Showing posts with label Santa shishunala shariefa songs. Show all posts
Showing posts with label Santa shishunala shariefa songs. Show all posts

Sunday, May 10, 2026

Nischintanagabekanti (ನಿಶ್ಚಿಂತನಾಗಬೇಕಂತಿ)

Tatvapada

Santa Sishunala Sharifa Songs

Singer: C Ashwat

Song link: Click Here


Nischintanagabekanti, bahu 

Duschintiyolage nee kunti,

Yaako elo ninagee bhranti, 

Naaligaguvudeeganti ||


Ashapashagala byadanti, olle 

Meesala nudi maatadanti,

Bhashe kottu tappabyadanti, hari

Daasarolage mana needanti ||


Avaranu kandare avarante, ma

Ttivaranu kandare ivarante,

Avarivarariyade tanagu tiliyade, 

Moodhanaage summane kunti ||


Podaviyolage sishunalanti, drudha 

Govinda yogiya chinti,

Bidadaatana seve maadanti, nee 

Bhayavillade guruvina kudanti ||


ತತ್ವಪದ 


ನಿಶ್ಚಿಂತನಾಗಬೇಕಂತಿ, ಬಹು 

ದುಶ್ಚಿಂತಿಯೊಳಗೆ ನೀ ಕುಂತಿ,

ಯಾಕೋ ಎಲೊ ನಿನಗೀ ಭ್ರಾಂತಿ, 

ನಾಳಿಗಾಗುವುದೀಗ೦ತಿ ।।ಪ।।


ಆಶಾ ಪಾಶಗಳ ಬ್ಯಾಡಂತಿ, ಒಳ್ಳೆ 

ಮೀಸಲ ನುಡಿ ಮಾತಾಡಂತಿ,

ಭಾಷೆ ಕೊಟ್ಟು ತಪ್ಪಬ್ಯಾಡಂತಿ, ಹರಿ

ದಾಸರೊಳಗೆ ಮನ ನೀಡಂತಿ 

।।೧।।


ಅವರನು ಕಂಡರೆ ಅವರಂತೆ, ಮ

ತ್ತಿವರನು ಕಂಡರೆ ಇವರಂತೆ,

ಅವರಿವರರಿಯದೆ ತನಗೂ ತಿಳಿಯದೆ, 

ಮೂಢನಾಗೆ ಸುಮ್ಮನೆ ಕುಂತಿ 

।।೨।।


ಪೊಡವಿಯೊಳಗೆ ಶಿಶುನಾಳಂತಿ, ದೃಢ 

ಗೋವಿಂದ ಯೋಗಿಯ ಚಿಂತಿ,

ಬಿಡದಾತನ ಸೇವೆ ಮಾಡಂತಿ, ನೀ 

ಭಯವಿಲ್ಲದೆ ಗುರುವಿನ ಕೂಡಂತಿ ।।೩।।

Ku Ku Enutide Belava (ಕೂ ಕೂ ಎನುತಿದೆ ಬೆಳವಾ)

Tatvapada

Santa Sishunala Sharifa Songs

Singer: C Ashwat

Song link: Click Here


Ku ku, ku ku, enutide belava,

Ku ku enutide belava,

Bandu hokkitu bhavavemba dukhada haluva ||


Purushana buttiyolittu, bahu

Harushadi halladol telaaka bittu,

Manavemba gudinolittu, tanna

Tanuvemba maradolu haaraka bittu ||


Aanandadolu taaniralu, swa

Nandadi rekkeya kedarutaliralu,

Bhuvanadolage nintiralu, deva

Sishunaaladhesha govindana varavu ||


ತತ್ವಪದ 


ಕೂ ಕೂ, ಕೂ ಕೂ, ಎನುತಿದೆ ಬೆಳವಾ,

ಕೂ ಕೂ, ಎನುತಿದೆ ಬೆಳವಾ,

ಬಂದು ಹೊಕ್ಕಿತು ಭವವೆಂಬ ದುಃಖದ ಹಳುವ ।।ಪ।।


ಪುರುಷನ ಬುಟ್ಟಿಯೊಳಿಟ್ಟು, ಬಹು 

ಹರುಷದಿ ಹಳ್ಳದೋಳ್ ತೇಲಾಕ ಬಿಟ್ಟು ,

ಮನವೆಂಬ ಗೂಡಿನೊಳಿಟ್ಟು, ತನ್ನ 

ತನುವೆಂಬ ಮರದೊಳು ಹಾರಾಕ ಬಿಟ್ಟು ।।೧।।


ಆನಂದದೊಳು ತಾನಿರಲು, ಸ್ವಾ

ನಂದದಿ ರೆಕ್ಕೆಯ ಕೆದರುತಲಿರಲು 

ಭುವನದೊಳಗೆ ನಿಂತಿರಲು, ದೇವ 

ಶಿಶುನಾಳಧೀಶ ಗೋವಿಂದನ ವರವು ।।೨।।


Saturday, September 2, 2023

Hakida Janivarava (ಹಾಕಿದ ಜನಿವಾರವ)

