Saturday, September 27, 2025

Raghavendra Tava Naamave Madhura (ರಾಘವೇಂದ್ರ ತವನಾಮವೇ ಮಧುರ)

Bhaktigeete

Singer: SPB

Song link: Click Here


Raghavendra tava naamave madhura,

Aleyuva manasige ade aadhara ||


Kashtavu bandaga kareyuva shubha naama,

Kulaheenanadaru koogi japisuva naama,

Kavida bheetiyali uccharisuva naama,

Maadida paapagala nivarisuva naama ||


Ra ene rashi dosha dahisuvaru,

Gha ene ghana bakuti eeyuvaru,

Vem ene vegadi bandu poreyuvaru,

Dra ene daridryavannu neeguvaru,

(Raghavendra, raghavendra..)


Dhareyali naamake migilaavudilla,

Ariyada paamara taanenu balla,

Paripari bhajisalu abhishta kodaballa,

Gururaayara naama nenedare bhayavilla ||


Raghavendra tava naamave atimadhura,

Raghavendra tava naamave chiramadhura ||


ಭಕ್ತಿಗೀತೆ 


ರಾಘವೇಂದ್ರ ತವನಾಮವೇ ಮಧುರ, 

ಅಲೆಯುವ ಮನಸಿಗೆ ಅದೆ ಆಧಾರ ।।ಪ।।


ಕಷ್ಟವು ಬಂದಾಗ ಕರೆಯುವ ಶುಭ ನಾಮ, 

ಕುಲಹೀನನಾದರೂ ಕೂಗಿ ಜಪಿಸುವ ನಾಮ, 

ಕವಿದ ಭೀತಿಯಲಿ ಉಚ್ಚರಿಸುವ ನಾಮ, 

ಮಾಡಿದ ಪಾಪಗಳ ನಿವಾರಿಸುವ ನಾಮ ।।೧।।


ರಾ ಎನೆ ರಾಶಿ ದೋಷ ದಹಿಸುವರು, 

ಘ ಎನೆ ಘನ ಭಕುತಿ ಈಯುವರು, 

ವೆಂ ಎನೆ ವೇಗದಿ ಬಂದು ಪೊರೆಯುವರು, 

ದ್ರ ಎನೆ ದಾರಿದ್ರ್ಯ ವನ್ನು ನೀಗುವರು ।।೨।।

(ರಾಘವೇಂದ್ರ ರಾಘವೇಂದ್ರ .. )


ಧರೆಯಲಿ ನಾಮಕೆ ಮಿಗಿಲಾವುದಿಲ್ಲ, 

ಅರಿಯದ ಪಾಮರ ತಾನೇನು ಬಲ್ಲ, 

ಪರಿಪರಿ ಭಜಿಸಲು ಅಭೀಷ್ಟ ಕೊಡಬಲ್ಲ, 

ಗುರುರಾಯರ ನಾಮ ನೆನೆದರೆ ಭಯವಿಲ್ಲ ।।೩।।


ರಾಘವೇಂದ್ರ ತವನಾಮವೇ ಅತಿ ಮಧುರ, 

ರಾಘವೇಂದ್ರ ತವನಾಮವೇ ಚಿರ ಮಧುರ ।।

                         

Taayiya Haraike (ತಾಯಿಯ ಹರಕೆ)

ಪದ್ಯ 

ಜನಪದ ಗೀತೆ 


ಒಳ್ಳೆಯವರ ಗೆಳೆತನ ಕಲ್ಲುಸಕ್ಕರಿ ಹಾಂಗ 

ಕುಲ್ಲರ 

ಗೆಳೆತನ ಮಾಡಿದರ । ನನಕಂದ 

ಸಲ್ಲದ ಮಾತು ಬರತಾವ ।।


ಮಂದಿ ಮಕ್ಕಳೊಳಗ ಚಂದಾಗಿ ಇರಬೇಕು

 ನಂದೀಯ ಶಿವನ ದಯದಿಂದ । ಹೋಗಾಗ 

ಮಂದಿ ಬಾಯಾಗ ಇರಬೇಕು ।।


ಕೊಟ್ಟು ಕುದಿಯಲು ಬೇಡ ಇಟ್ಟು ಹಂಗಿಸ ಬೇಡ 

ಎಷ್ಟು೦ಡರೆಂದು ಅನಬೇಡ । ಈ ಮೂರು 

ಮುಟ್ಯಾವ ಶಿವನ ಸದರೀಗಿ ।।


ಹಿರಿಯರಿಗೆ ಹಿರಿಯನ್ನು ಕಿರಿಯರಿಗೆ ಕಿರಿಯನ್ನು 

ನೆರೆಗಡ್ಡದ ಮುದುಕರ । ಕಂಡರ 

ತಲೆಬಾಗಿ ನಡೆಯೋ ನನಕಂದ ।।


ಆಚಾರಕ್ಕರಸಾಗು ನೀತಿಗೆ ಪ್ರಭುವಾಗು 

ಮಾತಿನಲಿ ಚೂಡಾಮಣಿಯಾಗು । ಕಂದಯ್ಯ 

ಜ್ಯೋತಿಯೆ ಆಗು ಜಗಕೆಲ್ಲ ।।


Padya


Olleyavara geletana kallusakkari hanga

Kullara geletana maadidara | nanakanda

Sallada maatu barataava ||


Mandi makkalolaga chandagi irabeku

Nandeeya shivana dayadinda | hogaaga

Mandi bayaaga irabeku ||


Kottu kudiyalu beda ittu hangisa beda

Eastundarendu anabeda | ee mooru

Muttyava shivana sadareegi ||


Hiriyarige hiriyannu kiriyarige kiriyannu

Neregaddada mudukara | kandara

Talebaagi nadeyo nanakanda ||


Acharakkarasaagu neetige prabhuvaagu

Maatinali chudamaniyaagu | kandayya

Jyothiye aagu jagakella ||

            


Friday, September 26, 2025

Deshavonde Bharata (ದೇಶವೊಂದೆ ಭಾರತ)

