Saturday, February 28, 2026

Prarthane (ಪ್ರಾರ್ಥನೆ)

 ಪದ್ಯ 

ಸಾಹಿತ್ಯ :ಜಿ ಪಿ ರಾಜರತ್ನಂ 


ಮಲೆಗಳಲಿ ಕಲ್ಲುಂಟು 

ಹೊಲಗಳಲಿ ಹುಲ್ಲುಂಟು 

ಹೊಳೆಗಳಲಿ ಮೀನುಂಟು 

ಗೂಡಿನಲಿ ಜೇನುಂಟು 

ನೀನುಂಟು ಎಲ್ಲೆಲ್ಲೂ -ಓ ಶಿವ 

ನೀನುಂಟು ಎಲ್ಲೆಲ್ಲೂ


ಬಾಳೆಯಲಿ ಫಲವುಂಟು 

ಚಂದ್ರನಲಿ ಮೊಲವುಂಟು 

ಹುತ್ತದಲಿ ಹಾವುಂಟು 

ಬೆಂಕಿಯಲಿ ಕಾವುಂಟು 

ನೀನುಂಟು ಎಲ್ಲೆಲ್ಲೂ -ಓ ಶಿವ 

ನೀನುಂಟು ಎಲ್ಲೆಲ್ಲೂ


ದೀಪದಲಿ ಬೆಳಕುಂಟು 

ಕೋಪದಲಿ ಹುಳುಕುಂಟು 

ಸರುವ ಕಡೆ ನೀನುಂಟು 

ಇರುವ ಕಡೆ ನಾನುಂಟು 

ನೀನುಂಟು ಎಲ್ಲೆಲ್ಲೂ -ಓ ಶಿವ 

ನೀನುಂಟು ಎಲ್ಲೆಲ್ಲೂ.


Padya


Malegalali kalluntu

Holagalali hulluntu

Holegalali meenuntu

Gudinali jenuntu

Neenuntu ellellu- o shiva

Neenuntu ellellu


Baleyali phalavuntu

Chandranali molavuntu

Huttadali haavuntu

Benkiyali kaavuntu

Neenuntu ellellu- o shiva

Neenuntu ellellu


Deepadali belakuntu

Kopadali hulukuntu

Saruva kade neeruntu

Iruva kade naanuntu

Neenuntu ellellu- o shiva

Neenuntu ellellu.


Kamana Billu (ಕಾಮನ ಬಿಲ್ಲು)

 ಪದ್ಯ 

ಸಾಹಿತ್ಯ : ನಿಂಗಣ್ಣ ಕುಂಟಿ  


ರವಿಯದೊ ಹೊರಟನು ಪಡುವಣಕೆ 

ತಾಯಿಯ ಮನೆಯನು ಸೇರಲಿಕೆ 


ಸಂಜೆಯ ಹೊತ್ತಿನ ಹೂಬಿಸಿಲು 

ಕಣ್ಣಿಗೆ ಹಿಗ್ಗಿನ ಅಂದದ ಹೊನಲು 


ಬಿಳಿತೆರೆ  ಮೋಡದ ಅಂಚಿನಲಿ 

ಹನಿಮಳೆ ಬೀಳುವ ಹೊತ್ತಿನಲಿ 


ತುಂತುರು ಹನಿಗಳು ಬೀಳುತ್ತಿವೆ 

ಕಾಮನ ಬಿಲ್ಲನು ಮೂಡಿಸಿವೆ 


ಕಾಮನ ಬಿಲ್ಲನು ನೋಡಲ್ಲಿ 

ಮಣಿದಿಹ ಬಿಲ್ಲದು ಮುಗಿಲಲ್ಲಿ 


ಕಿತ್ತಳೆ ಕೇಸರಿ ಹಳದಿ ಕೆಂಪು 

ನೀಲಿ ಕಂದು ನೇರಳೆ ತಂಪು 


ನೆಲಕೂ ಮುಗಿಲಿಗೂ ಮುಟ್ಟಿಹುದು 

ಕಣ್ಣಿಗೆ ಹಬ್ಬವ ತಂದಿಹುದು 


ಸೂರ್ಯನು ಮುಗಿಲಿಗೂ ಮುಟ್ಟಿಹುದು 

ಕಣ್ಣಿಗೆ ಹಬ್ಬವ ತಂದಿಹುದು 


ಸೂರ್ಯನು ಮುಳುಗಿದ ಕತ್ತಲು ಬಂದಿತು 

ಮೋಡವು ಚದುರಿತು ಮಳೆಯೂ ನಿಂತಿತು 


ಮರೆಯಲಿ ಓಡಿತು'ಕಾಮನ ಬಿಲ್ಲು 

ಕಾಣದಾಯಿತು ಮಾಯದ ಬಿಲ್ಲು. 


Padya


Raviyado horatanu paduvanake

Taayiya maneyanu seralike


Sanjeya hottina hoobisilu

kannige higgina andada honalu


Bilitere modada anchinali

Hanimale beeluva hottinali


Tunturu hanigalu beeluttive

Kamana billanu moodisive


Kamana billanu nodalli

Manidiha billadu mugilalli


Kittale kesari haladi kempu

Neeli kandu nerale tampu


Nelaku mugiligu muttihudu

Kannige habbava tandihudu


Suryanu mulugida kattalu banditu

Modavu chaduritu maleyu nintitu


Mareyali oditu kamana billu

Kaanadayitu maayada billu.

         

Sada Kannale (ಸದಾ ಕಣ್ಣಲೆ)

Movie: Kavirata Kalidasa (1983)

Singers: Dr. Rajkumar, Vani Jairam

Song link: Click Here


Sada kannale, pranayada kavite haaduve,

Sada nannali, olavina bayake tumbuve ||


Kanneradu kamalagalante, mungurulu dumbigalante,

Nasikavu sampigeyante, nee nagalu hoo biridante,

Nadeyutire natyadante, ratiye dharegilidante,

Ee andake sotenu sote naanu ||


Gudugugalu taaladante, minchugalu meladante,

Suriva male neerella, pannera hani haniyante,

Jotheyagi neenire saaku, bhuloka swargadante,

Ee premake, sotenu, sote naanu ||


ಚಿತ್ರಗೀತೆ 


ಸದಾ ಕಣ್ಣಲೆ, ಪ್ರಣಯದಾ ಕವಿತೆ ಹಾಡುವೆ,

ಸದಾ ನನ್ನಲಿ, ಒಲವಿನಾ ಬಯಕೆ ತುಂಬುವೆ ।।ಪ।।


ಕಣ್ಣೆರಡು ಕಮಲಗಳಂತೆ, ಮುಂಗುರುಳು ದುಂಬಿಗಳಂತೆ,

ನಾಸಿಕವು ಸಂಪಿಗೆಯಂತೆ, ನೀ ನಗಲು ಹೂ ಬಿರಿದಂತೆ,

ನಡೆಯುತಿರೆ ನಾಟ್ಯದಂತೇ, ರತಿಯೇ ಧರೆಗಿಳಿದಂತೆ,

ಈ ಅಂದಕೆ ಸೋತೆನು, ಸೋತೆ ನಾನು ।।೧।।


ಗುಡುಗುಗಳು ತಾಳದಂತೆ, ಮಿಂಚುಗಳು ಮೇಳದಂತೆ,

ಸುರಿವಾ ಮಳೆ ನೀರೆಲ್ಲ, ಪನ್ನೀರ ಹನಿ ಹನಿಯಂತೆ,

ಜೊತೆಯಾಗಿ ನೀನಿರೆ ಸಾಕು, ಭೂಲೋಕ ಸ್ವರ್ಗದಂತೆ,

ಈ ಪ್ರೇಮಕೆ, ಸೋತೆನು, ಸೋತೆ ನಾನು ।।೨।।

                    


Thursday, February 26, 2026

Sri Manjunatha Suprabhata (ಶ್ರೀ ಮಂಜುನಾಥ ಸುಪ್ರಭಾತ)

Singer: P B Srinivas

Song link: Click Here


Eddelu (2) manjunatha, elu belagayitu (2)

Dhramadevategalu, ninna darushanake kaadiharu (2)

Annappa swamiyu ninna aajnege  nintihanu

Eddelu manjunatha, eddelu ||


Muniganamgalu stotra maadutiharu (2)

Devadi devategalu ninna darushanake kaadiharu

 Eddelu manjunatha, eddelu ||


Mrugaraajanu, ninna darushanake bandihanu (2)

