Sunday, May 31, 2026

Nenapagi Baradiru (ನೆನಪಾಗಿ ಬಾರದಿರು)

Bhavageete

Sahitya: K S Nisar Ahmed

Song link: Click Here


Nenapagi baradiru mannugudida olave,

Endo nalisida nageya sanchinalli,

Hosa baduka kalegolisalendu na henagiruve,

Holegedisadiru kambaniya kunchadalli ||


Nageya dalagalu uduri baridaada tuti hoovu,

Battagannina sutta kappu moda,

Hrudayadola novugala birisuvare maremaatu,

Mayda gayava matte geechabeda ||


Bhavitavya dosageyali saalagi irisadiru,

Andendo mugidiruva deepagalanu,

Chendada roopagala ondonde tandesedu,

Manadalli bittadiru taapagalanu ||


ಭಾವಗೀತೆ 


ನೆನಪಾಗಿ ಬಾರದಿರು ಮಣ್ಣುಗೂಡಿದ ಒಲವೇ,

ಎಂದೊ ನಲಿಸಿದ ನಗೆಯ ಸಂಚಿನಲ್ಲಿ,

ಹೊಸ ಬದುಕ ಕಲೆಗೊಳಿಸಲೆಂದು ನಾ ಹೆಣಗಿರುವೆ,

ಹೊಲೆಗೆಡಿಸದಿರು ಕಂಬನಿಯ ಕುಂಚದಲ್ಲಿ ।।ಪ।।


ನಗೆಯ ದಳಗಳು ಉದುರಿ ಬರಿದಾದ ತುಟಿ ಹೂವು,

ಬಟ್ಟಗಣ್ಣಿನ ಸುತ್ತ ಕಪ್ಪು ಮೋಡ,

ಹೃದಯದೊಳ ನೋವುಗಳ ಬಿರಿಸುವರೆ ಮರೆಮಾತು,

ಮಾಯ್ದ ಗಾಯವ ಮತ್ತೆ ಗೀಚಬೇಡ ।।೧।।


ಭವಿತವ್ಯದೊಸಗೆಯಲಿ ಸಾಲಾಗಿ ಇರಿಸದಿರು,

ಅಂದೆಂದೊ ಮುಗಿದಿರುವ ದೀಪಗಳನು,

ಚೆಂದಾದ ರೂಪಗಳ ಒಂದೊಂದೆ ತಂದೆಸೆದು,

ಮನದಲ್ಲಿ ಬಿತ್ತದಿರು ತಾಪಗಳನು ।।೨।।

Antu Intu Preeti Bantu (ಅಂತು ಇಂತು ಪ್ರೀತಿ ಬಂತು)

Movie: Milana (2007)

Singers: Udit Narayan, Chitra

Song link: Click Here


Antu intu preeti bantu, indu naviraada male billinante,

Antu intu preeti bantu, ondu sogasaada savi sollinante,

Mana sote, manasaare, nanna hosa loka ninnalli eega,

Mana tumbi, mana sure, sari mundenu nee helu bega,

Antu int, ahah..!

Preeti bantu, ondu sogasaada savi sollinante ||

PaPPa PaDaGaMa RiSaRiSa RiSaRiMa, PaPPa PaDaPaMaRiSa !


Kaanada nadalli kelada ooralli, kai hididu hogona kaledu,

Naa ninnannu, nee nannannu, hudukona khushiyalli aledu,

Iddadaga sangaata, muddada sangeeta, inyava dani keladalla,

Nammolavali, navibbare, jagadalli beraru illa ||

PaPaPa, PaPaPa, PaPaSaDaPa MaGaMaPa !


Nee kaige sikkaga, kannalle nakkaga, hrudaya hoo biduva kaala,

Sulivillade, sulidaatuta, sere hidiyuva moha jaala,

Nodutta dangaagi, unmatta gungaagi,

Dayavittu nee nanna kaadu,

Ninnusirale naa keluve, nannedeya impaada haadu ||


ಚಿತ್ರಗೀತೆ 


ಅಂತು ಇಂತು, ಪ್ರೀತಿ ಬಂತು, ಇಂದು ನವಿರಾದ ಮಳೆ ಬಿಲ್ಲಿನಂತೆ,

ಅಂತು ಇಂತು, ಪ್ರೀತಿ ಬಂತು, ಒಂದು ಸೊಗಸಾದ ಸವಿ ಸೊಲ್ಲಿನಂತೆ,

ಮನ ಸೋತೆ, ಮನಸಾರೆ, ನನ್ನ ಹೊಸ ಲೋಕ ನಿನ್ನಲ್ಲಿ ಈಗ,

ಮನ ತುಂಬಿ, ಮನ ಸೂರೆ, ಸರಿ ಮುಂದೇನು ನೀ ಹೇಳು ಬೇಗ,

ಅಂತು ಇಂತು, ಅಹ್ಹ..!

ಪ್ರೀತಿ ಬಂತು, ಒಂದು ಸೊಗಸಾದ ಸವಿ ಸೊಲ್ಲಿನಂತೆ ।।ಪ।।

ಪಪ್ಪಪದಗಮ ರಿಸರಿಸ ರಿಸರಿಮ, ಪಪ್ಪ ಪದಪಮರಿಸ !


ಕಾಣದ ನಾಡಲ್ಲಿ ಕೇಳದ ಊರಲ್ಲಿ, ಕೈ ಹಿಡಿದು ಹೋಗೋಣ ಕಳೆದು,

ನಾ ನಿನ್ನನು, ನೀ ನನ್ನನು, ಹುಡುಕೋಣ ಖುಷಿಯಲ್ಲಿ ಅಲೆದು,

ಇದ್ದಾಗ ಸಂಗಾತ, ಮುದ್ದಾದ ಸಂಗೀತ, ಇನ್ಯಾವ ದನಿ ಕೇಳದಲ್ಲಾ,

ನಮ್ಮೋಲವಲಿ, ನಾವಿಬ್ಬರೇ, ಜಗದಲ್ಲಿ ಬೇರಾರೂ ಇಲ್ಲಾ ।।೧।।

ಪಪಪ, ಪಪಪ, ಪಪಪ , ಗಮಪ ಮದನಿಪ !


ನೀ ಕೈಗೆ ಸಿಕ್ಕಾಗ, ಕಣ್ಣಲ್ಲೆ ನಕ್ಕಾಗ, ಹೃದಯ ಹೂ ಬಿಡುವ ಕಾಲ,

ಸುಳಿವಿಲ್ಲದೆ, ಸುಳಿದಾಡುತ, ಸೆರೆ ಹಿಡಿಯುವ ಮೋಹ ಜಾಲಾ,

ನೋಡುತ್ತ ದಂಗಾಗಿ, ಉನ್ಮತ್ತ ಗುಂಗಾಗಿ, ದಯವಿಟ್ಟು ನೀ ನನ್ನ ಕಾಡು,

ನಿನ್ನುಸಿರಲೆ ನಾ ಕೇಳುವೆ, ನನ್ನೆದೆಯ ಇಂಪಾದ ಹಾಡು ।।೨।।

Saturday, May 30, 2026

Aha Entha Aa Kshana (ಆಹಾ ಎಂಥಾ ಆ ಕ್ಷಣ)

Movie: Aakash (2005)

Singer: K S Chitra

Song link: Click Here


Tadarena Tana Dheemtana (2),

Dheemta Dheemta Derena,

Tadaredani Dheemta Dheemta Derena !


Aha entha aa kshana, nenedare tallana,

Tannantane edeyali, preetiya nartana,

Idu yaavaga hegaito yaake anta, gotte aagalilla,

Ee preetili eninta maayamantra, ondu tiliyalilla ||


Kangala maatige, tutigalu mounavu,

Hrudayavu beretare, ulidavu gounavu,

Nenneyavaregu na hego idde, na bere nee bere antidde,

Nepa matrake eradu deha ide, adarolagiro pranavu onde,

Ee pranane ninagaagi meesaliduve, baaro nanna geleya,

Ninna preetige elelu janmadallu, mudipu nanna hrudaya ||


Nadigalu odive, kadalanu seralu,

Chaitrava kaadide, hoogalu aralalu,

Sangeeta sahitya ondaadante, halalli beretiruva jenante,

Sujiya hindiruva daaradante,

Na baruve jotheyaagi neralante,

Ee preetiyu ee namma baalinalli, endu heege irali,

Ninna preetine nannedeya jyothiyagi, endu belagutitali ||


ಚಿತ್ರಗೀತೆ 


ತದರೆನಾ ತನ ಧೀ೦ತನ (೨),

ಧೀ೦ತ ಧೀ೦ತ ದೆರೆನಾ, 

ತದೆರೆನನಿ ಧೀ೦ತ ಧೀ೦ತ ದೆರೆನಾ !