 ಪದ್ಯ 

ಸಾಹಿತ್ಯ : ಸಾ. ಶಿ. ಮರುಳಯ್ಯ 


ವೇಷ ಬೇರೆ ಭಾಷೆ ಬೇರೆ, ದೇಶವೊಂದೆ ಭಾರತ 

ಒಂದೆ ತಾಯ ಮಕ್ಕಳೆಂದು ಘೋಷಿಸೋಣ ಸಂತತ ।।


ತೀರ್ಥನಗೆಯ ಕ್ಷೇತ್ರವಿದೋ ಭವ್ಯನಾಡು ಭಾರತ 

ಋಷಿಗಳುಸಿರ ಹರಕೆ ಹೊತ್ತ ದಿವ್ಯನಾಡು ಭಾರತ 

ಕಡಲುಗಳನೆ ಉಡುಗೆಯುಟ್ಟು 

ಘಟ್ಟದೋಳು ಬಳೆಯ ತೊಟ್ಟು 

ನದಿ ನದಗಳ ಹಾರವಿಟ್ಟು 


ಸೇತುವಿಂದ ಸಿಂಧುವರೆಗು ಬೆಳೆದು ನಿಂತ ಭಾರತ 

ಭಂಗಗೊಳದ ವಂಗನಾಡ ಕೂಡಿ ಮೆರೆದ ಭಾರತ 

ಇದೇ ನಮ್ಮ ಭಾರತ 

ಪುಣ್ಯಭೂಮಿ ಭಾರತ 


ಭರತಖಂಡದಿಂದಲೇನೆ ನಿನಗೆ ಮೋಕ್ಷ ಪ್ರಾಪ್ತಿ 

ತಪ್ಪಿನುಡಿದೆಯೆಂದರಹುದು ನಿನಗೆ ತಕ್ಕ ಶಾಸ್ತಿ ।।


ಯಾವ ದೇಶದಲ್ಲೆ ದುಡಿ 

ಯಾವ ಮಣ್ಣಿನಲ್ಲೆ ಮಡಿ 

ನಿಂತ ನೆಲವು ಹಿಡಿದ ಹುಡಿ 

ಭರತ ಭೂಮಿಯೆಂದು ತಿಳಿ 


ಮಣ್ಣ ಮೋಹ ಬಿಟ್ಟರಿಲ್ಲೊ ನಿನಗೆ ಬೇರೆ ಸದ್ಗತಿ 

ಬರಿಯ ಮಾತಿನಲ್ಲೆ ಮುಗಿವುದಲ್ಲೊ ನಿನ್ನ ಸಂಸ್ಕೃತಿ 

ಮಾನವತೆಯ ಶುಚಿಮತಿ 

ಸನಾತನದ ಸತ್ಕೃತಿ 


ವೇಷ ಬೇರೆ ಭಾಷೆ ಬೇರೆ, ದೇಶವೊಂದೆ ಭಾರತ 

ಒಂದೆ ತಾಯ ಮಕ್ಕಳೆಂದು ಘೋಷಿಸೋಣ ಸಂತತ ।


Padya


Vesha bere bhashe bere, deshavonde bharata

Onde taaya makkalendu ghoshisona santata ||


Thirthanageya kshetravido bhavyanaadu bharata

Rushigalusira harake hotta divyanaadu bharata

Kadalugalane udugeyuttu

Ghattadolu baleya tottu

Nadi nadagala haaravittu


Setuvinda sindhuvaregu beledu ninta bharata

Bhangagolada vanganaada kudi mereda bharata

Ide namma bharata

Punyabhumi bharata


Bharatakhandadindalene ninage mokshaprapti

Tappinudideyendarahudu ninage takka shasti ||


Yaava deshadalle dudi

Yaava maninalle madi

Ninta nelavu hidida hudi

Bharata bhumiyendu tili


Manna moha bittarillo ninage bere sadgati

Bariya maatinalle mugivudallo ninna samskruti

Maanavateya shuchimati

Sanaatanada satkruti 


Vesha bere bhashe bere, deshavonde bharata

Onde taaya makkalendu ghoshisona santata |

                    

Bannada Bagari (ಬಣ್ಣದ ಬಗರಿ)

ಪದ್ಯ 

ಸಾಹಿತ್ಯ: ಮಹಾಂತ ಪ್ರಿಯ 


ನನ್ನಯ ಬಗರಿ 

ಬಣ್ಣದ ಬಗರಿ 

'ಗುರು ಗುರು' ಸದ್ದನು 

ಮಾಡುವ ಬಗರಿ. 


ಜಾಳಿಗೆ ಸುತ್ತಿ 

ಕೈಯನು ಎತ್ತಿ 

ಬೀಸಲು ಭರದಿ 

ಸುತ್ತುವ ಬಗರಿ. 


ಹೊಡೆತಕೆ ಅಂಜದೆ 

ಕೆಚ್ಚೆದೆಯಿಂದಲಿ 

'ಗಿರಿ ಗಿರಿ' ತಿರುಗುವ 

ಮೆಚ್ಚಿನ ಬಗರಿ. 


ಅಂಗೈ ಮೇಲೆ 

ಆಡುವ ಬಗರಿ 

ಕಚಕುಳಿಯಿಕ್ಕುವ 

ಮೋಜಿನ ಬಗರಿ. 


ಕಾಮನ ಬಿಲ್ಲನು 

ಭೂಮಿಗೆ ಇಳಿಸಿ 

'ಗರಗರ' ಸುತ್ತುವ 

ಬಣ್ಣದ ಬಗರಿ. 


Padya


Nannaya bagari

Bannada bagari

'Guruguru' saddanu

Maaduva bagari.


Jaalige sutti

Kaiyanu etti

Beesalu bharadi

Suttuva bagari.


Hodetake anjade

Kecchedeyindali

'Girigiri' tiruguva

Mecchina bagari.


Angai mele

Aaduva bagari

Kachakuli yikkuva

Mojina bagari.


Kaamana billanu

Bhumige ilisi

'Garagara' suttuva

Bannada bagari.

Monday, September 22, 2025

Ikyagaana (ಐಕ್ಯಗಾನ)

ಪದ್ಯ 

ಸಾಹಿತ್ಯ: ಕಯ್ಯಾರ ಕಿಞ್ಞಣ್ಣ ರೈ 


ನೆನೆನೆನೆದು ದಿನದಿನವು,

ದುಡಿದುಡಿದು ಜನಜನವು,

ಭಾರತದ ಸ್ವಾತಂತ್ರ್ಯ ಮೆರೆಸಿ; ಹೆಮ್ಮೆ !


ಸ್ವಾತಂತ್ರ್ಯ ಪಡೆದಿಹೆವು,

ತಲೆಯೆತ್ತಿ ನಡೆಯುವೆವು,

ವಜ್ರದೇಹಿಗಳಾವು; ಬನ್ನಿರೆಲ್ಲ.  


ಸ್ವಾತಂತ್ರ್ಯವೇ ಪಕ್ಷ,

ಸ್ವಾತಂತ್ರ್ಯವೇ ಪಂಥ,

ಸ್ವಾತಂತ್ರ್ಯವೇ ಜಾತಿ-ಎನ್ನಿರೆಲ್ಲ. 


ಭಾರತದ ಬಿಡುಗಡೆಗೆ 

ಹೋರಾಡಿರುವ ನಮಗೆ 

ಯಾರ ಭಯ ? ನಾವಿಂದು ಮುಂದಾಗಿರೆ. 


ಐಕ್ಯವೊಂದೇ ಮಂತ್ರ,

ಐಕ್ಯದಿಂದೆ ಸ್ವತಂತ್ರ,

ಐಕ್ಯಗಾನದಿ ರಾಷ್ಟ್ರ ತೇಲುತಿರಲಿ !


Padya


Nenenenedu dinadinavu,

Dudidudidu janajanavu,

Bharatada swatantrya meresi; hemme!


Swatantrya padedihevu,

Taleyetti nadeyuvevu,

Vajradehigalaavu; bannirella.


Swatantryave paksha,

Swatantryave pantha,

Swatantrave jaati-ennirella.


Bharatada bidugadege

Horaadiruva namage

Yaara bhaya? naavindu mundaagire.


Ikyavonde mantra,

Ikyadinde swatantra,

Ikyagaanadi rastra telutirali!

                   

Kannada Naadu (ಕನ್ನಡ ನಾಡು)

