Movie: Rayaru Bandaru Mavana Manege (1993)
Singers: SPB, Chitra
Song link: Click Here
Adavi deviya kaadu janagala ee haadu, naadina jeeva tumbide, uvva uvaa..,
Kannada naade madhuchandra, kannada nudiye srigandha,
Usriru needide, hasiru tugide, madhuravaagide ||
Kaadu mallayyange jenu kittu pooje kottu,
Jaaji malle tandu devammange maale ittu,
Elu hattiyinda elu ratri elu hagalu,
Elu kanyerinda sobalakki devigidalu,
Chigurodeyitu belakaralitu, hole tarisitu rasaraana,
Mane maneyalu, janamanadalu shivanolavina shubhadhyana,
Kannada nelave dhanya, kannada jalave maanya,
Usriru needide, hasiru tugide, madhuravaagide ||
Yaare illi bandru snehakkenu kammi illa,
Namma preetiyalli sullu mosa ondu illa,
Namma dharmadalli bheda bhava kanodilla,
Namma preetiyalli kaade ilde naade illa,
Gida maragale, tarulategale, nadi vanagale varadaana,
Jana beretare, samarasadali, ade olavina hosagaana,
Kannada janare chenda, kannada manave anda,
Usriru needide, hasiru tugide, madhuravaagide ||
ಚಿತ್ರಗೀತೆ
ಅಡವಿ ದೇವಿಯ ಕಾಡು ಜನಗಳ ಈ ಹಾಡೂ, ನಾಡಿನ ಜೀವ ತುಂಬಿದೆ, ಉವ್ವಾ ಉವ್ವಾ..,
ಕನ್ನಡ ನಾಡೇ ಮಧುಚಂದ್ರ, ಕನ್ನಡ ನುಡಿಯೇ ಶ್ರೀಗಂಧ,
ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ ।।
ಕಾಡು ಮಲ್ಲಯ್ಯಂಗೆ ಜೇನು ಕಿತ್ತು ಪೂಜೆ ಕೊಟ್ಟು,
ಜಾಜಿ ಮಲ್ಲೆ ತಂದು ದೇವಮ್ಮ೦ಗೆ ಮಾಲೆ ಇತ್ತು,
ಏಳು ಹಟ್ಟಿಯಿಂದ ಏಳು ರಾತ್ರಿ ಏಳು ಹಗಲು,
ಏಳು ಕನ್ಯೆರಿಂದ ಸೋಬಲಕ್ಕಿ ದೇವಿಗಿಡಲು
ಚಿಗುರೊಡೆಯಿತು ಬೆಳಕರಳಿತು, ಹೊಳೆ ತರಿಸಿತು ರಸತಾಣಾ
ಮನೆ ಮನೆಯಲು, ಜನಮನದಲು, ಶಿವನೊಲವಿನ ಶುಭಧ್ಯಾನ
ಕನ್ನಡ ನೆಲವೇ ಧನ್ಯ, ಕನ್ನಡ ಜಾಲವೇ ಮಾನ್ಯ,
ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ ।।
ಯಾರೇ ಇಲ್ಲಿ ಬಂದ್ರು ಸ್ನೇಹಕ್ಕೇನು ಕಮ್ಮಿ ಇಲ್ಲ,
ನಮ್ಮ ಪ್ರೀತಿಯಲ್ಲಿ ಸುಳ್ಳು ಮೋಸ ಒಂದು ಇಲ್ಲ,
ನಮ್ಮ ಧರ್ಮದಲ್ಲಿ ಭೇದ ಭಾವ ಕಾಣೋದಿಲ್ಲ,
ನಮ್ಮ ನೀತಿಯಲ್ಲಿ ಕಾಡೇ ಇಲ್ದೆ ನಾಡೇ ಇಲ್ಲ,
ಗಿಡ ಮರಗಳೆ, ತರುಲತೆಗಳೆ, ನದಿ ವನಗಳೆ ವರದಾನ,
ಜನ ಬೆರೆತರೆ, ಸಮರಸದಲಿ, ಅದೆ ಒಲವಿನ ಹೊಸಗಾನ,
ಕನ್ನಡ ಜನರೇ ಚೆಂದ, ಕನ್ನಡ ಮನವೇ ಅಂದ,
ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ ।।
