Thursday, November 3, 2022

Sharavu Maha Ganapathi (ಶರವು ಮಹಾ ಗಣಪತಿ)


Bhaktigeete

Singer: P B Sreenivas

Song link: Click Here


Gajananam bhutaganadi sevitam

Kapittha jambho phalasara bhakshitam

Umasutam shoka vinasha karanam

Namami vighneswara pada pankajam ||


Sharavu maha ganapati

Namage ninnade stuti

Anudinavu bhaktaru

Ninna nambi iruvaru ||


Gajamukhada devane ninage vandane

Bhaktiya seveyali aaradhane

Kasta pariharake margadarshaka

Kapadu karunalu vighna nashaka ||sharavu||


Sharavu shivalayada tenku dikkinalli

Divya maha ganesha avatarisidanilli

Nityavu edebidade navu vandhise

Sakala istarthava paripaliso ||sharavu||


Punya prasadave panchakajjaya

Muktiyannu needuva bhakta jana priya

Satyadharmadi toro ninna mayeya

Shastra sampoojita siddhi vinayaka ||sharavu||


ಭಕ್ತಿಗೀತೆ 


ಗಜಾನನಂ ಭೂತಗಣಾದಿ ಸೇವಿತಂ 

ಕಪಿತ್ಥ ಜಂಭೊ ಫಲಸಾರ ಭಕ್ಷಿತಂ 

ಉಮಸುತಂ ಶೋಕ ವಿನಾಶ ಕಾರಣಂ 

ನಮಾಮಿ ವಿಘ್ನೇಶ್ವರ ಪಾದ ಪಂಕಜಂ ।।


ಶರವು ಮಹಾ ಗಣಪತಿ ನಮಗೆ ನಿನ್ನದೇ ಸ್ತುತಿ 

ಅನುದಿನವು ಭಕ್ತರು ನಿನ್ನ ನಂಬಿ ಇರುವರು ।।ಪ ।।


ಗಜಮುಖದ ದೇವನೆ ನಿನಗೆ ವಂದನೆ 

ಭಕ್ತಿಯ ಸೇವೆಯಲಿ ಆರಾಧನೆ 

ಕಷ್ಟ ಪರಿಹಾರಕೆ ಮಾರ್ಗದರ್ಶಕ 

ಕಾಪಾಡು ಕರುಣಾಳು ವಿಘ್ನನಾಶಕ ।।೧।।


ಶರವು ಶಿವಾಲಯದ ತೆಂಕು ದಿಕ್ಕಿನಲ್ಲಿ 

ದಿವ್ಯ ಮಹಾ ಗಣೇಶ ಅವತರಿಸಿದನಿಲ್ಲಿ 

ನಿತ್ಯವು ಎಡೆಬಿಡದೆ ನಾವು ವಂದಿಸೆ 

ಸಕಲ ಇಷ್ಟಾರ್ಥವ ಪರಿಪಾಲಿಸೊ ।।೨।।


ಪುಣ್ಯ ಪ್ರಸಾದವೇ ಪಂಚಕಜ್ಜಾಯ 

ಮುಕ್ತಿಯನ್ನು ನೀಡುವ ಭಕ್ತಜನಪ್ರಿಯ 

ಸತ್ಯ ಧರ್ಮದಿ ತೋರೋ ನಿನ್ನ ಮಾಯೆಯಾ 

ಶಾಸ್ತ್ರ ಸಂಪೂಜಿತ ಸಿದ್ದಿ ವಿನಾಯಕ ।।೩।।



No comments:

Post a Comment