeya tampinalli 

Impaada raagadalee, na bareyuve..

Araginiya bhasheyalli, kogileya raagadalli

Hamsanade taaladalli, muttantha maatinali

Hosa kaviteya, o gelati ||


Hoo banadi aaydu tanda, moggada malligeyinda

Savi jena hani haniyinda

Pranayadaanandadinda, naa bareyuve..

Nannantaraaladinda putidelo bhavadinda

Bayakegala bharadinda, kannugala minchininda

Hosa kaviteya, o gelati ||


ಚಿತ್ರಗೀತೆ 


ಬರೆಯುವೆ ನಿನಗಾಗಿ (೨) ಹೃದಯದಿ ಹಿತವಾಗಿ 

ಪ್ರಣಯದ ಸಂಕೇತವಾಗಿ, ಒಲವಿಂದ ಪ್ರೇಮಗೀತೆ ।।ಪ।।


ಹುಣ್ಣಿಮೆಯ ದೀಪದಲ್ಲಿ ತಣ್ಣನೆಯ ರಾತ್ರಿಯಲ್ಲಿ 

ಸಂಪಿಗೆಯ ತಂಪಿನಲ್ಲಿ 

ಇಂಪಾದ ರಾಗದಲೀ, ನಾ ಬರೆಯುವೆ.. 

ಅರಗಿಣಿಯ ಭಾಷೆಯಲ್ಲಿ, ಕೋಗಿಲೆಯ ರಾಗದಲ್ಲಿ 

ಹಂಸನಡೆ ತಾಳದಲ್ಲಿ, ಮುತ್ತಂಥ ಮಾತಿನಲಿ 

ಹೊಸ ಕವಿತೆಯ, ಓ ಗೆಳತಿ ।।೧।।


ಹೂ ಬನದಿ ಆಯ್ದು ತಂದ, ಮೊಗ್ಗಾದ ಮಲ್ಲಿಗೆಯಿಂದ 

ಸವಿ ಜೇನ ಹನಿ ಹನಿಯಿಂದ 

ಪ್ರಣಯದಾನಂದದಿಂದ, ನಾ ಬರೆಯುವೆ.. 

ನನ್ನಂತರಾಳದಿಂದ ಪುಟಿದೇಳೋ ಭಾವದಿಂದ 

ಬಯಕೆಗಳ ಭಾರದಿಂದ, ಕಣ್ಣುಗಳ ಮಿಂಚಿನಿಂದ 

ಹೊಸ ಕವಿತೆಯಾ, ಓ ಗೆಳತಿ ।।೨।।

            

Wednesday, September 11, 2024

Gaali Gopura (ಗಾಳಿಗೋಪುರ)

Movie: Nanda deepa (1963)

Singer: S Janaki

Song link: Click Here


Gaali gopura ninnasha teera (2)

Nale kanuva, sukhada vichara, galigopura ||


Premave daiva, enuve jeeva, mareve nee lokava (2)

Agalike tanda kannirininda, vyatheye tumbida, gaali gopura ||


Manava neenu, mamata pashake, kuniyuva kaigombeyo (2)

Naguvina balege, aalagi siluki, shokave kaanike, gaali gopura ||


Aatada baalu dinavu solu, geluvane nee kaanade (2)

Kanasina sukhake eedaage bayake, taapada teerike, gaali gopura ||


ಚಿತ್ರಗೀತೆ 


ಗಾಳಿಗೋಪುರ ನಿನ್ನಾಶ ತೀರ (೨)

ನಾಳೆ ಕಾಣುವ, ಸುಖದಾ ವಿಚಾರ, ಗಾಳಿಗೋಪುರ ।।ಪ।।


ಪ್ರೇಮವೆ ದೈವ, ಎನುವೆ ಜೀವ, ಮರೆವೆ ನೀ  ಲೋಕವಾ (೨)

ಅಗಲಿಕೆ ತಂದ ಕಣ್ಣೀರಿನಿಂದ, ವ್ಯಥೆಯೇ ತುಂಬಿದ, ಗಾಳಿಗೋಪುರ

 ।।೧।।


ಮಾನವ ನೀನು, ಮಮತಾ ಪಾಶಕೆ, ಕುಣಿಯುವ ಕೈಗೊಂಬೆಯೋ (೨)

ನಗುವಿನ ಬಲೆಗೆ, ಆಳಾಗಿ ಸಿಲುಕಿ, ಶೋಕವೇ ಕಾಣಿಕೆ, ಗಾಳಿಗೋಪುರ 

।।೨।।


ಆಟದ ಬಾಳು ದಿನವೂ ಸೋಲು, ಗೆಲುವನೆ ನೀ ಕಾಣದೇ (೨)

ಕನಸಿನ ಸುಖಕೆ ಈಡಾಗೆ ಬಯಕೆ, ತಾಪದ ತೀರಿಕೆ, ಗಾಳಿಗೋಪುರ 

।।೩।।

                         


Aagumbeya Prema Sanjeya (ಆಗುಂಬೆಯಾ ಪ್ರೇಮ ಸಂಜೆಯಾ)

Movie: Aakasmika (1993)

Singers: Dr. Rajkumar, Manjula Gururaj

Song link: Click Here


Ambarada anjuradi nesaranu, angaiyige hattiravee nesaranu

Kasagala kunkumada nesaranu, baanagala beeguvanee nesaranu 

Kanna tumba tumbikonda, baala tumba serikonda

Aagumbeya prema sanjeya (2), mareyalaare naanu endigu, o gelatiye (4)

Aagumbeya prema sanjeya (2), mareyalaare naanu endigu, o geleyane (4) !


