Wednesday, May 31, 2023

Nillabekayya Krishnayya (ನಿಲ್ಲಬೇಕಯ್ಯ ಕೃಷ್ಣಯ್ಯ)

Bhaktigeete

Sri Purandara Dasara Keerthanegalu

Song link: Click Here


Raga: Mohna

Tala: Atatala


Nillabekayya krishnayya nee

Nillabekayya krishnayya |

Mallamardhana siri vallabha

Ena hrudayadalli santata nee ||


Suppani muttittu noduve, sada

Chappale tatti na paaduve

Appa srikrishnane etti muddisikombe

Sarpashayana krupe maadendu beduve ||


Chandada Haasige haasuve, punugu 

Gandha kasturiya poosuve

Andadi muttina haarava hakuve

Aanandadindali ninna etti muddisikombe ||


Neelada kireeta ninagiduve, balu

Baalaleelegalanu paaduve

Maalola purandara vittalarayane

Nilu enna manadali onde galige ||


ಭಕ್ತಿಗೀತೆ 


ನಿಲ್ಲಬೇಕಯ್ಯ ಕೃಷ್ಣಯ್ಯ ನೀ 

ನಿಲ್ಲಬೇಕಯ್ಯ ಕೃಷ್ಣಯ್ಯ ।।ಪ।।

ಮಲ್ಲಮರ್ದನ ಸಿರಿ ವಲ್ಲಭ 

ಎನ ಹೃದಯದಲ್ಲಿ ಸಂತತ ನೀ ।।ಅನು ।।


ಸುಪ್ಪಾಣಿ ಮುತ್ತಿಟ್ಟು ನೋಡುವೆ, ಸದಾ 

ಚಪ್ಪಾಳೆ ತಟ್ಟಿ ನಾ ಪಾಡುವೆ 

ಅಪ್ಪಾ ಶ್ರೀಕೃಷ್ಣನೇ ಎತ್ತಿ ಮುದ್ದಿಸಿಕೊಂಬೆ 

ಸರ್ಪಶಯನ ಕೃಪೆ ಮಾಡೆಂದು ಬೇಡುವೆ ।।೧।।


ಚಂದದ ಹಾಸಿಗೆ ಹಾಸುವೆ, ಪುನುಗು 

ಗಂಧ ಕಸ್ತೂರಿಯ ಪೂಸುವೆ 

ಅಂದದಿ ಮುತ್ತಿನ ಹಾರ ಹಾಕುವೆ 

ಆನಂದದಿಂದಲಿ ನಿನ್ನ ಎತ್ತಿ ಮುದ್ದಿಸಿ ಕೊಂಬೆ ।।೨।।


ನೀಲದ ಕಿರೀಟ ನಿನಗಿಡುವೆ, ಬಲು 

ಬಾಲಲೀಲೆಗಳನು ಪಾಡುವೆ 

ಮಾಲೋಲ ಪುರಂದರ ವಿಠ್ಠಲ ರಾಯನೆ 

ನಿಲು ಎನ್ನ ಮನದಲಿ ಒಂದೇ ಗಳಿಗೆ ।।೩।।              ಶ್ರೀ 






Monday, May 29, 2023

Nammura Mandara Hoove (ನಮ್ಮೂರ ಮಂದಾರ ಹೂವೆ)

Movie: Aalemane(1981)

Singer: SPB

Song link: Click Here


Nammura mandara hoove

Nannolume bandalada cheluve

Bali bandu balannu belagu

Nanna baridada manadalli minugu ||


Kannalle karedu, honganasa teredu

Sangaati sampreeti selede

Anuraaga holedu, anubandha beledu

Sammoha sambandha midide

Moodida premada, sogasaada karanji biride ||


Odalaala moredu, odanaata meredu

Odanaadi bandhavya kande

Ruthumaana meeri, hosagaana tori

Hitavaada madhurya minde

Teerada, mohadaa, inidaada aananda tande ||


ಚಿತ್ರಗೀತೆ 


ನಮ್ಮೂರ ಮಂದಾರ ಹೂವೆ 

ನನ್ನೊಲುಮೆ ಬಾಂದಳದ ಚೆಲುವೆ 

ಬಳಿ ಬಂದು ಬಾಳನ್ನು ಬೆಳಗು 

ನನ್ನ ಬರಿದಾದ ಮನದಲ್ಲಿ ಮಿನುಗು ।।ಪ।।


ಕಣ್ಣಲ್ಲೆ ಕರೆದು, ಹೊಂಗನಸ ತೆರೆದು 

ಸಂಗಾತಿ ಸಂಪ್ರೀತಿ ಸೆಳೆದೇ 

ಅನುರಾಗ ಹೊಳೆದು, ಅನುಬಂಧ ಬೆಳೆದು 

ಸಮ್ಮೋಹ ಸಂಬಂಧ ಮಿಡಿದೇ 

ಮೂಡಿದಾ, ಪ್ರೇಮದಾ, ಸೊಗಸಾದ ಕಾರಂಜಿ ಬಿರಿದೆ ।।೧।।


ಒಡಲಾಳ ಮೊರೆದು, ಒಡನಾಟ ಮೆರೆದು 

ಒಡನಾಡಿ ಬಾಂಧವ್ಯ ಕಂಡೇ 

ಋತುಮಾನ ಮೀರಿ, ಹೊಸಗಾನ ತೋರಿ 

ಹಿತವಾದ ಮಾಧುರ್ಯ ಮಿಂದೆ 

ತೀರದಾ, ಮೋಹದಾ, ಇನಿದಾದ ಆನಂದ ತಂದೆ ।।೨।। 




Sunday, May 28, 2023

Omkaradi Kande Prema Nadava (ಓಂಕಾರದಿ ಕಂಡೆ ಪ್ರೇಮ ನಾದವ)

Movie: Nammura Mandara Hoove (1997)

Singer: Chitra

Song link: Click Here


Omkaradi kande prema nadava

Ee tanadi tande nee shubhodaya

Mandaravilli arali kampu suside

Sougandha hasa chelli ninna kadide

Ariyo iniya olava kareya ||


Madhura tana swaragala seri, oho ho ho ho.....

Jalala dhare jaladali jaari, oho ho ho ho.....

Aakashadache aa mounadi, aa taare eke ta telide

Bandaga arivu illi, tandeetitu olavu alli

Ariyo iniya olava nidhiya ||


Ninade gaana hrudayadi teli, oho ho ho ho.....

Layadi raga alegala beeri, oho ho ho ho.....