ಪದ್ಯ 

ಸಾಹಿತ್ಯ: ಬೇಡರೆಡ್ಡಿಹಳ್ಳಿ ಪಂಪಣ್ಣ   


ಕನ್ನಡ ಕನ್ನಡ ಕನ್ನಡವೆಂದುಲಿ 

ಕನ್ನಡ ನಾಡಿನ ಓ ಕಂದ 

ಕನ್ನಡ ಭಾಷೆಯ ಕೀರುತಿ ಹಬ್ಬಿಸು 

ಕನ್ನಡ ತಾಯಿಗೆ ಆನಂದ ।।


ಕಾರ್ಕಳ, ಬೆಳಗೊಳ, ಐಹೊಳೆ, ಹರಿಹರ 

ಹಂಪೆ, ಹಳೇಬೀಡು, ಬೇಲೂರು 

ಶಿಲೆಯಲಿ ಜೀವನ ಕಲೆಯನು ಬೆಳಗುವ 

ಶಿಲ್ಪ ಕಲೆಗಳಿಗೆ ತವರೂರು ।।


ತುಂಗೆ, ಭದ್ರೆ, ಕಾವೇರಿ, ಶರಾವತಿ 

ಕೃಷ್ಣ, ಕಾಳಿ ವರ ವೇದೆಯರು

ಜಲವನು ಹರಿಯಿಸಿ, ಬೆಳೆಯನು ಬೆಳೆಯಿಸಿ 

ಸಲಹುವ ನದಿಗಳ ನೆಲೆವೀಡು ।।


ರನ್ನ, ಜನ್ನ, ವರಪಂಪ, ಲಕುಮೀಶ 

ರಾಘವ, ಹರಿಹರ, ಮುದ್ದಣರು 

ಕನ್ನಡ ಸಾಹಿತ್ಯ ಕಲೆಯನು ಬೆಳೆಸಿದ 

ಕನ್ನಡ ಕವಿಗಳ ತವರೂರು ।।


ರಾಣಿ ಚೆನ್ನಮ್ಮ, ಸಂಚಿ ಹೊನ್ನಮ್ಮ 

ಉಡುತಡಿ ಊರಿನ ಅಕ್ಕಮ್ಮ 

ಕನ್ನಡ ನಾಡಿಗೆ ಕೀರುತಿ ತಂದಿಹ 

ಅಮರ ರಾಮಣಿಯರ ಕರುನಾಡು ।।


ಕನ್ನಡ ಕನ್ನಡ ಕನ್ನಡವೆಂದುಲಿ 

ಕನ್ನಡ ನಾಡಿನ ಓ ಕಂದ 

ಕನ್ನಡ ಕೀರುತಿ ನಾಲ್ವೆಡೆ ಹಬ್ಬಿಸು 

ಕನ್ನಡ ತಾಯಿಗೆ ಆನಂದ ।। 


Padya


Kannada kannada kannadavenduli

Kannada naadina o kanda

Kannada bhasheya keeruti habbisu

Kannada taayige aananda ||


Karkala, belagola, ihole, harihara

Hampe, halebeedu, beluru

Shileyali jeevana kaleyanu belaguva

Shilpa kalegalige tavaruru ||


Tunge, bhadre, kaveri, sharavati

Krishna, kaali vara vedeyaru

Jalavanu hariyisi, beleyanu beleyisi

Salahuva nadigala neleveedu ||


Ranna, janna, varapampa, lakumeesha

Raghava, harihara, muddanaru

Kannada sahitya kaleyanu belesida

Kannada kavigala tavaruru ||


Rani chennamma, sanchi honnamma

Udutadi urina akkamma

Kannada naadige keeruti tandiha

Amara ramaniyara karunaadu ||


Kannada kannada kannadavenduli

Kannada naadina o kanda

Kannada keeruti nalvede habbisu

Kannada taayige aananda ||

              

Neralu (ನೆರಳು)

ಪದ್ಯ 

ಸಾಹಿತ್ಯ : ಸರೋಜಿನಿ ಮಹಿಷಿ 


ನನ್ನ  ನೆರಳು ನನ್ನ ಹಿಂದೆ 

ಎಲ್ಲಿ ಹೋಗೆ ಬರುವುದು 

ದೊಡ್ಡ ನೆರಳು ಚಿಕ್ಕದಾಗಿ 

ಬೆನ್ನು ಬಿಡದೆ ಇರುವುದು 


ಚಿಕ್ಕ ನೆರಳು ದೊಡ್ಡದಾಗಿ 

ಮತ್ತೆ ಹಿಂದೆ ಬರುವುದು 

ನಾನು ಕೆಂಪು ಆದರೆನ್ನ 

ನೆರಳು ಕಪ್ಪು ಇರುವುದು 


ಕಣ್ಣು ಕಿವಿ ಮೂಗು ಬಾಯಿ 

ಎನ್ನ ನೆರಳಿಗಿರುವುವು 

ಆದರೇನು ಮಾತುಕತೆ -

ತಿಂಡಿ ಅದಕೆ ಇಲ್ಲವು 


ನನ್ನ ಜೊತೆಗೆ ಯಾರೆ ಇರಲಿ 

ನೆರಳು ಬೆನ್ನು ಬಿಡದಲೆ 

ಎಲ್ಲೆಯಿರಲಿ ಬದುಕದದುವು 

ನಾನು ಜೊತೆಗೆ ಇರದಲೆ 


ಮರದ ನೆರಳು ಜನಕೆ ಹಿತವು 

ನಿತ್ಯ ತಂಪನೀವುದು 

ಎಮ್ಮ ನೆರಳು ಎಮ್ಮ ಗೂಡ 

ಯಾರ ಹಿತವ ಬಯಸದು. 


Padya


Nanna neralu nanna hinde

Elli hoge baruvudu

Dodda neralu chikkadaagi

Bennu bidade iruvudu


Chikka neralu doddadaagi

Matte hinde baruvudu

Naanu kempu aadarenna

Neralu kappu iruvudu


Kannu kivi moogu baayi

Enna neraligiruvuvu

Aadarenu maatukate-

Tindi adake illavu


Nanna jothege yaare irali

Neralu bennu bidadale

Elleyirali badukadaduvu

Naanu jothege iradale


Marada neralu janake hitavu

Nitya tampaneevudu

Emma neralu emma gooda

Yaara hitava bayasadu.

         

Friday, September 19, 2025

Kannada Kannada Barri Namma Sangada (ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ)

ಪದ್ಯ 

ಸಾಹಿತ್ಯ :ಚಂದ್ರಶೇಖರ ಪಾಟೀಲ (ಚಂಪಾ)


ಎಲ್ಲೆಲ್ಲೂ ಉಸಿರಬೇಕು 

ನಮ್ಮ ನುಡಿ ಕನ್ನಡ 

ಸಿರಿನಾಡನು ಕಟ್ಟಲಿಕ್ಕೆ 

ಬರ್ರಿ ನಮ್ಮ ಸಂಗಡ 


ಕೈಯ ತುಂಬ ಕೆಲಸ ಬೇಕು

ಬೇಕು ಹೊಟ್ಟೆಗನ್ನ 

ಅಕ್ಷರಗಳ ಕನ್ನ ಕೊರೆದು 

ಬರಲಿ ಅರಿವು - ಚಿನ್ನ 


ಮೈಯ ತುಂಬ ಬಟ್ಟೆ ಬೇಕು

ನೆತ್ತಿಗೊಂದು ಆಸರ 

ಭೂಮಿ ತುಂಬ ಬಿತ್ತಬೇಕು 

ತನ್ನ ಬೆಳಕು ನೇಸರ 


ತಲೆಯ ತುಂಬ ಬೆಂಕಿ ತುಂಬಿ 

ಮಿಂಚಬೇಕು ಕಂಗಳು 

ಎದೆಯ ತುಂಬಿ ತುಳುಕಬೇಕು 

ಪ್ರೀತಿಯ ಬೆಳದಿಂಗಳು 


ಇಂಥ ನಾಡು ಕಟ್ಟಬೇಕು 

ಬರ್ರಿ ನಮ್ಮ ಸಂಗಡ 

ಎಲ್ಲೆಲ್ಲೂ ಮೊಳಗಬೇಕು 

ಕನ್ನಡ ಕನ್ನಡ 

ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ. 


Padya


Ellellu usirabeku

namma nudi kannada

sirinaadanu kattalikke

barri namma sangada


kaiya tumba kelasa beku

Beku hotteganna

aksharagala kanna koredu

barali arivu - chinna


Maiya tumba batte beku

Nettigondu aasara

Bhumi tumba bittabeku

tanna belaku nesara


taleya tumba benki tumbi

minchabeku kangalu

Edeya tumbi tulukabeku

Preetiya beladingalu


Intha naadu kattabeku

Barri namma sangada

Ellellu molagabeku

Kannada kannada

Kannada kannada barri namma sangada.

                

Sunday, September 14, 2025

Surimale Guttu (ಸುರಿಮಳೆ ಗುಟ್ಟು)

ಪದ್ಯ 

ಸಾಹಿತ್ಯ : ಬ. ಬೀ. ನಾಗನೂರ 


ಮುಗಿಲೊಳಗಿಂದ 

ಭೂಮಿಯ ಮೇಲೆ 

ನೀರನು ಸುರಿವರು ಯಾರಣ್ಣ?