ಆಹಾ ಎಂಥಾ ಆ ಕ್ಷಣ, ನೆನೆದರೆ ತಲ್ಲಣ,

ತನ್ನಂತಾನೆ ಎದೆಯಲಿ, ಪ್ರೀತಿಯ ನರ್ತನ,

ಇದು  ಯಾವಾಗ ಹೇಗಾಯ್ತೋ ಯಾಕೆ ಅಂತ, ಗೊತ್ತೆ ಆಗಲಿಲ್ಲ,

ಈ ಪ್ರೀತೀಲಿ ಏನಿಂತ ಮಾಯ ಮಂತ್ರ, ಒಂದು ತಿಳಿಯಲಿಲ್ಲ ।।ಪ।।


ಕಂಗಳ ಮಾತಿಗೆ, ತುಟಿಗಳು ಮೌನವು,

ಹೃದಯವು ಬೆರೆತರೆ, ಉಳಿದವು ಗೌಣವು,

ನೆನ್ನೆಯವರೆಗೂ ನಾ ಹೇಗೋ ಇದ್ದೆ, ನಾ ಬೇರೆ ನೀ ಬೇರೆ ಅಂತಿದ್ದೆ,

ನೆಪ ಮಾತ್ರಕೆ ಎರಡು ದೇಹ ಇದೆ ಅದರೊಳಗಿರೊ ಪ್ರಾಣವು ಒಂದೇ,

ಈ ಪ್ರಾಣನೆ ನಿನಗಾಗಿ ಮೀಸಲಿಡುವೆ, ಬಾರೋ ನನ್ನ ಗೆಳೆಯ,

ನಿನ್ನ ಪ್ರೀತಿಗೆ ಏಳೇಳು ಜನ್ಮದಲ್ಲೂ, ಮುಡಿಪು ನನ್ನ ಹೃದಯ ।।೧।।


ನದಿಗಳು ಓಡಿವೆ, ಕಡಲನೂ ಸೇರಲು,

ಚೈತ್ರವಾ ಕಾದಿದೆ, ಹೂಗಳು ಅರಳಲು,

ಸಂಗೀತ ಸಾಹಿತ್ಯ ಒಂದಾದಂತೆ, ಹಾಲಲ್ಲಿ ಬೆರೆತಿರುವ ಜೇನಂತೆ,

ಸೂಜಿಯ ಹಿಂದಿರುವ ದಾರದಂತೆ, ನಾ ಬರುವೆ ಜೊತೆಯಾಗಿ ನೆರಳಂತೆ,

ಈ ಪ್ರೀತಿಯು ಈ ನಮ್ಮ ಬಾಳಿನಲ್ಲಿ, ಎಂದೂ ಹೀಗೆ ಇರಲಿ,

ನಿನ್ನ ಪ್ರೀತಿನೆ ನನ್ನೆದೆಯ ಜ್ಯೋತಿಯಾಗಿ, ಎಂದು ಬೆಳಗುತಿರಲಿ 

।।೨।।

Ambaraveri Ambaraveri (ಅಂಬರವೇರಿ ಅಂಬರವೇರಿ)

Movie: Rasika (1994)

Singer: SPB

Song link: Click Here


Ambaraveri ambaraveri suryanu bandaano,

Thala, thala, thala,  jaga thala, thala,

Phala, phala, phala, jaga phala, phala,

O..o..o..o..o !


Bisiyaytu giriya maiyi, chrukaytu giliya kaiyi,

Eli mele eli, chilipili keli, enda raviraayanu,

Maragidada taleya oresi, hima bidda nelava gudisi,

Aaha holagadde, innu entha nidde, enda dinarayanu,

Raviraya ninna mane kaaya, biduvendo ninage maharaaya,

Dhaga dhaga, uriyuve, jhuga jhuga, belaguve, neenu barade

 dinavilla ||


Cheluvera hindinalli, hora baruva naguvinante,

Kila kila kila, gusa gusa gusa, lallelive hoogalu,

Munjaane neerinalli, mulugedda henna mayli,

Ninta neerinante, jaaro muttinante, nendadive kangalu,

Hennirada bhumi nangeke, o..o hennirada swarga nangeke,

Rasikana, baalige, cheluveye, holige, endanobba maha rasika ||


Lalla lalla laala, Lalla lalla laala, Lalla lalla lalla lalla laala,

Hah hah haa ha, Hah hah haa ha, Hah hah hah hah haa !



ಚಿತ್ರಗೀತೆ 


ಅಂಬರವೇರಿ ಅಂಬರವೇರಿ ಸೂರ್ಯನು ಬಂದಾನೊ,

ಥಳ  ಥಳ ಥಳ, ಜಗ ಥಳ ಥಳ,

ಫಳ ಫಳ ಫಳ, ಜಗ ಫಳ ಫಳ,

ಓ ..ಓ ..ಓ..ಓ !


ಬಿಸಿಯಾಯ್ತು ಗಿರಿಯ ಮೈಯಿ, ಚುರುಕಾಯ್ತು ಗಿಳಿಯ ಕೈಯಿ,

ಏಳಿ ಮೇಲೆ ಏಳಿ, ಚಿಲಿಪಿಲಿ ಕೇಳಿ, ಎಂದ ರವಿರಾಯನು,

ಮರಗಿಡದ ತಲೆಯ ಒರೆಸಿ, ಹಿಮ ಬಿದ್ದ ನೆಲವ ಗುಡಿಸಿ,

ಆಹಾ ಹೊಲಗದ್ದೆ, ಇನ್ನೂ ಎಂಥ ನಿದ್ದೆ, ಎಂದ ದಿನರಾಯನು,

ರವಿರಾಯ ನಿನ್ನ ಮನೆ ಕಾಯ, ಬಿಡುವೆಂದೋ ನಿನಗೆ ಮಹರಾಯ,

ಧಗ ಧಗ, ಉರಿಯುವೆ, ಝಗ ಝಗ, ಬೆಳಗುವೆ, ನೀನು ಬರದೇ ದಿನವಿಲ್ಲ  ।।೧।।


ಚೆಲುವೇರ ಹಿಂಡಿನಲ್ಲಿ, ಹೊರ ಬರುವ ನಗುವಿನಂತೆ,

ಕಿಲ ಕಿಲ ಕಿಲ, ಗುಸ ಗುಸ ಗುಸ, ಲಲ್ಲೇಲಿವೆ ಹೂಗಳು,

ಮುಂಜಾನೆ ನೀರಿನಂತೆ, ಮುಳುಗೆದ್ದ ಹೆಣ್ಣ ಮೈಯ್ಲಿ,

ನಿಂತ ನೀರಿನಂತೆ, ಜಾರೊ ಮುತ್ತಿನಂತೆ, ನೆಂದಾಡಿವೆ ಕಣ್ಗಳು,

ಹೆಣ್ಣಿರದ ಭೂಮಿ ನಂಗೇಕೆ, ಓ ..ಓ, ಹೆಣ್ಣಿರದ ಸ್ವರ್ಗ ನಂಗೇಕೆ,

ರಸಿಕನ, ಬಾಳಿಗೆ, ಚೆಲುವೆಯೇ, ಹೋಳಿಗೆ, ಎಂದನೊಬ್ಬ 

ಮಹಾ ರಸಿಕ ।।೨।।


ಲಲ್ಲಲಲ್ಲಲಾಲ  ಲಲ್ಲಲಲ್ಲಲಾ, ಲಲ್ಲಲಲ್ಲ ಲಲ್ಲಲಲ್ಲಲಾ,

ಹಹ್ಹಹಹ್ಹಹಾಹ  ಹಹ್ಹಹಹ್ಹಹಾ, ಹಹ್ಹಹಹ್ಹ ಹಹ್ಹಹಹ್ಹಹಾ !

Thursday, May 28, 2026

O Mallige Ninnondige (ಓ ಮಲ್ಲಿಗೆ ನಿನ್ನೊಂದಿಗೆ)

Movie: Anuraaga Sangama (1995)

Singer: Ramesh Chandra

Song link: Click Here


O mallige, ninnondige, nanillave, sada sada sada,

Ee kangalu, manjadare, na taalenu, bhaya bidu sada,

Ninna novu nanagirali, nemmadi savi ninagirali,

Sada kaayuve..||


Hodorella olleyavaru, haraso hiriyaru,

Avara saviya nenapu naave, ulida kiriyaru,

Ninna kuda nerala haage,

Iruve naanu, endu heege, ontiyalla nee ||


Naale namma munde ihudu, daari kaayuta,

Dukha novu endu jothege, iradu shashwata,

Bharavaseya belli belaku, huduki munde saagabeku,

Dhairya taaluta ||


ಚಿತ್ರಗೀತೆ 


ಓ ಮಲ್ಲಿಗೆ, ನಿನ್ನೊಂದಿಗೆ, ನಾನಿಲ್ಲವೆ, ಸದಾ  ಸದಾ ಸದಾ,

ಈ ಕಂಗಳು, ಮಂಜಾದರೆ, ನಾ ತಾಳೆನು, ಭಯ ಬಿಡು ಸದಾ,

ನಿನ್ನ ನೋವು ನನಗಿರಲಿ, ನೆಮ್ಮದಿ ಸವಿ ನಿನಗಿರಲಿ,

ಸದಾ ಕಾಯುವೆ ।।ಪ।।


ಹೋದೋರೆಲ್ಲ ಒಳ್ಳೆಯವರು, ಹರಸೊ ಹಿರಿಯರೂ,

ಅವರ ಸವಿಯ ನೆನಪು ನಾವೆ, ಉಳಿದ ಕಿರಿಯರೂ,

ನಿನ್ನ ಕೂಡ ನೆರಳ ಹಾಗೆ,

ಇರುವೆ ನಾನು, ಎಂದೂ ಹೀಗೆ, ಒಂಟಿಯಲ್ಲ ನೀ ।।೧।।


ನಾಳೆ ನಮ್ಮ ಮುಂದೆ ಇಹುದು, ದಾರಿ ಕಾಯುತಾ,

ದುಃಖ ನೋವು ಎಂದೂ ಜೊತೆಗೆ, ಇರದು ಶಾಶ್ವತ,

ಭರವಸೆಯ ಬೆಳ್ಳಿ ಬೆಳಕು, ಹುಡುಕಿ ಮುಂದೆ ಸಾಗಬೇಕು,

ಧೈರ್ಯ ತಾಳುತ ।।೨।।

Nooru Kannu Saaladu (ನೂರು ಕಣ್ಣು ಸಾಲದು)