Ee geetegaade nee bhavana, ee baaligaade nee chetana

Sangeeta sudheya tumbi, madhurya manadi tande

Ariyo iniya olava saviya ||


ಚಿತ್ರಗೀತೆ 


ಓಂಕಾರದಿ ಕಂಡೆ ಪ್ರೇಮ ನಾದವ 

ಈ ತಾನದಿ ತಂದೆ ನೀ ಶುಭೋದಯ 

ಮಂದಾರವಿಲ್ಲಿ ಅರಳಿ ಕಂಪು ಸೂಸಿದೆ 

ಸೌಗಂಧ ಹಾಸ ಚೆಲ್ಲಿ ನಿನ್ನ ಕಾದಿದೆ 

ಅರಿಯೋ ಇನಿಯ ಒಲವಾ ಕರೆಯಾ ।।ಪ।।


ಮಧುರ ತಾನ ಸ್ವರಗಳ ಸೇರಿ, ಒಹೋ  ಹೋ ಹೋ ಹೋ .. 

ಜಲಲಾ ಧಾರೆ ಜಲದಲಿ ಜಾರಿ, ಒಹೋ  ಹೋ ಹೋ ಹೋ .. 

ಆಕಾಶದಾಚೆ ಆ ಮೌನದಿ, ಆ ತಾರೆ ಏಕೆ ತಾ ತೇಲಿದೆ 

ಬಂದಾಗ ಅರಿವು ಇಲ್ಲಿ, ತಂದೀತು ಒಲವು ಅಲ್ಲಿ 

ಅರಿಯೋ ಇನಿಯ ಒಲವಾ ನಿಧಿಯಾ  ।।೧।।


ನಿನದೆ ಗಾನ ಹೃದಯದಿ ತೇಲಿ, ಒಹೋ  ಹೋ ಹೋ ಹೋ .. 

ಲಯದಿ ರಾಗ ಅಲೆಗಳ ಬೀರಿ, ಒಹೋ  ಹೋ ಹೋ ಹೋ .. 

ಈ  ಗೀತೆಗಾದೆ ನೀ ಭಾವನಾ, ಈ  ಬಾಳಿಗಾದೆ ನೀ ಚೇತನ 

ಸಂಗೀತ ಸುಧೆಯ ತುಂಬಿ, ಮಾಧುರ್ಯ ಮನದಿ ತಂದೆ 

ಅರಿಯೋ ಇನಿಯ ಒಲವ ಸವಿಯಾ ।।೨।।



Saturday, May 27, 2023

Kamalada Mogadole (ಕಮಲದ ಮೊಗದೋಳೆ)

Movie: Hosa Itihasa (1984)

Singer: S Janaki

Song link: Click Here


Kamalada mogadole kamalada kannole

Kamalava kaiyalli hididole

Kamalanabhana hrudaya kamaladali nintole

Kamalini karamugive bamma

Poojeya sweekarise dayamadisamma

Kamalada mogadole kamalada kannole

Kamalava kaiyalli hididole ||


Kaveri neera abhishekakagi, ninagagi na tandenamma

Kampannu chello sumarashiyinda, hoo maale kattiruvenamma

Bangara kalgejje nada, namma maneyallava tumbuvante (2)

Naliyuta, kuniyuta, olidu ba, namma manege ba ||


Sridevi bamma, dhanalakshmi bamma, maneyannu belakagi maadu

Daye tori bandu, manadalli nintu, santosha soubhagya needu

Stiravagi bandilli nelesu, taye varamahalakshmiye harasu (2)

Karavanu, mugiyuve, aarati, eega belaguve ||


ಭಕ್ತಿಗೀತೆ 


ಕಮಲದ ಮೊಗದೋಳೆ ಕಮಲದ ಕಣ್ಣೋಳೆ 

ಕಮಲವ ಕೈಯ್ಯಲ್ಲಿ ಹಿಡಿದೋಳೆ 

ಕಮಲನಾಭನ ಹೃದಯ ಕಮಲದಲಿ ನಿಂತೋಳೆ 

ಕಮಲಿನಿ ಕರಮುಗಿವೆ ಬಾಮ್ಮ 

ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ 

ಕಮಲದ ಮೊಗದೋಳೆ ಕಮಲದ ಕಣ್ಣೋಳೆ 

ಕಮಲವ ಕೈಯ್ಯಲ್ಲಿ ಹಿಡಿದೋಳೆ ।।ಪ।।


ಕಾವೇರಿ ನೀರ ಅಭಿಷೆಕಕಾಗಿ, ನಿನಗಾಗಿ ನಾ ತಂದೆನಮ್ಮಾ 

ಕಂಪನ್ನು ಚೆಲ್ಲೋ ಸುಮರಾಶಿಯಿಂದ, ಹೂ ಮಾಲೆ ಕಟ್ಟಿರುವೆನಮ್ಮಾ 

ಬಂಗಾರ ಕಾಲ್ಗೆಜ್ಜೆ ನಾದ,  ನಮ್ಮ ಮನೆಯಲ್ಲವ ತುಂಬುವಂತೆ (೨)

ನಲಿಯುತಾ, ಕುಣಿಯುತಾ, ಒಲಿದು ಬಾ, ನಮ್ಮ ಮನೆಗೆ ಬಾ ।।೧।।


ಶ್ರೀದೇವಿ ಬಾಮ್ಮ, ಧನಲಕ್ಷ್ಮೀ ಬಾಮ್ಮ, ಮನೆಯನ್ನು ಬೆಳಕಾಗಿ ಮಾಡು 

ದಯೆ ತೋರಿ ಬಂದು, ಮನದಲ್ಲಿ ನಿಂತು, ಸಂತೋಷ ಸೌಭಾಗ್ಯ ನೀಡು 

ಸ್ಥಿರವಾಗಿ ಬಂದಿಲ್ಲಿ ನೆಲೆಸು, ತಾಯೆ ವರಮಹಾಲಕ್ಷ್ಮಿಯೇ ಹರಸು (೨)

ಕರವನು ಮುಗಿಯುವೆ ಆರತಿ ಈಗ ಬೆಳಗುವೆ ।।೨।।





 

Friday, May 26, 2023

Eno Eko Hosa Bhava (ಏನೋ ಏಕೋ ಹೊಸ ಭಾವ)

Movie: Aananda Bhashpa (1963)

Singer: S Janaki, P B Srinivas

Song link: Click Here



Aa....Aa.... eno eko hosa bhava

Tumbiralu hrudayadali anuraga

Moodide harushada navaraaga ||


Olavinde nee bande, mai maretu..u na ninde (2)

Mounade modade mohade

Premada devateye sharanende ||


Aa.... Aa....      Oo.... Oo....