ಮುಗಿಲಿನ ಮರೆಗೆ 

ಯಾರೂ ಇಲ್ಲ 

ಸುರಿವುದು ನೀರು ಹೇಗೆಣ್ಣ ?


ಆಗಸದಿಂದ 

ಭೂಮಿಗೆ ನೀರು 

ಬೀಳುವ ಬಗೆಯ ಹೇಳುವೆ ತಮ್ಮಾ 


ಭೂಮಿಯ ಮೇಲೆ 

ನೀರಿನ ಮೂಲ 

ಕೆರೆ ಹೊಳೆ ಹಳ್ಳ ಸಾಗರ ತಮ್ಮಾ 


ಸೂರ್ಯನ ಬಿಸಿಲಿಗೆ 

ಕಾಯುತ ಉಗಿಯ 

ರೂಪದಿ ಮೇಲಕೆ ಹೋಗುವುದು 


ನೀರಿನ ಉಗಿಯು 

ಮೇಲಕೆ ಏರಿ 

ನೀರದು ತಾ ಹೇಗಾಗುವುದಣ್ಣ ?


ಜಲದಾ ಉಗಿಯು 

ಒಂದೆಡೆ ಸೇರಿ 

ಮೋಡಗಳಾಗಿ ತೇಲುವುವು 


ತಣ್ಣನೆ ಗಾಳಿ 

ಬಾನಿಗೆ ತಾಗೆ 

ಕರಗುತ ಕೂಡಲೆ ನೀರಾಗುವುದು 


ಮಂಜಿನ ಗಡ್ಡೆ 

ಕರಗುವ ತೆರದಿ 

ಭೂಮಿಗೆ ರಪರಪ ಬೀಳುವುದು 


ಬೀಳುವ ಇಂಥ 

ನೀರಿಗೆ ನಾವು 

ಸುರಿಮಳೆ ಎಂದು ಕರೆಯುವೆವು 


Padya


Mugilolaginda

Bhumiya mele

Neeranu surivaru yaaranna?


Mugilina marege

Yaaru illa

Surivudu neeru heganna?


Aagasadinda

Bhumige neeru

Beeluva bageya heluve tamma


Bhumiya mele

Neerina moola

Kere hole halla sagara tamma


Suryana bisilige

Kaayuta ugiya

Rupadi melake hoguvudu


Neerina ugiyu

Melake eri

Neeradu taa hegaguvudanna?


Jaladaa ugiyu

Ondede seri

Modagalaagi teluvuvu


Tannane gaali

Baanige taage

Karaguta kudale neeraguvudu


Manjina gadde

Karaguva teradi

Bhumige raparapa beeluvudu


Beeluva intha

Neerige naavu

surimale endu kareyuvevu

           

Raitanaaguve (ರೈತನಾಗುವೆ)

ಪದ್ಯ 

ಸಾಹಿತ್ಯ : ಎ. ಕೆ. ರಾಮೇಶ್ವರ 


ಅಪ್ಪನೊಡನೆ ಹೊಲಕೆ ಹೋಗಿ 

ದಿನವು ದುಡಿಯುವೆ 

ದುಡಿದು ದಣಿದು ದಿನವು ನಾನು 

ಬೆವರು ಸುರಿಸುವೆ. 


ಕರಿಯ ಬಿಳಿಯ ಎತ್ತು ಹೂಡಿ 

ಕುಂಟಿ ಹೊಡೆಯುವೆ 

ತಾಸು ಹೊತ್ತು ಏರಿ ಬರಲು 

ನ್ಯಾರಿ ಮಾಡುವೆ. 


ಅವ್ವ ನನಗೆ ನುಚ್ಚು ರೊಟ್ಟಿ 

ಬುತ್ತಿ ತರುವಳು 

ನೆನೆದ ಕಾಳು ಉಳ್ಳೆಗಡ್ಡಿ 

ಅದರಲಿಡುವಳು. 


ಎರೆಯ ಹೊಲವ ಉತ್ತಿದಾಗ 

ಎತ್ತು ದಣಿಯಲು 

ಕೊರಳ ಕುಣಿಕೆ ಬಿಚ್ಚಿ ಬಿಡುವೆ 

ಹಸಿರು ಮೇಯಲು. 


ಒಂದೇ ಮನದಿ ಭೂಮಿಯಲ್ಲಿ 

ನಿಂದು ದುಡಿಯುವೆ 

ರೈತ ಜಗದ ಬೆನ್ನಿನೆಲುವು 

ಎಂದು ಹಾಡುವೆ. 


Padya


Appanodane holake hogi

Dinavu dudiyuve

Dudidu danidu dinavu naanu

Bevaru surisuve.


Kariya biliya ettu hoodi

Kunti hodeyuve

Taasu hottu eri baralu

Nyari maaduve.


Avva nanage nucchu rotti

Butti taruvalu

Neneda kaalu ullegaddi

Adaraliduvalu


Ereya holava uttidaaga

Ettu daniyalu

Korala kunike bicchi biduve

Hasiru meyalu.


Onde manadi bhumiyalli

Nindu dudiyuve

Raita jagada bennineluvu

Endu haaduve.

        

Tengu (ತೆಂಗು)

ಪದ್ಯ 

ಸಾಹಿತ್ಯ : ಜಿ. ಪಿ. ರಾಜರತ್ನಂ 


ನೇರವಾಗಿ ತಲೆಯೆತ್ತಿ 

ಬೆಳೆಯುವವ ನಾನು !

ನಾರಿಕೇಳ ! ಕಲ್ಪವೃಕ್ಷ 

ತೆಂಗಿನ ಮರ ನಾನು !


ರೆಂಬೆಯಿಲ್ಲ ! ಕೊಂಬೆಯಿಲ್ಲ !

ತಲೆಯ ತುಂಬ ಗರಿ !

ನಡುನಡುವೆ ಕಾಯ್ ಗೊಂಚಲು !

ನೋಡಿದೀಯ ಮರಿ ?


ಕೆಳಗೆ ಉಪ್ಪು ನೀರು ಕುಡಿವೆ !

ಮೇಲೆ ಎಳನೀರು ಕೊಡುವೆ !

ನಾನಿಲ್ಲದೆ ಅಡಿಗೆಯಿಲ್ಲ !

ತಿಂದಿದೀಯ ಕೊಬರಿಬೆಲ್ಲ ?


ತಾಂಬೂಲಕೆ ನಾನೆ ಫಲ !

ಹೊರಗೆ ಕರಟ, ಒಳಗೆ ಜಲ !

ನನ್ನ ಹಾಗೇ ನೀನೂ ಬೆಳಿ !


Padya


Neravaagi taleyetti

Beleyuvava naanu!

Naarikela! kalpavruksha

Tengina mara naanu!


Rembeyilla! kombeyilla!

Taleya tumba gari!

Nadunaduve kai gonchalu!

Nodideeya mari?


Kelage uppu neeru kudive!

Mele elaneeru koduve!

Naanillade adigeyilla!

Tindideeya kobaribella?


Tambulake naane phala!

horage karata, olage jala!

Nanna nodi neenu kali!

Nanna haage neenu beli!

         

Muddina Karu (ಮುದ್ದಿನ ಕರು)

 ಪದ್ಯ 

ಸಾಹಿತ್ಯ : ಜಂಬುನಾಥ ಕಂಚ್ಯಾಣಿ 


ನನ್ನಯ ಮುದ್ದಿನ ಆಕಳ ಕರುವು 

ಸುಂದರ ಕಾಣುವುದು . 

ಬೆಳ್ಳಿಯ ಬೆಳಕಿನ ಬಣ್ಣವ ತೊಟ್ಟು 

ಬಳುಕುತ ನಡೆಯುವುದು. 