Gajaraajanu ninage, chamarava beesutihanu (2)

Ninna aabharanagaligagi aadisheshanu (2) 

Ninna seralu kaatarisutihanu

Eddelu manjunatha, eddelu ||


Kogilegalu (2) suswaradi, gaana molagutihavu

SaRiGaPaDa, SaDaPaGaPa, DaPaGaSaRi, GaRiSaDaSa

Kogilegalu suswaradi, gaana molagutihavu

Savimaatina aragiliyu, ninna dhyanadalihudu

Parivaalagalu ninna darushanake kaadihavu

Heggadeya dampatigalu ninnaya sevege kaatarisutuharu

Tadavu etake prabhuve (2) darushanava needelu

Eddelu manjunatha, eddelu ||


Netravatiyalli mindu janaru, vidha vidhadi sevegala gaiyutiharu (2)

Sarvarakshaka, sarvarakshakanu neenu darushanava needelu

Viprarellu koodi, veda ghoshisutiharu (2) mokshavanu needelu

Raviya kiranavu, ninna mahadwaravanu belagutihudu

Darushanava needelu, elu belagaayitu

Eddelu manjunatha, eddelu ||


ಶ್ರೀ ಮಂಜುನಾಥ ಸುಪ್ರಭಾತ 


ಎದ್ದೇಳು (೨) ಮಂಜುನಾಥ, ಏಳು ಬೆಳಗಾಯಿತು (೨)

ಧರ್ಮದೇವತೆಗಳು, ನಿನ್ನ ದರುಶನಕೆ ಕಾದಿಹರು 

ಅಣ್ಣಪ್ಪ ಸ್ವಾಮಿಯು ನಿನ್ನ ಆಜ್ಞೆಗೆ ನಿಂತಿಹನು 

ಎದ್ದೇಳು ಮಂಜುನಾಥ, ಎದ್ದೇಳು ।।


ಮುನಿಗಣಂಗಳು ಸ್ತೋತ್ರ ಮಾಡುತಿಹರು (೨)

ದೇವಾದಿ ದೇವತೆಗಳು ನಿನ್ನ ದರುಶನಕೆ ಕಾದಿಹರು 

ಎದ್ದೇಳು ಮಂಜುನಾಥ, ಎದ್ದೇಳು ।।


ಮೃಗರಾಜನು, ನಿನ್ನ ದರುಶನಕೆ ಬಂದಿಹನು (೨)

ಗಜರಾಜನು ನಿನಗೆ, ಚಾಮರವ ಬೀಸುತಿಹನು (೨)

ನಿನ್ನ ಆಭರಣಗಳಿಗಾಗಿ ಆದಿಶೇಷನು (೨)

ನಿನ್ನ ಸೇರಲು ಕಾತರಿಸುತಿಹನು 

ಎದ್ದೇಳು ಮಂಜುನಾಥ, ಎದ್ದೇಳು ।।


ಕೋಗಿಲೆಗಳು (೨) ಸುಸ್ವರದಿ, ಗಾನ ಮೊಳಗುತಿಹವು 

ಸರಿಗಪದ, ಸದಪಗಪ, ದಪಗಸರಿ, ಗರಿಸದಸ 

ಕೋಗಿಲೆಗಳು ಸುಸ್ವರದಿ , ಗಾನ ಮೊಳಗುತಿಹವು 

ಸವಿಮಾತಿನ ಅರಗಿಳಿಯು, ನಿನ್ನ ಧ್ಯಾನದಲಿಹುದು 

ಪಾರಿವಾಳಗಳು ನಿನ್ನ ದರುಶನಕೆ ಕಾದಿಹವು 

ಹೆಗ್ಗಡೆಯ ದಂಪತಿಗಳು ನಿನ್ನಯ ಸೇವೆಗೆ ಕಾತರಿಸುತಿಹರು 

ತಡವು ಏತಕೆ ಪ್ರಭುವೇ (೨) ದರುಶನವಾ ನೀಡೇಳು 

  ಎದ್ದೇಳು ಮಂಜುನಾಥ, ಎದ್ದೇಳು ।।


ನೇತ್ರಾವತಿಯಲ್ಲಿ ಮಿಂದು ಜನರು, ವಿಧವಿಧದಿ ಸೇವೆಗಳ ಗೈಯುತಿಹರು (೨)

ಸರ್ವರಕ್ಷಕಾ, ಸರ್ವರಕ್ಷಕನು ನೀನು ದರುಶನವಾ ನೀಡೇಳು 

ವಿಪ್ರರೆಲ್ಲರು ಕೂಡಿ, ವೇದ ಘೋಷಿಸುತಿಹರು (೨) ಮೋಕ್ಷವನು ನೀಡೇಳು 

ರವಿಯ ಕಿರಣವು, ನಿನ್ನ ಮಹಾದ್ವಾರವನು ಬೆಳಗುತಿಹುದು 

ದರುಶನವಾ ನೀಡೇಳು, ಏಳು ಬೆಳಗಾಯಿತು (೨)

 ಎದ್ದೇಳು ಮಂಜುನಾಥ, ಎದ್ದೇಳು ।।

                        



Sri Raghavendra Suprabhata (ಶ್ರೀ ರಾಘವೇಂದ್ರ ಸುಪ್ರಭಾತ)