Kare keli  bandavare, kai hidida nanna dore

Dasiya aaseya teerisi

Bhagyada baagila teredavare ||


ಚಿತ್ರಗೀತೆ 


ಆ .... ಆ ....  ಏನೋ ಏಕೋ ಹೊಸ ಭಾವ 

ತುಂಬಿರಲು ಹೃದಯದಲಿ ಅನುರಾಗ 

ಮೂಡಿದೆ ಹರುಷದಾ ನವರಾಗ  ।।ಪ।।


ಒಲವಿಂದೇ ನೀ ಬಂದೇ, ಮೈ ಮರೆತೂ ನಾ ನಿಂದೇ (೨)

ಮೌನದೇ ಮೋದದೇ ಮೋಹದೇ 

ಪ್ರೇಮದಾ ದೇವತೆಯೇ ಶರಣೆಂದೇ (೨) ।।೧।।


ಆ .... ಆ ....   ಓ .... ಓ .... 

ಕರೆ ಕೇಳಿ ಬಂದವರೇ, ಕೈ ಹಿಡಿದಾ ನನ್ನ ದೊರೆ 

ದಾಸಿಯಾ ಆಸೆಯಾ ತೀರಿಸಿ 

ಭಾಗ್ಯದಾ ಬಾಗಿಲಾ ತೆರೆದವರೆ (೨) ।।೨।।



Thursday, May 25, 2023

Baalondu Bhavageete (ಬಾಳೊಂದು ಭಾವಗೀತೆ)

Movie: Nakkare Ade Swarga (1967)

Singer: P Susheela

Song link: Click Here


Baalondu bhavageete

Aananda tumbida kavite

Badava ballida bhedhavillada

Bhuloka swargavidante (2) ||


Manadalli tumbire olavu

Maneyalli santasa geluvu (2)

Naguve nagavu, nalive jagavu

Jeevana sobagina hoovu ||


Urivaga premada hanate

Namagilla yavudu korate (2)

Mahadiya mahalu, muruku gudisalu

Berete jeevake onde ||


ಚಿತ್ರಗೀತೆ 


ಬಾಳೊಂದು ಭಾವಗೀತೆ 

ಆನಂದ ತುಂಬಿದ ಕವಿತೆ 

ಬಡವ ಬಲ್ಲಿದ ಭೇದವಿಲ್ಲದ 

ಭೂಲೋಕ ಸ್ವರ್ಗವಿದಂತೆ (೨) ।।ಪ।।


ಮನದಲ್ಲಿ ತುಂಬಿರೆ ಒಲವು 

ಮನೆಯಲ್ಲಿ ಸಂತಸ ಗೆಲುವು (೨)

ನಗುವೆ ನಗವು, ನಲಿವೆ ಜಗವು 

ಜೀವನ ಸೊಬಗಿನ ಹೂವು ।।೧।।


ಉರಿವಾಗ ಪ್ರೇಮದ ಹಣತೆ 

ನಮಗಿಲ್ಲ ಯಾವುದು ಕೊರತೆ (೨)

ಮಹಡಿಯ ಮಹಲು, ಮುರುಕು ಗುಡಿಸಲು 

ಬೆರೆತೆ ಜೀವಕೆ ಒಂದೇ ।।೨।।

                                    




Wednesday, May 24, 2023

Bhameya Nodalu (ಭಾಮೆಯ ನೋಡಲು)

Movie: School Master (1958)

Singer: Solamangalam Rajalakshmi

Song linkClick Here


Bhameya nodalu ta banda (3)

Brundavanadinda, mukunda

Bhameya nodalu ta banda ||


Kannsanneyale....ae.... (2) kanneya mana seleda (3)

Chinmaya mooruti sri govinda (2) ||


Bagila mareyagi...ee.. (2) nagoliya dina (2)

Raagollasadi oodida kolalina (2)

Koogige mana sotu mohadi mai bigide (3)

Aagarivayitu avane janardhana (2) ||


ಚಿತ್ರಗೀತೆ 


ಭಾಮೆಯ ನೋಡಲು ತಾ ಬಂದ (೩)

ಬೃಂದಾವನದಿಂದಾ, ಮುಕುಂದ 

ಭಾಮೆಯ ನೋಡಲು ತಾ ಬಂದ ।।ಪ।।


ಕಣ್ಸನ್ನೆಯಲೇ .... ಏ .... (೨) ಕನ್ನೆಯ ಮನ ಸೆಳೆದ  (೩)

ಚಿನ್ಮಯ ಮೂರುತಿ ಶ್ರೀ ಗೋವಿಂದ (೨) ।।೧।।


ಬಾಗಿಲ ಮರೆಯಾಗೀ .. ಇ ..  (೨) ನಾಗೋಲಿಯ ದಿನ (೨)

ರಾಗೋಲ್ಲಾಸದಿ ಊದಿದ ಕೊಳಲಿನ (೨)

ಕೊಗಿಗೆ ಮನ ಸೋತು ಮೋಹದಿ ಮೈ ಬಿಗಿದೆ (೩)

ಆಗರಿವಾಯಿತು ಅವನೇ ಜನಾರ್ಧನ (೨) ।।೨।।

                 






Tuesday, May 23, 2023

Belli Rathadali Surya Tanda Kirana (ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ)

Movie: Indrajit (1989)

Singer: SPB, B R Chaya

Song link: Click Here


Belli rathadali surya tanda kirana (2)

Aa chandrana aagamana, bhu taayiya ruthugaana

Nammibbara ee milana, baananchina hosa gaana

Nee nanage, na ninage, jeevana nagutalide ||


Megha shamana murali lolana preeti ondu kavana

Nudisi kolalanu, na baruve hididu shrutiyanna

Harisi honalanu, serutali preeti kadalanna


Havala muttanu kadala aleyanu ninage taruve naanu

Seri ninnanu, muttalle maneya kattuvenu

Mugila minchane, tandirisi deepa hacchuvenu


Karagide ninna olavige, hoo haasuve, ninna haadige

Nee nanage, na ninage, jeevana nagutalide ||


Hagalu irulali bisilu maleyali holeva ninna nayana

Preeti hariside, tumbenna tayi madilanna

Januma janumaku, na bandu seruvenu ninna


Bhumi biridaru, pralayavaadaru irali endu milana

Bhumi illave, na baruve banige o chinna

Bhanu illave, ninnusira talavu balu chenna


Aralide, hoo mallige, usiradide ninagaagiye

Nee nanage, na ninage, jeevana nagutalide ||


ಚಿತ್ರಗೀತೆ 


ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ (೨)

