- Movie: Gouri (1963)
- Singer: P B Srinivas
- Songlink: Click Here
Ivalu yaru balle yenu
Ivala hesra helalenu
Ivala danege tirugalenu
Ivalu etako bandu nanna seledalu ||
Adiya mutta neela jade
Mudiya tumba hoovu hede
Ivalu adiyanitta kade
Hejje hejjege ondu dodda mallige
||ivalu||
Angalina sanjegempu
Kalanduge gejje impu
Mohada malligeya kampu
Karedudennanu.. nanu hidiya hodenu
||ivalu||
Bangarada belakinolage
Mungarina minchu bedage
Ilegilidiha modadolage
Mereyutiddalu..nanna kareyutiddalu
||ivalu||
ಚಿತ್ರಗೀತೆ
ಇವಳು ಯಾರು ಬಲ್ಲೆ ಏನು
ಇವಳ ಹೆಸರ ಹೇಳಲೇನು
ಇವಳ ದನಿಗೆ ತಿರುಗಲೇನು
ಇವಳು ಏತಕೋ ಬಂದು ನನ್ನ ಸೆಳೆದಳು ।।ಪ ।।
ಅಡಿಯ ಮುಟ್ಟ ನೀಳ ಜಡೆ
ಮುಡಿಯ ತುಂಬ ಹೂವು ಹೆಡೆ
ಇವಳು ಅಡಿಯನಿಟ್ಟ ಕಡೆ
ಹೆಜ್ಜೆ ಹೆಜ್ಜೆಗೆ ಒಂದು ದೊಡ್ಡ ಮಲ್ಲಿಗೆ ।।೧।।
ಅಂಗಾಲಿನ ಸಂಜೆಗೆಂಪು
ಕಾಲಂದುಗೆ ಗೆಜ್ಜೆ ಇಂಪು
ಮೋಹದ ಮಲ್ಲಿಗೆಯ ಕಂಪು
ಕರೆದುದೆನ್ನನು ..
ನಾನು ಹಿಡಿಯ ಹೋದೆನು ।।೨।।
ಬಂಗಾರದ ಬೆಳಕಿನೊಳಗೆ
ಮುಂಗಾರಿನ ಮಿಂಚು ಬೆಡಗೆ
ಇಳೆಗಿಳಿದಿಹ ಮೋಡದೊಳಗೆ
ಮೆರೆಯುತಿದ್ದಳು ..
ನನ್ನ ಕರೆಯುತ್ತಿದ್ದಳು ।।೩।।

No comments:
Post a Comment