Tatvapada

Sishunala Shariefa sahebara Geetegalu

Singer: Shivamogga Subbanna

Song link: Click Here


Hakida janivarava sadgurunatha

Hakida janivarava!


Hakida janivara nukida bhavabhara

Lokade brahmajnana nee padeyendu

Hakida janivarava.


Sandhyavandane kalisi - aanandada

Bindu madhyadi nilisi,

Nandisi manasanu atmada jaladali

Endendigu yamadandugavaliyendu

Hakida janivarava.


Kanda kandavarodane aledi - dharma

Landara jate yake beredi?

Punda eetana nooku endu nindise, guru

Gandendareetane neevella chee endu

Hakida janivarava.


Sishunaladheesha guru - tannodalolu

Vashavada sutravanu

Nasunagutali tegedalliye todisida

Usurida mantrava hosabana maaduta

Hakida janivarava.


ತತ್ವಪದ 


ಹಾಕಿದ ಜನಿವಾರವ ಸದ್ಗುರುನಾಥ 

ಹಾಕಿದ ಜನಿವಾರವ !


ಹಾಕಿದ ಜನಿವಾರ ನೂಕಿದ ಭವಭಾರ 

ಲೋಕದೆ ಬ್ರಹ್ಮಜ್ಞಾನ ನೀ ಪಡೆಯೆಂದು 

ಹಾಕಿದ ಜನಿವಾರವ. 


ಸಂಧ್ಯಾವಂದನೆ ಕಲಿಸಿ - ಆನಂದದ 

ಬಿಂದು ಮಧ್ಯದಿ ನಿಲಿಸಿ,

ನಂದಿಸಿ ಮನಸನು ಆತ್ಮದ ಜಲದಲಿ 

ಎಂದೆಂದಿಗೂ ಯಮದಂದುಗವಳಿಯೆಂದು 

ಹಾಕಿದ ಜನಿವಾರವ. 


ಕಂಡ ಕಂಡವರೊಡನೆ ಅಲೆದಿ - ಧರ್ಮ

ಲಂಡರ ಜತೆ ಯಾಕೆ ಬೆರೆದಿ ?

ಪುಂಡ ಈತನ ನೂಕು ಎಂದು ನಿಂದಿಸೆ, ಗುರು 

ಗಂಡೆಂದರೀತನೆ ನೀವೆಲ್ಲ ಛೀ ಎಂದು

ಹಾಕಿದ ಜನಿವಾರವ. 


ಶಿಶುನಾಳಾಧೀಶ ಗುರು - ತನ್ನೊಡಲೊಳು 

ವಶವಾದ ಸೂತ್ರವನು 

ನಸುನಗುತಲಿ ತೆಗೆದಲ್ಲಿಯೆ ತೊಡಿಸಿದ 

ಉಸುರಿದ ಮಂತ್ರವ ಹೊಸಬನ ಮಾಡುತ 

ಹಾಕಿದ ಜನಿವಾರವ. 



Monday, June 19, 2023

Manase Manasina Manasa Nillisuvudu (ಮನಸೇ ಮನಸಿನ ಮನಸ ನಿಲ್ಲಿಸುವುದು)

Tatvapada

Sishunala Shariefa Sahebara Geetegalu

Song link: Click Here


Human mind is unsteady. There exists another mind which can control such an unsteady mind by means of spirituality (Atma Jnana).