Mugila jotheyalli, nela muddado samaya, koduve ninage koduve, ee nanna hrudaya

Aa.. nadiya mogadalli, ravi tampago samaya, koduve ninage koduve, ee nanna hrudaya

O.. preeti soladante sneha baadadante

Haa..aase teeradante naa..

Shhh..hakkigala antaranga haadutide, hoovugala varnadala minchutide

Guddagala tambelaru beesutide, ella mara hannugalu tugutive

Moodanake jeeva tanda, paschimake bhava tanda

Aagumbeya prema sanjeya(2), mareyalaare naanu endigu, o gelatiye

 (4) ||


Manada irulinali, nee suride hongirana, baduke banavagiralu, nija neene kaarana

O.., marada nidireyali, nee suride kanasugala, kanase nanasagiralu, nija neene karana

O.., sanje hennu neenu, nanna baala jenu

Innu naanu neenu ond....!

Shhh.. elu banna ondu maado nesaranu, kombegala beliyalli nintihanu

Naalegala hottu taro nesaranu, premigala kaddu kaddu noduvanu

Nanna ninna preeti kanda surya mella jarikonda

Aagumbeya prema sanjeya, mareyalaare naanu endigu

O gelatiye, o geleatiye (2) ||


ಚಿತ್ರಗೀತೆ 


ಅಂಬರದ ಅಂಜುರದಿ ನೇಸರನು, ಅಂಗೈಯಿಗೆ ಹತ್ತಿರವೀ ನೇಸರನು 

ಕಾಸಗಲ ಕುಂಕುಮದ ನೇಸರನು, ಬಾನಗಲ ಬೀಗುವನೀ ನೇಸರನು 

ಕಣ್ಣ ತುಂಬ ತುಂಬಿಕೊಂಡ, ಬಾಳ ತುಂಬ ಸೇರಿಕೊಂಡ 

ಆಗುಂಬೆಯಾ ಪ್ರೇಮ ಸಂಜೆಯಾ (೨) ಮರೆಯಲಾರೆ ನಾನು ಎಂದಿಗೂ ಓ ಗೆಳತಿಯೇ (೪)

ಆಗುಂಬೆಯಾ ಪ್ರೇಮ ಸಂಜೆಯಾ (೨) ಮರೆಯಲಾರೆ ನಾನು ಎಂದಿಗೂ ಓ ಗೆಳೆಯನೇ (೪) ।।


ಮುಗಿಲ ಜೊತೆಯಲ್ಲಿ, ನೆಲ ಮುದ್ದಾಡೋ ಸಮಯ, ಕೊಡುವೆ ನಿನಗೆ ಕೊಡುವೆ, ಈ ನನ್ನಾ ಹೃದಯ 

ಆ .. ನದಿಯ ಮೊಗದಲ್ಲಿ, ರವಿ ತಂಪಾಗೋ ಸಮಯ, ಕೊಡುವೆ ನಿನಗೆ ಕೊಡುವೆ, ಈ ನನ್ನಾ ಹೃದಯ 

ಓ .. ಪ್ರೀತಿ ಸೋಲದಂತೆ ಸ್ನೇಹ ಬಾಡದಂತೆ 

ಹಾ .. ಆಸೆ ತೀರದಂತೆ ನಾ .. 

ಶ್!!! ಹಕ್ಕಿಗಳ ಅಂತರಂಗ ಹಾಡುತಿದೆ, ಹೂವುಗಳ ವರ್ಣದಳ ಮಿಂಚುತಿದೆ 

ಗುಡ್ಡಗಳ ತಂಬೆಲರು ಬೀಸುತಿದೆ, ಎಲ್ಲ ಮರ ಹಣ್ಣುಗಳು ತೂಗುತಿವೆ 

ಮೂಡಣಕೆ ಜೀವ ತಂದ, ಪಶ್ಚಿಮಕೆ ಭಾವ ತಂದ 

ಆಗುಂಬೆಯಾ ಪ್ರೇಮ ಸಂಜೆಯಾ (೨) ಮರೆಯಲಾರೆ ನಾನು ಎಂದಿಗೂ ಓ ಗೆಳತಿಯೇ (೪) ।।


ಮನದ ಇರುಳಿನಲಿ, ನೀ ಸುರಿದೆ ಹೊಂಗಿರಣ, ಬದುಕೆ ಬನವಾಗಿರಲು, ನಿಜ ನೀನೇ ಕಾರಣ 

ಓ .. ಮರದ ನಿದಿರೆಯಲಿ, ನೀ ಸುರಿದೆ ಕನಸುಗಳ, ಕನಸೆ ನನಸಾಗಿರಲು, ನಿಜ ನೀನೇ ಕಾರಣ 

ಓ .. ಸಂಜೆ ಹೆಣ್ಣು ನೀನು, ನನ್ನ ಬಾಳ ಜೇನು 

ಇನ್ನು ನಾನು ನೀನು ಒಂದ್ .. 