Movie: Raja Nanna Raja (1976)

Singers: Dr. Rajkumar, P B Srinivas

Song link: Click Here


Nooru kannu saaladu..!

Nooru kannu saaladu, ninna nodalu,

Nooraru maatu saaladu, ee anda bannisalu,

Nooru kannu saaladu na ninna nodalu,

Nooraru maatu saaladu, ee anda bannisalu,

Nooru kannu saaladu ||


Yaara kanasa kanyeyo, shrungara kavyavo,

Ee holeva kanna nota, mungurula tuguvaata,

Ee cheluva maiya maata,

Bangaarada singari kandu mookanadenu,

Januma janumadallu, nee nannavalene,

Nooru varushavagali mareyalarenu,

Endendu ninna agali naa doora hogenu,

Nooru varushavagali ||


Januma janumadallu nee nannavalene,

Ee nova tiliyalaare,

Nee nanna ariyalaare, neenirade balalaare,

Nanellirali, neene nanna, jeevada jeeva,

Nooru varushavagali mareyalarenu,

Endendu ninna agali, naa doora hogenu,

Nooru varushavagali ||


ಚಿತ್ರಗೀತೆ 


ನೂರು ಕಣ್ಣು ಸಾಲದು ..!

ನೂರು ಕಣ್ಣು ಸಾಲದು, ನಿನ್ನ ನೋಡಲು, 

ನೂರಾರು ಮಾತು ಸಾಲದು, ಈ ಅಂದ ಬಣ್ಣಿಸಲು, 

ನೂರು ಕಣ್ಣು ಸಾಲದು ನಾ ನಿನ್ನ ನೋಡಲು, 

ನೂರಾರು ಮಾತು ಸಾಲದು, ಈ ಅಂದ ಬಣ್ಣಿಸಲು,

ನೂರು ಕಣ್ಣು ಸಾಲದು ।।ಪ।।


ಯಾರ ಕನಸ ಕನ್ಯೆಯೂ, ಶೃಂಗಾರ ಕಾವ್ಯವೊ,

ಈ ಹೊಳೆವ ಕಣ್ಣ ನೋಟ, ಮುಂಗುರುಳ ತೂಗುವಾಟ,

ಈ ಚೆಲುವ ಮೈಯ ಮಾಟ,

ಬಂಗಾರದ ಸಿಂಗಾರಿ ಕಂಡು ಮೂಕನಾದೆನು,

ಜನುಮ ಜನುಮದಲ್ಲು, ನೀ ನನ್ನವಳೇನೇ,

ನೂರು ವರುಷವಾಗಲಿ ಮರೆಯಲಾರೆನು,

ಎಂದೆಂದು ನಿನ್ನ ಆಗಲಿ ನಾ ದೂರ ಹೋಗೆನು,

ನೂರು ವರುಷವಾಗಲಿ ।।೧।।


ಜನುಮ ಜನುಮದಲ್ಲು ನೀ ನನ್ನವಳೇನೇ,

ಈ ನೋವ ತಿಳಿಯಲಾರೆ,

ನೀ ನನ್ನ ಅರಿಯಲಾರೆ, ನೀನಿರದೆ ಬಾಳಲಾರೆ,

ನಾನೆಲ್ಲಿರಲಿ ನೀನೇ ನನ್ನ ಜೀವದ ಜೀವ,

ನೂರು ವರುಷವಾಗಲಿ, ಮರೆಯಲಾರೆನು,

ಎಂದೆಂದು ನಿನ್ನ ಆಗಲಿ, ನಾ ದೂರ ಹೋಗೆನು,

ನೂರು ವರುಷವಾಗಲಿ ।।೨।।

Monday, May 25, 2026

Janma Needida Bhu Taayiya (ಜನ್ಮ ನೀಡಿದ ಭೂ ತಾಯಿಯ)

Movie: Paduvarahalli Pandavaru (1978)

Singer: SPB

Song link: Click Here


Janma needida bhu taayiya, naa hege taane toreyali,

Anna needida ee mannanu, naa hege taane mareyali ||


Ee gaali ee neeru, nanna odalu,

Ee beedi ee maneye, nanna tottilu,

Ee maacha ee kencha, ella hesaru,

Endendu nannedeya hacchaneya hasiru ||


Ee gouri ee gange, haala kudide

Ododi nalide, urella kunide,

Kalavva, subbavva, nanna ettadi

Harasida taayiyara hege mareyali ||


Ee jeeva ee deha, aredu aredu,

Hosa aase hosa haadi, kanasendu tilidu,

Banatta, bhuviyatta, pecchagi noduva,

Panjarada hakkigala hege mareyali ||


ಚಿತ್ರಗೀತೆ 


ಜನ್ಮ ನೀಡಿದ ಭೂ ತಾಯಿಯ, ನಾ ಹೇಗೆ ತಾನೆ ತೊರೆಯಲಿ,

ಅನ್ನ ನೀಡಿದ ಈ ಮಣ್ಣನು, ನಾ ಹೇಗೆ ತಾನೆ ಮರೆಯಲಿ ।।ಪ।।


ಈ ಗಾಳಿ ಈ ನೀರು, ನನ್ನ ಒಡಲು,

ಈ ಬೀದಿ ಈ ಮನೆಯೇ, ನನ್ನ ತೊಟ್ಟಿಲು,

ಈ ಮಾಚ ಈ ಕೆಂಚ, ಎಲ್ಲಾ ಹೆಸರು,

ಎಂದೆಂದೂ ನನ್ನೆದೆಯ ಹಚ್ಚನೆಯಾ ಹಸಿರು ।।೧।।


ಈ ಗೌರಿ ಈ ಗಂಗೆ, ಹಾಲ ಕುಡಿದೆ,

ಓಡೋಡಿ ನಲಿದೆ, ಊರೆಲ್ಲಾ ಕುಣಿದೆ,

ಕಾಳವ್ವ, ಸುಬ್ಬವ್ವ, ನನ್ನ ಎತ್ತಾಡಿ,

ಹರಸಿದ ತಾಯಿಯರ ಹೇಗೆ ಮರೆಯಲಿ ।।೨।।


ಈ ಜೀವ ಈ ದೇಹ, ಅರೆದು ಅರೆದು,

ಹೊಸ ಆಸೆ ಹೊಸ ಹಾದಿ, ಕನಸೆಂದು ತಿಳಿದು,

ಬಾನತ್ತ, ಭುವಿಯತ್ತ, ಪೆಚ್ಚಾಗಿ ನೋಡುವ,

ಪಂಜರದ ಹಕ್ಕಿಗಳ ಹೇಗೆ ಮರೆಯಲಿ ।।೩।।

Aasegale Hakkigalagi (ಆಸೆಗಳೇ ಹಕ್ಕಿಗಳಾಗಿ)

Movie: Simha Jodi (1980)