ಆ ಚಂದ್ರನ ಆಗಮನ, ಭೂ ತಾಯಿಯ ಋತುಗಾನ 

ನಮ್ಮಿಬ್ಬರ ಈ ಮಿಲನ, ಬಾನಂಚಿನ ಹೊಸ ಗಾನ 

ನೀ  ನನಗೆ, ನಾ ನಿನಗೆ, ಜೀವನ ನಗುತಲಿದೆ ।।ಪ।।


ಮೇಘ ಶಾಮನ ಮುರಳಿ ಲೋಲನ ಪ್ರೀತಿ ಒಂದು ಕವನ 

ನುಡಿಸಿ ಕೊಳಲನು, ನಾ ಬರುವೆ ಹಿಡಿದು ಶ್ರುತಿಯನ್ನ 

ಹರಿಸಿ ಹೊನಲನು, ಸೇರುತಲಿ ಪ್ರೀತಿ ಕಡಲನ್ನ 


ಹವಳ ಮುತ್ತನು ಕಡಲ ಅಲೆಯನು ನಿನಗೆ ತರುವೆ ನಾನು 

ಸೇರಿ ನಿನ್ನನು, ಮುತ್ತಲ್ಲೇ ಮನೆಯ ಕಟ್ಟುವೆನು 

ಮುಗಿಲ ಮಿಂಚನೇ, ತಂದಿರಿಸಿ ದೀಪ ಹಚ್ಚುವೆನು 


ಕರಗಿದೆ, ನಿನ್ನ ಒಲವಿಗೆ, ಹೂ  ಹಾಸುವೆ, ನಿನ್ನ ಹಾದಿಗೆ 

ನೀ  ನನಗೆ, ನಾ ನಿನಗೆ, ಜೀವನ ನಗುತಲಿದೆ ।।೧।।


ಹಗಲು ಇರುಳಲಿ ಬಿಸಿಲು ಮಳೆಯಲಿ ಹೊಳೆವ ನಿನ್ನ ನಯನ 

ಪ್ರೀತಿ ಹರಿಸಿದೆ, ತುಂಬೆನ್ನ ತಾಯಿ ಮಡಿಲನ್ನ  

ಜನುಮ ಜನುಮಕೂ, ನಾ ಬಂದು ಸೇರುವೆನು ನಿನ್ನಾ 


ಭೂಮಿ ಬಿರಿದರೂ ಪ್ರಳಯವಾದರೂ ಇರಲಿ ಎಂದು ಮಿಲನ 

ಭೂಮಿ ಇಲ್ಲವೆ, ನಾ ಬರುವೆ ಬಾನಿಗೆ ಓ ಚಿನ್ನ 

ಬಾನು ಇಲ್ಲವೆ, ನಿನ್ನುಸಿರ ತಾಳವು ಬಲು ಚೆನ್ನ 


ಅರಳಿದೆ, ಹೂ ಮಲ್ಲಿಗೆ, ಉಸಿರಾಡಿದೆ ನಿನಗಾಗಿಯೇ 

ನೀ  ನನಗೆ, ನಾ ನಿನಗೆ, ಜೀವನ ನಗುತಲಿದೆ ।।೨।।





Beladingalagi Baa (ಬೆಳದಿಂಗಳಾಗಿ ಬಾ)

Movie: Huliya Haalina Mevu (1979)

Singer: Dr Rajkumar

Song link: Click Here


Beladingalagi baa.. beladingalagi baa

Tangaliyagi nanu, aanandava needuve

Ondaguve.. beladingalagi baa.. ||


Kannalli tumbi cheluva, edeyalli tumbi olava

Baalalli tumbide.. ullasava 

Nannedeya tala neenu

Nannusira raga neenu

Nannodala jeeva nee.. santhoshave..

Neenillavadare ee prana nillade (2) ||


Kaveri tayi nanna, baa endu kugi ninna

Needidalu baalige.. belakagalu..

Aa deviyaane neene, 

Sangaati kele jaane

Needuenu bhasheya, bidu chinteya..

Ee namma premake, na kodale kanike (2) ||


ಚಿತ್ರಗೀತೆ 


ಬೆಳದಿಂಗಳಾಗಿ ಬಾ ..  ಬೆಳದಿಂಗಳಾಗಿ ಬಾ .. 

ತಂಗಾಳಿಯಾಗಿ ನಾನು, ಆನಂದವ ನೀಡುವೇ .. 

ಒಂದಾಗುವೇ ..  ಬೆಳದಿಂಗಳಾಗಿ ಬಾ .. ।।ಪ।।


ಕಣ್ಣಲ್ಲಿ ತುಂಬಿ ಚೆಲುವ, ಎದೆಯಲ್ಲಿ ತುಂಬಿ ಒಲವ 

ಬಾಳಲ್ಲಿ ತುಂಬಿದೇ .. ಉಲ್ಲಾಸವ 

ನನ್ನೆದೆಯ ತಾಳ ನೀನು 

ನನ್ನುಸಿರ ರಾಗ ನೀನು 

ನನ್ನೊಡಲ ಜೀವ ನೀ.. ಸಂತೋಷವೇ .. 

ನೀನಿಲ್ಲವಾದರೆ ಈ ಪ್ರಾಣ ನಿಲ್ಲದೆ (೨) ।।೧।।


ಕಾವೇರಿ ತಾಯಿ ನನ್ನ, ಬಾ ಎಂದು ಕೂಗಿ ನಿನ್ನ 

ನೀಡಿದಳು ಬಾಳಿಗೇ .. ಬೆಳಕಾಗಲು 

ಆ ದೇವಿಯಾಣೆ ನೀನೇ 

ಸಂಗಾತಿ ಕೇಳೆ ಜಾಣೆ 

ನೀಡುವೆನು ಭಾಷೆಯ, ಬಿಡು ಚಿಂತೆಯಾ ..  

