Tuesday, November 15, 2022

Mouna Tabbitu Nelava (ಮೌನ ತಬ್ಬಿತು ನೆಲವ )

Bhavageete

Sahitya: Gopalakrishna Adiga

Song link: https:Click Here


Mouna tabbitu nelava

Jummene pulakagonditu dharini

Nodi nachitu banu

Seritu kempu sanjeya kadapali ||


Hakkigoralina surata ganake

Bigiyu nasuve sadilitu

Beccha becchane usirinandadi

Gali mellane tevalitu ||


Irula seragina nelalu chachitu

Banu tereyitu kannanu

nelavu taniyitu, bevaru haniyitu

Bashpa nenesitu hullanu ||


Mouna urulitu, horalitedditu

Gali bhorane beesitu

Tengu garigala chamarake

Hayendu mounavu malagitu ||


ಭಾವಗೀತೆ 


ಮೌನ ತಬ್ಬಿತು ನೆಲವ 

ಜುಮ್ಮೆನೆ ಪುಳಕಗೊಂಡಿತು ಧಾರಿಣಿ 

ನೋಡಿ ನಾಚಿತು ಬಾನು 

ಸೇರಿತು ಕೆಂಪು ಸಂಜೆಯ ಕದಪಲಿ ।।ಪ ।।


ಹಕ್ಕಿಗೊರಳಿನ ಸುರತಗಾನಕೆ 

ಬಿಗಿಯು ನಸುವೆ ಸಡಿಲಿತು 

ಬೆಚ್ಚಬೆಚ್ಚನೆ ಉಸಿರಿನಂದದಿ 

ಗಾಳಿ ಮೆಲ್ಲನೆ ತೆವಳಿತು ।।೧।।


ಇರುಳ ಸೆರಗಿನ ನೆಳಲು ಚಾಚಿತು 

ಬಾನು ತೆರೆಯಿತು ಕಣ್ಣನು 

ನೆಲವು ತಣಿಯಿತು , ಬೆವರು ಹನಿಯಿತು 

ಬಾಷ್ಪ ನೆನೆಸಿತು ಹುಲ್ಲನು ।।೨।।


ಮೌನ ಉರುಳಿತು ,ಹೊರಳಿತೆದ್ದಿತು 

ಗಾಳಿ  ಭೋರನೆ ಬೀಸಿತು

ತೆಂಗುಗರಿಗಳ ಚಾಮರಕೆ 

ಹಾಯೆಂದು ಮೌನವು ಮಲಗಿತು ।।೩।।



No comments:

Post a Comment