ಶ್!!! ಏಳು ಬಣ್ಣ ಒಂದು ಮಾಡೊ ನೇಸರನು, ಕೊಂಬೆಗಳ ಬೇಲಿಯಲ್ಲಿ ನಿಂತಿಹನು 

ನಾಳೆಗಳ ಹೊತ್ತು ತರೊ ನೇಸರನು, ಪ್ರೇಮಿಗಳ ಕದ್ದು ಕದ್ದು ನೋಡುವನು 

ನನ್ನ ನಿನ್ನ ಪ್ರೀತಿ ಕಂಡ ಸೂರ್ಯ ಮೆಲ್ಲ ಜಾರಿಕೊಂಡ 

ಆಗುಂಬೆಯಾ ಪ್ರೇಮ ಸಂಜೆಯಾ (೨) ಮರೆಯಲಾರೆ ನಾನು ಎಂದಿಗೂ 

ಓ ಗೆಳತಿಯೇ, ಓ ಗೆಳತಿಯೇ (೨) ।।

      

Aagadu Endu (ಆಗದು ಎಂದು)

Movie: Bangarada Manushya (1972) 

Singer: P B Srinivas

Song link: Click Here


Aagadu endu, kailaagadu endu, kai katti kulitare..!

Aagadu endu kai katti kulitare, sagadu kelasavu munde

Manasondiddare margavu untu, kecchede irabekendu, kecchede irabekendendu ||


Kettalaagadu kaggallendu edegundiddare shilpi (2)

Aagutitte kalegala beedu, gommateshana nelenaadu, beluru halebeedu (2) ||


Kaveriyanu hariyalu bittu (2)

Vishweshwaraiah shrama padadiddare, kannambadiya kattadiddare (2)

Bangara beleva honnadu, aha, bangara beleva honnadu

Aagutitte ee naadu, kannada sirinaadu, namma kannada sirinaadu ||


Kai kesaraadare bai mosaremba, hiriyara anubhava satya, ida nenapidabeku nitya (2)

Dudimeya nambi baduku.. (2)

Adarale devara huduku, baalali baruvudu belaku

Namma baalali baruvudu belaku ||


ಚಿತ್ರಗೀತೆ 


ಆಗದು ಎಂದು, ಕೈಲಾಗದು ಎಂದು, ಕೈ ಕಟ್ಟಿ ಕುಳಿತರೇ .. 

ಆಗದು ಎಂದು ಕೈ ಕಟ್ಟಿ ಕುಳಿತರೆ, ಸಾಗದು ಕೆಲಸವು ಮುಂದೆ 

ಮನಸೊಂದಿದ್ದರೆ ಮಾರ್ಗವು ಉಂಟು, ಕೆಚ್ಚೆದೆ ಇರಬೇಕೆಂದು, ಕೆಚ್ಚೆದೆ ಇರಬೇಕೆಂದೆಂದು ।।ಪ।।


 ಕೆತ್ತಲಾಗದು ಕಗ್ಗಲ್ಲೆಂದು  ಎದೆಗುಂದಿದ್ದರೆ ಶಿಲ್ಪಿ (೨)

ಆಗುತ್ತಿತ್ತೆ ಕಲೆಗಳ ಬೀಡು, ಗೊಮ್ಮಟೇಶನ ನೆಲೆನಾಡು 

ಬೇಲೂರು, ಹಳೆಬೀಡು (೨) ।।


ಕಾವೇರಿಯನು ಹರಿಯಲು ಬಿಟ್ಟು (೨)

ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ .. ಕನ್ನಂಬಾಡಿಯ ಕಟ್ಟದಿದ್ದರೆ (೨)

ಬಂಗಾರ ಬೆಳೆವ ಹೊನ್ನಾಡು, ಅಹ, ಬಂಗಾರ ಬೆಳೆವ ಹೊನ್ನಾಡು 

ಆಗುತ್ತಿತ್ತೆ ಈ ನಾಡು, ಕನ್ನಡ ಸಿರಿನಾಡು, ನಮ್ಮ ಕನ್ನಡ ಸಿರಿನಾಡು ।।


ಕೈ ಕೆಸರಾದರೆ ಬಾಯ್ ಮೊಸರೆಂಬ 

ಹಿರಿಯರ ಅನುಭವ ಸತ್ಯ, ಇದ ನೆನಪಿಡಬೇಕು ನಿತ್ಯ (೨)

ದುಡಿಮೆಯ ನಂಬಿ ಬದುಕು .. (೨)

ಅದರಲೆ ದೇವರ ಹುಡುಕು, ಬಾಳಲಿ ಬರುವುದು ಬೆಳಕು 

ನಮ್ಮ ಬಾಳಲಿ ಬರುವುದು ಬೆಳಕು  ।।