Singers: P B Srinivas, S Janaki

Song link: Click Here


Pujyaya raghavendraya satyadharma ratayacha

Bhajatam kalpavrukshaya namatam kamadhenave ||


Brahmadeva kararchita ramachandra

Madhwasanmuni poojita mahita charita

Raghavendra yateendra raradhya murthy

Suprabhatavu nimage sri raghavendra ||


Janakajege varteyitta sriramaduta

Krishnamurutidasa sri bhimasena

Vyasamunishishyavarya sri madhwaraya

Suprabhatavu nimage sri raghavendra ||


Satya lokaadipativani satya maadi

Janisidi mrutyu lokadi shanku karna

Ashritaamara bhoja prahladaraja

Suprabhatavu nimage sri raghavendra ||


Chandrikacharya karnata chakravarti

Vijaya nagaradhipana kaide vibhuda vandya

Gopi krishnana kunisida bhupa neene

Suprabhatavu nimage sri raghavendra ||


Venkateshwara varaputra venkataarya

Veera timmanna satputra venkataarya

Gopikambeya varaputra venkataarya

Suprabhatavu nimage sri raghavendra ||


Tilisidalu vaani nimmaya dhaiyavannu

Sri sudheendraru ramajne shiradi dharisi

Aashramavannittarai venkatarya nimage

Suprabhatavu nimage sri raghavendra ||


Jagavu bayali kandante shastravella

Batta sangrahadali kandu parimalaarya

Mudadi mecchida jaimimi muniyu kooda

Suprabhatavu nimage sri raghavendra ||


Brahma sutrake tippani bareda sukavi

Parimala mahopakaramam mareyalahude

Vedagaligella bhashyavam bareda deva

Suprabhatavu nimage sri raghavendra ||


Sri madananda teertharu sriyaeendra

Ramachandra kaveendraru ramapooje

Maadidaru nimma vaibhava nodutiharu

Suprabhatavu nimage sri raghavendra ||


Dheera neevitta manne bangaravaytu

Nee harase dadda venkanna mantriyaada

Ghora kshamavu nee bare dooravaytu

Suprabhatavu nimage sri raghavendra ||


Gana vidya visharada gaanalola

Nipuna sangeetavettaru ninna mahime

Nodi kondadi kunidaadi paadutiharu

Suprabhatavu nimage sri raghavendra ||


Mookanam vagmi maaduva bhupa neenu

Kurudanige kannu kodutirpa guruvu neenu

Aayurarogyagala neeva yativarenya

Suprabhatavu nimage sri raghavendra ||


Pandhareepuri tirupati badarikaadi

Sakala yatreya phalavu manchaleyalle

Praptavahudendu bandiharu bhaktarella

Suprabhatavu nimage sri raghavendra ||


Harikathambruta saravam bareda sukavi

Ninna sodara kulitiha ninna munde

Kugi kareyuva veekshisai yogivarya

Suprabhatavu nimage sri raghavendra ||


Sri guru stuti rachisida shishya ratna

Sri madappanacharyanu shirava baagi

Munde nintiha veekshisai muktidata

Suprabhatavu nimage sri raghavendra ||


Guru gunastuti rachisida kovidamani

Nimma marimaga vaadeendra niyami dheera

Bandu nintiha veekshisai parimalarya

Suprabhatavu nimage sri raghavendra ||


Varada vasudendra dheerendra varamuneendra

Sri susheelendra suyameendra suvrateendra

Raadi yativarau arthi kadiharu noodu

Suprabhatavu nimage sri raghavendra ||


Deshikottama sujayeendra teertha tamage

Kanaka kavachava todisida ghanamuneendra

Bandu nintiha veekshisai parimalarya

Suprabhatavu nimage sri raghavendra ||


Rajata ratha seve nimagindu raghavendra

Modalu kanakaabhishekavu mugiyalendu

Nintiharu siddaragi srimantarella

Suprabhatavu nimage sri raghavendra ||


Sri virodhi kruchavana bahula vidige

Divya brundavanava pokka deshikendra

Moorunoorabdadutsava mudadi kande

Suprabhatavu nimage sri raghavendra ||


Bedibedida varagala needutirpa

Devamani neene sri suradhenu neene

Bhaktavaanchitaveeva kalpataru neene

Suprabhatavu nimage sri raghavendra ||


Bhaktavatsala bhavadiee bhaktaganavu

Tungeyali mindu madiyuttu dheeksheyinda

Sevipudu ninna bega prasannanaagu

Suprabhatavu nimage sri raghavendra ||


Moola ramara poojipa punya murthy

Bheemakavi naanu nimmaya namabaladi

Rachisidenu suprabhatavam raghavendra

Poornabhoda matambhudhi purnachandra

Ramya gunasandra mangalam sri raghavendra ||


ಶ್ರೀ ರಾಘವೇಂದ್ರ ಸುಪ್ರಭಾತ 


ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ।

ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೆ ।।


ಬ್ರಹ್ಮದೇವ ಕರಾರ್ಚಿತ ರಾಮಚಂದ್ರ 

ಮಧ್ವ ಸನ್ಮುನಿ ಪೂಜಿತ ಮಹಿತ ಚರಿತ 

ರಾಘವೇಂದ್ರ ಯತೀಂದ್ರ ರಾರಾಧ್ಯ ಮೂರ್ತಿ 

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ಜನಕಜೆಗೆ ವಾರ್ತೆಯಿತ್ತ ಶ್ರೀರಾಮದೂತ 

ಕೃಷ್ಣ ಮೂರುತಿದಾಸ ಶ್ರೀ ಭೀಮಸೇನ 

ವ್ಯಾಸ ಮುನಿಶಿಷ್ಯವರ್ಯ ಶ್ರೀ ಮಧ್ವರಾಯ 

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ಸತ್ಯ ಲೋಕಾಧಿಪತಿವಾಣಿ ಸತ್ಯ ಮಾಡಿ 

ಜನಿಸಿದಿ ಮೃತ್ಯು ಲೋಕದಿ ಶಂಖು ಕರ್ಣ 

ಆಶ್ರಿತಾಮರ ಭೋಜ ಪ್ರಹ್ಲಾದ ರಾಜ 

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ಚಂದ್ರಿಕಾಚಾರ್ಯ ಕರ್ನಾಟ ಚಕ್ರವರ್ತಿ 

ವಿಜಯ ನಾಗರಾಧಿಪನ ಕಾಯ್ದೆ ವಿಭುದವಂದ್ಯ 

ಗೋಪಿಕೃಷ್ಣನ ಕುಣಿಸಿದ ಭೂಪ ನೀನೆ 

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ವೆಂಕಟೇಶ್ವರ ವರಪುತ್ರ ವೆಂಕಟಾರ್ಯ 

ವೀರ ತಿಮ್ಮಣ್ಣ ಸತ್ಪುತ್ರ ವೆಂಕಟಾರ್ಯ

ಗೋಪಿಕಾಂಬೆಯ ವರಪುತ್ರ ವೆಂಕಟಾರ್ಯ

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ತಿಳಿಸಿದಳು ವಾಣಿ ನಿಮ್ಮಯ ಧೇಯ್ಯವನ್ನು 

ಶ್ರೀ ಸುಧೀಂದ್ರರು ರಾಮಾಜ್ಞೆ ಶಿರದಿ ಧರಿಸಿ 

ಆಶ್ರಮವನ್ನಿತ್ತರೈ ವೆಂಕಟಾರ್ಯ ನಿಮಗೆ 

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ಜಗವು ಬಾಯಲಿ ಕಂಡಂತೆ ಶಾಸ್ತ್ರ ವೆಲ್ಲ 

ಬಾಟ್ಟ ಸಂಗ್ರಹದಲಿ ಕಂಡು ಪರಿಮಳಾರ್ಯ 

ಮುದದಿ ಮೆಚ್ಚಿದ ಜೈಮಿನಿ ಮುನಿಯು ಕೂಡ 

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ಬ್ರಹ್ಮ ಸೂತ್ರಕೆ ಟಿಪ್ಪಣಿ ಬರೆದ ಸುಕವಿ 

ಪರಿಮಳ ಮಹೋಪಕಾರಮಂ ಮರೆಯಲಹುದೆ 

ವೇದಗಳಿಗೆಲ್ಲ ಭಾಷ್ಯವಂ ಬರೆದ ದೇವ 

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ಶ್ರೀ ಮದಾನಂದ ತೀರ್ಥರು ಶ್ರೀಯೀ೦ದ್ರ 

ರಾಮಚಂದ್ರ ಕವೀಂದ್ರರು ರಾಮಪೂಜೆ 

ಮಾಡಿದರು  ನಿಮ್ಮ ವೈಭವ ನೋಡುತಿಹರು 

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ಧೀರ ನೀವಿತ್ತ ಮಣ್ಣೇ ಬಂಗಾರವಾಯ್ತು 

ನೀ ಹರಸೆ ದಡ್ಡವೆಂಕಣ್ಣ ಮಂತ್ರಿ ಯಾದ 

ಘೋರ ಕ್ಷಾಮವು ನೀ ಬರೆ ದೂರವಾಯ್ತು 

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ಗಾನ ವಿದ್ಯಾ ವಿಶಾರದಾ ಗಾನಲೋಲ 

ನಿಪುಣ ಸಂಗೀತವೇತ್ತರು ನಿನ್ನ ಮಹಿಮೆ 

ನೋಡಿ ಕೊಂಡಾಡಿ ಕುಣಿದಾಡಿ ಪಾಡುತಿಹರು 

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ಮೂಕನಂ ವಾಗ್ಮಿ ಮಾಡುವ ಭೂಪ ನೀನು 

ಕುರುಡನಿಗೆ ಕಣ್ಣು ಕೊಡುತಿರ್ಪ ಗುರುವು ನೀನು 

ಆಯುರಾರೋಗ್ಯಗಳ ನೀವ ಯತಿವರೇಣ್ಯ 

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ಪಂಢರೀಪುರಿ ತಿರುಪತಿ ಬದರಿಕಾದಿ 

ಸಕಲ ಯಾತ್ರೆಯ ಫಲವು ಮಂಚಾಲೆಯಲ್ಲೇ 

ಪ್ರಾಪ್ತವಹುದೆಂದು ಬಂದಿಹರು ಭಕ್ತರೆಲ್ಲ 

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ಹರಿ ಕಥಾಮೃತ  ಸಾರವಂ ಬರೆದ ಸುಕವಿ 

ನಿನ್ನ ಸೋದರ ಕುಳಿತಿಹ ನಿನ್ನ ಮುಂದೆ 

ಕೂಗಿ ಕರೆಯುವ ವೀಕ್ಷಿಸೈ ಯೋಗಿವರ್ಯ 

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ಶ್ರೀ ಗುರು ಸ್ತುತಿ ರಚಿಸಿದ ಶಿಷ್ಯ ರತ್ನ 

ಶ್ರೀ ಮದಪ್ಪಣಾಚಾರ್ಯನು ಶಿರವ ಬಾಗಿ 

ಮುಂದೆ ನಿಂತಿಹ ವೀಕ್ಷಿಸೈ ಮುಕ್ತಿದಾತ 

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ಗುರು ಗುಣಸ್ತುತಿ ರಚಿಸಿದ ಕೋವಿದಮಣಿ 

ನಿಮ್ಮ ಮರಿಮಗ ವಾದೀಂದ್ರ ನಿಯಮಿ ಧೀರಾ 

ಬಂದು ನಿಂತಿಹ ವೀಕ್ಷಿಸೈ ಪರಿಮಳಾರ್ಯ 

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ವರದ ವಸುದೇಂದ್ರ ಧೀರೇಂದ್ರ ವರಮುನೀಂದ್ರ 