ಗೌರಿಯು ಅಂಬಾ ಎನ್ನಲು ಕಣ್ಣನು 

ಅರಳಿಸಿ ನೋಡುವುದು. 

ಕುಣಿಕೆಯ ಬಿಚ್ಚಲು ಓಡುತ ತಾಯಿಯ 

ಮಡಿಲನು ಸೇರುವುದು. 


ಹೊಟ್ಟೆಯು ತುಂಬಲು ಬಾಲವ ನಿಮಿರಿಸಿ 

ಚಂಗನೆ ಹಾರುವುದು. 

ಕೊರಳಿಗೆ ಕಟ್ಟಿದ ಗೆಜ್ಜೆಯ ನಾದಕೆ 

ಹೆಜ್ಜೆಯ ಹಾಕುವುದು. 


ಅಕ್ಕನ ಕಂಡರೆ ಅಕ್ಕರೆಯಿಂದಲಿ 

ಬಳಿಯಲಿ ಓಡುವುದು. 

ಅಮ್ಮನು ತಿನಿಸನು ಕೊಟ್ಟರೆ ಗಬಗಬ 

ತಿನ್ನುತ ನಲಿಯುವುದು. 


Padya


Nannaya muddina aakala karuvu

Sundara kaanuvudu.

Belliya belakina bannava tottu

Balukuta nadeyuvudu.


Gouriyu ambaa ennalu kannanu

Aralisi noduvudu.

Kunikeua bicchalu oduta taayiya

Madilanu seruvudu.


Hotteyu tumbalu baalava nimirisi

Changane haaruvudu.

Koralige kattida gejjeya naadake

Hejjeya haakuvudu.


Akkana kandare akkareyindali

Baliyali oduvudu.

Ammanu tinisalu kottare gabagaba

Tinnuta naliyuvudu.

           

Sunday, September 7, 2025

Bharatada Bhagyaravi (ಭಾರತದ ಭಾಗ್ಯರವಿ)

ಪದ್ಯ 

ಸಾಹಿತ್ಯ : ತೀ. ನಂ. ಶ್ರೀಕಂಠಯ್ಯ 


ಇಳೆಗಹಿಂಸೆಯ ಪರಮ ತತ್ವವನು ತೋಳೆತ್ತಿ,

ಉಸಿರ ಬಲವುಳ್ಳನ್ನಕ ಸಾರಿದ ಗುರು ;


ದರ್ಪವನು ಧೈರ್ಯ ದಲಿ, ಶಸ್ತ್ರವನ್ನು ಸಹನೆಯಲಿ,

ಶಠತೆಯನು ಸತ್ಯದಲಿ ಜಯಿಸಿದ ಕಲಿ ;


ಹುಡಿಯ ಹುಳುಗಳನೆತ್ತಿ  ವಜ್ರ ಹೃದಯವ ಬಿತ್ತಿ 

ವೀರ ಜನ್ಮವನಿತ್ತ ಹಿರಿಯ ತಂದೆ ;


ನೆಲದ ನಡವಳಿಕೆಯಲಿ ನಾಕದೌನ್ನತ್ಯವನು 

ಮೇಳವಿಸಿ ತೋರಿದ ಪವಾಡ ಪುರುಷ ;


ಪ್ರೇಮ ಸಂಸ್ಥಾಪನೆಯ ವಿಶ್ವಜಿದ್ಯಜ್ಞದಲಿ 

ಪ್ರಾಣ ಪೂರ್ಣಾಹುತಿಯನಿತ್ತ ದಾನಿ ;


ಭಾರತದ ಭಾಗ್ಯರವಿ ; ದೀನದಲಿತರ ರಕ್ಷೆ ;


ವಿಮಲ ಧರ್ಮದ ವಾಣಿ ; ಜನತೆಯ೦ತಃಸಾಕ್ಷಿ ;

ಸರ್ವೋದಯದ ಸೂತ್ರಧಾರಿ ಗಾಂಧಿ !


Padya


Ilegahimseya parama tatvavanu toletti

Usira balavullanaka saarida guru;


Darpavanu dhairyadali, shastravanu sahaneyali

Shattateyanu satyadali jayisida kali;


Hudiya hulugalanetti vajra hrudayava bitti

Veera janmavanitta hiriya tande;


Nelada nadavalikeyali naakadounnatyavanu

Melavisi torida pavaada purusha;


Prema samstapaneya vishwajidyajnadali

Prana poornahutiyanitta daani;


Bharatada bhagyaravi; deenadalitara rakshe;


Vimala dharmada vaani, janateyantah sakshi;

Sarvodayada sutradhari gandhi!

                    

Bhajisu Bham Bham Bham (ಭಜಿಸು ಭಂ ಭಂ ಭಂ)

Movie: Cow Boy Kulla (1973)

Singer: SPB

Song link: Click Here


Bham bham bham..!

Bhajisu bham bham bham, om namah sivaya 

Endu japisidare illa apaya,

Nambu shivana punya charana, padeyo jnana maadi dhyana,

Namah shivaya, om namah shivaya om.. ||


Mannenu hannenu sadhuvige onde, hannanne tinnuvenu nimagaagi inde,

Hennenu gandenu sanyasigonde, bham bhom tat sat bham bhom tat sat

Hennenu gandenu sanyasigonde, hennanne bayasuvenu aanandadinde, bahm bham.. ||


Kaligaala mahimeyanu nanella balle, aagodu hogodu na arive ille, haan houdu

Bhuta pretagalannu balihaakaballe, dhom dhom dassa pussa koi kothar,

Bhuta pretagalannu balihaakaballe, dustarannu rakshisuve shistharannu bhakshisuve, aha haha

Dustarannu bhakshisuve, shistarannu rakshisuve bham bham ..||


ಚಿತ್ರಗೀತೆ 


ಭಂ ಭಂ ಭಂ 

ಭಜಿಸು ಭಂ ಭಂ ಭಂ, ಓಂ ನಮಃ ಶಿವಾಯ, 

ಎಂದು ಜಪಿಸಿದರೆ ಇಲ್ಲಾ ಅಪಾಯ, 

ನಂಬು ಶಿವನಾ ಪುಣ್ಯ ಚರಣಾ, ಪಡೆಯೋ ಜ್ಞಾನ ಮಾಡಿ ಧ್ಯಾನ, 

ನಮಃ ಶಿವಾಯ ಓಂ, ನಮಃ ಶಿವಾಯ ಓಂ ।।ಪ।।


ಮಣ್ಣೇನು ಹಣ್ಣೇನು ಸಾಧುವಿಗೆ ಒಂದೆ, ಹಣ್ಣನ್ನೇ ತಿನ್ನುವೆನು ನಿಮಗಾಗಿ ಇಂದೆ 

ಹೆಣ್ಣೇನು ಗಂಡೇನು ಸನ್ಯಾಸಿಗೊಂದೆ, ಭಂ ಭೂ೦ ತತ್ ಸತ್, ಭಂ ಭೂ೦ ತತ್ ಸತ್, 

ಹೆಣ್ಣೇನು ಗಂಡೇನು ಸನ್ಯಾಸಿಗೊಂದೆ, ಹೆಣ್ಣನ್ನೆ ಬಯಸುವೆನು ಆನಂದದಿಂದೆ ।।


ಕಲಿಗಾಲ ಮಹಿಮೆಯನು ನಾನೆಲ್ಲ ಬಲ್ಲೆ, ಆಗೋದು ಹೋಗೋದು ನಾ ಅರಿವೆ ಇಲ್ಲೆ, ಹಾಂ ಹೌದು 

ಭೂತ ಪ್ರೇತಗಳನ್ನು ಬಲಿಹಾಕಬಲ್ಲೆ, ಡಾಂ ಡೂಮ್ ಡಸ್ಸಾ ಪುಸ್ಸಾ ಕೊಯ್ ಕೊಠಾರ್ 

ಭೂತ ಪ್ರೇತಗಳನ್ನು ಬಲಿಹಾಕಬಲ್ಲೆ, ದುಷ್ಟರನ್ನು ರಕ್ಷಿಸುವೆ, ಶಿಷ್ಟರನ್ನು ಭಕ್ಷಿಸುವೆ, ಆಹಾ ಹಹ 

ದುಷ್ಟರನ್ನು ಭಕ್ಷಿಸುವೆ, ಶಿಷ್ಟರನ್ನು ರಕ್ಷಿಸುವೆ ಭಂ ಭಂ .. ।।

                                     