Manase manasina manasa nillisuvudu

Manasina mana tiliyuva mana byarelo manase ||


Tanu trayadolu sulidaaduva jeevada

Gunavaritare nija byarelo manase ||


Dashadikkige haaraduva hakkiyu

Vashavaagalapari byarelo manase ||


Govinda guruvina chrana kamaladolu

Gaanagaiyalo bhramaraaliya manase ||


Vishayagalali sukhabayake bayasi balu

Kasivisigombuvudetako manase ||


Ileyolu sishunaaladheesha nirmalana

Tilidare olahoragondelo manase ||


ತತ್ವಪದ 


ಮನಸೇ ಮನಸಿನ ಮನಸ ನಿಲ್ಲಿಸುವುದು 

ಮನಸಿನ ಮನ ತಿಳಿಯುವ ಮನ ಬ್ಯಾರೆಲೊ ಮನಸೇ ।।ಪ।।


ತನುತ್ರಯದೊಳು ಸುಳಿದಾಡುವ ಜೀವದ 

ಗುಣವರಿತರೆ ನಿಜ ಬ್ಯಾರೆಲೊ ಮನಸೇ ।।


ದಶದಿಕ್ಕಿಗೆ ಹಾರಾಡುವ ಹಕ್ಕಿಯು 

ವಶವಾಗಲಾಪರಿ ಬ್ಯಾರೆಲೊ ಮನಸೇ ।।


ಗೋವಿಂದ ಗುರುವಿನ ಚರಣ ಕಮಲದೊಳು 

ಗಾನಗೈಯೆಲೊ ಭ್ರಮರಾಳಿಯ ಮನಸೇ ।।


ವಿಷಯಗಳಲಿ ಸುಖಬಯಕೆ ಬಯಸಿ ಬಲು 

ಕಸಿವಿಸಿಗೊಂಬುವುದೇತಕೊ ಮನಸೇ ।।


ಇಳೆಯೊಳು ಶಿಶುನಾಳಾಧೀಶ ನಿರ್ಮಲನ 

ತಿಳಿದರೆ ಒಳಹೊರಗೊಂದೆಲೊ ಮನಸೇ ।।



Friday, June 2, 2023

Mangana Nodide Na (ಮಂಗನ ನೋಡಿದೆ ನಾ)

Tatvapada

Sishunala Shariefa Sahebara Geetegalu

Song link: Click Here


In this song Sishunala Shariefa calls the worldly desires (kama) hiding inside over selves as a monkey. And he also tells that it does not stand a chance in front of and only bows to Sishunaladheesha.   

 

Mangana nodide na- adagida

Mangana nodide na |


Mangana nodide

Kangedisitu mana

Rangile kunidu anjisutihudu ||


Singaleeka enisi - paripari

Bhangakenna elesi

Lankapurava benkili sudisida ||


Hedarikillada manga - idu

Gudageriya manga

Madaverida manekadava nukutide ||


Lakshmipurada manga - idu

Kaliyalollada manga

Manivudu sishunaladheeshage matra ||


ತತ್ವಪದ 


ಮಂಗನ ನೋಡಿದೆ ನಾ - ಅಡಗಿದ 

ಮಂಗನ ನೋಡಿದೆ ನಾ ।


ಮಂಗನ ನೋಡಿದೆ 

ಕಂಗೆಡಿಸಿತು ಮನ 

ರಂಗಿಲೆ ಕುಣಿದು ಅಂಜಿಸುತಿಹುದು ।।


ಸಿಂಗಳೀಕ ಎನಿಸಿ - ಪರಿಪರಿ 

ಭಂಗಕೆನ್ನ ಎಳೆಸಿ 

ಲಂಕಾಪುರವ ಬೆಂಕಿಲಿ ಸುಡಿಸಿದ  ।।


ಹೆದರಿಕಿಲ್ಲದ ಮಂಗ  - ಇದು 

ಗುದಗೇರಿಯ ಮಂಗ 

ಮದವೇರಿದ ಮನೆಕದವ ನೂಕುತಿದೆ ।।


ಲಕ್ಷ್ಮೀ ಪುರದ  ಮಂಗ  - ಇದು 

ಕಲಿಯಲೊಲ್ಲದ ಮಂಗ 

ಮಣಿವುದು ಶಿಶುನಾಳಾಧೀಶಗೆ ಮಾತ್ರ ।।



Friday, March 17, 2023

Gudiya Nodiranna (ಗುಡಿಯ ನೋಡಿರಣ್ಣ)