ಶ್ರೀ ಸುಶಿಲೇಂದ್ರ ಸುಯಮೀ೦ದ್ರ ಸುವ್ರತೀಂದ್ರ 

ರಾದಿ ಯತಿವರರು  ಅರ್ಥಿ ಕಾದಿಹರು ನೋಡು 

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ದೇಶಿಕೋತ್ತಮ ಸುಜಯೀ೦ದ್ರ ತೀರ್ಥ ತಮಗೆ 

ಕನಕ ಕವಚವ ತೊಡಿಸಿದ ಘನ ಮುನೀ೦ದ್ರ 

ಬಂದು ನಿಂತಿಹ ವೀಕ್ಷಿಸೈ ಪರಿಮಳಾರ್ಯ 

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ರಜತ ರಥ ಸೇವೆ ನಿಮಗಿಂದು ರಾಘವೇಂದ್ರ 

ಮೊದಲು ಕನಕಾಭಿಷೇಕವು ಮುಗಿಯಲೆಂದು 

ನಿಂತಿಹರು ಸಿದ್ದರಾಗಿ ಶ್ರೀಮಂತರೆಲ್ಲ 

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ಶ್ರೀ ವಿರೋಧಿ ಕೃಚ್ರಾ ವಣ  ಬಹುಳ ವಿದಿಗೆ 

ದಿವ್ಯ ಬೃಂದಾವನವ ಪೊಕ್ಕು ದೇಶಿಕೇಂದ್ರ 

ಮೂರು ನೂರ ಬ್ಧದುತ್ಸವ ಮುದದಿ ಕಂಡೆ 

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ಬೇಡಿಬೇಡಿದ ವರಗಳ ನೀಡುತಿರ್ಪ 

ದೇವಮಣಿ ನೀನೇ ಶ್ರೀ ಸುರಧೇನು ನೀನೇ 

ಭಕ್ತವಾಂಛಿತವೀವ ಕಲ್ಪತರು ನೀನೇ 

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ಭಕ್ತ ವತ್ಸಲ ಭವದೀಈ ಭಕ್ತಗಣವು 

ತುಂಗೆಯಲಿ ಮಿಂದು ಮಡಿಯುಟ್ಟು ಧೀಕ್ಷೆಯಿಂದ 

ಸೇವಿಪರು ನಿನ್ನ ಬೇಗ ಪ್ರಸನ್ನನಾಗು 

ಸುಪ್ರಭಾತವು ನಿಮಗೆ ಶ್ರೀ ರಾಘವೇಂದ್ರ ।।


ಮೂಲ ರಾಮರ ಪೂಜಿಪ ಪುಣ್ಯ ಮೂರ್ತಿ 

ಭೀಮಕವಿ ನಾನು ನಿಮ್ಮಯ ನಾಮಬಲದಿ 

ರಚಿಸಿದೆನು ಸುಪ್ರಭಾತವಂ ರಾಘವೇಂದ್ರ 

ಪೂರ್ವಭೋದ ಮಾತಾ೦ಭುಧಿ ಪೂರ್ಣಚಂದ್ರ 

ರಮ್ಯ ಗುಣಸಾ೦ದ್ರ ಮಂಗಳಂ ರಾಘವೇಂದ್ರ ।।

           

Santoshakke Haadu Santoshakke (ಸಂತೋಷಕ್ಕೆ ಹಾಡು ಸಂತೋಷಕ್ಕೆ)

Movie: Geeta (1981)

Singer: SPB

Song link: Click Here


Ya...Ya...! Hai folks good evening,

Listen to the carving music from your fabluous sanjay,

Thank you!


Santoshakke, haadu santoshakke,

Kunidu talakke kunidu, nalidu ragakke nalidu, nannante he,

Santoshakke, haadu santoshakke, ya ||


Lateya moggu araluvante, dumbiyannu kareyuvante,

Baanu baagi, keluvante, naada gange, hariyuvante,

Kallu kuda karaguvante ||


Hiriyarenu, kiriyarenu, harusha padalu, bhedavenu,

Ella seri, haadidaga, suriva maleya, haniyu jenu,

Swarga kandu nachadenu ||

Rababbabba rababbabba, rabba rabba raaba!



ಚಿತ್ರಗೀತೆ 


ಯಾ ಯಾ, ಹಾಯ್ ಫೋಲ್ಕ್ಸ್, ಗುಡ್ ಇವಿನಿಂಗ್,

ಲಿಸನ್ ಟು ದಿ ಕಾರ್ವಿಂಗ್ ಮ್ಯೂಸಿಕ್ ಫ್ರಮ್ ಯುವರ್ ಫ್ಯಾಬ್ಯುಲೌಸ್ ಸಂಜಯ್, ಥಾಂಕ್ ಯು !


ಸಂತೋಷಕ್ಕೆ, ಹಾಡು ಸಂತೋಷಕ್ಕೆ,

ಕುಣಿದು ತಾಳಕ್ಕೆ ಕುಣಿದು, ನಲಿದು ರಾಗಕ್ಕೆ ನಲಿದು, ನನ್ನಂತೇ ಹೇ,

ಸಂತೋಷಕ್ಕೆ, ಹಾಡು ಸಂತೋಷಕ್ಕೆ, ಯಾ ।।ಪ।।


ಲತೆಯ ಮೊಗ್ಗು, ಅರಳುವಂತೆ, ದುಂಬಿಯನ್ನು, ಕರೆಯುವಂತೆ,

ಬಾನು ಬಾಗಿ, ಕೇಳುವಂತೆ, ನಾದ ಗಂಗೆ, ಹರಿಯುವಂತೆ,

ಕಲ್ಲು ಕೂಡ ಕರಗುವಂತೆ ।।೧।।


ಹಿರಿಯರೇನು, ಕಿರಿಯರೇನು, ಹರುಷ ಪಡಲು, ಭೇದವೇನು,

ಎಲ್ಲ ಸೇರಿ, ಹಾಡಿದಾಗ, ಸುರಿವ ಮಳೆಯ, ಹನಿಯು ಜೇನು,

ಸ್ವರ್ಗ ಕಂಡು ನಾಚದೆನೂ  ।।೨।।

ರಾಬಬ್ಬಬ್ಬಾ, ರಾಬಬ್ಬಬ್ಬಾ, ರಬ್ಬಾ ರಬ್ಬಾ ರಬ್ಬಾ!

                     

Shivappa Kayo Tande (ಶಿವಪ್ಪ ಕಾಯೋ ತಂದೆ)

Movie: Bedara Kannappa (1954)

Singer: C S Jayaraman

Song link: Click Here


Sharanu shankara shambho..omkaara naada roopa,

Moreya nee aalisi..paliso sarvesha ||


Shivappa kayo tande, mooru loka swami deva,

Hasiveyannu taalalare kapadeya, harane,

Bhaktiyante, poojeyante, ondu ariye na,

Paapavante punyavante kanenayya na..||


Shuddhanagi poojegaiye, oliveyante nee,

Shuddhavo, ashuddhavo, na kaane devane,

Naadavante, vedavante, ondu tiliye na,

Benda jeeva nondu kuge, bandu nodayya ||


Ekachittadi nambidavara nee, saaki salahuve entappa,

Shokava harisuva devaneenadare, beteya toro ennappa,

Lokavanaluva neenappa, beteya toro ennappa...||


ಚಿತ್ರಗೀತೆ 


ಶರಣು ಶಂಕರ ಶಂಭೋ, ಓಂಕಾರ ನಾದ ರೂಪ,

ಮೊರೆಯ ನೀ ಆಲಿಸಿ, ಪಾಲಿಸೋ ಸರ್ವೇಶಾ !