Singers: SPB, S Janaki

Song link: Click Here


Aasegale hakkigalagi, kanasugala aagasakkeri,

Belli modadaacheyali, sanjegempina ranginali,

Nutana premalokadali, olavina geete haadirali ||


Maamarada hondalire shubha torana,

Kogileya ini swarave aamantrana,

Hombaale totadali madhu mantapa,

Premigala madhu milana rasa mantapa,

Manasondaadare, kanasondaadare sundara aa baduku,

Ravi neenadare, bhuvi naanadare, baalige nee belaku ||


Bhudevi hasiruttu nage susalu,

Vasanti namagendu hoo chellalu,

Vanarani kai beesi kare needalu,

Tangaali hitavagi taa beesalu,

Jagava maretu, nammali beretu, mereva haayagi,

Yuga yugavella, heege kaleva, baalali ondaagi ||


ಚಿತ್ರಗೀತೆ 


ಆಸೆಗಳೇ ಹಕ್ಕಿಗಳಾಗಿ, ಕನಸುಗಳ ಆಗಸಕ್ಕೇರಿ,

ಬೆಳ್ಳಿ ಮೋಡದಾಚೆಯಲಿ, ಸಂಜೆಗೆಂಪಿನ ರಂಗಿನಲಿ,

ನೂತನ ಪ್ರೇಮಲೋಕದಲಿ, ಒಲವಿನ ಗೀತೆ ಹಾಡಿರಲಿ ।।ಪ।।


ಮಾಮರದ ಹೊಂದಲಳಿರೆ ಶುಭ ತೋರಣ,

ಕೋಗಿಲೆಯ ಇನಿ ಸ್ವರವೆ ಆಮಂತ್ರಣ,

ಹೊಂಬಾಳೆ ತೋಟದಲಿ ಮಧು ಮಂಟಪ,

ಪ್ರೇಮಿಗಳ ಮಧು ಮಿಲನ ರಸ ಮಂಟಪ,

ಮನಸೊಂದಾದರೆ, ಕನಸೊಂದಾದರೆ ಸುಂದರ ಆ ಬದುಕು,

ರವಿ ನೀನಾದರೆ, ಭುವಿ ನಾನಾದರೆ, ಬಾಳಿಗೆ ನೀ ಬೆಳಕು ।।೧।।


ಭೂದೇವಿ ಹಸಿರುಟ್ಟು ನಗೆ ಸೂಸಲು,

ವಾಸಂತಿ ನಮಗೆಂದು ಹೂ ಚೆಲ್ಲಲು,

ವನರಾಣಿ ಕೈ ಬೀಸಿ ಕರೆ ನೀಡಲು,

ತಂಗಾಳಿ ಹಿತವಾಗಿ ತಾ ಬೀಸಲು,

ಜಗವ ಮರೆತು, ನಮ್ಮಲಿ ಬೆರೆತು, ಮೆರೆವ ಹಾಯಾಗಿ,

ಯುಗ ಯುಗವೆಲ್ಲ, ಹೀಗೆ ಕಳೆವ, ಬಾಳಲಿ ಒಂದಾಗಿ ।।೨।।

Annaya Annaya Baaro (ಅಣ್ಣಯ್ಯ ಅಣ್ಣಯ್ಯ ಬಾರೋ)

Movie: Annayya (1993)

Singer: S Janaki

Song link:  Click Here


Annaya annaya baaro, ammana madila sero,

Jogula haaduve, jogula haaduve,

Hasuvigu karuvigu mooka nantide,

Ammanigu kandanigu laali nantide ||


O., maguve, nee nanna jeevana, naa ninna gayana,

Roopavu bere, naamavu bere, usironde, usironde,

Amma nanagella iddaru, neenene devaru !


O., amma naa ninna kugide, nee nanna seride,

Guruvu neene, gurukula neene, ninnane paalisuve,

Kanda nee nanna bhagyavo, purvada punyavo,

Ammaya ammaya baare, akkare sakkare taare,

Jogula keluve, niddeya maaduve !



ಚಿತ್ರಗೀತೆ 


ಅಣ್ಣಯ್ಯ ಅಣ್ಣಯ್ಯ ಬಾರೋ, ಅಮ್ಮನ ಮಡಿಲ ಸೇರೋ,

ಜೋಗುಳ ಹಾಡುವೆ, ಜೋಗುಳ ಹಾಡುವೆ,

ಹಸುವಿಗೂ ಕರುವಿಗೂ ಮೂಕ ನಂಟಿದೆ,

ಅಮ್ಮನಿಗೂ ಕಂದನಿಗೂ ಲಾಲಿ ನಂಟಿದೆ ।।ಪ।।


ಓ ..ಮಗುವೆ, ನೀ ನನ್ನ ಜೀವನ, ನಾ ನಿನ್ನ ಗಾಯನ,

ರೂಪವು ಬೇರೆ, ನಾಮವು ಬೇರೆ, ಉಸಿರೊಂದೇ, ಉಸಿರೊಂದೇ,

ಅಮ್ಮಾ ನನಗೆಲ್ಲ ಇದ್ದರೂ, ನೀನೇನೆ ದೇವರು !


ಓ .. ಅಮ್ಮಾ ನಾ ನಿನ್ನ ಕೂಗಿದೆ, ನೀ ನನ್ನ ಸೇರಿದೆ,

ಗುರುವು ನೀನೇ, ಗುರುಕುಲ ನೀನೇ, ನಿನ್ನಾಣೆ ಪಾಲಿಸುವೆ,

ಕಂದಾ ನೀ ನನ್ನ ಭಾಗ್ಯವೋ, ಪೂರ್ವದ ಪುಣ್ಯವೋ,

ಅಮ್ಮಯ್ಯ ಅಮ್ಮಯ್ಯ ಬಾರೆ, ಅಕ್ಕರೆ ಸಕ್ಕರೆ ತಾರೆ,

ಜೋಗುಳ ಕೇಳುವೆ, ನಿದ್ದೆಯ ಮಾಡುವೆ !

Friday, May 22, 2026

Hotti Urida Hiriyaase (ಹೊತ್ತಿ ಉರಿದ ಹಿರಿಯಾಸೆ)

Bhavageete

Sahitya: K S Nisar Ahmed

Song link: Click Here


Hotti urida hiriyaase nandito hanate hidida deena,

Sangavirade kangedutaliruve, nade huduki nijada taana ||


Sanda baalinaanandavelli? aa andachendavelli?

Biride biriyutive aho ratrigala mogge! gandhavelli?


Jeeva jeeva katarisutihavu olagolage nova tindu,

Aramaneyanulidu seremaneya mecchi nadedavana milanakendu ||


Jyothiyaagi prajwalisutihudu taanondanaadi preeti,

Salahalendu manu kulava nonutide mareya deva jaati ||


Nambi elu, maidumbi elu, aa tumbu baaligali,

Konegomme karedu kambaniyaneradu ninnedeya beeligagi ||


ಭಾವಗೀತೆ 


ಹೊತ್ತಿ ಉರಿದ ಹಿರಿಯಾಸೆ ನಂದಿತೋ ಹಣತೆ ಹಿಡಿದ ದೀನ,

ಸಂಗವಿರದೆ ಕಂಗೆಡುತಲಿರುವೆ, ನಡೆ ಹುಡುಕಿ ನಿಜದ ತಾಣ 

।।ಪ।।


ಸಂದ ಬಾಳಿನಾನಂದವೆಲ್ಲಿ? ಆ ಅಂದಚೆಂದವೆಲ್ಲಿ?

ಬಿರಿದೆ ಬಿರಿಯುತಿವೆ ಅಹೋರಾತ್ರಿಗಳ ಮೊಗ್ಗೆ! ಗಂಧವೆಲ್ಲಿ?


ಜೀವ ಜೀವ ಕಾತರಿಸುತಿಹವು ಒಳಗೊಳಗೆ ನೋವ ತಿಂದು,

ಅರಮನೆಯನುಳಿದು ಸೆರೆಮನೆಯ ಮೆಚ್ಚಿ ನಡೆದವನ ಮಿಲನಕೆಂದು !


ಜ್ಯೋತಿಯಾಗಿ ಪ್ರಜ್ವಲಿಸುತಿಹುದು ತಾನೊಂದನಾದಿ ಪ್ರೀತಿ,

ಸಲಹಲೆಂದು ಮನು ಕುಲವ ನೋನುತಿದೆ ಮರೆಯ ದೇವ ಜಾತಿ !


ನಂಬಿ ಏಳು, ಮೈದುಂಬಿ ಏಳು, ಆ ತುಂಬು ಬಾಳಿಗಾಗಿ,

ಕೊನೆಗೊಮ್ಮೆ ಕರೆದು ಕಂಬನಿಯನೆರಡು ನಿನ್ನೆದೆಯ ಬೀಳಿಗಾಗಿ !

Hingidarondu Terevudu Chilime (ಹಿಂಗಿದರೊಂದು ತೆರೆವುದು ಚಿಲುಮೆ)

Bhavageete

Sahitya: K S Nisar Ahmed

Song link: Click Here


Hingidarondu terevudu chilume,

Tumbiye iruvudu baalina nalume,

Battidarenu taayede haalu?

Abhayava needive kecchala saalu ||


Manjiruvanteye ide hombisilu,

Suntaragaalige bettada hosilu,

Tabbali beejake mannina hodike,

Chilukagalive ee badukina kadake ||


Benkiya nungiyu nakkare ondu,

Himadali bende enuvudu ondu,

Odalali kahi vishaviddaru saayadu,

Innondamruta sokidareladu ||


Manukuladonde belakina reeti,

Aadaru vividhakarada jyothi,

Ellarigiddaru onde rakshe,

Jeeva jeevaku bereya shikshe ||


ಭಾವಗೀತೆ 


ಹಿಂಗಿದರೊಂದು ತೆರೆವುದು ಚಿಲುಮೆ,

ತುಂಬಿಯೆ ಇರುವುದು ಬಾಳಿನ ನಲುಮೆ,

ಬತ್ತಿದರೇನು ತಾಯೆದೆ ಹಾಲು ?