ಈ ನಮ್ಮ ಪ್ರೇಮಕೆ, ನಾ ಕೊಡಲೆ ಕಾಣಿಕೆ (೨) ।।೨।।




Sunday, May 21, 2023

Gaganave Baagi (ಗಗನವೇ ಬಾಗಿ)

Movie: Sanju Weds Geeta (2011)

Singer: Shreya ghoshal

Song link: click Here


Gaganave baagi bhuviyanu kelida haage

Kadalu karedante nadiyanu bhetige

Yaru bandirada manasali, ninna aagamana ee dina+

Needuva munna nane aamantrana ||


Jeevana ee kashana shuruvadantide

Kanasina oorina kada tereyuttide

Alabeku omme antaniside

Khushiyeega mere meeri

Madhumasadante kai chachide, hasiraitu nanna daari

Needuva munna nane aamantrana ||


Savina anchina badukantade nee

Savira suryara belakantade nee

Koneyase onde ee jeevake, ninna koodi balabeku

Prati janmadallu ne heegeye nanna preeti madabeku

Needuva munna nane aamantrana ||


ಚಿತ್ರಗೀತೆ 


ಗಗನವೇ ಬಾಗಿ ಭುವಿಯನು ಕೇಳಿದಾ ಹಾಗೆ 

ಕಡಲು ಕರೆದಂತೆ ನದಿಯನೂ ಭೇಟಿಗೇ 

ಯಾರು ಬಂದಿರದ ಮನಸಲಿ, ನಿನ್ನ ಆಗಮನ ಈ ದಿನ 

ನೀಡುವ ಮುನ್ನ ನಾನೆ ಆಮಂತ್ರಣ ।।ಪ।।


ಜೀವನ ಈ ಕ್ಷಣ ಶುರುವಾದಂತಿದೆ 

ಕನಸಿನ ಊರಿನ ಕದ ತೆರೆಯುತ್ತಿದೆ 

ಅಳಬೇಕು ಒಮ್ಮೆ ಅಂತನಿಸಿದೆ 

ಖುಷಿಯೀಗ ಮೀರಿ ಮೀರಿ 

ಮಧು ಮಾಸದಂತೆ ಕೈ ಚಾಚಿದೆ, ಹಸಿರಾಯ್ತು ನನ್ನ ದಾರಿ

 ನೀಡುವ ಮುನ್ನ ನಾನೆ ಆಮಂತ್ರಣ ।।೧।।


ಸಾವಿನಾ ಅಂಚಿನಾ ಬದುಕಂತಾದೆ ನೀ 

ಸಾವಿರ ಸೂರ್ಯರ ಬೆಳಕಂತಾದೆ ನೀ 

ಕೊನೆಯಾಸೆ ಒಂದೆ ಈ ಜೀವಕೆ, ನಿನ್ನ ಕೂಡಿ ಬಾಳಬೇಕು 

ಪ್ರತಿ ಜನ್ಮದಲ್ಲೂ ನೀ ಹೀಗೆಯೆ, ನನ್ನ ಪ್ರೀತಿ ಮಾಡಬೇಕೂ 

ನೀಡುವ ಮುನ್ನ ನಾನೆ ಆಮಂತ್ರಣ ।।೨।।



Avanalli Ivalilli (ಅವನಲ್ಲಿ ಇವಳಿಲ್ಲಿ)

Movie: Shh !!! (1993)

Singer: L N Shastri

Song link: Click Here


Avanalli ivalilli matilla katheyilla

Edureduru bandaga hedarhedari nintaga

Alle aarambha prema

Avanalli ivalilli matilla katheyilla ||


Nodi nodi premavanu madodalla

Madutali haadodalla

Haadinali helodalla, heluvuda kelodalla

Kelutali kaliyodalla. kalitu nee madodalla

Mounavene, dhyanave prema

Avanalli ivalilli matilla katheyilla ||


Neene ella neenirade baale illa

Annuvudu prema alla

Maragalanu suttodalla, kavanagala geechodalla

Nettarali bareyodalla, vishavanu kudiyodalla

Mounavene dhyanave prema

Avanalli ivalilli matilla katheyilla

Edureduru bandaga hedarhedari nintaga

Alle aarambha prema

Avanalli ivalilli matilla katheyilla ||


ಚಿತ್ರಗೀತೆ 


ಅವನಲ್ಲಿ ಇವಳಿಲ್ಲಿ ಮಾತಿಲ್ಲ ಕಥೆಯಿಲ್ಲ 

ಎದುರೆದುರು ಬಂದಾಗ ಹೆದರ್ ಹೆದರಿ  ನಿಂತಾಗ 

ಅಲ್ಲೇ ಆರಂಭ ಪ್ರೇಮ 

ಅವನಲ್ಲಿ ಇವಳಿಲ್ಲಿ ಮಾತಿಲ್ಲ ಕಥೆಯಿಲ್ಲ ।।ಪ।।


ನೋಡಿ ನೋಡಿ, ಪ್ರೇಮವನು ಮಾಡೋದಲ್ಲ 

ಮಾಡುತಲಿ ಹಾಡೋದಲ್ಲ 

ಹಾಡಿನಲಿ ಹೇಳೋದಲ್ಲ, ಹೇಳುವುದ ಕೇಳೋದಲ್ಲ 

ಕೇಳುತಲಿ ಕಲಿಯೋದಲ್ಲ, ಕಲಿತು ನೀ ಮಾಡೋದಲ್ಲ

ಮೌನವೇನೆ, ಧ್ಯಾನವೆ ಪ್ರೇಮ

 ಅವನಲ್ಲಿ ಇವಳಿಲ್ಲಿ ಮಾತಿಲ್ಲ ಕಥೆಯಿಲ್ಲ।।೧।।


ನೀನೇ ಎಲ್ಲ, ನೀನಿರದೆ ಬಾಳೇ ಇಲ್ಲ 

ಅನ್ನುವುದು ಪ್ರೇಮ ಅಲ್ಲ 

ಮರಗಳನು ಸುತ್ತೋದಲ್ಲ, ಕವನಗಳ ಗೀಚೋದಲ್ಲ 

ನೆತ್ತರಲಿ ಬರೆಯೋದಲ್ಲ, ವಿಷವನು ಕುಡಿಯೋದಲ್ಲ 

ಮೌನವೇನೆ, ಧ್ಯಾನವೆ ಪ್ರೇಮ 

ಅವನಲ್ಲಿ ಇವಳಿಲ್ಲಿ ಮಾತಿಲ್ಲ ಕಥೆಯಿಲ್ಲ 

ಎದುರೆದುರು ಬಂದಾಗ ಹೆದರ್ ಹೆದರಿ ನಿಂತಾಗ 

ಅಲ್ಲೇ ಆರಂಭ ಪ್ರೇಮ 

ಅವನಲ್ಲಿ ಇವಳಿಲ್ಲಿ ಮಾತಿಲ್ಲ ಕಥೆಯಿಲ್ಲ।।೨।।



 



Saturday, May 20, 2023

Sneha Ati Madhura (ಸ್ನೇಹ ಅತಿ ಮಧುರ)

Bhavageete

Sahitya: Na kru Satyanarayana

Song link: Click Here


Sneha ati madhura, sneha adu amara (2)

Snehave gudiyu, preetiye devaru (2)