ಶಿವಪ್ಪ ಕಾಯೋ ತಂದೆ, ಮೂರು ಲೋಕ ಸ್ವಾಮಿ ದೇವಾ,

ಹಸಿವೆಯನ್ನು ತಾಳಲಾರೆ ಕಾಪಡೆಯಾ, ಹರನೇ,

ಭಕ್ತಿಯಂತೆ, ಪೂಜೆಯಂತೆ, ಒಂದು ಅರಿಯೆ ನಾ,

ಪಾಪವಂತೆ ಪುಣ್ಯವಂತೆ ಕಾಣೆನಯ್ಯಾ ನಾ ।।ಪ।।


ಶುದ್ಧನಾಗಿ ಪೂಜೆಗೈಯೆ, ಒಲಿವೆಯಂತೆ ನೀ,

ಶುದ್ಧವೋ, ಅಶುದ್ಧವೋ, ನಾ ಕಾಣೆ ದೇವನೇ,

ನಾದವಂತೆ ವೇದವಂತೆ, ಒಂದು ತಿಳಿಯೆ ನಾ,

ಬೆಂದ ಜೀವ ನೊಂದು ಕೂಗೆ, ಬಂದು ನೋಡಯ್ಯಾ ।।೧।।


ಏಕಚಿತ್ತದಿ ನಂಬಿದವರ ನೀ ಸಾಕಿ ಸಲಹುವೆ ಎಂತಪ್ಪ,

ಶೋಕವ ಹರಿಸುವ ದೇವ ನೀನಾದರೆ, ಬೇಟೆಯ ತೋರೋ ಎನ್ನಪ್ಪ,

ಲೋಕನಾಳುವ ನೀನಪ್ಪಾ, ಬೇಟೆಯ ತೋರೋ ಎನ್ನಪ್ಪ..

।।೨।।

                             

Siritana Beke Badata Saake (ಸಿರಿತನ ಬೇಕೆ ಬಡತನ ಸಾಕೆ)

Movie: Mana Mecchida Madadi (1969)

Singer: S Janaki

Song link: Click Here


Siritana beke, badatana saake, 

Ennuta bage bage keluvare keluvare,

Kannada nadina hennina hommana,

Ore idabeke, nanna dore nanna dore ||


Isiri kirikiri ene irali, begudi besara savira barali,

Olavina bandi baalina keladi,

Mana mecchida madadee, na mana mecchida madadi ||


Manadale mandige melluvalalla, gaaliya gopura gelluvalalla,

Sihikahi ella sahisalu balla,

Mana mecchida madadee, na mana mecchida madadi ||


ಚಿತ್ರಗೀತೆ 


ಸಿರಿತನ ಬೇಕೆ ಬಡತನ ಸಾಕೆ,

ಎನ್ನುತಾ ಬಗೆ ಬಗೆ ಕೇಳುವರೆ ಕೇಳುವರೆ,

ಕನ್ನಡ ನಾಡಿನ ಹೆಣ್ಣಿನ ಹೊಮ್ಮನ,

ಒರೆ ಇಡಬೇಕೆ, ನನ್ನ ದೊರೆ ನನ್ನ ದೊರೆ ।।ಪ।।


ಐಸಿರಿ ಕಿರಿಕಿರಿ ಏನೇ ಇರಲಿ, ಬೇಗುದಿ ಬೇಸರ ಸಾವಿರ ಬರಲಿ,

ಒಲವಿನ ಬಂದಿ ಬಾಳಿನ ಕೆಳದಿ,

ಮನ ಮೆಚ್ಚಿದಾ ಮಡದೀ, ನಾ ಮನ ಮೆಚ್ಚಿದಾ ಮಡದಿ ।।೧।।


ಮನದಲೇ ಮಂಡಿಗೆ ಮೆಲ್ಲುವಳಲ್ಲ, ಗಾಳಿಯ ಗೋಪುರ ಗೆಲ್ಲುವಳಲ್ಲ,

ಸಿಹಿಕಹಿ ಎಲ್ಲ ಸಹಿಸಲು ಬಲ್ಲ,

ಮನ ಮೆಚ್ಚಿದಾ ಮಡದೀ, ನಾ ಮನ ಮೆಚ್ಚಿದಾ ಮಡದಿ ।।೨।।

                           


Rasika Rasika (ರಸಿಕಾ ರಸಿಕಾ)

Movie: Bhupati Ranga (1970)

Singer: L R Eshwari

Song link: Click Here


Rasika rasika balu mellane turadu,

Rasada nimisha kandaagale meredaadu  ||


Kannu kannu bereta kudale, kande neenu selede aagale,

Seleva sulige silukidaagale,

Ee lokadananda nee dochuve, oho ||


Binku bedagu kanda kudale, vayasu sogasu minchidagale,

Manasu eneno nenesidagale,

Naduvinantara kuniyadu ante hah hah ||


Madhuvu cheluvu iralu munde,

Kappu bilapu ellavu onde,

Ratri hagalige bheda torade, ee vele suriyuvudante ||


ಚಿತ್ರಗೀತೆ 


ರಸಿಕಾ ರಸಿಕಾ ಬಲು ಮೆಲ್ಲನೆ ತೂರಾಡು,

ರಸದ ನಿಮಿಷ ಕಂಡಾಗಲೆ ಮೆರೆದಾಡು ।।ಪ।।


ಕಣ್ಣು ಕಣ್ಣು ಬೆರೆತ ಕೂಡಲೆ, ಕಂಡೆ ನೀನು ಸೆಳೆದೆ ಆಗಲೆ,

ಸೆಳೆವ ಸುಳಿಗೆ ಸಿಲುಕಿದಾಗಲೆ,

ಈ ಲೋಕದಾನಂದ ನೀ ದೋಚುವೆ, ಒಹೋ ।।೧।।


ಬಿಂಕು ಬೆಡಗು ಕಂಡ ಕೂಡಲೆ,

ವಯಸು ಸೊಗಸು ಮಿಂಚಿದಾಗಲೆ,

ಮನಸು ಏನೇನೋ ನೆನೆಸಿದಾಗಲೆ,

ನಡುವಿನಂತರ ಕುಣಿಯದು ಅಂತೆ, ಹ್ಹ ಹ್ಹ।।೨।।


ಮಧುವು ಚೆಲುವು ಇರಲು ಮುಂದೆ,

ಕಪ್ಪು ಬಿಳಪು ಎಲ್ಲವು ಒಂದೆ,

ರಾತ್ರಿ ಹಗಲಿಗೆ ಭೇದ ತೋರದೆ, ಈ ವೇಳೆ ಸುರಿಯುವುದಂತೆ 

।।೩।।

                                 

Sunday, February 22, 2026

Ninna Savinenape (ನಿನ್ನ ಸವಿನೆನಪೆ)

Movie: Anuraaga Bandhana (1978)

Singer: S Janaki

Song link: Click Here


Ninna savinenape, manadalli aaradhane,

Preetiya savimaate upaasane,

Ninna sangadali, anganga minchayitu,

Shrungara rasadhare bayalayitu ||


Hoo baana hudalu kamanabillu,

Ee prana mudipaytu ninna seralu,

Usirata neenu, bisi midukaata naanu,

Ninnali naa maruladenu, neene ee baala baanu ||


Kannalli sanneya swagata needi,

Nee tande rasakavya savi munnudi,

Mana tumba neenu, ninna pratibimba naanu,

Ninna vina naa baalenu, innu daye baaradenu,

Swami shankarane sashidharane gangadhara, baalali belakaagu maheshwara,

Namma kai hididu kapadu karunakara, ninnalli sharanaade shivashankara ||


ಚಿತ್ರಗೀತೆ 


ನಿನ್ನ ಸವಿನೆನಪೆ, ಮನದಲ್ಲಿ ಆರಾಧನೆ,

ಪ್ರೀತಿಯ ಸವಿಮಾತೆ ಉಪಾಸನೆ,

ನಿನ್ನ ಸಂಗದಲಿ, ಅಂಗಾಂಗ ಮಿಂಚಾಯಿತು,

ಶೃಂಗಾರ ರಸಧಾರೆ ಬಯಲಾಯಿತು ।।ಪ।।


ಹೂ ಬಾಣ ಹೂಡಲು ಕಾಮನಬಿಲ್ಲು,

ಈ ಪ್ರಾಣ ಮುಡಿಪಾಯ್ತು ನಿನ್ನ ಸೇರಲು,

ಉಸಿರಾಟ ನೀನು, ಬಿಸಿ ಮಿಡುಕಾಟ ನಾನು,

ನಿನ್ನಲಿ ನಾ ಮರುಳಾದೆನು, ನೀನೇ ಈ ಬಾಳ ಬಾನು ।।೧।।


ಕಣ್ಣಲ್ಲಿ ಸನ್ನೆಯ ಸ್ವಾಗತ ನೀಡಿ,

ನೀ ತಂದೆ ರಸಕಾವ್ಯ ಸವಿ ಮುನ್ನುಡಿ,

ಮನ ತುಂಬಾ ನೀನು, ನಿನ್ನ ಪ್ರತಿಬಿಂಬ ನಾನು,

ನಿನ್ನ ವಿನಾ ನಾ ಬಾಳೆನು, ಇನ್ನು ದಯೆ ಬಾರದೇನು,

ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ, ಬಾಳಲಿ ಬೆಳಕಾಗು ಮಹೇಶ್ವರ,

ನಮ್ಮ ಕೈ ಹಿಡಿದು ಕಾಪಾಡು ಕರುಣಾಕರ, ನಿನ್ನಲ್ಲಿ ಶರಣಾದೆ ಶಿವಶಂಕರ ।।೨।।

                             