Chenna Ninna Kandenu Kanasalli (ಚೆನ್ನ ನಿನ್ನ ಕಂಡೆನು ಕನಸಲ್ಲಿ)

Movie: Cow Boy Kulla (1973)

Singers: P Susheela, Vani Jairam

Song link: Click Here


Chenna ninna kandenu kanasalli, nanne nanne koduvenu bayilli,

Notadi summane etake kolluve, muttina kaanike tandare gelluve ||


Ee gulabi beke, sharabu beke, ahaha vinoda beke, nidaanaveke,

Ee kaiyalli kaiyittu, kannalli kannittu, nannalli ondagu baa,

Jaane jaane ninnantha jaane, kaane kaane aa devara aane,

Maatali sneha, manasali droha, balle balle ninna aatava balle ||


Prema tumbida kangale anda, raaga bhava beretaaga chenda,

Taala melake natyavu chenda..aa, chum chum chananana (4) chum nananana..aa,

Jaane jaane ninnantha jaane, kaane kaane aa devara aane,

Maatali sneha, manasali droha, balle balle ninna aatava balle ||


Ee vayyari beke, ha singaari beke, aa maisoke beke ha matterabeke,

Olavu tumbida hooviruvalli, chalada mullige taanavelli,

Aa hoovantu neenalla, mullantu naanalla, ivanendu nannavane ||


ಚಿತ್ರಗೀತೆ 


ಚೆನ್ನ ನಿನ್ನ ಕಂಡೆನು ಕನಸಲ್ಲಿ, ನನ್ನೆ ನನ್ನೆ ಕೊಡುವೆನು ಬಾಯಿಲ್ಲಿ, 

ನೋಟದಿ ಸುಮ್ಮನೆ ಏತಕೆ ಕೊಲ್ಲುವೆ, ಮುತ್ತಿನ ಕಾಣಿಕೆ ತಂದರೆ ಗೆಲ್ಲುವೆ ।।ಪ।।


ಈ ಗುಲಾಬಿ ಬೇಕೆ ಶರಾಬು ಬೇಕೆ ಆಹಾಹಾ ವಿನೋದ ಬೇಕೆ ನಿದಾನವೇಕೆ, 

ಈ ಕೈಯಲ್ಲಿ ಕೈಯಿಟ್ಟು ಕಣ್ಣಲ್ಲಿ ಕಣ್ಣಿಟ್ಟು, ನನ್ನಲ್ಲಿ ಒಂದಾಗು ಬಾ, 

ಜಾಣೆ ಜಾಣೆ ನಿನ್ನಂಥ ಜಾಣೆ, ಕಾಣೆ ಕಾಣೆ ಆ ದೇವರ ಆಣೆ, 

ಮಾತಲಿ ಸ್ನೇಹ ಮನಸಲಿ ದ್ರೋಹ, ಬಲ್ಲೆ ಬಲ್ಲೆ ನಿನ್ನ ಆಟವ ಬಲ್ಲೆ ।।


ಪ್ರೇಮ ತುಂಬಿದ ಕಂಗಳೆ ಅಂದ, ರಾಗ ಭಾವ ಬೆರೆತಾಗ ಚೆಂದ, 

ತಾಳ ಮೇಳಕೆ ನಾಟ್ಯವು ಚೆಂದ.. ಆ, ಚುಂಚುಂ ಚನನನ ಚುಂಚುಂ ಚನನನ (೪) ಚುಂ ನನನನ.. ಆ,

ಜಾಣೆ ಜಾಣೆ ನಿನ್ನಂಥ ಜಾಣೆ, ಕಾಣೆ ಕಾಣೆ ಆ ದೇವರ ಆಣೆ, 

ಮಾತಲಿ ಸ್ನೇಹ ಮನಸಲಿ ದ್ರೋಹ, ಬಲ್ಲೆ ಬಲ್ಲೆ ನಿನ್ನ ಆಟವ ಬಲ್ಲೆ ।।


 ಈ ವೈಯ್ಯಾರಿ ಬೇಕೆ, ಹಾ ಸಿಂಗಾರಿ ಬೇಕೆ, ಆ ಮೈಸೋಕೆ ಬೇಕೆ ಹಾ ಮತ್ತೇರಬೇಕೇ, 

ಒಲವು ತುಂಬಿದ ಹೂವಿರುವಲ್ಲಿ, ಛಲದ ಮುಳ್ಳಿಗೆ ತಾಣವೆಲ್ಲಿ, 

ಆ ಹೂವಂತು ನೀನಲ್ಲ, ಮುಳ್ಳಂತು ನಾನಲ್ಲ, ಇವನೆಂದು ನನ್ನವನೆ ।।

                                        


Friday, September 5, 2025

Yaarige Rukkamma Modi Madtiya (ಯಾರಿಗೆ ರುಕ್ಕಮ್ಮ ಮೋಡಿ ಮಾಡ್ತೀಯಾ)

Movie: Cow Boy Kulla (1973)

Singers: SPB, L R Eshwari

Song link: Click Here


Yaarige rukkamma modi madtiya

Il yaarige lakkamma jodi agtiya

Hoi chinna hai ranna

Ee daadiginta bere jodii illa ||


Yaarige kullappa modi madtiya

Il yaarige dollappa jodi agtiya

Pur baba pur baba ninna

Maya mantra illi gittodilla ||

Are lakkamma..rukkamma..!


Andagaati endu sokki jor madtiya,

Ee mantragaara baabanige sawal haktiya,

Hennu kandu aaseyinda kann kann bidtiya

Baa indrajaaladalli indu nanna geltiya, 

Ha bayilli, ho nillilli, nanna edurali

Chumaya maadibiduve nodu onde kshanadali

Pur baba pur baba pur pur baba pur ||


Yaarige manganna modi madtiya

Il yaarige timmana jodi agtiya

Pur baba pur baba ninna maya mantra illi gittodilla,

Manganna..timmanna...!


Jaadugaara endu sokki joru madtiya,

Ee mantragaati munde ninna bala bichtiya,

Gedde endu jambha kocchi aata adtiya,

Henne haddu meeri nadedu nanage kopa tartiya,

Ee kopakke, ha tapakke, bedaruvalalla,

Nee aakashake haaridaru ninna bidolla,

Pur baba pur baba pur pur baba pur||


Yaarige rukkamma modi madtiya,

Il yaarige dollappa jodi agtiya,

Are lakkama rukkamma, kullappa dollappa,

Pur pur baba pur!


ಚಿತ್ರಗೀತೆ 


ಯಾರಿಗೆ ರುಕ್ಕಮ್ಮ ಮೋಡಿ ಮಾಡ್ತೀಯಾ 

ಇಲ್ ಯಾರಿಗೆ ಲಕ್ಕಮ್ಮ ಜೋಡಿ ಆಗ್ತೀಯಾ 

ಹೋಯ್ ಚಿನ್ನ ಹಾಯ್ ರನ್ನ 

ಈ ದಾಡಿಗಿಂತ ಬೇರೆ ಜೋಡಿ ಇಲ್ಲ ।।


ಯಾರಿಗೆ ಕುಳ್ಳಪ್ಪ ಮೋಡಿ ಮಾಡ್ತೀಯಾ 

ಇಲ್ ಯಾರಿಗೆ ಡೊಳ್ಳಪ್ಪ ಜೋಡಿ ಆಗ್ತೀಯಾ 

ಪುರ್ ಬಾಬಾ ಪುರ್ ಬಾಬಾ ನಿನ್ನ 

ಮಾಯಾ ಮಂತ್ರ ಇಲ್ಲಿ ಗಿಟ್ಟೋದಿಲ್ಲ ।।

ಅರೆ ಲಕ್ಕಮ್ಮ.. ರುಕ್ಕಮ್ಮ.. !


