Thursday, November 10, 2022

Bhadrapada Shuklada Choutiyandu (ಭಾದ್ರಪದ ಶುಕ್ಲದಾ ಚೌತಿಯಂದು )

Bhaktigeete

Sahitya: Vijayanarasimha

Singer: P B Srinivas, P Susheela

Song link: Click Here


Bhadrapada shuklada choutiyandu

Chanirana nodidare apavada tappadu

Naraveshadhari harikrishna na hididu

Huluvanta nararigu idu benna bidadu ||


Yadava kulavanu pavanagolisi 

Udisida madhava madhureyali

Gollanenisidava kallanenisidaniva

Govardhana giridhari

Choutiya chandrana kanuta irulali

Alukida krishnanu manadalli


Raja rushiya satrarjitanige

Doreyitu anupama divyamani

Tapasige mecchi needida varavanu

Karunamayana dinamani

Yadavarondige baetege hodanu 

Krishnanu kadinali

Simhavu konditu ratnadhariya 

Padeyalu divyamani


Krishnanobbane hindake baralu 

Shankeyu muditu janaralli

Amulya maniyanu krishnane kadda

Ennuva sallada nudi keli

Krishnanu talade maniyanu 

Hudukuta horatanu adaviyali


Kandanu krishnanu suryana maniyanu

Karadiya guheyalli

Jambavantana magalu jambavati

Baliyallidditu suryamani

Ghora yuddava madi koneyanu

Kanade ninda veeraghrani


Jambuvantanige ramanagi 

Sri krishna kandu banda

Horata nadesida tappigagi

Jambavanta nonda

Maniyanittu magalannu ittuta 

Sharanu sharanu enda

Shamantaka maniyanu kanda

Yadukula hogalitu krishnana olavinda


Krishna jaya hari krishna jaya

Madhava radha lola jaya


Choutiya chandrana darshanadinda 

Kaditu krishnage apavada

Ee kathe kelalu dorevudu 

Janarige doshada parihara

Ganapati olumege patraragalu

Iduve sulabha vidhana

