Showing posts with label Kanaka dasara Padagalu. Show all posts
Showing posts with label Kanaka dasara Padagalu. Show all posts

Thursday, March 28, 2024

Daana Dharmava Maadi (ದಾನ ಧರ್ಮವ ಮಾಡಿ)

Bhaktigeete

Rachane: Kanaka Dasaru

Song link: Click Here


Daana dharmava maadi sukhiyaagu manave

Heenavruttiyali nee kedabeda manave ||


Ekkanaati ellamma maari durgi choudi

Akkarindali puje maadaleke

Kikkiridu yamana dutareledoivaga

Shaktiyaru bidisikondaareno marule ||


Sambhramadallondu hottu nemadalliddu

Tambittina deepa horaletake

Kombu hotu kuri konanaa baligomba

Dombi daivagala bhajisadiru manave ||


Chigurele bevinasoppu naara seere

Bagebageyinda shringaaramaadi

Negenegedu aadalu kuniyalu ninaginnu

Migilaada mukutiyunte hucchu manave ||


Daana dharma paropakaarava maadu

Deenanaagi nee kedabedavo

Jnanavillade heena daivava bhajisalu

Enuntu ninaginnu ele hucchumanave ||


Naralokadi yamana badheyu kaleyala

Vara punya kathegala kelutali

Siriyaadikeshavaraayana nere nambi

Stiravaada padaviya pade hucchu manave ||


ಭಕ್ತಿಗೀತೆ 


ದಾನ ಧರ್ಮವ ಮಾಡಿ ಸುಖಿಯಾಗು ಮನವೆ 

ಹೀನವೃತ್ತಿಯಲಿ ನೀ ಕೆಡಬೇಡ ಮನವೆ ।।ಪ।।


ಎಕ್ಕನಾತಿ ಎಲ್ಲಮ್ಮ ಮಾರಿ ದುರ್ಗಿ ಚೌಡಿ 

ಅಕ್ಕರಿಂದಲಿ ಪೂಜೆ ಮಾಡಲೇಕೆ 

ಕಿಕ್ಕಿರಿದು ಯಮನ ದೂತರೆಳೆದೊಯ್ವಾಗ 

ಶಕ್ತಿಯರು ಬಿಡಿಸಿಕೊಂಡಾರೇನೊ ಮರುಳೆ ।।೧।।


ಸಂಭ್ರಮದಲ್ಲೊಂದು ಹೊತ್ತು ನೇಮದಲ್ಲಿದ್ದು 

ತಂಬಿಟ್ಟಿನಾ ದೀಪ ಹೊರಲೇತಕೆ 

ಕೊಂಬು ಹೋತು ಕುರಿ ಕೋಣನಾ ಬಲಿಗೊಂಬ 

ದೊಂಬಿ ದೈವಗಳ ಭಜಿಸದಿರು ಮನವೇ ।।೨।।


ಚಿಗುರೆಲೆ ಬೇವಿನಸೊಪ್ಪು ನಾರ ಸೀರೆ 

ಬಗೆಬಗೆಯಿಂದ ಶೃಂಗಾರಮಾಡಿ 

ನೆಗೆನೆಗೆದು ಆಡಲು ಕುಣಿಯಲು ನಿನಗಿನ್ನು 

ಮಿಗಿಲಾದ ಮುಕುತಿಯುಂಟೆ ಹುಚ್ಚು ಮನವೆ ।।೩।।


ದಾನ ಧರ್ಮ ಪರೋಪಕಾರವ ಮಾಡು 

ದೀನನಾಗಿ ನೀ ಕೆಡಬೇಡವೊ 

ಜ್ಞಾನವಿಲ್ಲದೆ ಹೀನ ದೈವವ ಭಜಿಸಲು 

ಏನುಂಟು ನಿನಗಿನ್ನು ಎಲೆ ಹುಚ್ಚು ಮನವೆ ।।೪।।


ನರಲೋಕದಿ ಯಮನ ಬಾಧೆಯು ಕಳೆಯಲ 

ವರ ಪುಣ್ಯ ಕಥೆಗಳ ಕೇಳುತಲಿ 

ಸಿರಿಯಾದಿಕೇಶವರಾಯನ ನೆರೆ ನಂಬಿ 

ಸ್ಥಿರವಾದ ಪದವಿಯ ಪಡೆ ಹುಚ್ಚು ಮನವೆ ।।೫।।

                 


