Tuesday, June 30, 2026

Entu Bedaru (ಎಂಟು ಬೇಡರು)

 ಪದ್ಯ 

ಸಾಹಿತ್ಯ: ಪಂಜೆ ಮಂಗೇಶರಾಯರು 


ಮಗುವೆ, ನಿನ್ನಯ ಮೈಗೆ ಗುರಿ ಇಟ್ಟು ಹೊಡೆವಾ 

ಬಗೆ ಬಗೆಯ ಬೇಡರಿಂದಲಿ ದೂರವಾಗು. 


ಹೊತ್ತನ್ನು ತಿಂಬ ಸೋಮಾರಿತನ ಬೇಡ !

ಮತ್ತು ಹಿಡಿಸುವ ಮೈ ಕೊಲುವ ಕಳ್ಳು ಬೇಡ !

ಕತ್ತು ಕೊಯ್ಕರ ಕೂಡೆ ನಂಟು ಬೇಡತನ !

ಉತ್ತಮೋತ್ತಮರಲ್ಲಿ ನಿನ್ನ ಹಗೆ ಬೇಡ !


ಎತ್ತಿದ್ದ ಸಾಲವನು ಕೊಡದ ಮನ ಬೇಡ !

ವಿತ್ತ ವಸ್ತುವ ನುಂಗುವಾ ಮೋಸ ಬೇಡ !

ಚಿತ್ತವನು ಕೆಡಿಪಿ ಹೊಟ್ಟೆಯ ಕಿಚ್ಚು ಬೇಡ !

ಮತ್ತೆ ಪಾಪದ ತರುವ ಕೆಡುಗೆಲಸ ಬೇಡ !


Padya


Maguve, ninnaya maige guri ittu hodeva

Bage bageya bedarindali duravaagu.


Hottannu timba somaritana beda!

Mattu hidisuva mai koluva kallu beda!

Kattu koykara kude nantubedatana!

Uttamottamaralli ninna hage beda!


Ettida salavanu kodada mana beda!

Vitta vastuva nunguva mosa beda!

Chittavanu kedipa hotteya kicchu beda!

Matte paapada taruva kedugelasa beda!

Teru (ತೇರು)

ಪದ್ಯ 


ನಮ್ಮೂರ ತೇರು ಬಲು ಜೋರು 

ನೋಡಲು ಬರುವರು ನೂರಾರು 

ವರುಷ ವರುಷ ನೋಡಲು ಶಂಕರಿ ತೇರು 

ಸಾಲು ಸಾಲಾಗಿ ಬರುವುದು ಬಂಡಿ ಕಾರು 


ಪೌಷ್ಯ ಶುಕ್ಲ ಹುಣ್ಣಿಮೆಯಂದು 

ಭಕ್ತರು ಎಳೆವರು ಶಂಕರಿ ತೇರು 

ಬೃಹದಾಕಾರದ ಆ ತೇರು 

ನೋಡಲು ಬರುವರು ಸಾವಿರಾರು 


ಬಣ್ಣ ಬಣ್ಣದ ಪತಾಕೆ ಕಟ್ಟ 

ಬಾಳೆಯ ದಿಂಡು ತೋರಣ ಕಟ್ಟ 

ನೋಡು ನೋಡು ತೇರಿನ ತುದಿಯಲ್ಲಿ 

ಥಳ ಥಳಿಸುವ ಹೊನ್ನಿನ ಕಳಸ 


ಕಟ್ಟಿದ ಹಗ್ಗವ ಎಲ್ಲರು ಹಿಡಿವರು 

ದೇವರ ಸ್ತುತಿಸುತ ತೇರನು ಎಳೆವರು 

ಕಣ್ಣಿಗೆ ಅಂದ ಮನದಾನಂದ 

ನಮ್ಮೂರ ತೇರು ಬಲು ಚಂದಾ.


Padya


Nammura teru balu joru

Nodalu baruvaru nuraaru

Varusha varusha nodalu shankari teru

Saalu saalagi baruvudu bandi kaaru


Poushya shukla hunnimeyandu

Bhaktaru elevaru shankari teru

Bruhadaakarada aa teru

Nodalu baruvaru saaviraaru


Banna bannada patake katta

Baaleya dindu torana katta

Nodu nodu terina tudiyalli

Thala thalisuva honnina kalasa


Kattida haggava ellaru hidivaru

Devara stutisuta teranu elevaru

Kannige anda manadaananda

Nammura teru balu chanda.

 

Namma Bavuta (ನಮ್ಮ ಬಾವುಟ)

 ಪದ್ಯ 


ಬಾನಿನೆತ್ತರ ಹಾರುತಿಹುದು 

ಹೆಮ್ಮೆಯ ಈ ಬಾವುಟ 

ನಮ್ಮನೆಲ್ಲ ಕರೆಯುತಿಹುದು 

ನೋಡು ನಮ್ಮ ಬಾವುಟ 


ಕೇಸರಿ ಬಿಳಿ ಹಸುರು ಬಣ್ಣ 

ಖಾದಿಯಲಿ ಮಾಡಿಹರಣ್ಣ 

ಅಶೋಕ ಚಕ್ರವ ನೋಡಣ್ಣ 

ನೋಡು ನಮ್ಮ ಬಾವುಟ 


ಮಾಡಿ ಮಡಿದವರ ನೆನಪನು ತಂದು 

ಕರ್ತವ್ಯಕೆ ಕರೆ ಕೊಡುತಿಹುದು 

ಮುಗಿಲೆತ್ತರಕೆ ಹಾರುತಿಹುದು 

ನೋಡು ನಮ್ಮ ಬಾವುಟ 


ಹಿರಿಯರು ಮಾಡಿದ ಬಾವುಟ 

ಸಮತೆಯ ಬೀರುವ ಬಾವುಟ 

ಕಿರಿಯರ ನೆಚ್ಚಿನ ಬಾವುಟ 

ನೋಡು ನಮ್ಮ ಬಾವುಟ.


Padya


Baaninettara haarutihudu

Hemmeya ee bavuta

Nammanella kareyutihudu

Nodu namma bavuta


Kesari bili hasuru banna

Khadiyali maadiharanna

Ashoka chakrava nodanna

Nodu namma bavuta


Maadi madidavara nenapanu tandu

Kartavyake kare kodutihudu

Mugilettarake haarutihudu

Nodu namma bavuta


Hiriyaru maadida bavuta

Samateya beeruva bavuta

Kiriyara necchina bavuta

Nodu namma bavuta.

