Wednesday, July 30, 2025

Love In Goa (ಲವ್ ಇನ್ ಗೋವಾ)

Movie: Goadalli Cid 999 (1968)

Singer: S Janaki

Song link: Click Here


Love in goa, banni banni ennutide goa,

Love in goa, eleyara swargave goa, 

Honeymoon jodige holiday moodige,

Premada haadige kareyanu kodutide ||


(Love in goa, love love love love.., love in goa

Love in goa, love love love love.., lovely goa)


Hennu hinde kulitare nidhana nidhana,

Kannu munde iruvude vidhana vidhana,

Ellello eke manasu, eegeke sukhada kanasu,

Nee daari aritu nadesu, sogasu aaagale ||


Beechu namma palige walkingige talkingige,

Night clubbide dancige newfancyge romancige,

Hagalu picnic chellata, irulu shake- twist kunidaata, 

Endigu happy happy ||


ಚಿತ್ರಗೀತೆ 


ಲವ್ ಇನ್ ಗೋವಾ, ಬನ್ನಿ ಬನ್ನಿ ಎನ್ನುತಿದೆ ಗೋವಾ,

ಲವ್ ಇನ್ ಗೋವಾ, ಎಳೆಯರ ಸ್ವರ್ಗವೆ ಗೋವಾ, 

ಹನಿಮೂನ್ ಜೋಡಿಗೇ ಹಾಲಿಡೇ ಮೂಡಿಗೇ,

ಪ್ರೇಮದಾ ಹಾಡಿಗೆ ಕರೆಯನು ಕೊಡುತಿದೆ ।।ಪ।।


(ಲವ್ ಇನ್ ಗೋವಾ, ಲವ್ ಲವ್ ಲವ್ ಲವ್ .. , ಲವ್ ಇನ್ ಗೋವಾ

ಲವ್ ಇನ್ ಗೋವಾ, ಲವ್ ಲವ್ ಲವ್ ಲವ್ .. ,ಲವ್ಲೀ ಗೋವಾ )


ಹೆಣ್ಣು ಹಿಂದೆ ಕುಳಿತರೆ, ನಿಧಾನ ನಿಧಾನ,

ಕಣ್ಣು ಮುಂದೆ ಇರುವುದೆ ವಿಧಾನ ವಿಧಾನ,

ಎಲ್ಲೆಲ್ಲೋ ಏಕೆ ಮನಸು, ಈಗೇಕೆ ಸುಖದಾ ಕನಸು,

ನೀ ದಾರೀ ಅರಿತು ನಡೆಸು, ಸೊಗಸು ಆಗಲೇ ।।೧।।


ಬೀಚು ನಮ್ಮ ಪಾಲಿಗೇ ವಾಕಿಂಗಿಗೇ ಟಾಕಿಂಗಿಗೇ,

ನೈಟು ಕ್ಲಬ್ಬಿದೆ ಡ್ಯಾನ್ಸಿಗೆ ನ್ಯೂಫ್ಯಾನ್ಸಿಗೆ  ರೋಮಾನ್ಸಿಗೆ,

ಹಗಲು ಪಿಕ್ ನಿಕ್ ಚೆಲ್ಲಾಟ, ಇರುಳು ಷೇಕ್ - ಟ್ವಿಸ್ಟ್ ಕುಣಿದಾಟ,

ಎಂದಿಗೂ ಹ್ಯಾಪೀ  ಹ್ಯಾಪೀ ।।೨।।

               

Minchidu Ee Hennu (ಮಿಂಚಿದು ಈ ಹೆಣ್ಣು)

Movie: Goadalli Cid 999 (1968)

Singer: Renuka

Song link: Click Here


Minchidu ee hennu, chanchala ee kannu -raja,

Ido nodu jote needu, ee hombannada hennodane aadu ||


Hosabayake naa moodisuve, hale chinte naa odisuve,

Hosa hareya naa hommisuve, ennandadali.. aadisuve ninna ||


Kai sokadeye mai taakadeye, ninnasegalu kaiguduvude?

Gulabiya hoo kapoladali, kenjena savi sevisalu nee baa ||


ಚಿತ್ರಗೀತೆ 


ಮಿಂಚಿದು ಈ ಹೆಣ್ಣು , ಚಂಚಲ ಈ ಕಣ್ಣು - ರಾಜಾ,

ಇದೋ ನೋಡು ಜೊತೇ ನೀಡು, ಈ ಹಂಬಣ್ಣದಾ ಹೆಣ್ಣೊಡನೇ ಆಡು 

।।ಪ।।


ಹೊಸಾಬಯಕೆ ನಾ  ಮೂಡಿಸುವೆ, ಹಳೇ ಚಿಂತೆ ನಾ ಓಡಿಸುವೆ,

ಹೊಸಾಹರೆಯ ನಾ ಹೊಮ್ಮಿಸುವೆ, ಎನ್ನಂದದಲೀ ಆಡಿಸುವೇ ನಿನ್ನಾ ।।೧।।


ಕೈ ಸೋಕದೆಯೇ ಮೈ ತಾಕದೆಯೇ,ನಿನ್ನಾಸೆಗಳೂ ಕೈಗೂಡುವುದೇ ?

ಗುಲಾಬಿಯ ಹೂ ಕಪೋಲದಲೀ, ಕೆಂಜೇನ ಸವಿ ಸೇವಿಸಲು ನೀ ಬಾ ।।೨।।

                                       

Thursday, July 24, 2025

Malligeya Mogadalli (ಮಲ್ಲಿಗೆಯ ಮೊಗದಲ್ಲಿ)

Bhaktigeete

Singer: Nanditha

Song link: Click Here


Malligeya mogadalli malleya nagu chelli kulitihalu,

Omshakti nodilli, sumangaliyarella sevanti hootandu,

Omkari padakke neev chelli ||


Hoo chelli devige hoochelliri,

Omshakti paadakke hoo chelliri ||


Kanakaamike ivalu kanakambari chelli,

Neelambike ivalu neelambari chelli,

Sampigeya hoo mudisi savitri devige,

Jaaji malle hoo mudiasi jalajakshi taayige ||


Rudrambike ivalu rudrakshi hoo chelli,

Bhramarambike ivalu bilpatreya chelli,

Tumbeya hoo mudisi tandramma taayige,

Tulasi maaleya todisi tulasamma devige ||


ಭಕ್ತಿಗೀತೆ 


ಮಲ್ಲಿಗೆಯ ಮೊಗದಲ್ಲಿ ಮಲ್ಲೆಯಾ ನಗು ಚೆಲ್ಲಿ ಕುಳಿತಿಹಳು,

ಓಂಶಕ್ತಿ ನೋಡಿಲ್ಲಿ, ಸುಮಂಗಲಿಯರೆಲ್ಲ ಸೇವಂತಿ ಹೂತಂದು,

ಓಂಕಾರಿ ಪಾದಕ್ಕೆ ನೀವ್ ಚೆಲ್ಲಿ ।।ಪ।।


ಹೂ ಚೆಲ್ಲಿ ದೇವಿಗೆ ಹೂ ಚೆಲ್ಲಿರಿ,

ಓಂಶಕ್ತಿ ಪಾದಕ್ಕೆ ಹೂ ಚೆಲ್ಲಿರಿ !


ಕನಕಾಂಬಿಕೆ ಇವಳು ಕನಕಾಂಬರಿ ಚೆಲ್ಲಿ,

ನೀಲಾಂಬಿಕೆ ಇವಳು ನೀಲಾಂಬರಿ ಚೆಲ್ಲಿ,

ಸಂಪಿಗೆಯ ಹೂ ಮುಡಿಸಿ ಸಾವಿತ್ರಿ ದೇವಿಗೆ,

ಜಾಜಿ ಮಲ್ಲೆ ಹೂ ಮುಡಿಸಿ ಜಲಜಾಕ್ಷಿ ತಾಯಿಗೆ ।।೧।।


ರುದ್ರಾ೦ಬಿಕೆ ಇವಳು ರುದ್ರಾಕ್ಷಿ ಹೂ ಚೆಲ್ಲಿ,

ಭ್ರಮರಾಂಬಿಕೆ ಇವಳು ಬಿಲ್ಪತ್ರೆಯಾ ಚೆಲ್ಲಿ,

ತುಂಬೆಯ ಹೂ ಮುಡಿಸಿ ತಂದ್ರಮ್ಮ ತಾಯಿಗೆ,

ತುಳಸಿ ಮಾಲೆಯ ತೊಡಿಸಿ ತುಳಸಮ್ಮ ದೇವಿಗೆ ।।೨।।   

                             

Amma Nee Daye Toreya (ಅಮ್ಮ ನೀ ದಯೆ ತೋರೆಯಾ)

Bhaktigeete

Singer: Gangotri

Song link: Click Here


Amma nee daye toreya omshakti maaye,

Amma nee daye toreya,

Yogiyu naanalla jogiyu naanalla,

Hulu maanava bhogi naanu karunisamma ||


Jnana siddiya kottu ajnanava alisu,

Dharma buddiyannittu adharmava alisu, taaye

Satyava nee nudisu asatyava alisu,

Nuraase sereyinda nannannu nee bidisu||


Kantiya kangalinda kaama mohava alisu,

Shantiya manassinda mada matsarya alisu, taaye

Krantiya buddhiyinda krodha lobhava alisu,

Dwesha swarthagalinda nannannu nee ulisu ||


ಭಕ್ತಿಗೀತೆ 


ಅಮ್ಮ ನೀ ದಯೆ ತೋರೆಯಾ  ಓಂಶಕ್ತಿ ಮಾಯೇ,

ಅಮ್ಮ ನೀ ದಯೆ ತೋರೆಯಾ .. 