Kula Kula Kulavennutiharu (ಕುಲ ಕುಲ ಕುಲವೆನ್ನುತಿಹರು)

Bhaktigeete

Rachane: Kanaka Dasaru

Song link: Click Here


Kula kula kulavennutiharu

Kula yavudu satya sukhavulla janarige ||


Kesarolu tavare puttalu ada tandu

Bisajanaabhanigarpisalillave

Hasuvina mamsadol utpatti ksheeravu

Vasudheyolage bhusurarunnallillave |


Mrugagala maiyalli puttalu kasturi

Tegedu pusuvaru dwijarellaru

Ogeyinda narayananaava kulavaiyya

Jagavallabhanaava kula pelirayya ||


Atma yava kula jeeva yava kula

Tatvendriyagala kula pelirayya

Aata mahatmanu neleyaadikeshava

Yatara kulavaiyya aatanolida mele ||


ಭಕ್ತಿಗೀತೆ 


ಕುಲ ಕುಲ ಕುಲವೆನ್ನುತಿಹರು 

ಕುಲ ಯಾವುದು ಸತ್ಯ ಸುಖವುಳ್ಳ ಜನರಿಗೆ ।।ಪ।।


ಕೆಸರೊಳು ತಾವರೆ ಪುಟ್ಟಲು ಅದ ತಂದು 

ಬಿಸಜನಾಭನಿಗರ್ಪಿಸಲಿಲ್ಲವೆ  

ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವು 

ವಸುಧೆಯೊಳಗೆ ಭೂಸುರರುಣ್ಣಲಿಲ್ಲವೆ ।।೧।।


ಮೃಗಗಳ ಮೈಯಲಿ ಪುಟ್ಟಲು ಕಸ್ತೂರಿ 

ತೆಗೆದು ಪೂಸುವರು ದ್ವಿಜರೆಲ್ಲರು 

ಒಗೆಯಿಂದ ನಾರಾಯಣನಾವ ಕುಲವಯ್ಯ 

ಜಗವಲ್ಲಭನಾವ ಕುಲ ಪೇಳಿರಯ್ಯ ।।೨।।


ಆತ್ಮ ಯಾವ ಕುಲ ಜೀವ ಯಾವ ಕುಲ 

ತತ್ವೇ೦ದ್ರಿಯಗಳ ಕುಲ ಪೇಳಿರಯ್ಯ 

ಆತ ಮಹಾತ್ಮನು ನೆಲೆಯಾದಿಕೇಶವ 

ಯಾತರ ಕುಲವಯ್ಯ ಆತನೊಲಿದ ಮೇಲೆ ।।೩।।

             


Monday, July 24, 2023

Nee Mayeyolago Ninnolu Mayeyo (ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ)

Bhaktigeete

Rachane: Kanaka Dasarau 

Songlink: Click Here


Nee mayeyolago ninnolu mayeyo

Nee dehadolago ninnolu dehavo ||


Bayalu aalayadolago aalayavu bayalolago

Bayalu aalayaveradu nayanadolago

Nayana buddiyolago buddi nayanadolago

Nayana buddigaleradu ninnolago hariye ||


Saviyu sakkareyolago sakkareyu saviyolago

Saviyu sakkareyeradu jihveyolago

Jihve manasinolago manasu jihveyolago

Jihve manasugaleradu ninnolago hariye ||


Kusumadolu gandhavo gandhadolu kusumavo

Kusuma gandhagaleradu ghranadolago

Asamabhava kaagineleyadi keshavaraya

Usuralennalavalla ella ninnolago hariye ||


ಭಕ್ತಿಗೀತೆ 


ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ 

ನೀ ದೇಹದೊಳಗೊ ನಿನ್ನೊಳು ದೇಹವೊ ।।ಪ।।


ಬಯಲು ಆಲಯದೊಳಗೊ ಆಲಯವು ಬಯಲೊಳಗೂ 

ಬಯಲು ಆಲಯವೆರಡು ನಯನದೊಳಗೊ 

ನಯನ ಬುದ್ದಿಯೊಳಗೊ ಬುದ್ದಿ ನಯನದೊಳಗೊ 

ನಯನ ಬುದ್ದಿಗಳೆರಡು ನಿನ್ನೊಳಗೊ ಹರಿಯೆ ।।೧।।


ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ 

ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ 

ಜಿಹ್ವೆ ಮನಸಿನೊಳಗೊ ಮನಸು ಜಿಹ್ವೆಯೊಳಗೊ 

ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ ।।೨।।


ಕುಸುಮದೊಳು ಗಂಧವೋ ಗಂಧದೊಳು ಕುಸುಮವೋ 

ಕುಸುಮ ಗಂಧಗಳೆರಡು ಘ್ರಾಣದೊಳಗೊ 

ಅಸಮಭವ ಕಾಗಿನೆಲೆಯಾದಿ  ಕೇಶವರಾಯ 

ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ಹರಿಯೆ ।।೩।।



 