Sharade Daye Toride (ಶಾರದೆ ದಯೆ ತೋರಿದೆ)

Movie: Malaya Maaruta (1986)

Singer: SPB

Song link: Click Here


Sharade daye toride,

Ninna karuneya kadalalli muttade, na muttade ||


Haala belakinali biliya kamaladali, biliya vastravanu dharisi,

Biliya kusumagala maale koralalire, belli veeneyanu nudisi,

Ninna kangala belakanu, nanna kangalali tumbide,

Elu maguve, melelu endu, hosa baala tandeyamma ||


Andhakaradali nondu balalutire, bandu kaiya hidide,

Kanda ekaluve munde daari ide, endu neene nudide,

Tande tayiya punyavo, nanendo madida pujeyo,

Indu ninna, krupeyinda naanu, aananda padedenamma ||


ಚಿತ್ರಗೀತೆ 


ಶಾರದೆ ದಯೆ ತೋರಿದೆ,

ನಿನ್ನ ಕರುಣೆಯ ಕಡಲಲ್ಲಿ ಮುತ್ತಾದೆ, ನಾ ಮುತ್ತಾದೆ ।।ಪ।।


ಹಾಲ ಬೆಳಕಿನಲಿ ಬಿಳಿಯ ಕಮಲದಲಿ, ಬಿಳಿಯ ವಸ್ತ್ರವನು ಧರಿಸಿ,

ಬಿಳಿಯ ಕುಸುಮಗಳ ಮಾಲೆ ಕೊರಳಲಿರೆ, ಬೆಳ್ಳಿ ವೀಣೆಯನು ನುಡಿಸಿ,

ನಿನ್ನ ಕಂಗಳ ಬೆಳಕನು, ನನ್ನ ಕಂಗಳಲಿ ತುಂಬಿದೆ,

ಏಳು ಮಗುವೆ, ಮೇಲೇಳು ಎಂದು, ಹೊಸ ಬಾಳ ತಂದೆಯಮ್ಮಾ ।।೧।।


ಅಂಧಕಾರದಲಿ ನೊಂದು ಬಳಲುತಿರೆ, ಬಂದು ಕೈಯ ಹಿಡಿದೆ,

ಕಂದ ಏಕಳುವೆ ಮುಂದೆ ದಾರಿ ಇದೆ, ಎಂದು ನೀನೇ ನುಡಿದೆ,

ತಂದೆ ತಾಯಿಯ ಪುಣ್ಯವೋ, ನಾನೆಂದೋ ಮಾಡಿದ ಪೂಜೆಯೋ,

ಇಂದು ನಿನ್ನ, ಕೃಪೆಯಿಂದ ನಾನು, ಆನಂದ ಪಡೆದೆನಮ್ಮಾ 

।।೨।।

                       

Saturday, February 21, 2026

Singara Sheela (ಸಿಂಗಾರ ಶೀಲ)

Movie: Bhakta Kanakadasa (1960)

Singer: P B Srinivas, S Janaki

Song link: Click Here


Singara sheela, sangeeta lola, aa..aa..aa..aa!

Singaara sheela, sangeeta lola,

Shreeranga ninna leele, kandu dhanye naanala ||


Sarasa summana santosha bhava,

Sharadhiyentagi tumbito jeeva,

Hariye, poreye, ee ninna maaye,

Enendu helalayya, deena bandhu neenayya ||


Kavida gadaandhakaarava neegi,

Belaka nee tande nannavanagi,

Nalide, olide, nalmeya tande,

Kapado kamadhenu neene endu toride ||


Manadolekinta mohada veene,

Madhura jhenkara tandito kaane,

Kunive, tanive, seveya gaive,

Sriranga ninna leele, haadi haadi baaluve ||


ಚಿತ್ರಗೀತೆ 


ಸಿಂಗಾರ ಶೀಲ, ಸಂಗೀತ ಲೋಲ, ಆ .. ಆ .. ಆ .. ಆ ..!

ಶ್ರೀರಂಗ ನಿನ್ನ ಲೀಲೆ ಕಂಡು ಧನ್ಯೆನಾನಳಾ,

ಸಿಂಗಾರ ಶೀಲ, ಸಂಗೀತ ಲೋಲ ।।ಪ।।


ಸರಸ ಸುಮ್ಮಾನ ಸಂತೋಷ ಭಾವ,

ಶರಧಿಯೆ೦ತಾಗಿ ತುಂಬಿತೊ ಜೀವ,

ಹರಿಯೇ, ಪೊರೆಯೇ, ಈ ನಿನ್ನ ಮಾಯೆ,

ಏನೆಂದು ಹೇಳಲಯ್ಯಾ, ದೀನ ಬಂಧು ನೀನಯ್ಯಾ ।।೧।।


ಕವಿದ ಗಾಡಾ೦ಧಕಾರವ ನೀಗಿ,

ಬೆಳಕ ನೀ ತಂದೆ ನನ್ನವನಾಗಿ,

ನಲಿದೆ, ಒಲಿದೆ, ನಲ್ಮೆಯ ತಂದೆ,

ಕಾಪಾಡೊ ಕಾಮಧೇನು ನೀ ಎಂದು ತೋರಿದೆ ।।೨।।


ಮನದೊಳೇಕಿಂತ ಮೋಹದ ವೀಣೆ,

ಮಧುರ ಝೇಂಕಾರ ತಂದಿತೋ ಕಾಣೆ,

ಕುಣಿವೇ, ತಣಿವೇ, ಸೇವೆಯ ಗೈವೆ,

ಶ್ರೀರಂಗ ನಿನ್ನ ಲೀಲೆ ಹಾಡಿ ಹಾಡಿ ಬಾಳುವೆ ।।೩।।

             

Jotheyali Jothe Jotheyali (ಜೊತೆಯಲಿ ಜೊತೆ ಜೊತೆಯಲಿ)

Movie: Geeta (1981)

Singers: SPB, S Janaki

Song link: Click Here


Jotheyali jothe jotheyali, iruvenu heege endu,

Hosa harushava taruvenu innu endu,

Ho.. entha maatadide, indu nee, entha maatadide,

Nanna manasina bhavane neene helide ||


Preeti endarenu endu eega aritenu,

Savi nudiyali, tanu aralitu, savi ganasali mana, kuniyitu,

Olavina ee maatige, karagi hode notake,

Koduve ninage baa preeti kanike ||


Modadalli jodiyaagi, teli naliyuva,

Haaraduva araginigala, maatadisi muddaduva,

Kaamana billeruva, jaaruta naavaduva,

Hagalu irulu ondaagi haaduva ||


ಚಿತ್ರಗೀತೆ 


ಜೊತೆಯಲಿ ಜೊತೆ ಜೊತೆಯಲಿ, ಇರುವೆನು ಹೀಗೆ ಎಂದು,

ಹೊಸ ಹರುಷವ ತರುವೆನು ಇನ್ನು ಎಂದು,

ಹೋ  ..ಎಂಥ ಮಾತಾಡಿದೆ ಇಂದು ನೀ, ಎಂಥ ಮಾತಾಡಿದೆ,

ನನ್ನ ಮನಸಿನ ಭಾವನೆ ನೀನೆ ಹೇಳಿದೆ ।।ಪ।।


ಪ್ರೀತಿ ಎಂದರೇನು ಎಂದು ಈಗ ಅರಿತೆನೂ,

ಸವಿ ನುಡಿಯಲಿ, ತನು ಅರಳಿತು, ಸವಿಗನಸಲಿ ಮನ ಕುಣಿಯಿತು,

ಒಲವಿನಾ ಈ ಮಾತಿಗೆ, ಕರಗಿ ಹೋದೆ ನೋಟಕೆ,

ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ ।।೧।।


ಮೋಡದಲ್ಲಿ ಜೋಡಿಯಾಗಿ, ತೇಲಿ ನಲಿಯುವ,

ಹಾರಾಡುವ ಅರಗಿಣಿಗಳ, ಮಾತಾಡಿಸಿ ಮುದ್ದಾಡುವ,

ಕಾಮನ ಬಿಲ್ಲೇರುವ, ಜಾರುತ ನಾವಾಡುವ,

ಹಗಲು ಇರುಳು ಒಂದಾಗಿ ಹಾಡುವ ।।೨।।

             