ಯೋಗಿಯು ನಾನಲ್ಲ ಜೋಗಿಯು ನಾನಲ್ಲ,

ಹುಲು ಮಾನವ ಭೋಗಿ ನಾನು ಕರುಣಿಸಮ್ಮ ।।ಪ।।


ಜ್ಞಾನ ಸಿದ್ದಿಯ ಕೊಟ್ಟು ಅಜ್ಞಾನವ ಅಳಿಸು,

ಧರ್ಮ ಬುದ್ದಿಯನ್ನಿಟ್ಟು ಅಧರ್ಮವ ಅಳಿಸು, ತಾಯೇ 

ಸತ್ಯವ ನೀ ನುಡಿಸು ಅಸತ್ಯವ ಅಳಿಸು,

ನೂರಾಸೆ ಸೆರೆಯಿಂದ ನನ್ನನ್ನು ನೀ ಬಿಡಿಸು ।।೧।।


ಕಾಂತಿಯ ಕಂಗಳಿಂದ ಕಾಮ ಮೋಹವ ಅಳಿಸು,

ಶಾಂತಿಯ ಮನಸ್ಸಿಂದ ಮದ ಮಾತ್ಸರ್ಯ ಅಳಿಸು, ತಾಯೇ 

ಕ್ರಾಂತಿಯ ಬುದ್ದಿಯಿಂದ ಕ್ರೋಧ ಲೋಭವ ಅಳಿಸು,

ದ್ವೇಷ ಸ್ವಾರ್ಥಗಳಿಂದ ನನ್ನನ್ನು ನೀ ಉಳಿಸು ।।೨।।

                     

Monday, July 21, 2025

Manolokave Ganesha Mandira (ಮನೋಲೋಕವೆ ಗಣೇಶ ಮಂದಿರ)

Bhaktigeete

Singer: Dr. Rajkumar

Song link: Click Here


Om ganadipataye namah!

Manolokave ganesha mandira,

Adu, adenta sundara,

Bannanege idu balu doora,

Ganapana namisuva manasaara ||


Om Om,

Deva deva nee ganaadipa,

Bhakutara baalina daarideepa,

Ivana anugraha aparoopa,

Ivanu neeguvanu paapa taapa ||


Om om,

Ganesha naamada ucchara,

Bhakuta lokada uddara,

Anukshana avanige namaskara,

Endare kashtada parihaara ||


Om om,

Bhaktavatsala gajavadana,

Bedalu baruvanu takshana,

Ivanige karuneye aabharana aa,

Bhajisalu koduvanu varadaana ||


ಭಕ್ತಿಗೀತೆ 


ಓಂ ಗಣಾದಿಪತಯೇ ನಮಃ 

ಮನೋಲೋಕವೆ ಗಣೇಶ ಮಂದಿರ,

ಅದು, ಅದೆಂತ  ಸುಂದರ,

ಬಣ್ಣನೆಗೆ ಇದು ಬಲುದೂರ,

ಗಣಪನ ನಮಿಸುವ ಮನಸಾರ ।।ಪ।।


ಓಂ ಓಂ,

ದೇವ ದೇವ ನೀ ಗಣಾದಿಪ,

ಭಕುತರ ಬಾಳಿನ ದಾರಿ ದೀಪ,

ಇವನ ಅನುಗ್ರಹ ಅಪರೂಪ,

ಇವನು ನೀಗುವನು ಪಾಪ ತಾಪ ।।೧।।


ಓಂ ಓಂ,

ಗಣೇಶ ನಾಮದ ಉಚ್ಚಾರ,

ಭಕುತ ಲೋಕದ ಉದ್ದಾರ, 

ಅನುಕ್ಷಣ ಅವನಿಗೆ ನಮಸ್ಕಾರ,

ಎಂದರೆ ಕಷ್ಟದ ಪರಿಹಾರ ।।೨।।


ಓಂ ಓಂ,

ಭಕ್ತ ವತ್ಸಲ ಗಜವದನ,

ಬೇಡಲು ಬರುವನು ತಕ್ಷಣ,

ಇವನಿಗೆ ಕರುಣೆಯೇ ಆಭರಣ ಆ ಆ,

ಭಜಿಸಲು ಕೊಡುವನು ವರದಾನ ।।೩।।

                

Eddu Barutaare Node (ಎದ್ದು ಬರುತಾರೆ ನೋಡೆ)

Bhaktigeete

Singers: Bellur Sisters

Song link: Click Here


Eddu barutaare node, eddu barutaare,

Muddu vrundaavanada madhyadolaginda ||


Karadolu sri tulasi nalinakshi maale,

Cheluva aa mukhadolu, holeva dantadinda, tiddi hacchida naama,

Mudreyolu oppida raaya ||


Hrudayada sadanadali padumanabhana bhajisi,

Muda manadinda nitya sadamala roopa taali, daasa guru jagannatha vittalana, preetiya padisuta,

Dutara poreva raaya ||


ಭಕ್ತಿಗೀತೆ 


ಎದ್ದು ಬರುತಾರೆ ನೋಡೆ, ಎದ್ದು ಬರುತಾರೆ,

ಮುದ್ದು ವೃ೦ದಾವನದ ಮಧ್ಯದೊಳಗಿಂದ ।।ಪ।।


ಕರದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆ,

ಚೆಲುವ ಮುಖದೊಳು ಹೊಳೆವ ದಂತದಿಂದ, ತಿದ್ದಿ ಹಚ್ಚಿದ ನಾಮ,

ಮುದ್ರೆಯೊಳು ಒಪ್ಪಿದ ರಾಯ ।।೧।।


ಹೃದಯದಾ ಸದನದಲಿ ಪದುಮನಾಭನ ಭಜಿಸಿ,

ಮುದ ಮನದಿಂದ ನಿತ್ಯ ಸದಮಲ ರೂಪ ತಾಳಿ,

ದಾಸ ಗುರು ಜಗನ್ನಾಥ ವಿಠ್ಠಲನ, ಪ್ರೀತಿಯ ಪಡಿಸುತ ದೂತರ ಪೊರೆಯುವ ರಾಯ ।।೨।।

                               

Kannina Notavu Abba (ಕಣ್ಣಿನ ನೋಟವು ಅಬ್ಬಾ)

Movie: Maduve Maduve Maduve (1969)

Singer: L R Eshwari

Song link: Click Here


Kannina notavu abba! adu kudalu aagale habba!

Ada neneyutaliddare abba, nalidaaduva lokaku habba!

Abbabba, abbabba, abbabba!


Battali nindalu kudide, kannugalindalu kudide,

Battalinindali madhuva kudide nee kangalinda mada kudide,

Ee dina ninnadu endu, nagu nagutali kale indu,

Marali baaradu naale ee dina endu naliyo nee bidade!


Adagideyante manadi, yaavudo ondu daaha,

Adagadantaha daahavante adu eke adara chinte,

Hindina yochane eke? mundina suchane saake?

Indra jaalava illi toruta moha marevydante!


ಚಿತ್ರಗೀತೆ 


ಕಣ್ಣಿನ ನೋಟವು ಅಬ್ಬಾ !ಅದು ಕೂಡಲು ಆಗಲೆ ಹಬ್ಬಾ  !

ಅದ ನೆನೆಯುತಲಿದ್ದರೆ ಅಬ್ಬಾ !ನಲಿದಾಡುವ ಲೋಕಕು 

ಹಬ್ಬಾ !

ಅಬ್ಬಬ್ಬಾ .. ಅಬ್ಬಬ್ಬಾ .. ಅಬ್ಬಬ್ಬಾ !


ಬಟ್ಟಲಿ ನಿಂದಲು ಕುಡಿದೆ, ಕಣ್ಣುಗಳಿಂದಲು ಕುಡಿದೆ,

ಬಟ್ಟಲಿನಿಂದಲಿ ಮಧುವ ಕುಡಿದೆ ನೀ ಕಣ್ಗಳಿಂದ ಮದ ಕುಡಿದೆ,

ಈ ದಿನ ನಿನ್ನದು ಎಂದು, ನಗು ನಗುತಲಿ ಕಳೆ ಇಂದು,

ಮರಳಿ ಬಾರದು ನಾಳೆ ಈ ದಿನ ಎಂದು ನಲಿಯೋ ನೀ ಬಿಡದೆ !


