Saturday, November 28, 2026

Buda Budakanna (ಬುಡ ಬುಡಕಣ್ಣ)

 ಪದ್ಯ 


ಬಂದಿಹನಣ್ಣ ಬಂದಿಹನಣ್ಣ 

ನಮ್ಮೂರಿಗೆ ಬುಡ ಬುಡಕಣ್ಣ 

ಮೈಯಲಿ ಜೂಲು ಬಾರಿಸೆ ಡೋಲು 

ಹಿಂದೆಯೆ ಬರುತಿಹ ಬಸವಣ್ಣ 

ಕೊರಳಿನ ಗೆಜ್ಜೆಗೆ ಹೆಜ್ಜೆಯ ಹಾಕುತ 

ಗೋಣಾಡಿಸುವನು ಬಸವಣ್ಣ 

ಹುಡುಗರಿಗಾಗಿಯೆ ಕುಣಿ ಕುಣಿದಾಡುವ 

ಅಂದದ ಚಂದದ ಬಸವಣ್ಣ 

ಐದೋ ಹತ್ತೋ ಪೈಸೆಯ ಕೊಟ್ಟರೆ 

ನರ್ತಿಸುವನು ಈ ಬಸವಣ್ಣ 

ಕೊಟ್ಟರು ಸರಿ ಕೊಡದಿದ್ದರು ಸರಿ ತಾ 

ಮುಂದಕೆ ನಡೆವನು ಬಸವಣ್ಣ.


Padya


Bandihananna bandihananna

Nammurige buda budakanna

Maiyali julu barise dolu

Hindeye barutiha basavanna

Koralina gejjege hejjeya hakuta

Gonadisuvanu basavanna

Hudugarigagiye kuni kunidaaduva

Andada chandada basavanna

Aido hatto paiseya kottare

Nartisuvanu ee basavanna

Kottaru sari kodadiddaru sari taa

Mundake nadevanu basavanna.

Ivanaaru (ಇವನಾರು)

ಪದ್ಯ 

ಸೂರ್ಯ ಚಂದ್ರ ನಕ್ಷತ್ರಾದಿಗಳನು  

ಆಕಾಶದಿ ಹಚ್ಚಿದವನಿವನಾರು ?

ಭೂಮಿ ತಾಯಿಗೆ ಜೀವವ ತುಂಬಿ 

ಕಳಿಸಿರುವವನು ಇವನಾರು ?

ಸೌರ ಮಂಡಲದಿ ಎಲ್ಲವನ್ನು ತಾ 

ತಿರುಗಿಸು ತಿರುವನು ಇವನಾರು ?

ಚಳಿ ಮಳೆ ಗಾಳಿ ಬಿಸಿಲು ನೆರಳುಗಳ

ಸಮಯಕೆ ಮಾಡುವನಿವನಾರು ?

ಬಣ್ಣ ಬಣ್ಣದ ಹೂವುಗಳಲ್ಲಿ 

ಬಣ್ಣ ತುಂಬಿದವನಿವನಾರು ?

ಹೆಣ್ಣು ಗಂಡು ಗಿಡಬಳ್ಳಿ ಪಕ್ಷಿಮೃಗ 

ಬೇರೆ ಮಾಡಿದವನಿವನಾರು ?


Padya


Surya chandra nakshatraadigalanu

Aakashadi hacchidava nivanaaru?

Bhumi taayige jeevava tumbi

kalisiruvavanu ivanaaru?

Souramandaladi ellavannu taa

Tirugisu tiruvanu ivanaaru?

Chali male gaali bisilu neralugala

Samayake maaduvanivanaaru?

Banna bannada hoovugalalli

Banna tumbidavanivanaaru?

Hennu gandu gidaballi pakshimruga

Bere madidavanivanaaru?

Eradu Eradla Nalku (ಎರಡು ಎರಡ್ಲನಾಲ್ಕು)

ಪದ್ಯ 


ಎರಡು ಎರಡ್ಲನಾಲ್ಕು 

ಅನ್ನಕೆ ಸಾರು ಹಾಕು. 

ಮೂರು ಮೂರ್ಲ ಒಂಬತ್ತು 

ಹೊಟ್ಟೆಯೆಲ್ಲಾ ತುಂಬಿತ್ತು. 

ನಾಲ್ಕು ನಾಲ್ಕಲ ಹದಿನಾರು 

ಹಾಸಿಗೆ ಮೇಲೆ ಜಾರು .

ಐದು ಐದ್ಲಇಪ್ಪತ್ತೈದು 

ಎಬ್ಬಿಸಿದರು ಅಪ್ಪ ಬೈದು. 

ಆರು ಆರ್ಲ ಮುವ್ವತ್ತಾರು 

ಕೈಯಲಿ ಪುಸ್ತಕ ಆರಾರು. 

ಏಳು ಏಳ್ಲ ನಲವತ್ತೊಂಬತ್ತು 

ನಿದ್ದೆ ಗಣ್ಣಲಿ ಪುಸ್ತಕ ಜಾರಿತ್ತು. 

