Bhavageete
Sahitya: M N Vyasarao
Song link: Click Here
Neenillade nanagenide
Manasella ninalle neleyagide
Kanasella kannalle sereyagide ||
Ninagagi kaadu kaadu
Paritapisi nonde nanu
Kahiyada virahada novu
Hagalirulu tande neenu
Edeyase eno endu
Nee kanadade
Nisheyonde nannalli nee tumbide
Belakonde ninninda na bayaside ||
Olavemba kirana beeri
Olagiruva manna teresi
Onagiruva edeneladalli
Baravaseya jeeva harisi
Sereyinda bidisi nanna, aatanka neegu
Hosa jeeva ninninda na taaluve
Hosa loka ninninda na kaanuve ||
ಭಾವಗೀತೆ
ನೀನಿಲ್ಲದೇ ನನಗೇನಿದೆ
ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ
ನಿನಗಾಗಿ ಕಾದು ಕಾದು
ಪರಿತಪಿಸಿ ನೊಂದೆ ನಾನು
ಕಹಿಯಾದ ವಿರಹದ ನೋವು
ಹಗಲಿರುಳು ತಂದೆ ನೀನು
ಎದೆಯಾಸೆ ಏನೋ ಎಂದು ನೀ ಕಾಣದಾದೆ
ನಿಶೆಯೊಂದೆ ನನ್ನಲ್ಲಿ ನೀ ತುಂಬಿದೆ
ಬೆಳಕೊಂದೆ ನಿನ್ನಿಂದ ನಾ ಬಯಸಿದೆ ।।೧।।
ಒಲವೆಂಬ ಕಿರಣಾ ಬೀರಿ
ಒಳಗಿರುವ ಮಣ್ಣಾ ತೆರೆಸಿ
ಒಣಗಿರುವ ಎದೆನೆಲದಲ್ಲಿ
ಭರವಸೆಯ ಜೀವ ಹರಿಸಿ
ಸೆರೆಯಿಂದ ಬಿಡಿಸಿ ನನ್ನ , ಆತಂಕ ನೀಗು
ಹೊಸ ಜೀವ ನಿನ್ನಿಂದ , ನಾ ತಾಳುವೆ
ಹೊಸ ಲೋಕ ನಿನ್ನಿಂದ , ನಾ ಕಾಣುವೇ ।।೨।।

No comments:
Post a Comment