Bhavageete
Sahitya: K S Narasimha Swamy
Song link: Click Here
Pallavagala pallaviyali garigedaride geeta
Tambelarali habbutide kokila sangeeta
Immavina madilallide dumbiya jhenkaara
Tarulategala maigoppide kempinalankaara
Pallavagala pallaviyali garigedaride geeta
Tambelarali habbutide kokila sangeeta ||
Giri nadigalanaavariside hosa chetanadusiru
Banabanadali acchagide hosa varushada hesaru
Balukuva ele, cheluvina bale, siriyukkuva nota (2)
Tiligoladali hondaavare hoovaralida tota
Pallavagala pallaviyali garigedaride geeta
Tambelarali habbutide kokila sangeeta ||
Banneeliya koneyillada nelambaradolage
Bandaaduva bilimugilina tannelalina kelage
Mundalirina toranaviha mumbaagila balige (2)
Madhumaasave adiyidutide hosa varushada belege
Pallavagala pallaviyali garigedaride geeta
Tambelarali habbutide kokila sangeeta ||
Nalleya tuti aduruttide nallana tutiyalli
Nasugempina unguravide aakeya beralalli
Mallige hoo parimalavide tumbida heralalli (2)
Hosa varushada hosa haadide aakeya koralalli
Pallavagala pallaviyali garigedaride geeta
Tambelarali habbutide kokila sangeeta ||
ಭಾವಗೀತೆ
ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತ
ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತ
ಇಮ್ಮಾವಿನ ಮಡಿಲಲ್ಲಿದೆ ದುಂಬಿಯ ಝೇಂಕಾರ
ತರುಲತೆಗಳ ಮೈಗೊಪ್ಪಿದೆ ಕೆಂಪಿನಲಂಕಾರ
ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತ
ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತ ।।ಪ।।
ಗಿರಿ ನದಿಗಳನಾವರಿಸಿದೆ ಹೊಸ ಚೇತನದುಸಿರು
ಬನಬನದಲಿ ಅಚ್ಚಾಗಿದೆ ಹೊಸ ವರುಷದ ಹೆಸರು
ಬಳುಕುವ ಎಲೆ, ಚೆಲುವಿನ ಬಲೆ, ಸಿರಿಯುಕ್ಕುವ ನೋಟ (೨)
ತಿಳಿಗೊಳದಲಿ ಹೊಂದಾವರೆ ಹೂವರಳಿದ ತೋಟ
ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತ
ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತ ।।೧।।
ಬಾನ್ನೀ ಲಿಯ ಕೊನೆಯಿಲ್ಲದ ನೀಲಾಂಬರದೊಳಗೆ
ಬಂದಾಡುವ ಬಿಳಿಮುಗಿಲನ ತಣ್ಣೆಳಲಿನ ಕೆಳಗೆ
ಮುಂದಳಿರಿನ ತೋರಣವಿಹ ಮುಂಬಾಗಿಲ ಬಳಿಗೆ (೨)
ಮಧುಮಾಸವೆ ಅಡಿಯಿಡುತಿದೆ ಹೊಸ ವರುಷದ ಬೆಳೆಗೆ
ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತ
ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತ ।।೨।।
ನಲ್ಲೆಯ ತುಟಿ ಅದರುತ್ತಿದೆ ನಲ್ಲನ ತುಟಿಯಲ್ಲಿ
ನಸುಗೆಂಪಿನ ಉಂಗುರವಿದೆ ಆಕೆಯ ಬೆರಳಲ್ಲಿ
ಮಲ್ಲಿಗೆ ಹೂ ಪರಿಮಳವಿದೆ ತುಂಬಿದ ಹೆರಳಲ್ಲಿ (೨)
ಹೊಸ ವರುಷದ ಹೊಸ ಹಾಡಿದೆ ಆಕೆಯ ಕೊರಳಲ್ಲಿ
ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತ
ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತ ।।೩।।