Tatvapada

Sishunala Shariefa Sahebara Geetegalu

Song link: Click Here


Gudiya nodiranna - dehada

Gudiya nodiranna |


Gudiya nodiridu

Podavige odeyanu

Adagikondu kadubedaginolirutiha

Gudiya nodiranna ||


Mooru mooliya kallu - adanu

Eri koota dollu

Dheera nirgunana sara sagunadali

Tori adagi ta byaragirutiha

Gudiya nodiranna ||1||


Aaru mooru katti - melake

Eridavane ghatti

Bheri kahali shankha bhari sunadadi

Meeridananda tori holeyutiha

Gudiya nodiranna ||2||


Saagutihavu divasa - sevisi

Tegi holigi payasa

Yogiraja sishunaladheesha ta -

Nagi paratpara brahmaroopaniha

Gudiya nodiranna ||3||


ತತ್ವಪದ 


ಗುಡಿಯ ನೋಡಿರಣ್ಣ - ದೇಹದ 

ಗುಡಿಯ ನೋಡಿರಣ್ಣ।


ಗುಡಿಯ ನೋಡಿರಿದು 

ಪೊಡವಿಗೆ ಒಡೆಯನು 

ಅಡಗಿಕೊಂಡು ಕಡುಬೆಡಗಿನೊಳಿರುತಿಹ 

ಗುಡಿಯ ನೋಡಿರಣ್ಣ।।


ಮೂರು ಮೂಲಿಯ ಕಲ್ಲು - ಅದನು 

ಏರಿ ಕೂತ ಡೊಳ್ಳು 

ಧೀರ ನಿರ್ಗುಣನ ಸಾರ ಸಗುಣದಲಿ 

ತೋರಿ ಅಡಗಿ ತಾ ಬ್ಯಾರಾಗಿರುತಿಹ 

ಗುಡಿಯ ನೋಡಿರಣ್ಣ।।೧।।


ಆರು ಮೂರು ಕಟ್ಟಿ - ಮೇಲಕೆ 

ಏರಿದವನೆ ಘಟ್ಟಿ 

ಭೇರಿ ಕಹಳಿ ಶಂಖ ಭಾರಿ ಸುನಾದದಿ 

ಮೀರಿದಾನಂದ ತೋರಿ ಹೊಳೆಯುತಿಹ 

ಗುಡಿಯ ನೋಡಿರಣ್ಣ।।೨।।


ಸಾಗುತಿಹವು ದಿವಸ - ಸೇವಿಸಿ 

ತೇಗಿ ಹೋಳಿಗಿ ಪಾಯಸ 

ಯೋಗಿರಾಜ ಶಿಶುನಾಳಾಧೀಶ ತಾ -

ನಾಗಿ ಪರಾತ್ಪರ ಬ್ರಹ್ಮರೂಪನಿಹ 

ಗುಡಿಯ ನೋಡಿರಣ್ಣ।।೩।।







Monday, February 13, 2023

Aggada Arivi Tandu (ಅಗ್ಗದ ಅರಿವಿ ತಂದು)

Tatvapada

Sishunala shariefa sahebara Geetegalu

Song link:Click Here


Aggada arivi tandu

Higgi holiside angi

Heggana oytavva tangi  ee angi ||


Aganita vishayada

Aarugenina kavacha

Bagalina bevaranu kudidu

Sigade hoyitavva tangi ee angi ||


Buddigedigalagi

Niddi kedisikondu

Eddu nodalu karmada

Guddinoladagittavva tangi ee angi ||


Kaledeneepari ratri

Belagago samayadi

Cheluva sishunala dheeshanu

Uluvi kotyanavva tangi ee angi ||


ತತ್ವಪದ 


ಅಗ್ಗದ ಅರಿವಿ ತಂದು 

ಹಿಗ್ಗಿ ಹೊಲಿಸಿದೆ ಅಂಗಿ 

ಹೆಗ್ಗಣ ಒಯ್ತವ್ವ ತಂಗಿ  ಈ ಅಂಗಿ ।।ಪ।।


ಅಗಣಿತ ವಿಷಯದ 

ಆರುಗೇಣಿನ ಕವಚ 

ಬಗಲಿನ ಬೆವರನು ಕುಡಿದು 

ಸಿಗದೆ ಹೋಯಿತವ್ವ ತಂಗಿ ಈ ಅಂಗಿ ।।೧।।


ಬುದ್ಧಿಗೇಡಿಗಳಾಗಿ 

ನಿದ್ದಿ ಕೆಡಿಸಿಕೊಂಡು 

ಎದ್ದು ನೋಡಲು ಕರ್ಮದ 

ಗುದ್ದಿನೊಳಡಗಿತ್ತವ್ವ ತಂಗಿ ಈ ಅಂಗಿ ।।೨।।


ಕಳೆದೆನೀಪರಿ ರಾತ್ರಿ 

ಬೆಳಗಾಗೋ ಸಮಯದಿ 

ಚೆಲುವ ಶಿಶುನಾಳಾಧೀಶನು 

ಉಳುವಿ ಕೊಟ್ಯಾನವ್ವ ತಂಗಿ ಈ ಅಂಗಿ ।।೩।। 





Friday, January 13, 2023

Olle Nari Kande (ಒಳ್ಳೆ ನಾರಿ ಕಂಡೆ)