Thursday, April 20, 2023

Dasanagu Visheshanagu (ದಾಸನಾಗು ವಿಶೇಷನಾಗು)

Bhaktigeete

Kanaka Dasara Padagalu

Song link: Click Here


 Esu kayangala kaledu embatnalku laksha

Jeeva rashiyannu dati banda ee shareera (2)

Taanalla tannadalla (2) aase taravalla munde bahodalla

Dasanagu visheshanagu (4) ||


Ashaklesha doshavemba abdiyolu mulugi

Yamana pashakkolagagade nirdoshiyago santoshiyago (2)

Kashi varanasi kanchi kalahasti rameshwara

Esu desha tirugidare bahodeno alli hodeno

Dosh nasha krishnaveni gange godavari

Bhava nashi tungabhadre yamune vasadalli upavasadalli

Meesalagi nindu japatapa homa nemagala

Esu bari madidaru phalavenu ee chalavenu

Dasanagu visheshanagu (4) ||


Andigo indigo omme seri kamaleshanannu

Ondu bari yaro hinda neneyalilla mana daniyalilla (2)

Bandu bandu bhramegondu mayamohakke sikki

Nondu bendu ondarinda uliyalilla bandha kaleyalilla

Sandehava madadiru arivu emba deepavittu

Indu kandya dehadalli pindanda hage brahamaanda

Indu hariya dhyanavannu madi ee vivekadi

Mukundaninda mukti bedu kandya nee nodu kandya

Dasanagu visheshanagu (4) ||


Nooru bari sharanu madi neera mulugalyake

Paranariyara notake guriya madidi mana sereya madidi (2)

Sureyolu sure tumbi mele  hoovina haara

Geeru gandha akshateya dharisidante nee maresidante

Garudiya mata bittu nadabrahmmana pididu

Sarisoori muktiyannu shamanadinda matte sumanadinda

Narayana acchuta anantadi keshavana ...aa...aa

Narayana acchuta anantadi keshavana

Saramrutavanundu sukhiso landa jeevave

Elo bhanda jeevave

Dasanagu visheshanagu (2)

Dsanagu visheshanagu dasanagu bhava pasha neegu (4) ||


ಭಕ್ತಿಗೀತೆ 


ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ 

ಜೀವ ರಾಶಿಯನ್ನು ದಾಟಿ ಬಂದ ಈ ಶರೀರ (೨)

ತಾನಲ್ಲ ತನ್ನದಲ್ಲ (೨) ಆಸೆ ತರವಲ್ಲ ಮುಂದೆ ಬಹೊದಲ್ಲ 

ದಾಸನಾಗು ವಿಶೇಷನಾಗು (೪) ।।ಪ।।


ಆಶಾಕ್ಲೇಷ ದೋಷವೆಂಬ ಅಬ್ದಿಯೊಳು ಮುಳುಗಿ 

ಯಮನ ಪಾಶಕ್ಕೊಳಗಾಗದೆ ನಿರ್ದೋಷಿಯಾಗೊ ಸಂತೋಷಿಯಾಗೊ (೨)

ಕಾಶಿ ವಾರಣಾಸಿ  ಕಂಚಿ ಕಾಳಹಸ್ತಿ ರಾಮೇಶ್ವರ 

ಏಸು ದೇಶ ತಿರುಗಿದರೆ ಬಹೊದೇನೊ ಅಲ್ಲಿ ಹೋದೇನೊ 

ದೋಷನಾಶ ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ 

ಮೀಸಲಾಗಿ ನಿಂದು ಜಪತಪ ಹೋಮ ನೇಮಗಳ 

ಏಸು ಬಾರಿ ಮಾಡಿದರು ಫಲವೇನು ಈ ಛಲವೇನು 

ದಾಸನಾಗು ವಿಶೇಷನಾಗು (೪) ।।೧।।


ಅಂದಿಗೋ ಇಂದಿಗೋ ಒಮ್ಮೆ ಸೇರಿ ಕಮಲೇಶನನ್ನು 

ಒಂದು ಬಾರಿ ಯಾರೂ ಹಿಂದ ನೆನೆಯಲಿಲ್ಲ ಮನ ದಣಿಯಲಿಲ್ಲ (೨)