ಅಂದಗಾತಿ ಎಂದು ಸೊಕ್ಕಿ ಜೋರ್ ಮಾಡ್ತೀಯಾ, 

ಈ ಮಂತ್ರಗಾರ ಬಾಬನಿಗೆ ಸವಾಲ್ ಹಾಕ್ತಿಯಾ, 

ಹೆಣ್ಣು ಕಂಡು ಆಸೆಯಿಂದ ಕಣ್ ಕಣ್ ಬಿಡ್ತೀಯಾ, 

ಬಾ ಇಂದ್ರ ಜಾಲದಲ್ಲಿ ಇಂದು ನನ್ನ ಗೆಲ್ತಿಯಾ, 

ಹೇ ಬಾಯಿಲ್ಲಿ, ಹೋ ನಿಲ್ಲಲ್ಲಿ, ನನ್ನ ಎದುರಲಿ, 

ಛೂಮಾಮಾ ಮಾಡಿಬಿಡುವೆ ನೋಡು ಒಂದೆ ಕ್ಷಣದಲಿ, 

ಪುರ್ ಬಾಬಾ ಪುರ್ ಬಾಬಾ ಪುರ್ ಪುರ್ ಬಾಬಾ ಪುರ್ ।।


ಯಾರಿಗೆ ಮಂಗಣ್ಣ ಮೋಡಿ ಮಾಡ್ತಿಯಾ,

ಇಲ್ ಯಾರಿಗೆ ತಿಮ್ಮಣ್ಣ ಜೋಡಿ ಆಗ್ತೀಯಾ,

ಪುರ್ ಬಾಬಾ ಪುರ್ ಬಾಬಾ, ನಿನ್ನ ಮಾಯಾ ಮಂತ್ರ ಇಲ್ಲಿ ಗಿಟ್ಟೋದಿಲ್ಲ ,

ಮಂಗಣ್ಣ. . ತಿಮ್ಮಣ್ಣ.. !


ಜಾದುಗಾರ ಎಂದು ಸೊಕ್ಕಿ ಜೋರು ಮಾಡ್ತೀಯಾ, 

ಈ ಮಂತ್ರಗಾತಿ ಮುಂದೆ ನಿನ್ನ ಬಾಲ ಬಿಚ್ತೀಯಾ, 

ಗೆದ್ದೆ ಎಂದು ಜಂಭ ಕೊಚ್ಚಿ ಆಟ ಆಡ್ತೀಯಾ, 

ಹೆಣ್ಣೆ ಹದ್ದು ಮೀರಿ ನಡೆದು ನನಗೆ ಕೋಪ ತರ್ತೀಯಾ, 

ಈ ಕೋಪಕ್ಕೆ, ಈ ತಾಪಕ್ಕೆ, ಬೆದರುವಳಲ್ಲ, 

ನೀ ಆಕಾಶಕೆ ಹಾರಿದರು ನಿನ್ನ ಬಿಡೋಲ್ಲ, 

ಪುರ್ ಬಾಬಾ ಪುರ್ ಬಾಬಾ ಪುರ್ ಪುರ್ ಬಾಬಾ ಪುರ್ ।।


ಯಾರಿಗೆ ರುಕ್ಕಮ್ಮ ಮೋಡಿ ಮಾಡ್ತೀಯಾ,

ಇಲ್ ಯಾರಿಗೆ ಡೊಳ್ಳಪ್ಪ ಜೋಡಿ ಆಗ್ತೀಯಾ,

ಅರೆ ಲಕ್ಕಮ್ಮ ರುಕ್ಕಮ್ಮ, ಕುಳ್ಳಪ್ಪ ಡೊಳ್ಳಪ್ಪ,

ಪುರ್ ಪುರ್ ಬಾಬಾ ಪುರ್ !

                  

Wednesday, September 3, 2025

Eke (ಏಕೆ)

 ಪದ್ಯ 

ರಚನೆ : ಕಯ್ಯಾರ ಕಿ೦ಞ್ಞಣ್ಣ ರೈ 


ಕಾಣದಿಹ ದಾರಿಯಲಿ 

ಮುಂದಿರುವ ಕಷ್ಟಗಳ 

ಇಂದು ನೆನೆಯುತ ನೀನು ಮರುಗಲೇಕೆ ?


ಇಂದು ನಿನ್ನಯ ಗತಿಯು 

ಜೀವನದ ಸಂಸ್ಕೃತಿಯು 

ಬೆಂದೊಡಲ ಬೆಂಕಿಯಲಿ ದಹಿಸಬೇಕೆ ?


ಸರಳತೆಯ ದಾರಿಯಲಿ 

ಚಿಂತೆ ಸಂತೆಯನಿರಿಸಿ 

ನಿತ್ಯದಾನಂದವನು ಕೆಡಿಸಲೇಕೆ ?


ನಾಳೆಯೆಂಬುದು ವಿಕೃತಿ 

ಇಂದು ಬಂದಿದೆ ಪ್ರಕೃತಿ 

ಪ್ರಕೃತಿಯನು ವಿಕೃತಿಯೊಳು ಮುಚ್ಚಲೇಕೆ ?


ನಾಳೆ ಸುಖವಿಲ್ಲೆಂದು 

ಇಂದು ಚಿಂತಿಸಬೇಡ 

ಇಂದಿನೊಳು ನಾಳೆಯನು ಬೆರಸಲೇಕೆ ?    


ಈ ಕ್ಷಣವು ನಗುತಿರಲು 

ಈ ದಿನವು ಸುಖವಿರಲು 

ಬಾಳ್ವೆ ಬೆಳಗುವುದೆಂದು ಮರೆಯಲೇಕೆ ?


Padya


Kaanadiha daariyali

Mundiruva kastagala

Indu neneyuta neenu marugaleke?


Indu ninnaya gatiyu

Jeevanada samskrutiyu

Bendodala benkiyali dahisabeke?


Saralateya daariyali

Chinte santeyanirisi

Nityanandavanu kedisaleke?


Naaleyembudu vikruti

Indu bandide prakruti

Prakrutiyanu vikrutiyolu mucchaleke?


Naale sukhavillendu

Indu chintisabeda

Indinolu naaleyanu beresaleke?


Ee kshanavu nagutiralu

Ee dinavu sukhaviralu

Balve belaguvudendu mareyaleke?

         

Ondenno Onti Hennu (ಒಂದೆನ್ನೊ ಒಂಟಿ ಹೆಣ್ಣು)

Movie: Cow Boy Kulla (1973)

Singer: P Susheela

Song link: Click Here


Ondenno onti hennu balleya neenu,

Eradenno eradu kannu kandihe enu,

Moorenu helenu torenu..haha haha..!