Shrungara Roopanu Shanmukhanu (ಶೃಂಗಾರ ರೂಪನು ಷಣ್ಮುಖನು)

Bhaktigeete

Singer: Dr. Rajkumar

Song link: Click Here


Shrungara roopanu shanmukhanu,

Bangaradodalina karunanta ranganu,

Dandayudhavannu dharisida swamiyu,

Dharmava kaayuva kankana baddanu ||


Parvati premadi harasida kuvaranu,

Parashiva mecchida panditanu,

Paapava neeguva parama puneetanu,

Pranava rahasyava ballavaneetanu ||


Gangeyu sahisada benkiya odalu,

Antarangavidu premada kadalu,

Aananda mooruti nagunagutiralu,

Kailasa bhuviyalle yaavagalu ||


ಭಕ್ತಿಗೀತೆ  


ಶೃಂಗಾರ ರೂಪನು ಷಣ್ಮುಖನು,

ಬಂಗಾರದೊಡಲಿನ ಕರುಣಾಂತ ರಂಗನು,

ದಂಡಾಯುಧವನ್ನು ಧರಿಸಿದ ಸ್ವಾಮಿಯೂ,

ಧರ್ಮವ ಕಾಯುವ ಕಂಕಣ ಬದ್ದನು ।।ಪ।।


ಪಾರ್ವತಿ ಪ್ರೇಮದಿ ಹರಸಿದ ಕುವರನೂ,

ಪರಶಿವ ಮೆಚ್ಚಿದ ಪಂಡಿತನೂ,

ಪಾಪವ ನೀಗುವ ಪರಮ ಪುನೀತನು,

ಪ್ರಣವ ರಹಸ್ಯವ ಬಲ್ಲವನೀತನು ।।೧।।


ಗಂಗೆಯೂ ಸಹಿಸದ ಬೆಂಕಿಯ ಒಡಲು,

ಅಂತರಂಗವಿದು ಪ್ರೇಮದ ಕಡಲು,

ಆನಂದ ಮೂರುತಿ ನಗುನಗುತಿರಲು,

ಕೈಲಾಸ ಭುವಿಯಲ್ಲೇ ಯಾವಾಗಲೂ ।।೨।।

             


Sundara Manohara Tampina Dhara (ಸುಂದರ ಮನೋಹರ ತಂಪಿನ ಧಾರಾ)

Bhaktigeete

Singer: Dr. Balamuralikrishna

Song link: Click Here


Sundara manohara, tampina dhara,

Sakala paapahara kumara dhara ||


Mangalamaya swara sangeeta dhara,

Kangala seleyuva cheluvina dhara,

Sambana kushtava neegida dhara,

Kukke subramanya kumara dhara ||


Raviya varadinda udisida dhara,

Vasukiya nova harisida dhara,

Ella narakagala kaleyuva dhara,

Kukke subramanya kumara dhara ||


Jnanavahiniyodane haridiha dhara,

Betaalana shapava kalediha dhara,

Bhaktara abheshtava siddipa teera,

Kukke subramanya kumara dhara ||


ಭಕ್ತಿಗೀತೆ 


ಸುಂದರ ಮನೋಹರ, ತಂಪಿನ ಧಾರಾ,

ಸಕಲ ಪಾಪಹರ ಕುಮಾರ ಧಾರಾ ।।ಪ।।


ಮಂಗಳಮಯ ಸ್ವರ ಸಂಗೀತ ಧಾರಾ,

ಕಂಗಳ ಸೆಳೆಯುವ ಚೆಲುವಿನ ಧಾರಾ,

ಸಾಂಬನ ಕುಷ್ಠವ ನೀಗಿದ ಧಾರಾ,

ಕುಕ್ಕೆ ಸುಬ್ರಮಣ್ಯ ಕುಮಾರ ಧಾರಾ ।।೧।।


ರವಿಯ ವರದಿಂದ ಉದಿಸಿದ ಧಾರಾ,

ವಾಸುಕಿಯ ನೋವ ಹರಿಸಿದ ಧಾರಾ,

ಎಲ್ಲ ನರಕಗಳ ಕಳೆಯುವ ಧಾರಾ,

ಕುಕ್ಕೆ ಸುಬ್ರಮಣ್ಯ ಕುಮಾರ ಧಾರಾ ।।೨।।


ಜ್ಞಾನ ವಾಹಿನಿಯೊಡನೆ ಹರಿದಿಹ ಧಾರಾ,

ಬೇತಾಳನ ಶಾಪವ ಕಳೆದಿಹ ಧಾರಾ,

ಭಕ್ತರ ಅಭೀಷ್ಟವ ಸಿದ್ದಿಪ ತೀರ,

ಕುಕ್ಕೆ ಸುಬ್ರಮಣ್ಯ ಕುಮಾರ ಧಾರಾ ।।೩।।

               


Illige Runavu Teeritu (ಇಲ್ಲಿಗೆ ಋಣವು ತೀರಿತು)

Movie: Mane Katti Nodu (1966)

Singer: P B Srinivas

Song link: Click Here


Illige runavu teeritu, neenu kattida ee maneya..

Mane katti nodu, maduve maadi nodu,

Kannadada gaade idu tiliyalaareya, mane katti nodu ||


Aasegalu nurentu, kaadiralu ee nantu,

Nambide nee geleyaranu, nambisi nadeda manujaranu ||


Ellihudu nina paalu, irulayte savi baalu,

Snehavadu mannaytu, hanave janagala manavaytu ||


Badukidaru baalalla, neeniralu mane illa,

Yaara mana yaara mane, masana aduve maneyalla ||


ಚಿತ್ರಗೀತೆ 


ಇಲ್ಲಿಗೆ ಋಣವು ತೀರಿತು, ನೀನು ಕಟ್ಟಿದ ಮನೆಯ ..

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು,

ಕನ್ನಡದ ಗಾದೆ ಇದು ತಿಳಿಯಲಾರೆಯ, ಮನೆ ಕಟ್ಟಿ ನೋಡು

 ।।ಪ।।


ಆಸೆಗಳು ನೂರೆಂಟು, ಕಾಡಿರಲು ಈ ನಂಟು,

ನಂಬಿದೆ ನೀ ಗೆಳೆಯರನು, ನಂಬಿಸಿ ನಡೆದ ಮನುಜರನು ।।೧।।


ಎಲ್ಲಿಹುದು ನಿನ ಪಾಲು, ಇರುಳಾಯ್ತೆ ಸವಿ ಬಾಳು,

ಸ್ನೇಹವದು ಮಣ್ಣಾಯ್ತು, ಹಣವೇ ಜನಗಳ ಮನವಾಯ್ತು ।।೨।।


ಬದುಕಿದರೂ ಬಾಳಲ್ಲ ನೀನಿರಲೂ ಮನೆ ಇಲ್ಲ,

ಯಾರ ಮನ ಯಾರ ಮನೆ, ಮಸಣ ಅದುವೆ ಮನೆಯಲ್ಲ ।।೩।।

                               

Naguta Haadale (ನಗುತ ಹಾಡಲೆ)

Movie: Uyyale (1969)

Singer: P B Srinivas

Song link: Click Here


Naguta haadale, aluta haadale,

Manavu alutire, mukhadi geete haadale ||


Muraliye odedire, madhura naada nudisale,

Preetiya dahake, kanna neera kudisale,

Gaaliya, naduveye, preeti deepa pidiyale,

Eke intha, sodhane, endu vidhiya kelale ||


Andina dinagalu, kanasu endu tiliyale,

Kattale kandaru, belaku endu bhramisale,

Aluvige, naguvina, bannavannu baliyale,

Atmada, bandhana, amaravendu saarale ||


ಚಿತ್ರಗೀತೆ 


ನಗುತ ಹಾಡಲೆ, ಅಳುತ ಹಾಡಲೆ,

ಮನವು ಅಳುತಿರೇ, ಮುಖದಿ ಗೀತೆ ಹಾಡಲೆ ।।ಪ।।


ಮುರಳಿಯೇ ಒಡೆದಿರೆ, ಮಧುರ ನಾದ ನುಡಿಸಲೆ,

ಪ್ರೀತಿಯ ದಾಹಕೆ, ಕಣ್ಣ ನೀರ ಕುಡಿಸಲೇ,

ಗಾಳಿಯಾ, ನಡುವೆಯೇ, ಪ್ರೀತಿ ದೀಪ ಪಿಡಿಯಲೆ,

ಏಕೆ ಇಂಥ, ಶೋಧನೆ, ಎಂದು ವಿಧಿಯ ಕೇಳಲೆ ।।೧।।


ಅಂದಿನಾ ದಿನಗಳು, ಕನಸು ಎಂದು ತಿಳಿಯಲೆ,

ಕತ್ತಲೆ ಕಂಡರೂ, ಬೆಳಕು ಎಂದು ಭ್ರಮಿಸಲೆ,

ಅಳುವಿಗೆ, ನಗುವಿನಾ, ಬಣ್ಣವನ್ನು ಬಳಿಯಲೆ,

ಆತ್ಮದ, ಬಂಧನ, ಅಮರವೆಂದು ಸಾರಲೇ ।।೨।।

                            