Monday, June 29, 2026

Gandhi Thatha (ಗಾಂಧಿ ತಾತಾ)

 ಪದ್ಯ 


ಗಾಂಧಿ ತಾತಾ ನಿಂತಿಹನು 

ನಮ್ಮನು ನೋಡುತ ನಗುತಿಹನು 


ಚಾಳೀಸ ಕಣ್ಣಲಿ ಹಾಕಿಹನು 

ಬರೀ ಮೈಯಲಿ ನಿಂತಿಹನು 

ಟೊಂಕದಿ ಗಡಿಯಾರ ಕಟ್ಟಿಹನು 

ಕೈಯಲಿ ಕೋಲು ಹಿಡಿದಿಹನು 


ಅಹಿಂಸೆ ದಂಡವ ಕೈಯಲಿ ಹಿಡಿದು 

ಸತ್ಯವ ಸಾರುತ ನಿಂತಿಹನು 

ಈ ದಂಡದಿ ಆಂಗ್ಲರ ಓಡಿಸಿದವನು 

ದೇಶಕೆ ಸ್ವತಂತ್ರ ತಂದವನು 


ಶಾಂತಿಯ ಮೂರುತಿ ಗಾಂಧಿ ಇವನು 

ಗೋಡ್ಸೆ ಗುಂಡಿಗೆ ಬಲಿಯಾದವನು 

ತ್ಯಾಗಜೀವಿ ಬಾಪೂಜಿ ಇವನು 

ದೇಶದ ಕಣ್ಮಣಿ ರಾಷ್ಟ್ರ ಪಿತನಿವನು.


Padya


Gandhi thatha nintihanu

Nammanu noduta nagutihanu


Chaleesa kannali haakihanu

Tonkadi gadiyaara kattihanu

Kaiyali kolu hididihanu


Ahimse dandava kaiyali hididu

Satyava saaruta nintihanu

ee dandadi anglara odisidavanu

Deshake swatantra tandavanu


Shantiya mooruti gandhi ivanu

Godse gundige baliyaadavanu

Tyagajeevi bapuji ivanu

Deshada kanmani rastra pitanivanu.

Malehani (ಮಳೆಹನಿ)

ಪದ್ಯ 


ಹೂಗಳ ಮೇಲೆ ಎಲೆಗಳ ಮೇಲೆ   

ಮುತ್ತಿನ ಹಾಗೆ ಕಾಣುವೆ ನೀನು 


ಸೂರ್ಯನ ಕಿರಣವು ಬಿದ್ದೊಡೆ ನೀನು 

ವಜ್ರದ ಹಾಗೆ ಹೊಳೆಯುವೆ ನೀನು 


ಗುಲಾಬಿಯಂಥ ಮೊಗದ ಮೇಲೆ 

ಮುತ್ತಿನ ಹಾಗೆ ಮಿನುಗುವೆ ನೀನು 


ಹನಿ ಹನಿ ಕೂಡಿ ಹಳ್ಳಗಳಾಗಿ 

ನದಿಗಳೊಡಗೂಡಿ ಸಾಗರವಾಗುವೆ ನೀನು 


ಸೂರ್ಯನ ಶಾಖಕೆ ಆವಿಯಾಗಿ 

ಕಪ್ಪು ಮೋಡವಾಗುವೆ ನೀನು 


ಮಳೆಯ ಹೊತ್ತು ತಂಪಾಗಿ ನೀನು 

ಹನಿಹನಿಗಳಾಗಿ ಧರೆಗಿಳಿಯುವೆ ನೀನು.


Padya


Hoogala mele elegala mele

Muttina haage kaanuve neenu


Suryana kiranavu biddode neenu

Vajrada haage holeyuve neenu


Gulabiyantha mogada mele

Muttina haage minuguve neenu


Hani hani koodi hallagalaagi

Nadigalodagudi sagaravaaguve neenu


Suryana shakhake aaviyaagi

Kappu modavaaguve neenu


Maleya hottu tampaagi neenu

Hanihanigalaagi dharegiliyuve neenu.

Buguri (ಬುಗುರಿ)

 ಪದ್ಯ 


ಬಣ್ಣ ಬಣ್ಣದ ನನ್ನೀ ಬುಗುರಿ 

ಗಿರಗಿರ ತಿರುಗುವ ಈ ಬುಗುರಿ 

ಕಣ್ಣಿಗೆ ಹಬ್ಬವ ಮಾಡುವ ಬುಗುರಿ 

ನನ್ನ ಸುತ್ತಲೂ ತಿರುಗುವ ಬುಗುರಿ 


ನೆಲವನು ಕುಕ್ಕುತ ತಿರುಗುವ ಬುಗುರಿ 

ತಗ್ಗನು ಕೊರೆಯುತ ಕುಣಿಯುವ ಬುಗುರಿ 

ರೊ೦ಯ್ ರೊ೦ಯ್ ಎನ್ನುತ ಹಾಡುವ ಬುಗುರಿ 

ಸು೦ಯ್ ಸು೦ಯ್ ತಿರುಗುತ ಆಡುವ ಬುಗುರಿ 


ಗಿರಗಿರ ತಿರುಗುವುದೀ ಬುಗುರಿ 

ಮನವನು ತಣಿಸುವುದೀ ಬುಗುರಿ 

ಅತ್ತಿಂದತ್ತ ಕುಣಿಯುವ ಬುಗುರಿ 

ಠಣ್ ಠಣ್ ನನ್ನನು ಕುಣಿಸುವ ಬುಗುರಿ.


Padya


Banna bannada nannee buguri

Giragira tiruguva ee buguri

Kannige habbava maaduva buguri

Nanna suttalu tiruguva buguri


Nelavanu kukkuta tiruguva buguri

Tagganu koreyuta kuniyuva buguri

Roi roi ennuta haaduva buguri

sui sui tiruguta aaduva buguri


Giragira tiruguvudee buguri

Manavanu tanisuvudee buguri

Attindatta kuniyuva buguri

Than than nannanu kunisuva buguri.

Gilee Banna Hasiru

 ಪದ್ಯ 

ಸಾಹಿತ್ಯ: ಎಚ್ ಎಸ್ ವೆಂಕಟೇಶ್ ಮೂರ್ತಿ 


ಗಿಳೀ ಬಣ್ಣ ಹಸಿರು 

ಅದರ ನೆರಳು ಮಾತ್ರ 

ಕಪ್ಪು !


ಪಾರಿವಾಳದ್ ಬೂದ 

ಅದರ ನೆರಳು ಮಾತ್ರ 

ಕಪ್ಪು !


ಕೊಕ್ಕರೇ ದು ಬಿಳಿ 

ಅದರ ನೆರಳು ಮಾತ್ರ 

ಕಪ್ಪು !


ನಿನ್ನ ಬಣ್ಣ ಕಂದು 

ನಿನ್ನ ನೆರಳು ಮಾತ್ರ 

ಕಪ್ಪು !


ಅಮ್ಮಾ ನೋಡೆ ಈ ತಮಾಷೆ 

ನೆರಳಲ್ಲೆಲ್ಲ ಒಂದೆ- ಆದ್ರೆ 

ಬಿಸಿಲಲ್ಲಿ ಮಾತ್ರ ಬೇರೆ !


Padya


Gilee banna hasiru

Adara neralu matra, kappu!