Sishunala Shariefa Sahebara Geetegalu

Song link: Click Here


Olle nari kande - egale nari kande

Olle nari kande ,

Ileya taladi tapadolu nintu

Kaleya rushigala marulu maduva ||


Kaiyu, kalu - illa usuru

Maiyyi modale illa;

Chelluta paramananda ediyolu

Ellava bidisi karunadi kayuva ||


Muttalu kolluvalo - kamana

Katti aalutihalo;

Batta kunchaka, bareditta kuppasaka

Nattu manasu nadegettu nintito ||


Meesalu nageyavalu - sishunala

Deeshage sotavalu;

Vasisi gudipuradi - govindana

Dasarannu ta seleyutalihalu ||


ತತ್ವಪದ 


ಒಳ್ಳೆ ನಾರಿ ಕಂಡೆ  - ಈಗಲೆ ನಾರಿ ಕಂಡೆ

ಒಳ್ಳೆ ನಾರಿ ಕಂಡೆ ,

ಇಳೆಯ ತಳದಿ ತಪದೊಳು ನಿಂತು 

ಕಳೆಯ ಋಷಿಗಳ ಮರುಳು  ಮಾಡುವ ।।ಪ ।।


ಕೈಯು, ಕಾಲು  - ಇಲ್ಲ ಉಸುರು 

ಮೈಯ್ಯಿ ಮೊದಲೆ ಇಲ್ಲ;

ಚೆಲ್ಲುತ ಪರಮಾನಂದ ಎದಿಯೊಳು 

ಎಲ್ಲವ ಬಿಡಿಸಿ ಕರುಣದಿ ಕಾಯುವ ।।೧।।


ಮುಟ್ಟಲು ಕೊಲ್ಲುವಳೋ  - ಕಾಮನ 

ಕಟ್ಟಿ ಆಳುತಿಹಳೊ;

ಬಟ್ಟಕುಂಚಕ, ಬರೆದಿಟ್ಟ ಕುಪ್ಪಸಕ 

ನಟ್ಟು ಮನಸು ನಡೆಗೆಟ್ಟು ನಿಂತಿತೋ ।।೨।।


ಮೀಸಲು ನಗೆಯವಳು - ಶಿಶುನಾಳಾ 

ಧೀಶಗೆ ಸೋತವಳು;

ವಾಸಿಸಿ ಗುಡಿಪುರದಿ - ಗೋವಿಂದನ 

ದಾಸರನ್ನು ತಾ ಸೆಳೆಯುತಲಿಹಳು ।।೩।।

                                            



Tuesday, December 13, 2022

Biddiyabe Muduki (ಬಿದ್ದಿಯಬೇ ಮುದುಕಿ )

Sishunala Shariefa Sahebara Geetegalu

Song link: https:Click Here


Biddiyabe muduki

Biddiyabe..

Ni dina hodaki

Iru bhala joki

Biddiyabe muduki

Biddiyabe ||


Sadhyakidu huluguru santi

Gaddaladolagyaka ninti ?

Biddu illi oddadidara

Eddu hyanga hindaka barati ?

Buddhigedi muduki neenu biddiyabe ||


Buttiyalli pattala itti

Adanu utta hottolu joki

Kettaganti chouderu bandu

Uttadanne kaddara joki

Buddhigedi muduki neenu biddiyabe || 


Sishunaladheeshana munde

Kosari kosari hogabyada

Hasanavilla hareya sanda

Pisuru picchugannina muduki

Buddhigedi muduki neenu biddiyabe || 


ತತ್ವ ಪದ 


ಬಿದ್ದಿಯಬೇ ಮುದುಕಿ 

ಬಿದ್ದಿಯಬೇ .. 

ನೀ ದಿನ ಹೋದಾಕಿ 

ಇರು ಭಾಳ ಜೋಕಿ 

ಬಿದ್ದಿಯಬೇ ಮುದುಕಿ 

ಬಿದ್ದಿಯಬೇ ।।ಪ।।


ಸದ್ಯಕಿದು ಹುಲುಗೂರು ಸಂತಿ 

ಗದ್ದಲದೊಳಗ್ಯಾಕ ನಿಂತಿ ?