Tuesday, February 17, 2026

Ee Desha Chenna (ಈ ದೇಶ ಚೆನ್ನ)

Movie: Kaveri (1975)

Singer: SPB

Song link: Click Here 


Ee desha chenna, ee mannu chinna, ellu naa kanenalla,

Intha anda, intha chenda, namma nadige saati illa ||


Karnata kaveri taayagi bandu,

Nammase kaigudo varadaana tandu,

Hasihasiralli, hanihaniyalli,

Aananda tandenu, endu endu, ene naane dhanya ||


Ee janma nuraaru na taali baruve,

Ee taayi madilalle maguvaagi iruve,

Kanakanadalli, paripariyalli,

Santosha kandenu, endu endu, ade nanna punya ||


ಚಿತ್ರಗೀತೆ


ಈ ದೇಶ ಚೆನ್ನ, ಈ ಮಣ್ಣು ಚಿನ್ನ, ಎಲ್ಲೂ ನಾ ಕಾಣೆನಲ್ಲ,

ಇಂಥ ಅಂದ, ಇಂಥ ಚೆಂದ, ನಮ್ಮ ನಾಡಿಗೆ ಸಾಟಿ ಇಲ್ಲ ।।ಪ।।


ಕರ್ನಾಟ ಕಾವೇರಿ ತಾಯಾಗಿ ಬಂದು,

ನಮ್ಮಾಸೆ ಕೈಗೂಡೊ ವರದಾನ ತಂದೂ,

ಹಸಿಹಸಿರಲ್ಲಿ, ಹನಿಹನಿಯಲ್ಲಿ,

ಆನಂದ ತಂದೇನು, ಎಂದು ಎಂದು, ಎನೆ ನಾನೇ ಧನ್ಯ ।।೧।।


ಈ ಜನ್ಮ ನೂರಾರು ನಾ ತಾಳಿ ಬರುವೆ,

ಈ ತಾಯಿ ಮಡಿಲಲ್ಲೇ ಮಗುವಾಗಿ ಇರುವೆ,

ಕಣಕಣದಲ್ಲಿ, ಪರಿಪರಿಯಲ್ಲಿ,

ಸಂತೋಷ ಕಂಡೇನು, ಎಂದು ಎಂದು, ಅದೇ ನನ್ನ ಪುಣ್ಯ ।।೨।।

                                     

Beladide Noda Bengaluru Nagara (ಬೆಳದಿದೆ ನೋಡ ಬೆಂಗಳೂರು ನಗರ)

Movie: Namma Ooru (1968)

Singer: P B Srinivas

Song link: Click Here


Gangadhara, Gowrivara..

Basavana gudiya basaveshwara..

Bengalurina hiri shilpi, kempayya gowda...||


Beladide noda bengaluru nagara,

Samskruti kalegala hemmeya nagara,

Kannige kaanuva andada soudha,

Kannada naadina vidhana soudha ||


Vidya shaleya keertiya gopura,

Kaigarikegala vyapaka nagara,

Kannada henngala savigaanadali,

Sundara totada madilalli ||


Pravasi janagala mohaka nagara,

Kannada kavigala mecchina nagara,

Bharata maateya makutadali,

Belaguva ratnada teradalli ||


Bengaluru kannadigara kaigannadi,

Idu ninnadendu hemme padu nee nodi ||


ಚಿತ್ರಗೀತೆ 


ಗಂಗಾಧರಾ .. ಗೌರೀವರಾ..

ಬಸವನ ಗುಡಿಯ ಬಸವೇಶ್ವರಾ..

ಬೆಂಗಳೂರಿನ ಹಿರಿ ಶಿಲ್ಪಿ, ಕೆಂಪಯ್ಯ ಗೌಡ .. ।।


ಬೆಳದಿದೆ ನೋಡ ಬೆಂಗಳೂರು ನಗರ,

ಸಂಸ್ಕೃತಿ ಕಲೆಗಳ ಹೆಮ್ಮೆಯ ನಗರ,

ಕಣ್ಣಿಗೆ ಕಾಣುವ ಅಂದದ ಸೌಧ,

ಕನ್ನಡ ನಾಡಿನ ವಿಧಾನ ಸೌಧ ।।ಪ।।


ವಿದ್ಯಾ ಶಾಲೆಯ ಕೀರ್ತಿಯ ಗೋಪುರ,

ಕೈಗಾರಿಕೆಗಳ ವ್ಯಾಪಕ ನಗರ,

ಕನ್ನಡ ಹೆಣ್ಗಳ ಸವಿಗಾನದಲಿ,

ಸುಂದರ ತೋಟದ ಮಡಿಲಲ್ಲಿ ।।೧।।


ಪ್ರವಾಸಿ ಜನಗಳ ಮೋಹಕ ನಗರ,

ಕನ್ನಡ ಕವಿಗಳ ಮೆಚ್ಚಿನ ನಗರ,

ಭಾರತ ಮಾತೆಯ ಮಕುಟದಲಿ,

ಬೆಳಗುವ ರತ್ನದ ತೆರದಲ್ಲಿ  ।।೨।।


ಬೆಂಗಳೂರು ಕನ್ನಡಿಗರ ಕೈಗನ್ನಡಿ,

ಇದು ನಿನ್ನದೆಂದು ಹೆಮ್ಮೆ ಪಡು ನೀ ನೋಡಿ ।।

                              

Dooradinda Bandavare (ದೂರದಿಂದ ಬಂದವರೆ)

Movie: Taayi Karulu (1962)

Singer: L R Eshwari

Song link: Click Here


Dooradinda bandavare, baagilali nindavare,

Mandiravu chennideye, aaramavagideye ||


Yavudu ellide, embuda tiliyade,

Yochisabedi baruvenu ododi,

Kavite illihalu, kalegaati edurihalu,

Gaanakogile, illi avitukondiruvalu ||


Nimma kandu obbaru hosabarendu nacharu,

Kareyade baruvaru, nimmodanaduvaru,

Neevilli baruva modalu, ivarenna gelatiyaru,

Neevu bandodanivaru, aagiharu savatiyaru ||


ಚಿತ್ರಗೀತೆ 


ದೂರದಿಂದ ಬಂದವರೆ, ಬಾಗಿಲಲಿ ನಿಂದವರೆ,

ಮಂದಿರವು ಚೆನ್ನಿದೆಯೇ, ಆರಾಮವಾಗಿದೆಯೆ ।।ಪ।।


ಯಾವುದು ಎಲ್ಲಿದೆ, ಎಂಬುದ ತಿಳಿಯದೆ,

ಯೋಚಿಸಬೇಡಿ ಬರುವೆನು ಓಡೋಡಿ,

ಕವಿತೆ ಇಲ್ಲಿಹಳು, ಕಲೆಗಾತಿ ಎದುರಿಹಳು,

ಗಾನಕೋಗಿಲೆ, ಇಲ್ಲಿ ಅವಿತುಕೊಂಡಿರುವಳು ।।೧।।


ನಿಮ್ಮ ಕಂಡು ಒಬ್ಬರೂ ಹೊಸಬರೆಂದು ನಾಚರು,

ಕರೆಯದೆ ಬರುವರು, ನಿಮ್ಮೊಡನಾಡುವರು,

ನೀವಿಲ್ಲಿ ಬರುವ ಮೊದಲು, ಇವರೆನ್ನ ಗೆಳತಿಯರು,

ನೀವು ಬಂದೊಡನಿವರು, ಆಗಿಹರು ಸವತಿಯರು ।।೨।।