Parivalad bili

Adara neralu matra, kappu!


Kokkaredu bili

Adara neralu matra, kappu!


Ninna banna kandu

Ninna neralu matra, kappu!


Amma node ee tamashe

Neralallella onde-adre

Bisilalli matra bere!

Haarele Gubbi (ಹಾರೆಲೆ ಗುಬ್ಬಿ)

 ಪದ್ಯ 


ಗುಬ್ಬಿ ಗುಬ್ಬಿ ಹಾರೆಲೆ ಗುಬ್ಬಿ 

ಬಾನಲಿ ನೀನು ಎಲ್ಲೆಲ್ಲು 


ಕಾಳನು ಹಾಕುವೆ ಮನದಣಿ ತಿನ್ನು 

ಚಿ೦ವ್ ಚಿ೦ವ್ ಎನ್ನುತ ಹಾರೆಲೆ ನೀ 


ಅಂಗಳದಲ್ಲಿ ಮಾಳಿಗೆ ಮೇಲೆ 

ಕುಪ್ಪಳಿಸೆಲೆ ನೀ ಎಲ್ಲೆಲ್ಲು 


ಇದೋ ಬಂದೆನು ನಿನ್ನ ಬಳಿ 

ಹಾರೋಣ ಬಾ ಅಲ್ಲಿ ಇಲ್ಲಿ 


ಕುಣಿದರು ಚಂದ ನಲಿದರು ಚಂದ 

ನಾನೂ ಬರುವೆನು ನಿನ್ನ ಹಿಂದೆ 


ನನಗೂ ಅವನು ರೆಕ್ಕೆಯ ಕೊಟ್ಟರೆ 

ಹಾರುವೆ ನಿನ್ನ ಮುಂದೆ ಮುಂದೆ.


Padya


Gubbi gubbi haarele gubbi

Baanali neenu ellellu


Kaalanu hakuve manadani tinnu

Cheenv cheenv ennuta haarele nee


Angaladalli maalige mele

Kuppalisele nee ellellu


Ido bandenu ninna bali

Haarona baa alli illi


Kunidaru chanda nalidaru chanda

Naanu baruvenu ninna hinde


Nanagu avanu rekkeya kottare

Haaruve ninna munde munde.

Thursday, June 25, 2026

A Aa E Ee (ಅ ಆ ಇ ಈ)

 ಪದ್ಯ 

ಸಾಹಿತ್ಯ : ಎಚ್ ಎಸ್ ವೆಂಕಟೇಶ ಮೂರ್ತಿ 


ಅ ಆ ಇ ಈ 

ತಿದ್ದೋ ಹಕ್ಕಿ !


ಉ ಊ ಋ ಋೂ

ಜಾರೀ ಬಿದ್ರೂ 


ಎ ಏ ಐ 

ತರಚಿ ಹೋದ್ರು ಮೈ 


ಒ ಓ ಔ 

ಆದ್ರೂನು ನೋವ್ 


ಅಂ ........ಅಂಃ

ನಗ್ತು : ಹ ಹ್ಹಾ!


Padya


A Aa E Ee

Tiddo hakki!


U Uu Ru Rhuu

Jaaree bidru


Ae Aae Ai

Tarachi hodru mai


O Oo Ou

Aadrunu nov


Am.....Aha

Nagtu: Hah Haah!

Kannadavendare (ಕನ್ನಡವೆಂದರೆ)

ಪದ್ಯ 

ಸಾಹಿತ್ಯ : ಎಚ್ ಎಸ್ ವೆಂಕಟೇಶ್ ಮೂರ್ತಿ 


ಕನ್ನಡವೆಂದರೆ ಏನು-ಎಂದು 

ಏತಕೆ ಕೇಳುವೆ ನೀನು ?

ಕನ್ನಡ ತೊಟ್ಟಿಲು ತುಳುಕಿ-ಮಿಡಿಯಿತು 

ಮಕ್ಕಳ ಹೃದಯದ ಗಿಲಕಿ !


ಕನ್ನಡ ಕಂದನ ತೊದಲು-ಉಕ್ಕುವ 

ಭಾವಾ ವೇಗದ ಹುದಲು !

ಕನ್ನಡ ಮಾತಿನ ಮೋಡಿ-ನೋಡಿ 

ಕನ್ನಡ ಗೀತೆಯ ಹಾಡಿ !


ಕನ್ನಡ ನುಡಿವರ ಸ್ವತ್ತು-ಗತ್ತು 

ನಾಡಿನ ಮಂದಿಗೆ ಗೊತ್ತು !

ಕನ್ನಡ ಅಮ್ಮನ ಮುತ್ತು-ಹೊತ್ತೂ-

ಹೊತ್ತಿಗೆ ಸವಿ ಕೈತುತ್ತು !


Padya


Kannadavendare enu-endu

Etake keluve neenu?

Kannada tottilu tuluki-midiyitu

Makkala hrudayada gilaki!


Kannada kandana todalu-ukkuva

Bhavaavegada hudalu!

Kannada maatina modi-nodi

Kannada geeteya haadi!


Kannada nudivara swattu-gattu

Naadina mandige gottu!

Kannada ammana muttu-hottu-

Hottige savi kaituttu!

Habba Bantu Habba (ಹಬ್ಬ ಬಂತು ಹಬ್ಬ)

ಪದ್ಯ 

ಸಾಹಿತ್ಯ: ಎಚ್ ಎಸ್ ವೆಂಕಟೇಶ್ ಮೂರ್ತಿ 


ಹಬ್ಬ ಬಂತು ಹಬ್ಬ ಅಂತು - ಕಿರುಬೆರಳು  

ಹಬ್ಬಕ್ಕಕ್ಕಿ ಬೇಕು ಅಂತು - ನೆರೆಬೆರಳು 

ಸಾಲ ತಂದ್ರೆ ಆಯ್ತು ಅಂತು - ನಡುಬೆರಳು 

ಸಾಲ ತೀರ್ಸೋರ್ಯಾರು  ಅಂತು - ತೋರ್ಬೆರಳು 

ನಾನಿಲ್ವ ಮೋಟ್ರಾಯ ಅಂತು - ಹೆಬ್ಬೆರಳು.


Padya


Habba bantu habba antu - kiruberalu

Habbakkakki beku antu - nereberalu

Saala tandre aaytu antu - naduberalu

Saala teersoryaru antu - torberalu

Nanilva motraya antu - hebberalu.

