Movie: Accident (2008)
Singer: Sonu Nigam
song link: Click Here
Baa maleye baa, baa maleye baa
Astu birusagi baaradiru, nanna nalle baralagadante
Avalilli bandodane, bidade birusagi suri
Hintirugi hogadante, hintirugi hogadante
Bidade birusagi suri..
Baa maleye baa, baa maleye baa ||
Odu kalave odu, bega kaviyali irulu (2)
Kaadihalu abhisaarike, avalilli bandodane
Nillu kalave nillu, namma tekke sadilagadante
Baa maleye baa..
Astu birusagi baaradiru, nanna nalle baralaradante ||
Beesu galiye beesu, nannedeya aasegala (2)
Nalle hrudayakke talupisu, haasu hoogala haasu
Avalu baha daariyalli, kallugalu tagadante
Baa maleye baa..
Astu birusagi baaradiru, nanna nalle baralaradante ||
Beeru deepave beeru, ninna hombelakalli (2)
Noduvenu nalle roopa, aaru begane aaru
Shringara chayeyalli, nachi neeragadante
Baa maleye baa, bidade birusagi suri
Nalle hintirugi hogadante ||
ಚಿತ್ರಗೀತೆ
ಬಾ ಮಳೆಯೇ ಬಾ, ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು, ನನ್ನ ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ, ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ, ಹಿಂತಿರುಗಿ ಹೋಗದಂತೆ
ಬಿಡದೆ ಬಿರುಸಾಗಿ ಸುರಿ..
ಬಾ ಮಳೆಯೇ ಬಾ, ಬಾ ಮಳೆಯೇ ಬಾ ।।ಪ।।
ಓಡು ಕಾಲವೇ ಓಡು, ಬೇಗ ಕವಿಯಲಿ ಇರುಳು (೨)
ಕಾದಿಹಳು ಅಭಿಸಾರಿಕೆ, ಅವಳಿಲ್ಲಿ ಬಂದೊಡನೆ
ನಿಲ್ಲು ಕಾಲವೇ ನಿಲ್ಲು, ನಮ್ಮ ತೆಕ್ಕೆ ಸಡಿಲಾಗದಂತೆ
ಬಾ ಮಳೆಯೇ ಬಾ..
ಅಷ್ಟು ಬಿರುಸಾಗಿ ಬಾರದಿರು, ನನ್ನ ನಲ್ಲೆ ಬರಲಾಗದಂತೆ ।।೧।।
ಬೀಸು ಗಾಳಿಯೇ ಬೀಸು, ನನ್ನೆದೆಯ ಆಸೆಗಳ (೨)
ನಲ್ಲೆ ಹೃದಯಕ್ಕೆ ತಲುಪಿಸು, ಹಾಸು ಹೂಗಳ ಹಾಸು
ಅವಳು ಬಹ ದಾರಿಯಲ್ಲಿ, ಕಲ್ಲುಗಳು ತಾಗದಂತೆ
ಬಾ ಮಳೆಯೇ ಬಾ..
ಅಷ್ಟು ಬಿರುಸಾಗಿ ಬಾರದಿರು, ನನ್ನ ನಲ್ಲೆ ಬರಲಾಗದಂತೆ ।।೨।।
ಬೀರೂ ದೀಪವೇ ಬೀರೂ, ನಿನ್ನ ಹೊಂಬೆಳಕಲ್ಲಿ (೨)
ನೋಡುವೆನು ನಲ್ಲೆ ರೂಪ, ಆರು ಬೇಗನೆ ಆರು
ಶೃಂಗಾರ ಛಾಯೆಯಲ್ಲಿ, ನಾಚಿ ನೀರಾಗದಂತೆ
ಬಾ ಮಳೆಯೇ ಬಾ, ಬಿಡದೆ ಬಿರುಸಾಗಿ ಸುರಿ
ನಲ್ಲೆ ಹಿಂತಿರುಗಿ ಹೋಗದಂತೆ ।।೩।।