ಅಡಗಿದೆಯಂತೆ ಮನದಿ, ಯಾವುದೋ ಒಂದು ದಾಹ,

ಅಡಗದಂತಹ ದಾಹವಂತೆ ಅದು ಏಕೆ ಅದರ ಚಿಂತೆ,

ಹಿಂದಿನ ಯೋಚನೆ ಏಕೆ ?ಮುಂದಿನ ಸೂಚನೆ ಸಾಕೆ ?

ಇಂದ್ರ ಜಾಲವ ಇಲ್ಲಿ ತೋರುತ ಮೋಹ ಮರೆವುದಂತೇ !

                                   



Jodi Jade Jamuna (ಜೋಡಿ ಜಡೆ ಜಮುನಾ)

Movie: Maduve Maduve Maduve (1969)

Singers: SPB, Sumitra

Song link: Click Here


Ho, jodi jade jamuna, iveradu ganga yamuna,

Nin kanninalli naa banna kanalu, inaki inaki sote!

Ho, elli ninna gamana, kunisutihane madana, 

Ee vayasu toruva sogasu kaanalu, Eko innu chinte!


Mareyuvanthaha vayasu bandire, madhuva kudidide manasu,

Kannu mucchalu samayavillade, kaanutiruveya kanasu,

Nannede nodi tallana needi, etake maadide modi!


Nalku kangalu koodi aadire, koti sukhagala chelli !

Bhumiyallina sukhava saviyalu, swarga ilivudu illi,

Varushagalella nimishagalante, hoguvudante odi odi !


ಚಿತ್ರಗೀತೆ 


ಹೋ, ಜೋಡಿ ಜಡೆ ಜಮುನಾ, ಇವೆರಡು ಗಂಗಾ ಯಮುನಾ,

ನಿನ್ ಕಣ್ಣಿನಲ್ಲಿ ನಾ ಬಣ್ಣ ಕಾಣಲು,ಇಣಕಿ ಇಣಕಿ ಸೋತೆ!

ಹೋ, ಎಲ್ಲಿ ನಿನ್ನ ಗಮನಾ, ಕಾಣಿಸುತಿಹನೆ ಮದನಾ,

ಈ ವಯಸು ತೋರುವ ಸೊಗಸು ಕಾಣಲು, ಏಕೋ ಇನ್ನೂ ಚಿಂತೆ!


ಮರೆಯುವಂಥಹ ವಯಸು ಬಂದಿರೆ, ಮಧುವ ಕುಡಿದಿದೇ ಮನಸು,

ಕಣ್ಣು ಮುಚ್ಚಲು ಸಮಯವಿಲ್ಲದೆ, ಕಾಣುತಿರುವೆಯಾ ಕನಸು,

ನನ್ನೆಡೆ ನೋಡಿ ತಲ್ಲಣ ನೀಡಿ, ಏತಕೆ ಮಾಡಿದೆ ಮೋಡಿ!


ನಾಲ್ಕು ಕಣ್ಗಳು ಕೊಡಿ ಆಡಿರೆ, ಕೋಟಿ ಸುಖಗಳಾ ಚೆಲ್ಲಿ !

ಭೂಮಿಯಲ್ಲಿನ ಸುಖವ ಸವಿಯಲು, ಸ್ವರ್ಗ ಇಳಿವುದು ಇಲ್ಲಿ,

ವರುಷಗಳೆಲ್ಲ ನಿಮಿಷಗಳಂತೆ, ಹೋಗುವುದಂತೆ ಓಡೀ .. ಓಡೀ!

                                     

Friday, July 18, 2025

Parvati Deviya Mai Bevarininda (ಪಾರ್ವತಿ ದೇವಿಯ ಮೈ ಬೆವರಿನಿಂದ)

Bhaktigeete

Singer: SPB

Song link: Click Here


Parvati deviya mai bevarininda hutti banda obba putta kanda,

Taayiya maatinante, taanu bagila kayutta ninta, kailaasa baagila kayutta ninta ||


Bandanallige aaga parameshwara, kailaasadodeya shivashankara,

Dittatanadinda putta baalakanu, tadedu nillisida paramashivananu,

Moolokadodeya, parashivanu naanu, nannannu tadeyalu yaaru neenu!

Yaaradarenu bidalaare naanu, taayiya appane idu endanu,

Kopagondanu aa shivanu prachanda tandava bairavanu,

Shankaranu tanna, trishuladinda, baalakana taleyannu kattarisia!


Snanava mugisi bandalu aaga mangalangi srigouri,

Ayyo shivashiva shankara eke kondiri enna kandana,

Endu kambani harisidalu, badukisi endu bedidalu,

Uttarake tale haaki malagidantha vyaktiya taleyannu kattarisi taa enda shankara,

Shankarana kinkaranu aaneya taleyondu aagale kattarisi tanda,

Satta balakanu matte badukidanu eeshana karuneyinda,

Amma enalu aa kanda, parvatigaayitu aananda,

Gajavadana taanada lambodara, bhaktabhandava deva 

vighneshwara ||


He deva parama karunaamaya, kariraja vadana kai hididu kapado he deena bandhu,

Andhakaaradi mulugi nindiside ninna, aparadhagalanella manniso vakratunda,

Neenallade anya daivavanu kaaneno, kandana jeevavanu karuniso ekadanta...ekadanta ekadanta,

Sharanam gajaananam, Sharanam gajaananam, Sharanam gajaananam, Sharanam gajaananam ||


ಭಕ್ತಿಗೀತೆ 


ಪಾರ್ವತಿ ದೇವಿಯ ಮೈ ಬೆವರಿನಿಂದ ಹುಟ್ಟಿ ಬಂದ ಒಬ್ಬ ಪುಟ್ಟ ಕಂದ,

ತಾಯಿಯ ಮಾತಿನಂತೆ, ತಾನು ಬಾಗಿಲ ಕಾಯುತ್ತ ನಿಂತ, ಕೈಲಾಸ ಬಾಗಿಲ ಕಾಯುತ್ತ ನಿಂತ ।।


ಬಂದನಲ್ಲಿಗೆ ಆಗ ಪರಮೇಶ್ವರಾ, ಕೈಲಾಸದೊಡೆಯ ಶಿವಶಂಕರ,

ದಿಟ್ಟತನದಿಂದ ಪುಟ್ಟ ಬಾಲಕನು, ತಡೆದುನಿಲ್ಲಿಸಿದ ಪರಮಶಿವನನ್ನು ,

ಮೂಲೋಕದೊಡೆಯ, ಪರಶಿವನು ನಾನು, ನನ್ನನ್ನು ತಡೆಯಲು ಯಾರು ನೀನು ?

ಯಾರಾದರೇನು ಬಿಡಲಾರೆ ನಾನು, ತಾಯಿಯ ಅಪ್ಪಣೆ ಇದು ಎಂದನು,

ಕೋಪಗೊಂಡನು ಆ ಶಿವನು ಪ್ರಚಂಡ ತಾಂಡವ ಭೈರವನು,

ಶಂಕರನು ತನ್ನ ತ್ರಿಶೂಲದಿಂದ ಬಾಲಕನ ತಲೆಯನ್ನು ಕತ್ತರಿಸಿದಾ!


ಸ್ನಾನವ ಮುಗಿಸಿ ಬಂದಳು ಆಗ ಮಂಗಳಾಂಗಿ ಶ್ರೀಗೌರಿ,

ಅಯ್ಯೋ ಶಿವಶಿವ ಶಂಕರಾ ಏಕೆ ಕೊಂದಿರಿ ಎನ್ನ ಕಂದನ ಎಂದು,

ಕಂಬನಿ ಹರಿಸಿದಳು, ಬದುಕಿಸಿ ಎಂದು ಬೇಡಿದಳು,

ಉತ್ತರಕೆ ತಲೆ ಹಾಕಿ ಮಲಗಿದಂಥ ವ್ಯಕ್ತಿಯ ತಲೆಯನ್ನು ಕತ್ತರಿಸಿ ತಾ

ಎಂದ ಶಂಕರ, ಶಂಕರನ ಕಿಂಕರನು ಆನೆಯ ತಲೆಯೊಂದು ಆಗಲೆ ಕತ್ತರಿಸಿ ತಂದಾ, ಸತ್ತ ಬಾಲಕನು ಮತ್ತೆ ಬದುಕಿದೆನು ಈಶನ ಕರುಣೆಯಿಂದ,