Biskeet Angadi Ranganna (ಬಿಸ್ಕೀಟ್ ಅಂಗಡಿ ರಂಗಣ್ಣ)

 ಪದ್ಯ 


ಬಿಸ್ಕೀಟ್ ಅಂಗಡಿ ರಂಗಣ್ಣ 

ಬಣ್ಣದ ಬಿಸ್ಕೀಟ್ ಕೊಡಣ್ಣ 


ತಿನ್ನಲು ಬಾಯಲಿ ನೀರೂರಿರುವುದು 

ಬೇಗನೆ ಭರಣಿಯ ತೆಗೆಯಣ್ಣ 


ಖಾರವೂ ಬೇಕು ಸಿಹಿಯನು ಹಾಕು 

ಬೇಗನೇ ಪೊಟ್ಟಣ ಕೊಡಣ್ಣ 


ಬಣ್ಣದ ಬಿಸ್ಕೀಟ್ ಕೊಡು ನನಗೆ 

ಬಿಸ್ಕೀಟ್ ಅಂಗಡಿ ರಂಗಣ್ಣ.


Padya


Biskeet angadi ranganna

Bannada biskeet kodanna


Tinnalu baayali neeruriruvudu

Begane Bharaniya tegeyanna


Kharavu beku sihiyanu haaku

Begane pottana kodanna


Bannada biskeet kodu nanage

Biskeet angadi ranganna.

Jokaali (ಜೋಕಾಲಿ)

 ಪದ್ಯ 


ಬಂದಿತು ಬಂದಿತು ನಗರ ಪಂಚಮಿ 

ಜೋಕಾಲಿ ಜೀಕುತ ನಲಿಯೋಣ 


ಕೊಬ್ಬರಿ ನಾವು ಬಾಯಲಿ ಕಚ್ಚುತ

ಮುಗಿಲೆತ್ತರಕೆ ಹಾರೋಣ 

ಮುಗಿಲನು ಮುಟ್ಟಿಯೇ ಬರೋಣ 

ಜೀಕುತ ಜೀಕುತ ಏರೋಣ 


ತಂಬಿಟ್ಟು೦ಡಿ ತಿನ್ನುವ ಬಾ 

ಚಕ್ಕುಲಿ ಗಾರಿಗೆ ರುಚಿ ನೋಡುವ ಬಾ 

ತಿಂಡಿ ತಿನ್ನುತ ಜೀಕುವ ಬಾ 

ಆಡಿ ಆಡಿ ನಾವು ದಣಿಯುವ ಬಾ 


ಬಂದಿತು ಬಂದಿತು ನಗರ ಪಂಚಮಿ 

ಜೋಕಾಲಿ ಜೀಕುತ ನಲಿಯೋಣ. 


Padya


Banditu banditu nagara panchami

Jokaali jeekuta naliyona


Kobbari naavu baayali kacchuta

Mugilettarake haarona

Mugilanu muttiye barona

Jeekuta jeekuta erona


Tambittundi tinnuva baa

Chakkuli gaarige ruchi noduva baa

Tindi tinnuta jeekuva baa

Aadi aadi naavu daniyuva baa


Banditu banditu nagara panchami

Jokaali jeekuta naliyona.

Tuesday, June 23, 2026

Hunja (ಹುಂಜ)

ಪದ್ಯ 


ಬೇಲಿಯ ಮೇಲೆ 

ಕಂಬಿಯ ಮೇಲೆ 

ಕೆಂಪು ತುರಾಯಿ ತಲೆ ಮೇಲೆ 

ಕೂಗುವೆ ಏಕೆ ನೀ ಹುಂಜ 


ಮಲಗಿದ ಜಗವ 

ಎಚ್ಚರಗೊಳಿಸಲು 

ಕೊ ಕ್ಕೊ ಕ್ಕೋ 

ಕೂಗುವೆ ನಾನು 


ನೀನೂ ನಿದ್ದೆಯ ಮಾಡುತಲಿರುವೆ 

ಬೆಳಗಾಗುತಿದೆ ಎದ್ದೇಳು 

ನಾನೇ ಜಗದ ಗಡಿಯಾರ !

ನಾನೇ ದಿನದ ಗಡಿಯಾರ !


Padya


Beliya mele

Kambiya mele

Kempu turaayi tale mele

Kuguve eke nee hunja


Malagida jagava

Eccharagolisalu

Ko kko Kkoo

Kuguve Naanu


Neenu niddeya maadutaliruve

Belagagutide eddelu

Naane jagada gadiyaara!

Naane dinada gadiyaara!

Petege Baruve (ಪೇಟೆಗೆ ಬರುವೆ)

ಪದ್ಯ 


ಪೇಟೆಗೆ ನಾನೂ  

ಬರುವೆನು ಅಪ್ಪಾ 

ರವಿವಾರ ಶಾಲೆಗೆ 

ರಜೆಯಪ್ಪಾ 


ವಿಮಾನ ಕಾರು 

ಹಡಗೂ ಬೇಕು 

ತಿನ್ನಲು ಹಣ್ಣು 

ಬಿಸ್ಕೀಟ್ ಸಾಕು 


ದಿನ ದಿನ ನಾನು 

ಕಾಡೆನು ಅಪ್ಪಾ 

ನಿನ್ನನು ಇಂದು 

ಬಿಡೆನಪ್ಪಾ 


ಪೇಟೆಗೆ ನಾನೂ  

ಬರುವೆನು ಅಪ್ಪಾ.


Padya


Paetege naanu

Baruvenu appa

Ravivaara shalege

Rajeyappa


Vimaana kaaru

Hadagu beku

Tinnalu hannu

Biskeet saku


Dina dina naanu

Kaadenu appa

Ninnanu indu

Bidenappa


Paetege naanu

Baruvenu appa.

Monday, June 22, 2026

Shalege Naa Baruve (ಶಾಲೆಗೆ ನಾ ಬರುವೆ)

ಪದ್ಯ 


ಅಣ್ಣಾ ಅಣ್ಣಾ ನಿಲ್ಲೋ ಅಣ್ಣಾ  

ಶಾಲೆಗೆ ನಾನೂ ಬರುವೆನು ಅಣ್ಣಾ 


ಸ್ಲೇಟು ಪುಸ್ತಕ ತಂದಿಹೆ ನಾನು 

ಬರೆಯಲು ಬಳಪವ ತಂದಿಹೆ ನಾನು 


ತಿಂಡಿಯ ತಿಂದು ಹೊರಡುವೆ ನಾನು 

ಬೇಗನೆ ತಿಂಡಿಯ ನೀನೂ ತಿನ್ನು 


ಅ ಆ ಇ ಈ ಕಲಿಯುವೆ ನಾನು 

ನಿನ್ನಂತೆಯೇ ಆಗುವೆ ನಾನು.


Padya


Anna anna nillo anna

Shalege naanu baruvenu anna


Sletu pustaka tandihe naanu

Bareyalu balapava tandihe naanu


Tindiya tindu horaduve naanu

Begane tindiya neenu tinnu


A Aa E Ee kaliyuve naanu

Ninnanteye aaguve naanu.