Karyasiddiya olle buddhiya

Koduvanu harasuta gajanana


Gajananam bhutaganadi sevitam

Kapittha jambho phalasara bhakshitam

Umasutam shoka vinasha karanam

Namami vighneswara pada pankajam ||


ಭಕ್ತಿಗೀತೆ 


ಭಾದ್ರಪದ ಶುಕ್ಲದಾ ಚೌತಿಯಂದು 

ಚಂದಿರನ ನೋಡಿದರೆ ಅಪವಾದ ತಪ್ಪದು 

ನರವೇಷಧಾರಿ ಹರಿಕೃಷ್ಣನಾ ಹಿಡಿದು 

ಹುಳುವಂಥ ನರರಿಗೂ ಇದು ಬೆನ್ನ ಬಿಡದು ।।


ಯಾದವ ಕುಲವನು ಪಾವನಗೊಳಿಸಿ 

ಉದಿಸಿದ ಮಾಧವ ಮಧುರೆಯಲಿ 

ಗೊಲ್ಲನೆನಿಸಿದವ ಕಳ್ಳನೆನಿಸಿದನಿವ 

ಗೋವರ್ಧನ ಗಿರಿಧಾರಿ 

ಚೌತಿಯ ಚಂದ್ರನ ಕಾಣುತ ಇರುಳಲಿ 

ಅಳುಕಿದ ಕೃಷ್ಣನು ಮನದಲ್ಲಿ 


ರಾಜ ಋಷಿಯ ಸತ್ರಾರ್ಜಿತನಿಗೆ 

ದೊರೆಯಿತು ಅನುಪಮ ದಿವ್ಯಮಣಿ 

ತಪಸಿಗೆ ಮೆಚ್ಚಿ ನೀಡಿದ ವರವನು 

ಕರುಣಾಮಯನಾ ದಿನಮಣಿ 

ಯಾದವರೊಂದಿಗೆ ಬೇಟೆಗೆ ಹೋದನು 

ಕೃಷ್ಣನು ಕಾಡಿನಲಿ 

ಸಿಂಹವು ಕೊಂದಿತು ರತ್ನಧಾರಿಯಾ 

ಪಡೆಯಲು ದಿವ್ಯಮಣಿ 

ಕೃಷ್ಣನೊಬ್ಬನೆ ಹಿಂದಕೆ ಬರಲು 

ಶಂಕೆಯು ಮೂಡಿತು ಜನರಲ್ಲಿ 


ಅಮೂಲ್ಯ ಮಣಿಯನು ಕೃಷ್ಣನೇ ಕದ್ದ 

ಎನ್ನುವ ಸಲ್ಲದ ನುಡಿ ಕೇಳಿ 

ಕೃಷ್ಣನು ತಾಳದೆ ಮಣಿಯನು 

ಹುಡುಕುತ ಹೊರಟನು ಅಡವಿಯಲಿ 

ಕಂಡನು ಕೃಷ್ಣನು ಸೂರ್ಯನ ಮಣಿಯನು 

ಕರಡಿಯ ಗುಹೆಯಲ್ಲಿ 

ಜಾಂಬವಂತನಾ ಮಗಳು ಜಾಂಬವತಿ 

ಬಲಿಯಲ್ಲಿದ್ದಿತು ಸೂರ್ಯಮಣಿ 

ಘೋರ ಯುದ್ಧವ ಮಾಡಿ ಕೊನೆಯನು 

ಕಾಣದೆ ನಿಂದಾ ವೀರಾಗ್ರಣಿ 


ಜಾಂಬವಂತನಿಗೆ ರಾಮನಾಗಿ 

ಶ್ರೀ ಕೃಷ್ಣ ಕಂಡು ಬಂದಾ 

ಹೋರಾಟ ನಡೆಸಿದ ತಪ್ಪಿಗಾಗಿ 

ಜಾಂಬವಂತ ನೊಂದಾ 

ಮಣಿಯನಿತ್ತು ಮಗಳನ್ನು ಇತ್ತುತಾ 

ಶರಣು ಶರಣು ಎಂದಾ 

ಶಮಂತಕ ಮಣಿಯನು ಕಂಡಾ 

ಯದುಕುಲ ಹೊಗಳಿತು ಕೃಷ್ಣನ ಒಲವಿಂದ 


ಕೃಷ್ಣ ಜಯಾ ಹರಿ ಕೃಷ್ಣ ಜಯಾ 

ಮಾಧವ ರಾಧಾ ಲೋಲ ಜಯಾ 


ಚೌತಿಯ ಚಂದ್ರನ ದರ್ಶನದಿಂದ 

ಕಾಡಿತು ಕೃಷ್ಣಗೆ ಅಪವಾದ 

ಈ ಕಥೆ ಕೇಳಲು ದೊರೆವುದು 

ಜನರಿಗೆ ದೋಷದ ಪರಿಹಾರ 

ಗಣಪತಿ ಒಲುಮೆಗೆ ಪಾತ್ರರಾಗಲು 

ಇದುವೇ ಸುಲಭ ವಿಧಾನ 

ಕಾರ್ಯಸಿದ್ದಿಯಾ ಒಳ್ಳೆ ಬುದ್ದಿಯಾ 

ಕೊಡುವನು ಹರಸುತ ಗಜಾನನ 


ಗಜಾನನಂ ಭೂತಗಣಾದಿ ಸೇವಿತಂ 

ಕಪಿತ್ಥ ಜಂಭೊ ಫಲಸಾರ ಭಕ್ಷಿತಂ 

ಉಮಸುತಂ ಶೋಕ ವಿನಾಶ ಕಾರಣಂ 

ನಮಾಮಿ ವಿಘ್ನೇಶ್ವರ ಪಾದ ಪಂಕಜಂ ।।







No comments:

Post a Comment