ಅಮ್ಮಾ ಎನಲು ಆ ಕಂದಾ, ಪಾರ್ವತಿಗಾಯಿತು ಆನಂದಾ, 

ಗಜವದನ ತಾನಾದ ಲಂಬೋದರ, ಭಕ್ತ ಬಾಂಧವ ದೇವ ವಿಘ್ನೇಶ್ವರಾ ।।


ಹೇ ದೇವಾ ಪರಮ ಕರುಣಾಮಯ, ಕರಿರಾಜ ವದನ ಕೈ ಹಿಡಿದು ಕಾಪಾಡೋ ಹೇ ದೀನ ಬಂಧು,

ಅಂಧಕಾರದಿ ಮುಳುಗಿ ನಿಂದಿಸಿದೆ ನಿನ್ನಾ, ಅಪರಾಧಗಳನೆಲ್ಲಾ ಮನ್ನಿಸೋ ವಕ್ರತುಂಡ,

ನೀನಲ್ಲದೆ ಅನ್ಯ ದೈವವನು ಕಾಣೆನೋ, ಕಂದನಾ ಜೀವವನು  ಕರುಣಿಸೋ, ಏಕದಂತ .. ಏಕದಂತ, 

ಶರಣಂ ಗಜಾನನಂ,  ಶರಣಂ ಗಜಾನನಂ,  ಶರಣಂ ಗಜಾನನಂ, ಶರಣಂ ಗಜಾನನಂ ।।

                   

Alli Poorna Chandrama (ಅಲ್ಲಿ ಪೂರ್ಣ ಚಂದ್ರಮ)

Movie: Padaveedhara (1967)

singer: P B Srinivas

Song link: Cick Here


Alli poorna chandrama, illi kanna sangama,

Indu namma baalinalli, madhura milana sambhrama,

Prema poornima (2) ||


Nee mudidiha mallige, preeti sugandhava eedina chellutire,

Kempage aagide gulabi kenne, nachike naliyutide,

Mungurula mantapade, ninnaya mukhavu minchutire,

Prema poornima (2) ||


Kamana billina bannagalella, ninnaya kannali moodutire,

Aa bannagalellava neenindu, eeg enneya kannali tumbutihe,

Odavegalu nenageke? aagire lajjeye aabharana,

Prema poornima (2) ||


ಚಿತ್ರಗೀತೆ 


ಅಲ್ಲಿ ಪೂರ್ಣ ಚಂದ್ರಮ, ಇಲ್ಲಿ ಕಣ್ಣ ಸಂಗಮ,

ಇಂದು ನಮ್ಮ ಬಾಳಿನಲ್ಲಿ, ಮಧುರ ಮಿಲನ ಸಂಭ್ರಮ,

ಪ್ರೇಮ ಪೂರ್ಣಿಮಾ (೨) ।।ಪ।।


ನೀ ಮುಡಿದಿಹ ಮಲ್ಲಿಗೆ, ಪ್ರೀತಿ ಸುಗಂಧವ ಈದಿನ ಚೆಲ್ಲುತಿರೆ,

ಕೆಂಪಗೆ ಆಗಿದೆ ಗುಲಾಬಿ ಕೆನ್ನೆ, ನಾಚಿಕೆ ನಲಿಯುತಿರೆ,

ಮುಂಗುರುಳ ಮಂಟಪದೇ ನಿನ್ನಯ ಮುಖವು ಮಿಂಚುತಿರೆ,

ಪ್ರೇಮ ಪೂರ್ಣಿಮಾ (೨) ।।೧।।


ಕಾಮನ ಬಿಲ್ಲಿನ ಬಣ್ಣಗಳೆಲ್ಲ, ನಿನ್ನಯ ಕಣ್ಣಲಿ ಮೂಡುತಿರೆ,

ಆ ಬಣ್ಣಗಳೆಲ್ಲವ ನೀನಿಂದು, ಈಗ್ ಎನ್ನಯ ಕಣ್ಣಲಿ ತುಂಬುತಿಹೆ,

ಒಡವೆಗಳು ನಿನಗೇಕೆ ? ಆಗಿರೆ ಲಜ್ಜೆಯೆ ಆಭರಣ,

ಪ್ರೇಮ ಪೂರ್ಣಿಮಾ (೨) ।।೨।।

             

Yaarigaagi Badukidanu Avanu (ಯಾರಿಗಾಗಿ ಬದುಕಿದನು ಅವನು)

Movie: Padaveedhara (1967)

Singer: P B Srinivas

Song link: Click Here


Yaarigaagi badukidanu avanu, yaara keli teralidano avanu,

Jeevarashigalali maanava, jagadali ellava tilidavanu,

Chandra suryarane bedarisuvavanu, annada kugige baliyagihanu ||


Vayasiruvaragu kaliyuva vidye, nirudyogigala paalige nidde,

Odida maanava maanavanagade, hottegu battegu chinteyide,

Yaarigagi badukudano avanu, yaara keki teralidano avanu ||


ಚಿತ್ರಗೀತೆ 


ಯಾರಿಗಾಗಿ ಬದುಕಿದನು ಅವನು,ಯಾರ ಕೇಳಿ ತೆರಳಿದನೋ ಅವನು,

ಜೀವರಾಶಿಗಳಲೀ ಮಾನವ, ಜಗದಲಿ ಎಲ್ಲವ ತಿಳಿದವನು,

ಚಂದ್ರ ಸೂರ್ಯರನೆ ಬೆದರಿಸುವವನು, ಅನ್ನದ ಕೂಗಿಗೆ ಬಲಿಯಾಗಿಹನು ।।


ವಯಸಿರುವರೆಗೂ ಕಲಿಯುವ ವಿದ್ಯೆ, ನಿರುದ್ಯೋಗಿಗಳ ಪಾಲಿಗೆ ನಿದ್ದೆ,

ಓದಿದ ಮಾನವ ಮಾನವನಾಗದೆ, ಹೊಟ್ಟೆಗೂ ಬಟ್ಟೆಗೂ ಚಿಂತೆಯಿದೇ,

ಯಾರಿಗಾಗಿ ಬದುಕಿದನೋ ಅವನು, ಯಾರ ಕೇಳಿ ತೆರಳಿದನೋ ಅವನು ।।

                                               

Tuesday, July 15, 2025

Raghavendra Guru Rayara Sevisiro (ರಾಘವೇಂದ್ರ ಗುರು ರಾಯರ ಸೇವಿಸಿರೋ)

Bhaktigeete

Singer: P Susheela

Song link: Click Here


Raghavendra guru rayara sevisiro, soukhyadi jeevisiro,

Tunga teeradi raghuramana poojiparo narashinghana 

bhajakaro ||


Sri sudheendra kara saroja samjata, jagadolu puneeta,

Daasharathiya daasatvava tanavihisi durmatagala jayisi,

Ee sameera mata samstapakaraagi nindakaranu neegi,

Bhusurarige sumsevya sadacharane kangolisuva karane ||


Kundada vara mantralayadalliruva, karedallige baruva,

Brundavana gatha mruttike jalapaana, muktige sopana,

Sandarshana matradali mahaapaapa, badidodi salaapa,

Manda bharyarige dorakadiruva seva, sharanara sanjeeva ||


Shreeda vittalana sannidhana patra, samskrutisuva matra,

Modapadisutiha taanihaparadalli, eetage sari elli,

Mediniyolagin narasalu naa kaane, pusiyal ennane,

Paada smaraneya maadadave paapi, na heluve stapi ||


ಭಕ್ತಿಗೀತೆ 


ರಾಘವೇಂದ್ರ ಗುರು ರಾಯರ ಸೇವಿಸಿರೋ, ಸೌಖ್ಯದಿ ಜೀವಿಸಿರೋ,

ತುಂಗಾ ತೀರದಿ  ರಘುರಾಮನ ಪೂಜಿಪರೋ, ನರಶಿಂಘನ ಭಜಕರೋ 

।।ಪ।।


ಶ್ರೀ ಸುಧೀಂದ್ರ ಕರ ಸರೋಜ ಸಂಜಾತ, ಜಗದೊಳು ಪುನೀತ,

ದಾಶರಥಿಯ ದಾಸತ್ವವ ತಾನ್ವಹಿಸಿ, ದುರ್ಮತಗಳ ಜಯಿಸಿ,

ಈ ಸಮೀರ ಮತ ಸಂಸ್ಥಾಪಕರಾಗಿ, ನಿಂದಕರನು ನೀಗಿ,

ಭೂಸುರರಿಗೆ ಸಂಸೇವ್ಯ ಸದಾಚರಣೆ, ಕಂಗೊಳಿಸುವ ಕರುಣೇ 

।।೧।।


ಕುಂದದ ವರ ಮಂತ್ರಾಲಯದಲ್ಲಿರುವ, ಕರೆದಲ್ಲಿಗೆ ಬರುವ,

ಬೃಂದಾವನಗತ ಮೃತ್ತಿಕೆ ಜಲಪಾನ, ಮುಕ್ತಿಗೆ ಸೋಪಾನ,

ಸಂದರ್ಶನ ಮಾತ್ರದಲಿ ಮಹಾಪಾಪ, ಬಡಿದೋಡಿ ಸಲಾಪ,

ಮಂದ ಭಾಗ್ಯರಿಗೆ ದೊರಕದಿರುವ ಸೇವಾ, ಶರಣರ ಸಂಜೀವ 

।।೨।।


ಶ್ರೀದ ವಿಠಲನ ಸನ್ನಿಧಾನ ಪಾತ್ರ, ಸಂಸ್ಕೃತಿಸುವ  ಮಾತ್ರ,

ಮೋದಪಡಿಸುತಿಹ ತಾನಿಹಪರದಲ್ಲಿ, ಈತಗೆ ಸರಿ ಎಲ್ಲಿ,

ಮೋದಿನಿಯೊಳಗಿನ್ನರಸಲು ನಾ ಕಾಣೆ ಪುಸಿಯಲ್ ಎನ್ನಾಣೆ,

ಪಾದಸ್ಮರಣೆಯ ಮಾಡದವನೇ ಪಾಪಿ, ನಾ ಹೇಳುವೆ ಸ್ಥಾಪಿ ।।೩।।

                                               

Bisi Bisi Bisi (ಬಿಸಿ ಬಿಸಿ ಬಿಸಿ)

Movie: Hoovu Mullu (1968)

Singer: L R Eshwari

Song link: Joisaavn.com


Ammayyo hay!