Namma Mane (ನಮ್ಮ ಮನೆ)

ಪದ್ಯ 


ನಾನು ಬಿದ್ದು ಮೇಲೆದ್ದ ಮನೆ  

ಕನ್ನಡ ನುಡಿಯ ಕಲಿತ ಮನೆ 

ತಂಗಿಯ ಜೊತೆಯಾಡಿದ ಮನೆ 

ತಾಯಿ ಮುತ್ತು ರುಚಿಯುಂಡ ಮನೆ 


ಅಪ್ಪ ಅಮ್ಮ ಅಣ್ಣ ತಂಗಿ 

ಇರುವೆವು ನಾವು ನಾಲ್ಕೇ ಮಂದಿ 

ಸುಖ ಸಂಸಾರದ ನಮ್ಮ ಮನೆ 

ಇದುವೆ ನಮ್ಮ ಮುದ್ದು ಮನೆ.


Padya


Naanu biddu meledda mane

Kannada nudiya kalita mane

Tangiya jotheyaadida mane

Taayi muttu ruchiyunda mane


Appa amma anna tangi

Iruvevu naavu nalke mandi

Sukha samsaarada namma mane

Iduve namma muddu mane.

Tuesday, June 16, 2026

Banna Bannada Pata (ಬಣ್ಣ ಬಣ್ಣದ ಪಟ)

  ಪದ್ಯ  


ಬೀಸುವ ಗಾಳಿಗೆ 

ಬಿಟ್ಟೆನು ಪಟವನು 

ಏರಿತು ಏರಿತು ಗಗನಕ್ಕೆ 

ಹಾರುತ ಹಾರುತ ಗಗನಕ್ಕೆ 


ಬಣ್ಣ ಬಣ್ಣದ ನನ್ನ ಪಟ 

ಮೇಲೆ ಕೆಳಗೆ ಕುಣಿದಾಡುವ ಪಟ 

ಗಾಳಿಗೆ ಹೆದರದು ಈ ನನ್ನ ಪಟ 

ಗುಡುಗಿಗೂ ಬೆದರದು ನನ್ನ ಪಟ 


ಗಿರಗಿರ ತಿರುಗಿ 

ಸುತ್ತುವುದೀ ಪಟ 

ಗಿರ್ರನೆ ತಿರುಗಿ ನಲಿದಾಡುವ ಪಟ 


ಆಹಾ ! ಬಿಂಕದ ಸಿಂಗಾರಿ 

ಬಾ ಬಾ ಬಾರೇ ಬಂಗಾರಿ 

ಕೆಳಗಿಳಿ ಬಾರೇ ನೀ ಹಾರಿ 

ಭೂಮಿಗೆ ಬಾರೆ ನೀ ಜಾರಿ.


Padya


Beesuva gaalige

Bittenu patavanu

Eritu eritu gaganakke

Haaruta haaruta gaganakke


Banna bannada nanna pata

Mele kelage kunidaaduva pata

Gaalige hedaradu ee nanna pata

Gudugigu bedaradu nanna pata


Giragira tirugi

Suttuvudee pata

Girrane tirugi nalidaaduva pata


Aha! binkada singaari

Baa baa baare bangari

Kelagili baare nee haari

Bhumige baare nee jaari.

                                                       

Chitte Chitte Chitte (ಚಿಟ್ಟೆ ಚಿಟ್ಟೆ ಚಿಟ್ಟೆ)

 ಪದ್ಯ 

ಸಾಹಿತ್ಯ: ಎಚ್ ಎಸ್ ವೆಂಕಟೇಶ ಮೂರ್ತಿ 


ಚಿಟ್ಟೆ ! ಚಿಟ್ಟೆ! ಚಿಟ್ಟೆ!

ಎಲ್ಲಿಗೋಟ ಬಿಟ್ಟೆ ?


ಬಾನಿನ ಚಂದ್ರನ ಪಕ್ಕ 

ಆಟ ಆಡೋದಕ್ಕೆ !


ಚಿಟ್ಟೆ ! ಚಿಟ್ಟೆ! ಚಿಟ್ಟೆ!

ಎಲ್ಲಿಗೋಟ ಬಿಟ್ಟೆ ?


ಮೋಡದ ಘೋಡ ಏರಿ 

ಸ-ವಾರಿ ಮಾಡೋದಕ್ಕೆ !


ಚಿಟ್ಟೆ ! ಚಿಟ್ಟೆ! ಚಿಟ್ಟೆ!

ಎಲ್ಲಿಗೋಟ ಬಿಟ್ಟೆ ?


ಹೀಗೆ ಯಾರ್ಹತ್ರಾದ್ರೂ 

ಬುರುಡೆ ಬಿಡೋದಕ್ಕೆ !


Padya


Chitte! chitte! chitte!

Elligota bitte?


Banina chandrana pakka

Aata aadodakke!


Chitte! chitte! chitte!

Elligota bitte?


Modada ghoda eri

Sa-vari madodakke!


Chitte! chitte! chitte!

Elligota bitte?


Heege yarhatradru

Burude bidodakke!

Bayake (ಬಯಕೆ)

 ಪದ್ಯ 


ನಾನೂ ಚಂದಿರನಾಗುವೆ 

ನಾನೂ ಸೂರ್ಯನಾಗುವೆ 

ಸೂರ್ಯ ಚಂದ್ರರಂತೆ ನಾನೂ 

ಜಗವನೆಲ್ಲ ಬೆಳಗುವೆ 


ನಾನೂ ಗಾಂಧಿ ಆಗುವೆ 

ನಾನೂ ನೆಹರು ಆಗುವೆ 

ಅವರು ತುಳಿದ ದಾರಿಯಲ್ಲಿ 

ನಾನೂ ಮುನ್ನಡೆಯುವೆ 


ನಾನೂ ಕಾಳಿದಾಸನಾಗುವೆ 

ನಾನೂ ವಾಲ್ಮೀಕಿ ಆಗುವೆ 

ಅವರ ಕವಿತೆ ಓದಿ ಓದಿ 

ನಾನೂ ಹಾಗೇ ಆಗುವೆ 


ನಾನೂ ಸುಭಾಸನಗುವೆ 

ನಾನೂ ಭಗತಸಿಂಗನಾಗುವೆ 

ದೇಶಕ್ಕಾಗಿ ತ್ಯಾಗ ಮಾಡಿದ 

ಅವರಂತೆ ನಾನೂ ಆಗುವೆ 


ಜನ್ಮ ಕೊಟ್ಟ ತಾಯಿಗೆ 

ವಿದ್ಯೆಯಿತ್ತ ತಂದೆಗೆ 

ಅವರ ಕನಸ ನನಸ ಮಾಡಿ 

ಸಂತಸವನ್ನು ನೀಡುವೆ.


Padya


Nanu chandiranaguve

Nanu suryanaguve

Surya chandrarante nanu

Jagavanella belaguve


Nanu gandhi aaguve

Nanu neharu aaguve

Avaru tulida daariyalli

Nanu munnadeyuve


Nanu kalidasanaguve

Nanu valmeki aaguve

Avara kavite odi odi

Nanu haage aguve


Nanu subhasanaguve

Nanu bhagatasinganaguve

Deshakkagi tyaga madida

Avarante nanu aaguve


Janma kotta tayige

Vidye yitta tandege

Avara kanasa nanasa maadi

Santasavannu needuve.