Kala, desha, meerida bhava

Sneha ati madhura, sneha adu amara ||


Snehake vayassina antaravilla

Siritana badatana seemegalilla

Snehake swarthada aasegalilla

Samate mamate snehada gana

Sneha ati madhura, Sneha adu amara

Sneha ati madhura ||


Oduva nadige modada sneha

Araluva hoovige kiranada sneha

Bangarada sashige sagarada sneha

Olavu, nalivu, snehada cheluvu 

Sneha ati madhura, Sneha adu amara ||


Lokada jeevana snehada bandhana

Pavana prema snehada spandana

Snehava bayasada janarelliharu

Haalu jenu snehada sangama

Sneha ati madhura, Sneha adu amara

Sneha ati madhura ||


ಭಾವಗೀತೆ 


ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ (೨)

ಸ್ನೇಹವೇ ಗುಡಿಯು, ಪ್ರೀತಿಯೇ ದೇವರು (೨)

ಕಾಲ ದೇಶ ಮೀರಿದ ಭಾವ 

ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ ।।ಪ।।


ಸ್ನೇಹಕೆ ವಯಸ್ಸಿನ ಅಂತರವಿಲ್ಲ 

ಸಿರಿತನ ಬಡತನ ಸೀಮೆಗಳಿಲ್ಲ 

ಸ್ನೇಹಕೆ ಸ್ವಾರ್ಥದ ಆಸೆಗಳಿಲ್ಲ 

ಸಮತೇ, ಮಮತೇ ಸ್ನೇಹದ ಗಾನ 

ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ ।।೧।।


ಓಡುವ ನದಿಗೆ ಮೋಡದ ಸ್ನೇಹ 

ಅರಳುವ ಹೂವಿಗೆ ಕಿರಣದ ಸ್ನೇಹ 

ಬಂಗಾರದ ಶಶಿಗೆ ಸಾಗರದ ಸ್ನೇಹ 

ಒಲವೂ, ನಲಿವೂ ಸ್ನೇಹದ ಚೆಲುವು 

ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ ।।೨।।


ಲೋಕದ ಜೀವನ ಸ್ನೇಹದ ಬಂಧನಾ 

ಪಾವನ ಪ್ರೇಮ ಸ್ನೇಹದ ಸ್ಪಂದನಾ 

ಸ್ನೇಹವ ಬಯಸದ ಜನರೆಲ್ಲಿಹರು 

ಹಾಲು ಜೇನು ಸ್ನೇಹದ ಸಂಗಮ 

ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ ।।೩।।



Thursday, May 18, 2023

Socha Tha Kya, Kya Ho Gaya (सोचा था क्या, क्या हो गया)

Movie: Anmol Ghadi (1946)

Singer: Suraiyya 

Song link: Click Here


Socha tha kya, kya ho gaya, kya ho gaya

Apna jise samje the hum, afasos vo apna na tha 

Socha tha kya, kya ho gaya, kya ho gaya ||


Gouron ki ismein kya khata

Karte hein apno se gila

Kya ho gaya,  kya ho gaya

Socha tha kya, kya ho gaya, kya ho gaya ||


Ai dil na ro, ai dil na ro

Hairaan na ho

Hona tha jo vo ho gaya

Rone se ab kya fayada

Kya ho gaya, kya ho gaya

Socha tha kya, kya ho gaya, kya ho gaya ||             


Jo kuch bhi dekha khwab tha

Iss khwab ko ab bhool ja

Bhool ja, kya ho gaya, kya ho gaya

Socha tha kya, kya ho gaya, kya ho gaya ||             


गाना 


सोचा था क्या, क्या हो गया, क्या हो गया 

अपना जिसे समझे थे हम, अफ़सोस वो अपना न था 

सोचा था क्या, क्या हो गया, क्या हो गया।                                                                                                                               


गौरों की इसमें क्या ख़ता 

करते हैं अपनों से गिला 

क्या हो गया,  क्या हो गया

सोचा था क्या, क्या हो गया, क्या हो गया। 


ऐ दिल न रो, ऐ दिल न रो, हैरान न हो 

होना था जो वो हो गया 

रोने से अब क्या फायदा 

क्या हो गया,  क्या हो गया

सोचा था क्या, क्या हो गया, क्या हो गया। 


जो कुछ भी देखा ख्वाब था 

इस ख्वाब को अब भूल जा 

भूल जा, क्या हो गया, क्या हो गया 

सोचा था क्या, क्या हो गया, क्या हो गया। 



Wednesday, May 17, 2023

Aawaz De Kahan Hai (आवाज़ दे कहां है)

Movie: Anmol Ghadi (1946)

Singers: Surendra, Noor Jahan

Song link: Click Here


Aawaz de kahan hai

Duniya meri javan hai

Aabaad mere dil mein

Ummeed ka jahan hai 

Duniya meri javan hai 

Aawaz de kahan hai ||


Aa raat ja rahi hai

Yun jaise chandani ki 

Baraat ja rahi hai

Chalne ko ab phalak se

Taaron ka karavaan hai

Aise mein tu kahan hai

Duniya meri javan hai 

Aawaz de kahan hai ||


Kismat pai cha rahi hai

Kyun raat ki siyahi

Veeraan hain meri neendein

Taaron se le gavayi ||


Barbaad mein yahan hoon 

Aabaad tu kahan hai

Bedard aasmaan hai

Duniya meri javan hai

 Aawaz de kahan hai ||


गाना 


आवाज़ दे कहां है 

दुनिया मेरी जवां है 

आबाद मेरे दिल में 

उम्मींद का जहां है 

दुनिया मेरी जवां है

आवाज़ दे कहां है।  


आ रात जा रही है 

यूं जैसे चांदनी की 

बारात जा रही है 

चलने को अब फ़लक़ से 

तारों का कारवाँ है 

ऐसे में तू कहां है 

दुनिया मेरी जवां है

आवाज़ दे कहां है। 


क़िस्मत पै छा रही है 

क्यूँ  रात की सियाही 

वीरां हैं मेरी नींदें 

तारों से ले गवाही। 


बरबाद मैं यहाँ हूँ 

आबाद तू कहाँ है 

बेदर्द आसमाँ है 

दुनिया मेरी जवां है

आवाज़ दे कहां है। 

                        




Tuesday, May 16, 2023

Dil Jalta Hai To Jalne De (दिल जलता है तो जलने दे)

Movie: Pehli Nazar (1945)

