Padya
Sahitya: G P Rajaratnam
Kageyondu marada mele
Koogu kottitu
Bereyondu kageyadake
Badalu kottitu
Modala kage kugitintu
"Ka! ka! ka!"
Badalu kugiteradaneyadu
"Ka! ka! ka!"
Kage eno kugahogi
"Ka!" enditu
"Ka!"emba daniyu matra
Horage banditu.
Kageyeradu tavu bahala
Heli nudidevu
Endukondu jambadinda
Rekke badiduvu
Kagegenu mate baradu
Hha ! hha! hha!
Adake baruvudonde matu
"Ka! ka! ka!"
Kage attarade saddu
"Ka! ka! ka!"
Kage nakkarade saddu
"Ka! ka! ka!"
Adaradake bahala jamba
Taleye nilladu
Tanage matu baradenalu
Kelalolladu!
ಪದ್ಯ
ಕಾಗೆಯೊಂದು ಮರದ ಮೇಲೆ
ಕೂಗು ಕೊಟ್ಟಿತು
ಬೇರೆಯೊಂದು ಕಾಗೆಯದಕೆ
ಬದಲು ಕೊಟ್ಟಿತು
ಮೊದಲ ಕಾಗೆ ಕೂಗಿತಿಂತು
"ಕಾ ! ಕಾ ! ಕಾ !"
ಬದಲು ಕೂಗಿತೆರದನೆಯದು:
"ಕಾ ! ಕಾ ! ಕಾ !"
ಕಾಗೆ ಏನೊ ಕೂಗಹೋಗಿ
"ಕಾ !" ಎಂದಿತು
"ಕಾ !"ಎಂಬ ದನಿಯು ಮಾತ್ರ
ಹೊರಗೆ ಬಂದಿತು.
ಕಾಗೆಯೆರಡು ತಾವು ಬಹಳ
ಹೇಳಿ ನುಡಿದೆವು
ಎಂದುಕೊಂಡು ಜಂಬದಿಂದ
ರೆಕ್ಕೆ ಬಡಿದುವು
ಕಾಗೆಗೇನು ಮಾತೆ ಬರದು
ಹ್ಹ ! ಹ್ಹ ! ಹ್ಹ !
ಅದಕೆ ಬರುವುದೊಂದೆ ಮಾತು
"ಕಾ ! ಕಾ ! ಕಾ !"
ಆದರದಕೆ ಬಹಳ ಜಂಬ
ತಲೆಯೆ ನಿಲ್ಲದು !
ತನಗೆ ಮಾತು ಬಾರದೆನಲು
ಕೇಳಲೊಲ್ಲದು !

No comments:
Post a Comment