ಬಿದ್ದು ಇಲ್ಲಿ ಒದ್ದಾಡಿದರ 

ಎದ್ದು ಹ್ಯಾಂಗ ಹಿಂದಕ ಬರತಿ ?

ಬುದ್ಧಿಗೇಡಿ ಮುದುಕಿ ನೀನು ಬಿದ್ದಿಯಬೇ ।।೧।।


ಬುಟ್ಟಿಯಲ್ಲಿ ಪತ್ತಲ ಇಟ್ಟಿ 

ಅದನು ಉಟ್ಟ ಹೊತ್ತೊಳು ಜೋಕಿ 

ಕೆಟ್ಟಗಂಟಿ ಚೌಡೇರು ಬಂದು 

ಉಟ್ಟದನ್ನೆ ಕದ್ದಾರ ಜೋಕಿ 

ಬುದ್ಧಿಗೇಡಿ ಮುದುಕಿ ನೀನು ಬಿದ್ದಿಯಬೇ ।।೨।।


ಶಿಶುನಾಳಾಧೀಶನ ಮುಂದೆ 

ಕೊಸರಿ ಕೊಸರಿ ಹೋಗಬ್ಯಾಡ 

ಹಸನವಿಲ್ಲ ಹರಯ ಸಂದ 

ಪಿಸುರು ಪಿಚ್ಚುಗಣ್ಣಿನ ಮುದುಕಿ 

ಬುದ್ಧಿಗೇಡಿ ಮುದುಕಿ ನೀನು ಬಿದ್ದಿಯಬೇ ।।೩।।





Monday, November 21, 2022

Padava Byagane Kali Kali (ಪದವ ಬ್ಯಾಗನೇ ಕಲೀ ಕಲೀ )

Sishunala Sharif Sahebara Geetegalu

Songlink: https:Click Here


Padava byagane kali kali - shiva

Bhaktiya hrudayadi beli beli ||


Adi gana prasake dorakada padavu

Nudi shabdake nija nilukada padavu

Kudubattina kai tala matreya

Badivarake bailagada padavu ||


Gana nemada guna gedisuva padavu

Tunuku shastrake maniyada padavu

Gunisikolade sangeeta swaragalanu

Tanisi olage kunisyaduva padavu ||


Laya pralayake olagagada padavu

Nilayadolage nija nilisuva padavu

Olumeyinda sishunaladheeshanu

Sulabhake edeyolu bittida padavu ||


ತತ್ವ ಪದ

 

ಪದವ ಬ್ಯಾಗನೇ ಕಲೀ ಕಲೀ - ಶಿವ 

ಭಕ್ತಿಯ ಹೃದಯದಿ ಬೆಳೀ ಬೆಳೀ ।।ಪ ।।


ಅಡಿ ಗಣ ಪ್ರಾಸಕೆ ದೊರಕದ ಪದವು 

ನುಡಿ ಶಬ್ದಕೆ ನಿಜ ನಿಲುಕದ ಪದವು 

ಕುಡುಬಟ್ಟಿನ  ಕೈ ತಾಳ ಮಾತ್ರೆಯ 

ಬಡಿವಾರಕೆ ಬೈಲಾಗದ ಪದವು ।।೧।।


ಗಣನೇಮದ  ಗುಣಗೆಡಿಸುವ ಪದವು 

ತುಣುಕು ಶಾಸ್ತ್ರಕೆ ಮಣಿಯದ ಪದವು 

ಗುಣಿಸಿಕೊಳದೆ ಸಂಗೀತ ಸ್ವರಗಳನು 

ತಣಿಸಿ ಒಳಗೆ ಕುಣಿಸ್ಯಾಡುವ ಪದವು ।।೨।।


ಲಯ ಪ್ರಳಯಕೆ ಒಳಗಾಗದ ಪದವು 

ನಿಲಯದೊಳಗೆ ನಿಜ ನಿಲಿಸುವ ಪದವು 

ಒಲುಮೆಯಿಂದ ಶಿಶುನಾಳಾಧೀಶನು 

ಸುಲಭಕೆ ಎದೆಯೊಳು ಬಿತ್ತಿದ ಪದವು ।।೩।।



Saturday, September 3, 2022

Sorutihudu Maneya Maligi (ಸೋರುತಿಹುದು ಮನೆಯ ಮಾಳಿಗಿ )

