Bhavageete
Sahitya: Jayanth Kaikini
song link: https:Click Here
Kannige bandavalu
Kanasige baradiruveya
Matige bandavalu
Manasige baradiruveya ||
Gayavella mayuvanta
Ratriyondu kanase
Dala dalagala novinalli
Arali ninta manase |
Tangaliya kareye
Hosalokava tereye
Konegu bandavalu
Belagu taradiruveya ||kannige||
Bayarida bisilinalli
Hosahagala teru
Eleyade dariyalli
Bittu hodavararu |
Nucchu nooru sante
Mecchi kadu ninte
Sakha endavalu
Mukha toradiruveya ||kannige||
ಭಾವಗೀತೆ
ಕಣ್ಣಿಗೆ ಬಂದವಳು
ಕನಸಿಗೆ ಬಾರದಿರುವೆಯಾ
ಮಾತಿಗೆ ಬಂದವಳು
ಮನಸಿಗೆ ಬಾರದಿರುವೆಯಾ ।।ಪ ।।
ಗಾಯವೆಲ್ಲ ಮಾಯುವಂತ
ರಾತ್ರಿಯೊಂದು ಕನಸೆ
ದಳದಳಗಳ ನೋವಿನಲ್ಲಿ
ಅರಳಿನಿಂತ ಮನಸೆ ।
ತಂಗಾಳಿಯ ಕರೆಯೆ
ಹೊಸಲೋಕವ ತೆರೆಯೆ
ಕೊನೆಗೂ ಬಂದವಳು
ಬೆಳಗು ತಾರದಿರುವೆಯಾ ।।ಕಣ್ಣಿಗೆ ।।
ಬಾಯಾರಿದ ಬಿಸಿಲಿನಲ್ಲಿ
ಹೊಸಹಗಲ ತೇರು
ಎಳೆಯದೆ ದಾರಿಯಲ್ಲಿ
ಬಿಟ್ಟು ಹೋದವರಾರು ।
ನುಚ್ಚುನೂರು ಸಂತೆ
ಮೆಚ್ಚಿ ಕಾದು ನಿಂತೆ
ಸಖ ಎಂದವಳು
ಮುಖ ತೋರದಿರುವೆಯಾ ।।ಕಣ್ಣಿಗೆ ।।
No comments:
Post a Comment