ಅಭಯವ ನೀಡಿವೆ ಕೆಚ್ಚಲ ಸಾಲು !


ಮಂಜಿರುವಂತೆಯೆ ಇದೆ ಹೊಂಬಿಸಿಲು,

ಸುಂಟರಗಾಳಿಗೆ ಬೆಟ್ಟದ ಹೊಸಿಲು,

ತಬ್ಬಲಿ ಬೀಜಕೆ ಮಣ್ಣಿನ ಹೊದಿಕೆ,

ಚಿಲುಕಗಳಿವೆ ಈ ಬದುಕಿನ ಕದಕೆ !


ಬೆಂಕಿಯ ನುಂಗಿಯು ನಕ್ಕರೆ ಒಂದು,

ಹಿಮದಲಿ ಬೆಂದೆ ಎನುವುದು ಒಂದು,

ಒಡಲಲಿ ಕಹಿ ವಿಷವಿದ್ದರು ಸಾಯದು,

ಇನ್ನೊಂದಮೃತ ಸೋಕಿದರೇಳದು !


ಮನುಕುಲಕೊಂದೇ ಬೆಳಕಿನ ರೀತಿ,

ಆದರು ವಿವಿಧಾಕಾರದ ಜ್ಯೋತಿ,

ಎಲ್ಲರಿಗಿದ್ದರು ಒಂದೇ  ರಕ್ಷೆ,

ಜೀವ ಜೀವಕೂ ಬೇರೆಯ ಶಿಕ್ಷೆ !

He Kavite Neenu (ಹೇ ಕವಿತೆ ನೀನೂ)

Movie: Priya (1979)

Singers: Yesudas, S Janaki

Song link: Click Here


He.. kavite neenu, raaga naanu,

Naanu neenu ondaage, ee baale, premageeteyante ||


Ninna roopa kandu, tangaali bandide,

Honna maiya soki, aananda hondide, hoi hoi,

Nannase innu teeradagi, bisi bisi bantu hogi ||


Ninna maatu keli, aa giliye nachide,

Muddu maata maretu, kallagi hogide, hoi hoi,

Ninninda preeti maatu innu, keli keli kaliva aase ||


Ninna kanda manasu, kaviyante haadide,

Ninne kanda kanasu, nanasagi hogide, hoi hoi,

Ninninda nanna yaaru innu, doora maadalararendu ||


ಚಿತ್ರಗೀತೆ 


ಹೇ ..ಕವಿತೆ ನೀನೂ, ರಾಗ ನಾನೂ,

ನಾನು ನೀನು ಒಂದಾಗೆ, ಈ ಬಾಳೇ, ಪ್ರೇಮಗೀತೆಯಂತೆ ।।ಪ।।


ನಿನ್ನ ರೂಪ ಕಂಡು, ತಂಗಾಳಿ ಬಂದಿದೆ,

ಹೊನ್ನ ಮೈಯ ಸೋಕಿ,ಆನಂದ ಹೊಂದಿದೆ, ಹೋಯ್ ಹೋಯ್,

ನನ್ನಾಸೆ ಇನ್ನು ತೀರದಾಗಿ, ಬಿಸಿ ಬಿಸಿ ಬಂತು ಹೋಗಿ ।।೧।।


ನಿನ್ನ ಮಾತೂ ಕೇಳಿ,ಆ ಗಿಳಿಯೇ ನಾಚಿದೇ,

ಮುದ್ದು ಮಾತ ಮರೆತು, ಕಲ್ಲಾಗಿ ಹೋಗಿದೇ, ಹೋಯ್ ಹೋಯ್,

ನಿನ್ನಿಂದ ಪ್ರೀತಿ ಮಾತು ಇನ್ನು, ಕೇಳಿ ಕೇಳಿ ಕಲಿವಾ ಆಸೆ ।।೨।।


ನಿನ್ನ ಕಂಡ ಮನಸು, ಕವಿಯಂತೆ ಹಾಡಿದೆ,

ನಿನ್ನ ಕಂಡ ಕನಸು, ನನಸಾಗಿ ಹೋಗಿದೆ, ಹೋಯ್ ಹೋಯ್,

ನಿನ್ನಿಂದ ನನ್ನ ಯಾರೂ ಇನ್ನು, ದೂರ ಮಾಡಲಾರರೆಂದು 

।।೩।।

Wednesday, May 20, 2026

Sri Krishnanu Olida Mahamahimaru (ಶ್ರೀ ಕೃಷ್ಣನು ಒಲಿದ ಮಹಾ ಮಹಿಮರು)

Bhaktigeete

Song link: Click Here


Sri krishnanu olida mahamahimaru, madhvacharya yativarya,

Madhva matavanu stapanegolisida, dwaita siddhantada aacharya ||


Sri raamaduta hanumantanagi, vaayudevara prathamaavatara,

Dwaparadalli pandutanaya sri, bheemasenana avatara,

Kaliyugadalli madhva rupava, padedaru moorane avataara ||


Bhrama sutrake bashyava rachisi, krishnamurthiya pratistapisi,

Ashta yatigala poojege nemisi, sancharisidaru kshetra sandarshisi ||


Paramatma, jeevaatma, bhedava torisi, vishnu sarvottama tatva nirupisi,

Maayaavadada moolava khandis,i bhakti margava torida taapasi ||


ಭಕ್ತಿಗೀತೆ 


ಶ್ರೀ ಕೃಷ್ಣನು ಒಲಿದ ಮಹಾ ಮಹಿಮರು, ಮಧ್ವಾಚಾರ್ಯ ಯತಿವರ್ಯ,

ಮಧ್ವ ಮತವನು ಸ್ಥಾಪನೆಗೊಳಿಸಿದ, ದ್ವೈತ ಸಿದ್ದಾಂತದ ಆಚಾರ್ಯ 

।।ಪ।।


ಶ್ರೀ ರಾಮದೂತ ಹನುಮಂತನಾಗಿ ವಾಯುದೇವರ ಪ್ರಥಮಾವತಾರ,

ದ್ವಾಪರದಲ್ಲಿ ಪಾಂಡುತನಯ ಶ್ರೀ, ಭೀಮಸೇನನ ಅವತಾರ,

ಕಲಿಯುಗದಲ್ಲಿ ಮಧ್ವ ರೂಪವ, ಪಡೆದರು ಮೂರನೆ ಅವತಾರ 

।।೧।।


ಬ್ರಹ್ಮ ಸೂತ್ರಕೆ ಬಾಷ್ಯವ ರಚಿಸಿ, ಕೃಷ್ಣ ಮೂರ್ತಿಯ ಪ್ರತಿಷ್ಠಾಪಿಸಿ,

ಅಷ್ಟ ಯತಿಗಳ ಪೂಜೆಗೆ ನೇಮಿಸಿ, ಸಂಚರಿಸಿದರು ಕ್ಷೇತ್ರ ಸಂದರ್ಶಿಸಿ 

।।೨।।


ಪರಮಾತ್ಮ, ಜೀವಾತ್ಮ, ಭೇದವ ತೋರಿಸಿ, ವಿಷ್ಣು ಸರ್ವೋತ್ತಮ ತತ್ವ ನಿರೂಪಿಸಿ,

ಮಾಯಾವಾದದ ಮೂಲವ ಖಂಡಿಸಿ,  ಭಕ್ತಿ ಮಾರ್ಗವ ತೋರಿದ ತಾಪಸಿ ।।೩।।

Kannada Naadina Punyavu Phalisi (ಕನ್ನಡ ನಾಡಿನ ಪುಣ್ಯವು ಫಲಿಸಿ)