ಎಂಟು ಎಂಟ್ಲಅರವತ್ನಾಲ್ಕು 

ಅಪ್ಪ ಕೊಟ್ಟರು ನಾಲಕ್ಕು. 

ಒಂಬತ್ತೊಂಬತ್ಲ ಎಂಬತ್ತೊಂದು 

ಓದಿಯೇ ಮಲಗಿದೆ ಅಂದು. 

ಹತ್ತು ಹತ್ಲ ನೂರು 

ಬೆಳಗಾದಾಗ ಆರು.


Padya


Eradu eradla nalku

Annake saaru haaku.

Mooru moorla ombattu

Hotteyella tumbittu.

Nalku nalkla hadinaaru

Haasige mele jaaru.

Aidu aidla ippataidu

Ebbisidaru appa baidu.

aaru aarla muvvattaru

Kaiyali pustaka aararu.

Elu el la nalavattombattu

Niddegannali pustaka jarittu.

Entu entla aravatnalku

Appa kottaru nalakku.

Ombattombatla embattondu

Odiye malagide andu.

Hattu hatla nooru

Belagadaga aaru. 

Tuesday, November 24, 2026

Horanaada Annapurne (ಹೊರನಾಡ ಅನ್ನಪೂರ್ಣೆ)

Bhaktigeete

Singer: P Susheela

Song link: Click Here


Horanaada annapurne krupasagari

Karuaada siridevi o shivashankari

Jayatu jayatu annapurneshwari

Jayatu jayatu shiva kameshwari.


Bhavati bhikshandehi endu ninna kelida

Shivanige annavittu avana santaiside

Bhakti bhikshandehi endu beduve taaye

Shakti maate, daya bhikshe, needu varade.


Ee lokada sajjanara uddarisalendu

Kailasadinda horanaadige bandeya

Ajanigalandhakaara jnana deepadina harisi

Prajne belaku, matige suriye, nee bandeya.


Ninna bhadra jalateerthada samprokshane

Anudina punya needi gaivudellara rakshane

Naanu varnise annapurne ninnalliha aakarshane

Nanage amruta nirata ninna naama madhura smarane.


ಭಕ್ತಿಗೀತೆ 


ಹೊರನಾಡ ಅನ್ನಪೂರ್ಣೆ ಕೃಪಾಸಾಗರಿ 

ಕರುನಾಡ ಸಿರಿದೇವಿ ಓ ಶಿವಶಂಕರಿ 

ಜಯತು ಜಯತು ಅನ್ನಪೂರ್ಣೇಶ್ವರಿ 

ಜಯತು ಜಯತು ಶಿವ ಕಾಮೇಶ್ವರಿ ।।ಪ।।


ಭವತಿ ಭಿಕ್ಷಾಂದೇಹಿ ಎಂದು ನಿನ್ನ ಕೇಳಿದ 

ಶಿವನಿಗೆ ಅನ್ನವಿತ್ತು ಅವನ ಸಂತೈಸಿದೆ 

ಭಕ್ತಿ ಭಿಕ್ಷಾಂದೇಹಿ ಎಂದು ಬೇಡುವೆ ತಾಯೇ 

ಶಕ್ತಿ ಮಾತೆ ದಯಾ ಭಿಕ್ಷೆ ನೀಡು ವರದೇ ।।೧।।


ಈ ಲೋಕದ ಸಜ್ಜನರ ಉದ್ಧರಿಸಲೆಂದು 

ಕೈಲಾಸದಿಂದ ಹೊರನಾಡಿಗೆ ಬಂದೆಯಾ 

ಅಜ್ಞಾನಿಗಳ೦ಧಃಕಾರ ಜ್ಞಾನ ದೀಪದಿಂದ ಹರಿಸಿ 

ಪ್ರಜ್ಞೆ ಬೆಳಕು ಮತಿಗೆ ಸುರಿಯೇ ನೀ ಬಂದೆಯಾ ।।೨।।


ನಿನ್ನ ಭದ್ರ ಜಲತೀರ್ಥದ ಸಂಪ್ರೋಕ್ಷಣೆ 

ಅನುದಿನ ಪುಣ್ಯ ನೀಡಿ ಗೈವುದೆಲ್ಲರ ರಕ್ಷಣೆ 

ನಾನು ವರ್ಣಿಸೆ ಅನ್ನಪೂರ್ಣೆ ನಿನ್ನಲ್ಲಿಹ ಆಕರ್ಷಣೆ 

ನನಗೆ ಅಮೃತ ನಿರತ ನಿನ್ನ ನಾಮ ಮಧುರ ಸ್ಮರಣೆ ।।೩।।


Monday, November 23, 2026

Kadinache Kone (ಕಾಡಿನಾಚೆ ಕೊನೆ)

 ಪದ್ಯ 

ಸಾಹಿತ್ಯ :ಎಚ್ ಎಸ್ ವೆಂಕಟೇಶ ಮೂರ್ತಿ 


ಕಾಡಿನಾಚೆ ಕೊನೆ 

ದೊಡ್ಡದೊಂದು ಮನೆ 

ಹೋದ ಮಹಡಿ ಹತ್ತಿ 

ಉರಿಯೋ ಮೇಣದ ಬತ್ತಿ 


ಇಳಿದು ಬಂದೆ ಕೆಳಗೆ 

ಯಾರೂ ಇಲ್ಲ ಒಳಗೆ 

ಹುಡುಕಿದೆ ಹಿತ್ತಲಿನಲ್ಲಿ 

ಅಳತಾ ಇತ್ತು ನಲ್ಲಿ !


