Friday, November 11, 2022

Nana Kanda (ನನ ಕಂದಾ)

Padya

Janapada


Nana kanda muddu, honna tavari muddu

Hannulla gidaka gini muddu, kandavva

Nee muddu nanna balagaka ||


Nadedada kandana nadageeya nodeena

Sadagaradinda tadaseena, kandayyaga

Aayi madisikotta kirugejje||


Totlana kuseegi dittiyadavanda

Kattida navila garigola, balaga

Karibevina ditti tegedeena ||


Kandaddu kanasagi, undaddu saviyagi

Kanda nee kadabedendu, beduve

Kandayya mado niddiya ||


ಪದ್ಯ

 

ನನ ಕಂದಾ ಮುದ್ದು , ಹೊನ್ನ ತಾವರಿ ಮುದ್ದು 

ಹಣ್ಣುಳ್ಳ ಗಿಡಕ ಗಿಣಿ ಮುದ್ದು, ಕಂದವ್ವ 

ನೀ ಮುದ್ದು ನನ್ನ ಬಳಗಕ ।।


ನಡೆದಾಡ ಕಂದನ ನಡಗೀಯ ನೋಡೀನ 

ಸಡಗರದಿಂದ ತೊಡಸೀನ, ಕಂದಯ್ಯಗ 

ಆಯಿ ಮಾಡಿಸಿಕೊಟ್ಟ ಕಿರುಗೆಜ್ಜೆ ।।

 

ತೊಟ್ಲಾನ  ಕೂಸೀಗಿ ದಿಟ್ಟಿಯಾದಾವಂದ 

ಕಟ್ಟೀದ ನವಿಲ ಗರಿಗೋಳ ಬಾಳಾಗ 

ಕರಿಬೇವಿನ ದಿಟ್ಟಿ ತೆಗೆದೇನ ।।


ಕಂಡದ್ದು ಕನಸಾಗಿ, ಉಂಡದ್ದು ಸವಿಯಾಗಿ 

ಕಂದ ನೀ ಕಾಡಬೇಡೆಂದು, ಬೇಡುವೆ 

ಕಂದಯ್ಯ ಮಾಡೋ ನಿದ್ದೀಯ ।।











No comments:

Post a Comment