Haa! bisi bisi bisi maige eride,

Chali chali chali ello seride,

Ammayyo....haay  ammayyo...haay ||


Tanniraagiralu innu sekheyeko,

Mai jothege manada chellata yeko,

Manadali eno tumbire chinte,

Talamala eegeko kaane kaane kaane,

Ammayyo....haay  ammayyo ||


Appalsi dadake chimmutire neeru,

Ee tunta tanava kottavaru yaaru?

Dadada elle daatade ille,

Alegalu ennutive, nillu nillu nillu,

Ammayyo... haay ammayyao ||


ಚಿತ್ರಗೀತೆ 


ಅಮ್ಮಯ್ಯೋ.... ಹಾ !

ಹಾ !ಬಿಸಿ ಬಿಸಿ ಬಿಸಿ ಮೈಗೆ ಏರಿದೇ,

ಚಳಿ ಚಳಿ ಚಳಿ ಎಲ್ಲೋ ಸೇರಿದೆ,

ಅಮ್ಮಯ್ಯೋ  ..... ಹಾಯ್ ... ಅಮ್ಮಯ್ಯೋ  ಹಾಯ್ ।।ಪ।।


ತಣ್ಣೀರಾಗಿರಲು ಇನ್ನೂ ಸೆಖೆಏಕೋ,

ಮೈ ಜೊತೆಗೆ ಮನದಾ ಚೆಲ್ಲಾಟ ಏಕೋ,

ಮನದಲಿ ಏನೋ ತುಂಬಿರೆ ಚಿಂತೆ,

ತಳಮಳ ಈಗೇಕೋ ಕಾಣೆ ಕಾಣೆ ಕಾಣೆ,

ಅಮ್ಮಯ್ಯೋ  ..... ಹಾಯ್ ... ಅಮ್ಮಯ್ಯೋ ।।೧।।


ಅಪ್ಪಳಿಸಿ ದಡಕೆ ಚಿಮ್ಮುತಿರೆ ನೀರು,

ಈ ತುಂಟ ತನವ ಕೊಟ್ಟವರು ಯಾರು ?

ದಡದಾ ಎಲ್ಲೆ ದಾಟದೆ ಇಲ್ಲೇ, ಅಲೆಗಳು ಎನ್ನುತ್ತಿವೆ ನಿಲ್ಲು ನಿಲ್ಲು ನಿಲ್ಲು,

ಅಮ್ಮಯ್ಯೋ  ..... ಹಾಯ್ ... ಅಮ್ಮಯ್ಯೋ ।।೨।।

                           

Habba Eedina Habba (ಹಬ್ಬಾ ಈದಿನ ಹಬ್ಬಾ)

Movie: Hoovu Mullu (1968)

Singer: L R Eshwari

Song link: Jiosaavn.com


Habba ee dina habba..abba!

Habba ee dina habba!

Manadaage manasittu naguvaaga manakottu,

Kannalli kannittu tilivaaga hosaguttu ..abba!


Kaanutire ee dina hosadaada jeevana,

Inneke kampana mundiralu sadhana,

Ida nodi mai maretu merevaaga kunivaaga ..abba!


Hooviralu ninneduru mullinede gamanavidu,

Hoovinda madhuvannu heerutali turaadu,

Adaralle sukhavella tumbutali danivaaga ..abba!


ಚಿತ್ರಗೀತೆ 


ಹಬ್ಬಾ ಈದಿನ ಹಬ್ಬಾ .. ಅಬ್ಬಾ !

ಹಬ್ಬಾ ಈದಿನ ಹಬ್ಬಾ !

ಮನದಾಗೆ ಮನಸಿಟ್ಟು ನಗುವಾಗ ಮನಕೊಟ್ಟು,

ಕಣ್ಣಲ್ಲಿ ಕಣ್ಣಿಟ್ಟು ತಿಳಿವಾಗ ಹೊಸಗುಟ್ಟು .. ಅಬ್ಬಾ ।।ಪ।।


ಕಾಣುತಿರೆ ಈ ದಿನ ಹೊಸದಾದ ಜೀವನಾ,

ಇನ್ನೇಕೆ ಕಂಪನ ಮುಂದಿರಲು ಸಾಧನಾ,

ಇದನೋಡಿ ಮೈಮರೆತು ಮೆರೆವಾಗ ಕುಣಿವಾಗ .. ಅಬ್ಬಾ ।।೧।।


ಹೂವಿರಲು ನಿನ್ನೆದುರು ಮುಳ್ಳಿನೆಡೆ ಗಮನವಿಡು,

ಹೂವಿಂದ ಮಧುವನ್ನು ಹೀರುತಲೀ ತೂರಾಡು,

ಅದರಲ್ಲೇ ಸುಖವೆಲ್ಲಾ ತುಂಬುತಲೀ ದಣಿವಾಗ .. ಅಬ್ಬಾ ।।೨।।

                                           

Monday, July 14, 2025

Nannavaraaru Nanagilla (ನನ್ನವರಾರು ನನಗಿಲ್ಲ)

Bhaktigeete

Singer: Dr. Rajkumar

Song link: Click Here


Nannavaraaru nanagilla, neenallade bere gatiyilla,

Nannali eke krupeyilla, gururaayane neene nanagella ||


Hosa hosa aaseyu dinavella, ee manavanu hindide sukhavilla,

Mooduva bayakege koneyilla, adu mugiyade shantiyu nanagilla ||


Kattale tumbide illella, nee belakanu torade badukilla,

Kambani mididaru yaarilla, ninna bembalavillade sukhavilla ||


Nondenu naanu balella, ee kandana nenapu yekilla,

Nemmadiyondane beduvenu, aa..aa, nee needade hodare nanilla ||


ಭಕ್ತಿಗೀತೆ 


ನನ್ನವರಾರು ನನಗಿಲ್ಲ, ನೀನಲ್ಲದೆ ಬೇರೆ ಗತಿಯಿಲ್ಲ,

ನನ್ನಲಿ ಏಕೆ ಕೃಪೆಯಿಲ್ಲ, ಗುರುರಾಯನೇ ನೀನೇ ನನಗೆಲ್ಲ ।।ಪ।।


ಹೊಸ ಹೊಸ ಆಸೆಯು ದಿನವೆಲ್ಲ, ಈ ಮನವನು ಹಿಂಡಿದೆ ಸುಖವಿಲ್ಲಾ,

ಮೂಡುವ ಬಯಕೆಗೆ ಕೊನೆಯಿಲ್ಲ, ಅದೂ ಮುಗಿಯದೆ ಶಾಂತಿಯು ನನಗಿಲ್ಲ ।।೧।।


ಕತ್ತಲೆ ತುಂಬಿದೆ ಇಲ್ಲೆಲ್ಲಾ, ನೀ ಬೆಳಕನು ತೋರದೆ ಬದುಕಿಲ್ಲ,

ಕಂಬನಿ ಮಿಡಿದರೂ ಯಾರಿಲ್ಲ, ನಿನ್ನ ಬೆಂಬಲವಿಲ್ಲದೆ ಸುಖವಿಲ್ಲ 

।।೨।।


ನೊಂದೆನು ನಾನು ಬಾಳೆಲ್ಲ, ಈ ಕಂದನ ನೆನಪು ಏಕಿಲ್ಲ,

ನೆಮ್ಮದಿಯೊಂದನೆ ಬೇಡುವೆನು, ನೀ ನೀಡದೆ ಹೋದರೆ ನಾನಿಲ್ಲ 

।।೩।।

                                       

Friday, July 11, 2025

Renuke Taaye Baramma (ರೇಣುಕೆ ತಾಯೇ ಬಾರಮ್ಮ)

Bhaktigeete

Singer: Dr. Rajkumar

Song link: Click Here


Renuke taaye baramma sadbhaktara kaaye baramma,

Banna bannada seeregaluttu gejje kalgala hejjegalittu,

Onki tolali binka toruta, ba jagadambe chinnada bombe ||


Bembidadiruva roga bidisuta, andadi choudaki raaga nudisuta,

Iha parada jeevana paavana golisuta, jamadagni priye harushadi baare- harushadi baare ||