Bhaktigeete

Singer: B K Sumitra

Song link: Click Here


Kannada naadina punyavu phalis,i krishnanu ninda udupiyali,

Darushanakaagi banda kanakage, krishnanu kanda kindiyali,

Sarva samaanate sakshatkarisitu, ee mannina kanakanadalli ||


Brundavanave banditu bhumige, mereyitu kannada seemeyali,

Gudiyidu gurumane, gunavantarige, nastika namisuvanilli ||


Bhakti benneya, kadeyalu hididiha, krishnanu kaiyali kadagolu,

Bhaktiyinda maibaagi maniyalu, baalidu bhagyada kadalu ||


Nandakishorana, chandava kaanalu, banniri ee yadu nandanake,

Aanandadinda, sri krishna endare, dorevudu beduva bayake ||


ಭಕ್ತಿಗೀತೆ 


ಕನ್ನಡ ನಾಡಿನ ಪುಣ್ಯವು ಫಲಿಸಿ, ಕೃಷ್ಣನು ನಿಂದಾ ಉಡುಪಿಯಲಿ,

ದರುಶನಕಾಗಿ ಬಂದಾ ಕನಕಗೆ, ಕೃಷ್ಣನು ಕಂಡಾ ಕಿಂಡಿಯಲಿ,

ಸರ್ವ ಸಮಾನತೆ ಸಾಕ್ಷಾತ್ಕಾರಿಸಿತು, ಈ ಮಣ್ಣಿನ ಕಣಕಣದಲ್ಲಿ ।।ಪ।।


ಬೃಂದಾವನವೆ ಬಂದಿತು ಭೂಮಿಗೆ, ಮೆರೆಯಿತು ಕನ್ನಡ ಸೀಮೆಯಲಿ,

ಗುಡಿಯಿದು ಗುರುಮನೆ, ಗುಣವಂತರಿಗೆ, ನಾಸ್ತಿಕ ನಮಿಸುವನಿಲ್ಲಿ

 ।।೧।।


ಭಕ್ತಿ ಬೆಣ್ಣೆಯಾ ಕಡೆಯಲು ಹಿಡಿದಿಹ, ಕೃಷ್ಣನು ಕೈಯಲಿ ಕಡಗೋಲು,

ಭಕ್ತಿಯಿಂದ ಮೈಬಾಗಿ ಮಣಿಯಲು, ಬಾಳಿದು ಭಾಗ್ಯದ ಕಡಗೋಲು 

।।೨।।


ನಂದಕಿಶೋರನ, ಚಂದವ ಕಾಣಲು, ಬನ್ನಿರಿ ಈ ಯದು ನಂದನಕೆ,

ಆನಂದದಿಂದ, ಶ್ರೀ ಕೃಷ್ಣ ಎಂದರೆ, ದೊರೆವುದು ಬೇಡುವ ಬಯಕೆ 

।।೩।।


Kanakanigolida Govinda (ಕನಕನಿಗೊಲಿದಾ ಗೋವಿಂದಾ)

Bhaktigeete

Singer: Kasturi Shankar

Song link: Click Here


Kanakanigolida govinda, nammanu kaayo mukunda ||


Samsaaravemba sagaradalli mathisalu kadagola pididiheya,

Haggava hididu bhaktarannella muktiya teerake oyyuveya ||


Udupi kshetradi nelesuta nindu, madhwa vyasa vaadirajarigolidu,

Puranadara dasara haadige kunidu, mareva madhava bhaktara bandu 


Palimaru, adamaru, krishnapura, puttige, shiruru, sode,

Pejavara kaaniyurina yatigala, poojeya kaigonda sri vittala ||


Vittalla, vittala..!


ಭಕ್ತಿಗೀತೆ 


ಕನಕನಿಗೊಲಿದಾ ಗೋವಿಂದಾ, ನಮ್ಮನು ಕಾಯೋ ಮುಕುಂದ

।।ಪ।।


ಸಂಸಾರವೆಂಬ ಸಾಗರದಲ್ಲಿ ಮಥಿಸಲು ಕಡಗೋಲ ಪಿಡಿದಿಹೆಯಾ,

ಹಗ್ಗವ ಹಿಡಿದು ಭಕ್ತರನ್ನೆಲ್ಲ ಮುಕ್ತಿಯ ತೀರಕೆ ಒಯ್ಯುವೆಯಾ

 ।।೧।।


ಉಡುಪಿ ಕ್ಷೇತ್ರದಿ ನೆಲೆಸುತ ನಿಂದು ಮಧ್ವ ವ್ಯಾಸ ವಾದಿರಾಜ ರಿಗೊಲಿದು,

ಪುರಂದರ ದಾಸರ ಹಾಡಿಗೆ ಕುಣಿದು, ಮರೆವಾ ಮಾಧವ ಭಕ್ತರ ಬಂಧು ।।೨।।


ಪಲಿಮಾರು, ಅದಮಾರು, ಕೃಷ್ಣಾಪುರ, ಪುತ್ತಿಗೆ, ಶಿರೂರು, ಸೋದೆ,

ಪೇಜಾವರ ಕಾಣಿಯೂರಿನ ಯತಿಗಳು ಪೂಜೆಯ ಕೈಗೊಂಡ ಶ್ರೀ ವಿಠ್ಠಲ ।।೩।।


ವಿಠ್ಠಲ..ವಿಠ್ಠಲ..!

Tuesday, May 19, 2026

Manase Baduku Ninagaagi (ಮನಸೇ ಬದುಕು ನಿನಗಾಗಿ)

Movie: Amrutavarshini (1997)

Singer: SPB

Sog link: Click Here


Manase, baduku ninagaagi, bavane ninagaagi,

Nana preetiye, sulladare, jagavella sullu allave,

Manase, manase ||


Ninna ondu maatu saaku. marumaatu elli,

Ninna ondu aanati saaku, na adigalalli,

Ninna ondu hesare saaku, usiraatakkilli,

Ninna ondu sparsha saaku, ee janumadalli,

Manase naa ene maadidaru, ninna preetigallve,

Manase manasa kshamise ||


Nanna preeti gange neenu, mudi seralende,

Samayagala sarapaliyalli, kaigombeyaade,

Nanna baala putake neenu, hosa tiruvu tande,

Ninna maretu hodare eega, badukeke munde,

Manase naa ene maadidaru, ninna preetigallave,

Manase manasa harise ||


ಚಿತ್ರಗೀತೆ 


ಮನಸೇ, ಬದುಕು ನಿನಗಾಗಿ, ಬವಣೆ ನಿನಗಾಗಿ, 

ನನ ಪ್ರೀತಿಯೇ, ಸುಳ್ಳಾದರೆ, ಜಗವೆಲ್ಲ ಸುಳ್ಳು ಅಲ್ಲವೆ,

ಮನಸೇ, ಮನಸೇ ।।ಪ।।


ನಿನ್ನ ಒಂದು ಮಾತು ಸಾಕು, ಮರುಮಾತು ಎಲ್ಲಿ,

ನಿನ್ನ ಒಂದು ಆಣತಿ ಸಾಕು, ನಾಡಿಗಳಲ್ಲಿ,

ನಿನ್ನ ಒಂದು ಹೆಸರೆ ಸಾಕು, ಉಸಿರಾಟಕ್ಕಿಲ್ಲಿ,

ನಿನ್ನ ಒಂದು ಸ್ಪರ್ಶ ಸಾಕು, ಈ ಜನುಮದಲ್ಲಿ,

ಮನಸೇ ಮನಸ ಕ್ಷಮಿಸೇ, 

ಮನಸೇ , ಮನಸೇ..।।೧।।


ನನ್ನ ಪ್ರೀತಿ ಗಂಗೆ ನೀನು, ಮುಡಿ ಸೇರಲೆಂದೇ,

ಸಮಯಗಳ ಸರಪಳಿಯಲ್ಲಿ, ಕೈಗೊಂಬೆಯಾದೆ,

ನನ್ನ ಬಾಳ ಪುಟಕೆ ನೀನು, ಹೊಸ ತಿರುವು ತಂದೆ,

ನಿನ್ನ ಮರೆತು ಹೋದರೆ ಈಗ, ಬದುಕೇಕೆ ಮುಂದೆ,

ಮನಸೇ ಮನಸ ಹರಿಸೇ..।।೨।।

Neenade Baalige Jyothi (ನೀನಾದೆ ಬಾಳಿಗೆ ಜ್ಯೋತಿ)

Movie: Hosabelaku (1982)