Singer: Mukesh

Song link: Click Here


Dil jalta hai to jalne de

Aansu na baha phariyad na kar  |

Tu pardanashi ka aashiq hai

Yoon naame vafa barbad na kar ||


Masoom nazar ke teer chala

Vismil ko vismil aur bana |

Ab sharmoo haya ke parde mein

Yoon chup-chup ke bedad na kar ||


Hum aas lagaye baite hein    

Tum vada karke bhool gaye

Ya surat aake dikha javo   

Ya kehdo humko yaad na kar ||


गाना 


दिल जलता है तो जलने दे 

आंसू न बहा फ़रियाद न कर 

तू पर्दानशीं  का आशिक़ है 

यूँ नामे वफ़ा बरबाद न कर।    


मासूम नज़र के तीर चला 

विस्मिल  को विस्मिल और बना 

अब शर्मो  हाय  के पर्दे में 

यूं छुप -छुप के बेदाद न कर। 


हम आस लगाये बैठे हैं 

तुम वादा करके भूल गये 

या सूरत आके दिखा जावो 

या कहेदो हमको याद न कर।   

                                              



                                                                        

Monday, May 15, 2023

Ute Sabke Kadam (उठे सबके कदम)

Movie: Baton Baton Mein (1979)

Singers: Lata Mangeshkar, Pearl Padamse, Amit Kumar

Song link: Click Here


Ute sabke kadam dekho ram-pam-pam

Ajee aise geet gaya karo

Kabhi khushi kabhi gham tara ram-pam-pam

Hanso aur hansaya karo 

Ute sabke kadam.. ||


Vo pyare din aur vo pyari ratein

Yaad hamein hein vo mulakathein

Nahi koi gham mujhe nahi hai gila

Zindagi ki rah mein mila hai jab se tu mujhe re

Humdum shabnam hum hein aur tum

Shola ban jaya karo

Kabhi khushi kabhi gham.. ||


Roop naya hai rang naya hai

Jeene ka to jaane kahan dhang gaya hai

Kise hai fikar kise hai pasand

Pyar ke jahan mein razamandh jab hum tum

Tum hum ban gaye hain sanam

Bedhadak mere ghar aaya karo

Kabhi khushi kabhi gham..

Ute sabke kadam.. ||


गाना 


उठे सबके कदम देखो रम-पम-पम 

अजी ऐसे गीत गया करो 

कभी खुशी कभी गम तारा रम-पम-पम 

हंसो और हंसाया करो 

उठे सबके कदम.. 


वो प्यारे दिन और वो प्यारी रातें 

याद हमें हैं वो मुलाकातें 

नहीं कोई गम मुझे नहीं है गिला 

जिन्दगी की राह में मिले है जब से तु मुझे रे 

हमदम शबनम हम हैं और तुम 

शोला बन जाया करो 

कभी खुशी कभी गम


रूप नया है रंग नया है 

जीने का तो जाने कहां ढंग गया है 

किसे है फिकर किसे है पसन्द 

प्यार के जहां में रजामन्द हम तुम 

तुम हम बन गए हैं सनम 

बेधड़क मेरे घर आया करो 

कभी खुशी कभी गम 

उठे सबके कदम.. 

                          







 

Sunday, May 14, 2023

Kabootar Ja Ja Ja (कबूतर जा जा जा)

Movie: Maine Pyar Kiya (1989)

Singers: Lata Mangeskhar, SPB

Song link: Click Here


Ja Ja.. Ja Ja.. Ja Ja.. Ja Ja

Kabootar ja ja ja, kabootar ja ja ja (2)

Pahale pyar ki pahali chitti sajan ko de aa

Kabootar ja ja ja, kabootar ja ja ja ||


Unse kahana jab se gaye tum

Mein to adhuri lagti hoon

Inn hoton pe chup si lagi hai

Na rothi hoon na hansti hoon

Bhool huyi jo unhein sataya oo..

kaisa paap kiya

Kabootar ja ja ja, kabootar ja ja ja ||


Mann hi mann mein unko apna

Sab kuch maan chuki hoon mein

Vo kya hein, mein kaun hoon unki

Ab yeh jaan chuki hoon mein

Unko apne saath hi lana oo..

 Dil hi nahin lagta

 Kabootar ja ja ja, kabootar ja ja ja  ja.. ja.. ||


Yahan ka mausam badha hasi hai

Phir bhi pyaar udaas hai

Unse kehna door sahi mein

Dil to unhin ke paas hai 

Tu yeh sandesha unko sunana oo..

Mein peeche aaya

 Kabootar ja ja ja, kabootar ja ja ja ||


Jahan bhi dekhun tum hi tum ho

Aur nazar na kuch aaye

Dil yeh chahe iss aalam mein

Kash zamana rukh jaaye

Aaj se pahale kabhi nahin thi 

Aaj se pahale kabhi nahin thi itni hansi duniya

Kabootar ja ja ja, kabootar ja ja ja ||


गाना 

जा जा    जा जा    जा जा

कबूतर जा जा जा, कबूतर जा जा जा

पहले प्यार की पहली चिट्टी साजन को दे आ 

कबूतर जा जा जा, कबूतर जा जा जा। 


उनसे केहेना जब से गये तुम, मैं तो अधूरी लगती हूं 

इन होठों पे चुप सी लगी है, ना रोती हूं ना हंसती हूं 

भूल हुई जो उन्हें सताया कैसा पाप किया 

कबूतर जा जा जा, कबूतर जा जा जा। 


मन ही मन में उनको अपना सब कुछ मान चुकी हूँ मैं 

वो क्या हैं, मैं कौन हूं उनकी, अब ये जान चुकी हूं मैं 

उनको अपने साथ ही लाना, दिल ही नहीं लगता 

कबूतर जा जा जा, कबूतर जा जा जा। 


यहां का मौसम बड़ा हसीं है फिर भी प्यार उदास है 

उनसे कहना दूर सही में, दिल तो उन्हीं के पास है 

तू ये संदेशा उनको सुनना मैं पीछे आया 

कबूतर जा जा जा, कबूतर जा जा जा। 


जहाँ भी देखूं तुम ही तुम हो 

और नज़र न कुछ आये 

दिल ये चाहे इस आलम में 

काश ज़माना रुख जाये 

आज से पहले कभी नहीं थी 

आज से पहले कभी नहीं थी इतनी हसीं दुनिया 

कबूतर जा जा जा, कबूतर जा जा जा। 




Wednesday, May 10, 2023

Ee Kate (ಈ ಕತೆ)

Padya

Sahitya: G P Rajaratnam


Ondu kadina madhyadolage

Eradu maragala naduve malagi

Mooru karadigaladutidduvu

Naku marigala serisi.


Aidu janara betegararu

Aaru balegalaneledu tandu

Elu karadiya hididu nodade

'Entu hididevu' endaru.


'Ombatten' danu avaralobba

'Hattu' endanu bereyavanu

Enisi nodidarele elu-

Illigeekate mugiyitu.


