Movie: Arunaraaga (1986)
Singer: SPB
Song link: Click Here
Nadedado kamana bille, haridado mugilina minche
Talukaado banina cheluve, bhuvigilida hunnime honale
Neenendigu nana baalige aanandana,
Arunaraaga, arunaraaga, arunaraaga ||
Meenina nayana, havalada tutiya, padediha rupasi
Sampige moogu, kabbina hubbu, hondida shodasi..aa
Ninna nodi preeti moodi aase chimmi hmmide
Neenendigu nana baalige aanandana,
Arunaraaga, arunaraaga, arunaraaga ||
Dantada maiya, mallige nageya, andada urvashi
Meghada kurula, kogile kanta, galisida preyasi..aa
Nina nagu kanna tumbi sneha sanga bedide
Neenendigu nana baalige aanandana,
Arunaraaga, arunaraaga, arunaraaga ||
ಚಿತ್ರಗೀತೆ
ನಡೆದಾಡೊ ಕಾಮನ ಬಿಲ್ಲೆ, ಹರಿದಾಡೊ ಮುಗಿಲಿನ ಮಿಂಚೆ
ತುಳುಕಾಡೊ ಬಾನಿನ ಚೆಲುವೆ, ಭುವಿಗಿಳಿದ ಹುಣ್ಣಿಮೆ ಹೊನಲೆ
ನೀನೆಂದಿಗೂ ನನ ಬಾಳಿಗೆ ಆನಂದದಾ
ಅರುಣರಾಗ, ಅರುಣರಾಗ, ಅರುಣರಾಗ ।।ಪ।।
ಮೀನಿನ ನಯನ, ಹವಳದ ತುಟಿಯ, ಪಡೆದಿಹ ರೂಪಸಿ
ಸಂಪಿಗೆ ಮೂಗು, ಕಬ್ಬಿನ ಹುಬ್ಬು, ಹೊಂದಿಹ ಷೋಡಶಿ ಆ ..
ನಿನ್ನ ನೋಡಿ ಪ್ರೀತಿ ಮೂಡಿ ಆಸೆ ಚಿಮ್ಮಿ ಹೊಮ್ಮಿದೆ
ನೀನೆಂದಿಗೂ ನನ ಬಾಳಿಗೆ ಆನಂದದಾ
ಅರುಣರಾಗ, ಅರುಣರಾಗ, ಅರುಣರಾಗ ।।೧।।
ದಂತದ ಮೈಯ, ಮಲ್ಲಿಗೆ ನಗೆಯ, ಅಂದದ ಊರ್ವಶಿ
ಮೇಘದ ಕುರುಳ, ಕೋಗಿಲೆ ಕಂಠ, ಗಳಿಸಿದ ಪ್ರೇಯಸಿ
ನಿನ ನಗು ಕಣ್ಣ ತುಂಬಿ ಸ್ನೇಹ ಸಂಗ ಬೇಡಿದೆ
ನೀನೆಂದಿಗೂ ನನ ಬಾಳಿಗೆ ಆನಂದದಾ
ಅರುಣರಾಗ, ಅರುಣರಾಗ, ಅರುಣರಾಗ ।।೨।।
No comments:
Post a Comment