Bhakta kotiya more aalisuta, preeti neetiya jyoti belaguta,

Siri soubhagyada maleya surisuta, parashuramana taaye baare-taaye baare ||


ಭಕ್ತಿಗೀತೆ 


ರೇಣುಕೆ ತಾಯೇ ಬಾರಮ್ಮ, ಸದ್ಭಕ್ತರ ಕಾಯೇ ಬಾರಮ್ಮ,

ಬಣ್ಣಾ ಬಣ್ಣದ ಸೀರೆಗಳುಟ್ಟು ಗೆಜ್ಜೆ ಕಾಲ್ಗಳ ಹೆಜ್ಜೆಗಳಿಟ್ಟು,

ಒಂಕಿ ತೋಳಲಿ ಬಿಂಕ ತೋರುತ, ಬಾ ಜಗದಂಬೆ ಚಿನ್ನದ ಬೊಂಬೆ 

।।ಪ।।


ಬೆಂಬಿಡದಿರುವಾ ರೋಗ ಬಿಡಿಸುತ, ಅಂದದಿ  ಚೌಡಕಿ ರಾಗ ನುಡಿಸುತ,

ಇಹ ಪರದ ಜೀವನ ಪಾವನಗೊಳಿಸುತ, ಜಮದಗ್ನಿ ಪ್ರಿಯೆ ಹರುಷದಿ ಬಾರೆ- ಹರುಷದಿ ಬಾರೆ ।।೧।।


ಭಕ್ತ ಕೋಟಿಯ ಮೊರೆ ಆಲಿಸುತ, ಪ್ರೀತಿ ನೀತಿಯ ಜ್ಯೋತಿ ಬೆಳಗುತ,

ಸಿರಿ ಸೌಭಾಗ್ಯದಾ ಮಳೆಯ ಸುರಿಸುತ, ಪರಶುರಾಮನಾ ತಾಯೆ ಬಾರೆ- ತಾಯೆ ಬಾರೆ ।।೨।।

                                             

O Nanna Geneya (ಓ ನನ್ನ ಗೆಣೆಯಾ)

Movie: Hoovu Mullu (1968)

Singer: S Janaki

Song link: jiosaavn.com


O nanna geneya..!

O nanna geneya, baalina daryage joke,

O nanna geneya..aa..aa,

Preetiyonde neetiante, ee lokdage baaloke ||


Kateeya chenna nan kutgeg chinna,

Aytadi yennu nin baalin kannu,

Maduvege munche chakkandave,

Sihi daariyondu kaanuvandu, santoshavu nachoke ||


Gudisali naavu seruva guriya,

Badatanadaagu kaanuva siriya,

Sukha dukhavella samsaaradi sama,

Premadaage ganji saaku, sihi jenante saviyoke ||


Manava dwesha lokake dosha,

Avarade paapa avarige shapa,

Sedina daari anyayavu tili,

Snehadinda sadhyavante, ee lokava gelloke,

O nanna geneya..!

O nanna geneya, baalina daryage joke, O nanna geneya.. ||


ಚಿತ್ರಗೀತೆ 


ಓ ನನ್ನ ಗೆಣೆಯಾ .. !

ಓ ನನ್ನ ಗೆಣೆಯಾ ಬಾಳಿನ ದಾರ್ಯಾಗೆ  ಜೋಕೆ,

ಓ ನನ್ನ ಗೆಣೆಯಾ ಆ ಆ,

ಪ್ರೀತಿಯೊಂದೇ ನೀತಿಯಂತೆ,

ಈ ಲೋಕ ಗೆಲ್ಲೋಕೆ, ಈ ಲೋಕ್ದಾಗೆ ಬಾಳೋಕೆ ।।ಪ।।


ಕಟ್ತೀಯ ಚೆನ್ನ ನನ್ ಕುತ್ಗೆಗ್ ಚಿನ್ನ,

ಆಯ್ತದೀ ಯೆಣ್ಣು ನಿನ್ ಬಾಳಿನ್ ಕಣ್ಣು,

ಮದುವೆಗೆ ಮುಂಚೆ ಚಕ್ಕಂದವೇ,

ಸಿಹಿದಾರಿಯೊಂದು ಕಾಣುವಂದು, ಸಂತೋಷವು ನಚೋಕೆ ।।೧।।


ಗುಡಿಸಲಿ ನಾವು ಸೇರುವ ಗುರಿಯಾ,

ಬಡತನದಾಗೂ ಕಾಣುವ ಸಿರಿಯಾ,

ಸುಖ ದುಃಖವೆಲ್ಲಾ ಸಂಸಾರದಿ ಸಮ,

ಪ್ರೇಮದಾಗೆ ಗಂಜಿ ಸಾಕು, ಸಿಹಿ ಜೇನಂತೆ ಸವಿಯೋಕೆ ।।೨।।


ಮಾನವ ದ್ವೇಷ ಲೋಕಕೆ ದೋಷ,

ಅವರದೆ ಪಾಪ ಅವರಿಗೆ ಶಾಪ,

ಸೇಡಿನ ದಾರಿ ಅನ್ಯಾಯವು ತಿಳಿ,

ಸ್ನೇಹದಿಂದಾ ಸಾಧ್ಯವಂತೇ, ಈ ಲೋಕ ಗೆಲ್ಲೋಕೆ,

ಓ ನನ್ನ ಗೆಣೆಯಾ .. !

ಓ ನನ್ನ ಗೆಣೆಯಾ ಬಾಳಿನ ದಾರ್ಯಾಗೆ  ಜೋಕೆ, ಓ ನನ್ನ ಗೆಣೆಯಾ 

।।೩।।

                                         

Thursday, July 10, 2025

Nodu Nodu Kannara Nintihalu (ನೋಡು ನೋಡು ಕಣ್ಣಾರ ನಿಂತಿಹಳು)

Bhaktigeete

Singer: B K Sumitra

Song link: Click Here


Nodu nodu kannara nintihalu, nagunaguta chamundi nintihalu,

Taayi hrudaya tanda, tumbu mamateyinda, baa illi o kanda enutihalu,

Kai beesi balige namma karedihalu ||


Mysuru nagarada bettada mele mahishasura mardhiniya vaibhavaleele,

Dhanuja samhaarini tribhuvana poshini, shankarana ranigeeva, hoogala maale ||


Nambiruva bhaktara rakshegaagi, nambadiha dushata shikshegaagi,

Nintihalu nodalli shulapaaniyagi, karunada makkala siridaivavaagi ||


Ukki baha nadiyalli avala nage, beesi baha gaaliyali avalusiru,

Hasi hasiru pairugale avaluduge, aa tayi rupavo halavu bage ||


ಭಕ್ತಿಗೀತೆ 


ನೋಡು ನೋಡು ಕಣ್ಣಾರ ನಿಂತಿಹಳು , ನಗುನಗುತಾ ಚಾಮುಂಡಿ ನಿಂತಿಹಳು,

ತಾಯಿ ಹೃದಯ ತಂದ, ತುಂಬು ಮಮತೆಯಿಂದ, ಬಾ ಇಲ್ಲಿ ಓ ಕಂದ ಎನುತಿಹಳು,

ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು ।।ಪ।।


ಮೈಸೂರು ನಗರದ ಬೆಟ್ಟದ ಮೇಲೆ, ಮಹಿಷಾಸುರ ಮರ್ಧಿನಿಯ ವೈಭವ ಲೀಲೆ,

ಧನುಜ ಸಂಹಾರಿಣಿ ತ್ರಿಭುವನ ಪೋಷಿಣಿ, ಶಂಕರನ ರಾಣಿಗೆ ಹೂಗಳ ಮಾಲೆ ।।೧।।


ನಂಬಿರುವ ಭಕ್ತರ ರಕ್ಷೆಗಾಗಿ, ನಂಬದಿಹ ದುಷ್ಟರ ಶಿಕ್ಷೆಗಾಗಿ,

 ನಿಂತಿಹಳು ನೋಡಲ್ಲಿ ಶೂಲಪಾಣಿಯಾಗಿ, ಕರುನಾಡ ಮಕ್ಕಳ ಸಿರಿದೈವವಾಗಿ ।।೨।।


ಉಕ್ಕಿ ಬಹ ನದಿಯಲ್ಲಿ ಅವಳ ನಗೆ, ಬೀಸಿ ಬಹ ಗಾಳಿಯಲಿ ಅವಳುಸಿರು,

ಹಸಿ ಹಸಿರು ಪೈರುಗಳೆ ಅವಳುಡುಗೆ, ಆ ತಾಯಿ ರೂಪವೊ  ಹಲವು ಬಗೆ ।।೩।।

                                    

O Cheluvayyo Nee Kelayyo (ಓ ಚೆಲುವಯ್ಯೋ ನೀ ಕೇಳಯ್ಯೋ)

Movie: Hoovu Mullu (1968)