ಪದ್ಯ 


ಒಂದು ಕಾಡಿನ ಮಧ್ಯದೊಳಗೆ 

ಎರಡು ಮರಗಳ ನಡುವೆ ಮಲಗಿ 

ಮೂರು ಕರಡಿಗಳಾಡುತಿದ್ದುವು 

ನಾಕು ಮರಿಗಳ ಸೇರಿಸಿ. 


ಐದು ಜನರಾ ಬೇಟೆಗಾರರು 

ಆರು ಬಲೆಗಳನೆಳೆದು ತಂದು 

ಏಳು ಕರಡಿಯ ಹಿಡಿದು ನೋಡದೆ 

'ಎಂಟು ಹಿಡಿದೆವು' ಎಂದರು. 


'ಒಂಬತೆ೦' ದನು ಅವರಲೊಬ್ಬ 

'ಹತ್ತು' ಎಂದನು ಬೇರೆಯವನು 

ಎಣಿಸಿ ನೋಡಿದರೆಳೇ ಏಳು -

ಇಲ್ಲಿಗೀಕತೆ ಮುಗಿಯಿತು.     

                   

Monday, May 8, 2023

Hattu Makkalu (ಹತ್ತು ಮಕ್ಕಳು)

Padya

Sahitya: G P Rajaratnam


Putta makkalu hattu

Gantu moote hottu

Odi hattalu dibba

Jari biddavanobba


Ulidavarombatu mandi

Hindake bidda chandi

Hegalige biddu gantu

Mundake nadedavarentu


Entaralobba kunta

Kalu murida tunta

Mundake hodavarelu

Obbana kacchitu chelu


Chelu bantu chelu

Eddu peri keelu

Odalara bora

Odidavararu


Kambi kittavararu

Kalige gajina chooru

Kulitanobba haida

Nadedu hodavaraidu


Male hole bantu

Makkala naduve nintu

Eeche kade saku

Aache kade naku


Mundake halla joke

Adanu haarabeku

Haaralara puttu

Mooru mandi gatti


Hidiyalendu karadi

Baleyittu haradi

Biddanadake garuda

Ulida makkaleradu


Ibbaralobba sustu

Aagi tinda gastu

Ulidavanobba ondu

Konevanobba ondu


Konevanobba ondu

Kambada marege tandu

"Innalestu tayi?"

"Dodda kumbalakayi!"


ಪದ್ಯ 


ಪುಟ್ಟ ಮಕ್ಕಳು ಹತ್ತು 

ಗಂಟು ಮೂಟೆ ಹೊತ್ತು 

ಓಡಿ ಹತ್ತಲು ದಿಬ್ಬ 

ಜಾರಿ ಬಿದ್ದವನೊಬ್ಬ 


ಉಳಿದವರೊಂಬತು ಮಂದಿ 

ಹಿಂದಕೆ ಬಿದ್ದ ಚಂದಿ 

ಹೆಗಲಿಗೆ ಬಿದ್ದು ಗಂಟು 

ಮುಂದಕೆ ನಡೆದವರೆಂಟು 


ಎಂಟರಲೊಬ್ಬ ಕುಂಟ 

ಕಾಲು ಮುರಿದ ತುಂಟ 

ಮುಂದಕೆ ಹೋದವರೇಳು 

ಒಬ್ಬನ ಕಚ್ಚಿತು ಚೇಳು 


ಚೇಳು ಬಂತು ಚೇಳು 

ಎದ್ದು ಪೇರಿ ಕೀಳು 

ಓಡಲಾರ ಬೋರ 

ಓಡಿದವರಾರು 


ಕಂಬಿ ಕಿತ್ತವರಾರು 

ಕಾಲಿಗೆ ಗಾಜಿನ ಚೂರು 

ಕುಳಿತನೊಬ್ಬ ಹೈದ 

ನಡೆದು ಹೊದವರೈದು 


ಮಳೆ ಹೊಳೆ ಬಂತು 

ಮಕ್ಕಳ ನಡುವೆ ನಿಂತು 

ಈಚೆ ಕಡೆ ಸಾಕು 

ಆಚೆ ಕಡೆ ನಾಕು 


ಮುಂದಕೆ ಹಳ್ಳ ಜೋಕೆ 

ಅದನು ಹಾರಬೇಕು 

ಹಾರಲಾರ ಪುಟ್ಟು 

ಮೂರು ಮಂದಿ ಗಟ್ಟಿ 


ಹಿಡಿಯಲೆಂದು ಕರಡಿ 

ಬಲೆಯಿತ್ತು ಹರಡಿ 

ಬಿದ್ದನದಕೆ ಗರುಡ 

ಉಳಿದ ಮಕ್ಕಳೆರಡು 


ಇಬ್ಬರಲೊಬ್ಬ ಸುಸ್ತು 

ಆಗಿ ತಿಂದ ಗಸ್ತು 

ಉಳಿದವನೊಬ್ಬ ಒಂದು 

ಕೊನೇವನೊಬ್ಬ ಒಂದು 


ಕೊನೇವನೊಬ್ಬ ಒಂದು 

ಕಂಬದ ಮರೆಗೆ ತಂದು 

"ಇನ್ನಲೆಷ್ಟು ತಾಯಿ ?"

"ದೊಡ್ಡ ಕುಂಬಳಕಾಯಿ !". 

               



Varshake Aare Aaru Ruthu (ವರ್ಷಕೆ ಆರೇ ಆರು ಋತು)

Padya

Sahitya: G P Rajaratnam


Chaitra vaishakha vasanta ruthu

Jyeshta aashdhavu greeshma ruthu

Shravana bhadrapada varsha ruthu

Aashweeja kartika sharadrutu


Magashira pushyavu hemanta

Magha phalgunagalu shishira ruthu

Tingalu eradake ondu ruthu

Varshake aare aaru ruthu.


ಪದ್ಯ 


ಚೈತ್ರ ವೈಶಾಖ ವಸಂತ ಋತು 

ಜ್ಯೇಷ್ಠ ಆಷಾಢವು ಗ್ರೀಷ್ಮ ಋತು 

ಶ್ರಾವಣ ಭಾದ್ರಪದ ವರ್ಷ ಋತು 

ಆಶ್ವೀಜ ಕಾರ್ತಿಕ ಶರದೃತು 


ಮಾರ್ಗಶಿರ ಪುಷ್ಯವು ಹೇಮಂತ 

ಮಾಘ ಫಾಲ್ಗುಣಗಳು ಶಿಶಿರಋತು

ತಿಂಗಳು ಎರಡಕೆ ಒಂದು ಋತು 

ವರ್ಷಕೆ ಆರೇ ಆರು ಋತು.