ಬಾವಿ ಹತ್ತಿರ ಬಂದೆ 

ತಿರುಗೋ ಗಡಗ ಒಂದೆ !

ಒಳಗೆ ಒಂದು ಕೋಣೆ 

ತುಗೋ ತೊಟ್ಟಿಲು ತಾನೇ !


ಹಾಲಿಗೆ ಬಂದೆ ಅಲ್ಲಿ 

ಚ್ಚ್ ಚ್ಚ್ ಅನ್ನೋ ಹಲ್ಲಿ !

ಯಾರೋ ಜಗ್ಗಲು ಅಂಗಿ 

ನಗುತಾ ಇದ್ದಳು ತಂಗಿ !


Padya


Kadinache kone

Doddadondu mane

Hode mahadi hatti

Uriyo menada batti


Hode bande kelage

Yaaru illa olage

Hudukide hittalinalli

Aluta ittu nalli!


Bavi hattira bande

Tirugo gadaga onde!

Olage ondu kone

Tago tottilu taane!


Haalige bande alli

chhah chhah anno halli

Yaaro jaggalu angi

Naguta iddalu tangi!

Friday, November 13, 2026

Banditu Banditu Deepavali (ಬಂದಿತು ಬಂದಿತು ದೀಪಾವಳಿ)

 ಪದ್ಯ 


ಬಂದಿತು ಬಂದಿತು ದೀಪಾವಳಿ 

ಮಕ್ಕಳ ಪಟಾಕಿಯ ಹಾವಳಿ 


ಝಗ ಝಗಿಸುವ ಲೈಟಿನ ಬೆಳಕು 

ರಂಗು ರಂಗಿನ ಬಟ್ಟೆಯ ಥಳಕು 


ಬಗೆ ಬಗೆ ತಿಂಡಿಯ ದೀವಳಿಗೆ 

ಎಲ್ಲರ ಮನೆಯಲಿ ಹೋಳಿಗೆ 


ಬಂಧು ಬಳಗ ಕೂಡುವರೀಗ 

ಅಳಿಯ ಬರುವನು ಮಾವನ ಮನೆಗೀಗ 


ವರುಷ ವರುಷಕೊ ದೀಪಾವಳಿ 

ಅಪ್ಪನ ಗಂಟು ದಿವಾಳಿ.


Padya


Banditu banditu deepavali

Makkala pataakiya havali


Jhaga jhagisuva laitina belaku

Rangu rangina batteya thalaku


Bage bage tindiya deevalige

Ellara maneyali holige


Varusha varushaku deepavali

Appana gantu diwali.


Pooriya Shamanna (ಪೂರಿಯ ಶಾಮಣ್ಣ)

 ಪದ್ಯ 


ಪೂರಿಯ ಕರಿಯುವ ಶಾಮಣ್ಣ 

ನನಗೂ ಪೂರಿಯ ಕೊಡು ಶಾಮಣ್ಣ 


ಬೇಗ ಬೇಗನೇ ನೀ ಕರಿ ಪೂರಿ 

ಕೆಂಪ ಕೆಂಪಗೆ ಉಬ್ಬುವ ಪೂರಿ 

ಬಾಯಲಿ ನೀರೂರಿದೆ ಅಣ್ಣ 

ಬೇಗನೇ ಕೊಡು ಬಾ ಶಾಮಣ್ಣ 


ಘಮ್ ಘಮ್ ವಾಸನೆ ಸೂಸುತಿದೆ 

ನಾಲಿಗೆ ಪೂರಿಯ ಬೇಡುತಿದೆ 

ಕರಿಯೋ ಬೇಗ ಶಾಮಣ್ಣ 

ಹೊತ್ತಾಗಿದೆ ಶಾಲೆಗೆ ಅಣ್ಣ 


ಪೂರಿಗೆ ಪಲ್ಯವ ಹಾಕಣ್ಣ 

ಕುಡಿಯಲು ನೀರನು ಕೊಡು ಅಣ್ಣ 

ಪೂರಿಯು ಬಲು ರುಚಿಯಾಗಿದೆಯಣ್ಣ 

ಮತ್ತೊಮ್ಮೆ ಬರುವೆನು ಶಾಮಣ್ಣ.


Padya


Pooriya kariyuva shamana

Nanagu pooriya kodu shamanna


Bega begane nee kari poori

Kempa kempage ubbuva poori

Bayali neeruride anna

Begane kodu baa shamanna


Gham gham vasane susutide

Nalige pooriya bedutide

Kariyo bega shamanna

Hottagide shalege anna


Poorige palyava hakanna

Kudiyalu neeranu kodu anna

Pooriyu balu ruchiyagideyanna 

Mattomme baruvenu shamanna.