ಬಂದು ಬಂದು ಭ್ರಮೆಗೊಂಡು ಮಾಯಾಮೋಹಕ್ಕೆ ಸಿಕ್ಕಿ 

ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ಬಂಧ ಕಳೆಯಲಿಲ್ಲ 

ಸಂದೇಹವ ಮಾಡದಿರು ಅರಿವು ಎಂಬ ದೀಪವಿಟ್ಟು 

ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಹಾಗೆ ಬ್ರಹ್ಮಾಂಡ 

ಇಂದು ಹರಿಯ ಧ್ಯಾನವನ್ನು ಮಾಡಿ ಈ ವಿವೇಕದಿ 

ಮುಕುಂದನಿಂದ ಮುಕ್ತಿ ಬೇಡು ಕಂಡ್ಯ ನೀ ನೋಡು ಕಂಡ್ಯ 

ದಾಸನಾಗು ವಿಶೇಷನಾಗು (೪) ।।೨।।


ನೂರು ಬಾರಿ ಶರಣು ಮಾಡಿ ನೀರ ಮುಳುಗಲ್ಲ್ಯಾಕೆ 

ಪರನಾರಿಯರ ನೋಟಕೆ ಗುರಿಯ ಮಾಡಿದಿ ಮನ ಸೆರೆಯ ಮಾಡಿದಿ (೨)

ಸೂರೆಯೊಳು ಸುರೆ ತುಂಬಿ ಮೇಲೆ ಹೂವಿನ ಹಾರ 

ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮರೆಸಿದಂತೆ 

ಗಾರುಡಿಯ ಮತ ಬಿಟ್ಟು ನಾದಬ್ರಹ್ಮನ ಪಿಡಿದು 

ಸಾರಿಸೂರಿ  ಮುಕ್ತಿಯನ್ನು ಶಮನದಿಂದ ಮತ್ತೆ ಸುಮನದಿಂದ

ನಾರಾಯಣ ಅಚ್ಚುತ ಅನಂತಾದಿ ಕೇಶವನಾ .. ಆ .. ಆ 

 ನಾರಾಯಣ ಅಚ್ಚುತ ಅನಂತಾದಿ ಕೇಶವನ

ಸಾರಾಮೃತವನುಂಡು  ಸುಖಿಸೊ ಲಂಡ ಜೀವವೆ 

ಎಲೋ ಭಂಡ ಜೀವವೇ 

ದಾಸನಾಗು ವಿಶೇಷನಾಗು (೨)

ದಾಸನಾಗು ವಿಶೇಷನಾಗು ದಾಸನಾಗು ಭವ ಪಾಶ ನೀಗು (೪) 

।।೩।।





Saturday, January 28, 2023

Tallanisadiru Kandya Taalu Manave (ತಲ್ಲಣಿಸದಿರು ಕಂಡ್ಯ ತಾಳು ಮನವೆ)

Bhaktigeete

Kanaka Dasara Padagalu

Song link: Click Here


Tallanisadiru kandya taalu manave

Ellaranu salahuvanu idake samshayavilla ||


Bettada tudiyalli huttida vrukshakke

Katteyanu katti neereredavaru yaro

Huttisida swami ta honegaranagiralu

Ghattyagi salahuvanu idake samshaya beda ||


Adaviyolagaduva mruga pakshigaligella

Adigadige aaharavittavaru yaro

Hadeda jananiya terade swami honegeedagi

Bidade rakshipanidake sandeha beda ||


Kallolage hutti kooguva kappegaligella

Allalligahaaravittavaru yaro

Ballidanu kagineleyadi keshavaraya

Ellaranu salahuvanu idake samshayavilla ||


ಭಕ್ತಿಗೀತೆ 


ತಲ್ಲಣಿಸದಿರು ಕಂಡ್ಯ ತಾಳು ಮನವೆ 

ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ।।ಪ ।।


ಬೆಟ್ಟದಾ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ 

ಕಟ್ಟೆಯನು ಕಟ್ಟಿ ನೀರೆರೆದವರು ಯಾರೊ 

ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು 

ಘಟ್ಟ್ಯಾಗಿ ಸಲಹುವನು ಇದಕೆ ಸಂಶಯ ಬೇಡ ।।೧।।


ಅಡವಿಯೊಳಾಡುವ ಮೃಗ ಪಕ್ಷಿಗಳಿಗೆಲ್ಲ 

ಅಡಿಗಡಿಗೆ ಆಹಾರವಿತ್ತವರು ಯಾರೊ 

ಹಡೆದ ಜನನಿಯ ತೆರದೆ  ಸ್ವಾಮಿ ಹೊಣೆಗೀಡಾಗಿ 

ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ ।।೨।।

 

ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲ 

ಅಲ್ಲಲ್ಲಿಗಾಹಾರವಿತ್ತವರು ಯಾರೊ 

ಬಲ್ಲಿದನು ಕಾಗಿನೆಲೆಯಾದಿಕೇಶವರಾಯ 

ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ।।೩।।



Wednesday, November 9, 2022

Kula Kula Kulavendu (ಕುಲ ಕುಲ ಕುಲವೆಂದು)

Bhaktigeete

Kanaka Dasara Padagalu

Songlink: https:Click Here


Kula kula kulavendu hodedadadiri

Nimma kulada neleyanenadaru

Ballira ballira ||


Huttada yonigalilla, mettada bhumigalilla

Attu unnada vastugalilla

Guttu kanisa bantu, hiridenu kiridenu

Nettane sarvajnana nene kandya manuja ||


Jalave sakala kulakke tayallave

Jalada kulavanenadaru ballira

Jalada bobbuliyante, stiravalla ee deha

Neleya aritu ne, nenekandya manuja ||


Hariye sarvottama, hariye sarveshwara

Harimayavella venuta tilidu

Siri kagineleyadi keshavarayana

Charana kamalava keerthisuvane kulaja ||


ಭಕ್ತಿಗೀತೆ 


ಕುಲ ಕುಲ ಕುಲವೆಂದು ಹೊಡೆದಾಡದಿರಿ 

ನಿಮ್ಮ ಕುಲದ ನೆಲೆಯನೇನಾದರೂ 

ಬಲ್ಲಿರಾ ಬಲ್ಲಿರಾ ।।ಪ ।।


ಹುಟ್ಟದ ಯೋನಿಗಳಿಲ್ಲ, ಮೆಟ್ಟದ ಭೂಮಿಗಳಿಲ್ಲ 

ಅಟ್ಟು ಉಣ್ಣದ ವಸ್ತುಗಳಿಲ್ಲ 

ಗುಟ್ಟು ಕಾಣಿಸ ಬಂತು, ಹಿರಿದೇನು ಕಿರಿದೇನು 

ನೆಟ್ಟನೆ ಸರ್ವಜ್ಞನ ನೆನೆ ಕಂಡ್ಯ ಮನುಜ ।।೧।।


ಜಲವೇ ಸಕಲ ಕುಲಕ್ಕೆ ತಾಯಲ್ಲವೇ 

ಜಲದ ಕುಲವನೇನಾದರೂ ಬಲ್ಲಿರಾ 

ಜಲದ ಬೊಬ್ಬುಳಿಯಂತೆ, ಸ್ಥಿರವಲ್ಲ ಈ ದೇಹ 

ನೆಲೆಯ ಅರಿತು ನೀ, ನೆನೆಕಂಡ್ಯಾ ಮನುಜ ।।೨।।


ಹರಿಯೇ ಸರ್ವೋತ್ತಮ , ಹರಿಯೇ ಸರ್ವೇಶ್ವರ 

ಹರಿಮಯವೆಲ್ಲವೆನುತ ತಿಳಿದೂ 

ಸಿರಿ ಕಾಗಿನೆಲೆಯಾದಿ ಕೇಶವರಾಯನಾ 

ಚರಣ ಕಮಲವ ಕೀರ್ತಿಸುವನೇ ಕುಲಜಾ ।।೩।।




Friday, September 2, 2022

Bagilanu Teredu Seveyanu Kodu Hariye (ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ )

Bhaktigeete

Kanaka Dasara Padagalu

Song link: Click Here


Bagilanu teredu seveyanu kodu hariye

Koogidaru dwani kelalillave narahariye ||


Parama padadolage vishadharana kalpadali nee

Siri sahita ksheera varidhiyoliralu

Kariraja kastadali aadi moola endu

Kareyalakshana bandu odagideyo narahariye ||1||


Khadu kopadim khalanu khadgavane pididu

Nin odeyanelliha nendu nudiye

Druda bhakutiyali shishuvu bidade ninnanu bhajise

Sadagaradi kambadindodede narahariye ||2||


Yama sutana ranige akshaya vachanavanitte

Samayadali ajamilana porede

Samaya samayavunte bhakta vatsala ninage

Kamalaksha kagi neleyadi keshavane ||3||


ಭಕ್ತಿಗೀತೆ 


ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ 

ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ  ।।ಪ ।।


ಪರಮ ಪದದೊಳಗೆ ವಿಷಧರನ ಕಲ್ಪದಲಿ ನೀ 

ಸಿರಿ ಸಹಿತ ಕ್ಷೀರವಾರಿಧಿಯೊಳಿರಲು 

ಕರಿರಾಜ ಕಷ್ಟದಲಿ ಆದಿ ಮೂಲ ಎಂದು 

ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ ।।೧।।


ಖಡು ಕೋಪದಿಂ ಖಳನು ಖಡ್ಗವನೆ ಪಿಡಿದು 

ನಿನ್ನೊಡೆಯನ್ನೆಲ್ಲಿಹನೆಂದು ನುಡಿಯೆ 

ದೃಢ ಭಕುತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ 

ಸಡಗರದಿ ಕಂಬದಿಂದೊಡೆದೆ ನರಹರಿಯೇ ।।೨।।


ಯಮ ಸುತನ ರಾಣಿಗೆ ಅಕ್ಷಯ ವಚನವನಿತ್ತೆ 

ಸಮಯದಲಿ ಅಜಮಿಳನ ಪೊರೆದೆ 

ಸಮಯಾ ಸಮಯವುಂಟೆ ಭಕ್ತ ವತ್ಸಲ ನಿನಗೆ 

ಕಮಲಾಕ್ಷ ಕಾಗಿನೆಲೆಯಾದಿ ಕೇಶವನೆ ।।೩।।




Saturday, June 25, 2022

Namamma Sharade (ನಮ್ಮಮ್ಮ ಶಾರದೆ)

Bhaktigeete

Kanakadasara Padagalu

Song link: https:Click Here


Namamma sharade

Uma maheshwari

Nimmolagihanyaramma

Kammagolana vairi sutanada sondila

Hemmeya gananathane  ammayya


Mo re kappina bhava moradagalada kivi

Kore dadiganyaramma

Muru kannana suta muridditta chandrana

Deera ta gananathane  ammayya


Utta dattiyu bigidutta challanada

Ditta tanivanyaramma

Pattada rani parvathiya kumarane

Hotteya gananathane   ammayya


Rashi vidyeya balla ramani hambalanolla

Bashiga nivanyaramma

Lesagi janara salahuva kagi neleyadi

Keshava dasa kane   ammayya


ಭಕ್ತಿಗೀತೆ 


ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ 

ನಿಮ್ಮೊಳಗಿಹನ್ಯಾರಮ್ಮ 

ಕಮ್ಮಗೋಲನ ವೈರಿ ಸುತನಾದ ಸೊಂಡಿಲ 

ಹೆಮ್ಮೆಯ ಗಣನಾಥನೆೇ, ಅಮ್ಮಯ್ಯ ।।ಪ ।।


ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ 

ಕೋರೆ ಡಾಡಿಗನ್ಯಾರಮ್ಮ 

ಮೂರು ಕಣ್ಣನ  ಸುತ ಮುರಿದಿಟ್ಟ ಚಂದ್ರನ 

ಧೀರ ತಾ ಗಣನಾಥನೇ, ಅಮ್ಮಯ್ಯ ।।೧।।


ಉಟ್ಟ ದಟ್ಟಿಯು  ಬಿಗಿದುಟ್ಟ ಚಲ್ಲಣದ 

ದಿಟ್ಟ ತಾನಿವನ್ಯಾರಮ್ಮ 

ಪಟ್ಟದ ರಾಣಿ ಪಾರ್ವತಿಯಾ ಕುಮಾರನೆ 

ಹೊಟ್ಟೆಯ ಗಣನಾಥನೇ, ಅಮ್ಮಯ್ಯ।।೨।। 


ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ 

ಭಾಷಿಗ ನಿವನ್ಯಾರಮ್ಮ 

ಲೇಸಾಗಿ ಜನರ ಸಲುಹುವ ಕಾಗಿ ನೆಲೆಯಾದಿ 

ಕೇಶವ ದಾಸ ಕಣೀ,  ಅಮ್ಮಯ್ಯ ।।೪।।