Bhaktigeete
Sri Purandara Dasara Keerthanegalu
Songlink: Click Here
Raga: Behag
Tala: Aditala
Bevu belladolidalenu phala
Havige haleredarenu phala ||
Kutilava bidadiha kujanaru mantrava
Pataneya madidarenu phala
Sateyannaduva manujaru manadali
Vittalana nenedareyenu phala ||
Kapata tanadi vanchisuva manujaru
Japagala madidarenu phala
Kupita buddiyanu tyajisade nityadi
Upavasaviddarinnenu phala ||
Mathapitaranu balalisuva maga
Yatreya madidarenu phala
Ghathakatanavanu bidade nirantara
Geeteyanodidarenu phala ||
Patiyanu nindisi bogaluva satiyalu
Vratagala madidarenu phala
Atithigaledeyali bedava maduta
Gatiyanu bayasidarenu phala ||
Heenakrutyagala maduta nadiyali
Snanava maidarenu phala
Srinidhi purandara vittalana neneyade
Mounava madidarenu phala ||
ಭಕ್ತಿಗೀತೆ
ಬೇವು ಬೆಲ್ಲದೊಳಿಡಲೇನು ಫಲ
ಹಾವಿಗೆ ಹಾಲೆರೆದರೇನು ಫಲ ।।ಪ ।।
ಕುಟಿಲವ ಬಿಡದಿಹ ಕುಜನರು ಮಂತ್ರವ
ಪಠನೆಯ ಮಾಡಿದರೇನು ಫಲ
ಸಟೆಯನ್ನಾಡುವ ಮನುಜರು ಮನದಲಿ
ವಿಠ್ಠಲನ ನೆನೆದರೆಯೇನು ಫಲ ।।೧।।
ಕಪಟತನದಿ ವಂಚಿಸುವ ಮನುಜರು
ಜಪಗಳ ಮಾಡಿದರೇನು ಫಲ
ಕುಪಿತಬುದ್ಧಿಯನು ತ್ಯಜಿಸದೆ ನಿತ್ಯದಿ
ಉಪವಾಸವಿದ್ದರಿನ್ನೇನು ಫಲ ।।೨।।
ಮಾತಾಪಿತರನು ಬಳಲಿಸುವ ಮಗ
ಯಾತ್ರೆಯ ಮಾಡಿದರೇನು ಫಲ
ಘಾತಕತನವನು ಬಿಡದೆ ನಿರಂತರ
ಗೀತೆಯನೋದಿದರೇನು ಫಲ ।।೩।।
ಪತಿಯನು ನಿಂದಿಸಿ ಬೊಗಳುವ ಸತಿಯಳು
ವ್ರತಗಳ ಮಾಡಿದರೇನು ಫಲ
ಅತಿಥಿಗಳೆಡೆಯಲಿ ಭೇದವ ಮಾಡುತ
ಗತಿಯನು ಬಯಸಿದರೇನು ಫಲ ।।೪।।
ಹೀನಕೃತ್ಯಗಳ ಮಾಡುತ ನದಿಯಲಿ
ಸ್ನಾನವ ಮಾಡಿದರೇನು ಫಲ
ಶ್ರೀನಿಧಿ ಪುರಂದರ ವಿಠ್ಠಲನ ನೆನೆಯದೆ
ಮೌನವ ಮಾಡಿದರೇನು ಫಲ ।।೫।।

No comments:
Post a Comment