Tuesday, October 29, 2024

Mellusire Savigaana (ಮೆಲ್ಲುಸಿರೇ ಸವಿಗಾನ)

Movie: Veerakesari (1963)

Singers: Ghantasala, P Susheela

Song link: Click Here


Mellusire savigaana ede jhallene hoovina baana, priya, hm..

Mellusire savigaana ede jhallene hoovina baana ||


Manadaache dudida bayake, kanasagi kaaduvudeke (2)

Madhumanchake vidhi hanchike, adakeke anjike shanke ||


Virahagni ninnede sudalu, beladingalayitu bisilu (2)

Horaadide haraadide, haraisi premada honalu ||


Ee deha rasamaya sadana, ee neha madhu sangrahana

Chiranutana romanchana, dampatyadanusandhana ||


ಚಿತ್ರಗೀತೆ 


ಮೆಲ್ಲುಸಿರೇ ಸವಿಗಾನ ಎದೆ ಝಲ್ಲೆನೆ ಹೂವಿನ ಬಾಣ, ಪ್ರಿಯಾ, ಹೂ೦

ಮೆಲ್ಲುಸಿರೇ ಸವಿಗಾನ ಎದೆ ಝಲ್ಲೆನೆ ಹೂವಿನ ಬಾಣ ।।ಪ।।


ಮನದಾಚೆ ದೂಡಿದ ಬಯಕೆ, ಕನಸಾಗಿ ಕಾಡುವುದೇಕೆ (೨)

ಮಧುಮಂಚಕೆ ವಿಧಿ ಹಂಚಿಕೆ, ಅದಕೇಕೆ ಅಂಜಿಕೆ ಶಂಕೆ ।।೧।।


ವಿರಹಾಗ್ನಿ ನಿನ್ನೆದೆ ಸುಡಲು, ಬೆಳದಿಂಗಳಾಯಿತು ಬಿಸಿಲು (೨)

ಹೋರಾಡಿದೆ ಹಾರಾಡಿದೆ, ಹಾರೈಸಿ ಪ್ರೇಮದ ಹೊನಲು ।।೨।।


ಈ ದೇಹ ರಸಮಯ ಸದನ, ಈ ನೇಹ ಮಧು ಸಂಗ್ರಹಣ 

ಚಿರನೂತನ ರೋಮಾಂಚನಾ, ದಾಂಪತ್ಯದನುಸಂಧಾನಾ 

।।೩।।

                             

No comments:

Post a Comment