Singer: S Janaki

Song link: Click Here


O cheluvayyo nee kelayyo,

Putnanji neerige hontaga, kariyenkta daryage kaytidda,

Mallige mudidu ellige horate endu,

Ava mellane eno pisupisuguttuta ninda ||


Muguti mumbharavene, jadegantu himbharavene,

Dittiyu ninage tattitu enalu, sankocha eko kaane, o o ||


Kenchanna avarannu nodi, helbitta oornorge chadi,

Eneno katheyu ibbara melu, huttitu oorinage, o o ||


ಚಿತ್ರಗೀತೆ 


ಓ ಚೆಲುವಯ್ಯೋ .... ನೀ ಕೇಳಯ್ಯೋ,

ಪುಟ್ನಂಜಿ ನೀರಿಗೆ ಹೊಂಟಾಗ,

ಕಾರಿಯೆಂಕ್ಟ ದಾರ್ಯಾಗೆ ಕಾಯ್ತಿದ್ದ,

ಮಲ್ಲಿಗೆ ಮುಡಿದು ಎಲ್ಲಿಗೆ ಹೊರಟೆ ಎಂದು,

ಅವ ಮೆಲ್ಲನೆ ಏನೋ ಪಿಸುಪಿಸುಗುಟ್ಟುತ ನಿಂದಾ ।।ಪ।।


ಮೂಗುತಿ ಮುಂಭಾರವೇನೇ, ಜಡೆಗಂಟು ಹಿಂಭಾರವೇನೇ,

ದಿಟ್ಟಿಯು ನಿನಗೆ ತಟ್ಟಿತು ಎನಲು, ಸಂಕೋಚ ಏಕೋ ಕಾಣೆ ಓ ಓ 

।।೧।।


ಕೆಂಚಣ್ಣ ಅವರನ್ನು ನೋಡಿ, ಹೇಳ್ಬಿಟ್ಟ ಊರ್ನೋಗೆ ಚಾಡಿ,

ಏನೇನೋ ಕಥೆಯು ಇಬ್ಬರ ಮೇಲೂ, ಹುಟ್ಟಿತು ಊರಿನಾಗೆ  ಓ ಓ 

।।೨।।

                                           

Iduve Ninna Prapancha Deva (ಇದುವೇ ನಿನ್ನ ಪ್ರಪಂಚ ದೇವಾ)

Movie: Hoovu Mullu (1968)

Singer: SPB

Song link: Click Here


Iduve ninna prapancha deva,

Iduve ninna prapancha,

Hoovina jothge mulliruva,

Hasuvina roopadi huliyiruva,

Ettalu swarthate tumbiruva aa aa ||


Ellaru nentare ellaru mitrare santasadinda naguvaaga,

Hattira yaaru kareyuvarilla, talamalisutali aluvaaga,

Eddavarannu beelisuta, biddavarannu tuliyuvaru,

Nentaru mitraru shatrugalaagi, mullina margake talluvaru ||


Obbanu belesalu tannaya asti, kasiyuvanu halavara rotti,

Obbanu taane doddavanagalu, niluvanu halavara metti,

Inthaha manujara gunadinda, amrutavu vishavaagutide,

Dharmavu doorake odutide, hoovu mullagutide ||


ಚಿತ್ರಗೀತೆ 


ಇದುವೇ ನಿನ್ನ ಪ್ರಪಂಚ ದೇವಾ,

ಇದುವೇ ನಿನ್ನ ಪ್ರಪಂಚ,

ಹೂವಿನ ಜೊತೆಗೆ ಮುಳ್ಳಿರುವ,

ಹಸುವಿನ ರೂಪದಿ ಹುಲಿಯಿರುವ ಆ ಆ,

ಎತ್ತಲೂ ಸ್ವಾರ್ಥತೆ ತುಂಬಿರುವ ಆ ಆ ।।ಪ।।


ಎಲ್ಲರು ನೆಂಟರೆ ಎಲ್ಲರು ಮಿತ್ರರೆ, ಸಂತಸದಿಂದ ನಗುವಾಗ,

ಹತ್ತಿರ ಯಾರೂ ಕರೆಯುವರಿಲ್ಲ, ತಳಮಳಿಸುತಲಿ ಅಳುವಾಗ,

ಎದ್ದವರನ್ನು ಬೀಳಿಸುತಾ, ಬಿದ್ದವರನ್ನು ತುಳಿಯುವರು,

ನೆಂಟರು ಮಿತ್ರರು ಶತ್ರುಗಳಾಗಿ, ಮುಳ್ಳಿನ ಮಾರ್ಗಕೆ ತಳ್ಳುವರು 

।।೧।।


ಒಬ್ಬನು ಬೆಳೆಸಲು ತನ್ನಯ ಅಸ್ತಿ, ಕಸಿಯುವನು ಹಲವರ ರೊಟ್ಟಿ,

ಒಬ್ಬನು ತಾನೇ ದೊಡ್ಡವನಾಗಲು, ನಿಲುವನು ಹಲವರ ಮೆಟ್ಟಿ,

ಇಂಥಹ ಮನುಜರ ಗುಣದಿಂದ, ಅಮೃತವೂ ವಿಷವಾಗುತಿದೆ,

ಧರ್ಮವು ದೂರಕೆ ಓಡುತಿದೆ, ಹೂವು ಮುಳ್ಳಾಗುತ್ತಿದೆ ।।೨।।

                               


Saturday, July 5, 2025

Ale Aleyaagi Kelide taaye (ಅಲೆ ಅಲೆಯಾಗಿ ಕೇಳಿದೆ ತಾಯೆ)

Bhaktigeete

Singer: B K Sumitra

Song link: Click Here


Ale aleyaagi kelide taaye gopura ghanta naada,

Aarati ettuva velege manade eno bhavonmaada,

Saavira koralolu pratidhwaniyaagide archane mantra veda,

Kiviyanu tumbi hrudayake needide bhakti paravashate moda ||


Chandana lepita sundara vadane, aravinda dalaayita charu nayane,

Mandahaasa makarandava susuva indumukhi aananda sadane,

Kanna tumba pratibimba tumbide ninnaya mogada kanti,

Amba ninnanu nambida manake tumbide nee manahshanti ||


Eastu punyava maadito ninna koralina haarada hoovina naaru,

Ninna charanavu mettiha mannina bhagyava aritavaraaru,

Eastu dhanyavo abhishekadali odalanu toleda gangeya neeru,

Bhakuta jana bhavapaashava hingisi jeevana muktige daariya toru ||


ಭಕ್ತಿಗೀತೆ 


ಅಲೆ ಅಲೆಯಾಗಿ ಕೇಳಿದೆ ತಾಯೆ ಗೋಪುರ ಘಂಟಾ ನಾದ,

ಆರತಿ ಎತ್ತುವ ವೇಳೆಗೆ ಮನದೇ ಏನೋ ಭಾವೋನ್ಮಾದ,

ಸಾವಿರ ಕೊರಳೊಳು ಪ್ರತಿಧ್ವನಿಯಾಗಿದೆ ಅರ್ಚನೆ ಮಂತ್ರ ವೇದ,

ಕಿವಿಯನು ತುಂಬಿ ಹೃದಯಕೆ ನೀಡಿದೆ ಭಕ್ತಿ ಪರವಶತೆ ಮೋದಾ 

।।ಪ।।


ಚಂದನ ಲೇಪಿತ ಸುಂದರ ವದನೆ, ಅರವಿಂದ ದಳಾಯಿತ ಚಾರು ನಯನೆ,

ಮಂದಹಾಸ ಮಕರಂದವ ಸೂಸುವ ಇಂದುಮುಖಿ ಆನಂದ ಸದನೆ,

ಕಣ್ಣ ತುಂಬ ಪ್ರತಿಬಿಂಬ ತುಂಬಿದೆ ನಿನ್ನಯ ಮೊಗದ ಕಾಂತಿ,

ಅಂಬಾ ನಿನ್ನನು ನಂಬಿದ ಮನಕೆ ತುಂಬಿದೆ ನೀ ಮನಃಶಾಂತಿ 

।।೧।।


ಎಷ್ಟು ಪುಣ್ಯವಾ ಮಾಡಿತೋ ನಿನ್ನ ಕೊರಳಿನ ಹಾರದ ಹೂವಿನ ನಾರು,

ನಿನ್ನ ಚರಣವು ಮೆಟ್ಟಿಹ ಮಣ್ಣಿನ ಭಾಗ್ಯವ ಅರಿತವರಾರು,

ಎಷ್ಟು ಧನ್ಯವೋ ಅಭಿಷೇಕದಲಿ ಒಡಲನು ತೊಳೆದ ಗಂಗೆಯ ನೀರು,

ಭಕುತ ಜನ ಭವಪಾಶವ ಹಿಂಗಿಸಿ ಜೀವನ ಮುಕ್ತಿಗೆ ದಾರಿಯ ತೋರು ।।೨।। 

                                       

Hoi Latta Patti Gandagundi (ಹೋಯ್ ಲಟ್ಟಾ ಪಟ್ಟಿ ಗಂಡಾಗುಂಡಿ)

Movie: Hoovu Mullu (1968)