Singers: Dr. Rajkumar, S Janaki

Song link: Click Here


Neenade baalige jyothi, naa kande kaanada preeti,

Manasu hoovagi kanasu nooragi, ee jeeva banalli telaadide,

Baa enna baalina jyothi, baa nanna premada kanti,

Manasu hoovagi kanasu nooragi, ee jeeva banalli telaadide ||


Ravi moodi aagasadalli, belakannu chellida haage,

Irulaada baalali bande, santosha sambhrama tande,

Ee jeevavu, nalidaadide, 

Innu endendu novu ninagilla, Bisilalli neralaagi hita needuve,

Neenade baalige jyothi, baa nanna premada kanti ||


Hosa raaga haadalu neenu, hosa lokha kandenu naanu,

Hosa daari nodide enu, jotheyaagi baruveya innu,

Nannaaseya, puraiseya,

Ninna usiraagi, baala hasiraagi, endendu ondaagi naa baaluve,

Baa enna baalina jyothi, naa kande kaanada preeti ||


Manasu hoovagi, kanasu nooragi, ee jeeva banalli telaadide ||


ಚಿತ್ರಗೀತೆ 


ನೀನಾದೆ ಬಾಳಿಗೆ ಜ್ಯೋತಿ, ನಾ ಕಂಡೆ ಕಾಣದ ಪ್ರೀತಿ,

ಮನಸು ಹೂವಾಗಿ ಕನಸು ನೂರಾಗಿ, ಈ ಜೀವ ಬಾನಲ್ಲಿ ತೇಲಾಡಿದೆ,

ಬಾ ಎನ್ನ ಬಾಳಿನ ಜ್ಯೋತಿ, ಬಾ ನನ್ನ ಪ್ರೇಮದ ಕಾಂತಿ,

ಮನಸು ಹೂವಾಗಿ ಕನಸು ನೂರಾಗಿ, ಈ ಜೀವ ಬಾನಲ್ಲಿ ತೇಲಾಡಿದೆ 

।।ಪ।।


ರವಿ ಮೂಡಿ ಆಗಸದಲ್ಲಿ, ಬೆಳಕನ್ನು ಚೆಲ್ಲಿದ ಹಾಗೆ,

ಇರುಳಾದ ಬಾಳಲಿ ಬಂದೆ, ಸಂತೋಷ ಸಂಭ್ರಮ ತಂದೆ,

ಈ ಜೀವವೂ, ನಲಿದಾಡಿದೆ,

ಇನ್ನೂ ಎಂದೆಂದು ನೋವು ನಿನಗಿಲ್ಲ, ಬಿಸಿಲಲ್ಲಿ ನೆರಳಾಗಿ ಹಿತ ನೀಡುವೆ,

ನೀನಾದೆ ಬಾಳಿಗೆ ಜ್ಯೋತಿ, ಬಾ ನನ್ನ ಪ್ರೇಮದ ಕಾಂತಿ ।।೧।।


ಹೊಸ ರಾಗ ಹಾಡಲು ನೀನು, ಹೊಸ ಲೋಕ ಕಂಡೆನು ನಾನು,

ಹೊಸ ದಾರಿ ನೋಡಿದೆ ಏನು, ಜೊತೆಯಾಗಿ ಬರುವೆಯ ಇನ್ನೂ,

ನನ್ನಾಸೆಯಾ, ಪೂರೈಸೆಯಾ,

ನಿನ್ನ ಉಸಿರಾಗಿ, ಬಾಳ ಹಸಿರಾಗಿ, ಎಂದೆಂದು ಒಂದಾಗಿ ನಾ ಬಾಳುವೆ,

ಬಾ ಎನ್ನ ಬಾಳಿನ ಜ್ಯೋತಿ, ನಾ ಕಂಡೆ ಕಾಣದ ಪ್ರೀತಿ ।।೨।।


ಮನಸು ಹೂವಾಗಿ, ಕನಸು ನೂರಾಗಿ, ಈ ಜೀವ ಬಾನಲ್ಲಿ 
ತೇಲಾಡಿದೆ ।।


Neenade Na Neenolida Ee Kshana (ನೀನಾದೆ ನಾ ನೀನೊಲಿದ ಈ ಕ್ಷಣ)

Movie: Murali Meets Meera (2011)

Singer: Avinash Chebbi

Song link: Click Here


Nee.. naade na, neenolida ee kshana, ninnindale hosadeno tallana,

Maate barutilla, yako gotilla, mouna naanade ee dina,

Hego naanidde, eega heegade, adake nee taane karana ||


Telide mana, ninna naguvina, aa tili aagasadali,

Jaaride kshana, ninna olavina, sihiyaada appugeyali,

Selede kannale, berete nannale ||


Preeti aramane, nanna seremane, naa bandhi yaagiruvene,

Bidugadeyane, endu bayasada, naa prema khaidi kane,

Barede usirale, ninna hesarane ||


ಚಿತ್ರಗೀತೆ 


ನೀ ..ನಾದೆ ನಾ, ನೀನೊಲಿದ ಈ ಕ್ಷಣ, ನಿನ್ನಿಂದಲೆ ಹೊಸದೇನೋ ತಲ್ಲಣ,

ಮಾತೆ ಬರುತಿಲ್ಲ, ಯಾಕೊ ಗೊತ್ತಿಲ್ಲ, ಮೌನ ನಾನಾದೆ ಈ ದಿನ,

ಹೇಗೊ ನಾನಿದ್ದೆ, ಈಗ ಹೀಗಾದೆ, ಅದಕೆ ನೀ ತಾನೆ ಕಾರಣ ।।ಪ।।


ತೇಲಿದೆ ಮನ, ನಿನ್ನ ನಗುವಿನ, ಆ ತಿಳಿ ಆಗಸದಲಿ,

ಜಾರಿದೆ ಕ್ಷಣ, ನಿನ್ನ ಒಲವಿನ, ಸಿಹಿಯಾದ ಅಪ್ಪುಗೆಯಲಿ 

ಸೆಳೆದೆ ಕಣ್ಣಲೇ, ಬೆರೆತೆ ನನ್ನಲೇ ।।೧।।


ಪ್ರೀತಿ ಅರಮನೆ, ನನ್ನ ಸೆರೆಮನೆ, ನಾ ಬಂಧಿಯಾಗಿರುವೆನೆ,

ಬಿಡುಗಡೆಯನೆ, ಎಂದು ಬಯಸದ, ನಾ ಪ್ರೇಮ ಖೈದಿ ಕಣೇ,

ಬರೆದೇ ಉಸಿರಲಿ, ನಿನ್ನಾ ಹೆಸರನೆ ।।೨।। 

Wednesday, May 13, 2026

Deva Mandiradalli (ದೇವ ಮಂದಿರದಲ್ಲಿ)

Movie: Jimmigallu (1982)

Singers: SPB, Vani Jairam

Song link: Click Here


Deva mandiradalli, devaru kaanale illa,

Nyaya mandiradalli, nyayavu sigale illa ||


Satyave geluvudu, dharmave niluvudu,

Ennuvudella maatugalu, bari maatugalu,

Mosave geluvudu, drohave ulivudu,

Enuvuda arite baalinolu, nanna baalinolu ||


Baaluva reetiya, baalina neetiya,

Kaliyade indu naa nonde, naa balu nonde,

Aaseya aramane, benkige silukalu,

Ariyade indu naa bende, naa balu nonde ||


Geluvina anubhava, padeyuva modale,

Solina sanchige baliyaade, na baliyaade,

Olavina sihiyanu, saviyuva samayade,

Saavina urulige sereyaade, na sereyaade ||


ಚಿತ್ರಗೀತೆ 


ದೇವ ಮಂದಿರದಲ್ಲಿ, ದೇವರು ಕಾಣಲೆ ಇಲ್ಲ,

ನ್ಯಾಯ ಮಂದಿರದಲ್ಲಿ, ನ್ಯಾಯವು ಸಿಗಲೇ ಇಲ್ಲ ।।ಪ।।


ಸತ್ಯವೆ ಗೆಲುವುದು, ಧರ್ಮವೆ ನಿಲುವುದು,

ಎನ್ನುವುದೆಲ್ಲ ಮಾತುಗಳು, ಬರಿ ಮಾತುಗಳು,

ಮೋಸವೆ ಗೆಲುವುದು, ದ್ರೋಹವೆ ಉಳಿವುದು,

ಎನುವುದ ಅರಿತೆ ಬಾಳಿನೊಳು, ನನ್ನ ಬಾಳಿನೊಳು ।।೧।।


ಬಾಳುವ ರೀತಿಯ, ಬಾಳಿನ ನೀತಿಯ,

ಕಲಿಯದೆ ಇಂದು ನಾ ನೊಂದೆ, ನಾ ಬಲು ನೊಂದೆ,

ಆಸೆಯ ಅರಮನೆ, ಬೆಂಕಿಗೆ ಸಿಲುಕಲು,

ಅರಿಯದೆ ಇಂದು ನಾ ಬೆಂದೆ, ನಾ ಬಲು ನೊಂದೆ ।।೨।।


ಗೆಲುವಿನ ಅನುಭವ, ಪಡೆಯುವ ಮೊದಲೆ,

ಸೋಲಿನ ಸಂಚಿಗೆ ಬಲಿಯಾದೆ, ನಾ ಬಲಿಯಾದೆ,

ಒಲವಿನ ಸಿಹಿಯನು, ಸವಿಯುವ ಸಮಯದೆ,

ಸಾವಿನ ಉರುಳಿಗೆ ಸೆರೆಯಾದೆ, ನಾ ಸೆರೆಯಾದೆ ।।೩।।

Ee Soundaryake (ಈ ಸೌಂದರ್ಯಕೆ)

Movie: Devara Aata (1981)

Singers: SPB, S Janaaki

Song link: Click Here


Ee soundaryake, aa..aa..aa..aa,

Nina anuraagake, aa..aa..aa..aa,

Naa sotu hode ande, preyasi aa..aa..aa..aa ||


Suryana honnina bannave nachide,

Tanuvina ee kantige,  aa..aa..aa..aa,    

Gaganada kempina varnavu sotide, havalada ninnadharake,

Lateya haage baluki neenu haadi, kuniyuvaaga tanuvininda nodi,

Urvashi natyava maretalu nondu, cheluve ninage saati yaaru endu ||


Hrudayada veeneya tantiya meetuta,

Nudiside hosa raagava, aa..aa..aa..aa,

Nannede taalake naliyuta, kuniyuta, tumbide nee mohava, 

Manada aase kangalinda aadi, kanna bhasheyinda modi maadi,

Hosa hosa kanasina udugore tande, bayake arali saniha sere bande ||


ಚಿತ್ರಗೀತೆ 


ಈ ಸೌಂದರ್ಯಕೆ, ಆ ಆ ಆ ಆ ..!

ನಿನ ಅನುರಾಗಕೆ,  ಆ ಆ ಆ ಆ ..!

ನಾ ಸೋತು ಹೋದೆ ಅಂದೆ, ಪ್ರೇಯಸಿ,  ಆ ಆ ಆ ಆ ..!


