Bhavageete
Sahitya: Chandrashekara Kambara
Song link: https:Click Here
Yaravva ee cheluva
Tantane ranjisuva
Suryana thara holeyuva ||
Ambegaliduvanta aneya mariyene
Jollu surisidallella mallige hoovene
Nakkareetana munde chandra kalegunduvane
Baro bhagyada odeyane ||
Bere seemeya daiva tappi bandanene
Tugo jadegala node nagara midiyene
Odala mannina olaga mudida shivanene
Musuguduva nandiyene ||
Enu kottaru olla sollu acchina bella
Ola horaga aadidara salakondu avatara
Avva eetana roopa namma kannina deepa
Baro bhagyada odeyane ||
ಭಾವಗೀತೆ
ಯಾರವ್ವ ಈ ಚೆಲುವ
ತಂತಾನೇ ರಂಜಿಸುವ
ಸೂರ್ಯನ ಥರ ಹೊಳೆಯುವ ।।ಪ ।।
ಅಂಬೆಗಾಲಿಡುವಂತ ಆನೆಯ ಮರಿಯೇನೆ
ಜೊಲ್ಲು ಸುರಿಸಿದಲ್ಲೆಲ್ಲ ಮಲ್ಲಿಗೆ ಹೂವೇನೇ
ನಕ್ಕರೀತನ ಮುಂದೆ ಚಂದ್ರ ಕಳೆಗುಂದುವನೆ
ಬಾರೋ ಭಾಗ್ಯದ ಒಡೆಯನೇ ।।೧।।
ಬೇರೆ ಸೀಮೆಯ ದೈವ ತಪ್ಪಿ ಬಂದಾನೇನೆ
ತುಗೊ ಜಡೆಗಳ ನೋಡೆ ನಾಗರ ಮಿಡಿಯೇನೆ
ಒಡಲ ಮಣ್ಣಿನ ಒಳಗ ಮೂಡಿದ ಶಿವನೇನೆ
ಮುಸುಗುಡುವ ನಂದಿಯೇನೇ ।।೨।।
ಏನು ಕೊಟ್ಟರೂ ಒಲ್ಲ ಸೊಲ್ಲು ಅಚ್ಚಿನ ಬೆಲ್ಲ
ಒಳ ಹೊರಗ ಆಡಿದರ ಸಲಕೊಂದು ಅವತಾರ
ಅವ್ವ ಈತನ ರೂಪ ನಮ್ಮ ಕಣ್ಣಿನ ದೀಪ
ಬಾರೋ ಭಾಗ್ಯದ ಒಡೆಯನೇ ।।೩।।

No comments:
Post a Comment