Saturday, June 13, 2026

Aatake Baaro (ಆಟಕೆ ಬಾರೋ)

 ಪದ್ಯ 


ಬಾರೋ ಬಾರೋ 

ಆಟಕೆ ಬಾ 

ಗೋಲಿ ಬುಗುರಿ 

ಆಡುವ ಬಾ !


ಜೋಕಾಲಿಯಲಿ ಜೀಕೋಣ 

ಜಾರುಬಂಡೆಯಲಿ ಜಾರೋಣ 

ಲಗೋರಿ ಆಟವ ಆಡೋಣ 

ಚಿಣ್ಣಿಯ ಚಿಮ್ಮಿಸಿ ಹೊಡೆಯೋಣ !


ಕಣ್ಣು ಮುಚ್ಚಾಲೆ 

ಬಾ ಆಡೋಣ 

ಚೆಂಡಿನ ಆಟದಿ ಮೆರೆಯೋಣ 

ಚೆಂಡಿನಂತೆಯೇ ಪುಟಿಯೋಣ !


ಬಾರೋ ಬಾರೋ ನೀ ಬಾರೋ 

ಆಟವ ಆಡಲು ನೀ ಬಾರೋ !


Padya


Baaro baaro

Aatake baa

Goli bugari

Aaduva baa!


Jokaliyali jeekona

Jaarubandeyali jaarona

Lagori aatava aadona

Chinniya chimmisi hodeyona!


Kannu mucchale

Baa aadona

Chendina aatadi mereyona

Chendinanteye putiyona!


Baaro baaro nee baaro

Aatava aadalu nee baaro!

Baa Baa Baaro Chandamaama (ಬಾ ಬಾ ಬಾರೋ ಚಂದಮಾಮ)

 ಪದ್ಯ 


ಬಾ ಬಾ ಬಾರೋ ಚಂದಮಾಮ 

ಭೂಮಿಗೆ ಬಾರೋ ಚಂದಮಾಮ ।।ಪ।।


ಬೆಳ್ಳಿಯ ಮಾಮಾ ಚಂದಮಾಮ 

ಭೂಮಿಗೆ ಇಳಿಯೋ ಚಂದಮಾಮ 

ಮೋಡದ ಹಿಂದೆ ಹೋಗಬೇಡಾ 

ಹಗಳಲಲಿ ನನ್ನ ಕಾಡಬೇಡಾ 

ಬಾ ಬಾ ಬಾರೋ ಚಂದಮಾಮ ।।೧।।


ಒಬ್ಬನೆ ಏಕೆ ತಿರುಗುವೆ ನೀನು 

ಹಸುರಿನ ಭೂಮಿಗೆ ಬಾ ನೀನು 

ಚಿಣ್ಣರ ಜೊತೆಯಲಿ ನೀ ಕೂಡಿ 

ಚಿಣ್ಣೀ  ದಾಂಡು ಆಡಲು ಬಾ 

ಬಾ ಬಾ ಬಾರೋ ಚಂದಮಾಮ ।।೨।।


Padya


Baa baa baaro chandamaama

Bhumige baaro chandamaama ||


Belliya maamaa chandamaama

Bhumige iliyo chandamaama

Modada hinde hogabeda

Hagalali nanna kaadabeda

Baa baa baaro chandamaama ||


Obbane eke tiruguve neenu

Hasurina bhumige baa neenu

Chinnara jotheyali nee kudi

Chinnee Dandu aadalu baa

Baa baa baaro chandamaama ||

Railu (ರೈಲು)

 ಪದ್ಯ 


ಬಿದ್ದಿತು ಕೈ 

ಹೊಡೆಯಿತು ಗಂಟೆ 

ಬಾವುಟ ಬೀಸುತ 

ಸೀಟಿಯ ಊದುತ 

ಗಾರ್ಡ್ ಹತ್ತಿದ ಕೊನೆ ಬೋಗಿಯಲಿ 

ಹೊರಟಿತು ರೈಲು ಚುಕ್ ಪುಕ್ ರೈಲು 

ಚುಕ್ ಪುಕ್ ಚುಕ್ ಪುಕ್

ಚುಕ್ ಪುಕ್ ರೈಲು 


ನಿಲ್ದಾಣ ಹೊರಟಿತು ಹಿಂದೆ ಹಿಂದೆ 

ರೈಲು ಹೊರಟಿತು ಮುಂದೆ ಮುಂದೆ 

ಹೊಗೆಯನು ಉಗುಳುತ 

ಸಿಳ್ಳೆಯ ಹಾಕುತ 

ಮರ ಗಿರಿ ಹೊಲಗಳ ದಾಟುತ್ತ 

ನದಿ ಕೊಳ್ಳಗಳ ಮೇಲೆ ಹಾರುತ 

ಊರಿಗೆ ಬಂದಿತು ಈ ರೈಲು 

ಚುಕ್ ಪುಕ್ ಚುಕ್ ಪುಕ್

ಚುಕ್ ಪುಕ್ ರೈಲು.


Padya


Bidditu kai

Hodeyitu gante

Baavuta beesuta

Seetiya ooduta

Gard hattida kone bogiyali

Horatitu railu chuk puk  railu

chuk puk chuk puk

Chuk puk railu


Nildana horatitu hinde hinde

Railu horatitu munde munde

Hogeyanu uguluta

Silleya haakuta

Mara giri holagala mele haaruta

Oorige banditu ee railu

Chuk puk chuk puk

Chuk puk railu.

Sihi ( ಸಿಹಿ)

 ಪದ್ಯ 


ರವಿವಾರ ಬಂತಮ್ಮಾ

ರವೆ ಇಡ್ಲಿ ಬೇಕಮ್ಮಾ 


ಸೋಮವಾರ ಬಂತಮ್ಮಾ 

ಬೆಳಗಾಂವಿಯ ಕುಂದಾ ಬೇಕಮ್ಮಾ 


ಮಂಗಳವಾರ ಬಂತಮ್ಮಾ 

ಮಂಗಳೂರ ದೋಸೆ ಬೇಕಮ್ಮಾ 


ಬುಧವಾರ ಬಂತಮ್ಮಾ 

ಧಾರವಾಡ ಫೇಢೆ ಬೇಕಮ್ಮಾ 


ಗುರುವಾರ ಬಂತಮ್ಮಾ 

ಗುರುರಾಯರ ಸಕ್ಕರೆ ಬೇಕಮ್ಮಾ 


ಶುಕ್ರವಾರ ಬಂತಮ್ಮಾ 

ಸಕ್ಕರೆ ಜಿಲೇಬಿ ಬೇಕಮ್ಮಾ 


ಶನಿವಾರ ಬಂತಮ್ಮಾ 

ಮೈಸೂರು ಪಾಕು ಬೇಕಮ್ಮಾ.