Shishunala Shariefa Sahebara Geetegalu

Song link: Click Here


Sorutihudu maneya maligi

Ajnanadinda

Sorutihudu maneya maligi


Sorutihudu maneya maligi

Daru gatti malparilla

Kala kattaleyolage nanu

Melakkeri hogalare  ||sorutihudu||


Muruku toleyu huluku janti

Koredu saridu keela sadali

Haraku chappara jerugindi

Melakeri mettalare  ||sorutihudu||


Karaki hullu kasavu hatti

Haridu salu irabi mutti

Jalada bharadi sariye mannu

Olage horage ekavagi  ||sorutihudu||


Kantekele karunadinda

bantu kane hubbi maleyu

Ento shishunaladhisha tanu

Nintu porevanu endu nambide  ||sorutihudu||


ತತ್ವಪದ 


ಸೋರುತಿಹುದು ಮನೆಯ ಮಾಳಿಗಿ 

ಅಜ್ಞಾನದಿಂದ 

ಸೋರುತಿಹುದು ಮನೆಯ ಮಾಳಿಗಿ ।।ಪ ।।


ಸೋರುತಿಹುದು ಮನೆಯ ಮಾಳಿಗಿ 

ದಾರು ಗಟ್ಟಿ ಮಾಳ್ಪರಿಲ್ಲ 

ಕಾಳ ಕತ್ತಲೆಯೊಳಗೆ ನಾನು 

ಮೇಲಕೇರಿ  ಹೋಗಲಾರೆ  ।।೧।।


ಮುರುಕು ತೊಲೆಯು ಹುಳುಕು ಜಂತಿ 

ಕೊರೆದು ಸರಿದು ಕೀಲ ಸಡಲಿ 

ಹರಕು ಚಪ್ಪರ ಜೇರುಗಿಂಡಿ 

ಮೇಲಕೇರಿ ಮೆಟ್ಟಲಾರೆ  ।।೨।।


ಕರಕಿ  ಹುಲ್ಲು ಕಸವು ಹತ್ತಿ 

ಹರಿದು ಸಾಲು ಇರಬಿ  ಮುತ್ತಿ 

ಜಲದ ಭರದಿ ಸರಿಯೆ ಮಣ್ಣು 

ಒಳಗೆ  ಹೊರಗೆ   ಏಕವಾಗಿ  ।।೩।।


ಕಾಂತೆ ಕೇಳೆ ಕರುಣದಿಂದ 

ಬಂತು ಕಾಣೆ ಹುಬ್ಬಿ ಮಳೆಯು 

ಎಂತೊ  ಶಿಶುನಾಳಧೀಶ ತಾನು 

ನಿಂತು ಪೊರೆವನು ಎಂದು ನಂಬಿದೆ  ।।೪।।




 




Wednesday, June 8, 2022

Kodagana Koli Nungitta (ಕೋಡಗನ ಕೋಳಿ ನುಂಗಿತ್ತ)

