Thursday, October 3, 2024

Maneye Gudiyamma (ಮನೆಯೇ ಗುಡಿಯಮ್ಮಾ)

Movie: Gruha Lakshmi (1970)

Singer: S Janaki

Song link: Click Here


Maneye gudiyamma, patiye devaramma (2)

Devara munde kiru nageyemba, jyotiya belagamma

Maneye gudiyamma, patiye devaramma ||


Seveye ninna, usiragirali..aa..aa (2)

Tyagave baalina, pallaviyagali

Ee samsarave, sukha sagaravu (2)

Enisuva bhagyavu, ninadagirali

Maneye gudiyamma, patiye devaramma ||


Haaduva koralu, kogiledaitu

Aaduva anda, navilinadaitu

Yarige enanu koduvano avanu (2)

Adane harushadi, svekarisamma

Maneye gudiyamma, patiye devaramma ||


ಚಿತ್ರಗೀತೆ 


ಮನೆಯೇ ಗುಡಿಯಮ್ಮಾ, ಪತಿಯೇ ದೇವರಮ್ಮಾ (೨)

ದೇವರ ಮುಂದೆ ಕಿರುನಗೆಯೆ೦ಬ, ಜ್ಯೋತಿಯ ಬೆಳಗಮ್ಮಾ 

ಮನೆಯೇ ಗುಡಿಯಮ್ಮಾ, ಪತಿಯೇ ದೇವರಮ್ಮಾ।।ಪ।।


ಸೇವೆಯೇ ನಿನ್ನ, ಉಸಿರಾಗಿರಲೀ ಆ ..ಆ (೨)

ತ್ಯಾಗವೆ ಬಾಳಿನಾ, ಪಲ್ಲವಿಯಾಗಲಿ 

ಈ ಸಂಸಾರವೆ, ಸುಖ ಸಾಗರವು (೨)

ಎನಿಸುವ ಭಾಗ್ಯವು, ನಿನದಾಗಿರಲಿ 

ಮನೆಯೇ ಗುಡಿಯಮ್ಮಾ, ಪತಿಯೇ ದೇವರಮ್ಮಾ।।೧।।


ಹಾಡುವ ಕೊರಳು, ಕೋಗಿಲೆದಾಯ್ತು 

ಆಡುವ ಅಂದ, ನವಿಲಿನದಾಯ್ತು 

ಯಾರಿಗೆ ಏನನು, ಕೊಡುವನೋ ಅವನು (೨)

ಅದನೇ ಹರುಷದಿ, ಸ್ವೀಕರಿಸಮ್ಮಾ 

ಮನೆಯೇ ಗುಡಿಯಮ್ಮಾ, ಪತಿಯೇ ದೇವರಮ್ಮಾ।।೨।।

               

No comments:

Post a Comment