Bhavageete
Sahitya: K S Nisar Ahmad
Song link: Click Here
Ella maretiruvaga illasallada nevava
Hoodi baradiru matte haleya nenape
Kallinandadi biddu tiliyada edegolava
Radigolisuve eke, madhura nenape?
Kappu kannina netta notadare chanavanne
Tottu banada hage baradiru nenape
Birida tutigala tumbu nageya karanavanne
Hiridu kollalu balige saradiru nenape ||
Satta bhutavanetti haddinandadi tandu
Nanna manadangalake hakadiru nenape
Bhavya bhavitavyake moga madi nintiruve
Bennale iriyadiru, o! chenna nenape||
ಭಾವಗೀತೆ
ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ !
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆ ಏಕೆ, ಮಧುರ ನೆನಪೇ? ।।ಪ ।।
ಕಪ್ಪು ಕಣ್ಣಿನ ನೆಟ್ಟ ನೋಟದರೆ ಚಣವನ್ನೆ
ತೊಟ್ಟು ಬಾಣದ ಹಾಗೆ ಬಾರದಿರು ನೆನಪೇ !
ಬಿರಿದ ತುಟಿಗಳ ತುಂಬು ನಗೆಯ ಕಾರಣವನ್ನೆ
ಹಿರಿದು ಕೊಲ್ಲಲು ಬಳಿಗೆ ಸಾರದಿರು ನೆನಪೇ ।।೧।।
ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ
ಭವ್ಯ ಭವಿತವ್ಯಕ್ಕೆ ಮೊಗ ಮಾಡಿ ನಿಂತಿರುವೆ
ಬೆನ್ನಲೇ ಇರಿಯದಿರು, ಓ ! ಚೆನ್ನ ನೆನಪೇ ।।೨।।

No comments:
Post a Comment