Nalkendre nalvaru iharu nannanu balasi,

Idaneyava ninnane nenasi bandenu bayasi,

Kaanisada andava kaanu tereyanu sarisi,

Mohisuva mojanella nee anubhavisi,

Hoi manasillidu ha kannllidu, andada nadu balukisi nee nodu ||


Ukkina ee tolininda amukadirenna,

Hannante hareyada hennu kelo chinna,

Ha mruduvaagi maiyanu balasu kaanuve kanasu,

Tuti mele tutiyanu irisu aagale sogasu,

Hoi maseyalu bhuja manasige maja, ha embudu nija tiliyalu baa

 raja ||


ಚಿತ್ರಗೀತೆ 


ಒಂದೆನ್ನೊ ಒಂಟಿ ಹೆಣ್ಣು ಬಲ್ಲೆಯ ನೀನು, 

ಎರಡೆನ್ನೊ ಎರಡು ಕಣ್ಣು ಕಂಡಿಹೆ ಏನು, 

ಮೂರೇನು ಹೇಳೆನು ತೋರೆನು ಹಾಹಾ ..ಹಾಹಾ ।।ಪ।।


ನಾಲ್ಕೆಂದರೆ ನಾಲ್ವರು ಇಹರು ನನ್ನನು ಬಳಸಿ, 

ಐದನೆಯವ ನಿನ್ನನೆ ನೆನಸಿ ಬಂದೆನು ಬಯಸಿ, 

ಕಾಣಿಸದ ಅಂದವ ಕಾಣು ತೆರೆಯನು ಸರಿಸಿ, 

ಮೋಹಿಸುವ ಮೋಜನೆಲ್ಲ ನೀ ಅನುಭವಿಸಿ, 

ಹೋಯ್ ಮನಸಿಲ್ಲಿಡು ಹಾ ಕಣ್ಣಿಲ್ಲಿಡು, ಅಂದದ ನಡು ಬಳುಕಿಸಿ ನೀ ನೋಡು ।।೧।।


ಉಕ್ಕಿನ ಈ ತೋಳಿನಿಂದ ಅಮುಕದಿರೆನ್ನ, 

ಹೆಣ್ಣಂತೆ ಹರೆಯದ ಹೆಣ್ಣು ಕೇಳೋ ಚಿನ್ನಾ, 

ಹಾ ಮೃದುವಾಗಿ ಮೈಯ್ಯನು ಬಳಸು ಕಾಣುವೆ ಕನಸು, 

ತುಟಿ ಮೇಲೆ ತುಟಿಯನು ಇರಿಸು ಆಗಲೆ ಸೊಗಸು, 

ಹೋಯ್ ಮಸೆಯಲು ಭುಜ ಮನಸಿಗೆ ಮಜ, ಹಾ ಎಂಬುದು ನಿಜ ತಿಳಿಯಲು ಬಾ ರಾಜ ।।೨।।

             

Maagiya Chaliyali (ಮಾಗಿಯ ಛಳಿಯಲಿ)

Movie: Cow Boy Kulla (1973)

Singer: Vani Jairam

Song link: Click Here


Ahaa..

Maagiya chaliyali koriyuva neerali

Nadugutaliruve baa

Mogginantha ee maiyyi hoovagide, o mava

Koodi ninna hannago manasagide || ba ba ||


Neeli baninali telo modadali

Inuinuki nanna mai honna banna raviyu noduta

Tanna hombisilu mele chellidaru

Bisi eradaagi tanuveko baagi ninne neneyuta

Iniya bandu tanuva balasi santaisendide ||ba ba ||


Jodi hakkigalu koodi nalidiralu

Hosadondu bayake bandenna kenake ninna kugide

Haadi kuniyona odi naliyona

Embaase moodi nannanu kaade ede jhal endide

Kaadu kaadu nondu nondu manasu sotide || ba ba ||


ಚಿತ್ರಗೀತೆ 


ಆಹಾ.... 

ಮಾಗಿಯ ಛಳಿಯಲಿ ಕೊರಿಯುವ ನೀರಲಿ, ನಡುಗುತಲಿರುವೆ ಬಾ 

ಮೊಗ್ಗಿನಂಥ ಈ ಮೈಯ್ಯಿ ಹೂವಾಗಿದೆ, ಓ ಮಾವಾ 

ಕೂಡಿ ನಿನ್ನ ಹಣ್ಣಾಗೂ ಮನಸಾಗಿದೆ ।।ಪ।।

ಬಾ ಬಾ .. 


ನೀಲಿ ಬಾನಿನಲಿ ತೇಲೋ ಮೋಡದಲಿ 

ಇಣುಕಿಣುಕಿ ನನ್ನ ಮೈ ಹೊನ್ನ ಬಣ್ಣ ರವಿಯೂ ನೋಡುತಾ 

ತನ್ನಾ ಹೊಂಬಿಸಿಲು ಮೇಲೆ ಚೆಲ್ಲಿದರು 

ಬಿಸಿ ಏರದಾಗಿ ತನುವೇಕೋ ಬಾಗಿ ನಿನ್ನೆ ನೆನೆಯುತಾ 

ಇನಿಯಾ ಬಂದು ತನುವಾ ಬಳಸಿ ಸಂತೈಸೆಂದಿದೆ ।।೧।। 

ಬಾ ಬಾ .. 


ಜೋಡಿ ಹಕ್ಕಿಗಳು ಕೂಡಿ ನಲಿದಿರಲು 

ಹೊಸದೊಂದು ಬಯಕೆ ಬಂದೆನ್ನ ಕೆಣಕೆ ನಿನ್ನಾ ಕೂಗಿದೆ 

ಹಾಡಿ ಕುಣಿಯೋಣ ಓಡಿ ನಲಿಯೋಣ 

ಎಂಬಾಸೆ ಮೂಡಿ ನನ್ನನು ಕಾಡೆ ಎದೆ ಝಲ್ ಎಂದಿದೆ 

ಕಾದು ಕಾದು ನೊಂದು ನೊಂದು ಮನಸು ಸೋತಿದೆ ।।೨।।

ಬಾ ಬಾ .. 

                                 

Modalu Manavanaagu (ಮೊದಲು ಮಾನವನಾಗು)

ಪದ್ಯ 

ರಚನೆ : ಸಿದ್ದಯ್ಯ ಪುರಾಣಿಕ 


ಓದಿ ಬೋಧಕನಾಗು  

ಕಾದಿ ಯೋಧನೆ ಆಗು 

ಶ್ರಮಿಕ ವಣಿಕನೆ ಆಗು 

ದುಡಿದು ಗಳಿಸಿ,

ಏನಾದರೂ ಆಗು 

ನಿನ್ನೊಲವಿನಂತಾಗು 

ಏನಾದರೂ ಸರಿಯೆ 

ಮೊದಲು ಮಾನವನಾಗು !


ಹಿಂದು ಮುಸ್ಲಿಮನಾಗು 

ಬೌದ್ಧ ಕ್ರೈಸ್ತನೆ ಆಗು 

ಚಾರ್ವಾಕನೇ ಆಗು 

ಭೋಗ ಬಯಸಿ,

ಏನಾದರೂ ಆಗು 

ಹಾರೈಸಿದಂತಾಗು 

ಏನಾದರೂ ಸರಿಯೆ 

ಮೊದಲು ಮಾನವನಾಗು !


ರಾಜಕಾರಣಿಯಾಗು

 ರಾಷ್ಟ್ರಭಕ್ತನೆ ಆಗು 

ಕಲೆಗಾರ ವಿಜ್ಞಾನಿ 

ವ್ಯಾಪಾರಿಯೇ ಆಗು 

ಏನಾದರೂ ಆಗು 

ನೀ ಬಯಸಿದಂತಾಗು 

ಏನಾದರೂ ಸರಿಯೆ 

ಮೊದಲು ಮಾನವನಾಗು !


Padya


Odi bodhakanaagu

Kaadi yodhane aagu

Shramika vanikane aagu

Dudidu galisi,

enaadaru aagu

Ninnolavinantaagu

Enaadaru sariye

Modalu manavanaagu!


Hindu muslimanaagu

Boudha kraistane aagu

Charvaakane aagu

Bhoga bayasi,

Enaadaru aagu

Haraisidantaagu

Enaadaru sariye

Modalu manavanaagu!


Rajakaraniyaagu

Rastrabhaktane aagu

Kalegaara vijnani

Vyapariye aagu

Enaadaru aagu

Nee bayasidantaagu

Enaadaru sariye

Modalu manavanaagu!