Padya


Ravivaara bantamma

Rave idli bekamma


Somavaara bantamma

Belaganviya kunda bekamma


Mangalavaara bantamma

Mangalura dose bekamma


Budhavaara bantamma

Dharavada phedhe bekamma


Guruvaara bantamma

Gururayara sakkare bekamma


Shukravaara bantamma

Sakkare jilebi bekamma


Shanivaara bantamma

Mysuru paku bekamma.

Sharade (ಶಾರದೆ)

 ಪದ್ಯ 


ಕನ್ನಡ ಓದಲು ಸರಸರ ಬರೆಯಲು 

ಕಲಿಸಿದ ತಾಯಿಗೆ ನಮೋ ನಮೋ 


ಸರಸತಿ ಭಾರತಿ ಶಾರದಾಂಬೆಗೆ 

ವಿದ್ಯಾದಾಯಿಗೆ ನಮೋ ನಮೋ 


ಹಂಸವಾಹಿನಿ ವಾಗೀಶ್ವರಿಗೆ 

ಸ್ವರ ವ್ಯಂಜನ ಧಾತೆಗೆ ನಮೋ ನಮೋ 


ಬ್ರಹ್ಮನ ರಾಣಿ ಬುದ್ದಿ ಧಾತ್ರಿಗೆ 

ವೀಣಾಪಾಣಿಗೆ ನಮೋ ನಮೋ 


ವರದಾಯಿನಿ ಶ್ರೀ ಭುವನೇಶ್ವರಿಗೆ 

ವಂದಿಸುವೆನಿದೋ ನಮೋ ನಮೋ.


Padya


Kannada odalu sarasara bareyalu

Kalisida taayige namo namo


Sarasati bharati sharadambege

Vidyadaayige namo namo


Hamsavaahini vaageeshwarige

Swara vyanjana dhatege namo namo


Brahmana raani bhuddi dhatrige

Veenapaanige namo namo


Varadaayini sri bhuvaneshwarige

Vandisuvenido namo namo

Sunday, May 31, 2026

Nenapagi Baradiru (ನೆನಪಾಗಿ ಬಾರದಿರು)

Bhavageete

Sahitya: K S Nisar Ahmed

Song link: Click Here


Nenapagi baradiru mannugudida olave,

Endo nalisida nageya sanchinalli,

Hosa baduka kalegolisalendu na henagiruve,

Holegedisadiru kambaniya kunchadalli ||


Nageya dalagalu uduri baridaada tuti hoovu,

Battagannina sutta kappu moda,

Hrudayadola novugala birisuvare maremaatu,

Mayda gayava matte geechabeda ||


Bhavitavya dosageyali saalagi irisadiru,

Andendo mugidiruva deepagalanu,

Chendada roopagala ondonde tandesedu,

Manadalli bittadiru taapagalanu ||


ಭಾವಗೀತೆ 


ನೆನಪಾಗಿ ಬಾರದಿರು ಮಣ್ಣುಗೂಡಿದ ಒಲವೇ,

ಎಂದೊ ನಲಿಸಿದ ನಗೆಯ ಸಂಚಿನಲ್ಲಿ,

ಹೊಸ ಬದುಕ ಕಲೆಗೊಳಿಸಲೆಂದು ನಾ ಹೆಣಗಿರುವೆ,

ಹೊಲೆಗೆಡಿಸದಿರು ಕಂಬನಿಯ ಕುಂಚದಲ್ಲಿ ।।ಪ।।


ನಗೆಯ ದಳಗಳು ಉದುರಿ ಬರಿದಾದ ತುಟಿ ಹೂವು,

ಬಟ್ಟಗಣ್ಣಿನ ಸುತ್ತ ಕಪ್ಪು ಮೋಡ,

ಹೃದಯದೊಳ ನೋವುಗಳ ಬಿರಿಸುವರೆ ಮರೆಮಾತು,

ಮಾಯ್ದ ಗಾಯವ ಮತ್ತೆ ಗೀಚಬೇಡ ।।೧।।


ಭವಿತವ್ಯದೊಸಗೆಯಲಿ ಸಾಲಾಗಿ ಇರಿಸದಿರು,

ಅಂದೆಂದೊ ಮುಗಿದಿರುವ ದೀಪಗಳನು,

ಚೆಂದಾದ ರೂಪಗಳ ಒಂದೊಂದೆ ತಂದೆಸೆದು,

ಮನದಲ್ಲಿ ಬಿತ್ತದಿರು ತಾಪಗಳನು ।।೨।।

Antu Intu Preeti Bantu (ಅಂತು ಇಂತು ಪ್ರೀತಿ ಬಂತು)

Movie: Milana (2007)

Singers: Udit Narayan, Chitra

Song link: Click Here


Antu intu preeti bantu, indu naviraada male billinante,

Antu intu preeti bantu, ondu sogasaada savi sollinante,

Mana sote, manasaare, nanna hosa loka ninnalli eega,

Mana tumbi, mana sure, sari mundenu nee helu bega,

Antu int, ahah..!

Preeti bantu, ondu sogasaada savi sollinante ||

PaPPa PaDaGaMa RiSaRiSa RiSaRiMa, PaPPa PaDaPaMaRiSa !


Kaanada nadalli kelada ooralli, kai hididu hogona kaledu,

Naa ninnannu, nee nannannu, hudukona khushiyalli aledu,

Iddadaga sangaata, muddada sangeeta, inyava dani keladalla,

Nammolavali, navibbare, jagadalli beraru illa ||

PaPaPa, PaPaPa, PaPaSaDaPa MaGaMaPa !


Nee kaige sikkaga, kannalle nakkaga, hrudaya hoo biduva kaala,

Sulivillade, sulidaatuta, sere hidiyuva moha jaala,

Nodutta dangaagi, unmatta gungaagi,

Dayavittu nee nanna kaadu,

Ninnusirale naa keluve, nannedeya impaada haadu ||


ಚಿತ್ರಗೀತೆ 


ಅಂತು ಇಂತು, ಪ್ರೀತಿ ಬಂತು, ಇಂದು ನವಿರಾದ ಮಳೆ ಬಿಲ್ಲಿನಂತೆ,

ಅಂತು ಇಂತು, ಪ್ರೀತಿ ಬಂತು, ಒಂದು ಸೊಗಸಾದ ಸವಿ ಸೊಲ್ಲಿನಂತೆ,

ಮನ ಸೋತೆ, ಮನಸಾರೆ, ನನ್ನ ಹೊಸ ಲೋಕ ನಿನ್ನಲ್ಲಿ ಈಗ,

ಮನ ತುಂಬಿ, ಮನ ಸೂರೆ, ಸರಿ ಮುಂದೇನು ನೀ ಹೇಳು ಬೇಗ,

ಅಂತು ಇಂತು, ಅಹ್ಹ..!