Singer: P B Srinivas


Hoi latta patti gandagundi tumba ite lokdage,

Paapa apaaya tan tumbi ondrage o..o..o ||


Hangyake nodti..nee hingyake aadti,

Ee kenyagin kempanna kannagyak torti oho,

Aha nammibra nantu kat taite gantu,

Ee kwapa ee taapa eegyake premdage ||


Tumbkondu yukti tav tortaare bhakti,

Hangene maseetare ola olage katti,

Aha maadoke mosa hing kat taare vyasa,

Intornna bhagvanta ta sumke buttane ||


Obbange kesaru innonbange mosaru,

Maadonu obnadre innobanng hesaru,

Doddanna bidda daddanna edda,

Hngella anyaya adyako bhumyage ||


ಚಿತ್ರಗೀತೆ 


ಹೋಯ್ ಲಟ್ಟಾ ಪಟ್ಟಿ ಗಂಡಾಗುಂಡಿ ತುಂಬಾ ಐತೆ ಲೋಕ್ದಾಗೆ,

ಪಾಪಾ ಅಪಾಯ ತಾನ್ ತುಂಬಿ ಒಂದ್ರಾಗೇ ಓ .. ಓ .. ಓ ।।ಪ।।


ಹಂಗ್ಯಾಕೆ ನೋಡ್ತೀ ನೀ ಹಿಂಗ್ಯಾಕೆ ಆಡ್ತಿ,

ಈ ಕೆನ್ಯಾಗಿನ್ ಕೆಂಪನ್ನ ಕಣ್ಣಾಗ್ಯಾಕ್ ತೋರ್ತಿ ಒಹೋ,

ಅಹ ನಮ್ಮಿಬ್ರ ನಂಟು ಕಟ್ ತೈತೆಗಂಟು,

ಈ ಕ್ವಾಪ ಈ ತಾಪ ಈಗ್ಯಾಕೆ ಪ್ರೇಮ್ದಾಗೆ  ।।೧।।


ತುಂಬ್ಕೊಂಡು ಯುಕ್ತಿ ತಾವ್ ತೋರ್ತಾರೆ ಭಕ್ತಿ,

ಹಂಗೇನೇ ಮಸೀತಾರೆ ಒಳಗೊಳಗೆ ಕತ್ತಿ,

ಅಹ ಮಾಡೋಕೆ ಮೋಸ ಇಂಗ್ ಕಟ್ತಾರೆ ವ್ಯಾಸ,

ಇಂತೋರ್ನ್ನ ಭಗ್ವಂತ ತಾ ಸುಮ್ಕೆ ಬುಟ್ಟಾನೆ ।।೨।।


ಒಬ್ಬಂನ್ಗೆ ಕೆಸರು ಇನ್ನೊಬ್ಬಂನ್ಗೆ ಮೊಸರು,

ಮಾಡೋನು ಒಬ್ನಾದ್ರೆ  ಇನ್ನೊಬ್ಬಂಗೆ  ಹೆಸರು,

ದೊಡ್ಡಣ್ಣ ಬಿದ್ದ ದಡ್ಡಣ್ಣ ಎದ್ದ,

ಹಿಂಗೆಲ್ಲಾ ಅನ್ಯಾಯ ಅದ್ಯಾಕೊ ಭೂಮ್ಯಾಗೆ ।।೩।।

                                    

Wednesday, July 2, 2025

Ellellu Neeniruve Mookambike (ಎಲ್ಲೆಲ್ಲೂ ನೀನಿರುವೆ ಮೂಕಾಂಬಿಕೆ)

Bhaktigeete

Singer: Dr. Rajkumar

Song link: Click Here


Ellellu neeniruve mookambike,

Aadare illiruva ninagilla holike,

Adiguru shankarara tapada balave,

Saakara neenade jagadambike ||


Kalpanege meerida kalpalathe,

Dayarasavaahni dharmalathe,

Aadishakti nee amruta varshini aa,

Amba sharanu jagajjananee ||


Jnanagange nee bharati,

Sarvashakti nee shivana sati,

Sarasijaakshana srimati,

Mooru shaktigala mooruti ||


ಭಕ್ತಿಗೀತೆ 


ಎಲ್ಲೆಲ್ಲೂ ನೀನಿರುವೆ ಮೂಕಾಂಬಿಕೆ,

ಆದರೆ ಇಲ್ಲಿರುವ ನಿನಗಿಲ್ಲ ಹೋಲಿಕೆ,

ಆದಿಗುರು ಶಂಕರರ ತಪದ ಬಲವೇ,

ಸಾಕಾರ ನೀನಾದೆ ಜಗದಂಬಿಕೆ ।।ಪ।।


ಕಲ್ಪನೆಗೆ ಮೀರಿದ ಕಲ್ಪಲತೆ,

ದಯಾರಸವಾಹಿನಿ ಧರ್ಮಲತೆ,

ಆದಿಶಕ್ತಿ ನೀ ಅಮೃತ ವರ್ಶಿನಿ ಆ ಆ,

ಅಂಬಾ ಶರಣು ಜಗಜ್ಜನನೀ ।।೧।।


ಜ್ಞಾನಗಂಗೆ ನೀ ಭಾರತಿ,

ಸರ್ವಶಕ್ತಿ ನೀ ಶಿವನ ಸತಿ,

ಸರಸಿಜಾಕ್ಷನ ಶ್ರೀಮತಿ,

ಮೂರು ಶಕ್ತಿಗಳ ಮೂರುತಿ ।।೨।।

            

Banni Banni Cheluva Makkale (ಬನ್ನಿ ಬನ್ನಿ ಚೆಲುವ ಮಕ್ಕಳೆ)

Movie: Chaduranga (1969)

Singer: P B Srinivas

Song link: Click Here


Banni banni cheluva makkale,

Kannadammana madila makkale,

Kannu teredu node naavu suttalu,

Namma taaya cheluve kambudettalu,

Banni, banni, banni banni ||


Anna koduva kaveri  nakkare,

Namma baalu haalu jenu sakkare,

Avalanilli hididu idalu ee sere,

Aaguvalu avale namage aasare,

Banni, banni, banni banni ||


Chimmi baruva kaarangi noodi,

Namage bantu aananda kudi,

Jagavanella illi kareva navanandana,

Kannugalige habbataruva brundavana,

Banni, banni, banni banni ||   


Swargavanu nirmisida vishwakarma,

Vishweshwara illi tanda adara marma,

Avarante naavu kooda aagabeku,

Namma naada keerutiya haadabeku,

Banni, banni, banni banni ||


ಚಿತ್ರಗೀತೆ 


ಬನ್ನಿ ಬನ್ನಿ ಚೆಲುವ ಮಕ್ಕಳೆ,

ಕನ್ನಡಮ್ಮನ ಮಡಿಲ ಮಕ್ಕಳೆ,

ಕಣ್ಣು ತೆರೆದು ನೋಡೆ ನಾವು ಸುತ್ತಲೂ,

ನಮ್ಮ ತಾಯ ಚೆಲುವೆ ಕಂಬುದೆತ್ತಲೂ,

ಬನ್ನಿ ಬನ್ನಿ ಬನ್ನಿ ಬನ್ನಿ ।।ಪ।।


ಅನ್ನ ಕೊಡುವ ಕಾವೇರಿ ನಕ್ಕರೇ,

ನಮ್ಮ ಬಾಳು ಹಾಲುಜೇನು ಸಕ್ಕರೆ,

ಅವಳನಿಲ್ಲಿ ಹಿಡಿದು ಇಡಲು ಈ ಸೆರೆ,

ಆಗುವಳು ಅವಳೇ ನಮಗೆ ಆಸರೇ,

 ಬನ್ನಿ ಬನ್ನಿ ಬನ್ನಿ ಬನ್ನಿ।।೧।।


ಚಿಮ್ಮಿ ಬರುವ ಕಾರಂಜಿ ನೋಡಿ,

ನಮಗೆ ಬಂತು ಆನಂದ ಕೂಡಿ,

ಜಗವನೆಲ್ಲ ಇಲ್ಲಿ ಕರೆವ ನವನಂದನಾ,

ಕಣ್ಣುಗಳಿಗೆ ಹಬ್ಬತರುವ ಬೃಂದಾವನಾ,

ಬನ್ನಿ ಬನ್ನಿ ಬನ್ನಿ ಬನ್ನಿ ।।೨।।


ಸ್ವರ್ಗವನು ನಿರ್ಮಿಸಿದ ವಿಶ್ವಕರ್ಮಾ,

ವಿಶ್ವೇಶ್ವರ ಇಲ್ಲಿ ತಂದ ಅದರ ಮರ್ಮಾ,

ಅವರಂತೆ ನಾವು ಕೂಡ ಆಗಬೇಕು,

ನಮ್ಮ ನಾಡ ಕೀರುತಿಯ ಹಾಡಬೇಕು,

ಬನ್ನಿ ಬನ್ನಿ ಬನ್ನಿ ಬನ್ನಿ ।।೩।।