Shishunala Shariefa Sahebara Geetegalu

Song link: Click Here


Kodagana koli nungitta

Nodavva tangi

Kodagana koli nungitta ||


Aadu aneya nungi

Gode sunnava nungi

Aadalu banda pataradavala

Maddale nungitta ||


Ollu onakeya nungi

Kallu gutava nungi

Mellalu banda mudukiyanne 

Nellu nungitta ||


Hagga maggava nungi

Maggava lali nungi

Maggadaliruva annananne 

Maniyu nungitta ||


Ettu jattagi nungi

Batta banava nungi

Mukkuta tiruvo anannanna 

Meli nungitta ||


Gudda gaviyannu nungi

Gaviya iruveyu nungi

Govinda guruvina pada

Nannane nungitta ||


ತತ್ವಪದ 


ಕೋಡಗನ ಕೋಳಿ ನುಂಗಿತ್ತ 

ನೋಡವ್ವ ತಂಗಿ 

ಕೋಡಗನ ಕೋಳಿ ನುಂಗಿತ್ತ ।।ಪ ।।


ಆಡು ಆನೆಯ ನುಂಗಿ 

ಗೋಡೆ ಸುಣ್ಣವ ನುಂಗಿ 

ಆಡಲು ಬಂದ ಪಾತರದವಳ 

ಮದ್ದಲಿ  ನುಂಗಿತ್ತ  ।।೧।।


ಒಳ್ಳು ಒನಕೆಯ ನುಂಗಿ 

ಕಲ್ಲು ಗೂಟವ ನುಂಗಿ 

ಮೆಲ್ಲಲು ಬಂದ ಮುದುಕಿಯನ್ನೆ 

ನೆಲ್ಲು ನುಂಗಿತ್ತ ।।೨।।


ಹಗ್ಗ ಮಗ್ಗವ ನುಂಗಿ 

ಮಗ್ಗವ ಲಾಳಿ ನುಂಗಿ 

ಮಗ್ಗದಲಿರುವ ಅಣ್ಣನನ್ನೆ  

ಮಣಿಯು ನುಂಗಿತ್ತ ।।೩।।


ಎತ್ತು ಜತ್ತಗಿ ನುಂಗಿ 

ಬತ್ತ ಬಾನವ ನುಂಗಿ 

ಮುಕ್ಕುಟ ತಿರುವೋ ಅಣ್ಣನನ್ನ 

ಮೇಳಿ ನುಂಗಿತ್ತ ।।೪।।


ಗುಡ್ಡ ಗವಿಯನ್ನು ನುಂಗಿ 

ಗವಿಯ ಇರುವೆಯು  ನುಂಗಿ 

ಗೋವಿಂದ ಗುರುವಿನ ಪಾದ 

ನನ್ನನೆ ನುಂಗಿತ್ತ  ।।೫।।





Friday, April 22, 2022

Taravalla Tagi Ninna Tamburi (ತರವಲ್ಲ ತಗಿ ನಿನ್ನ ತಂಬೂರಿ)


Shishunala shariefa Sahebara Geetegalu

Song link: Click Here


Taravalla tagi ninna tamburi -  swara

Barade barisadiru tamburi

Sarasa sangeetada kuruhugalariyade

Baride barisadiru tamburi ||


Maddali daniyolu tamburi -  ada

Tiddi nudisabeko tamburi

Sidda sadhakara suvidhyege odaguva

Bhudivantakke takka tamburi ||


Balaballavarige tamburi - deva

Balaksha rachisida tamburi

Helali enidara hanchike tiliyada

Talagedige salla tamburi ||


Satya sharadhiyolu tamburi - nitya

Uttamaraduva tamburi

Battisaragada bageyanariyadantha

Kattiginyatake tamburi ||taravalla||


Hasanada myalake tamburi - idu

Kushalarigoppuva tamburi

Sishunaladeeshana odupuranadi

Hasanagi bariso tamburi ||



ತತ್ವಪದ 


ತರವಲ್ಲ ತಗಿ ನಿನ್ನ ತಂಬೂರಿ - ಸ್ವರ 

ಬರದೆ  ಬಾರಿಸದಿರು ತಂಬೂರಿ

ಸರಸ ಸಂಗೀತದ ಕುರುಹುಗಳರಿಯದೆ 

ಬರದೆ  ಬಾರಿಸದಿರು ತಂಬೂರಿ ।।ಪ ।।


ಮದ್ದಲಿ ದನಿಯೊಳು ತಂಬೂರಿ - ಅದ 

ತಿದ್ದಿ ನುಡಿಸಬೇಕೊ  ತಂಬೂರಿ 

ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ 

ಬುದ್ಧಿವಂತಕೆ ತಕ್ಕ ತಂಬೂರಿ ।।೧।।


ಬಾಳ  ಬಲ್ಲವರಿಗೆ ತಂಬೂರಿ - ದೇವಾ 

ಭಾಳಾಕ್ಷ ರಚಿಸಿದ ತಂಬೂರಿ 

ಹೇಳಲಿ ಏನಿದರ ಹಂಚಿಕೆ ತಿಳಿಯದ 

ತಾಳಗೇಡಿಗೆ ಸಲ್ಲ ತಂಬೂರಿ ।।೨।।


ಸತ್ಯ ಶರಧಿಯೊಳು ತಂಬೂರಿ  - ನಿತ್ಯ 

ಉತ್ತಮರಡುವ ತಂಬೂರಿ 

ಬತ್ತೀಸರಾಗದ ಬಗೆಯನರಿಯದಂಥ 

ಕತ್ತಿಗಿನ್ಯಾತಕೆ ತಂಬೂರಿ ।।೩।।


ಹಸನಾದ ಮ್ಯಾಳಕೆ  ತಂಬೂರಿ - ಇದು 

ಕುಶಲರಿಗೊಪ್ಪುವ ತಂಬೂರಿ 

ಶಿಶುನಾಳಾಧೀಶನ ಓದುಪುರಾಣದಿ 

ಹಸನಾಗಿ ಬಾರಿಸೊ  ತಂಬೂರಿ ।।೪।।