ಪ್ರೀತಿ ಬಂತು, ಒಂದು ಸೊಗಸಾದ ಸವಿ ಸೊಲ್ಲಿನಂತೆ ।।ಪ।।

ಪಪ್ಪಪದಗಮ ರಿಸರಿಸ ರಿಸರಿಮ, ಪಪ್ಪ ಪದಪಮರಿಸ !


ಕಾಣದ ನಾಡಲ್ಲಿ ಕೇಳದ ಊರಲ್ಲಿ, ಕೈ ಹಿಡಿದು ಹೋಗೋಣ ಕಳೆದು,

ನಾ ನಿನ್ನನು, ನೀ ನನ್ನನು, ಹುಡುಕೋಣ ಖುಷಿಯಲ್ಲಿ ಅಲೆದು,

ಇದ್ದಾಗ ಸಂಗಾತ, ಮುದ್ದಾದ ಸಂಗೀತ, ಇನ್ಯಾವ ದನಿ ಕೇಳದಲ್ಲಾ,

ನಮ್ಮೋಲವಲಿ, ನಾವಿಬ್ಬರೇ, ಜಗದಲ್ಲಿ ಬೇರಾರೂ ಇಲ್ಲಾ ।।೧।।

ಪಪಪ, ಪಪಪ, ಪಪಪ , ಗಮಪ ಮದನಿಪ !


ನೀ ಕೈಗೆ ಸಿಕ್ಕಾಗ, ಕಣ್ಣಲ್ಲೆ ನಕ್ಕಾಗ, ಹೃದಯ ಹೂ ಬಿಡುವ ಕಾಲ,

ಸುಳಿವಿಲ್ಲದೆ, ಸುಳಿದಾಡುತ, ಸೆರೆ ಹಿಡಿಯುವ ಮೋಹ ಜಾಲಾ,

ನೋಡುತ್ತ ದಂಗಾಗಿ, ಉನ್ಮತ್ತ ಗುಂಗಾಗಿ, ದಯವಿಟ್ಟು ನೀ ನನ್ನ ಕಾಡು,

ನಿನ್ನುಸಿರಲೆ ನಾ ಕೇಳುವೆ, ನನ್ನೆದೆಯ ಇಂಪಾದ ಹಾಡು ।।೨।।

Saturday, May 30, 2026

Aha Entha Aa Kshana (ಆಹಾ ಎಂಥಾ ಆ ಕ್ಷಣ)

Movie: Aakash (2005)

Singer: K S Chitra

Song link: Click Here


Tadarena Tana Dheemtana (2),

Dheemta Dheemta Derena,

Tadaredani Dheemta Dheemta Derena !


Aha entha aa kshana, nenedare tallana,

Tannantane edeyali, preetiya nartana,

Idu yaavaga hegaito yaake anta, gotte aagalilla,

Ee preetili eninta maayamantra, ondu tiliyalilla ||


Kangala maatige, tutigalu mounavu,

Hrudayavu beretare, ulidavu gounavu,

Nenneyavaregu na hego idde, na bere nee bere antidde,

Nepa matrake eradu deha ide, adarolagiro pranavu onde,

Ee pranane ninagaagi meesaliduve, baaro nanna geleya,

Ninna preetige elelu janmadallu, mudipu nanna hrudaya ||


Nadigalu odive, kadalanu seralu,

Chaitrava kaadide, hoogalu aralalu,

Sangeeta sahitya ondaadante, halalli beretiruva jenante,

Sujiya hindiruva daaradante,

Na baruve jotheyaagi neralante,

Ee preetiyu ee namma baalinalli, endu heege irali,

Ninna preetine nannedeya jyothiyagi, endu belagutitali ||


ಚಿತ್ರಗೀತೆ 


ತದರೆನಾ ತನ ಧೀ೦ತನ (೨),

ಧೀ೦ತ ಧೀ೦ತ ದೆರೆನಾ, 

ತದೆರೆನನಿ ಧೀ೦ತ ಧೀ೦ತ ದೆರೆನಾ !


ಆಹಾ ಎಂಥಾ ಆ ಕ್ಷಣ, ನೆನೆದರೆ ತಲ್ಲಣ,

ತನ್ನಂತಾನೆ ಎದೆಯಲಿ, ಪ್ರೀತಿಯ ನರ್ತನ,

ಇದು  ಯಾವಾಗ ಹೇಗಾಯ್ತೋ ಯಾಕೆ ಅಂತ, ಗೊತ್ತೆ ಆಗಲಿಲ್ಲ,

ಈ ಪ್ರೀತೀಲಿ ಏನಿಂತ ಮಾಯ ಮಂತ್ರ, ಒಂದು ತಿಳಿಯಲಿಲ್ಲ ।।ಪ।।


ಕಂಗಳ ಮಾತಿಗೆ, ತುಟಿಗಳು ಮೌನವು,

ಹೃದಯವು ಬೆರೆತರೆ, ಉಳಿದವು ಗೌಣವು,

ನೆನ್ನೆಯವರೆಗೂ ನಾ ಹೇಗೋ ಇದ್ದೆ, ನಾ ಬೇರೆ ನೀ ಬೇರೆ ಅಂತಿದ್ದೆ,

ನೆಪ ಮಾತ್ರಕೆ ಎರಡು ದೇಹ ಇದೆ ಅದರೊಳಗಿರೊ ಪ್ರಾಣವು ಒಂದೇ,

ಈ ಪ್ರಾಣನೆ ನಿನಗಾಗಿ ಮೀಸಲಿಡುವೆ, ಬಾರೋ ನನ್ನ ಗೆಳೆಯ,

ನಿನ್ನ ಪ್ರೀತಿಗೆ ಏಳೇಳು ಜನ್ಮದಲ್ಲೂ, ಮುಡಿಪು ನನ್ನ ಹೃದಯ ।।೧।।


ನದಿಗಳು ಓಡಿವೆ, ಕಡಲನೂ ಸೇರಲು,

ಚೈತ್ರವಾ ಕಾದಿದೆ, ಹೂಗಳು ಅರಳಲು,

ಸಂಗೀತ ಸಾಹಿತ್ಯ ಒಂದಾದಂತೆ, ಹಾಲಲ್ಲಿ ಬೆರೆತಿರುವ ಜೇನಂತೆ,

ಸೂಜಿಯ ಹಿಂದಿರುವ ದಾರದಂತೆ, ನಾ ಬರುವೆ ಜೊತೆಯಾಗಿ ನೆರಳಂತೆ,

ಈ ಪ್ರೀತಿಯು ಈ ನಮ್ಮ ಬಾಳಿನಲ್ಲಿ, ಎಂದೂ ಹೀಗೆ ಇರಲಿ,

ನಿನ್ನ ಪ್ರೀತಿನೆ ನನ್ನೆದೆಯ ಜ್ಯೋತಿಯಾಗಿ, ಎಂದು ಬೆಳಗುತಿರಲಿ 

।।೨।।