ಸೂರ್ಯನ ಹೊನ್ನಿನ ಬಣ್ಣವೆ ನಾಚಿದೆ,

ತನುವಿನ ಈ ಕಾಂತಿಗೆ,  ಆ ಆ ಆ ಆ ..!

ಗಗನದ ಕೆಂಪಿನ ವರ್ಣವು ಸೋತಿದೆ, ಹವಳದ ನಿನ್ನಧರಕೆ,

ಲತೆಯ ಹಾಗೆ ಬಳುಕಿ ನೀನು ಹಾಡಿ, ಕುಣಿಯುವಾಗ ತನುವಿನಿಂದ ನೋಡಿ,

ಊರ್ವಶಿ ನಾಟ್ಯವ ಮರೆತಳು ನೊಂದು, ಚೆಲುವೆ ನಿನಗೆ ಸಾಟಿ ಯಾರು ಎಂದು ।।೧।।


ಹೃದಯದ ವೀಣೆಯ ತಂತಿಯ ಮೀಟುತ,

ನುಡಿಸಿದೆ ಹೊಸ ರಾಗವ,  ಆ ಆ ಆ ಆ ..!

ನನ್ನೆದೆ ತಾಳಕೆ ನಲಿಯುತ, ಕುಣಿಯುತ, ತುಂಬಿದೆ ನೀ ಮೋಹವ, 

ಮನದ ಆಸೆ ಕಣ್ಗಳಿಂದ ಆಡಿ, ಕಣ್ಣ ಭಾಷೆಯಿಂದ ಮೋಡಿ ಮಾಡಿ,

ಹೊಸ ಹೊಸ ಕನಸಿನ ಉಡುಗೊರೆ ತಂದೆ, ಬಯಕೆ ಅರಳಿ ಸನಿಹ ಸೆರೆ ಬಂದೆ ।।೨।।

Cheluvanta Chennigane (ಚೆಲುವಾಂತ ಚೆನ್ನಿಗನೆ)

Movie: Amara Shilpi Jakanachari (1964)

Singer: P Susheela

Song link: Click Here


Cheluvanta chennigane nalidaadu baa,

Ee singara shileyodane kunidadu baara ||


Taala meladolu kaleyuva baara,

Gaali gandhadolu seruva baara,

Bhava bhangiyolu bereyuva baara,

Premanandava nee taara ||


Neeli gaganadi teli hudukide,

Kamanabillanu eri nodide,

Chandra taaregala seri kelide,

Elladagiruve bali baara ||


Karmodavu kuduta baralu,

Ghali ghali kuniva neeli navilolu,

Ninnali paravashalagihe neera,

Dayava tori nee begane baara ||


ಚಿತ್ರಗೀತೆ 


ಚೆಲುವಾಂತ ಚೆನ್ನಿಗನೆ ನಲಿದಾಡು ಬಾ,

ಈ ಸಿಂಗಾರ ಶಿಲೆಯೊಡನೆ ಕುಣಿದಾಡು ಬಾರಾ ।।ಪ।।


ತಾಳ ಮೇಳದೊಳು ಕಲೆಯುವ ಬಾರಾ,

ಗಾಳಿ ಗಂಧದೊಲು ಸೇರುವ ಬಾರಾ,

ಭಾವ ಭಂಗಿಯೊಲು ಬೆರೆಯುವ ಬಾರಾ,

ಪ್ರೇಮಾನಂದವ ನೀ  ತಾರಾ ।।೧।।


ನೀಲಿ ಗಗನದಿ ತೇಲಿ ಹುಡುಕಿದೆ,

ಕಾಮನಬಿಲ್ಲನು ಏರಿ ನೋಡಿದೆ,

ಚಂದ್ರ ತಾರೆಗಳ ಸೇರಿ ಕೇಳಿದೆ,

ಎಲ್ಲಡಗಿರುವೆ ಬಳಿ ಬಾರಾ ।।೨।।


ಕಾರ್ಮೋಡವು ಕೂಡುತ ಬರಲು,

ಘಲಿ ಘಲಿ ಕುಣಿವ ನೀಲಿ ನವಿಲೊಲು,

ನಿನ್ನಲಿ ಪರವಶಳಾಗಿಹೆ ನೀರ,

ದಯವ ತೋರಿ ನೀ ಬೇಗನೆ ಬಾರಾ ।।೩।।

Sunday, May 10, 2026

Nischintanagabekanti (ನಿಶ್ಚಿಂತನಾಗಬೇಕಂತಿ)

Tatvapada

Santa Sishunala Sharifa Songs

Singer: C Ashwat

Song link: Click Here


Nischintanagabekanti, bahu 

Duschintiyolage nee kunti,

Yaako elo ninagee bhranti, 

Naaligaguvudeeganti ||


Ashapashagala byadanti, olle 

Meesala nudi maatadanti,

Bhashe kottu tappabyadanti, hari

Daasarolage mana needanti ||


Avaranu kandare avarante, ma

Ttivaranu kandare ivarante,

Avarivarariyade tanagu tiliyade, 

Moodhanaage summane kunti ||


Podaviyolage sishunalanti, drudha 

Govinda yogiya chinti,

Bidadaatana seve maadanti, nee 

Bhayavillade guruvina kudanti ||


ತತ್ವಪದ 


ನಿಶ್ಚಿಂತನಾಗಬೇಕಂತಿ, ಬಹು 

ದುಶ್ಚಿಂತಿಯೊಳಗೆ ನೀ ಕುಂತಿ,

ಯಾಕೋ ಎಲೊ ನಿನಗೀ ಭ್ರಾಂತಿ, 

ನಾಳಿಗಾಗುವುದೀಗ೦ತಿ ।।ಪ।।


ಆಶಾ ಪಾಶಗಳ ಬ್ಯಾಡಂತಿ, ಒಳ್ಳೆ 

ಮೀಸಲ ನುಡಿ ಮಾತಾಡಂತಿ,

ಭಾಷೆ ಕೊಟ್ಟು ತಪ್ಪಬ್ಯಾಡಂತಿ, ಹರಿ

ದಾಸರೊಳಗೆ ಮನ ನೀಡಂತಿ 

।।೧।।


ಅವರನು ಕಂಡರೆ ಅವರಂತೆ, ಮ

ತ್ತಿವರನು ಕಂಡರೆ ಇವರಂತೆ,

ಅವರಿವರರಿಯದೆ ತನಗೂ ತಿಳಿಯದೆ, 

ಮೂಢನಾಗೆ ಸುಮ್ಮನೆ ಕುಂತಿ 

।।೨।।


ಪೊಡವಿಯೊಳಗೆ ಶಿಶುನಾಳಂತಿ, ದೃಢ 

ಗೋವಿಂದ ಯೋಗಿಯ ಚಿಂತಿ,

ಬಿಡದಾತನ ಸೇವೆ ಮಾಡಂತಿ, ನೀ 

ಭಯವಿಲ್ಲದೆ ಗುರುವಿನ ಕೂಡಂತಿ ।।೩।।

Ku Ku Enutide Belava (ಕೂ ಕೂ ಎನುತಿದೆ ಬೆಳವಾ)

Tatvapada

Santa Sishunala Sharifa Songs

Singer: C Ashwat

Song link: Click Here


Ku ku, ku ku, enutide belava,

Ku ku enutide belava,

Bandu hokkitu bhavavemba dukhada haluva ||


Purushana buttiyolittu, bahu

Harushadi halladol telaaka bittu,

Manavemba gudinolittu, tanna

Tanuvemba maradolu haaraka bittu ||


Aanandadolu taaniralu, swa

Nandadi rekkeya kedarutaliralu,

Bhuvanadolage nintiralu, deva

Sishunaaladhesha govindana varavu ||


ತತ್ವಪದ 


ಕೂ ಕೂ, ಕೂ ಕೂ, ಎನುತಿದೆ ಬೆಳವಾ,

ಕೂ ಕೂ, ಎನುತಿದೆ ಬೆಳವಾ,

ಬಂದು ಹೊಕ್ಕಿತು ಭವವೆಂಬ ದುಃಖದ ಹಳುವ ।।ಪ।।


ಪುರುಷನ ಬುಟ್ಟಿಯೊಳಿಟ್ಟು, ಬಹು 

ಹರುಷದಿ ಹಳ್ಳದೋಳ್ ತೇಲಾಕ ಬಿಟ್ಟು ,

ಮನವೆಂಬ ಗೂಡಿನೊಳಿಟ್ಟು, ತನ್ನ 

ತನುವೆಂಬ ಮರದೊಳು ಹಾರಾಕ ಬಿಟ್ಟು ।।೧।।


ಆನಂದದೊಳು ತಾನಿರಲು, ಸ್ವಾ

ನಂದದಿ ರೆಕ್ಕೆಯ ಕೆದರುತಲಿರಲು 

ಭುವನದೊಳಗೆ ನಿಂತಿರಲು, ದೇವ 

ಶಿಶುನಾಳಧೀಶ ಗೋವಿಂದನ ವರವು ।।೨।।